Thursday, March 31, 2022

அர்ப்பணிக்க தூயமனம் தேவை (Arpaninkka Tuya Manam Tevai)

மூலம்: சௌமியா பிரதீப் 
தமிழாக்கம் : ஸி. ஆர். ஸ்ரீதர்
மின்னஞ்சல் : (lekhana@ayvm.in)


 
         பாண்டவர்கள் வனவாசத்தில் இருந்த சமயம். ஒரு நாள் பாண்டவர்கள் மற்றும் திரௌபதியின் உணவு ஆன  பிறகு, பத்தாயிரம் சீடர்களுடன் பாண்டவர்களின் குடிலுக்கு முனிவர் துர்வாசர் வருகை தந்தார். தருமபுத்திரன் 
அளவு கடந்த பக்தியுடன் அவரை வரவேற்று அவரின் நலம் விசாரித்தான். தூர்வாசர் தாம் நதியில் அனுஷ்டானங்களை முடித்துக்கொண்டு வருவதற்குள், தமக்கும் தம் சீடர்களுக்கும் உணவு தயாரித்து வைக்குமாறு கூறிவிட்டு நதிக்குச் சென்றார். பாண்டவர்களுக்கு சூரியதேவனால் கொடுக்கப்பட்ட அட்சய பாத்திரத்தில், திரௌபதி உணவு உண்ட பின், மீண்டும் உணவு தயாராவதற்கு மறு நாள் காலை சூரியோதயம் வரை பொறுத்திருக்க வேண்டும். வந்துள்ள விருந்தினரை உணவுடன் உபசிரிப்பது எவ்வாறு? துர்வாச முனிவரின் கோபத்திற்கு ஆளாகாமல் இருப்பதற்கு என்ன வழி? என்று யோசித்தவாறே, தருமபுத்திரன் தங்களுக்கு ஏற்பட்டுள்ள இக்கட்டான நிலைமையை திரௌபதிக்கு தெரிவித்தான். அப்பொழுது திரௌபதி ஒரு வினாடி யோசித்து, தங்களுக்கு ஆபத்து காலங்களில் கை கொடுத்து உதவுபவனான ஸ்ரீ கிருஷ்ணனிடமே சரணடைந்தாள். அவளுடைய வேண்டுதலை செவி மடுத்து அவள் எதிரில் காட்சியளித்த ஸ்ரீ கிருஷ்ணன், தனக்கு சிறிது உணவளிக்கும்படி கட்டளையிட்டான். அப்பொழுது திரௌபதி, அட்சய பாத்திரத்தின் அடித்தளத்தில் ஒட்டிக்கொண்டிருந்த ஒரே ஒரு பருப்பை இறைவனுக்கு அர்ப்பணிக்கும் தூய மனதுடன் சமர்ப்பித்தபொழுது இறைவனும் அதனை ஏற்று முழு மனநிறைவு அடைந்தான். அப்பொழுது நதிக்கரையில் அனுஷ்டானங்களை மேற்க்கொண்டிருந்த துர்வாசருக்கும் அவருடைய சீடர்களுக்கும் உணவால் வயிறு நிரம்பியதைப்போன்ற அனுபவம் ஏற்பட்டது. ஏனென்றால் வயிற்றில் உள்ள வைச்வானர வடிவமானது சாக்ஷாத் ஸ்ரீ கிருஷ்ண பரமாத்மாவேயல்லவா? அவனே, திரௌபதி பக்தியுடன் அர்ப்பணித்த உணவால் முழு மன நிறைவு அடைந்ததால், அவனையே பூஜிக்கும் தூர்வாசரும் அவருடைய சீடர்களும் பூரண திருப்தியடைந்து, பாண்டவர்களை வாழ்த்தி, அவ்விடமிருந்து புறப்பட்டு சென்றனர். 

இறைவன்  "ஒரு இலையையோ, ஒரு பூவையோ, ஒரு பழத்தையோ அல்லது ஒரு சொட்டு நீரையோ பக்தியுடன் சமர்ப்பித்தால் நான் பூரண திருப்தி அடைகிறேன்" என்று கீதையில் கூறியுள்ளவாறு எப்பொழுதும் மனநிறைவு கொண்டவனான இறைவனுக்கு, பக்தர்கள் அளிக்கும் பொருளின் அளவைவிட அவர்களிடமுள்ள அர்ப்பணிப்பு உணர்வே மிகவும் பிரியமானது. விதுரன் அர்ப்பணித்ததைப்போல், சபரி அளித்ததைப்போல் சுத்தமான உணர்வை மட்டும் அவன் விரும்புகின்றான், மற்றும் ஏற்றுக் கொள்கிறான். இறைவனுக்கு, இறைவடிவம் கொண்ட ஆசாரியர்களுக்கு, பெரியோர்களுக்கு அல்லது இறைவன் சம்பந்தப்பட்ட காரியங்களுக்கு ஒரு பொருளை சமர்ப்பிக்கும்பொழுது, ஒட்டுதல் இல்லாத, எளிமையான மற்றும் தூய்மையான மனமே முக்கியமானதாகும். அவ்வாறு இருந்தால் மட்டும்  அது உண்மையான அர்ப்பணமாகும். "விண்வெளியில் செல்லும்போது தங்கக்கட்டியும், பருத்தியும் ஒன்றேபோல் ஆகிவிடுகின்றன. இரண்டும் தத்தம் எடையை இழந்து ஒரே மாதிரி ஆகிவிடுகின்றன. அவ்வாறே இறைவனுக்கு சுத்தமான உணர்வுடன் அர்ப்பணிக்கப்பட்டபொழுது நயாபைசா மற்றும் ஒரு தங்கக் குவியல் இரண்டிற்கும் ஒரே வடிவம். இரண்டும் தத்தம் மதிப்பை இழந்து பிரம்ம ரூபத்தை(இறைவடிவத்தை) பெற்று விடுகின்றன" என்னும் ஸ்ரீரங்கமஹாகுருவின் வாக்கு இங்கு நினைவில் கொள்ளத் தக்கது.

குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, March 29, 2022

ஸ்ரீரங்கமஹாகுருவின் கண்ணோட்டம் - 2 சித்ரகுப்தரின் ரகசியம் (Chitraguptarin Ragasiyam)

 மூலம்:தமிழாக்கம்: ஜானகி

மின்னஞ்சல் : (lekhana@ayvm.in)


 "புண்யம் பாவமென்பதெல்லாம் வீண் வெட்டி பேச்சு. எங்கே உள்ளது பாவமும் புண்யமும்? மாடு, புலி வருகிறதென்றால் கண்ணுக்கு புலப்படும். பாவ புண்யங்களை பார்த்தவர் யார்? இந்த எண்ணங்களை எல்லாம் விட்டு மனதிற்கு தோன்றியபடி நடக்க வேண்டும்" என ஓர் இளைஞன் தன் பாட்டிக்கு உபதேசித்தான்.


     "பாவம் புண்யம் இல்லாமல் போகாது. நமக்கு காண கிடைக்காவிடினும் சித்ரகுப்தர் எல்லாவற்றையும் ரகசியமாக எழுதிக் கொள்வாரென உன் தாத்தா சொல்வார்" பாட்டி அனாயாசமாக பதில் கூறினாள்.


             இளைஞன் சிரித்து சித்ரகுப்தர் யாரென வினவ "அவர் யமதர்ம ராஜனின் குமாஸ்தா" என பதிலுரைத்தாள். "யார் கண்ணுக்கும் காணாதவர் தாத்தா கண்ணுக்கு மட்டும் தென்பட்டாரா என்ன? எப்படி நம்புவது?" என்று வினவினான் இளைஞன்.


           இந்த உரையாடலை  வித்வாம்சரும், மனம் சார்ந்த சாஸ்திரத்தில் பெரும் பண்டிதரும், நல்ல விமர்சகருமான ஒருவர் கேட்டுக்கொண்டிருந்தார். ஆன்மீகத் துறையிலும் பரிசோதனை செய்து ப்ரஹ்மஞானியான மஹா குருவிடம் சேவை செய்தவருமாவார். அவர் அந்த இளைஞனை குறித்து "`நாம் நம்பினாலும் நம்பாவிடினும் பாவ புண்யங்கள் உண்டப்பா. சித்ரகுப்தர் எழுதிக் கொள்வதும் உண்மை. சாதாரண மனிதர்கள் அதை சரியாக புரிந்து கொள்ளவில்லை. அவ்வளவுதான்." என்றார்.


           மேலும் "நீ யாரும் அறியாமல் ஏதாவது தீய செயல் அல்லது நல்ல செயல் செய்தால் உனக்கு அது தெரிகிறதா இல்லையா?" என வினவினார். இளைஞன் "தெரிகிறது சார்" என பதிலுரைக்க "அச்செயல்களின் அடையாளம் உன் மனதில் ஏற்படுகின்றதா இல்லையா? அதாவது அச்செயல்கள் தம்முடைய முத்திரையை உன் மனதில் சித்திரிகின்றனவா?" என வினவினார். "ஏற்படுகிறது சார்" என இளைஞன் கூற "அவ்வாறு அடுத்தவர் அறியாமல் நம் மனதில் ரகசியமாக(குப்தமாக) சித்தரிக்கும் சக்தியே சித்ரகுப்தர். அவரை நம்பாமல் இருக்க முடியுமா?அவர் எழுதிக்கொள்வதில் நல்ல செயல்களின் கணக்கே புண்ணியம் எனவும் தீயவையின் கணக்கு பாவம் எனவும் அறிய வேண்டுமப்பா" என்றார்.


       நன்றாக புரியும் மொழியில், நம்பிக்கை உண்டாகும் விதமாக உண்மையை விளக்கிய அந்த ஆசானுக்கு நன்றியுடன் தன் வணக்கங்களையும் தெரிவித்தான் அவ்விளைஞன்.

Sunday, March 27, 2022

ಘೋರಸಾಗರದಲ್ಲಿ ಆನಂದ ವಿಹಾರ! (Ghorasaagaradalli Anandavihaara!)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಅಪಾರವಾದ ಜಲರಾಶಿ, ಅಪ್ಪಳಿಸಿ ಆರ್ಭಟಿಸುವ ಅಲೆಗಳು, ತಳಕಾಣದಷ್ಟು ಆಳ, ಅಲ್ಲಿ ವಾಸಿಸುವ ಕ್ರೂರ ಜಲಜಂತುಗಳು-ಇಷ್ಟೆಲ್ಲ ಇರುವಾಗ ಸಾಗರವು  ಘೋರವಲ್ಲದೆ ಮತ್ತೇನು? ಜ್ಞಾನಿಗಳನೇಕರು ಸಾರುವುದು - ಈ ಸಂಸಾರವೂ  ಒಂದು ಬಲುಘೋರವಾದ ಸಾಗರವೇ. ತೃಷ್ಣೆ(ಆಸೆ)ಯೆಂಬ ದೊಡ್ಡ ಜಲರಾಶಿ. ಅದರಲ್ಲಿ ಭೋರ್ಗರೆಯುತ್ತಾ ಅಪ್ಪಳಿಸುವ ಮೋಹವೆಂಬ ಅಲೆಗಳು;  ಈ ಅಲೆಗಳನ್ನು ಮತ್ತೂ ಕೆರಳಿಸುವ ಮದನ(ಕಾಮ)ಮಹಾಮಾರುತ;  ನಕ್ರ(ಮೊಸಳೆ)ಗಳಂತೆ ಕರಾಳವಾದ  ಮಡದಿ, ಪುತ್ರ ಮುಂತಾದ  ಬಂಧುತ್ವ. ಈ ಅಭಿಪ್ರಾಯಗಳು ನೂರಕ್ಕೆ ನೂರರಷ್ಟು ಸತ್ಯ. ಮನಸ್ಸಿನಲ್ಲೇಳುವ ಆಸೆಗಳನ್ನು ಪೂರೈಸಿಕೊಳ್ಳಲೋಸುಗ ಅಲೆದಾಟ-ಪರದಾಟಗಳು, ಅಲೆಗಳಂತೆ ಒಂದರ ಹಿಂದೊಂದು ಪರಂಪರೆಯಾಗಿ ಬಂದೊದಗುವ ಕಷ್ಟ ಕಾರ್ಪಣ್ಯಗಳು, ತಾಪತ್ರಯಗಳು, ಭೌತಿಕ-ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ದುಃಖಗಳು, ಮಡದಿ-ಮಕ್ಕಳಿಂದೊದಗುವ ಸಂಕಷ್ಟಗಳು, ಗೃಹಸ್ಥನ ಜೀವನವನ್ನು ಮುತ್ತಿಗೆ ಹಾಕುತ್ತವೆ. ನೆಮ್ಮದಿ ಗಳಿಸುವ ಬಗ್ಗೆ ಚಿಂತಿಸಲೂ ಅವಕಾಶವಿರುವುದಿಲ್ಲವಲ್ಲ? ಇಂತಿರುವಾಗ ಗೃಹಸ್ಥನು ಇದರಿಂದ ಪಾರಾಗಿ ಭಗವಂತನನ್ನು ಪಡೆದು ಸುಖಿಸುವುದೆಂದು? ಹೇಗೆ? ಇಷ್ಟಿದ್ದರೂ, ಭಾರತದಲ್ಲಿ ಅನೇಕ ಗೃಹಸ್ಥರು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಶಾಂತಿಯಿಂದ ಬದುಕಿ ಬಾಳಿದ ಕಥೆಗಳನ್ನು  ಕೇಳುತ್ತೇವೆ. ತಪಸ್ಯೆಯನ್ನಾಚರಿಸಿ ಬ್ರಹ್ಮಜ್ಞಾನಿಗಳಾಗಿಯೂ, ಬ್ರಹ್ಮರ್ಷಿಗಳಾಗಿಯೂ ಇದ್ದ ಅನೇಕರು ಗೃಹಸ್ಥರಾಗಿ ಲೌಕಿಕಸುಖಗಳಷ್ಟನ್ನೂ ಅನುಭವಿಸಿ, ಅನೇಕ ಮಕ್ಕಳನ್ನೂ ಪಡೆದವರಾಗಿದ್ದರು. ಚ್ಯವನ-ಸೌಭರಿ-ವಸಿಷ್ಠರೇ ಮುಂತಾದವರು ಇದಕ್ಕೆ ಉದಾಹರಣೆಗಳು. ನವ ವಧೂ-ವರರನ್ನು 'ವಸಿಷ್ಠ-ಅರುಂಧತಿಯರಂತೆ ಆದರ್ಶ ದಾಂಪತ್ಯವನ್ನೆಸಗಿ ಸುಖಿಸಿ' ಎಂದು ಆಶೀರ್ವದಿಸುವುದು ಸಂಪ್ರದಾಯ. ರಾಜಾಧಿರಾಜರನೇಕರು, ತಮ್ಮ  ಕುಟುಂಬದಷ್ಟೇ ಸಣ್ಣ ಸಂಸಾರವಲ್ಲದೇ, ದೊಡ್ಡ ಸಾಮ್ರಾಜ್ಯವನ್ನೇ ಆಳುತ್ತಾ, ಪ್ರಜೆಗಳೆಲ್ಲರನ್ನೂ ತಮ್ಮ  ಮಕ್ಕಳಂತೆ ಭಾವಿಸಿ ರಕ್ಷಿಸಿ, ಪೋಷಿಸುತ್ತಿದ್ದರು. ಇಷ್ಟೊಂದು ಅಂಟು-ಜವಾಬ್ದಾರಿಗಳೊಂದಿಗೆ ಅಪಾರವಾದ ಹೊಣೆಗಾರಿಕೆಯನ್ನು ಹೊತ್ತಿದ್ದ ಅವರು ವೃದ್ಧಾಪ್ಯದಲ್ಲಿ ಎಲ್ಲವನ್ನೂ ತಮ್ಮ ಪುತ್ರರಿಗೆ ಒಪ್ಪಿಸಿ ತಪೋನಿರತರಾಗುವಷ್ಟು ವೈರಾಗ್ಯಸಂಪನ್ನರೂ ಆಗಿ ಭಗವಂತನನ್ನು ತಲುಪುತ್ತಿದ್ದರು. 


ಇವರೆಲ್ಲರಿಗೂ ಸಂಸಾರವು ಸಾಗರವಾಗಿರಲಿಲ್ಲವೇ? ಅದು ಘೋರವಾಗಿರಲಿಲ್ಲ ಹೇಗೆ?  ಅವರಿಗೆ  ಲೌಕಿಕವಾದ ಸುಖಾನುಭವದೊಂದಿಗೆ ನೆಮ್ಮದಿ ಸಾಧಿಸುವುದು ಹೇಗೆ ಸಾಧ್ಯವಾಯಿತು? ಸಾಗರವು ಎಷ್ಟೇ ಘೋರವಾಗಿದ್ದರೂ ಸುರಕ್ಷಿತ ನೌಕೆಯೊಂದರಲ್ಲಿ ಕುಳಿತು  ವಿಹರಿಸಿದಾಗ  ಅದೆಷ್ಟು ಸೊಗಸು! ಎಷ್ಟು ಆನಂದ!  ಹಾಗೆ ವಿಹರಿಸುತ್ತಲೇ ದಡವನ್ನೂ ಸೇರಿಬಿಡಬಹುದಲ್ಲವೆ? ಅಂತೆಯೇ  ಭಾರತೀಯಮಹರ್ಷಿಗಳು ಈ ಸಂಸಾರಸಾಗರದಲ್ಲಿ ವಿಹರಿಸಿ ಸುಖವನ್ನು ಪಡೆಯುವುದರ ಜೊತೆಗೇ ಇದರ ಪಾರವನ್ನು ತಲುಪಲೂ, ಶಾಶ್ವತಸುಖ-ಶಾಂತಿಧಾಮವನ್ನು  ಹೊಂದಲೂ ಪುರುಷಾರ್ಥ(ಧರ್ಮ-ಅರ್ಥ-ಕಾಮ-ಮೋಕ್ಷ)ಮಯವಾದ ಜೀವನವೆಂಬ ಸುರಕ್ಷಿತ ನೌಕೆಯನ್ನು ತೋರಿದರು. ಈ ಜೀವನಕ್ಕೆ ಬೇಕಾದ ಶಿಕ್ಷಣವನ್ನು  ಬಾಲ್ಯದ ವಿದ್ಯಾಭ್ಯಾಸದಲ್ಲೇ ಪಡೆದು ಪಾರಂಗತರಾದ ನಂತರವೇ ಸಂಸಾರ ಜೀವನಕ್ಕೆ ಅನುಮತಿಯನ್ನು ನೀಡಲಾಗುತ್ತಿತ್ತು.  ಇದು ಮಹರ್ಷಿಗಳ ವಿದ್ಯಾ(ಶಿಕ್ಷಣ)ಪದ್ಧತಿಯ ವೈಶಿಷ್ಟ್ಯ.

ಧರ್ಮಮಯವಾದ ಜೀವನಕ್ಕೆ ಮೋಕ್ಷವೇ ಗುರಿಯಾದರೂ ಅಂತಹ ಜೀವನ ಸಾಗುವಾಗ ಅರ್ಥ-ಕಾಮಗಳು ತಾವಾಗಿಯೇ ಬಂದೊದಗುವ ಫಲಗಳಾಗುತ್ತವೆ.  ಈ ಗುರಿಯಿಲ್ಲದೆ ಅರ್ಥ-ಕಾಮಗಳ ಹಿಂದೆ ಬಿದ್ದರೆ, ಸುಮ್ಮನೆ ಸಮುದ್ರದಲ್ಲಿ ಧುಮುಕಿ, ತೊಳಲಾಡಿ ಮುಳುಗುವಂತಾಗುವುದು ನಮ್ಮ ಜೀವನ.


ಇಲ್ಲಿ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತೊಂದು ಸ್ಮರಣೀಯ- "ಅರ್ಥ-ಕಾಮಗಳು ತುಂಟ ಹಸುವಿನಂತೆ. ಅದನ್ನು ಸುಮ್ಮನೆ ಕರೆಯಲು ಹೋದರೆ ಒದೆಯುತ್ತದೆ. ಆದರೆ ಅದರ ಕಾಲುಗಳನ್ನು ಧರ್ಮ-ಮೋಕ್ಷಗಳೆಂಬ ಕಂಬಗಳಿಗೆ ಕಟ್ಟಿ ಕರೆದರೆ ಅಮೃತವನ್ನೇ ಕರೆಯುತ್ತವೆ."   

ಕಾಮವೆಂಬುದನ್ನು ಹೀಗೆ ನಿಯಂತ್ರಿಸದಿದ್ದರೆ ಪುರುಷಾರ್ಥದ ಕಾಮವಾಗದೆ ಅರಿಷಡ್ವರ್ಗದಲ್ಲಿನ  ಕಾಮವಾಗುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ಕೃಷ್ಣನು "ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ------ವಿದ್ಯೈನಮಿಹ ವೈರಿಣಮ್" ಎಂಬುದಾಗಿ ಎಚ್ಚರಿಸಿದ್ದಾನೆ. ಇವೇ ನಮ್ಮನ್ನು ಸಾಗರದಲ್ಲಿ ಮುಳುಗಿಸುವುದು. ಮಡದಿ-ಮಕ್ಕಳನ್ನು ಭಗವಂತನು ತಮಗೊಪ್ಪಿಸಿದವರನ್ನಾಗಿ, ಭಗವಂತನ ಆಸ್ತಿಯಾಗಿ ಭಾವಿಸಿ ರಕ್ಷಿಸಿ-ಪೋಷಿಸಿದಾಗ ಅದು ಅವರಲ್ಲಿ ಪ್ರೀತಿಯನ್ನುಂಟುಮಾಡುವುದರ ಜೊತೆಗೆ  ಅಂಟಿಲ್ಲದೆ ವರ್ತಿಸಲೂ ಸಹಾಯವಾಗುವುದು.  ಜ್ಞಾನಿಗಳ ಈ ನಿರ್ದೇಶ ನಮಗೆ ಆದರ್ಶ.


ಸಂಸಾರ ಸಾಗರದಿಂದ ದಾಟಿಸಲು  ಮತ್ತೊಂದು ಸುಲಭೋಪಾಯವನ್ನು  ಭಕ್ತಶ್ರೇಷ್ಠರಾದ  ಕುಲಶೇಖರ ಆಳ್ವಾರರು  ಹೇಳುತ್ತಾರೆ. ಭಗವಂತನಲ್ಲಿ ನಿಶ್ಚಲವಾದ ಭಕ್ತಿಯೆಂಬ ನೌಕೆಯು ನಮ್ಮನ್ನು ಪಾರುಮಾಡುವ ಅದ್ಭುತ ಸಾಧನವಾಗಿದೆ. ಇಂತಹ ಭಕ್ತಿಗೆ ಬಲವನ್ನು ನೀಡುವುದು ಭಕ್ತರ, ಸಜ್ಜನರ ಸಹವಾಸ. 'ಸಜ್ಜನರ ಸಹವಾಸ ಹೆಜ್ಜೇನ ಸವಿದಂತೆ' ಅತ್ಯಂತ ಹಿತಕರ. ಅಂದಮೇಲೆ ಇಂತಹವರಿಗೆ ಜೀವನದಲ್ಲಿ ಕಷ್ಟಗಳೇ ಬರುವುದಿಲ್ಲ ಎನ್ನುವಂತಿಲ್ಲ. ಕಷ್ಟಗಳು ಬಂದಾಗ ಭಗವಂತನ ಸ್ಮರಣೆಯಿಂದ  ಅವನ್ನು ಎದುರಿಸುವ ಧೃತಿಯನ್ನು   ಹೊಂದುತ್ತಾರೆ. 


ಈ ಹಿತವೂ, ಮಧುರವೂ ಆದ ಸಾಧನದಿಂದಲೇ ರಾಜರ್ಷಿ-ಮಹರ್ಷಿಗಳು ಸುಖವನ್ನನುಭವಿಸಿ ಶಾಶ್ವತವಾದ ಶಾಂತಿ-ಸಮಾಧಾನ-ಆನಂದಗಳನ್ನು ಪಡೆದರು. ಅವರು ತಂದ ಪುರುಷಾರ್ಥಮಯ ಬಾಳಾಟ, ಸಜ್ಜನಸಹವಾಸಗಳೇ ನಮಗೆ ಆದರ್ಶ. 


ಸೂಚನೆ: 27/3/2022 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ

ಶ್ರೀ ರಾಮನ ಗುಣಗಳು - 49 ಆದರ್ಶ ಮಾನವ ಶ್ರೀರಾಮ (Sriramana Gunagalu -49 Adarsha Manava Sriramana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಒಬ್ಬ ಆದರ್ಶ ಪುರುಷ. ಆತನು ದಶರಥ ಮತ್ತು ಕೌಸಲ್ಯೆಯರ ಪುತ್ರ. ಸೀತಾಮಾತೆಯ ಪತಿ ಎಂದೆಲ್ಲ ಅನೇಕ ಸುತ್ತಲಿನ ಸಂಬಂಧಗಳನ್ನು ಹೇಳುತ್ತಾ ಆತನನ್ನು ಒಬ್ಬ ಮಾನವನಾಗಿ ಹೇಳಬಹುದು. ವಾಲ್ಮೀಕಿ ಮಹರ್ಷಿಗಳು ಕೂಡ ಮಹರ್ಷಿ ನಾರದರನ್ನು ಪ್ರಶ್ನಿಸುವಾಗ ಅನೇಕ ಗುಣಗಳನ್ನು ಪಟ್ಟಿಮಾಡಿ ಅಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿ ಯಾರಾದರೂ ಇರುವನೇ? ಎಂಬುದನ್ನು ಕೇಳುತ್ತಾರೆ. ಆಗ ನಾರದರ ಉತ್ತರ ಎಂತಹ ಮಾರ್ಮಿಕವಾದುದು! ಎಂಬುದನ್ನು ಗಮನಿಸಬೇಕು. ಏಕೆಂದರೆ ಒಬ್ಬ ಲೋಕದಲ್ಲಿ ಇರುವ ವ್ಯಕ್ತಿಯನ್ನು ಹೆಸರಿಸಿವುದು ಸುಲಭ ತಾನೇ! ಆದರೆ ಅವರು ಅಲ್ಲಿ ಬಳಸುವ ಶಬ್ದದಿಂದಲೇ ಶ್ರೀರಾಮನು ಎಂತಹ ಲೋಕೋತ್ತರನಾದ ಪುರುಷನಾಗಿದ್ದ ಎಂಬುದನ್ನು ತಿಳಿಯಬಹುದು. ಅಲ್ಲಿ ನಾರದರು "ವಕ್ಷ್ಯಾಮ್ಯಹಂ 'ಬುದ್ಧ್ವಾ' ಎಂಬ ವಾಕ್ಯವನ್ನು ಬಳಸುತ್ತಾರೆ. ಕೇವಲ ಚರ್ಮಚಕ್ಷುಸ್ಸಿನಿಂದ ನೋಡಿದರೆ ಆತನ ಗುಣಗಳಗಳೆಲ್ಲವೂ ತಿಳಿಯುವುದೇ? ಹಾಗೆ ನೋಡಿದರೆ ಅದು ಸಂಕುಚಿತವಾದ ನೋಟವಾಗಬಹುದು. ಹಾಗಾಗಿ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಲು ಒಳಹೊಕ್ಕು ಬುದ್ಧಿಯಿಂದ ಪರಿಶೀಲಿಸಬೇಕು. ಬುದ್ಧಿಯ ಸ್ವಭಾವ ನಿಶ್ಚಯವನ್ನು ತಾನೇ ಕೊಡುವುದು. ಬುದ್ಧಿಯ ಕ್ಷೇತ್ರಕ್ಕೂ ಮೀರಿದ್ದು ಪುರುಷತತ್ತ್ವ. ಹಾಗಾಗಿ ಶ್ರೀರಾಮನನ್ನು ಅರಿಯಲು ಬುದ್ಧಿಯಿಂದ ಮಾತ್ರ ಸಾಧ್ಯ ಎಂಬುದನ್ನು ನಾರದರು 'ಬುದ್ಧ್ವಾ' ಎಂಬ ಪದವನ್ನು ಬಳಸಿದ್ದನ್ನು ನೋಡಬಹುದು.    


ಇಂತಹ ಒಬ್ಬ ಸಾಮಾನ್ಯ ಮಾನವನು ಶ್ರೀರಾಮನೇ ? ಇದಕ್ಕೆ ಬುದ್ಧಿ ಎಂಬ ವಿಶೇಷ ಸಾಮಗ್ರಿಯೇ ಬೇಕೇ? ಹಾಗಾದರೆ ಮಾನವನು ಯಾರು ? ಅಂತಹ ವಿಶೇಷತೆ ಶ್ರೀರಾಮನಲ್ಲಿ ಏನಿದೆ? ಅವನಿಗೂ ಇರುವುದು ನಮ್ಮoತೆ  ಎರಡೇ ಕೈ ತಾನೇ? ಇದಕ್ಕಿಂತಲೂ ವಿಶೇಷತೆ ಏನು? 


ಯಾವುದೇ ಒಂದು ಪದಾರ್ಥವನ್ನು ನೋಡಲು ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರೂ ದೃಷ್ಟಿಯು ಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಪದಾರ್ಥವು ಭೌತಿಕ, ದೈವಿಕ ಮತ್ತು ಆತ್ಮಿಕ ಎಂಬ ಮೂರೂ ಪದರಗಳನ್ನು ಒಳಗೊಂಡಿರುತ್ತದೆ. ಈ ಮೂರನ್ನು ನೋಡಲು ಮೂರೂ ದೃಷ್ಟಿ ಬೇಕೇ ಬೇಕು.  " ನ ಶಕ್ಯಶ್ಚಕ್ಷುಷಾ ದ್ರಷ್ಟುo ದೇಹೇ ಸೂಕ್ಷ್ಮತಮೋ ವಿಭು: । ದೃಶ್ಯತೇ ಜ್ಞಾನಚಕ್ಷುರ್ಭಿ: ತಪಶ್ಚಕ್ಷುರ್ಭಿರೇವ ಚ" ಎಂಬಂತೆ ಜ್ಞಾನ ಮತ್ತು ತಪ್ಪಸ್ಸೆಂಬ ದೃಷ್ಟಿಯಿದ್ದವನು ಮಾತ್ರ ಈ ಮೂರನ್ನು ನೋಡಬಲ್ಲನು. ಅಂದರೆ ನಾರದರಂತಹ ಮಹರ್ಷಿಗಳು 'ಬುದ್ಧ್ವಾ' ಎಂದು ಹೇಳಲು ಇಷ್ಟು ವಿಶಾಲವಾದ ಅರ್ಥ ಅಲ್ಲಿ ಹುದುಗಿದೆ ಎಂಬುದನ್ನು ನಾವು ತಿಳಿಯಬೇಕು. ಇವರ ದೃಷ್ಟಿಯಲ್ಲಿ ಶ್ರೀರಾಮನು ಒಬ್ಬ ಪರಿಪೂರ್ಣ ಮಾನವ. ಆದ್ದರಿಂದಲೇ ಆತ ಆದರ್ಶ ಮಾನವ. ಅವನನ್ನು ನೋಡಿ ನಮ್ಮಲ್ಲಿರುವ ಅಂಕುಡೊಂಕುಗಳನ್ನು ನಾವು ಅರಿಯಬಹುದು. ಏಕೆಂದರೆ ಅದೊಂದು ಆದರ್ಶ- ಕನ್ನಡಿ. ಕನ್ನಡಿ ಶುದ್ಧವಾಗಿದ್ದಾಗ ಮಾತ್ರವೇ ಅಲ್ಲಿ ಕಾಣುವ ಪ್ರತಿಬಿಂಬ ಪರಿಶುದ್ಧವಾಗಿ ಕಾಣಲು ಸಾಧ್ಯ. ಆದ್ದರಿಂದ ಶ್ರೀರಾಮನು ಆದರ್ಶ. "ನಾರಾಯಣನು ನರನಾಗಿ ಅವತರಿಸಿ ನರರೊಡನೆ ಕರೆದುಕೊಂಡು ಹೋಗಲು ಇಳಿದು ಬಂದವನೇ ಶ್ರೀರಾಮ" ಎಂಬ ಶ್ರೀರಂಗಮಹಾಗುರುಗಳು ಹೇಳಿದ ಮಾತನ್ನು ಇಲ್ಲಿ ನೆಪಿಸಿಕೊಳ್ಳಬೇಕು.


ಸೂಚನೆ :27/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Saturday, March 26, 2022

ವಸ್ತ್ರಾಭರಣ 15 ಉಪಸಂಹಾರ (Vastra Bharana -15 Upasanhara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ವಸ್ತ್ರ-ಆಭರಣಗಳ ಅಲಂಕಾರ ಪದ್ಧತಿಯನ್ನು ಸವಿವರವಾಗಿ ನೋಡಿದ್ದಾಗಿದೆ. ಮುಖ್ಯವಾಗಿ ಯೋಗಕ್ಕೂ ಅದಕ್ಕೂ ಇರುವ ಸಂಬಂಧವನ್ನು ನೋಡಿದ್ದೆವು. ಇದು ಸಾಮಾನ್ಯ ಮನುಷ್ಯರಿಗೆ, ಸಾಧಕರಿಗೆ ಒಪ್ಪುವ ಅಲಂಕಾರವಾದರೆ, ವಿಶೇಷವಾಗಿ ಯೋಗಿಗಳಿಗೆ ಈಶ್ವರನಾದ ಶಿವ-ನಟರಾಜ ಹಾಗೂ ಯೋಗಕ್ಕೆ ಈಶ್ವರನಾದ ಕೃಷ್ಣನ ಅಲಂಕಾರವೆಂತಿದೆ ಎಂದು ನೋಡೋಣ. ಕೃಷ್ಣನು- ಸ್ಥಿತಿ ಕಾರಕನಾದ ವಿಷ್ಣುಸ್ವರೂಪಿ. 'ಅಲಂಕಾರ ಪ್ರಿಯೋವಿಷ್ಣು:' ಎಂಬಂತೆ ಸ್ಥಿತಿ ಕಾರಕನಾಗಿ, ಧರ್ಮ ರಕ್ಷಕನಾಗಿರುವನು ಲೋಕಕ್ಕೆ ಒಪ್ಪುವಂತಹ ಸುಂದರವಾದ ರೂಪ-ಅಲಂಕಾರವನ್ನು ಧರಿಸುತ್ತಾನೆ. ಆದರೆ ಶಿವ-ನಟರಾಜ ದಿಗಂಬರ, ನಾಗಾಭರಣ. ಇಬ್ಬರ ಅಲಂಕಾರವೂ ಒಂದಕ್ಕೊಂದು ಸಂಬಂಧವಿಲ್ಲದಂತೆ  ಕಂಡರೂ ಅದರಲ್ಲಿ ಸಾಮ್ಯತೆಗಳುಂಟು. ಎರಡೂ ತಮ್ಮದೇ ಆದರೀತಿಯಲ್ಲಿ  ಪರಿಪೂರ್ಣಯೋಗ ಸ್ಥಿತಿಗೆ ಒಪ್ಪುವಂತಿರುತ್ತದೆ. 


ಶ್ರೀಮದ್ಭಾಗವತದಲ್ಲಿ ಕೃಷ್ಣನ ವರ್ಣನೆ ಸೌಂದರ್ಯಪೂರ್ಣವೂ ರೋಚಕವೂ ಆಗಿದೆ.  ಕೃಷ್ಣ ಪೀತಾಂಬರಧಾರಿ. ಹಳದಿಯ ರೇಷ್ಮೆ ಸ್ವರ್ಣಮಯವಾದ ಜ್ಯೋತೀರೂಪವನ್ನು ಹೊತ್ತು ತರುತ್ತದೆ. ಶಿರದಲ್ಲಿ ಶಿಖರಸ್ಥಾನದಲ್ಲಿನ ಪೂರ್ಣತತ್ತ್ವದ ಪ್ರತೀಕವಾಗಿ ಕಿರೀಟವನ್ನು ಧರಿಸಿದ್ದಾನೆ. ಜೊತೆಯಲ್ಲಿ ಮಾಯಾಶಕ್ತಿಯ ನವಿಲುಗರಿಯನ್ನು ಧರಿಸಿ ಮಾಯೆಯನ್ನು ವಶದಲ್ಲಿಟ್ಟಿದ್ದಾನೆ. ಸೊಂಟಕ್ಕೆ ಕಾಂಚೀಯನ್ನು ಕಟ್ಟಿದ್ದಾನೆ. ತೋಳುಗಳಲ್ಲಿ ಅಂಗದವು ಬಿಗಿಯಾಗಿ ಬಂಧಿಸಿದೆ. ಮಣಿಕಟ್ಟಿನಲ್ಲಿ ಕಂಕಣವೂ ಇದೆ. ಇವು  ಸಾಧಕರಿಗೆ ಮರ್ಮಸ್ಥಾನಗಳಲ್ಲಿ ಬಂಧವನ್ನು ಉಂಟುಮಾಡುತ್ತದೆ. ಆದರೆ ಯೋಗೇಶ್ವರನಲ್ಲಿ ಅವನ  ಸಹಜವಾಗಿರುವ ಸ್ಥಿತಿಯನ್ನು ನಮಗೆ ಪರಿಚಯ ಮಾಡಿಸಿಕೊಟ್ಟು ಅಲಂಕಾರವಾಗಿ ಶೋಭಿಸುತ್ತದೆ. ಯೋಗಿಯ ಒಳದರ್ಶನಕ್ಕೆ ಅವನ ಕಂಠದಲ್ಲಿ ಶೋಭಿಸುತ್ತಿದ್ದ ಕೌಸ್ತುಭ ಮಣಿಯು, ಕಿವಿಯ ವೈಢೂರ್ಯಗಳು, ಅವನ ಶುದ್ಧ ಒಳ ಸ್ವರೂಪವನ್ನು , ಪರಮಾತ್ಮಸ್ವರೂಪವನ್ನು ದರ್ಶಿಸುತ್ತವೆ. ಎತ್ತಿರುವ ಕೈಯಲ್ಲಿ  ಶಂಖ-ಚಕ್ರಗಳು ಅಮಾನುಷವಾದ ದಿವ್ಯ ಆಯುಧಗಳು, ಕೃಷ್ಣನಿಗೆ ಆಭರಣಗಳು. ಅವು ಊರ್ಧ್ವಮುಖವಾಗಿರುವ ಮನಸ್ಸು-ಬುದ್ಧಿಗಳ ಪ್ರತಿರೂಪ. ಕೈಯಲ್ಲಿ ಕೊಳಲು ಪ್ರಣವನಾದದ ಪ್ರತೀಕ.   


ಶಿವ-ನಟರಾಜನನ್ನು ನೋಡಿದರೆ, ಅವನು ಯಾವ ಪಟ್ಟು-ಪೀತಾಂಬರವನ್ನೂ ಧರಿಸಿಲ್ಲ. ಆದರೆ, ಅಂತರೀಯದ ಕೆಲಸವನ್ನು ಗಜ-ಚರ್ಮವು ಮಾಡುತ್ತದೆ. ಅವನು ಉತ್ತರೀಯವನ್ನು ಧರಿಸಿಲ್ಲ. ಆದರೆ ಅದರ ಪ್ರತಿರೂಪವಾದ ಕುಂಡಲಿನಿ ಸರ್ಪರೂಪದ ಜನ್ನದಾರವನ್ನು ಧರಿಸಿದ್ದಾನೆ. ಕೃಷ್ಣನಂತೆಯೇ ಮರ್ಮಸ್ಥಾನವನ್ನು ಬಂಧಿಸುವ ಬಂಧಕ ಆಭರಣಗಳನ್ನು ಧರಿಸಿದ್ದಾನೆ. ಆದರೆ ಇವೂ ಕುಂಡಲೀ ಸರ್ಪಗಳ ರೂಪದಲ್ಲಿ ಆಭರಣಗಳು. ಇವನ ಮುಕುಟವು ಅರ್ಕ ಪತ್ರ, ಚಂದ್ರ, ಗಂಗೆಯಿಂದ ಕೂಡಿದೆ. ಹೊರನೋಟಕ್ಕೆ ಕೃಷ್ಣನ ಮುಕುಟಕ್ಕಿಂತ ವಿಪರೀತವಾಗಿದ್ದರೂ ಹಿಂದಿನ ತತ್ತ್ವ ಒಂದೇ. ಅರ್ಕಪತ್ರ-ಚಂದ್ರಗಳು ಸೂರ್ಯ-ಚಂದ್ರ-ಅಗ್ನಿ ತತ್ತ್ವಗಳ ಸೇರುವೆಯನ್ನು ತೋರಿಸುತ್ತದೆ. ಅರ್ಕಪತ್ರ-ಗಂಗೆಗಳು ಆಪೋಜ್ಯೋತಿಸ್ಥಲವನ್ನು ಸೂಚಿಸುತ್ತದೆ. ಕೈಯಲ್ಲಿನ ಡಮರು-ಅಗ್ನಿಗಳು ಪ್ರಾಣಾಪಾನದ ಸಮತ್ವವನ್ನು ಸಾರುತ್ತವೆ. ಅವನು  ಸಾಕ್ಷಾತ್ ನಾದತನು ಆಗಿದ್ದಾನೆ. ಇನ್ನೂ ಹೇಳುವುದಾದರೆ, ಕೃಷ್ಣನ ಕೈಯಲ್ಲಿರುವ ಕೊಳಲು ಸಾಕ್ಷಾತ್ ರುದ್ರನೇ ಎಂದು ಶಾಸ್ತ್ರಗಳು ತಿಳಿಸುತ್ತವೆ.                                                                 


ಇವರೀರ್ವರ ಅಲಂಕಾರದಲ್ಲಿ ಕಂಡುಬರುವ ಎಲ್ಲ ತತ್ತ್ವಗಳೂ ಒಟ್ಟುಗೂಡಿಸಿದರೆ, ಭಾರತೀಯ ವಸ್ತ್ರಾಲಂಕಾರ ಮತ್ತು ಆಭರಣಗಳ ಸಾರವನ್ನೇ ತೋರುತ್ತಿದೆ. ಸಾಧಕರಲ್ಲಿ ಇವು ಯೋಗಸಾಧನಗಳಾಗಿ ಕೆಲಸ ಮಾಡುತ್ತವೆ. ಆದರೆ ಸಿದ್ಧರಲ್ಲಿ, ಯೋಗೀಶ್ವರ-ಯೋಗೇಶ್ವರರಲ್ಲಿ ಇದು ಆದರ್ಶವಾಗಿ ಕಂಗೊಳಿಸುತ್ತದೆ. ಅವರ ನಿಜ ರೂಪವನ್ನು ದರ್ಶಿಸುವ ಕನ್ನಡಿಯಾಗಿ ನಿಲ್ಲುತ್ತವೆ. ಶ್ರೀರಂಗಮಹಾಗುರುಗಳ ಅದ್ಭುತ ಯೋಗದೃಷ್ಟಿಯಿಂದ ಕೂಡಿದ ಈ ನೋಟವು ಲೋಕಕ್ಕೆ ಋಷಿಗಳ ಅಂತರದೃಷ್ಟಿಯನ್ನು ತಂದುಕೊಟ್ಟು, ನಮ್ಮ ಜೀವನಗಳನ್ನೇ ಪಾವನವನ್ನಾಗಿ ಮಾಡಿದೆ.


ಸೂಚನೆ : 26/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಕಾಳಿದಾಸನ ಜೀವನದರ್ಶನ – 3 ಕಾಳಿದಾಸನ ಅಗ್ರಗಣ್ಯ ರಾಷ್ಟ್ರಕವಿತ್ವ (Kalidasana Jivanadarshana - 3 Kalidasana Agraganya Rashtrakavitva)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಕಾಳಿದಾಸನನ್ನು ಕುರಿತಾಗಿ ನಮ್ಮ ದೇಶದ ಕವಿಗಳು, ಕಾವ್ಯಶಾಸ್ತ್ರಜ್ಞರು, ವಿದೇಶೀಯ ಕವಿಗಳು, ವಿಮರ್ಶಕರು - ಇವರುಗಳು ಏನೆಂದು ಹೇಳಿದ್ದಾರೆಂದು ಪ್ರಾತಿನಿಧಿಕವಾದ ಉದಾಹರಣೆಗಳ ಮೂಲಕ  ಗಮನಿಸಿಕೊಂಡದ್ದಾಯಿತು. ಕಾಳಿದಾಸನ ಅಗ್ರಗಣನೀಯತೆಯನ್ನು ಎಣಿಕೆಯ ಚಮತ್ಕಾರದಿಂದ ಮತ್ತೊಬ್ಬ ಕವಿ ಹೇಳಿರುವುದನ್ನೊಮ್ಮೆ ಗಮನಿಸಿ ಈ ಭಾಗಕ್ಕೆ ಮುಗಿತಾಯ ಹಾಕಬಹುದು.  

ನಮ್ಮ ಕೈಬೆರಳುಗಳಿಗೈದಕ್ಕೂ ಒಂದೊಂದು ಹೆಸರುಗಳಿವೆಯಷ್ಟೆ. ಹೆಬ್ಬೆಟ್ಟನ್ನು 'ಅಂಗುಷ್ಠ'ವೆನ್ನುತ್ತೇವೆ. ತೋರ್ಬೆರಳಿಗೆ 'ತರ್ಜನೀ" (ಅರ್ಥಾತ್, 'ಬೆದರಿಸುವ ಬೆರಳು') ಎಂದು. ಮಧ್ಯದ್ದಾದ್ದರಿಂದ ಮೂರನೆಯದು 'ಮಧ್ಯಮಾ'. ಎಲ್ಲ ಬೆರಳುಗಳಲ್ಲಿ 'ಕನಿಷ್ಠ"ವಾದ, ಎಂದರೆ ಅತ್ಯಂತ ಚಿಕ್ಕದಾದ, ಕಿರುಬೆರಳು 'ಕನಿಷ್ಠಿಕಾ'. ಹಾಗಾದರೆ ಬಿಟ್ಟುಹೋದ ಬೆರಳಿಗೇನು ಹೆಸರು? ಎದ್ದು ತೋರುವ ಒಂದು ವೈಶಿಷ್ಟ್ಯವೇ ಅದಕ್ಕಿಲ್ಲವಾಗಿ, ಅದಕ್ಕೊಂದು ಸರಿಯಾದ ಹೆಸರೇ ಇಲ್ಲವಾಗಿದೆ! ಹಾಗಾಗಿ " ಹೆಸರೇ ಇಲ್ಲದ್ದು" ಎಂಬುದೇ ಅದರ ಹೆಸರಾಯಿತು!: "ಅನಾಮಿಕಾ" ಎಂದರೆ ಹೆಸರಿಲ್ಲದ್ದು.

ಲೋಕಾರೂಢಿಯಾಗಿ ಒಂದು-ಎರಡು ಎಂದು ಮುಂತಾಗಿ ಎಣಿಕೆಮಾಡುವಾಗ ಅಂಗುಷ್ಠಾದಿಯಾಗಿ ಬೆರಳೆಣಿಸುವ ಕ್ರಮ ಅಮೆರಿಕದಲ್ಲಿದೆ; ನಮ್ಮಲ್ಲಿಲ್ಲ. (ಕರನ್ಯಾಸದ ವಿಷಯ ಬೇರೆ). ಹೆಬ್ಬೆಟ್ಟಿನಿಂದಾರಂಭಿಸಿ ಬೆರಳುಗಳನ್ನು ಒಂದೊಂದನ್ನಾಗಿ ತೆರೆದುಕೊಂಡು ಅವರು ಎಣಿಸುತ್ತಾರೆ! ನಮ್ಮಲ್ಲಿ ಹಾಗಲ್ಲ; ಎಣಿಸಲಾರಂಭಿಸುವಾಗ ಬೆರಳುಗಳನ್ನೆಲ್ಲ ಮಡಿಚಿಕೊಂಡು, ಆ ಬಳಿಕ ಎಣಿಸುವಾಗ ಒಂದೊಂದನ್ನಾಗಿ ಹೊರತೆಗೆಯುತ್ತೇವೆ - ಅದೂ ಕನಿಷ್ಠಿಕೆಯಿಂದಾರಂಭಿಸಿ. ಹೀಗಾಗಿ ಎರಡನೆಯ ಬೆರಳೆಂದರೆ ಅನಾಮಿಕೆ, ಮುಂದಕ್ಕೆ ಮಧ್ಯಮಾ ಇತ್ಯಾದಿ.

ಹಿಂದೊಮ್ಮೆ ಕವಿಗಳು ಯಾರಾರು? – ಎಂದೆಣಿಸುವ ಪ್ರಸಂಗ ಬಂದಿತಂತೆ. ಎಣಿಸಲು ಪ್ರಾರಂಭಮಾಡಿದಾಗ ಮೊಟ್ಟಮೊದಲ ಸ್ಥಾನಕ್ಕೆ, ಎಂದರೆ ಕನಿಷ್ಠಿಕೆಗೆ, ಕಾಳಿದಾಸ ಬಂದ. ಎಷ್ಟು ಹುಡುಕಾಡಿದರೂ ಆತನ ಸಮಕ್ಕೆ ನಿಲ್ಲಬಲ್ಲ ಮತ್ತೊಬ್ಬ, ಎಂದರೆ ಎರಡನೆಯ ಸ್ಥಾನಕ್ಕೆ ಸಲ್ಲುವ, ಕವಿಯು ಕಾಣಿಸಲೇ ಇಲ್ಲವಾಯಿತು. ಹೀಗಾಗಿ ಎರಡನೆಯ ಹೆಸರನ್ನು ಹೇಳಲೇ ಯಾರೂ ಇಲ್ಲವಾಗಿಹೋಗಿ, ಅದೋ ಆ ಕಾರಣಕ್ಕಾಗಿಯೇ, ಆ ಎರಡನೆಯ ಬೆರಳಿಗೆ "ಅನಾಮಿಕಾ" ("ಹೆಸರಿಲ್ಲದ್ದು") ಎಂಬ "ಹೆಸರು" ಸಾರ್ಥಕವಾಯಿತು - ಎಂದುಕೊಂಡರಂತೆ! ಕಾಳಿದಾಸನ ಅಗ್ರಗಣ್ಯತ್ವ-ಮಾತ್ರವಲ್ಲದೆ ಆತನ ಅನ್ಯವಿಲಕ್ಷಣತೆಯನ್ನೂ ಅದು ತೋರಿಗೊಡುತ್ತದೆ:

ಪುರಾ ಕವೀನಾಂ ಗಣನಾ-ಪ್ರಸಂಗೇ ಕನಿಷ್ಠಿಕಾಧಿಷ್ಠಿತ-ಕಾಳಿದಾಸಾ |

ಅದ್ಯಾಪಿ ತತ್ತುಲ್ಯ-ಕವೇರ್ ಅಭಾವಾದ್ ಅನಾಮಿಕಾ ಸಾರ್ಥವತೀ ಬಭೂವ||

ಕಾಳಿದಾಸನು ಅಗ್ರ್ಯ -ಎಂದರೆ ಅಗ್ರಸ್ಥಾನದಲ್ಲಿ ನಿಲ್ಲತಕ್ಕವನು, ಹಾಗೂ ಅದ್ವಿತೀಯ – ಎಂಬುದನ್ನುಸುರುವ ಅದ್ವಿತೀಯವಾದ ಬಗೆ!

ಆದರೆ ಆತನೇ ರಾಷ್ತ್ರಕವಿಯೆಂಬಂತೆ ಆರಂಭದಲ್ಲೇ ನುಡಿದುದು ಸುಮ್ಮನೆ ಹೊಗಳಿಕೆಯ ಮಾತೇ?, ಅಥವಾ ವಾಸ್ತವವಾದ ಆತನ ಗಳಿಕೆಯ ಮಾತೇ? – ಎಂಬ ಪ್ರಶ್ನೆ ಮೂಡಬಹುದಾದದ್ದೂ ಸರಿಯೇ. ಹಾಗೂ ಆ ಪಟ್ಟವನ್ನು ಆತನಿಗೆ ಕಟ್ಟಿದವರು ಅಥವಾ ಕೊಟ್ಟವರು ಯಾರು? - ಎಂಬ ಪ್ರಶ್ನೆಯೂ ಯುಕ್ತವೇ.

ಅದಕ್ಕೂ ಮೊದಲು ಆತ ಯಾವ ಊರಿನವನು? - ಎಂದು ತಿಳಿದುಕೊಳ್ಳುವುದೂ ಅವಶ್ಯವಾಗುತ್ತದೆ. ಕೊನೆಯ ಪಕ್ಷ ಯಾವ ರಾಜ್ಯದವನಿರಬಹುದು?  ಆತನಂತೂ ತಾನು ಹುಟ್ಟಿದ ಸ್ಥಾನವನ್ನೇನೂ ಸೂಚಿಸಿಲ್ಲ. ವಾಸ್ತವವಾಗಿ ತನ್ನ ಹೆಸರನ್ನೂ ಸೂಚಿಸಿದಂತಿಲ್ಲ! ತಾನು "ಕಾಳಿಯ ಒಬ್ಬ ದಾಸ"ನೆಂಬಷ್ಟೇ ಭಾವವು ಆತನ ಹೆಸರಿನಲ್ಲಿದ್ದು, ಅದು ಆತನಿಗೆ ವಸ್ತುತಃ ಮನೆಯಲ್ಲಿಟ್ಟ ಹೆಸರೋ, ವಂಶನಾಮವೋ, ಬಿರುದೋ, ಕಾವ್ಯನಾಮವೋ ಏನೂ ಹೇಳುವಂತಿಲ್ಲ! ನಮ್ಮ ದೇಶದ ಪೂರ್ವಿಕರ ಬಹುಮಂದಿ ಗರಿಷ್ಠರ ಜಾಯಮಾನವೇ ಆ ಬಗೆಯದು!: ಹೆಸರಿಗಾಗಿ ಹೊಡೆದಾಡುವುದೇನು? ಬಿರುದಿಗಾಗಿ ಬಾಯ್ಬಾಯ್ಬಿಡುವುದೇನು? ಬೆಳೆಯಬಯಸುವವರಿಗೆ ಬಳಸಲಾಗುವಂತಿದ್ದರಾಯಿತು, ತಮ್ಮ ರಚನೆ – ಎಂಬುದಷ್ಟೇ ಅವರ ಮಾನಸದಲ್ಲಿದ್ದ ಕಾಳಜಿ.

ಅಷ್ಟೇ ಅಲ್ಲ; ಹೇಗೆ ಸಂಸ್ಕೃತಭಾಷೆಯೂ – ಒಂದರ್ಥದಲ್ಲಿ ಅದೊಂದೇ - ಇಡೀ ಭಾರತಕ್ಕೆ ಸೇರಿದುದೋ, ಹಾಗೆಯೇ ಈತನೂ – ಪ್ರಾಯಃ ಈತನೊಬ್ಬನೇ - ಅಖಂಡಭಾರತಕ್ಕೆ ಸೇರಿದವನೆಂಬ ಧ್ವನಿಯೇ ಅಲ್ಲಡಗಿರುವಂತಿದೆ.

ಸಿಂಹಳದ ವೇಶ್ಯೆಯೊಬ್ಬಳ ಸಹವಾಸ ಮಾಡಿದನೆಂಬೊಂದು ಕಥೆಯು ಆತನಿಗೂ ಶ್ರೀಲಂಕೆಗೂ ಕೊಂಡಿಹಾಕಿದೆ. ಕಾಳೀಪೂಜೆಯೂ ಕಾಳೀಭಕ್ತರ ಹೆಸರೂ ಬಂಗಾಳದಲ್ಲಿ ಪ್ರಚುರವೆಂಬ ಕಾರಣಕ್ಕಾಗಿ ಬಂಗಾಳಿಗಳು "ಆತ ನಮ್ಮವ" ಎನ್ನುವುದುಂಟು. ತೆಂಗಿನ ಪ್ರಚುರವಾದ ಬಳಕೆ ದಕ್ಷಿಣದ ಸಮುದ್ರತೀರದಲ್ಲಲ್ಲವೇ, ಅದರ ವರ್ಣನೆಯಿರುವುದಾಗಿ ತಮ್ಮವನಿವನೆಂದು ಇವರೂ ಹೇಳುವುದುಂಟು. ಕಾಶ್ಮೀರವೆಂದರೇ ಕೇಸರಪುಷ್ಫದ ನೆಲೆ; ಅದನ್ನು ಯಥಾವತ್ತಾಗಿ ಚಿತ್ರಿಸಿರುವಾತನು ಅಲ್ಲಿಯವನಾಗಿರಬಾರದೇ? ಹಿಮಾಲಯ-ಅಲಕೆ-ಮಾನಸಸರೋವರಗಳ ನಡುವೆ ವಾಸಿಸುತ್ತಿದ್ದವನೆಂದು ಹೇಳುವುದರಲ್ಲಿ ಹೆಚ್ಚು ಔಚಿತ್ಯವಿದೆ - ಎನ್ನುವವರೂ ಇರಬಹುದು. ಸ್ವರ್ಗದ ಭಾಗವೊಂದರಂತಿರುವಂತಹ ಉಜ್ಜಯಿನಿಯನ್ನು ಮಾತ್ರ ನೋಡದಿರಬೇಡ - ಎನ್ನುವ ಆತ ಮಹಾರಾಷ್ಟ್ರದವನೇ – ಎಂದು ಉದ್ಗರಿಸುವವರೂ ಉಂಟು. ಸಿಂಧು-ಸರಸ್ವತೀನದಿಗಳನ್ನೂ ವಾಯವ್ಯಪ್ರಾಂತಗಳನ್ನೂ ಚಿತ್ರಿಸಬಲ್ಲವನು ಅಲ್ಲಿಯವನಾಗನೆ? (ಪಾಣಿನಿಯು ಇಂದಿನ ಪಾಕಿಸ್ತಾನದಲ್ಲಿದ್ದವನಲ್ಲವೇ? ಗಾಂಧಾರವು ವೇದಭೂಮಿಯಲ್ಲವೇ?) ಗೋಮಾಂತಕ (ಗೋವಾ)-ಕಚ್ಛಪ್ರದೇಶಗಳನ್ನು ಬಣ್ಣಿಸಿರುವನು ಗುಜರಾತಿನವನಾಗಿರಬಾರದೇ?

ಭಾರತಭೂಮಿಯ ಬಗ್ಗೆ ಆತನಿಗೆ ಅದೆಷ್ಟು ಪ್ರೀತಿ-ಗೌರವಗಳೆಂದರೆ, ರಘುವಂಶದಲ್ಲಿಯ ರಘುದಿಗ್ವಿಜಯವರ್ಣನ ಪ್ರಸಂಗದಲ್ಲಿ ಪ್ರದಕ್ಷಿಣ-ಕ್ರಮದಲ್ಲೇ ಭಾರತವನ್ನು ಸುತ್ತಿಸುತ್ತಾನೆ: ಮೊದಲು ಪೂರ್ವದಿಕ್ಕು, ಆಮೇಲೆ ದಕ್ಷಿಣ, ಆಮೇಲೆ ಪಶ್ಚಿಮ, ಕೊನೆಗೆ ಉತ್ತರ. ರಘುವಂಶದಲ್ಲೇ ವೈಮಾನಿಕವಾದ ಹಾದಿಯಲ್ಲಿ ರಾಮ-ಸೀತೆಯರು ಲಂಕೆಯಿಂದ ದಂಡಕಾರಣ್ಯಕ್ಕೆ ಆಗಮಿಸುವ ವರ್ಣನೆ, ಇಂದುಮತೀ-ಸ್ವಯಂವರ-ಪ್ರಸಂಗದಲ್ಲಿ ಉಳಿದ ಹಲವೆಡೆಗಳ ಅರಸುಗಳ ವರ್ಣನೆ - ಇಲ್ಲೆಲ್ಲ ಭಾರತದ ನಾನಾ-ಪ್ರಾಂತಗಳ ವರ್ಣನೆಯೂ ಇದೆ. ಮೇಘದೂತದಲ್ಲಿ ರಾಮಗಿರಿಯಿಂದ ಅಲಕೆಯವರೆಗಿನ ಮಾರ್ಗದ ವರ್ಣನೆಯಿದೆ. ಕುಮಾರಸಂಭವದ ಆದಿಯಲ್ಲಿ ಹಿಮಾಲಯದ ವರ್ಣನೆಯೇ.

ರಾಜಕೀಯ-ಭೂಪಟವು ಬದಲಾಗುತ್ತಿರಬಹುದು, ಆದರೆ ಸ್ಥಾಯಿ-ಸ್ಥಾನಗಳೆಂದರೆ ನಗ-ನದಿಗಳೇ. (ಎಂದೇ "ಗಿರಿ-ಸರಿತ್ತುಗಳಿರುವ ತನಕ" ರಾಮಾಯಣವು ಸ್ಥಾಯಿ - ಎನ್ನುವ ವರವೂ.) ನಗರಗಳು ಗಣ್ಯವೆಂದು ಜನಪದ-ಜೀವನವನ್ನು ಕವಿಯು ನಗಣ್ಯ ಮಾಡಿಲ್ಲ. ಇಲ್ಲಿಯ ಸಸ್ಯವರ್ಗ-ಪ್ರಾಣಿವರ್ಗಗಳೆಲ್ಲವನ್ನೂಆತನ ಕೃತಿಗಳಲ್ಲಿ ಕಾಣುತ್ತೇವೆ. ಉಪವನ-ವನ-ತಪೋವನಗಳ, ಒಟ್ಟಿನ ಸಂಸ್ಕೃತಿಯ ವರ್ಣನೆಯೂ ಅವಲ್ಲುಂಟು. ಈ ಎಲ್ಲ ಕಾರಣಗಳಿಂದ ಆತನು ರಾಷ್ಟ್ರಕವಿಯೇ. ಆದರೆ ಅದರ ಸಾರ್ಥಕ್ಯವನ್ನು ಮತ್ತೂ ಒಂದು ನೆಲೆಯಿಂದ  ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು. 

ಸೂಚನೆ : 26/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Tuesday, March 22, 2022

ಕಾಳಿದಾಸನ ಜೀವನದರ್ಶನ – 2 ಪಾಶ್ಚಾತ್ತ್ಯರ ದೃಷ್ಟಿಯಲ್ಲಿ ಕಾಳಿದಾಸ (Kalidasana Jivanadarshana - 2 Pashcattyara Drishtiyalli Kalidasa)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಒಬ್ಬ ಮಹಾಕವಿಯೆಂದೆನಿಸಿದನೆಂದರೆ, ಆತನ ಕೃತಿಗಳು ನಾನಾಭಾಷೆಗಳಿಗೆ ಅನುವಾದ ಹೊಂದುವುದು, ವೈದೇಶಿಕರೂ (ಅಂದರೆ ವಿದೇಶೀಯರೂ) ಅದನ್ನು ವಿಮರ್ಶಿಸುವುದು - ಇವೆಲ್ಲಾ ಆಗುವಂತಹುದೇ. ಹೀಗಾಗಿ ಕಾಳಿದಾಸನ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದ ಹೊಂದಿ ಆಯಾ ಭಾಷಿಕರು ಅದನ್ನು ವಿಮರ್ಶಿಸಿರುವುದೂ ಉಂಟೇ. ಯಾವ ಯಾವ ಭಾಷೆಗಳಿಗೆ ಯಾವಾಗ ಅನುವಾದವಾಯಿತು, ಮಾಡಿದವರಾರು, ಆ ಕುರಿತು ಬಂದ ವಿಮರ್ಶೆಗಳೇನು? - ಎಂದೆಲ್ಲಾ ಪಟ್ಟಿ ಮಾಡುವುದು ಇಲ್ಲಿ ಪ್ರಸ್ತುತವೆನ್ನಿಸದು. ಅದರ ಬಗ್ಗೆ ದಿಗ್ದರ್ಶಕವಾದ ರೀತಿಯಲ್ಲಿ ವೈದೇಶಿಕ ಕವಿ-ವಿಮರ್ಶಕರೊಬ್ಬಿಬ್ಬರ ಅಭಿಪ್ರಾಯಗಳನ್ನು ಸೂಚಿಸಿ ಅಲ್ಲಿಗೆ ಕೈಬಿಡುವುದು ಸೂಕ್ತವಾದೀತು. (ಇದು ಸ್ಥಾಲೀ-ಪುಲಾಕ-ನ್ಯಾಯದಂತೆ: ಅಂದರೆ, ಅನ್ನ ಮಾಡುವಾಗ, ಸಾಕಷ್ಟು ಬೆಂದಿದೆಯೇ ಎಂದು ತಿಳಿಯಲು ಒಂದೆರಡು ಅಗುಳುಗಳನ್ನು ನೋಡಿದರೆ ಸಾಕಲ್ಲವೇ? ಹಾಗೆ).  ಎಷ್ಟಾದರೂ, ಕಾಳಿದಾಸನು ಕಾಣಿಸುವ ಜೀವನದರ್ಶನವೇನೆಂಬುದೇ ನಮಗೆ ಈ ಲೇಖನಮಾಲೆಯಲ್ಲಿ ಪ್ರಸ್ತುತ.  

ಕಾಳಿದಾಸನ ಅತ್ಯಂತ ಪ್ರಸಿದ್ಧವಾದ ಕೃತಿಯೆನಿಸುವ ಅಭಿಜ್ಞಾನಶಾಕುಂತಲ ನಾಟಕವು ಇಂಗ್ಲೀಷ್-ಫ್ರೆಂಚ್-ಜರ್ಮನ್ ಭಾಷೆಗಳಿಗೆ ಸುಮಾರಾಗಿ ಹದಿನೆಂಟನೆಯ ಶತಮಾನದ ಕೊನೆಯ ಆಸುಪಾಸಿನ ಹೊತ್ತಿಗೆ ಅನುವಾದ ಕಂಡಿತ್ತು. ಆ ಕಾಲಘಟ್ಟದಲ್ಲಿ ಜರ್ಮನರಿಗೆ ಸಂಸ್ಕೃತಭಾಷೆಯನ್ನು ಕುರಿತಾಗಿ ಉತ್ಕಟಕುತೂಹಲವೂ ತೀವ್ರಾದರವೂ ಇತ್ತಾಗಿ, ಅದರ ಆಂಗ್ಲಾನುವಾದವು ಬಂದ ಒಂದು ವರ್ಷದೊಳಗೇ ಜರ್ಮನ್‍ಭಾಷೆಗೆ ಅದು ಅನುವಾದವನ್ನು ಹೊಂದಿತು (ಎಂದರೆ ೧೭೯೧ರಲ್ಲಿ). ಆಗ ಬಹಳ ಹೆಸರುವಾಸಿಯಾಗಿದ್ದ ಜರ್ಮನ್ ವಿದ್ವಾಂಸನೆಂದರೆ ಗಯಟೆ (Goethe). ನಾಟಕ-ಕಾದಂಬರಿ-ವಿಮರ್ಶೆಗಳಲ್ಲೂ ಕೀರ್ತಿಯನ್ನು ಸಂಪಾದಿಸಿದ್ದ ಆತ, ವಿಜ್ಞಾನಕ್ಷೇತ್ರದಲ್ಲೂ ಕೆಲಸವನ್ನು ಮಾಡಿದ್ದವನು. ಹೀಗಾಗಿ ಪಶ್ಚಿಮದೇಶಗಳ ಸಾಹಿತ್ಯ-ತತ್ತ್ವಜ್ಞಾನ-ರಾಜಕೀಯ ಚಿಂತನೆಗಳ ಮೇಲೆ ಆತನ ಪ್ರಭಾವ ಇಂದಿಗೂ ಅನಲ್ಪವಾಗಿರುವುದೇ. ಅಂತಹ ಧೀಮಂತನೊಬ್ಬನ ಅಭಿಪ್ರಾಯವು ಗ್ರಾಹ್ಯವೇ ಸರಿ.

ಸುಪ್ರತಿಷ್ಠಿತನೂ ಪ್ರಭಾವಸಂಪನ್ನನೂ ಆದ ಈತ, ಕಾಳಿದಾಸನ ಶಾಕುಂತಲವನ್ನು ಕುರಿತು ಮಾಡಿರುವ ಉದ್ಗಾರವು ಲೋಕವಿಶ್ರುತವೇ. ಶಾಕುಂತಲದ ಹಲವು ಮುದ್ರಣಗಳಲ್ಲಿ ಉಲ್ಲೇಖಿಸಲಾದ ಆತನ ಉಕ್ತಿಯನ್ನೊಮ್ಮೆ ಇಲ್ಲಿ ಅವಲೋಕಿಸುವುದು ಯುಕ್ತ. ಆತನ ಉದ್ಗಾರವು ಜರ್ಮನ್‍ಭಾಷೆಯಲ್ಲಿರುವುದರಿಂದ, ಅದರ ಪ್ರಸಿದ್ಧವಾದ ಆಂಗ್ಲಾನುವಾದವೊಂದನ್ನು (ಈಸ್ಟ್‍ವಿಕ್ ಎಂಬುವನು ಮಾಡಿದುದು) ಇಲ್ಲಿ ಕೊಟ್ಟಿದೆ.

"Wouldst thou the young year's blossom and the fruits of its decline/ And all by which the soul is charmed, enraptured, feasted, fed/ Wouldst thou the earth and heaven itself in one sole name combine?/ I name thee, O Sakuntala! and all at once is said."

ಏನಿದರ ಅಭಿಪ್ರಾಯ? : ವಸಂತ ಋತುವಿನ ಮುಕುಲವನ್ನೂ, ಅದರ ಪರಿಣತಿಯನ್ನೂ; ಜೊತೆಗೇ  ಮನಸ್ಸಿನ ಮೋದವನ್ನೂ ಮೋಹವನ್ನೂ  ಸಂತೃಪ್ತಿಯನ್ನೂ; ಹಾಗೂ ಭುವಿ-ದಿವಿಗಳೆರಡನ್ನೂ – ಇವೆಲ್ಲವನ್ನೂ ಒಂದೇ ಹೆಸರಿನಲ್ಲಿ ಯೋಜಿಸಬೇಕೆಂದಿದ್ದಲ್ಲಿ ಅದಕ್ಕೆ ನಾ ಹೆಸರಿಸುವುದು ಆ ಶಾಕುಂತಲವನ್ನೇ: ಇಷ್ಟನ್ನು ಹೇಳಿದರೆ ಅಷ್ಟನ್ನೂ ಹೇಳಿದಂತೆಯೇ ಸರಿ!

ಅಲ್ಲಿಗೆ, ದೇಶ-ಕಾಲಗಳೆರಡರಲ್ಲೂ ಲಭ್ಯವಾಗುವ ಪರಮೋತ್ಕೃಷ್ಟತೆಯನ್ನು ಹೇಳಿದಂತಾಯಿತು. ಹೇಗೆ? ಮೊಗ್ಗು ಆರಂಭದಶೆಯನ್ನೂ ಫಲವು ಮುಕ್ತಾಯದಶೆಯನ್ನೂ ಹೇಳುವುದು; ಇವೆರಡನ್ನೂ (ನಡುವಿನ ಪ್ರಗತಿಯನ್ನೂ ಒಳಗೊಂಡಂತೆ) ಹೇಳಿತೆಂದರೆ, ಕಾಲಚಕ್ರದ ಆದಿ-(ಮಧ್ಯ)-ಅಂತಗಳನ್ನು (ಪ್ರತೀಕಿಸಿ) ಹೇಳಿದಂತೆಯೇ ಸರಿ. ಹಾಗೆಯೇ ಭೂಲೋಕ-ಸ್ವರ್ಗಲೋಕಗಳೆಂದಾಗಲೂ ಸೃಷ್ಟಿಯ ವ್ಯಾಪ್ತಿಯ ಈ ಕೊನೆ - ಆ ಕೊನೆಗಳನ್ನು - ಎಂದರೆ ಸರ್ವದೇಶವನ್ನೂ, ಸೂಚಿಸಿದಂತಾಯಿತು. ಇನ್ನು ಚಿತ್ತಕ್ಕೆ ಇನಿಸನ್ನೂ ಉಣಿಸನ್ನೂ, ಮೋದವನ್ನೂ ಬೋಧವನ್ನೂ ಈ ಕಾಲಿಕವ್ಯಾಪ್ತಿ-ದೈಶಿಕವ್ಯಾಪ್ತಿಗಳಲ್ಲಿ ಕೊಡುವುದೆಂದರೆ, ಇನ್ನಿದಕ್ಕಿಂತಲೂ ಮಿಗಿಲಾಗಿ ಮತ್ತೇನನ್ನು ಮತ್ತಿನ್ನೆಷ್ಟು ಕೊಡಲಾದೀತು? ಇವಿಷ್ಟನ್ನೂ ಒಟ್ಟಿಗೇ ಉಂಟುಮಾಡಲು ಶಾಕುಂತಲವೊಂದೇ ಸಾಕು! - ಎಂದು ಉದ್ಗರಿಸುತ್ತಾನೆ, ಈ ಕವಿ!

ಕವಿಯ ನುಡಿಯಾಯಿತು. ಆಂಗ್ಲರಿಗೆ ಷೇಕ್ಸ್‍ಪಿಯರ್ ಎಂದರೆ ಹಿಂದಿನಿಂದಲೂ ಅಸಾಧಾರಣ ಆದರವಷ್ಟೆ? ಶಾಕುಂತಲವನ್ನು ಮೊಟ್ಟಮೊದಲಿಗೆ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ ಸರ್ ವಿಲಿಯಂ ಜೋನ್ಸ್ (William Jones) ಎಂಬವ( ಅನುವಾದಕ, ನ್ಯಾಯಾಧೀಶ)ನು ಕಾಳಿದಾಸನನ್ನು "The Shakespeare of India" (ಭಾರತದ ಷೇಕ್ಸ್‍ಪಿಯರ್) ಎಂದು ಕರೆದ! (ಎಂದರೆ, ತಮ್ಮ ಕವಿವಲಯದಲ್ಲಿ ಷೇಕ್ಸ್‍ಪಿಯರನು ಹೇಗೆ ಉತ್ತಮ ಮನ್ನಣೆಗೆ ಪಾತ್ರನೋ, ಹಾಗೆ ಭಾರತಕವಿವೃಂದದಲ್ಲಿ ಆದರಾತಿಶಯಕ್ಕೆ ಪಾತ್ರನಾದವನೆಂದರೆ ಕಾಳಿದಾಸನೇ ಸರಿ – ಎಂದು). ಮೋನಿಯರ್ ವಿಲಿಯಂಸ್ (Monier Williams) ಎಂಬ ವಿದ್ವಾಂಸನು ಕೂಡ ಅದೇ ಬಿರುದನ್ನು ಅನುಮೋದಿಸಿದವನೇ.

ಶಾಕುಂತಲವು ಕಾಳಿದಾಸನ ಮೇರುಕೃತಿಯೆಂದು ಸ್ವದೇಶ-ವಿದೇಶಗಳಲ್ಲೆಲ್ಲ ಖ್ಯಾತಿ ಬಂದರೂ, ಬ್ರಿಟಿಷರು ಮಾತ್ರ ತಮ್ಮ ಎಂ(ದೆಂ)ದಿನ ಕೊಂಕು-ಕೊಳಕು ಬುದ್ಧಿಯನ್ನು ಕೊಂಚವೂ ಬಿಡದೆ, ಶಾಕುಂತಲವು ಅತ್ಯಂತ ಅನೈತಿಕವಾದ ನಾಟಕವೆಂದು ಜರೆದು, ಶಾಲೆ-ಕಾಲೇಜುಗಳಲ್ಲಿ ಅದನ್ನು ಪಾಠ್ಯವಾಗಿ ಇಡಬಾರದೆಂದು ಸಹ ಆಗ್ರಹಿಸಿದ್ದರು! (ಆದರೆ ಈ ನಾಟಕದಲ್ಲಿಯ (ದುಷ್ಯಂತ ಮೊದಲಾದವರ) ಪಾತ್ರಚಿತ್ರಣವು ಅದೆಷ್ಟು ಉನ್ನತ-ಉದಾತ್ತವೆಂಬುದನ್ನು ಮುಂದೆ ಈ ಲೇಖನಮಾಲೆಯಲ್ಲೇ ಸ್ಪಷ್ಟಪಡಿಸಲಾಗುತ್ತದೆ).

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರೈಡರ್ (Ryder) ಎಂಬ ವಿದ್ವಾಂಸನು, ಕಾಳಿದಾಸನು ಒಬ್ಬ ಆಶ್ಚರ್ಯಕರನಾದ ವ್ಯಕ್ತಿಯೆಂದು ಹೇಳುತ್ತಾ, ಆತನ ಸಮಕಾಲೀನರು ಆತನ ಹಿರಿತನವನ್ನು ಪೂರ್ಣವಾಗಿ ಗ್ರಹಿಸಿರಲಾರರು - ಎನ್ನುತ್ತಾನೆ. ಕಾಳಿದಾಸನ ಸಮತ್ವವೇ ಅನ್ಯಾದೃಶವಾದದ್ದು: ಮಹಾರಾಜನ ವೈಭವದ ಸಭೆಯಾಗಲಿ ಒಂಟಿಯಾದ ಗಿರಿತಟವಾಗಲಿ - ಎರಡರಲ್ಲೂ ಸಮನಾಗಿ ಪ್ರೀತಿಯುಳ್ಳವನವನು; ಹಾಗೆಯೇ ಉದಗ್ರವ್ಯಕ್ತಿಗಳೊಂದಿಗೂ ಸಾಧಾರಣಮಂದಿಯೊಂದಿಗೂ ಕಲೆಯಬಲ್ಲವನಾಗಿದ್ದವನು. ಅಂತಹವನನ್ನು ಕಂಡು ಆತನ ಜೀವಿತಕಾಲದಲ್ಲೇ ಮೆಚ್ಚಿರುವವರು ವಿರಳವೇ ಸರಿ - ಎಂದಿದ್ದಾನೆ.

ಪೂರ್ವದೇಶಗಳ ಬಗ್ಗೆ ತಿರಸ್ಕಾರವೆಂಬುದು ಪಾಶ್ಚಾತ್ತ್ಯರಲ್ಲಿ ಪ್ರಚುರ; ಒಬ್ಬಿಬ್ಬ ಧೀಮಂತರಾದರೂ ಸತ್ಯವಾದಿಗಳಾಗಿದ್ದಾರೆಲ್ಲಾ!  - ಎಂಬುದೇ ಸಂತೋಷದ ವಿಷಯವಲ್ಲವೇ?

ಸೂಚನೆ : 19/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ஸ்ரீரங்கமஹாகுருவின் கண்ணோட்டம் - 1 ஆயுள் காப்பீடு (Life Insurance - Ayul Kaappidu)

மூலம்: ஸ்ரீ சாயாபதி 

தமிழாக்கம் -- திருமதி ஜானகி

மின்னஞ்சல் : (lekhana@ayvm.in)



ஆயுள் காப்பீடு என்பது அனைவரும் அறிந்த ஒன்று. பல விபத்துகள் நிறைந்த இவ்வாழ்க்கையில் யாருக்கு எப்போது மரணம் நிகழும் என்பதை அறிபவர் யார்? நிச்சயமற்ற இச்சூழ்நிலையில் சிறிதளவாவது ஆறுதல் அளிப்பது ஆயுள் காப்பீடு. எதிர்பாராது மரணத்தை தழுவும் நபரின் குடும்பத்திற்கு ஓரளவு நிதியுதவி வழங்கும் திட்டம் இது.


            இது சிறந்ததாலும் உயிர் துறந்த அந்த ஜீவனுக்கு இதனால் ஏற்படும்  லாபம் தான் என்ன? அந்த ஜீவன் இதனால் எவ்வாறு நிம்மதி அடைய முடியும்? அதன் நிம்மதிக்கும் சுகத்திற்கும் எவ்விதத்திலும் உபயோகமற்ற இத்திட்டம் ஆயுள் காப்பீடு எவ்வாறாகும்?


            அந்த ஜீவனுக்கு உயிருடனோ அல்லது உயிர் நீத்த பிறகோ நிம்மதியை தரும் காப்பீடு ஏதாவது உள்ளதா?  ஜீவத்திற்கு நிம்மதி அளிக்கும் இத்தகைய  காப்பீடு எவ்வாறு சாத்தியம்? ஆயுள் காப்பீடு எனும் சொல்லின் ரகசியத்தை உணர்ந்து இப்புதிருக்கு பொருத்தமான விளக்கத்தை அளித்தவர் ஶ்ரீரங்கமஹாகுரு.


             உலகவழக்கிலுள்ள காப்பீடு தேகத்தையும் குடும்பத்தையும் காப்பதற்கு உதவுகிறது. ஆனால் ஜீவனுக்கு உடலில் உள்ள போது நிம்மதியை அளிப்பது மட்டுமின்றி,  உடலிலிருந்து பிறிந்த பிறகும் தன்னுடைய உதவியினால் நிம்மதியளிக்கும் ஒரு செல்வம் உண்டு. அதுவே ஞானம் எனும் செல்வம். தேகத்தினுள் ஒரு மையத்தில் விளங்கும் ஓர் பேரொளி. அங்கே அதை காண்பவர்க்கு பேரானந்த அமுதமளிக்கும் ஆனந்த நிலை. உயிர் உள்ள போதே அதை அடையும் வழிமுறைகளை அறிந்த ஞானிகளின்  வழிகாட்டுதலினால் அச்செல்வத்தை  அடையலாம். அவ்வாறு அதை ஒறுமுறை அடைந்த பின் உயிர் பிரிந்தாலும் ஜீவன் அப்பேரொளியின் மடியிலேயே நிம்மதி காணுமாறு தன்னிடம் கவர்ந்திழுக்கும் பெரும் செல்வம் அது.


அச்செல்வத்தை பெறுவதற்கென்றே காப்பீடு செய்வதானால் அதுவே உண்மையான அர்த்தத்தில் காப்பீடாகும். அப்பெரும் செல்வத்தை தான் அடைந்து பிறர்க்கும் அந்நிலையை காண்பிக்கவல்ல நேர்மையான ஓர் சத்குருவினிடம் அடைக்கலம் பெற்றால்தான் அது ஜீவனுக்கு உண்மையான காப்பீடாகும்.


Sunday, March 20, 2022

ಅಷ್ಟಾಕ್ಷರೀ​ - 8 ನ ಹಿ ಜ್ಞಾನೇನ ಸದೃಶಂ (Astakshara Darshana -8 Na Hi Jnanena Sadrusham)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಎಷ್ಟೋ ಮನುಷ್ಯರಿಗೆ ಹೋಲಿಸಿದರೆ ಇರುವೆಗಳೇ ವಾಸಿಯೋ ಎನಿಸಬಹುದು. ಆದರೆ ಅರಿವಿನ ನೋಟಕ್ಕೆ ಗೋಚರವಾಗುವ ಸೂಕ್ಷ್ಮಗಳುಂಟು.  

ಇನ್ನೇನು ಗ್ರೀಷ್ಮ ಬಂತು. ಬಿಸಿಲುಗಾಲವು ಏರುತ್ತಲೇ ಇರುವೆಗಳ ಚಟುವಟಿಕೆಗಳು ಹೆಚ್ಚು ಹೆಚ್ಚು ಕಾಣಲಾರಂಭಿಸುತ್ತವೆ. ಬರೀ ಇರುವೆಗಳೇನು? ಬಿಲದೊಳಗೆ ವಾಸಿಸುವ ಎಲ್ಲ ಪ್ರಾಣಿಗಳೂ ಕಾದ ನೆಲದೊಳಗಣ ಬೇಗೆ ತಾಳಲಾರದೆ ಹೊರಗೆ ಹೆಜ್ಜೆಯಿಡುತ್ತವೆ. ಬಂದವು ಸುಮ್ಮನಿರುವುವೇ? ಪ್ರಾಣಿಗಳ ಬಹುತೇಕ ಚಟುವಟಿಕೆಗಳು ಆಹಾರ-ಸಂಪಾದನ/ಸಂಗ್ರಹಣಾರ್ಥವಾಗಿಯೇ. ಮುಂದೆ ಮಳೆಗಾಲ ಬರುವುದನ್ನು ಎದುರು ನೋಡಿ, ಆಗ ತೊಯ್ದುಹೋಗುವ ಕೊಚ್ಚಿಹೋಗುವ ಸಾಧ್ಯತೆಗಳಿರುವ ಎಲ್ಲ ಕೃಮಿಕೀಟಗಳೂ ಖಾದ್ಯಸಂಪಾದನದ ಕ್ರಿಯೆಯಲ್ಲಿ ತೊಡಗುತ್ತವೆ.

ಇರುವೆಗಳ ಅನವರತ ಚಲನವಲನಗಳು ಒಂದರ್ಥದಲ್ಲಿ ಆಶ್ಚರ್ಯವನ್ನೇ ಉಂಟುಮಾಡತಕ್ಕವು. ಸ್ವಲ್ಪವೂ ಆಲಸ್ಯಪಟ್ಟುಕೊಳ್ಳದೇ ಶ್ರಮಿಸುವ ಜೀವಿಗಳವು. ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲೇ ಆಲಸ್ಯವೆಂಬುದು ಹೆಚ್ಚು. ಕಾರ್ಯಸಾಮರ್ಥ್ಯವಿದ್ದರೂ ಉತ್ಸಾಹವಿಲ್ಲದಿರುವಿಕೆಯೇ ಆಲಸ್ಯ - ಎಂದು ಆಲಸ್ಯಲಕ್ಷಣವನ್ನು ಸುಶ್ರುತಸಂಹಿತೆಯು ಹೇಳುತ್ತದೆ.

ಆದರೆ ಬರೀ ಚಟುವಟಿಕೆಯಿಂದ ಸದಾ ಕೂಡಿರುವುದೆಂಬುದೇ ಸಾಲದು. "ಏನೂ ಕೆಲಸವಿಲ್ಲದೇ ಕುಳಿತಿರಬಾರದು" ಎಂಬುದಷ್ಟೇ ಇಲ್ಲಿಯ ಬಯಕೆಯಾಗಿರಬಾರದು. ಮಾಡಲು ಕೆಲಸವಿಲ್ಲದಿದ್ದಲ್ಲಿ ಅದಾವುದೋ 'ಭೂತ'ವು ತನ್ನ ಚೇಷ್ಟೆಯನ್ನಾರಂಭಿಸುತ್ತದೆ - ಎಂಬುದಾಗಿ ಹೇಳುವ ಇಂಗ್ಲೀಷಿನ ಗಾದೆಮಾತೊಂದಿದೆಯಲ್ಲವೆ? ಏನನ್ನೂ ಮಾಡದೆ ನಿಶ್ಚೇಷ್ಟನಾಗಿ ಸೋಮಾರಿಯಾಗಿ ಬಿದ್ದುಕೊಂಡಿರುವುದಕ್ಕಿಂತ ಅದು ವಾಸಿಯೇ ಎನ್ನುವುದಾದರೂ, ಬರೀ ಅಷ್ಟೇ ಆದರೆ ಪ್ರಯೋಜನವಿಲ್ಲ.

ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇಚ್ಛೆಯೆಂಬುದೊಂದು ಇದ್ದೇ ಇರುತ್ತದಲ್ಲವೇ? ಏನನ್ನು ಮಾಡಿದರೂ ಯಾವ ಆಸೆಗಾಗಿ ಅದನ್ನು ಮಾಡುತ್ತೇವೆಂಬುದು ಮುಖ್ಯವಾಗುತ್ತದೆ. ಒಳ್ಳೆಯ ಕೆಲಸವನ್ನೇ ಕೆಟ್ಟ ಉದ್ದೇಶಗಳಿಗಾಗಿ ಮಾಡುವವರುಂಟಲ್ಲವೇ? ಬಡಬಗ್ಗರಿಗೆ ದಾನಮಾಡುವುದು ಒಳ್ಳೆಯ ಕೆಲಸವೇ; ಅದನ್ನೇ ತೋರಿಕೆಗಷ್ಟೆ, ಮಾಧ್ಯಮಗಳಲ್ಲಿಯ ಪ್ರಚಾರಕ್ಕಾಗಿ ಮಾತ್ರ, ಕೇವಲ ಕೀರ್ತಿಗಾಗಿ ಮಾತ್ರ ಮಾಡಿ, ಅವನ್ನೂ ಮುಂದೆ ಮತ್ತಿನ್ನೇನೋ ಅನುಚಿತ ಲಾಭಕ್ಕಾಗಿ ಮಾಡುವಂತಾದಲ್ಲಿ, ಅದು ಪ್ರಶಸ್ತವಾಗುವುದೇ?

ತಪಸ್ಸು ಕೆಟ್ಟದೆಂದು ಯಾರಾದರೂ ಹೇಳಬಹುದೇ? ಆದರೂ ತಪಸ್ಸು ಮಾಡಿಯೇ ನಾನಾಫಲಗಳನ್ನು ಪಡೆದು, ಸದುಪಯೋಗ-ದುರುಪಯೋಗಗಳಿಗೆ ಅವನ್ನು ಬಳಸಿರುವವರುಂಟು. ಮೂವರೂ ತಪಸ್ಸನ್ನೇ ಮಾಡಿದರೂ, ರಾವಣ-ಕುಂಭಕರ್ಣರದೊಂದು ಲೆಕ್ಕವಾದರೆ ವಿಭೀಷಣನದು ಮತ್ತೊಂದು. ರಾವಣ-ಕುಂಭಕರ್ಣರಿಂದ ಲೋಕಕ್ಕೆ ಹಾನಿಯೇ ಆಯಿತಲ್ಲವೆ? ಇನ್ನೂ ಅನೇಕ ಅಸುರರು ಲೋಕಕಂಟಕರಾದುದು ತಪೋಲಬ್ಧವಾದ ವರಗಳಿಂದಲೇ ಅಲ್ಲವೆ?

ಹೇಗೆ ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇಚ್ಛೆಯೆಂಬುದೊಂದಿರುತ್ತದೆಯೋ, ಹಾಗೆಯೇ ಪ್ರತಿಯೊಂದು ಇಚ್ಛೆಯ ಹಿಂದೆಯೂ ಜ್ಞಾನವೆಂಬುದೊಂದಿರುತ್ತದೆ. "ನನಗಿದು ಅಪೇಕ್ಷ್ಯ; ಏಕೆಂದರೆ - " ಎಂಬ ಮಾತಿಗೆ ಪೂರಕವಾದದ್ದು ಅದು.

ವಿದ್ಯಾರಣ್ಯರು, ವೇದಾಂತದೇಶಿಕರು ಮುಂತಾದ ಮಹಾಧೀಮಂತರು ತಾವು ಖ್ಯಾತಿ-ಲಾಭ-ಪೂಜೆಗಳಿಗಾಗಿ ಗ್ರಂಥರಚನೆಯನ್ನು ಮಾಡುತ್ತಿಲ್ಲವೆಂದು ಆರಂಭದಲ್ಲೇ ಹೇಳಿಕೊಂಡಿದ್ದಾರೆ. ಖ್ಯಾತಿಯೆಂದರೆ ಕೀರ್ತಿ. ಲಾಭವೆಂದರೆ ಧನಲಾಭ. ಪೂಜೆಯೆಂದರೆ ಆದರ-ಗೌರವ. ಬಹುಮಂದಿಮಾಡುವ ಕಾರ್ಯಗಳೆಲ್ಲ ಇವುಗಳನ್ನು ಸಂಪಾದಿಸಲೆಂದೇ ಆಗಿರುತ್ತದೆಯಾದ್ದರಿಂದ ಇವಾವುವೂ ತಮ್ಮ ಉದ್ದೇಶವಲ್ಲವೆಂದು ಖಚಿತಪಡಿಸುತ್ತಾರೆ.

ಈ ಲಕ್ಷ್ಯಗಳಾವುವೂ ಕೆಟ್ಟದೆಂದಲ್ಲ. ಇವಕ್ಕಿಂತಲೂ ಭಿನ್ನವೂ ಉನ್ನತವೂ ಆದ ಗುರಿಯು ತಮ್ಮದೆಂದು ಜ್ಞಾಪಿಸಲೆಂದು ಆ ಮಾತು. ಅನ್ಯಾಯವಾದ ಮಾರ್ಗದಿಂದ ಇವನ್ನೇ ಸಂಪಾದಿಸಲು ಹೊರಡುವವರೇ ಬಹುಮಂದಿ.

ಮಾಡುವ ಕೆಲಸವನ್ನು ದಂಭದಿಂದ ಮಾಡುವವರುಂಟು. ದಂಭವೆಂದರೆ ಡಂಬಾಚಾರ: ಬೇರೆಯವರಿಗೆ ತಾನು ತುಂಬ ಸಂಪನ್ನನೆಂದೋ ಮಹಾವಿದ್ಯಾವಂತನೆಂದೋ ಅತ್ಯಂತ ಸಂಭಾವಿತನೆಂದೋ ತೋರಿಸಿಕೊಳ್ಳುವುದು. ಅರ್ಥಾತ್ ಅಡಿಗಡಿಗೂ ಉಡಿಗೆ-ತೊಡಿಗೆ-ನಡಿಗೆ-ನುಡಿಗಳಲ್ಲಿ, ಯಾವುದೋ ಭಂಗಿಗಳನ್ನು ಬಳಸಿ, ಇಲ್ಲದ್ದನ್ನು ಪ್ರದರ್ಶಿಸುವುದು. ಇದರಿಂದ ಕೊನೆಗೆ ತನಗೂ ಒಳ್ಳೆಯದಲ್ಲ, ಇತರರಿಗೂ ಅಲ್ಲ. ದಂಭ-ಮಾನ-ಮದಗಳು ಆಸುರೀ ಸಂಪತ್ತಿನ ಲಕ್ಷಣಗಳೆಂದೇ ಶ್ರೀಕೃಷ್ಣನು ಗೀತೆಯಲ್ಲಿ ಬೋಧಿಸುತ್ತಾನೆ (೧೬ನೇ ಅಧ್ಯಾಯ).

ಆದರೆ ಇವೆಲ್ಲಕ್ಕೆ ಪ್ರತಿಯಾಗಿ, ಆತ್ಮಜ್ಞಾನಸಂಪಾದನೆಗೆಂದು ಮಾಡುವ ಕರ್ಮಗಳು ಉದ್ಧಾರಕವಾಗುತ್ತವೆ. ಯೋಗಮಾರ್ಗವನ್ನು ಹಿಡಿದು ಆತ್ಮಜ್ಞಾನವನ್ನು ಸಂಪಾದಿಸುವುದು ("ಯೋಗ-ಸಂಸಿದ್ಧಃ") ಅತ್ಯಂತ ಶ್ರೇಷ್ಠವಾದ ಕಾರ್ಯ. ಆ ಜ್ಞಾನದಿಂದ ಪ್ರೇರಿತವಾದ ಇಚ್ಛೆಗಳೂ ಅವುಗಳಿಂದ ಪ್ರೇರಿತವಾದ ಕ್ರಿಯೆಗಳೂ ತಾರಕವಾಗಿರುತ್ತವೆ.

ಈ ಜನ್ಮದಲ್ಲಿಯೂ ಹಿಂದಿನ ಜನ್ಮಗಳಲ್ಲಿಯೂ ನಾವು ಸಂಚಯಮಾಡಿಕೊಂಡಿರುವ ಪಾಪಗಳು ಸಮುದ್ರದಂತೆ; ಅದನ್ನು ದಾಟಿಹೋಗಲಾಗುವುದು ಆತ್ಮಜ್ಞಾನವೆಂಬ ದೋಣಿಯಿಂದಲೇ . ನಮಗೆ ಬಂಧಕವಾದ ಕರ್ಮಗಳೆಲ್ಲ ಕಟ್ಟಿಗೆಗಳ ರಾಶಿಯಂತೆ;  ಅವನ್ನೆಲ್ಲ ಸುಟ್ಟುಹಾಕಿಬಿಡುವುದು ಜ್ಞಾನವೆಂಬ ಅಗ್ನಿಯೇ. ಸಂಶಯಗಳು ತೊಂತಿನ ಹಗ್ಗಗಳಂತೆ; ಅವನ್ನು ಕತ್ತರಿಸುವುದು ಜ್ಞಾನವೆಂಬ ಖಡ್ಗವೇ. ಜ್ಞಾನವನ್ನು ಕುರಿತು ಹೀಗೆ ಬಗೆಬಗೆಯಾಗಿ ಗೀತೆಯು ಬೋಧಿಸುತ್ತದೆ. ಮೋಚಕವಾದ ಇದಕ್ಕಿಂತಲೂ ಪವಿತ್ರವಾದದ್ದು ಇನ್ನೊಂದುಂಟೇ?

ವಾಸ್ತವವಾಗಿ, ಕರ್ಮಗಳೆಲ್ಲವೂ ಜ್ಞಾನದಲ್ಲಿಯೇ ಪರಿಸಮಾಪ್ತಿಗೊಳ್ಳುತ್ತವೆ - ಯೋಗದ ನಡೆಯೆಂಬುದಿದ್ದರೆ.

"ಜ್ಞಾನವೆಂದರೆ 'ಅರಿವು' ಎಂದಷ್ಟೇ ಅಲ್ಲ. ಜೀವನದ ಒಳಗೆ ಬೆಳಗುವ ಜ್ಯೋತೀರೂಪವಾದ ವಸ್ತುವದು" ಎಂಬ ಶ್ರೀರಂಗಮಹಾಗುರುಗಳ ವಾಣಿಯು, ಮೊದಲು ಕರ್ಮಗಳೆಲ್ಲವುಗಳ ಪರಮಲಕ್ಷ್ಯವಾಗಿದ್ದು, ಬಳಿಕ ಸರ್ವ ಸದಿಚ್ಛೆ-ಸತ್ಕರ್ಮಗಳ ಪ್ರೇರಕವೂ ಆಗುವ, ನಿಜವಾದ ಜ್ಞಾನದ ಸ್ವರೂಪವನ್ನೇ ಅರುಹುತ್ತದೆ.

ಅಂತಹ ಜ್ಞಾನಕ್ಕೆ ಸಾಟಿಯುಂಟೇ?


ಸೂಚನೆ: 20/3/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಶ್ರೀ ರಾಮನ ಗುಣಗಳು - 48 ಋಷಿಜನ-ಪ್ರೀತ - ಶ್ರೀರಾಮ (Sriramana Gunagalu - 48 Rushijana - Prita)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಋಷಿಗಳಿಗೆ ಜ್ಞಾನಿಗಳಿಗೆ ಪರಮಪ್ರಿಯನಾದವನು ಶ್ರೀರಾಮನು. ಈ ಹಿಂದೆ ಹೇಳಿದ ಎಲ್ಲಾ ಗುಣಗಳಿಗಿಂತಲೂ ಶ್ರೇಷ್ಠತಮವಾದುದು ಈ ಗುಣ.  ಅಂದರೆ ಉಳಿದವುಗಳು ಶ್ರೇಷ್ಠ, ಇದು ಶ್ರೇಷ್ಠತಮ ಎಂದರ್ಥ. ಋಷಿಗಳು - ಜ್ಞಾನಿಗಳು. ಅವರ ದೃಷ್ಟಿಯು ವಿಶಾಲ ಮತ್ತು ಆಳವಾದುದು. ಯಾವ ವಸ್ತುವನ್ನು ಹೇಗೆ ನೋಡಬಹುದು? ಎಂಬುದರ ಮೇಲೆ ಅವರ ದೃಷ್ಟಿಯನ್ನು ನೋಡಬಹುದು. ಹೇಗೆಂದರೆ ಪ್ರತಿಯೊಂದು ವಸ್ತುವು ಮೂರು ಪದರಗಳಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಲು ಸ್ಥೂಲ, ಸೂಕ್ಷ್ಮ, ಪರಾ ಎಂಬ ಮೂರೂ ಬಗೆಯ  ದೃಷ್ಟಿಯು ಬೇಕು.  ಆದರೆ ಆ ಎಲ್ಲಾ ಪದರಗಳನ್ನು ಸಾಮಾನ್ಯನು ನೋಡಲು  ಸಾಧ್ಯವಿಲ್ಲ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಆ ವಿಷಯ ಗೋಚರವಾಗುತ್ತದೆ. ಸಾಮಾನ್ಯ ಮನುಷ್ಯರು ಸ್ಥೂಲವಾದ ವಿಷಯವನ್ನು ಮಾತ್ರ ಪರಿಗ್ರಹಿಸುತ್ತಾರೆ. ಇನ್ನು ಒಳಗಿನ ಸೂಕ್ಷ್ಮರೂಪವನ್ನು ಸೂಕ್ಷ್ಮದೃಷ್ಟಿಯುಳ್ಳವರು ಮಾತ್ರ ನೋಡಬಲ್ಲರು. ಇನ್ನೂ ಒಳಗಿನ  ಪದರವಾದ ಪರಾರೂಪವನ್ನು ಋಷಿಜನರು ಮಾತ್ರವೇ ಅರಿಯಬಲ್ಲರು. ಇವರು ಮೂರೂ ಪದರಗಳನ್ನು ನೋಡುವ ಸಾಮರ್ಥ್ಯವುಳ್ಳವರು. ಇದನ್ನೇ ಪುಷ್ಟಿಕರಿಸುವಂತಹ ಶ್ರೀರಂಗಮಹಾಗುರುಗಳ ಮಾತನ್ನು ಮನನ ಮಾಡಬಹುದು- "'ರಾಮ' ಎಂಬ ಶಬ್ದವೇ ಯೋಗೀಹೃದಯದಲ್ಲಿ, ಜ್ಞಾನಿಗಳ ಹೃದಯದಲ್ಲಿ ರಮಿಸಲು ಯೋಗ್ಯನಾದವನು ಎಂಬ ಅರ್ಥವನ್ನು ಕೊಡುತ್ತದೆ. 'ರಾಮಾ' ಎಂಬ ಹೆಸರನ್ನು ಪಡೆದ ಸ್ತ್ರೀಯು ಪತಿಯೊಡನೆ ಕ್ರೀಡಿಸುವಂತೆ, ಜೀವವು ತನ್ನ ದೇವನೊಡನೆ ಒಂದಾಗಿ ಸೇರಿ, ಪರಮಾತ್ಮನಲ್ಲಿ-ಪರಮಪುರುಷನಲ್ಲಿ ರಮಿಸುವುದಾದರೆ, ಹಾಗೆ ರಮಿಸಲು ಯೋಗ್ಯನಾದ ದೇವನೇ ರಾಮ. ಪರಮಪುರುಷನೇ 'ರಾಮ'ನಪ್ಪಾ" ಎಂದು. ಋಷಿಗಳ ಹೃದಯದಲ್ಲಿ ಆತ್ಮಾರಾಮನಾಗಿ ಸದಾ ವಿರಾಜಿಸಬಲ್ಲ ಪರಂಜ್ಯೋತೀರೂಪನವನು.  ಹಾಗಾಗಿ ರಾಮ ಋಷಿಜನಪ್ರೀತ.   


ಶ್ರೀರಾಮನು ವನವಾಸಕ್ಕೆಂದು  ಹೊರಡಲು ಸಿದ್ಧನಾಗುತ್ತಾನೆ. ಆಗ ಅಯೋಧ್ಯಾವಾಸಿಗಳು ಆತನನ್ನು ಬಿಟ್ಟಿರಲು ಒಪ್ಪಲಾರರು. ರಾಮನಿಲ್ಲದೆ ಅದು ಅಯೋಧ್ಯೆ ಆಗಲಾರದು. ಮತ್ತು ಎಲ್ಲಿ ರಾಮನಿರುವನೋ ಅದುವೇ ಅಯೋಧ್ಯೆ. ಆಗ ಅವರು ಹೇಳುವ ಮಾತು ಹೀಗಿತ್ತು - " ಎಲೈ! ಸತ್ಯಪರಾಕ್ರಮ! ಮಹಾತ್ಮಾ! ರಾಮಾ ! ಈ ಋಷಿಸಮೂಹವು ನಿನ್ನನ್ನೇ ಅನುಸರಿಸಿಕೊಂಡು ಬರುತ್ತಿದೆ. ಹಾಗಾಗಿ ನಾವು ಆಚರಿಸುವಂತಹ ನಿತ್ಯಾನುಷ್ಠಾನಗಳು ನಿತ್ಯಾಗ್ನಿಹೋತ್ರಗಳು ನಿನ್ನನ್ನು  ಅನುಸರಿಸುತ್ತವೆ. ವೇದಗಳೆಲ್ಲವೂ ನಮ್ಮ ಹೃದಯವನ್ನು ಅಲಂಕರಿಸಿವೆ. ಆದರೆ ಅವು ಇಂದು ನಿನ್ನ ವನವಾಸವನ್ನೇ ಅನುಸರಿಸುತ್ತಿವೆ. ನಮ್ಮ ಪತ್ನಿಯರಾದರೋ ಪತಿವ್ರತೆಯರು. ಅವರು ತಮ್ಮ ಚಾರಿತ್ಯ್ರದಿಂದ ತಮ್ಮನ್ನು ರಕ್ಷಿಸಿಕೊಳ್ಳಬಲ್ಲವರು. ಆದರೆ ಅವರು ಇಂದು ಪತಿವಿಯೋಗವನ್ನು ಪಡುವಂತಾಗುತ್ತದೆಯಲ್ಲವೇ? ನಾವಂತೂ ನಿನ್ನನ್ನೇ ಅನುಸರಿಸುವ ಮನಸ್ಸುಳ್ಳವರಾಗಿದ್ದೇವೆ. ನೀನು ಧರ್ಮಮೂರ್ತಿ. ನೀನು ಧರ್ಮವನ್ನು ಉಪೇಕ್ಷೆ ಮಾಡಿದಲ್ಲಿ ಬೇರೆ ಯಾವ ಪ್ರಾಣಿ ತಾನೇ ಧರ್ಮಾಚರಣೆಯಲ್ಲಿ ನಿಷ್ಠೆ ತೋರಿಸೀತು ಹೇಳು. ಹಂಸಪಕ್ಷಿಯಂತೆ ಬಿಳಿಯ ಕೂದಲಿನಿಂದ ಕೂಡಿದ, ವಯಸ್ಸಾದ ನಾವೆಲ್ಲರೂ ಧೂಳಿನಿಂದ ಧೂಸರಸಿರಿತವಾದ ಈ ಭೂಮಿಯನ್ನು ಆಣೆ  ಮಾಡಿ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ "ಯಾಚಿತೋ ನೋ ನಿವರ್ತಸ್ವ- ಹಿಂದಿರುಗು ಅಯೋಧ್ಯೆಗೆ. ಅರಣ್ಯಕ್ಕೆ ನಿನ್ನ ಗಮನ ಸಲ್ಲದು" ಎಂಬುದಾಗಿ ಬಹಳ ಆರ್ದ್ರ ಹೃದಯರಾಗಿ ಶ್ರೀರಾಮನಲ್ಲಿ ಬೇಡಿಕೊಳ್ಳುತ್ತಾರೆ. ಇದನ್ನು ನೋಡಿದರೆ ನಮಗೆ ತಿಳಿಯುತ್ತದೇ ಶ್ರೀರಾಮನು ಎಷ್ಟರ ಮಟ್ಟಿಗೆ ಋಷಿಜನಮಾನಸ- ಋಷಿಜನಪ್ರೀತನಾಗಿದ್ದ ಎಂದು. 


ಸೂಚನೆ :20/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Saturday, March 19, 2022

ವಸ್ತ್ರಾಭರಣ - 14 ಮಾಂಗಲ್ಯ-ತಾಳೀ (Vastra Bharana - 14 Mangalya-Tali)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)




ಇದರ ಬಗ್ಗೆ ಅನೇಕ ಟೀಕಾಟೊಕೆಗಳುಂಟು. ಸ್ತ್ರೀಯರನ್ನು ಕಟ್ಟಿಹಾಕುವ ಮೂಗುದಾರದಂತೆ, ಸ್ತ್ರೀ-ಶೋಷಣೆಯ ಪ್ರತೀಕವೆಂದೆಲ್ಲಾ ಹೇಳುವುದುಂಟು. ಆದರೆ ಋಷಿಗಳ ದೃಷ್ಟಿಯಲ್ಲಿ ನಿಸರ್ಗ ಸಹಜವಾದ, ಸ್ತ್ರೀಧರ್ಮದ ಸಹಜಾಭಿವ್ಯಕ್ತಿಯಾಗಿರುವ ಆಭರಣವಿದು. ಹಿಂದೆಯೇ ಹೇಳಿದ ಹಾಗೆ, ಪ್ರಕೃತಿಮಾತೆಯ ಪಾತ್ರವನ್ನು ವಹಿಸುವ ಸ್ತ್ರೀ, ಪರಮಪುರುಷನ ಪಾತ್ರವನ್ನು ವಹಿಸುವ ಪುರುಷನೊಡನೆ ಸೇರಿ, ಲಕ್ಷ್ಮೀ-ನಾರಾಯಣರಂತೆ, ಪಾರ್ವತೀ-ಪರಮೇಶ್ವರಂತೆ  ಭಗವತ್ಸಂಕಲ್ಪವನ್ನು ಈಡೇರಿಸಲು ಹೆಜ್ಜೆ ಹಾಕುವ ಮಧುರ ರಸನಿಮಿಷವೇ ವಿವಾಹ. ಏನು ಆ ಭಗವತ್ಸಂಕಲ್ಪ ? 


ನೆಮ್ಮದಿ, ಸಂತೋಷ ಆನಂದದಗಳನ್ನು ಲೋಕದಲ್ಲಿ ಎಲ್ಲ ಜೀವಿಗಳಿಗೆ ಹಂಚುವುದೇ ಅವರ ಸಂಕಲ್ಪ. ಆನಂದವೇ ಆ ಪರಮಪುರುಷನ ಸ್ವರೂಪ. ಯೋಗಿಯು ಸಮಾಧಿಯಲ್ಲಿ ಅನುಭವಿಸುವ ಆನಂದ ಆ ಬ್ರಹ್ಮಸ್ವರೂಪದ ನೈಜ ಪೂರ್ಣರೂಪ. ಲೋಕದಲ್ಲಿ, ಉಂಡು-ಕೊಂಡು, ಆಡಿ-ಓಡಿ ಅನುಭವಿಸುವ ಆನಂದಗಳೆಲ್ಲಾ ಆ ಪರಮಾನಂದದ ತುಣುಕುಗಳು. ಪರಮಪುರುಷನ  ಆನಂದದ ರಸವನ್ನು ಲೋಕದಲ್ಲಿ ಹರಿಸಿ, ಬೆಳೆಸುವಳು ಪ್ರಕೃತಿಮಾತೆ - ಲಕ್ಷ್ಮೀ, ಗೌರೀ. ಅವಳು ಆನಂದವನ್ನು ನಾನಾ ರೂಪದಲ್ಲಿ ಹಂಚುತ್ತಾಳೆ - ಧನ-ಧಾನ್ಯ, ಹಸು-ಕರು, ಮನೆ-ಮಕ್ಕಳು ಇತ್ಯಾದಿ. ಕೇವಲ ಆತ್ಮಸುಖವನ್ನೇ ಬಯಸುವ ವಿರಕ್ತನಿಗೆ ಆತ್ಮಶ್ರೀಯಾಗಿ ಒಲಿದು ಪರಮಾನಂದದ ತೆಕ್ಕೆಯಲ್ಲಿ ಸೇರಿಸುವಳೂ ಇವಳೇ. 


 ಈ ತತ್ತ್ವಸ್ಮರಣೆಯಲ್ಲೇ ವಿವಾಹಪದ್ಧತಿಯನ್ನು ಋಷಿಗಳು ರೂಪಿಸಿದ್ದಾರೆ. ಪರಮಾನಂದರೂಪಿಯಾದ ಪುರುಷನು, ವಿಸ್ತಾರಕ್ಕೆ ಅಣಿಮಾಡಿಸುತ್ತಾ, ತನ್ನ ಮಡದಿಯ ಕೊರಳಿಗೆ ಮಾಂಗಲ್ಯವನ್ನು ಕಟ್ಟುತ್ತ್ತಾನೆ. ಏಕೆ ? "ಮಮ ಜೀವನ ಹೇತುನಾ" ನನ್ನ ಜೀವನದ ಧ್ಯೇಯಸಾಧನೆಗಾಗಿ. ಆನಂದವನ್ನು ವಿತರಿಸುವ ಕೆಲಸವನ್ನು ನಿನಗೆ ವಹಿಸಿದ್ದೇನೆ ಎಂಬುದು ಭಾವ. ಕಂಠದಿಂದ ಕೆಳಗೆ ಹರಿದುಬರುವ ಮಾಂಗಲ್ಯವು ಧ್ಯೇಯದ ನೇರ ಪ್ರತೀಕ. "ರಿಲೇ ರೇಸ್" ನಲ್ಲಿ ತಮ್ಮದೇ ತಂಡದ ಮತ್ತೊಬ್ಬರಿಗೆ 'ಬ್ಯಾಟನ್' ವಹಿಸಿಕೊಟ್ಟ ಹಾಗೆ. 'ಬ್ಯಾಟನ್' ರೂಪದಲ್ಲಿ ಕಟ್ಟಿರುವ ತಾಲಿಯಲ್ಲಿ ಧ್ಯೇಯದ ಗುರುತುಗಳು ಅಡಗಿದೆ. ಹೇಗೆ ? ಅದು ಸುವರ್ಣಮಯವಾಗಿದೆ. ಸೌಖ್ಯ, ಮಾಂಗಲ್ಯ, ಸಮೃದ್ಧಿಯ ಜೊತೆಯಲ್ಲಿ ಸುವರ್ಣಮಯವಾದ ಹಿರಣ್ಯಗರ್ಭನನ್ನು ನೆನಪಿಸುತ್ತದೆ. ಯೋಗಿಯ ಒಳ ಅನುಭವದಲ್ಲಿ ಪುರುಷ ಸ್ಥಾನದಿಂದ ಪ್ರಕೃತಿಯ ಸ್ಥಾನಕ್ಕೆ ಇಳಿದು ಬರುವಾಗ ಆಗುವ  ಒಳ ದರ್ಶನಗಳನ್ನು ತಂತ್ರಶಾಸ್ತ್ರಗಳು ವಿವರಿಸುತ್ತವೆ. ಬಿಂದು-ನಾದವಾಗಿ ಬೆಳೆದು ಒಂದು  ಮಹಾಬಿಂದುವಾಗಿ ಪರಿಣಮಿಸುತ್ತದೆ. ಮಹಾಬಿಂದು ಪ್ರಣವ ನಾದವನ್ನು ಮಾಡುತ್ತಾ, ಸ್ಫೋಟವಾಗಿ ಮೂರಾಗಿ ( ಬಿಂದು + ವಿಸರ್ಗವಾಗಿ) ವಿಭಜಿಸಿ ಈ ಸೃಷ್ಟಿಯನ್ನು ಮುಂದುವರಿಸಿತು. ಈ ಮೂರು ತ್ರಿಗುಣಗಳೆಂದೂ, ತ್ರಿಮೂರ್ತಿಯರೆಂದೂ ಹೇಳಬಹುದು. ಆ ಒಳ ಅನುಭವವೇ ತಾಳಿಯ ರಚನೆಗೆ ಆಧಾರ. ತಾಳಿಯಲ್ಲಿ ಇರುವ ಸಾಮಾನ್ಯ ಲಾಂಚನವೆಂದರೆ ಬೊಟ್ಟು, ಇದು ಬಿಂದುವಿನ ಪ್ರತಿರೂಪ. ಇದರ ನಾನಾ ಪ್ರಕಾರಗಳುಂಟು - ಮಹಾಬಿಂದುವನ್ನು ಸೂಚಿಸುವ ಒಂದು ಬೊಟ್ಟು, ಆಗ ತಾನೇ ಸೃಷ್ಟವಾದ ಸ್ಥಿತಿಯಲ್ಲಿ ಮೂರು ಬೊಟ್ಟುಗಳು, ಒಂದು ಬೊಟ್ಟು ಮತ್ತು ಎರಡು ಕರೀಮಣಿಗಳು, ವಿಸರ್ಗಾತ್ಮಕವಾಗಿ ಎರಡು ಬೊಟ್ಟುಗಳು ಇತ್ಯಾದಿ. ತಾಳಿಯನ್ನು ಕಟ್ಟುವ ಸಮಯದಲ್ಲಿ, ಪುರೋಹಿತರು 'ಸುಲಗ್ನಾ: ಸಾವಧಾನಾ:' ಎಂದು ಎಚ್ಚರಿಸುತ್ತಾರೆ. ಘಟ್ಟಿಮೇಳ, ಘಂಟಾನಾದ, ನಾದಸ್ವರಗಳ  ಒಂದು ರವ ಕೂಡಿರುತ್ತದೆ. ಇಂತಹ ಸನ್ನಿವೇಶದಲ್ಲಿ ನಡೆಯುವ ಮಾಂಗಲ್ಯ ಧಾರಣ. ಮಾಂಗಲ್ಯದ ಮತ್ತೊಂದು ರೂಪದವೆಂದರೆ ಆಂಗ್ಲ ಭಾಷೆಯ "M"ನ ಆಕಾರ. ಇದು ಹೇಗೆ ಸಮಂಜಸ ಎಂಬ ಪ್ರಶ್ನೆಗೆ, ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದರ ಮೂಲ ತತ್ತ್ವವನ್ನು ಗುರುತಿಸಿ, ಇದು ಸೃಷ್ಟಿಗೆ ಸಹಕಾರಿಯಾದ ಪ್ರಾಣಸ್ವರೂಪ-ಗರುಡನ ರೂಪವೆಂದು ನುಡಿದಿದ್ದಾರೆ. ಅದರಂತೆ ಕಿಂಚಿತ್ ಮಾರ್ಪಾಡು ಮಾಡಿ ಗರುಡನ ಆಕಾರವು ಸ್ಪಷ್ಟವಾಗಿ ಕಾಣಿಸುವಂತೆ ಸಂಯೋಜಿಸಿದ್ದರು. ಅವರ ಡಿಸೈನ್ ಇಂದು  ಬೆಂಗಳೂರು ನಗರದ ಅನೇಕ ಜ್ಯುವೆಲ್ಲರಿ ಅಂಗಡಿಗಳಲ್ಲಿ 'ದೇಶಿಕಾಚಾರ್' ಮಾಂಗಲ್ಯ  ಎಂಬ ಹೆಸರಿನಿಂದ ಪ್ರಚಲಿತವಾಗಿದೆ.


ಸೂಚನೆ : 19/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Thursday, March 17, 2022

ಧರ್ಮ - ಭಾರತೀಯ ಮಹರ್ಷಿಗಳ ದೃಷ್ಟಿಯಲ್ಲಿ (Dharma - Bharatiya Maharsigala drustiyalli)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಇಂದಿನ ಚಿಂತನೆ

ಧರ್ಮ-ಈ ಪದದಷ್ಟು ನಮ್ಮ ದೇಶದಲ್ಲಿ, ಇತ್ತೀಚಿಗೆ ವಿದೇಶಗಳಲ್ಲೂ ಚರ್ಚೆ ಆದಷ್ಟು ಪ್ರಾಯಃ ಇನ್ನು ಯಾವ ಪದವೂ ಇಲ್ಲವೇನೋ. ಮತ ಪ್ರಚಾರಕರು,ಸಮಾಜ ಸುಧಾರಕರು,ಪತ್ರಕರ್ತರು, ದೂರದರ್ಶನದ ವಕ್ತಾರರು, ಆಯಾ ಕೋಮಿನ ಪ್ರಮುಖರು, ತಥಾಕಥಿತ ಬುದ್ಧಿಜೀವಿಗಳು, ರಾಜಕೀಯ ಧುರೀಣರು ಇತ್ಯಾದಿಯಾಗಿ  ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರೂ ಧರ್ಮದ ಬಗೆಗೆ ಮಾತನಾಡುವವರೇ. ಜಗತ್ತಿನ ಮತಗಳನ್ನೆಲ್ಲಾ 'ಧರ್ಮ' ಎಂಬ ಪದದಿಂದಲೇ ವ್ಯವಹರಿಸುವುದೂ ರೂಡಿಯಾಗಿಬಿಟ್ಟಿದೆ. ಈ ಮಧ್ಯೆ ಧರ್ಮನಿರಪೇಕ್ಷತೆ ಎಂಬ ಕೂಗು ಬೇರೆ.  ಧರ್ಮ ಎಂಬ ಒಂದು ವಿಷಯ ಇರುವುದರಿಂದಲೇ ಜಗತ್ತಿನಲ್ಲಿ ಇಷ್ಟೆಲ್ಲಾ ಯುದ್ಧ,ಹೋರಾಟಗಳು ನಡೆಯುತ್ತಿವೆ. ಆದ್ದರಿಂದ ಧರ್ಮ ಎಂಬುದೇ ಇರಬಾರದು ಎಂದು ತಮ್ಮ ವಿದ್ವತ್ತನ್ನು ಮೆರೆಯುವವರೂ ಹಲವರು.

ಇದಲ್ಲದೇ ಭಿಕ್ಷೆ ಬೇಡುವವರು "ಧರ್ಮ ಮಾಡಿ" ಎನ್ನುತ್ತಾರೆ. ಏನಾದರೂ ಹಣವಿಲ್ಲದೇ ಮಾಡುವ ಸೇವೆಗೂ "ಧರ್ಮಕ್ಕೆ ಮಾಡಿದುದು" ಎನ್ನುವುದುಂಟು. ಅವರವರು ಮಾಡುವ ತಮ್ಮ ತಮ್ಮ ಮತಗಳ ರೀತಿ,ರಿವಾಜು, ಆಚರಣೆಗಳನ್ನೆಲ್ಲ ಧರ್ಮಕಾರ್ಯ ಎನ್ನುತ್ತಾರೆ. ಹೀಗೆ ಧರ್ಮ ಎನ್ನುವ ಪದ ಅವ್ಯಾಹತವಾಗಿ, ಸೀಮಾತೀತವಾಗಿ ಓಡಾಡುತ್ತಿದೆ. 

ಧರ್ಮದ ನಿಜವಾದ ದೃಷ್ಟಿ

ಈ ಪದವನ್ನು ತಂದವರು ಸನಾತನ ಆರ್ಯ ಮಹರ್ಷಿಗಳು. ಈ ಪದವನ್ನು ಅವರ ದೃಷ್ಟಿಯಲ್ಲೇ ಅರ್ಥಮಾಡಿಕೊಳ್ಳಬೇಕು.  ನಾವು ಇಲ್ಲಿ ಮಾಡುವ ಸಕ್ಕರೆ ಪೊಂಗಲ್ ಹೆಸರು, ಅರ್ಥಗಳು  ಪರಕೀಯರಿಗೆ ಗೊತ್ತಿರಬೇಕು ಎಂದೇನೂ ಇಲ್ಲ. ಅಲ್ಲಿ ಅದರ ತಯಾರಿಕೆ ಬೆಳೆದುಬಂದಿಲ್ಲ. ಅವರಿಗೆ ಗೊತ್ತಿಲ್ಲ ಎಂದ ಮಾತ್ರಕ್ಕೆ ಹಾಗೊಂದು ತಿಂಡಿಯನ್ನೇ ಅಲ್ಲಗಳೆಯಬೇಕಾಗಿಲ್ಲ; ಅಥವಾ ಅದು ಅವರ ಬ್ರೆಡ್ಡಿನಂತೆ, ಬರ್ಗರ್ನಂತೆ ಎಂದು ಏನೇನೋ ಅಂದುಕೊಳ್ಳಬೇಕಾಗಿಲ್ಲ. ನೈಜವಾಗಿ ಪದವು ಯಾವ ಪದಾರ್ಥವನ್ನು ಹೇಳುತ್ತಿದೆ ಎಂಬ ಅರಿವಿನಿಂದಲೇ ವ್ಯವಹರಿಸುವುದು ವಿವೇಕಿಗಳ ಲಕ್ಷಣ. 

ಧರ್ಮವೆಂದರೆ ಎಲ್ಲದರ ಸ್ಥಿತಿ ವಿಶೇಷ:

ಧರ್ಮ-ಅರ್ಥ-ಕಾಮ-ಮೋಕ್ಷ  ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮಕ್ಕೇ ಅಗ್ರಸ್ಥಾನ. "ಧರ್ಮ ಒಂದಿದ್ದರೆ ಮುಂದಿನ ಎಲ್ಲಾ ವ್ಯವಹಾರ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಸೃಷ್ಟವಾದದ್ದೆಲ್ಲದರ condition- ಸ್ಥಿತಿ ವಿಶೇಷವೇ ಧರ್ಮ" ಎಂದು ಅವರು ಹೇಳುತ್ತಿದ್ದರು. ಬಾಳೇ ಹಣ್ಣು ಎಂದು ಅದನ್ನು ಕರೆಯಬೇಕಾದರೆ ಅದರಲ್ಲೊಂದು ನಿಶ್ಚಿತವಾದ ಸ್ಥಿತಿ ಇರಬೇಕಾಗುತ್ತದೆ. ಅದರ ರೂಪ,ಗುಣ,ರುಚಿ,ಪರಿಣಾಮ ಇವೆಲ್ಲವೂ ಎಂದೆಂದಿಗೂ ಹಾಗೇ ಇದ್ದರೆ ಮಾತ್ರ ಅದನ್ನು ಬಾಳೇ ಹಣ್ಣು ಎನ್ನಬಹುದು. ಇಲ್ಲವೇ ಇವತ್ತು ಬಾಳೇಹಣ್ಣಾಗಿದ್ದು ನಾಳೆ ತಿಂದರೆ ಅಡಿಕೆಯಂತೆಯೋ,ಹಲಸಿನ ಹಣ್ಣಿನಂತೆಯೋ ಆಗಿಬಿಟ್ಟರೆ ಅಸಹಜ. ಒಂದು ಪದಾರ್ಥದ ಅದರದೇ ಆದ ಸ್ಥಿತಿ ವಿಶೇಷವನ್ನೇ ಆ ಪದಾರ್ಥದ ಧರ್ಮ ಎನ್ನುವುದು. ಹಾಗಾದರೆ ಧರ್ಮ ನಿರಪೇಕ್ಷತೆಯ ಮಾತನಾಡುವವರು ಬಾಳೇ ಹಣ್ಣಿನಲ್ಲಿ ಅದರ ತನ-ಧರ್ಮ ಇರಬಾರದು ಎನ್ನುವರೇ?  ಧರ್ಮವೆನ್ನುವುದು ವಸ್ತು,ವ್ಯಕ್ತಿ,ಇಂದ್ರಿಯಗಳು,ಇತ್ಯಾದಿ ಎಲ್ಲದಕ್ಕೂ ಅನ್ವಯಿಸುವ ವಿಷಯ. ಕಣ್ಣಿನ ಧರ್ಮ ನೋಡುವಿಕೆ. ಕಣ್ಣು ರೂಪವನ್ನು ಗ್ರಹಿಸುವಂತಿದ್ದರೆ,  ಕಣ್ಣು ಅದರ ಧರ್ಮದಲ್ಲಿದೆ ಎನ್ನಬಹುದು. ಕಣ್ಣಿಗೆ ಧೂಳು ಬಿದ್ದಾಗ ತಾತ್ಕಾಲಿಕವಾಗಿ ಅದರ ಧರ್ಮ ಕೆಡುತ್ತದೆ. ಅದು ನೋಡಲಾಗದು. ಆ ಸ್ಥಿತಿಯು  ಅಧರ್ಮ. ಯಾವುದರ ಸಹಜಸ್ಥಿತಿಯು ಕೆಡುವಂತಾಗುತ್ತದೆಯೋ ಅಂತಹ ಕ್ರಿಯೆ,ನಡೆ ಎಲ್ಲವೂ ಅಧರ್ಮವೇ ಆಗುತ್ತದೆ. ಸಹಜಸ್ಥಿತಿಯನ್ನು ಉಳಿಸಲು ಮಾಡುವ ಕೆಲಸವೆಲ್ಲವನ್ನೂ ಧರ್ಮ ಎಂದೇ ಋಷಿಗಳು ಕರೆದರು.

'ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ' –ಧರ್ಮವು ಜಗತ್ತನ್ನು ಧರಿಸಿದೆ ಎಂದು ಶ್ರುತಿಯು ಹೇಳುತ್ತಿದೆ. ಹಾಗೆಂದರೇನು? ಯಾವುದು ತನ್ನತನದಿಂದ ಜಗತ್ತನ್ನು ಉಳಿಸಿದೆಯೋ ಅದೇ ಧರ್ಮ. ವಿಶ್ವ ಚೈತನ್ಯಶಕ್ತಿಯಾದ ಭಗವಂತನೇ ತನ್ನ ಸೃಷ್ಟಿ-ಸ್ಥಿತಿ-ಲಯಗಳಿಂದ ಜಗತ್ತನ್ನು ಧರಿಸಿದ್ದಾನೆ. ಭಗವಂತನೇ ಮೊದಲ ಧರ್ಮ. ಅವನು ತಾನು ಸೃಷ್ಟಿಸಿದ ಎಲ್ಲದರಲ್ಲೂ ಅದರದರ ಧರ್ಮವನ್ನಿಟ್ಟೇ  ಸೃಷ್ಟಿಸಿದ್ದಾನೆ. ಶಬ್ದಗ್ರಹಣ ಕಿವಿಯ ಧರ್ಮ. ಅದು ಚೆನ್ನಾಗಿದ್ದರೆ ಕಿವಿ ಎಂಬ ಇಂದ್ರಿಯ ತನ್ನ ಧರ್ಮದಲ್ಲಿದೆ ಎನ್ನಬಹುದು. ಅದನ್ನು ರಕ್ಷಣೆ ಮಾಡಿಕೊಳ್ಳುವ ಕ್ರಿಯೆಗಳೆಲ್ಲವೂ ಕಿವಿಯ ಧರ್ಮಕ್ಕೇ ಸೇರುತ್ತವೆ. ನಮ್ಮ ಇಂದ್ರಿಯಗಳನ್ನು ಚೆನ್ನಾಗಿ ಇಟ್ಟುಕೊಂಡರೆ ಅವು ನಮ್ಮ ಜೀವನವನ್ನು ಚೆನ್ನಾಗಿಡುತ್ತವೆ. ರೂಪಗ್ರಹಣ ಚೆನ್ನಾಗಿರುವಂತೆ ಕಣ್ಣನ್ನು ರಕ್ಷಣೆ ಮಾಡಿಕೊಂಡರೆ ಕಣ್ಣು ನಾವು ಬೀಳದಂತೆ ನಮ್ಮನ್ನು ರಕ್ಷಿಸುತ್ತದೆ. ಇದನ್ನೇ ಧರ್ಮೋ ರಕ್ಷತಿ ರಕ್ಷಿತಃ ಎಂದಿರುವುದು. 

ಹೀಗೆ ನಮ್ಮ ಜೀವನವೆಲ್ಲವೂ ಧರ್ಮಮಯ. ಧರ್ಮವನ್ನು ಬಿಟ್ಟು ಲೋಕವು ಒಂದು ಕ್ಷಣವೂ ಅಸ್ತಿತ್ವದಲ್ಲಿರಲಾರದು. ಧರ್ಮಕ್ಕೆ ಹಿಂದೆ ವಿಶೇಷಣಗಳು ಸೇರಿದಂತೆಲ್ಲಾ ವಿಸ್ತಾರವಾಗುತ್ತದೆ. ಹಿಂದೆ ತಿಳಿಸಿದಂತೆ ಇಂದ್ರಿಯಧರ್ಮ,ಮನೋ ಧರ್ಮ,ಪದಾರ್ಥ ಧರ್ಮ, ವ್ಯಕ್ತಿಧರ್ಮ, ವರ್ಣಧರ್ಮ, ಆಶ್ರಮ ಧರ್ಮ ಹೀಗೆ ಧರ್ಮದ ವ್ಯಾಪ್ತಿ ಅಸಂಖ್ಯವಾಗಿ ಬೆಳೆಯುತ್ತದೆ.

ಈವರೆಗೆ  ಧರ್ಮದ ಬಗ್ಗೆ ಭೌತಿಕವಾದ ಉದಾಹರಣೆಗಳ ದ್ವಾರಾ ಪರಿಚಯ ಮಾಡಿಕೊಂಡದ್ದಾಯಿತು. ಆದರೆ ಭಾರತೀಯ ಮಹರ್ಷಿಗಳ ಧರ್ಮದ ನೋಟ ಸ್ಥೂಲ-ಸೂಕ್ಷ್ಮ-ಪರಾ ಎಂಬ  ಜೀವನದ ಮೂರು ಕ್ಷೇತ್ರಗಳನ್ನು ವ್ಯಾಪಿಸಿದೆ. ಉದಾಹರಣೆಗೆ ಕಣ್ಣು ಕೇವಲ ಹೊರ ರೂಪವನ್ನಷ್ಟೇ ಅಲ್ಲದೇ ಒಳ ಬೆಳಗುವ ದೇವತಾ ಶಕ್ತಿಗಳನ್ನೂ ಅದಕ್ಕೂ ಹಿಂದೆ ಪ್ರೇರಕ ಶಕ್ತಿಯಾಗಿ ಬೆಳಗುವ  ಪರಮಾತ್ಮನನ್ನೂ ನೋಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಭಾರತೀಯ ಮಹರ್ಷಿಗಳ ಅನುಭವವೇದ್ಯವಾದ ಸತ್ಯ. ನಾವು  ಮೂರೂ ಕ್ಷೇತ್ರದ ದರ್ಶನ ಮಾಡುವಂತಿದ್ದರೆ ಆಗ ಕಣ್ಣು ಅದರ ಸಹಜವಾದ ಧರ್ಮದಲ್ಲಿದೆ ಎಂಬ ನಿಶ್ಚಯಕ್ಕೆ ಅವರು ಬಂದರು. ಅಂದರೆ- ಹೊರ ನೋಟ-ಸ್ಥೂಲ- ಇದನ್ನು ನೋಡಲು ನಮ್ಮ ಹೊರಗಣ್ಣು ಸಮರ್ಥವಾದರೆ, ಈ ಹೊರನೋಟಕ್ಕೂ ಶಕ್ತಿಯನ್ನು ಒದಗಿಸುತ್ತಿರುವ ದೇವತಾ ರೂಪ-ಸೂಕ್ಷ್ಮ; ಮತ್ತು ಇವೆಲ್ಲದರ  ಮೂಲ ಚೈತನ್ಯನಾದ ಪರಂಜ್ಯೋತಿ-ಪರಾ ಇವಿಷ್ಟೂ ಅನುಭವಗಳನ್ನು ಗ್ರಹಿಸುವ ಶಕ್ತಿ ಒಳಗಣ್ಣಿಗಿದೆ. ದೇವಕಿಯು ಕೃಷ್ಣನ ಜನನಕ್ಕೆ ಮೊದಲು ಅವನ ನಾರಾಯಣ ಸ್ವರೂಪದ, ಜ್ಯೋತೀ ರೂಪದ ದರ್ಶನವನ್ನೇ ಮಾಡುತ್ತಾಳೆ. ಅದನ್ನು ಅತ್ಯಾನಂದದಿಂದ ಅವಳು ವರ್ಣಿಸುವುದನ್ನು ಶ್ರೀಮದ್ಭಾಗವತವು ಕೊಂಡಾಡುತ್ತದೆ. ಹೊರಕಿವಿಯು ಹೊರಶಬ್ದವನ್ನು ಕೇಳುವಂತೆ ಒಳ ನಾದವನ್ನೂ ಕೇಳುವ ಯೋಗ್ಯತೆ ಒಳಗಿವಿಗಿದೆ. ಹೀಗೆ ಎಲ್ಲಾ ಇಂದ್ರಿಯಗಳಿಗೂ ಹೊರಗೆ ಕಾಣುವ ಧರ್ಮವಷ್ಟೇ ಅಲ್ಲದೇ ಒಳ ಅನುಭವವನ್ನು ಸವಿಯುವ ಧರ್ಮವೂ ಇದೆ. ಅದನ್ನು ಕಾಪಾಡಿಕೊಂಡು ಜೀವನದಲ್ಲಿ ಸುಖವಾಗಿರಿ ಎಂಬುದೇ ಋಷಿಗಳ ಆಶಯ.

ಸಾಧ್ಯಧರ್ಮ-ಸಾಧನ ಧರ್ಮ 

ಇಂತಹ ಧರ್ಮವನ್ನು ಗುರುತಿಸಿ ಅದು ಮಾನವನಲ್ಲಿ ಮತ್ತು ನಿಸರ್ಗದಲ್ಲಿ ಕೆಡದಂತೆ ಇಡಲು ಬೇಕಾದ ವಿಧಿ-ನಿಯಮಗಳನ್ನೆಲ್ಲಾ ಈ ದೇಶದಲ್ಲಿ ಋಷಿಗಳು ತಂದರು ಎಂಬುದನ್ನು ಮರೆಯಲಾಗದು. ಭಾರತೀಯವಾದ ಆಚಾರ,ಜೀವನ ವಿಧಾನಗಳೆಲ್ಲ ಕೇವಲ ಶುಷ್ಕವಾದ ಹೊರ ಆಚರಣೆಗಳಾಗಿ ಬಂದಿಲ್ಲ. ಆನಂದ, ನೆಮ್ಮದಿ ನಮ್ಮೆಲ್ಲರ ಸಹಜಾವಸ್ಥೆ. ಹಾಗಿದ್ದರೆ ಅದು ಸಾಧ್ಯ ಧರ್ಮ. ಅದು ಹಳಿ ತಪ್ಪಿದಾಗ, ಮತ್ತೆ ನಮ್ಮನ್ನು ಅದೇ ಆನಂದದ ನೆಮ್ಮದಿಯ ಸಹಜಾವಸ್ಥೆಗೆ ತರುವ ಕೃಷಿ,ಸಾಧನೆ ಎಲ್ಲವೂ ಸಾಧನ ಧರ್ಮವಾಗುತ್ತದೆ. ನಮ್ಮ ಹೊರ ಆಚಾರಗಳ ಉದ್ದೇಶವು ನಮ್ಮನ್ನು ಒಳಗೆ ಬೆಳಗುವ ನಮ್ಮ ಸಹಜ ಸ್ಥಿತಿಗೆ ಕೊಂಡೊಯ್ಯುವುದಾಗಬೇಕು. ನಮ್ಮ ಸಂಧ್ಯಾವಂದನೆ,ದೇವರ ಪೂಜೆ,ವ್ರತ-ನಿಯಮಗಳು,ಹೋಮ-ಹವನಗಳು ಎಲ್ಲವೂ ನಮ್ಮನ್ನು ಸಹಜ ಧರ್ಮವಾದ  ಒಳ-ಹೊರ ಆನಂದದೆಡೆಗೆ ಒಯ್ಯುವ ಉದ್ದೇಶದಿಂದಲೇ ಬಂದಿದೆ ಎಂಬುದನ್ನು ಮರೆತಾಗ ಅವೆಲ್ಲವೂ ಬರಿಯ ಚೇಷ್ಟೆಯಾಗುತ್ತದೆ. ಮಹರ್ಷಿ ಪ್ರಣೀತವಾದ ಕ್ರಮದಿಂದ, ಅವರು ವಿಧಿಸಿದ ಮಾನಸಿಕತೆಯಿಂದ ಈ ಕರ್ಮಗಳನ್ನು ಆಚರಿಸಿದಾಗ ಅವೆಲ್ಲವೂ ಸಾಧನ ಧರ್ಮವಾಗಿ, ಸಾಧ್ಯ ಧರ್ಮವಾದ ನಮ್ಮ ಆನಂದದ ಸ್ಥಿತಿಗೆ ನಮ್ಮನ್ನು ಏರಿಸುವುದರಲ್ಲಿ ಸಂದೇಹವಿಲ್ಲ. "ಕರ್ಮವನ್ನು ಮರ್ಮವರಿತು ಆಚರಿಸಬೇಕು" ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. 

ಹೊರ ಆಚರಣೆಗಳಷ್ಟೇ ಧರ್ಮವಲ್ಲ

ನಮಗೆ ಹೊರ ಆಚರಣೆಗಳನ್ನಷ್ಟೇ ಧರ್ಮ ಎಂದುಕೊಂಡು ಅಭ್ಯಾಸವಾಗಿದೆ. ನಮ್ಮನ್ನು ಸಹಜಾವಸ್ಥೆಗೆ ತರುವ ಕ್ರಿಯೆಗಳಾದಾಗ ಮಾತ್ರ ಅವೆಲ್ಲವೂ ಧರ್ಮವಾಗುತ್ತವೆ. ಮೈಸೂರಿಗೆ ಹೋಗುವ ಬಸ್ಸನ್ನು ನಿರ್ದೇಶಿಸಿ 'ಬನ್ನಿ ಮೈಸೂರು' ಎಂದು ವ್ಯವಹರಿಸುವಂತೆ,  ಧರ್ಮಕ್ಕೆ ನಮ್ಮನ್ನು ಒಯ್ಯುವ ಆಚಾರಗಳನ್ನು  ಧರ್ಮವೆಂದೇ ಮಹರ್ಷಿಗಳು ಕರೆದಿದ್ದಾರೆ.  

ಧರ್ಮ-ನಿತ್ಯ,ಶಾಶ್ವತ.

ಭಾರತೀಯ ಮಹರ್ಷಿಗಳ ಧರ್ಮ ಎಂದೆಂದಿಗೂ ಇರುವುದಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮನಿರಪೇಕ್ಷತೆ ಎಂಬ ಪದಕ್ಕೆ ಏನೂ ಅರ್ಥವಿರದು. ಅದು ಕೇವಲ ಹೊರ ಆಚರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಧರ್ಮ ಸ್ವರೂಪವನ್ನು ಅರಿಯದೇ ಬಂದ ಪದಪ್ರಯೋಗ. ಧರ್ಮ ಎಂಬ ಉದಾತ್ತವಾದ ವಿಷಯವನ್ನು ನಮ್ಮ ಅಲ್ಪಬುದ್ಧಿಯ ಮಾನದಂಡದಿಂದ ಅಳೆಯದಿರೋಣ. ಸೃಷ್ಟಿಸಹಜವಾದ ಧರ್ಮವನ್ನು ಅರ್ಥ ಮಾಡಿಕೊಂಡು ಅದನ್ನು ನಮ್ಮಲ್ಲಿ ಉಳಿಸಿ-ಬೆಳೆಸಲು ತಂದ ಮಹರ್ಷಿ ಸಂಸ್ಕೃತಿಯ ನೋಟದಿಂದ ಎಲ್ಲರೂ ಧಾರ್ಮಿಕರಾಗೋಣ.

ಸೂಚನೆ: 17/03/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

நம்முள் ஒளிரும் ஒளியை மறவாமலிருப்போம் (Nammul olirum oliyai maravaamaliruppom)

மூலம்: சுப்ரமண்ணிய சோமாயாஜி 

தமிழாக்கம்: ஸி. ஆர். ஸ்ரீதர்

மின்னஞ்சல் : (lekhana@ayvm.in)


 


     கடோபனிஷத்தின் ஒரு பகுதி இவ்வாறுள்ளது:-  ஒரு சமயம் தேவர்களுக்கும் அசுரர்களுக்கும் இடையில் நடைபெற்ற போரில், இறைவன் தேவர்களுக்கு வெற்றியை வழங்கினான். வெற்றியடைந்த தேவர்கள் மிக்க பெருமிதமடைந்தார்கள். மற்றும் அப்பெருமை தம்மையே சார்ந்தது என்னும் இறுமாப்பு அடைந்தார்கள். இவ்வாறு உள்ளபொழுது ஒரு சமயம், ஆகாயத்தில் அவர்கள் என்றும் காணாத யக்ஷன் ஒருவனை கண்டனர். இந்த யக்ஷன் யாராக இருக்கும் என்னும் கேள்வி அவர்களுக்கு எழ, தங்களிடையில் முக்கியமான ஒருவனான அக்னிதேவனை, அந்த யக்ஷன் யாரென்று அறிந்துவர அனுப்பினார்கள். அக்னிதேவன் அந்த யக்ஷனின் எதிரில், அவனுடைய ஒளியின் பிரபாவத்தால் ஒன்றும் பேச இயலாமல் வாயடைத்து நின்றான். 


                 அப்பொழுது அந்த யக்ஷனே அக்னி தேவனை நோக்கி "நீ யார்? உன்னுடைய வல்லமை என்ன?" என்று வினவினான். அதற்கு அக்னிதேவன் "நான் அக்னி. என்னுடைய சக்தியால் இவ்வுலகிலுள்ள எப்பொருளையும் சுட்டெரிக்க வல்லவன்" என்று தன் வலிமையை சாற்றினான். அப்பொழுது யக்ஷன் "அப்படியென்றால் இந்த புல் குச்சியை சுட்டெரி" என்றான். எவ்வளவோ முயன்றும் அக்னியால் அந்த புல் குச்சியை சிறிதும் எரிக்க முடியவில்லை. அவன் வெட்கமடைந்து திரும்பிச் சென்றான்.


              அடுத்து வாயுதேவனின் முறை. யக்ஷன் வாயுவினிடமும் அதே கேள்வியைக் கேட்டான். அதற்கு வாயுதேவன் தன்னைப் பற்றி இவ்வாறு கூறிக்கொண்டான். "நான் வாயு. என்னுடைய வேகத்தால் உலகில் உள்ள  அனைத்து பொருள்களையும் இட மாற்றம் செய்ய வல்லவன்." யக்ஷன் மறுபடியும் அந்த புல் குச்சியைக் காட்டி, "உன்னுடைய ஆற்றலால் இதை பறக்கச் செய் பார்க்கலாம்" என்றான். தன்னுடைய மொத்த சக்தியை உபயோகித்தும்  வாயுவினால் அந்த புல் குச்சியை அசைக்கக் கூட முடியவில்லை. அவனும் வெட்கத்துடன் திரும்பினான்.


                 அப்பொழுது இந்திரனே யக்ஷனருகில் வந்தபொழுது, யக்ஷன் மறைந்துவிட்டான். இந்திரனுக்கு ஆச்சரியம் ஏற்பட்டாலும் அங்கேயே நின்று தியானத்திலாழ்ந்தான். அப்பொழுது யக்ஷன் இருந்த இடத்தில் தங்கப்பதுமையாக, சிவனின் மறு பாதியான உமாதேவி காட்சி அளித்தாள். அப்பொழுது இந்திரன் அவளை தலையால் வணங்கி, "யக்ஷன் யார்?" என்று வினவுகின்றான். அப்பொழுது ஜகதம்பாள் கூறுகின்றாள்: "அந்த யக்ஷன் இறைவனே. உங்கள் அனைவரின் தற்பெருமையை விலக்கவே யக்ஷனின் வடிவில் காட்சியளித்தான். எல்லோருக்கும், எல்லாவற்றிற்கும் பின் நின்று இயக்கும் சக்தி அவனே. அவனால்தான் நீங்கள் வெற்றி அடைந்தீர்கள். அதை மறந்து, வெற்றி உங்களதுதான் என்ற அகம்பாவத்தை வெளிப்படுத்தினீர்கள். அதனால்தான் உங்களை நல்வழிப்படுத்த அவன் பரீட்சிக்க வேண்டியதாயிற்று" என்றாள். தேவர்கள் அனைவரும் தமது தவற்றை உணர்ந்து இறைவனுக்கு தலை வணங்கினர். 


இறைவனின் சக்தியால்தான் படைப்பில் அனைத்தும் நடைபெறுகின்றன என்பதை விளக்கும் ஒர் அழகிய கதையாகும் இது. தற்பெருமை வழி தவறவைக்கின்றது. "நான்" அல்லாததை "நான்" என நினைக்கச் செய்கின்றது. அவ்வாறாகும்பொழுது சத்தியத்தின் பாதை தவறுகின்றது. தேவர்களுக்கு இவ்வாறு  கற்பிக்காவிடில் அத்தகைய தற்பெருமை மனப்பான்மையை வளர்த்துக்கொண்டு அவர்களும் அசுரராகிவிடுவர் என்றே, இறைவன் அவர்களை அனுக்ரஹித்து பாடம் கற்பித்தான். இக்கதை, தேவர்களை ஒரு சாக்காக கொண்டு நம் அனைவருக்கும் ஒரு பாடமாக அருளப்பட்டுள்ளது. நாம் அனைவரும் நமக்குள் சுயபரிசோதனை செய்து பார்த்துக் கொண்டால், நம் வாழ்விலும் இவ்வாறு தற்பெருமை அடைந்த நிகழ்ச்சிகள் புலப்படும். எல்லாவற்றின் பின் உள்ள இறைவனுடைய உண்மையான சக்தியையும், மகத்துவத்தையும் மறந்து, நம் பெருமையிலேயே திளைக்கிறோம்.


 இதையே யமதர்மராஜா நசிகேதனுக்கு உபதேசிக்கிறான் - 


ந தத்ர ஸூர்யோ பாதி ந சந்த்ர தாரகம், நேமா வித்யுதோ பாந்தி குதோயமக்னி: |

 தமேவ பாந்தம் அனுபாதி ஸர்வம், தஸ்ய பாஸா ஸர்வமிதம் விபாந்தி//


 என்றவாறு, "சூரியன், சந்திரன், நட்சத்திரங்கள், மின்னல், அக்னி இவை அனைத்தும் இறைவனிடமிருந்தே ஒளியைப் பெற்று ஒளியால் மிளிர்கின்றன" என்று மூல ஒளிமயமான அவ்விறைவனே சுட்டிக் காட்டப்படுகிறான். 


இறைவனின் ஸ்வரூபத்தை  நம் மனக்கண்முன் காட்டும் உபனிஷத்தின் நடை மிகவும் மர்மமாகவும், அழகாகவும், எளிதாகவும் உள்ளது. இங்கு ஸ்ரீரங்க மஹாகுருவின் இவ்வாக்கு நினைவில் கொள்ளத்தக்கது - "ஆகாயத்தில் உள்ள சூரியன் மிக தூரத்தில் இருந்தாலும், பூமியிலுள்ள பூக்கள் அவனால் மலர்கின்றன. அவ்வாறே இப்பூக்கள், சூரியன் மிகவும் தூரத்தில் உள்ளான் என்று யோசிக்க வேண்டியதில்லை. அவ்வாறே ஞானசூரியனின் அனுக்ரஹத்தால் ஜீவமலர்கள் எவ்வளவுதான் தூரத்தில் இருந்தாலும் மலர்வது உண்மை என்பது நிச்சயம்." நம் வாழ்வின் பின்னணியில் ஒளிவீசும் இறைவனின் மகிமையை நாம் அனைவரும் அறிவோமாக.


குறிப்பு: இக்கட்டுரை யின் கன்னட மூலம் AYVM blogs ல் காணலாம்.