Sunday, November 27, 2022

ಯಕ್ಷಪ್ರಶ್ನೆ - 14(Yaksha Prashne - 14)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೧೩ ಕ್ಷತ್ತ್ರಿಯರಿಗೆ ದೇವತ್ವವನ್ನು ಉಂಟುಮಾಡುವುದು ಯಾವುದು ?

ಉತ್ತರ -  ಧನುರ್ವಿದ್ಯೆಯು ಕ್ಷತ್ತ್ರಿಯರಿಗೆ ದೇವತ್ವವನ್ನುಂಟುಮಾಡುತ್ತದೆ.

ಕ್ಷತ್ತ್ರಿಯನಾದವನು ತನ್ನ ತನವನ್ನು ಇನ್ನೂ ಮೇಲೆಕ್ಕೆ ಎತ್ತುವ ಯಾವುದಾದರೂ ವಿದ್ಯೆ ಇದೆಯೆಂದಾದರೆ ಅದುವೇ ಧನುರ್ವಿದ್ಯೆ. ಮನುಷ್ಯನಾದವನು ದೇವತ್ವವನ್ನು ಹೊಂದುವುದು ಹೇಗೆ ಎಂಬುದನ್ನು ಈ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಈ ಪ್ರಪಂಚಕ್ಕೆ ಬಂದಮೇಲೆ ಪ್ರತಿಯೊಬ್ಬರಿಗೂ ಒಂದೊಂದು ವಿಶೇಷ ಕಾರ್ಯ-ಕರ್ತವ್ಯವು ವಿಹಿತವಾಗಿರುತ್ತದೆ. ಕ್ಷತ್ತ್ರಿಯನಿಗೆ ಯುದ್ಧವೇ ಕರ್ತವ್ಯ. ಅವನು ಯುದ್ಧಕ್ಕಾಗಿಯೇ ಹುಟ್ಟಿದವನು. ಕ್ಷತ್ತ್ರಿಯನಾಗಿ ಹುಟ್ಟಿದ್ದರಿಂದಲೇ ಯುದ್ಧವನ್ನು ಮಾಡಬೇಕು. ಭಗವದ್ಗೀತೆಯಲ್ಲಿ ಈ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ. ಅರ್ಜುನನು ಯುದ್ಧಭೂಮಿಗೆ ಅಂದು ಯುದ್ಧವನ್ನೇ ತ್ಯಜಿಸುವುದಾಗಿ ಶ್ರೀಕೃಷ್ಣನ ಬಳಿ ಹೇಳುತ್ತಾನೆ. ಸಕಾಲ ದೇಶದಲ್ಲಿ ತನ್ನ ಕರ್ತವ್ಯಪ್ರಜ್ಞೆಯನ್ನು ಮರೆಯುತ್ತಾನೆ. ಆಮೇಲೆ ಶ್ರೀಕೃಷ್ಣನು ಕರ್ಮ ಮತ್ತು ಕರ್ಮಸನ್ಯಾಸದ ಬಗ್ಗೆ ತುಂಬಾ ವಿವರವಾಗಿ ಹೇಳಿ "ನಿನ್ನ ಹೃದಯ ದೌರ್ಬಲ್ಯವನ್ನು ಬಿಟ್ಟು ಯುದ್ಧಕ್ಕಾಗಿ ಸನ್ನದ್ಧನಾಗು" ಎಂದು ಎಚ್ಚರಿಸುತ್ತಾನೆ. ಹಾಗಾಗಿ ಯುದ್ಧವು ಎದುರು ಬಂದಾಗ ಯುದ್ಧವನ್ನು ಮಾಡುವುದೇ ಕ್ಷತ್ತ್ರಿಯನ ಧರ್ಮವಾಗಿದೆ. ಆದ್ದರಿಂದ ಕ್ಷತ್ತ್ರಿಯನ ಕರ್ತವ್ಯ ಅದುವೇ ಆಗಿದೆ.  ಈ ಹಿಂದಿ ಹೇಳಿದಂತೆ ಕ್ಷತ್ತ್ರಿಯ ಎಂಬುದು ಮನುಷ್ಯನಲ್ಲಿ ಮಾತ್ರ ಇರುವ ವ್ಯವಸ್ಥೆಯಲ್ಲ. 'ಕ್ಷತ್ತ್ರಿಯ' ಎಂಬ ಶಬ್ದಕ್ಕೆ ಕಾಲಿದಾಸ ಮಹಾಕವಿಯು ವಿವರಿಸುವಂತೆ 'ಕ್ಷತಾತ್ ಕಿಲ ತ್ರಾಯತೇ' ಎಲ್ಲಿ ಕ್ಷತಿ -ಗಾಯ ವಾಗಿರುತ್ತದೋ ಅಲ್ಲಿ ಅದನ್ನು ರಕ್ಷಿಸುವ ಜವಾಬ್ದಾರಿ ಈತನಿಗೇ ಇರುವಂತಹದ್ದು. ಆದ ತೊಂದರೆಯನ್ನು ಪರಿಹರಿಸುವುದು ಒಂದಾದರೆ, ತೊಂದರೆ ಆಗದಂತೆ ನೋಡಿಕೊಳ್ಳುವುದೂ ಅವನದ್ದೇ ಹೊಣೆಗಾರಿಕೆ. 

ಬೀಜಕ್ಕೆ ಕವಚವಿರುವುದನ್ನು ಗಮನಿಸಿರಬಹುದು. ಕವಚವು ಆ ಬೀಜವನ್ನು ಕೆಡದಂತೆ ರಕ್ಷಿಸುತ್ತದೆ. ಇದು ಬೀಜಕ್ಕಿರುವ ರಕ್ಷಣೀಯವಾದ ವಿಷಯ. ಕವಚದ ಭಾಗವನ್ನು ಕ್ಷತ್ತ್ರಿಯ ಎನ್ನಬಹುದು. ಅಂತೆಯೇ ನಮ್ಮ ಶರೀರದಲ್ಲಿ ತಲೆಯ ಭಾಗವನ್ನು ಬ್ರಾಹ್ಮಣ ಎಂದರೆ ಭುಜದ ಭಾಗವನ್ನು ಕ್ಷತ್ತ್ರಿಯ ಎನ್ನುತ್ತಾರೆ. ಏಕೆಂದರೆ ರಕ್ಷಣೀಯ ವಿಷಯ ಶಿರಸ್ಸು ತಾನೆ! ಯಾರಾದರೂ ನಮ್ಮ ಕಡೆಗೆ ಕಲ್ಲನ್ನು ಎಸೆದಾಗ ತಲೆಯನ್ನು ಒಡ್ಡುವುದಿಲ್ಲ. ತಲೆಯನ್ನು ರಕ್ಷಿಸಿಕೊಳ್ಳಲು ಕೈಯ್ಯನ್ನು ಮುಂದೆ ಮಾಡುತ್ತೇವೆ ಅಲ್ಲವೇ. ಮತ್ತು ಸತ್ತ್ವ ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳಲ್ಲಿ ರಜಸ್ಸು ಪ್ರಧಾನವಾದ ಸೃಷ್ಟಿ ಕ್ಷತ್ತ್ರಿಯ. ಕೊನೆಗೆ ಉಳಿಯಬೇಕಾದ ಅಥವಾ ಉಳಿಯುಂತಹ ಗುಣವೇ ಸತ್ತ್ವ. ಹೀಗೆ ಎಲ್ಲೆಲ್ಲಿ ರಕ್ಷಣೆಯ ವಿಷಯ ಬರುತ್ತದೆಯೋ ಅದನ್ನೆಲ್ಲವನ್ನು ಕ್ಷತ್ತ್ರಿಯ ಎಂದೇ ಕರೆಯಬಹುದು. ಈ ಸೃಷ್ಟಿಯ ಪ್ರತಿಯೊಂದು ವಸ್ತುವೂ ತ್ರಿಗುಣಗಳ ಯಾವುದೋ ಒಂದು ಬಗೆಯ ಕಾಂಬಿನೇಷನ್ನಿಂದಲೇ ಆಗಿರುವಂತಹದ್ದು. ಅವುಗಳಲ್ಲಿ ಯಾವ ಗುಣ ಪ್ರಧಾನವಾಗಿ ಕಂಡುಬರುವುದೋ ತಾದಕ್ಕೆ ತಕ್ಕಂತೆ ವಸ್ತುವಿಗೆ ಬ್ರಾಹ್ಮನ ಕ್ಷತ್ತ್ರಿಯ ವೈಶ್ಯ ಶೂದ್ರ ಎಂಬ ವುಭಾಗ ಬಂದಿದೆ. ಹಾಗಾಗಿ ಮೊಟ್ಟಮೊದಲು ಬ್ರಹ್ಮನು ಸೃಷ್ಟಿಯನ್ನು ಮಾಡುವಾಗಲೇ ಹೀಗೆ ಸೃಷ್ಟಿಮಾಡಿದ್ದಾನೆ. ಇದಕ್ಕೆ ಭಗವದ್ಗೀತೆಯಲ್ಲೂ ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ' ಎಂದು ಶ್ರೀಕೃಷ್ಣನು ಹೇಳುವ ಮಾತು ಸಂಗತವಾಗುವುದು.  

ಸೂಚನೆ : 27/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮನಸ್ಸೇ ಮನುಷ್ಯನ ಮೂರನೆಯ ಕಣ್ಣು (Manasse Manusyana Muraneya kannu)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್ 

(ಪ್ರತಿಕ್ರಿಯಿಸಿರಿ lekhana@ayvm.in)



ರಾಜನೊಬ್ಬ ಋಷಿಗಳನ್ನು ಸಂದರ್ಶಿಸಲು  ಹೊರಟ. ತಮ್ಮ ಆಶ್ರಮಕ್ಕೆ ಆಗಮಿಸಿದ ರಾಜನನ್ನು ಋಷಿಗಳು ಸ್ವಾಗತಿಸಿ ಒಳಿತನ್ನು ಹಾರೈಸಿ ಆಶೀರ್ವದಿಸಿದರು.  ರಾಜನು, "ನನಗೆ ಒಂದು ವರದ ಅಪೇಕ್ಷೆಯಿದೆ" ಎಂದು ಪ್ರಾರ್ಥಿಸಿದನು. ಭಗವಂತನ ಪ್ರತಿನಿಧಿಯಾಗಿ ರಾಜ್ಯವನ್ನಾಳಬೇಕಾದ ರಾಜನ ಮನಸ್ಸು ಧರ್ಮದಿಂದ ವಿಚಲಿತವಾಗಿ ಜಾರಿರಬಹುದು, ಅವನನ್ನು ಉದ್ಧರಿಸೋಣವೆಂದು "ಏನು ವರವನ್ನು ಅಪೇಕ್ಷಿ ಸುವೆ?"  ಎಂದರು ಋಷಿಗಳು. "ನನ್ನ ಮನಸ್ಸಿನಲ್ಲಾಡಿದ ಎಲ್ಲ ಕೆಲಸಗಳೂ ನಡೆಯಬೇಕು" ಎಂದ ರಾಜ. "ಅಂತಹ ವರವನ್ನು ಕೊಡಬಲ್ಲೆ, ಆದರೆ ಅದರಿಂದ ನೀನು ಸಂತುಷ್ಟನಾಗಲಾರೆ. ಒಂದು ಷರತ್ತಿಗೆ ಒಪ್ಪಿದರೆ, ನಿನಗೆ ಒಬ್ಬ ಸೇವಕನನ್ನು ಕಳುಹಿಸಿಕೊಡುವೆ. ಆದರೆ ನಿರಂತರ ಕೆಲಸ ಕೊಡುವುದು ನಿನ್ನ ಜವಾಬ್ದಾರಿ, ಅದಿಲ್ಲವಾದರೆ ಅವನು ನಿನ್ನನ್ನು ನುಂಗಿಬಿಡುವನು" ಎಂದರು ಋಷಿಗಳು. ರಾಜನು,"ಕೆಲಸ ಮಾಡುವುದು ಕಷ್ಟ. ಹೇಳುವುದು ಅಷ್ಟೇನು ಕಷ್ಟವಿಲ್ಲಎಂದು ಆಲೋಚಿಸಿ ಷರತ್ತಿಗೆ ಒಪ್ಪಿದ.

ಋಷಿಗಳು ಅವರ ಸಿದ್ಧಿಗಳಿಂದ ಭೂತಾಕಾರವಾದ ಜೀವಿಯೊಂದನ್ನು ಸೃಷ್ಟಿಸಿದರು. ಅದು ರಾಜನೆದುರಿಗೆ ನಿಂತು "ಕೆಲಸ ಕೊಡಿ ರಾಜರೆ" ಎಂದಿತು. "ಅರಮನೆಗೆ ಬಾ" ಎಂದನು ರಾಜ. ರಾಜನು ತಲಪುವ ಮುನ್ನವೇ ಆ ಭೂತ ಅರಮನೆಯಲ್ಲಿ ಹಾಜರಾಗಿತ್ತು. ಶತ್ರುಗಳನ್ನು ನಾಶಮಾಡಿ, ಮರುಭೂಮಿಗೆ ನೀರೆರೆದು, ಉತ್ತು ಬಿತ್ತು ಇತ್ಯಾದಿ ಎಲ್ಲ ಕೆಲಸವನ್ನೂ ಕೆಲವೇ ಸಮಯದಲ್ಲಿ ಮಾಡಿ ಮುಗಿಸಿತು. ಇನ್ನು ಕೆಲಸ ಹೇಳಲು ತೋಚದೆ ರಾಜ ಸುಸ್ತಾಗಿ ಕುಳಿತ. "ನೀನು ಕೆಲಸ ಕೊಡುತ್ತಿಲ್ಲ. ನಿನ್ನನ್ನು ನುಂಗಿಬಿಡುತ್ತೇನೆ" ಎಂದಿತು ಭೂತ.

ದಿಕ್ಕುತೋಚದ ರಾಜ, ಋಷಿಗಳ ಬಳಿಗೆ ಹೋಗಿ, ಪಾದಗಳಿಗೆ ಬಿದ್ದು, "ತಪ್ಪಾಯಿತು ಕ್ಷಮಿಸಿ. ಕೇಳಬಾರದ್ದನ್ನು ಕೇಳಿಬಿಟ್ಟೆ. ಈ ಭೂತದಿಂದ ನನ್ನನ್ನು ರಕ್ಷಿಸಿ" ಎಂದು ಬೇಡಿದನು. ಋಷಿಗಳು ಭೂತವನ್ನು ಉದ್ದೇಶಿಸಿ, ಒಂದು ಕಂಬವನ್ನು ಗಟ್ಟಿಯಾಗಿ ನೆಡುವಂತೆ ಹೇಳಿ, ಅದರ ಮೇಲೆ ನಿರಂತರವಾಗಿ  ಹತ್ತಿ ಇಳಿದು ಮಾಡುವಂತೆ ಹೇಳಿದರು. ಹಾಗೆಯೇ ಮಾಡುತ್ತಾ ಅದರ ಜೀವಾವಧಿ ಕಳೆದು ಭೂತ ಮಾಯವಾಯಿತು.

ಈ ಕಥೆಯು ಮಕ್ಕಳ ಕಥೆಯಂತೆ ಕಂಡರೂ, ಇದರಲ್ಲೊಂದು ಗಹನವಾದ ತತ್ತ್ವಾರ್ಥ ಅಡಗಿದೆ. ನಮ್ಮಮನಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂಬ ಸತ್ಯಾರ್ಥ ಇಲ್ಲಿದೆ. ಆ  ಕಂಬವು ಬೆನ್ನು ಮೂಳೆಯ ಪ್ರತೀಕ. ಅದರಲ್ಲಿ ಗುಪ್ತವಾಗಿ ಅಡಗಿರುವ ಸುಷುಮ್ನಾ ನಾಡಿಯು ಭಗವಂತನನ್ನು ತೋರುವ ಮಾರ್ಗ. ಋಷಿಗಳು ಸಾಧನೆ ಮಾಡಿ, ಆ ಪಥದಲ್ಲಿ ಹತ್ತಿ ಇಳಿದು, ಪರಮಾತ್ಮನನ್ನು ನಿತ್ಯವೂ ಅಂತರಂಗದಲ್ಲಿ ಕಾಣುವವರು. ಇಂದ್ರಿಯಗಳ ರಾಜನಾದ ನಮ್ಮಗಳ ಮನಸ್ಸು ಆ ಭೂತವಿದ್ದಂತೆ. ದುಷ್ಟಸಂಸ್ಕಾರಗಳಿಂದ ಹುಟ್ಟುವ ಚಾಪಲ್ಯಗಳಿಂದ ಕೂಡಿದ್ದು, ಚಂಚಲವಾಗಿ ಇತ್ತ ಅತ್ತ ಎಡೆಬಿಡದೇ ಭ್ರಮಣ ಮಾಡುವಂತಹದು.  ಆ ಮನಸ್ಸನ್ನು  ಭಗವಂತನ  ಮೂರ್ತಿಯ ಅಡಿಯಿಂದ ಮುಡಿಯವರೆಗೆ ಹತ್ತಿ ಇಳಿಯುವಂತೆ ಮಾಡುವುದೇ ಕಂಬ ಹತ್ತಿ ಇಳಿಯುವ ಕೆಲಸ. ಹಾಗೆ ಮಾಡಿದಾಗ, ಒಂದು ಘಟ್ಟದಲ್ಲಿ ಅದು ತನ್ನ ಸ್ವಧಾಮದಲ್ಲಿರುವ ಮನಸಸ್ಪತಿಯಲ್ಲಿ ಲಯವಾಗುವುದು ನಿಶ್ಚಿತ. ಆತ್ಮರಾಜ್ಯದ ರಾಜರಾಗಿ, ಮನಸ್ಸಿನ ಸಾರ್ಥಕತೆಯನ್ನು ಜ್ಞಾನ ಚಕ್ಷುವಿನಿಂದ ಅರಿತವರಾಗಿ, ಲೋಕಕ್ಕೆ ಉತ್ತಮ ವ್ಯವಹಾರ ಹಾಗೂ ಚಿಂತನೆಗಳನ್ನು ಪ್ರಕಾಶಗೊಳಿಸಿದವರು ಮಹರ್ಷಿಗಳು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು " ವೇಸ್ಟ್ ಪೇಪರ್ ಬ್ಯಾಸ್ಕೆಟ್ ಗೆ  ಹಾಕಲ್ಪಡಬೇಕಾಗಿದ್ದ ವಿಷಯಗಳೆಲ್ಲಾ ಮನಸ್ಸಿನಲ್ಲಿ ತುಂಬಿಸಿರುವಾಗ ಜ್ಞಾನದ ಮಾತುಗಳು ಅದಕ್ಕೆ ಹೇಗೆ ತಾನೇ ಹಿಡಿಸಿಯಾವು!?

ಇಂದು ನಮ್ಮ ಪುರುಸತ್ತಿಲ್ಲದ ಜೀವನ ಶೈಲಿಯಲ್ಲಿ ನಮ್ಮ ಮನಸ್ಸೂ ಆ ರಾಜನ ಮನಸ್ಸಿನಂತೆಯೇ ಆಗಿದೆ. ಮಹರ್ಷಿಗಳ ಅನುಭವ ವೇದ್ಯವಾದ ಸತ್ಯದ ವಿಷಯ  ಬೋಧವಾಗುತ್ತಿಲ್ಲ. ಈ ಕಥೆಯಲ್ಲಿ ಬರುವ ರಾಜನಂತೆ ಒಬ್ಬ ಸದ್ಗುರುವಿನಲ್ಲಿ ನಾವೂ ಶರಣಾದರೆ, ಅವರ ಮನಸ್ಸೆಂಬ ಮೂರನೆಯ ಕಣ್ಣಿನಿಂದ(ಜ್ಞಾನ ಚಕ್ಷುವಿನಿಂದಾ)ದ ಪರಮಾತ್ಮನ ದರುಶನಗಳ ಫಲ ರೂಪವಾದ ಆಶೀರ್ವಾದಗಳನ್ನು,  ಸದ್ವಿಷಯಗಳನ್ನು ನಮ್ಮ ಮನಸ್ಸಿಗೆ ಹರಿಸಬಹುದು. ನಾವು ಇಹ-ಪರ ಜೀವನದ ಹೊಂದಾಣಿಕೆಯೊಂದಿಗೆ ಶಾಶ್ವತ ನೆಮ್ಮದಿಯತ್ತ ಸಾಗಬಹುದು. ನಮ್ಮೆಲ್ಲರ ಮನಸ್ಸು ಅಂತಹ ಸಂಸ್ಕಾರದಿಂದ ಶುದ್ಧವಾಗಿ,  ಆ ಮನಸಸ್ಪತಿಯತ್ತ ಸಾಗುವಂತಾಗಲೆಂದು ಪ್ರಾರ್ಥಿಸೋಣ.

ಸೂಚನೆ : 26/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, November 24, 2022

ಕಳ್ಳತನವೂ ಒಂದು ಕಲೆಯಾಗಬಹುದೇ?(Kallatanavu Ondu Kaleyagabahude?)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)

 

 

'ಕಲೆ' - ಸಾಮಾನ್ಯ ಅರ್ಥ 

ಯಾವುದೇ ಕೆಲಸವನ್ನೂ ಅಚ್ಚುಕಟ್ಟಾಗಿ-ಸಮರ್ಪಕವಾಗಿ ಮಾಡಿದರೆ, ಅದೊಂದು ಕಲೆಯಾಗುವುದೆಂಬುದು ಸಾಮಾನ್ಯವಾದ ಅಭಿಪ್ರಾಯ. ಹಾಗೆಂದರೆ ಕಳ್ಳತನವು  ಕಲೆಯಾಗುವುದು ಎಂದರೇನರ್ಥ? ಎಂದಿಗೂ ಯಾರಿಂದಲೂ ಪತ್ತೆಹಚ್ಚಲಾಗದಂತೆ ಅತ್ಯಮೂಲ್ಯವಸ್ತುವನ್ನು ಕದ್ದರೆ ಆ ಕಳ್ಳನನ್ನು ಕಲಾವಂತನೆನ್ನಬೇಕಾಗುವುದಲ್ಲವೇ? ಇದು ಕಳ್ಳರಿಗೆ, ಕಳ್ಳತನಕ್ಕೆ ಪ್ರೋತ್ಸಾಹವನ್ನು ನೀಡಿ ಸಮಾಜದ ವ್ಯವಸ್ಥೆಯನ್ನು ಹಾಳುಮಾಡುವ ಕಾರ್ಯವಾಗುವುದು! ಅಂದಮೇಲೆ ಕಳ್ಳತನವನ್ನು  'ಕಲೆ'ಯೆಂದು ಶ್ಲಾಘಿಸುವುದು ಯೋಗ್ಯವಲ್ಲ ಎಂಬುದು ಸಿದ್ಧ. ಆದರೆ ಜ್ಞಾನಿಗಳು ಕಳ್ಳತನವನ್ನೂ  ಕಲೆಯಾಗಿ ಭಾವಿಸಿರುವ ಸನ್ನಿವೇಶವುಂಟು ಎಂದರೆ ಅದೊಂದು ಒಗಟೇ ಸರಿ.    

 

ಲೋಕವ್ಯವಹಾರವನ್ನು ಗಮನಿಸಿದರೂ ಸಹ ಕಳ್ಳನನ್ನೂ, ಆತನು ಕದ್ದ  ಮಾಲನ್ನೂ ಹುಡುಕಹೊರಡುವ ಪೋಲೀಸನಿಗೆ  ಕಳ್ಳನ ಹೆಜ್ಜೆಗಳ ಅರಿವು ಅತ್ಯಾವಶ್ಯಕ. ಕಳ್ಳರು ತಮ್ಮ ಕಾರ್ಯಕ್ಕೆ ಎಂತೆಂತಹ ಉಪಾಯಗಳನ್ನು ಕೈಗೊಳ್ಳಬಹುದು, ನಂತರ  ತಪ್ಪಿಸಿಕೊಳ್ಳಲು  ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬೆಲ್ಲವುಗಳ ಅರಿವು ಆತನಿಗೆ ಇರಲೇಬೇಕು. ಅಂದರೆ ಕಳ್ಳನಂತೆಯೇ ಈತನೂ ಯೋಚಿಸಿ ಕಳ್ಳತನದ ಸೂಕ್ಷ್ಮ-ಮರ್ಮ  ವಿಧಾನಗಳನ್ನು ಗುರುತಿಸಿಕೊಂಡಿರಬೇಕಾಗುವುದು ಅನಿವಾರ್ಯ. ಅಂದರೆ ಪೋಲೀಸನೂ ಸಹ ಕಳ್ಳತನದ 'ಕಲೆ'ಯನ್ನು(art) ಕಲಿಯಲೇಬೇಕಾಗುತ್ತದೆ. ಅತ್ಯಮೂಲ್ಯವಾದ ಪದಾರ್ಥವನ್ನು ಯಾರಿಗೂ ತಿಳಿಯದಂತೆ ಕದಿಯುವವ ಹಾಗೂ ಆತನನ್ನು ಹಿಡಿಯುವವ ಇಬ್ಬರೂ ಕಳ್ಳತನದ ಕಲೆಯನ್ನು ಬಲ್ಲವರು ಎನ್ನಬೇಕಾಗುವುದು.   


ಜ್ಞಾನಿಗಳ ಮತದಲ್ಲಿ 'ಕಲೆ'

'ಕಲೆ'ಯೆಂದರೆ ಅಂಶ, ಭಾಗ ಎಂದರ್ಥ. ಅಂಶವು ತನ್ನ ಅಂಶಿಯೊಡನೆ ಸಂಬಂಧವನ್ನು ಉಳಿಸಿಕೊಂಡರೆ ಮಾತ್ರ ಅದಕ್ಕೆ ಉಳಿವು, "ಅಂಶ" ಎಂಬ ಹೆಸರು. ಅಂಶವಾದ ಕೈಯನ್ನು ಹಿಡಿದರೆ ಅಂಶಿಯಾದ ದೇಹವನ್ನೇ ತಲುಪಿದಂತೆ.  ದೇಹದ ಭಾಗವಾದ(ಅಂಶವಾದ) ಕೈ ಏನಾದರೂ ತನ್ನ ಅಂಶಿಯಾದ ದೇಹದ ಸಂಬಂಧವನ್ನು ಕಳೆದುಕೊಂಡುಬಿಟ್ಟರೆ ಆ ಕೈ ನಮ್ಮನ್ನು ದೇಹದೆಡೆ ಒಯ್ಯುವುದಿಲ್ಲವಷ್ಟೇ. ಜ್ಞಾನಿಸಮ್ಮತವಾದ ಕಲೆಗಳೆಲ್ಲವೂ ಭಗವಂತನಿಂದಲೇ ಅರಳಿ ಬಂದಿವೆಯೆಂಬುದು  ಅವರ ದಿವ್ಯದೃಷ್ಟಿ ಗೋಚರವಾದ ಸತ್ಯ. ಆದ್ದರಿಂದ ಅವುಗಳು ಆ ಮಹಾಪುರುಷನ ಅಂಶಗಳೇ ಎಂಬುದು ಅವರ ಸಿದ್ಧಾಂತ. ಆದ ಕಾರಣದಿಂದ  ನಮ್ಮನ್ನು ಭಗವಂತನೆಡೆಗೆ(ಅಂಶಿಯೆಡೆಗೆ) ಒಯ್ಯುವ ವಿಧಾನಗಳೆಲ್ಲವನ್ನೂ 'ಕಲೆಗಳು' ಎಂದೇ ಹೆಸರಿಸಿದ್ದಾರೆ.  ಅವರು ಹೊರಗೆಡಹಿದ ಕಲೆಗಳೆಲ್ಲವೂ ನಮ್ಮನ್ನು ತಮ್ಮ ಅಂಶಿಯಾದ ಭಗವಂತನೆಡೆಗೇ ಒಯ್ಯಬಲ್ಲವು ಎಂಬುದು ಅವರ ಅನುಭವವೇದ್ಯ ಸತ್ಯ. ಹೀಗಲ್ಲದೆ, ಕೇವಲ  ಅಚ್ಚುಕಟ್ಟಾಗಿ, ಸಮರ್ಪಕವಾಗಿ ಮಾಡಿದ ಮಾತ್ರಕ್ಕೇ ಯಾವ ಕಾರ್ಯವೂ 'ಕಲೆ'ಯೆಂಬ ಹೆಸರಿಗೆ ಜ್ಞಾನಿಗಳ ಮತದಲ್ಲಿ ಪಾತ್ರವಾಗಲಾರದು.  



ಕಳ್ಳತನವೆಂಬ 'ಕಲೆ'

"ಭಗವಂತನ ಸಾಕ್ಷಾತ್ಕಾರವು ಮನುಷ್ಯಮಾತ್ರರ ಜನ್ಮಸಿದ್ಧ ಹಕ್ಕು" ಎಂಬ ಶ್ರೀರಂಗಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸುವುದು ಉಚಿತ. ಇಂತಹ ಜನ್ಮಸಿದ್ಧವಾದ ಹಕ್ಕನ್ನು ಕೈಬಿಟ್ಟು, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ವಿವೇಕವನ್ನು ಕಳೆದುಕೊಂಡ ನಾವು ಭಗವಂತನನ್ನು ಮರೆತು, ಲೌಕಿಕದಲ್ಲಿ ಮಾತ್ರವೇ ಮುಳುಗಿ, ಆನಂದಘನನಾದ ಪರಮಪುರುಷನನ್ನು ತಲುಪಬೇಕೆನ್ನುವುದನ್ನೂ ಮರೆತಿರುವೆವು. ಶಂಕರಭಗವತ್ಪಾದರ ಶ್ಲೋಕವೊಂದು  ಇಲ್ಲಿ ಉಲ್ಲೇಖಾರ್ಹವಾಗಿದೆ. 

ಅಂಧಸ್ಯ ಮೇ  ಹೃತ ವಿವೇಕಮಹಾಧನಸ್ಯ 

 ಚೋರೈ: ಮಹಾಬಲಿಭಿರಿಂದ್ರಿಯ ನಾಮಧೇಯೈ: |

ಮೋಹಾಂಧಕಾರ ಕುಹರೇ ವಿನಿಪಾತಿತಸ್ಯ  

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ ||


ಇಂದ್ರಿಯಗಳೆಂಬ ಮಹಾಬಲಿಷ್ಠರಾದ ಕಳ್ಳರು ನಮ್ಮಲ್ಲಿಯ ವಿವೇಕವೆಂಬ ಮಹಾಧನವನ್ನು ಕದ್ದುಬಿಟ್ಟಿದ್ದಾರೆ. ವಿವೇಕಹೀನನನ್ನು ಮೋಹವು ಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಅದೊಂದು ಹಾಳು ಬಾವಿಯೇ ಸರಿ. ಅದರೊಳಗೆ ಬಿದ್ದವನು ಮೇಲೇರುವುದಾದರೂ ಹೇಗೆ? ಆದ್ದರಿಂದ ' ಸ್ವಾಮೀ ಲಕ್ಷ್ಮೀನೃಸಿಂಹನೇ, ಕರಾವಲಂಬನ ನೀಡಿ ಕಾಯಪ್ಪ' ಎಂದು ಪ್ರಾರ್ಥಿಸಲು ಆದೇಶವನ್ನು ನೀಡುತ್ತಾರೆ ಆಚಾರ್ಯರು. 


ಲೌಕಿಕದ ವ್ಯವಹಾರದಲ್ಲಿ, ಕಳ್ಳನನ್ನು ಹಿಡಿಯಲು, ಕಳ್ಳನ ಹೆಜ್ಜೆಗಳನ್ನು ಅರಿಯಬೇಕು ಎನ್ನುವಂತೆ ಜೀವನದಲ್ಲಿಯೂ ಇಂದ್ರಿಯರೂಪರಾದ ಕಳ್ಳರ ಹೆಜ್ಜೆಗಳನ್ನರಿಯಬೇಕು. ಆ ಕಳ್ಳರಿಗೇ ಅರಿವಾಗದೆ  ಅವರು ನಮ್ಮಿಂದ ಕದ್ದ  ವಿವೇಕಧನವನ್ನು ಮತ್ತೆ ಕದ್ದು ಪಡೆದಾಗ ನಮ್ಮ ಜೀವನದ ಮೂಲ ಸ್ರೋತಸ್ಸಾದ ಭಗವಂತನನ್ನು ತಲುಪಬಹುದಾಗಿದೆ. ಆದ್ದರಿಂದ, ಅವುಗಳನ್ನು ಕಟ್ಟಿಹಾಕಿ, ವಿವೇಕಧನವನ್ನು ಮತ್ತೆ ಅವರಿಂದ ಕದಿಯುವ ಕಳ್ಳತನವೇ  ಜ್ಞಾನಿಗಳ ದೃಷ್ಟಿಯಲ್ಲಿ 'ಕಲೆ'ಯಾಗಿದೆ ಎಂಬ ಶ್ರೀರಂಗಮಹಾಗುರುಗಳ ವಿವರಣೆಯು ಇಲ್ಲಿ ಸ್ಮರಣೀಯ. ಈ  ಅರ್ಥದಲ್ಲಷ್ಟೇ 'ಕಳ್ಳತನ'ವನ್ನು ಕಲೆಗಳ ಗುಂಪಿಗೆ ಸೇರಿಸಲಾಗಿದೆಯೇ ಹೊರತು, ಲೌಕಿಕವಾದ ಧನ-ಸಂಪತ್ತುಗಳನ್ನು ದರೋಡೆ ಮಾಡಿ, ಕದಿಯುವುದನ್ನು ಕಲೆಯಾಗಿ ಸರ್ವಥಾ ಪರಿಗಣಿಸಿಲ್ಲ ಎಂಬುದನ್ನು ಮನಗಾಣಬೇಕಾಗಿದೆ.     


ವಿವೇಕಮಹಾಧನವೇ ನಮ್ಮನ್ನು ಭಗವಂತನೆಡೆಗೊಯ್ಯುವ ಮಹಾಸಾಧನವಾಗುತ್ತದೆ. ಅದನ್ನು ಇಂದ್ರಿಯರೂಪರಾದ ಕಳ್ಳರಿಂದ ಮತ್ತೆ ಕದಿಯುವ 'ಕಲಾ'ವಂತರಾಗಲು ಭಗವಂತನಲ್ಲಿ ಭಕ್ತಿಯಿಂದ ಮೊರೆಯಿಡುವುದೊಂದೇ ಸುಲಭೋಪಾಯ. ಅದಕ್ಕಾಗಿ ನೃಸಿಂಹನಲ್ಲಿ ಪ್ರಾರ್ಥಿಸೋಣ.


ಸೂಚನೆ: 24/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ಜಗದ್ವ್ಯಾಪಿಯಾದ ಭಗವಂತನನ್ನು ಅರಿಯುವ ಬಗೆ (Jagadvyapiyada Bhagavantanannu Ariyuva Bage)

  • ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

    (ಪ್ರತಿಕ್ರಿಯಿಸಿರಿ lekhana@ayvm.in)



ಒಮ್ಮೆ ಭಕ್ತ ಶ್ರೇಷ್ಠರಾದ ಕನಕದಾಸರ ಗುರುಗಳಾದಂತಹ ವ್ಯಾಸರಾಜರು ಇತರ ಶಿಷ್ಯರಿಗೆ ಕನಕದಾಸರ ನಿಜ ಭಕ್ತಿಯ ಬಗ್ಗೆ ಅರಿವನ್ನು ಮೂಡಿಸಲು ಒಂದು ಪರೀಕ್ಷೆಯನ್ನು ಮಾಡಿದರು. ಎಲ್ಲಾ ಶಿಷ್ಯರಿಗೂ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಯಾರೂ ಕಾಣದಂತೆ ತಿನ್ನಿ ಎಂದರು. ಎಲ್ಲರೂ ತಿಂದು ಬಂದು ವರದಿ ಮಾಡಿದರು. ಆದರೆ ಕನಕರು ತಿಂದಿರಲಿಲ್ಲ. ಗುರುಗಳು ಕಾರಣ ಕೇಳಿದಾಗ, ಅವರು, ಯಾರೂ ಕಾಣದ ಜಾಗ ನಾನೆಲ್ಲಿ ಹುಡುಕಲಿ ಗುರುಗಳೇ, ದೇವರು ಎಲ್ಲೆಲ್ಲೂ ನೋಡುತ್ತಿದ್ದಾನೆ, ಎಂದರು. ಎಲ್ಲೆಡೆಯಲ್ಲಿ,  ಎಲ್ಲಾ ಚರಾಚರಗಳಲ್ಲಿ ದೇವರನ್ನು ಕಾಣುವ ಪರಮ ಜ್ಞಾನಿ ಕನಕದಾಸರು ಎಂಬುದು ಎಲ್ಲರಿಗೂ ತಿಳಿದಂತಾಯಿತು.

 ಕನಕದಾಸರಂತಹ ಅನೇಕ ಭಕ್ತರು, ಭಾಗವತೋತ್ತಮರು ಎಲ್ಲೆಲ್ಲಿಯೂ ತುಂಬಿರುವ ಭಗವದ್ಭಾವವನ್ನು ಅನುಭವಿಸಿ ಕೊಂಡಾಡಿರುವುದನ್ನು, ಕೊಂಡಾಡುತ್ತಿರುವುದನ್ನು ನೋಡುತ್ತೇವೆ, ಕೇಳುತ್ತೇವೆ. ಭಗವಂತನ ಶಕ್ತಿಯು ಅವನ ವಿಭೂತಿ (ಐಶ್ವರ್ಯ)ಯು ಎಲ್ಲೆಡೆಯೂ ತುಂಬಿದ್ದರೂ, ಎಲ್ಲರೂ ಭಗವಂತನ ಮಕ್ಕಳೇ ಆಗಿದ್ದರೂ ಕೂಡ ಅವನ ಅಸ್ತಿತ್ವ ಏಕೆ ಎಲ್ಲರ ಅರಿವಿಗೂ ಬರುವುದಿಲ್ಲ? ಭಗವದ್ರಸವನ್ನು ಎಲ್ಲರೂ ಏಕೆ ಅನುಭವಿಸಲು ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ.


ಇದಕ್ಕೆ ಉತ್ತರವನ್ನು  ಶ್ರೀರಂಗ ಮಹಾಗುರುಗಳು ಒಂದು ಸರಳವಾದ ಉದಾಹರಣೆಯ ಮೂಲಕ ನೀಡುತ್ತಿದ್ದರು. ಒಂದು ಚಿಕ್ಕ ಮಗುವಿಗೆ ಅತ್ಯಂತ ಸುಂದರಿಯ ವರ್ಣನೆ ಯಾವ ಬೋಧವನ್ನೂ ಕೊಡೋದಿಲ್ಲ. ಅದೇ ಒಬ್ಬ ತರುಣನ ಮುಂದೆ ಸುಂದರಿಯ ವರ್ಣನೆಯನ್ನು ಮಾಡಿದಾಗ, ಅವನ ಯೌವನಧರ್ಮವು ಜಾಗೃತವಾಗಿ ಆ ವರ್ಣನೆಗಳನ್ನು ಅತ್ಯಂತ ರುಚಿಯಿಂದ ಆಸ್ವಾದಿಸುವಂತೆ ಆಗುತ್ತದೆ. ಹಾಗೆಯೇ ಭಗವತ್ ತಾರುಣ್ಯ ಎಂಬುದು ಉಂಟಾದಾಗ ಭಗವದ್ವಿಷಯಕವಾದ ರುಚಿ ಹುಟ್ಟುತ್ತದೆ;  ಭಗವತ್ ಧರ್ಮಗಳೆಲ್ಲವೂ ಜಾಗೃತವಾಗಿ ಭಗವದ್ಭಾವವನ್ನು ಅನುಭವಿಸುವ ಹಾಗೆ, ಎಲ್ಲೆಲ್ಲಿಯೂ ಭಗವಂತನ ಆಸ್ತಿತ್ವವನ್ನು ಅರಿಯುವ ಹಾಗೆ ಆಗುತ್ತದೆ.


ಭಗವಂತನಿಂದ ಹೊರಟ ಪ್ರತಿ ಜೀವಿಯೂ ಪ್ರಕೃತಿಗೆ ಇಳಿದು ಮಾಯೆಯಿಂದ ಆವೃತವಾಗಿ, ಕರ್ಮ ಬಂಧನಕ್ಕೆ ಒಳಗಾಗಿರುವುದರಿಂದ ನಮ್ಮಲ್ಲಿ ಭಗವದ್ಧರ್ಮವೆಂಬುದು ಸುಪ್ತವಾಗಿರುತ್ತದೆ.  ಅದು ಜಾಗೃತವಾಗಲು ಪೂರ್ವ ಜನ್ಮದ ಸಂಸ್ಕಾರದ ಜೊತೆಗೆ ಮನೋಬುದ್ಧಿಗಳಿಗೆ ಸದ್ವಿಚಾರಗಳನ್ನು ನಿರಂತರವಾಗಿ ಕೊಟ್ಟು ಭಗವದ್ವಿಷಯಕವಾದ ವಿಚಾರಗಳನ್ನೂ ಹಾಗೂ ಭಾಗವತೋತ್ತಮರ ಕಥೆಗಳನ್ನು ಭಗವದ್ರಸವನ್ನು ತಮ್ಮಲ್ಲಿ ತುಂಬಿಕೊಂಡು ಅಂತೆಯೇ ಹೇಳುವವರಿಂದ ಶ್ರವಣಮಾಡಿದಾಗ ಕೇಳುಗರಲ್ಲಿಯೂ ಆ ರಸವು ಹರಿದು, ಭಕ್ತಿಯ ಉತ್ಕಟತೆ ಹೆಚ್ಚಾಗಿ ಭಗವಂತನ ಅಸ್ತಿತ್ವವನ್ನು ಎಲ್ಲೆಡೆಯೂ ಅನುಭವಿಸಿ ಆಸ್ವಾದಿಸಬಹುದು ಎಂಬುದು ಅನುಭವಿಗಳ ನೋಟ.


ಭಕ್ತಿಗೆ ಮನಸ್ಸು, ಬುದ್ಧಿ, ಇತ್ಯಾದಿ ಎಲ್ಲವನ್ನೂ ಹಂತ ಹಂತವಾಗಿ ಭಗವಂತನಲ್ಲಿ ಲಯಗೊಳಿಸಿ ಅಂತಿಮವಾಗಿ ಆತ್ಮವನ್ನೂ ಪರಮಾತ್ಮನಲ್ಲಿ ಒಂದುಗೂಡಿಸುವ ಶಕ್ತಿ ಇರುವುದರಿಂದ ಅದನ್ನು ಯೋಗವೆಂದೇ ಮಹಾತ್ಮರು ಪರಿಗಣಿಸಿದ್ದಾರೆ.


 "ಭಗವದ್ರಸವು ರಕ್ತಗತ, ಧಾತುಗತ ಅಂತೆಯೇ ಆತ್ಮಗತವೂ ಆಗಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ ಭಗವದ್ರಸವನ್ನು ನಮ್ಮಲ್ಲಿ ಸಂಪೂರ್ಣವಾಗಿ ತುಂಬಿಕೊಂಡು ಜಗದ್ವ್ಯಾಪಿಯಾದ ಭಗವಂತನ ಅಸ್ತಿತ್ವವನ್ನು ಅರಿತು ಅನುಭವಿಸಬೇಕಾಗಿದೆ.


ಸೂಚನೆ: 24/11/2022 ರಂದು ಈ ಲೇಖನವು ವಿಜಯ ವಾಣಿ ಯಲ್ಲಿ ಪ್ರಕಟವಾಗಿದೆ.  


ವ್ಯಾಸ ವೀಕ್ಷಿತ - 13 ಏಕಚಕ್ರನಗರ – ಬ್ರಾಹ್ಮಣನ ಬಾಧೆ (Vyaasa Vikshita 13 Ekachakranagara - Brahmanana Badhe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಪಾಂಡವರಿಗೆ ವ್ಯಾಸರು ಹೇಳಿದರು. "ನಿಮಗೆ ಹಿತವಾದುದನ್ನು ಸ್ನೇಹಪೂರ್ವಕವಾಗಿ ಹೇಳುತ್ತಿದ್ದೇನೆ, ಕೇಳಿ. ಬಳಿಯಿರುವ ನಗರವು ಸುಂದರವಾಗಿದೆ, ಅಲ್ಲಿ ರೋಗರುಜಿನಗಳಿಲ್ಲ. ಅಲ್ಲಿ ನೀವು ಮರೆಮಾಚಿಕೊಂಡಿರಬಹುದು. ಕುಂತಿಯೇ, ನಿನ್ನ ಮಗ ಯುಧಿಷ್ಠಿರನು ಧರ್ಮಿಷ್ಠ: ಮುಂದೆ ಭೂಮಿಯನ್ನಾಳುವನು; ಎಲ್ಲ ರಾಜರನ್ನೂ ಆಳುವನು ಕೂಡ. ಆತನಿಗೆ ಭೀಮಾರ್ಜುನರ ಬಲವು ಒದಗಿಬರುತ್ತದೆ. ನಿನ್ನ ಮಕ್ಕಳೂ ಮಾದ್ರಿಯ ಮಕ್ಕಳೂ ಸ್ವರಾಷ್ಟ್ರದಲ್ಲಿ ಮೆರೆಯುವರು, ರಾಜಸೂಯ-ಅಶ್ವಮೇಧಗಳನ್ನು ಮಾಡುವರು!"

 

ಇಷ್ಟು ಹೇಳಿ, ಈ ಏಕಚಕ್ರನಗರಿಯಲ್ಲಿ ಬ್ರಾಹ್ಮಣನೊಬ್ಬನ ಮನೆಯಲ್ಲಿರಲು ಪಾಂಡವರಿಗೆ ಹೇಳಿದರು. "ಇಲ್ಲೊಂದು ತಿಂಗಳನ್ನು ಕಳೆಯಿರಿ, ಅಷ್ಟರಲ್ಲಿ ಹಿಂದಿರುಗಿಬರುವೆ", ಎಂದರು.

 

ಬ್ರಾಹ್ಮಣಕುಟುಂಬದೊಂದಿಗೆ ಪಾಂಡವರ ವಾಸ ಆರಂಭವಾಯಿತು. ಭಿಕ್ಷಾಟನೆಯನ್ನೂ ಮಾಡಿದರು. ತಮ್ಮ ಗುಣಗಳಿಂದಾಗಿ ಸುತ್ತಮುತ್ತಲಿನ ಮಂದಿಗೆ ಅಚ್ಚುಮೆಚ್ಚಾದರು. ಅವರು ಬೇಡಿತಂದ ಭಿಕ್ಷೆಯನ್ನು ಕುಂತಿಯು ಎಲ್ಲರಿಗೂ ಹಂಚುವಳು: ಮಹಾಬಲನಾದ ಭೀಮನಿಗರ್ಧ, ಉಳಿದೆಲ್ಲವರಿಗಿನ್ನರ್ಧ (ಅರ್ಧಂ ಸರ್ವಸ್ಯ ಭಿಕ್ಷಸ್ಯ ಭೀಮೋ ಭುಂಕ್ತೇ ಮಹಾಬಲಃ!).

 

ಸಾಕಷ್ಟು ಕಾಲ ಕಳೆಯಿತು. ಒಮ್ಮೆ ಎಲ್ಲರೂ ಭಿಕ್ಷೆಗೆಂದು ಹೋಗಿದ್ದರು. ಕುಂತಿಯೊಂದಿಗೆ ಭೀಮನು ಏನೋ ಕೆಲಸದ ನಿಮಿತ್ತ ಉಳಿದುಕೊಂಡಿದ್ದ. ಆಗ ಬ್ರಾಹ್ಮಣನ ಮನೆಯಲ್ಲಿ ಅದೇನೋ ಘೋರವಾದ ಆರ್ತನಾದವನ್ನು ಕುಂತಿಯು ಕೇಳಿಸಿಕೊಂಡಳು. ಅವರ ಅಳು-ಗೋಳಾಟಗಳನ್ನು ಕೇಳಲಾಗಲಿಲ್ಲ, ಕುಂತಿಗೆ. ಹೃದಯದಲ್ಲಿ ಮಥನವಾಗುತ್ತಿದ್ದ ಆ ದುಃಖದಿಂದಾಗಿ, ಶುಭಮನಸ್ಕಳಾದ ಕುಂತಿ ಭೀಮನಿಗೆ ಹೇಳಿದಳು, "ಮಗನೇ, ನಾವೀ ಬ್ರಾಹ್ಮಣನ ಮನೆಯಲ್ಲಿ ಸುಖವಾಗಿದ್ದೇವಪ್ಪಾ: ದುರ್ಯೋಧನನ ಕಡೆಯವರಿಗೆ ಅರಿವಾಗದಂತೆ ಉಳಿದುಕೊಂಡಿದ್ದೇವೆ. ಎಂದೇ ನನಗೊಂದು ಚಿಂತೆ: ಈ ಬ್ರಾಹ್ಮಣನಿಗೆ ಹೇಗಾದರೂ ಉಪಕರಿಸಬೇಕು. ಮತ್ತೊಬ್ಬರ ಮನೆಯಲ್ಲಿ ಸುಖವಾಗಿರುವವರು, ಆ ಮನೆಯ ಯಜಮಾನನಿಗೆ ಪ್ರಿಯವಾಗುವಂತೆ ಏನು ಮಾಡುವರೋ ಅದನ್ನು ಮಾಡಬೇಕು. ಮಾಡಿದ ಉಪಕಾರ ಯಾರಲ್ಲಿ ನಾಶಹೊಂದದೋ ಆತನೇ ನಿಜವಾದ ಮನುಷ್ಯ. (ಏತಾವಾನ್ ಪುರುಷಃ ತಾತ! ಕೃತಂ ಯಸ್ಮಿನ್ ನ ನಶ್ಯತಿ). ನಮಗೆ ಯಾರಾದರೂ ಏನಾದರೂ ಉಪಕಾರವನ್ನು ಮಾಡಿದರೆಂದುಕೋ. ಅದಕ್ಕಿಂತಲೂ ಹೆಚ್ಚಾಗಿ ನಾವು ಪ್ರತ್ಯುಪಕಾರವನ್ನು ಮಾಡಬೇಕು (ಯಾವಚ್ಚ ಕುರ್ಯಾದ್ ಅನ್ಯೋಽಸ್ಯ ಕುರ್ಯಾದ್ ಅಭ್ಯಧಿಕಂ ತತಃ). ಇದೋ ಈ ಬ್ರಾಹ್ಮಣನಿಗೆ ಅದೇನೋ ದುಃಖವು ಬಂದೊದಗಿದೆ. ಈತನಿಗೇನಾದರೂ ನಾನು ಸಹಾಯವನ್ನು ಮಾಡಲಾಗುವುದಾದರೆ ಒಂದುಪಕಾರಮಾಡಿದಂತಾಗುತ್ತದೆ" - ಎಂದಳು.

 

ಅದಕ್ಕೆ ಭೀಮಸೇನನು, "ಸರಿ, ಈತನ ದುಃಖವಾವುದು? ಉಂಟಾದುದು ಹೇಗೆ? ಇದನ್ನರಿತು ಯತ್ನಿಸುತ್ತೇನೆ. ಅದು ಸುದುಷ್ಕರವಾದರೂ (ಎಂದರೆ ಬಹುಕಷ್ಟಸಾಧ್ಯವಾದದ್ದಾದರೂ) ಪರವಾಗಿಲ್ಲ" ಎಂದನು.

 

ಆ ಬ್ರಾಹ್ಮಣನ ಹಾಗೂ ಆತನ ಪತ್ನಿಯ ಅಳುವಿನ ಧ್ವನಿಯನ್ನು ಇಬ್ಬರೂ ಆಗ ಕೇಳಿಸಿಕೊಂಡರು. ಆಗಲಾ ಕುಂತಿಯು ಆ ಬ್ರಾಹ್ಮಣನ ಮನೆಯೊಳಗೆ ತ್ವರೆಯಿಂದ ಪ್ರವೇಶ ಮಾಡಿದಳು- ಕರುವನ್ನು ಕಟ್ಟಿಹಾಕಿಬಿಟ್ಟಿದ್ದಾಗ ಹಸುವು ಅದರತ್ತ ಓಡುವಂತೆ! ಹೆಂಡತಿ-ಮಗ-ಮಗಳು ಇವರುಗಳೊಂದಿಗೆ ತಲೆತಗ್ಗಿಸಿ ನಿಂತಿದ್ದ ಬ್ರಾಹ್ಮಣನನ್ನು ಕಂಡರು.

 

ಬ್ರಾಹ್ಮಣನು ಗೋಳಾಡುತ್ತಿದ್ದನು. "ಈ ಲೋಕದಲ್ಲಿದೇನು ಜೀವಿತವಪ್ಪಾ! ಪರಾಧೀನವೆಂಬುದು ದುಃಖಕ್ಕೆ ಮೂಲ, ಅತ್ಯಂತ ಅಪ್ರಿಯವಾದದ್ದು. ಬದುಕಿರುವುದೇ ಬಲು ದುಃಖ (ಜೀವಿತೇ ಪರಮಂ ದುಃಖಂ). ಯಾರು ಬದುಕಿರುತ್ತಾರೋ ಅವರಿಗೆ ದುಃಖವೆಂಬುದು ಖಚಿತವಾದದ್ದು!" 


ಸೂಚನೆ : 20/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.




ಅಷ್ಟಾಕ್ಷರೀ​ - 23 ದಶಕಂ ಧರ್ಮಲಕ್ಷಣಮ್ (Astakshara Darshana 23 Dashakam Dharma-lakshanam)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಮಾವಿನ ಹಣ್ಣನ್ನುಕೊಳ್ಳಲು ಹಣ್ಣಿನಂಗಡಿಗೆ ಹೋಗುತ್ತೇವೆ. ಹಣ್ಣು ಕೊಂಡುಕೊಳ್ಳುವ ಮುಂಚೆ ಮಾಲು ಹೇಗಿದೆಯೆಂಬ ಲೆಕ್ಕ ಬೇಕಾಗುವುದಲ್ಲವೆ? ಅದರ ಬಣ್ಣ ಮೊದಲ ಅಳತೆ. ಕೊಳೆಯಲಾರಂಭಿಸಿದ್ದರೆ ಇರುವ ಬಣ್ಣವೇ ಬೇರೆ. ಇನ್ನೂ ಕಾಯಿಕಾಯಿಯಾಗಿದ್ದರೆ ಇರುವ ಬಣ್ಣವೇ ಬೇರೆ. ಕೆಲವೊಮ್ಮೆ ದೋರುಗಾಯಿಗೆ ಸಹ ಒಳ್ಳೆಯ ಬಣ್ಣ ಬಂದಿರುವುದುಂಟು! ಎಂದೇ ಬರೀ ಬಣ್ಣವೊಂದೇ ಅಳತೆಯೇ? ಹೊಳಪೂ ಮುಖ್ಯವಾಗುತ್ತದೆ. ರಸ್ಯವಾದ ಹಣ್ಣಿನ ಕಾಂತಿಯೇ ಬೇರೆ. ಚರ್ಮವು ಸುಕ್ಕುಗಟ್ಟುತ್ತಿವರುವ ಫಲದ ಪರಿಯೇ ಬೇರೆ. ಸ್ಪರ್ಶದಿಂದಲೂ ತಿಳಿಯುವ ಅಂಶಗಳುಂಟು. ಮೃದುವೇ, ಅಲ್ಲವೆ? ಅಲ್ಲೂ ಏಕರೂಪವಾದ ಮೃದುತ್ವವೇ, ಅಲ್ಲಲ್ಲಿ ಸ್ವಲ್ಪ ಗಟ್ಟಿಯಾಗಿದೆಯೇ? - ಎಂದೆಲ್ಲಾ ನೋಡುವುದುಂಟು. ಹಾಗೆಯೇ ಅದರ ಸುಗಂಧವನ್ನೂ. ಹೀಗೆ ದರ್ಶನ-ಸ್ಪರ್ಶನ-ಘ್ರಾಣಗಳಿಂದ ಮೊದಲಳೆದುಕೊಂಡದ್ದು ಸರಿಯೋ ಇಲ್ಲವೋ ಎಂಬುದನ್ನು ಹಣ್ಣನ್ನು ಆಸ್ವಾದಿಸುವಾಗಿನ ರುಚಿಯೂ, ಆಮೇಲಿನ ಜೀರ್ಣಕ್ರಿಯೆಯೂ ಖಚಿತಪಡಿಸುತ್ತವೆ.


ಹೀಗೆ ಕೆಲವು ಬಾಹ್ಯಲಕ್ಷಣಗಳನ್ನು ಆಧರಿಸಿ ಒಳಗಣ ಸತ್ತ್ವದ ಬಗೆಯನ್ನು ಅರಿಯುವುದಾಗುತ್ತದೆ. ಕಣ್ಣಿಗೆ ಕಾಣುವ ಒಂದು ಹಣ್ಣು ಚೆನ್ನಾಗಿದೆಯೇ ಇಲ್ಲವೇ? - ಎಂಬುದಕ್ಕೇ ಹೀಗೆ ನಾನಾಪರೀಕ್ಷೆಗಳಾಗುವಲ್ಲಿ, ಕಣ್ಣಿಗೆ ಕಾಣದ ಧರ್ಮವೆಂಬುದು ಹೇಗಿರುವುದೆಂಬುದನ್ನು ಅಳೆದುಕೊಳ್ಳಲೂ ನಾನಾಲಕ್ಷಣಪರಿಜ್ಞಾನವು ಬೇಕಷ್ಟೆ. ಅಂತಹ ಹತ್ತು ಲಕ್ಷಣಗಳನ್ನು ಮನುವು ಉಲ್ಲೇಖಿಸುತ್ತಾನೆ. ಅವಿವು: ಧೃತಿ, ಕ್ಷಮೆ, ದಮ, ಅಸ್ತೇಯ, ಶೌಚ, ಇಂದ್ರಿಯನಿಗ್ರಹ, ಧೀ, ವಿದ್ಯೆ, ಸತ್ಯ, ಮತ್ತು ಅಕ್ರೋಧ.


ಇವಲ್ಲಿ ಕೆಲವು ಪದಗಳು ಪ್ರಸಿದ್ಧ; ಕೆಲವು ಭಾಗಶಃ ಸ್ಪಷ್ಟ. ಆದ್ದರಿಂದ ಅವನ್ನು ಸಂಕ್ಷೇಪವಾಗಿಯಾದರೂ ಒಮ್ಮೆ ಅವಲೋಕಿಸುವುದು ಅವಶ್ಯವಾಗುವುದು. ಕುಲ್ಲೂಕಭಟ್ಟನ ವ್ಯಾಖ್ಯೆಯ ಮೇರೆಗೆ ಇಲ್ಲಿ ವಿವರಣೆಯಿತ್ತಿದೆ.


ಧೃತಿಯೆಂದರೆ ಸಂತೋಷ. ಹಿಡಿದ ಕೆಲಸವನ್ನು ಮುಗಿಯುವವರೆಗೆ ಬಿಡದಿರುವ ಮನಃಸ್ಥಿತಿಯು ಧೃತಿಯಷ್ಟೆ. ಆದರದು ಏನೋ ಒಣಕಲು ಹಠಮಾರಿತನವೆನಿಸದೆ, ಸತ್ಕಾರ್ಯವನ್ನು ಸಸಂತೋಷವಾಗಿಯೇ ಸಾಧಿಸುವುದರ ಸುಲಕ್ಷಣವಿದು. ಕ್ಷಮೆಯೆಂದರೆ ಸಹನೆ: ನಮಗಾರಾದರೂ ಅಪಕಾರವೆಸಗಿದಾಗಲೂ ಅವರಿಗೆ ಪ್ರತ್ಯಪಕಾರ ಮಾಡದಿರುವುದು; ಹಾಗಾಗಲು ಮನಸ್ಸಿನ ಸಮಾಧಾನವೆಂಬುದು ಎಷ್ಟು ಆಳವಾಗಿರಬೇಕಾಗುತ್ತದೆಯೆಂದರೆ, ಅಪಕಾರಿಗೆ ಪ್ರತೀಕಾರ ಮಾಡಬೇಕೆಂಬ ಮತಿಯೇ ಜನಿಸದಿರುವಷ್ಟು!


ದಮವೆಂದರೆ ಮನಸ್ಸಿನ ಮೇಲಿನ ಹಿಡಿತ. ಹಿಡಿತದ ಕೆಡುವಿಕೆಯು ವಿಕಾರ; ವಿಕಾರಕ್ಕೆ ಕಾರಣವು ವಿಕಾರಹೇತು. ವಿಕಾರಹೇತುವಿದ್ದಾಗಲೂ ವಿಕಾರವೇರ್ಪಡದಿರುವುದು ದಮ. ಅಸ್ತೇಯವೆಂದರೆ ಕದಿಯದಿರುವಿಕೆ. ಮತ್ತೊಬ್ಬರ ಸೊತ್ತನ್ನು ನ್ಯಾಯಕ್ಕೆ ಹೊಂದದ ರೀತಿಯಲ್ಲಿ ಪಡೆದುಕೊಳ್ಳುವುದು ಸ್ತೇಯ; ಹಾಗಿಲ್ಲದಿದ್ದಲ್ಲಿ ಅದು ಅಸ್ತೇಯ. ಶೌಚವೆಂದರೆ ಶಾಸ್ತ್ರವಿಹಿತವಾದ ರೀತಿಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವಿಕೆ; ವಿಶೇಷತಃ ದೇಹಶುದ್ಧಿ.


ಇಂದ್ರಿಯನಿಗ್ರಹವೆಂದರೆ ಇಂದ್ರಿಯಗಳನ್ನು ತಡೆಯುವಿಕೆ. ಇಂದ್ರಿಯಗಳು ನಾನಾವಿಷಯಗಳನ್ನು ಬಯಸುತ್ತಲೇ ಇರುವುವು. ಅವುಗಳು ಬಯಸಿದ್ದೆಲ್ಲವೂ ಯುಕ್ತವೆಂದೇನಲ್ಲ; ಆದುದರಿಂದ ಇಂದ್ರಿಯಗಳನ್ನು ಅಕಾರ್ಯಗಳಲ್ಲಿ ತೊಡಗಲು ಬಿಡದಿರುವುದು ಇಂದ್ರಿಯನಿಗ್ರಹವೆನಿಸುತ್ತದೆ. ಧೀ ಎಂದರೆ ಬುದ್ಧಿಯೆಂದೇ ಪ್ರಸಿದ್ಧಾರ್ಥ; ಆದರಿಲ್ಲಿ ಶಾಸ್ತ್ರಗಳ ತತ್ತ್ವಜ್ಞಾನ ಎಂಬ ಅರ್ಥ. ಇನ್ನು ವಿದ್ಯೆಯೆಂದರೆ ಆತ್ಮಜ್ಞಾನವೇ. ಸತ್ಯವೆಂದರೆ ಯಥಾರ್ಥವನ್ನು, ಎಂದರೆ ಇರುವುದನ್ನು ಇರುವಂತೆಯೇ, ನುಡಿಯುವುದು. ಅಕ್ರೋಧವೆಂದರೆ, ಕ್ರೋಧಕ್ಕೆ ಕಾರಣವಿದ್ದಾಗಲೂ ಕೋಪವು ಉಂಟಾಗದಿರುವಿಕೆ.  ಈ ಹತ್ತಲ್ಲಿ ಹಲಕೆಲವು ಪರಸ್ಪರ ಹತ್ತಿರವೇ ಸರಿ. ಆದರೂ ಇವೆಲ್ಲವೂ ಸಹಜವಾಗಿ ಸಮಗ್ರವಾಗಿ ಹದವಾಗಿ ಸೇರಿರುವ ಒಳತಿರುಳೇ ಧರ್ಮ.


ಮೇಲೆ ಹೇಳಿದ ಹತ್ತಂಶಗಳಲ್ಲಿ ಒಂದೊಂದರಿಂದಲೂ ಮನುಷ್ಯನು ಸಾಕಷ್ಟು ಉದ್ಧಾರವಾಗಬಲ್ಲನು. ಉದ್ಧಾರವೆಂಬುದಕ್ಕೆ ಎರಡು ಅರ್ಥಗಳು: ಕೆಳಗೆ ಬಿದ್ದವನನ್ನು ಮೇಲೆತ್ತುವುದು ಎಂಬುದೊಂದು (ಉತ್+ಹಾರ). ಹಾಗೆಯೇ ಮೇಲಿರುವವನು ಕೆಳಗೆ ಬೀಳದಂತೆಯೂ ಜಾರದಂತೆಯೂ ಹಿಡಿದುಕೊಂಡಿರುವುದು (ಉತ್+ಧಾರ). ಶ್ರೀರಂಗಮಹಾಗುರುಗಳ ಕಲಶಪ್ರಾಯವಾದ ಸಾರೋಕ್ತಿ: "ಬಿದ್ದವನನ್ನು, ಬೀಳುತ್ತಿರುವವನನ್ನು, ಬೀಳುವವನನ್ನು ಮೇಲೆತ್ತುವುದೇ ಧರ್ಮ." ಹೀಗೆ ಇಂದೂ ಮುಂದೂ ಎಂದೂ ಕಾಪಾಡುವುದು ಧರ್ಮವೇ.


ಮತ್ತೊಂದು ವಿಷಯ. ಇವುಗಳೆಲ್ಲವನ್ನೂ ಮನುವು ಹೇಳಿರುವುದು ವಿಶೇಷವಾಗಿ ಬ್ರಾಹ್ಮಣನಿಗಾಗಿ. ಕ್ಷತ್ರಿಯನೇನಾದರೂ ಕ್ಷಮೆ-ಅಕ್ರೋಧಗಳನ್ನು ಅತಿಯಾಗಿ ಅಳವಡಿಸಿಕೊಂಡಲ್ಲಿ ದೇಶರಕ್ಷಣೆ-ಧರ್ಮರಕ್ಷಣೆಗಳನ್ನೆಂತು ಮಾಡಿಯಾನು? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರಿಂದಲೇ, ಹಿಂದುಗಳು ಹೆಜ್ಜೆ ಹೆಜ್ಜೆಗೂ ಸೋಲನುಭವಿಸುವಂತಾಯಿತು, ತುರುಷ್ಕರ ಆಕ್ರಮಣದ ಕಾಲದಿಂದಲೂ.


ಸಂನ್ಯಾಸಿಗೆ ಮಾತ್ರವೇ ಸಲ್ಲತಕ್ಕ ಹಲವು ನಿಯಮಗಳನ್ನು ದೇಶವನ್ನಾಳುವವರಿಗೂ ಅನ್ವಯಿಸಹೊರಟ ಮಹಾತ್ಮಾಗಾಂಧಿಯವರು ಭಾರತೀಯಸಂಸ್ಕೃತಿಯ ಮರ್ಮವನ್ನರಿತವರೆಂದು ಹೇಳುವುದು ಮೇಲಿನ ಹಿನ್ನೆಲೆಯಲ್ಲಿ ಸ್ವಲ್ಪ ಕಷ್ಟವೇ ಸರಿ!

ಸೂಚನೆ:  20/11/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Friday, November 18, 2022

ಜೀವನಾರಂಭದಲ್ಲೇ ವಿದ್ಯಾರಂಭ (Jivanarambhadalle Vidyarambha)

 ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ರಾಷ್ಟ್ರ ಕವಿ ಕಾಳಿದಾಸನು ರಘುವಂಶದ ರಾಜರ ಜೀವನಕ್ರಮವನ್ನು ವರ್ಣಿಸುತ್ತಾನೆ. ಅವರು ಬಾಲ್ಯದಲ್ಲಿ ಸಮಸ್ತ ವಿದ್ಯೆಗಳ ಅಭ್ಯಾಸ ಮಾಡಿ, ಯೌವನದಲ್ಲಿ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು;  ವೃದ್ಧಾಪ್ಯದಲ್ಲಿ ಮುನಿವೃತ್ತಿ-ಬ್ರಹ್ಮಚಿಂತನೆ;  ಕಡೆಯಲ್ಲಿ ಯೋಗದಿಂದ ತಮ್ಮ ದೇಹವನ್ನು ತ್ಯಜಿಸುತ್ತಿದ್ದರು -ಎಂಬುದು ಸಾರಾಂಶ. ಶ್ರೀರಂಗ ಮಹಾಗುರುಗಳು ಈ ಮಾತು ಕೇವಲ ರಘುವಂಶದ ರಾಜರಿಗೆ ಮಾತ್ರವಲ್ಲದೇ ಇಡೀ ಮನುಜಕುಲಕ್ಕೆ ಆದರ್ಶವಾಗಿದೆ ಎನ್ನುತ್ತಿದ್ದರು. ರಘುವಂಶದ ಅರಸರು ಶೈಶವದಲ್ಲಿಯೇ ಜೀವನಕ್ಕೆ ಸಂಬಂಧಿಸಿದ ಸಮಸ್ತ ವಿದ್ಯೆಗಳನ್ನೂ ಅಭ್ಯಾಸ ಮಾಡುತ್ತಿದ್ದರು. ವಿದ್ಯೆ ಎಂದರೆ ಯಾವುದು ನಮ್ಮನ್ನು ಬಂಧನಗಳಿಂದ ಬಿಡಿಸುತ್ತದೆಯೋ ಅದೇ ಎಂಬ ವ್ಯಾಖ್ಯೆ ಇದೆ(ಯಾ ವಿದ್ಯಾ ಸಾ ವಿಮುಕ್ತಯೇ). ಭಾರತೀಯವಾದ ಎಲ್ಲಾ ವಿದ್ಯೆಗಳ ಮೂಲವೂ ಒಳ ಬೆಳಗುವ ಪರಂಜ್ಯೋತಿಯೇ ಆಗಿದೆ. ಅಲ್ಲಿಂದಲೇ ವಿದ್ಯೆಗಳೆಲ್ಲ ಅರಳಿವೆ. ಆ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಹೋದಾಗ ಅದು ತನ್ನ ವಿಕಾಸದ ಹೆಜ್ಜೆಗಳಲ್ಲೆಲ್ಲಾ ಪರಮ ಆನಂದದ ಪರಿಮಳವನ್ನು ನೀಡಿ ಕೊನೆಯಲ್ಲಿ ಮತ್ತೆ ನಮ್ಮನ್ನು ನಮ್ಮ ಮೂಲ ನೆಲೆಯಾದ ಪರಮ ಶಾಂತಿಯಲ್ಲೇ ನಿಲ್ಲಿಸುತ್ತವೆ ಎಂಬುದು ಜ್ಞಾನಿಗಳ ಅನುಭವದ ಮಾತು. ಇಂತಹ ವಿದ್ಯಾಭ್ಯಾಸವೇ ನಮ್ಮ ಪ್ರಾಚೀನ ಗುರುಕುಲಗಳಲ್ಲಿ ನಡೆಯುತ್ತಿದ್ದುದು. ಅಂತಹ ವಿದ್ಯೆಗಳ ಪ್ರಯೋಜನವು ಜೀವನದ ಎಲ್ಲಾ ಹಂತಗಳಲ್ಲೂ ಆದಾಗ ಜೀವನ ಸರ್ವಾಂಗ ಸುಂದರ. ಆ ವಿದ್ಯೆಯ ಬಲದ ಮೇಲೆಯೇ ರಘುವಂಶದ ರಾಜರು ಯೌವನದಲ್ಲಿ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು. ವಿದ್ಯೆಯಿಲ್ಲದೇ ವಿಷಯ ಸುಖಗಳನ್ನು ಅನುಭವಿಸುವುದಾದರೆ ಅವುಗಳಿಂದ ದುಃಖವೇ ಹೆಚ್ಚಾಗುವ ಸಂಭವವಿರುತ್ತದೆ. ಹೊಟ್ಟೆ ಹಸಿವಾಯಿತೆಂದು ಕಂಡದ್ದೆಲ್ಲಾ ತಿಂದರೆ ಹಸಿವೇ ಹುಟ್ಟದ ಅಜೀರ್ಣ ಸ್ಥಿತಿ ಬರಬಹುದು. ಇಂದ್ರಿಯ ಸುಖಗಳೆಲ್ಲವೂ ಹೀಗೆಯೇ. ಅದು ಎಲ್ಲಿಂದ ಆರಂಭಿಸಿ ಎಲ್ಲಿ ಮುಗಿಸಬೇಕೆಂದು ತಿಳಿಯದಿದ್ದಾಗ ದುಃಖ, ರೋಗ ರುಜಿನಗಳಲ್ಲಿ ಪರ್ಯವಸಾನವಾಗುತ್ತದೆ. ಒಳಗಿನ ಆತ್ಮ ಸುಖಕ್ಕೆ ಅವಿರೋಧವಾಗಿ ಇಂದ್ರಿಯ ಸುಖವನ್ನು ಅನುಭವಿಸಲು ವಿದ್ಯೆಯ ಸಹಾಯ ಬೇಕು. ಅದನ್ನು ಜೀವನದ ಆರಂಭದಲ್ಲೇ ಅಭ್ಯಾಸ ಮಾಡುವುದೂ ಅತ್ಯಂತ ಮುಖ್ಯ. ಇಂತಹ ವಿದ್ಯೆಯು ನಮಗೆ ಜೀವನದಲ್ಲಿ ಸಾರ-ಅಸಾರಗಳ ವಿವೇಕವನ್ನು ಕೊಡುತ್ತದೆ. ಅಂತಹ ವಿವೇಕದಿಂದಲೇ ವಾರ್ಧಕ್ಯದಲ್ಲಿ, ಕ್ಷಣಿಕವಾದ ಇಂದ್ರಿಯ ಸುಖಗಳ ಹಿಂದೆ ಓಡದೇ, ಸಾರಭೂತವಾದ,  ಆತ್ಯಂತಿಕವಾದ ಒಳಸುಖದೆಡೆಗೆ ಮನಸ್ಸನ್ನು ಹರಿಸಲು ಸಾಧ್ಯವಾಗುತ್ತದೆ. ಇಂತಹ ಸಾರ್ಥಕವಾದ ಜೀವನವನ್ನು ಸರ್ವಾಂಗ ಸುಂದರವಾಗಿ ನಡೆಸಿದ ನಂತರ ಯೋಗದ ಸಹಾಯದಿಂದ ರಘುವಂಶದ ದೊರೆಗಳು ಶರೀರವನ್ನು ತ್ಯಾಗಮಾಡುತ್ತಿದ್ದರು. ಮಾಗಿದ ಹಣ್ಣೊಂದು ತಾನಾಗಿ ತೊಟ್ಟನ್ನು ಕಳಚಿ ಬೀಳುವಂತೆ.

ಈಗಿನ ನಮ್ಮ ತಥಾಕಥಿತ ವಿದ್ಯಾಭ್ಯಾಸವೆಲ್ಲವೂ ಧನ ಸಂಪಾದನೆಗಷ್ಟೇ ಸೀಮಿತ. ಸಂಪಾದಿಸಿದ ಹಣದಲ್ಲಿ ಇಂದ್ರಿಯ ಸುಖಗಳ ಹಿಂದೆ ಕೊನೆ ಮೊದಲಿಲ್ಲದ ಓಟ. ಜೀವನದ ನೆಮ್ಮದಿಯ ವಿಷಯ ಇಲ್ಲವಾಗಿದೆ. ಭಾರತೀಯ ವಿದ್ಯೆಗಳ ಅಭ್ಯಾಸವನ್ನು ಬಾಲಕನೊಬ್ಬ ಮಾಡಲು ತೊಡಗಿದರೆ ದೊಡ್ದವರೇ –ಈಗ ಅದೆಲ್ಲಾ ಏಕಪ್ಪಾ, ಅದೆಲ್ಲ ಕಣ್ಣು ಮಂಜಾದಾಗ, ಕೈಕಾಲುಗಳು ಶಕ್ತಿಹೀನವಾದಾಗ, ಕಡೆಗಾಲದಲ್ಲಿ ಮಾಡಬೇಕಾದವು ಎನ್ನುವ ಪರಿಸ್ಥಿತಿ ಇದೆ. ಭಾರತೀಯ ವಿದ್ಯೆಗಳ ಅರಿವಿನ ನ್ಯೂನತೆಯೇ ಇದಕ್ಕೆ ಕಾರಣ. ರಘುವಂಶದ ರಾಜರ ಉದಾತ್ತ, ನೆಮ್ಮದಿಯ ಜೀವನವನ್ನು ನಮ್ಮ ಜೀವನಾದರ್ಶವಾಗಿ ಇಟ್ಟುಕೊಳ್ಳುವ ಸದ್ಬುದ್ಧಿಯನ್ನು ಭಗವಂತ ನಮಗೆಲ್ಲ ಕರುಣಿಸಲಿ.

ಸೂಚನೆ:21/10/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ. 

ஸ்ரீகுருவின் கண்ணோட்டம் - 29 சிற்பத்தை காண தேவையான கண்ணோட்டம் (Chirpattai kaana tevaiyaana kannottam)

 மூலம்: திரு சாயாபதி

தமிழாக்கம்: திருமதி ஜானகி
மின்னஞ்சல் : (lekhana@ayvm.in)



 ஓர் சிற்பத்தை மக்கள் வெவ்வேறு விதமாக காண்பதுண்டு. அதை காணவேண்டிய சரியான கண்ணோட்டத்தை  எடுத்துக்காட்டுவதற்காக ஶ்ரீரங்க மஹாகுரு அளித்த விளக்கமிது.

              மைசூர் நகரத்தில் கிருஷ்ணராஜ வ்ருத்தம் எனும் ஓர் நாற்சந்தியில்  நால்வடி கிருஷ்ணராஜ ஒடயர் எனும் ஒரு புகழ்பெற்ற அரசரின் உருவம் செதுக்கப்பட்டுள்ளது. பளிங்கு சிலையில் செதுக்கபட்ட அச்சிற்பத்தை காணும்போது அவ்வரசனை நேரில் காணும் அனுபவத்தை அளிக்கும் வகையில் மிகவும் அழகுடன் கூடியதாக விளங்குகிறது.

              'அங்கு செதுக்க பட்ட மீசை எத்துணை அழகு?",  'அதில் காணப்படும் ராஜ கம்பீரத்தை பார்" என்பவர் சிலர்.  ஒவ்வொரு அவயவத்தின் அழகையும் கண்டு ரசிக்கும் மக்கள் சிலர்.

அங்கே அரசருக்கே உரிய உடை,  அவர் கத்தியை பிடித்துள்ள தோரணை முதலியனவற்றை ரசிப்பவர் பலர். இவ்வாறு அனைவரும் சிற்பத்தின் அழகை புகழ்ந்துபேசுபவர்களே.

              ஆனால் அந்த அரசனுடன் சேர்ந்து வாழ்ந்த  அரசி அச்சிற்பத்தை கண்டவுடன் தான் அவனுடன் வாழ்ந்த  இனிய நாட்களுக்கே சென்று விடுகிறாள். அந்த இனிய நினைவுகளின்பால் மட்டுமே மனம் செல்கிறது. வெளியே காணப்படும் சிற்பத்தின் அழகு,தோரணை, அவயங்களின் மெருகு, உடையலங்காரம் முதலியவைகளை மனம் நாடுவதில்லை.  இனிய நினைவுகளால் ஆட்கொள்ளப்பட்டு வெளிஉணர்வின்றி  சிற்பத்தை அணைத்துக் கொள்கிறாள். உள்ளம் கரைகிறது. அவளுக்கு அது சிற்பமல்ல. உயிருள்ள உருவம்.

                அவ்வாறே ஓர் தெய்வசிற்பத்தை காணும் போது அதன் உள்ளழகை அறியாதவர் மனம் அதன்  ஆபரணங்களின் மெருகு, உடையலங்காரம், தோரணை முதலானவற்றில் மட்டுமே அலைகிறது.

                  ஆனால் தெய்வச்சிலை  எந்த உள்உறையும் சக்தியின் ப்ரதிநிதியாக உள்ளதோ அவ்வுள்அனுபவத்தை அடைந்த ஞானிகள் அதை கண்டவுடனே இதயத்தில் கண்ட சத்தியத்தின் பால் அவர்கள் மனம் தாவுகிறது. வெளிப்பார்வைக்கு காணப்படும் எந்த அழகிலும் மனம் செல்லாது தாம் அனுபவித்த  இறைஉணர்வில் மனம்ஒன்றி பரமானந்தத்தில் லயிக்கிறார்கள். ஆனந்த கண்ணீர் சொறிந்து, உடல் சிலிர்த்து நிற்கிறார்கள். அந்த மெய்பொருளின்பால் ஈர்ப்பதற்கே இந்த சிற்பம். தன் உள்உரையும் இறைவனிடம் இணைந்து அதற்கு வழிகாட்டும் ஞானிகள்தான் சிற்பங்களின் உண்மையை உணர்த்த முடியும். அவர்களுக்கு விக்ரகமென்பது உள் ஈர்க்கும் ஓர் கைகாட்டி மட்டுமே. அவர்களே இறைஉணர்வில் ஒன்றாய்திளைக்கும் பக்தர்கள்.

Thursday, November 17, 2022

ಸತ್ಯಧೃತಿ ನಚಿಕೇತನ ಆದರ್ಶ(Satyadhrti Naciketana Adarsa)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಅದೊಂದು ಯಾಗಶಾಲೆ. ವಾಜಶ್ರವಸ ಮುನಿಯು ಆ ಮಹಾ ಯಾಗದ ಯಜಮಾನನಾಗಿ ಗೋವುಗಳನ್ನು ದಾನ ಮಾಡುತ್ತಿದ್ದಾನೆ. ಅವನ ಮಗ ನಚಿಕೇತನು ತಂದೆ ದಾನಮಾಡುತ್ತಿರುವ ಗೋವುಗಳನ್ನು ಗಮನಿಸುತ್ತಾನೆ. ಮುದಿ ಗೋವುಗಳು- ಎಂದಿಗೂ ಕರುವನ್ನು ಹೆರಲಾಗದ, ಹುಲ್ಲನ್ನೂ ತಿನ್ನಲಾಗದ ಬಲಹೀನವಾದ ಗೋವುಗಳನ್ನು ಶ್ರೇಷ್ಠರಾದ ಬ್ರಾಹ್ಮಣರಿಗೆ ದಾನಮಾಡುತ್ತಿದ್ದಾನೆ. ಬಾಲಕ ನಚಿಕೇತನು ಚಿಂತಾಕ್ರಾಂತನಾಗುತ್ತಾನೆ. ಇದು ನಮ್ಮ ಕಾಲದಲ್ಲೂ ಕಾಣಬಹುದಲ್ಲವೇ? ನಾವು ತಿನ್ನುವ ತುಪ್ಪ ಒಳ್ಳೆಯ ಗುಣಮಟ್ಟದ್ದು, ಕಡಿಮೆ ಗುಣ ಮಟ್ಟದ ತುಪ್ಪವನ್ನು ಹೋಮದ ತುಪ್ಪ ಎಂದೇ ಮಾರುತ್ತಾರೆ. ದೇವರ ಪೂಜೆಗೆಂದು ಮಾರುವ ತೆಂಗಿನಕಾಯಿ ಚಿಕ್ಕದು, ಮನೆ ಅಡಿಗೆಗೆ ದೊಡ್ಡದು ಹೀಗೆಲ್ಲಾ ಮಾಡುವುದನ್ನು ನೋಡುತ್ತೇವೆ. ಹೋಮ,ಪೂಜೆ ಇತ್ಯಾದಿ ಕರ್ಮಗಳ ಹಿಂದಿನ ಮರ್ಮ ತಿಳಿಯದೇ ಕೇವಲ ಔಪಚಾರಿಕವಾಗಿ ಆಚರಿಸುತ್ತಿರುವುದೇ ಇದಕ್ಕೆಲ್ಲ ಕಾರಣ. ಹಾಗೆಯೇ ನಮ್ಮ ಕಥಾ ನಾಯಕ ನಚಿಕೇತನ ಮನೆಯಲ್ಲೂ ಆಯಿತು. ಶ್ರೇಷ್ಠವಾದ ವಸ್ತುಗಳನ್ನು ದಾನಮಾಡಿದರೆ ಮಾತ್ರವೇ ಯಜ್ಞದ ಫಲ. ನಿರುಪಯುಕ್ತವಾದುದನ್ನು ದಾನ ಮಾಡುವುದೇ ಅಧರ್ಮ. ತಂದೆಯಿಂದಾಗುತ್ತಿರುವ ಈ ಅಧರ್ಮದ ಕೆಲಸ ಅವನಿಂದ ಸಹಿಸಲಾಗಲಿಲ್ಲ. ಅಲ್ಲದೇ ಅಂತಹ ನಿರುಪಯುಕ್ತವಾದ ಗೋವುಗಳನ್ನು ದಾನ ಮಾಡುವ ಬದಲಿಗೆ ತನ್ನನ್ನೇ ದಾನ ಮಾಡಿದರೂ ಮಹಾತ್ಮರ ಸೇವೆ ಮಾಡಿಕೊಂಡಿರಬಹುದು ಎಂದೆಲ್ಲಾ ಯೋಚಿಸಿ ತಂದೆಯನ್ನು ಕುರಿತು ಕೇಳಿದ- ಅಪ್ಪಾ ನನ್ನನ್ನು ಯಾರಿಗೆ ದಾನ ಮಾಡುತ್ತೀ? ತಂದೆ ತನ್ನ ವ್ಯವಹಾರದಲ್ಲಿ ನಿರತನಾಗಿದ್ದು, ಇವನ ಮಾತನ್ನು ಲಕ್ಷಿಸಲಿಲ್ಲ. ನಚಿಕೇತನು ಎರಡನೇ ಬಾರಿ, ಮೂರನೇ ಬಾರಿ ಕೇಳಿದಾಗ ಕೋಪದಿಂದ-ನಿನ್ನನ್ನು ಮೃತ್ಯುವಿಗೆ ದಾನಮಾಡುತ್ತೇನೆ ಎಂದುಬಿಟ್ಟ. ಯಜ್ಞದೀಕ್ಷೆಯಲ್ಲಿದ್ದಾಗ ಆಡಿದ ಮಾತು. ಸುಳ್ಳಾಗುವಂತಿಲ್ಲ.  ನಚಿಕೇತನು ಸ್ವಲ್ಪವೂ ವಿಚಲಿತನಾಗಲಿಲ್ಲ. ನನ್ನಿಂದ ಮೃತ್ಯುವಿಗೆ ಆಗಬೇಕಾದದ್ದೇನೋ ಇರಬಹುದು ಎಂದು ಮೃತ್ಯುದೇವನಾದ ಯಮನೆಡೆಗೆ ನಡೆದೇ ಬಿಟ್ಟ. ಅಲ್ಲಿ ಯಮನು ತನ್ನ ಮನೆಯಲ್ಲಿರದ ಕಾರಣ ಮೂರುದಿನ ಅವನಿಗಾಗಿ ಉಪವಾಸದಿಂದ ಕಳೆದ. ಯಮದೇವನು ಬಂದು ತೇಜಸ್ವೀ ಬ್ರಾಹ್ಮಣ ಬಾಲಕನಲ್ಲಿ ಅವನನ್ನು ಕಾಯಿಸಿದ್ದಕ್ಕಾಗಿ ಕ್ಷಮೆ ಯಾಚಿಸಿ, ಮೂರು ವರಗಳನ್ನು ದಯಪಾಲಿಸುತ್ತಾನೆ. ನಚಿಕೇತನು ಮೊದಲ ವರವಾಗಿ ತಂದೆಯ ಮನಸ್ಸು ಶಾಂತವಾಗಬೇಕೆಂದೂ, ಎರಡನೆಯ ವರವಾಗಿ ಸ್ವರ್ಗಪ್ರಾಪ್ತಿಗಾಗಿ ಆಚರಿಸುವ ಯಜ್ಞರಹಸ್ಯವನ್ನು ಶ್ರದ್ಧಾವಂತನಾದ ತನಗೆ ಬೋಧಿಸಬೇಕೆಂದೂ ಕೇಳುತ್ತಾನೆ .ಯಮನು ಸುದೀರ್ಘವಾಗಿ ಬೋಧಿಸಿದ್ದನ್ನು ಸ್ವಲ್ಪವೂ ಸ್ಖಾಲಿತ್ಯವಿಲ್ಲದೆ ಅವನಿಗೆ ಪ್ರತಿಕ್ರಿಯೆಯಾಗಿ ಒಪ್ಪಿಸುತ್ತಾನೆ. ಯಮನು ಅವನ ಶ್ರದ್ಧೆಗೆ ಮೆಚ್ಚಿ ಆ ಯಜ್ಞಾಗ್ನಿಗೆ ನಾಚಿಕೇತಾಗ್ನಿ ಎಂದೇ ನಾಮಕರಣ ಮಾಡುತ್ತಾನೆ. ನಚಿಕೇತನು ಕೇಳುವ ಮೂರನೇ ವರ ಅತ್ಯಂತ ಪ್ರಸಿದ್ಧವಾದದ್ದು. ಮರಣಾನಂತರ ಜೀವಿಯ ಗತಾಗತಿಯು ಏನಾಗುತ್ತದೆ ಎಂಬುದಾಗಿ.  ನಚಿಕೇತನ ಈ ಪ್ರಶ್ನೆಯನ್ನು ಯಮನು ತಕ್ಷಣವೇ ಉತ್ತರಿಸದೇ ಇದರ ಬದಲಿಗೆ ಎಲ್ಲಾ ಬಗೆಯ ಐಹಿಕ ಸುಖಗಳ ಪ್ರಲೋಭನೆಯನ್ನು ಅವನಿಗೆ ಒಡ್ಡುತ್ತಾನೆ; ಮತ್ತು ದೇವತೆಗಳಿಗೂ ಈ ಪ್ರಶ್ನೆ, ಜಿಜ್ಞಾಸೆಗೆ ಕಾರಣವಾಗಿರುವುದರಿಂದ ಇದನ್ನು ಕೇಳದಂತೆ ಪ್ರೇರೇಪಿಸುತ್ತಾನೆ. ಆತ್ಮಜ್ಞಾನಕ್ಕೆ ಸಂಬಂಧಿಸಿದ ಅತಿ ಗಹನವಾದ ಪ್ರಶ್ನೆ ಅದಾಗಿದ್ದರಿಂದ ಇದೆಲ್ಲವೂ  ನಚಿಕೇತನ ಸತ್ಯಧೃತಿಯನ್ನು ಪರೀಕ್ಷಿಸುವ ಉಪಾಯವಾಗಿತ್ತು. ನಚಿಕೇತನು ಯಮನ ಯಾವ ಪ್ರಲೋಭನೆಗೂ ಒಳಗಾಗಲೇ ಇಲ್ಲ. ಅಲ್ಲದೇ ದೇವತೆಗಳಿಗೂ ಈ ವಿಷಯದಲ್ಲಿ ಸಂಶಯವಿದೆ ಎಂದಾದಮೇಲೆ ಇದು ಜೀವನಕ್ಕೆ ಅತ್ಯಂತ ಅಗತ್ಯವಾದ, ಗಹನವಾದ ವಿಷಯವಿರಲೇ ಬೇಕು. ಅಂತಹ ಉನ್ನತವಾದ ವಿಷಯವನ್ನು ತಿಳಿಸಲು ಧರ್ಮಪ್ರಭುವಾದ ನಿನ್ನಂತಹ ಗುರುವು ಸಿಕ್ಕಿದಾಗ ನಾನು ಈ ಪ್ರಶ್ನೆಯನ್ನಲ್ಲದೆ ಬೇರೇನನ್ನೂ ಕೇಳೆನು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದನು. ಯಮನು –ನಿನ್ನಂತಹ ಶ್ರೇಷ್ಠನಾದ ಶಿಷ್ಯನು ದೊರಕಿದುದು ನನ್ನ ಭಾಗ್ಯ ಎಂದು ಸಂತೋಷದಿಂದ ಅವನಿಗೆ ಜೀವನದ ಪರಮೋನ್ನತ ಧ್ಯೇಯವಾದ ರಹಸ್ಯವಾದ ಆತ್ಮತತ್ತ್ವವನ್ನು ಸವಿಸ್ತಾರವಾಗಿ ಅನುಭವ ಸಹಿತವಾಗಿ ಬೋಧಿಸುತ್ತಾನೆ.  ಈ ಪ್ರಸಂಗವಿರುವುದು ಉಪನಿಷತ್ತುಗಳಲ್ಲಿ ಪ್ರಸಿದ್ಧವಾದ ಕಠೋಪನಿಷತ್ತಿನಲ್ಲಿ.

ನಚಿಕೇತನು ೯-೧೦ ವಯಸ್ಸಿನ ಬಾಲಕನಾದರೂ ತಂದೆ ಮಾಡುತ್ತಿದ್ದ ದುರ್ದಾನವನ್ನು ಪ್ರಶ್ನಿಸಿದ. ಮೃತ್ಯುವಿಗೆ ಸ್ವಲ್ಪವೂ ಭಯಪಡದೇ ಅವನನ್ನೇ ತನ್ನ ಗುರುವಾಗಿ ಸ್ವೀಕರಿಸುವ ನಿರ್ಧಾರ ಮಾಡಿದ. ತಂದೆ ತನ್ನಲ್ಲಿ ನಿಷ್ಠುರನಾಗಿ ವರ್ತಿಸಿದರೂ ರಾಗ-ದ್ವೇಷಗಳಿಗೆ ಒಳಗಾಗದೇ ತಂದೆಯ ಹಿತವನ್ನೇ ಬಯಸುವ ವರವನ್ನು ಕೇಳಿದ.  ಲೌಕಿಕ ಜೀವನವನ್ನು ಸುಖದಿಂದ ಕಳೆಯುವ  ಎಂತೆಂತಹ ವರಗಳನ್ನು ಕೊಡುತ್ತೇನೆ ಎಂದೆಲ್ಲಾ ಯಮನು ಪ್ರಲೋಭನೆ ಒಡ್ಡಿದರೂ ಸತ್ಯೈಕ ನಿಷ್ಠನಾದ ನಚಿಕೇತನು ಅದಕ್ಕೆಲ್ಲಾ ಮೋಹಗೊಳ್ಳಲಿಲ್ಲ. ಜೀವನದ ಪರಮ ಸತ್ಯವನ್ನೇ ತಿಳಿಸಲು ಆಗ್ರಹಿಸಿದ. ಜೀವನದ ಪರಮ ಸತ್ಯದ ಉಪದೇಶವನ್ನು ಯಮನಿಂದ ಪಡೆದು ಧನ್ಯನಾದ. "ಜೀವನದಲ್ಲಿ ಇಂದ್ರಿಯಕ್ಕೆ ಬೇಕಾದದ್ದು, ಮನಸ್ಸಿಗೆ ಬೇಕಾದದ್ದು, ಬುದ್ಧಿಗೆ ಬೇಕಾದದ್ದು ಎಲ್ಲಾ ಉಂಟು. ಹಾಗೆಯೇ 'ಜೀವ'ನಿಗೆ ಬೇಕಾದದ್ದೂ ಉಂಟು. ಹೀಗೆ ಆತ್ಮನಿಗೆ ಬೇಕಾದ್ದನ್ನೂ ಕೊಟ್ಟು ಮಾಡುವ ಜೀವನ ಪೂರ್ಣಜೀವನವಾಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ನಚಿಕೇತನು ಅಂತಹದನ್ನೇ ಯಮನಲ್ಲಿ ಕೇಳಿ ಪಡೆದನು. ಇಂತಹ ನಚಿಕೇತನು ಲೋಕಕ್ಕೆ ಸಾರ್ವಕಾಲಿಕ ಆದರ್ಶಪುರುಷನಲ್ಲವೇ? 

ಸೂಚನೆ: 17/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

ಜೀವನವೆಲ್ಲವೂ ನಿನ್ನ ಆರಾಧನೆಯಾಗಲಿ. (Jivanavellavu Ninna Aaraadhaneyaagali)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)

ಮಾನಸ ಪೂಜಾ:

"ನನ್ನ ಆತ್ಮವೇ ನೀನು,ಬುದ್ಧಿಯೇ ಪಾರ್ವತಿ ,ಪ್ರಾಣಗಳೇ ಸಹಚರರು, ಶರೀರವೇ ಮನೆ, ನಾನು ವಿಷಯ ಸುಖಗಳನ್ನು ಅನುಭವಿಸಲು ಮಾಡಿಕೊಂಡ ವ್ಯವಸ್ಥೆಯೆಲ್ಲವೂ ನಿನ್ನ ಪೂಜೆ, ನನ್ನ ನಿದ್ರೆಯೇ ಸಮಾಧಿಸ್ಥಿತಿ, ನನ್ನ ಕಾಲುಗಳ ಓಡಾಟವೆಲ್ಲವೂ ನಿನ್ನ ಪ್ರದಕ್ಷಿಣೆ, ನನ್ನ ಮಾತುಗಳೆಲ್ಲವೂ ನಿನ್ನ ಸ್ತೋತ್ರ, ಹೀಗೆ ಯಾವ ಯಾವ ಕೆಲಸಗಳನ್ನು ನಾನು ಮಾಡುತ್ತೇನೋ, ಹೇ ಪರಮೇಶ್ವರನೇ  ಅದೆಲ್ಲವೂ ನಿನ್ನ ಆರಾಧನೆಯೇ ಆಗಿದೆ." ಇದು ಪೂಜ್ಯ ಶಂಕರ ಭಗವತ್ಪಾದರ ಶಿವಮಾನಸ ಪೂಜಾ ಸ್ತೋತ್ರದ ಒಂದು ಪ್ರಸಿದ್ಧವಾದ ಶ್ಲೋಕದ ಭಾವಾರ್ಥ. 

ನಮ್ಮೆಲ್ಲರ ಹಿಂಬದಿ ಬೆಳಗುತ್ತಿರುವ ಚೈತನ್ಯವೇ ಶಿವ. ಆ ಚೈತನ್ಯ, ಶರೀರವನ್ನು ಬಿಟ್ಟರೆ, ಅದೇ ಮೃತ್ಯು. ನಮಗೆಲ್ಲ ಅದರ ಅರಿವಾದರೆ ಜೀವನ ಧನ್ಯ. ಅರಿವಿಲ್ಲವಾದರೂ ವಸ್ತುಸ್ಥಿತಿ ಅದೇ ಆಗಿದೆ. ಶಂಕರಾರ್ಧ ಶರೀರಿಣಿಯಾಗಿ ಪರಾ ಪ್ರಕೃತಿ ಸ್ವರೂಪಿಣಿಯಾಗಿ ನಮ್ಮೆಲ್ಲರ ಬುದ್ಧಿಯ ಸ್ಥಾನದಲ್ಲಿ ಇದ್ದು ನಮ್ಮನ್ನು ಈ ಲೋಕಜೀವನದಲ್ಲಿ ನಡೆಸುವವಳೇ ಪಾರ್ವತಿ. ಪರ್ವ ಪರ್ವವಾಗಿ ಷಟ್ಚಕ್ರಗಳಲ್ಲಿ ವ್ಯಾಪಿಸಿರುವವಳು ಮಹಾಮಾತೆ ಪಾರ್ವತಿ. ಪೂರ್ವ ಸುಕೃತದಿಂದಲೋ ಅಥವಾ ಇದೇ ಜನ್ಮದ ತೀವ್ರವಾದ ಸಾಧನೆಯಿಂದಲೋ ಜೀವನದ ಹಿಂಬದಿಯ ಬೆಳಕಿನೆಡೆಗೆ ಸಾಗಬಯಸಿದಾಗ ನಮ್ಮನ್ನು ಈ ಪ್ರಕೃತಿಚಕ್ರದಿಂದ ದಾಟಿಸುವವಳೂ ಅವಳೇ. ನಮ್ಮನ್ನು ಪ್ರವೃತ್ತಿ-ನಿವೃತ್ತಿ , ಇಹ-ಪರ ಜೀವನದೆಡೆಗೆ ಮೇಲಕ್ಕೆ ಕೆಳಕ್ಕೆ ಓಡಾಡಿಸುವ ಸ್ನೇಹಿತರೇ ನಮ್ಮೊಳಗೇ ಇರುವ ಪ್ರಾಣಶಕ್ತಿ. ಈ ಎಲ್ಲಾ ಚಟುವಟಿಕೆಗಳಿಗೆ ನೆಲೆಮನೆಯಾಗಿ ಇರುವುದೇ ನಮ್ಮ ಶರೀರ. ಇಲ್ಲಿ ಭಗವಂತನ ಆಶಯದಂತೆ ಒಳ ಜೀವನಕ್ಕೆ ಅವಿರೋಧವಾಗಿ ಹೊರಜೀವನದ ಸೌಖ್ಯವನ್ನೂ ಅವನ ಮಧುರ ಸ್ಮರಣೆಯೊಂದಿಗೆ ಅನುಭವಿಸಲು ಮಾಡಿಕೊಂಡ ವ್ಯವಸ್ಥೆಯೆಲ್ಲವೂ ಅವನ ಪೂಜೆ ಎನ್ನುತ್ತಾರೆ ಆಚಾರ್ಯರು. ಬೆಳಗಿನಿಂದ ಸಂಜೆಯವರೆಗೆ ಈ ಬಗೆಯ ಶುದ್ಧವಾದ ಜೀವನವನ್ನು ನಡೆಸಿದಾಗ ರಾತ್ರಿ ಸುಖನಿದ್ರೆ ಸಹಜವಾಗಿದೆ. ಅವನ ಮಡಿಲಲ್ಲಿ ವಿಶ್ರಮಿಸುತ್ತೇನೆ ಎಂಬ ಭಾವ ಆವರಿಸಿದಾಗ ಅದೇ ಸಮಾಧಿ-ಸಮಾಧಾನದ ಸ್ಥಿತಿಯಲ್ಲದೆ ಮತ್ತೇನು? ಇಂತಹ ಸಮಾಧಿ ಸ್ಥಿತಿಯಿಂದ ಮೇಲೆದ್ದು, ಅದರ ಸವಿನೆನಪಿನಲ್ಲಿ ಲೋಕಜೀವನದಲ್ಲೂ ನಡೆದಾಡುವುದು ಸಹಜವಾಗಿಯೇ ಆ ಮಹಾ ಚೈತನ್ಯದ ಪ್ರದಕ್ಷಿಣೆಯೇ ಆಗಿದೆ. ಆತ್ಮಮೂಲವಾಗಿದ್ದು ಅದೇ ಕಂಪಿನಿಂದ, ತಂಪಿನಿಂದ ಹೊರಬರುವ ಮಾತುಗಳೆಲ್ಲವೂ ಅವನ ಸ್ತೋತ್ರರೂಪವೇ ಆಗಿದೆ. ಜೀವನದ ಸರ್ವಕರ್ಮಗಳೂ ಅವನ ಆರಾಧನೆಯೇ.  ಹೀಗೆ ತಮ್ಮ ಜೀವನವನ್ನು ಸಮೃದ್ಧವಾಗಿ ನಡೆಸಿ, ಲೋಕಕ್ಕೆಲ್ಲಾ ಇಂತಹ ಜೀವನಾದರ್ಶವನ್ನು ಸಾರುತ್ತಿದ್ದಾರೆ ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರಭಗವತ್ಪಾದರು.

ಈ ದೇಶದ ಜೀವನಾದರ್ಶ

ಇದೊಂದು ಈ ದೇಶದ ಮಹರ್ಷಿಗಳ ಜೀವನದ ಮಾದರಿ. ಇಂತಹ ಹಿರಿದಾದ ಜೀವನ ಧ್ಯೇಯವನ್ನು ನಮ್ಮ ಕಣ್ಮುಂದೆ ಇಟ್ಟಾಗ ದಿನ ದಿನವೂ ಅದಕ್ಕೆ ಹತ್ತಿರವಾಗುವಂತೆ ನಮ್ಮ ಪ್ರಯತ್ನವಿರಲಿ ಎಂಬುದು ಅವರ ಆಶಯ. ಭವದ ಬೆಂಗಾಡು ನಮಗೆ ನಮ್ಮೊಳಗೇ ಬೆಳಗುವ ಪರಶಿವನನ್ನು, ಪಾರ್ವತಿಯನ್ನು ಮರೆಯಿಸುತ್ತದೆ. ಅವರ ಭಿಕ್ಷೆಯಿಂದಲೇ ಈ ಭೌತಿಕ ಜೀವನವನ್ನು ಅನುಭವಿಸುತ್ತಿದ್ದರೂ ಅವರೆಡೆಗೆ ಎಂದೂ ನಮ್ಮ ಮುಖ ತಿರುಗದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-"ನಾವೆಲ್ಲರೂ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗುವಂತೆ ಒಬ್ಬನು ಟಾರ್ಚ್ ಹಿಡಿದು ಬೆಳಕಿನ ವ್ಯವಸ್ಥೆ ಮಾಡಿದ್ದಾನಪ್ಪಾ. ನಾವು ಆ ಬೆಳಕಿನಲ್ಲೇ ಮುಂದುವರೆಯುತ್ತಿದ್ದರೂ ಟಾರ್ಚ್ ಹಿಡಿದವನನ್ನು ನೋಡುತ್ತಿಲ್ಲ" ಎಂದು. ಭಗವಂತನನ್ನು ಮರೆಯುವುದಕ್ಕೆ ನಾವು ಜನ್ಮಾಂತರಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದೇವೆ ಎಂದು ಅವರು ಮಾರ್ಮಿಕವಾಗಿ ಹೇಳುತ್ತಿದ್ದರು. ಶತಶತಮಾನಗಳಲ್ಲಿ ನಾವು ನಿರಂತರ ಇಂದ್ರಿಯಜೀವನವನ್ನಷ್ಟೇ ನಡೆಸುತ್ತಾ ಬಂದು, ಋಷಿಗಳು ಕಂಡರುಹಿದ ಪರಮಾನಂದದ ಒಳಜೀವನವನ್ನು ಮರೆತಿದ್ದೇವೆ.  ಅವರು ಹಾಕಿಕೊಟ್ಟ ಜೀವನ ಕ್ರಮವನ್ನು ಅಷ್ಟಿಷ್ಟು, ಅಲ್ಲಲ್ಲಿ ಹೊರಗಿನಿಂದ ಆಚರಿಸುತ್ತಿರಬಹುದು. ಆದರೆ  ಋಷಿಗಳ ಆಶಯವನ್ನು ಮರೆತು ಮಾಡುವ ನಮ್ಮ ಆಚರಣೆಗಳು ನಿರ್ವೀರ್ಯವಾದ, ಶುಷ್ಕವಾದ ಆಚರಣೆಗಳಾಗಿವೆ. ಭಯದಿಂದಲೋ, ಪರಂಪರೆಯನ್ನು ಉಳಿಸಬೇಕು ಎಂಬ ಕಾರಣದಿಂದಲೋ ಆಚರಿಸುತ್ತಿರುವುದೇ ಹೆಚ್ಚು. ನಮ್ಮೆಲ್ಲ ಕರ್ಮಗಳೂ ಭಗವಂತನಿಗೆ ಪ್ರಿಯವಾಗಿರಬೇಕು, ಅವನ ಅನುಗ್ರಹಪಾತ್ರತೆ ಅವಕ್ಕೆಲ್ಲಾ ಇದ್ದು ನಮ್ಮನ್ನು ಅವನೆಡೆಗೆ ಒಯ್ಯಬೇಕು ಎಂಬ ಮನೋಧರ್ಮದಿಂದ ಇವನ್ನೆಲ್ಲಾ ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕು. ನಮ್ಮ ಜೀವನ ಕ್ರಮವನ್ನು ಈ ದೇಶದ ಜ್ಞಾನಿಗಳ ಚಿಂತನೆಯ ಮೂಸೆಯಲ್ಲಿ ತರಬಲ್ಲೆವಾದರೆ ಐಹಿಕ-ಪಾರಮಾರ್ಥಿಕ ಸಮೃದ್ಧವಾದ ಜೀವನ ನಿಶ್ಚಿತ. ಅಂತಹ ಜೀವನ ನಿರಂತರ ಭಗವದಾರಾಧನೆಯೇ ಆಗುತ್ತದೆ. ಶಂಕರರ ಈ ಸ್ತೋತ್ರರತ್ನವು ಜೀವಲೋಕದ ಪರಮಾದರ್ಶವಾಗಿದೆ. ನಾವೆಲ್ಲರೂ ಅತ್ತ ನಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುವ ಪ್ರಯತ್ನ ಮಾಡೋಣ.

ಸೂಚನೆ: 17/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Wednesday, November 16, 2022

Samskaara Series - Concluding Remarks

Kannada Article by: Tarodi Suresha
English Rendering by: Padmini Shrinivasan
Respond to (lekhana@ayvm.in)



An auspicious ending with a 'Mangala' would be a fitting finale to this series on Samskaaras, after acquainting ourselves with a glimpse of the various rituals. Samskaara has been widely used, to mean differently, such as polishing, purification, refinement, elevation, Vidyaa etc. A lackadaisical attitude has downsized the present-day rituals, rendering them bereft of their core guiding philosophy. Its essence is not being experienced. On quizzing - what is Samskaara? At face value, the answer would be 'purity'. A process through which, accumulated dirt is removed to restore the sheen. Sriranga Mahaguru used to describe this as a process to restore the original form of the object. Now if we ask, which are the objects requiring purification through a Samskaara? It can be said that it is essentially for the materials, body, the seven constituent elements of the human body and mind. Some include the soul (Atman) too. In this last case unification of the soul with the Supreme is the purification process and vision of the Effulgent Light is the accruing benefit. In summary, all purification processes culminate in the principle of the Supreme Truth i.e. realizing the Self. Although innumerable Samskaaras are enlisted in scriptures, they have been shortlisted to 40 and among these 16 are considered as the most important (Shodasha Samskaaras). As sins can be accumulated in innumerable ways, it is quite natural that procedures to administer antidotes too exist in an equal measure. Depending on when they are performed, Samskaaras are classified as prior and post. The essential qualities of a soul or Atma Gunas enunciated by Rshis are Dayaa (kindness or compassion), Kshama (forgiving), Anasooya (free from jealousy and ill-will), Shuchi (purity in every aspect of life), Anaayaasa (shouldering all ordained duties effortlessly without fatigue), Mangala (radiating auspiciousness), Akaarpanya (large heartedness), Aspruha (non- attachment). Samskaaras aid in the process of accumulating these Atma Gunas over a lifetime. These Atma Gunas in turn fetch the ultimate reward of attaining Brahmapada (Feet of the Lord) and ensure continuity as a healthy lineage.

Every human needs Samskaaras. A sage who has experienced the Divine light does not require Samskaaras. However, the person who performs his Samskaara, accumulates the benefit of spiritual elevation. A few Samskaaras have to be performed by the husband or father only. The death rituals can be performed by others too. Brahmopadesha or Upanayana is performed by the father or an Achaarya (preceptor). In a nutshell, the Samskaara is also for all those who partake in the ritual. The practical aspects of these rituals have assumed different forms. Samskaaras are conducted with or without the recitation of hymns. Hymns-rituals-sacred materials all have their role to play, as long as they are used exactly in the manner enunciated by the Rshis. "The hidden mysteries should be understood before performing the rituals" was Sriranga Mahaguru's emphatic statement.

Holy bath, auspicious wishes, prayers to Mahaa Ganapati, an opening ceremony for ancestors; prayers in remembrance of the maternal lineage; rituals to purify self; as well as the premises are the preparatory rituals preceding the performance of the rites. Garbhaadaana, Pumsavana, Seemantonnayana, Jaatakarma, Naamakarana, Nishkramana, Annapraashana, Choodaakarma, Upanayana, Four Veda Vratas, Holy bath, Vivaaha and Anthyeshti are the 16 Samskaaras which are to be performed for an individual over a life time, beginning even before conception and extending right up to the cremation ground. Few law makers for householders (Gruhya sutrakaaras) hold these numbers differently. If the number of rituals is less in a particular group, then it is compensated elsewhere to make up the count.

Samskaaras are necessary not just to obtain eternal bliss, personal virtues (Atma Gunas) and a superior clan, but absolutely essential to build a noble society at large. Daily activities, festivities as well as austerities covering an entire year; Samskaaras encompassing the entire life-time, right from pre- conception to cremation; have all been built into a way of life commensurate with the four cardinal principles of life known as Purushaarthas. Salutations! To this land Bhaarata, where Maharshis' were born as architects of this divine plan.

Note: The Kannada version of this article can be viewed at AYVM blogs.