Saturday, April 30, 2022

ಕಾಳಿದಾಸನ ಜೀವನದರ್ಶನ – 8 ನಿಷ್ಣಾತಗುರು – ಯೋಗ್ಯಶಿಷ್ಯ (Kalidasana Jivanadarshana - 8 Nishnataguru - Yogyashishya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

ನಿಷ್ಣಾತನಾಗುವುದು ಹೇಗೆಂಬುದನ್ನು ಕಾಳಿದಾಸನು ಸೂಚಿಸಿರುವುದನ್ನು ಗಮನಿಸಬಹುದು. ವಾಸ್ತವವಾಗಿ "ನಿಷ್ಣಾತ" ಎಂಬ ಆ ಪದದಲ್ಲೇ ಒಂದು ಸ್ವಾರಸ್ಯವಿದೆ; ವ್ಯಾಕರಣವು ತೋರಿಸುವ  ಸೂಕ್ಷ್ಮತೆಯಿದೆ; ಒಂದು ರೂಪಕವೂ ಅದರಲ್ಲಡಗಿದೆ.


ನಿತ್ಯವೂ ಸ್ನಾನ ಮಾಡುವಾಗ ಮೈಮೇಲೆ ನೀರುಹುಯ್ದುಕೊಳ್ಳುತ್ತೇವೆ. ಆದರೆ ನೀರಿನಲ್ಲಿ ಮುಳುಗುಹಾಕುವುದೇ ಪ್ರಶಸ್ತವಾದ ಸ್ನಾನವೆನಿಸುತ್ತದೆ. "ಮಜ್ಜನ"-"ಅವಗಾಹನ"ಗಳೆಂದರೂ ಮುಳುಗುಹಾಕುವುದೇ. ಸ್ನಾನಮಾಡಿದವನು ಸ್ನಾತ. ಮುಳುಗಿ ಸ್ನಾನಮಾಡಿದವ "ನಿ-ಸ್ನಾತ": ಎಂದರೆ ಚೆನ್ನಾಗಿ ಸ್ನಾತ. ಯಾವುದಾದರೂ ವಿದ್ಯೆಯನ್ನು ಚೆನ್ನಾಗಿ ಸಾಧಿಸಬೇಕೆಂದರೆ, ಅದರಲ್ಲಿ "ಮುಳುಗ"ಬೇಕಷ್ಟೆ? ಹಾಗೆ ಮುಳುಗಿ ವಿದ್ಯಾಕೌಶಲವೊಂದನ್ನು ಸಂಪಾದಿಸಿಕೊಂಡಿದ್ದಲ್ಲಿ ಅಂತಹವನನ್ನು - ಅಂತಹವನನ್ನು ಮಾತ್ರ - 'ನಿಷ್ಣಾತ'ನೆನ್ನುತ್ತಾರೆ. (ನಿ-ನದೀಭ್ಯಾಂ ಸ್ನಾತೇಃ ಕೌಶಲೇ - ಎಂಬ ಪಾಣಿನಿಯ ವ್ಯಾಕರಣ-ನಿಯಮವು ಇದನ್ನು ವ್ಯವಸ್ಥೆಗೊಳಿಸಿದೆ). 


ವಿದ್ಯೆಯನ್ನು ಸಂಪಾದಿಸಿದವನು ನಿಷ್ಣಾತನೆನಿಸಬೇಕಾದರೆ ಬೇರೆಯವರಿಗೆ ತನ್ನಲ್ಲಿಯ ವಿದ್ಯೆಯನ್ನು ಬೋಧಿಸಬೇಕು, ಬೋಧಿಸುತ್ತಿರಬೇಕು, ಬೋಧಿಸುತ್ತಿರಲೇಬೇಕು! ಇದನ್ನು ಕಾಳಿದಾಸನು "ಸುಶಿಕ್ಷಿತೋಽಪಿ ಉಪದೇಶೇನ ನಿಷ್ಣಾತೋ ಭವತಿ" ಎನ್ನುತ್ತಾನೆ.  'ಸುಶಿಕ್ಷಿತ' ಎಂದರೆ ಚೆನ್ನಾಗಿಯೇ ಶಿಕ್ಷಣವನ್ನು ಪಡೆದಿರುವವನು; ಆದರೆ ಅಷ್ಟು ಮಾತ್ರದಿಂದಲೇ ನಿಷ್ಣಾತತೆ ದೊರಕದು. ಬರೀ ಸುಶಿಕ್ಷಿತನಿಗೂ ಒಬ್ಬ ನಿಷ್ಣಾತನಿಗೂ ಕಾಲಿದಾಸನು ತೋರಿಸುವ ಭೇದವನ್ನು ಇಲ್ಲಿ ಗಮನಿಸಿಕೊಳ್ಳಬಹುದು. ಪಾಣಿನಿಯ ನಿಯಮಕ್ಕಿಂತಲೂ ಕಾಳಿದಾಸನ ನಿಯಮವೇ ಹೆಚ್ಚು ಬಿಗಿಯೆಂಬಂತಿದೆ! 

ಶಾಸ್ತ್ರಜ್ಞಾನವು ಕ್ಲೇಶಮಯ – ಯಾವುದೇ ಶಾಸ್ತ್ರವಾದರೂ ಕೂಡ. "ನನಗೆ ಈ ಶಾಸ್ತ್ರವು ವಶವಾಗಿಬಿಟ್ಟಿತು" – ಎಂದು ನೆಚ್ಚಿಕೊಂಡುಬಿಟ್ಟವನು ಅಲ್ಲೋ ಇಲ್ಲೋ ಎಡವುವುದು ಅಸಂಭವವಲ್ಲ. "ಶಾಸ್ತ್ರಂ ಸುಚಿಂತಿತಮಥೋ ಪರಿಚಿಂತನೀಯಂ": ಚೆನ್ನಾಗಿ  ಚಿಂತನ ಮಾಡಿದ್ದರೂ, ಪರಿ-ಚಿಂತನವನ್ನು - ಎಂದರೆ ಪರಿಪರಿಯಾದ, ನಾನಾದಿಕ್ಕುಗಳಿಂದಾದ ಚಿಂತನವನ್ನು - ಶಾಸ್ತ್ರವು ಅಪೇಕ್ಷಿಸುತ್ತದೆ: ಬಗೆಬಗೆಯಾದ ಶಿಷ್ಯರಿಗೆ ಬೋಧಿಸುತ್ತಿರುವುದೆಂದರೆ ಸುಚಿಂತನ-ಪರಿಚಿಂತನಗಳಿಗೆ ಪುಷ್ಕಲಾವಕಾಶವನ್ನು ಒದಗಿಸಿದಂತೆಯೇ. ಶಿಷ್ಯರ ಪ್ರಶ್ನೆಗಳಿಗೆ ಸದಾ ಸ್ವಾಗತವಿಟ್ಟಿರುವುದೂ ಒಳ್ಳೆಯ ಬೋಧಕರ, ನಿಷ್ಣಾತರ, ಲಕ್ಷಣವೇ. 

ಶಿಷ್ಯರು ತಮ್ಮಲ್ಲಿಗೆ ಬಂದಾಗಲೆಲ್ಲ, ಕಿಂಚಿತ್ತಾಗಿ ಕುಶಲವಾರ್ತೆಯನ್ನು ಮಾತನಾಡಿ, "ಏನಾದರೂ ಪ್ರಶ್ನೆಯಿದ್ದರೆ ಕೇಳಬಹುದು" ಎಂದೇ ಶ್ರೀರಂಗಮಹಾಗುರುಗಳು ಮೊಟ್ಟಮೊದಲು ವಿಚಾರಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ಧೀಮಂತ-ಜಿಜ್ಞಾಸುಗಳ ಸುಕ್ಲಿಷ್ಟವಾದ ಪ್ರಶ್ನೆಗಳಿಂದ ನಿಷ್ಣಾತ-ಗುರುವರ್ಯರು ಸಂತುಷ್ಟರೇ ಆಗುವರು. ಎಂದೇ ಅಂತಹವ(ರ)ನ್ನು ಅವರು ಸದಾ ಸ್ವಾಗತಿಸುವವರೇ. ಮೇಧಾವಿಗಳಾದ ಶಿಷ್ಯರು ಕೇಳುವ ಗಹನವಾದ ಪ್ರಶ್ನೆಗಳಿಗೆ ಉತ್ತರಿಸುವುದು ಸಹ ಒಂದು ರೀತಿಯಲ್ಲಿ ಹರ್ಷಪ್ರದವೇ. ಅನುಭವದ ಆಧಾರದ ಮೇಲಿನ ಬೌದ್ಧಿಕ ಉತ್ತರವು ಮನಮುಟ್ಟುವಂತಿರುತ್ತದೆ.

"ಇಂದ್ರಿಯಸುಖಕ್ಕಿಂತಲೂ ಬೌದ್ಧಿಕಸುಖವು ನಿಸ್ಸಂಶಯವಾಗಿಯೂ ಮಿಗಿಲಾದುದು" – ಎಂಬ ಶ್ರೀರಂಗಮಹಾಗುರುಗಳ ಸೂತ್ರವೂ ಇಲ್ಲಿ ಸ್ಮರಣೀಯವಾದದ್ದೇ. ವರಿಷ್ಠರಾದ ಗುರುವರ್ಯರೂ ನಿಷ್ಠೆ-ಮೇಧೆಗಳುಳ್ಳ ಯೋಗ್ಯಶಿಷ್ಯರಿಗಾಗಿ ಹಂಬಲಿಸುವರೇ ಸರಿ. 

 

ಅಯೋಗ್ಯಶಿಷ್ಯರಾದರೆ?

ಇಲ್ಲಿ ಸಂಭವಿಸುವ ಮತ್ತೊಂದು ಪ್ರಶ್ನೆಯಿದೆ. ಶಿಷ್ಯನು ಮೇಧಾವಿಯಾದರೆ ಗುರುವಿಗೆ ಒಳ್ಳೆಯ ಹೆಸರನ್ನು ತರುವನು, ಸರಿಯೇ. ಆದರೆ ಶಿಷ್ಯನು ಮೇಧಾವಿಯಲ್ಲದಿದ್ದರೆ (ಅಥವಾ ಮತ್ತೊಬ್ಬ ಗುರುವಿನ ಶಿಷ್ಯನಿಗಿಂತಲೂ ಕಡಿಮೆ ಮೇಧಾವಿಯಾಗಿದ್ದಲ್ಲಿ), ಆತನು ಕಲಿಯುವ ವಿದ್ಯೆಯ ಮಟ್ಟವೂ (ಹೋಲಿಕೆಯಲ್ಲಿ) ಕಡಿಮೆಯದೇ ಆಗಿಬಿಡುತ್ತದೆ. ಅದರಿಂದಾಗುವ ಪರಿಣಾಮವೆಂದರೆ, ಗುರುವಿಗೆ ಮಾತ್ರವಲ್ಲದೆ, ಗುರುವು ಉಪದೇಶಿಸಿದ ವಿದ್ಯೆಗೂ ಕೆಟ್ಟ ಹೆಸರು ಬರುವುದು. ಹೀಗೆ ಗುರುವು ವಿದ್ಯೆಯನ್ನು ಚೆನ್ನಾಗಿಯೇ ಹೇಳಿಕೊಟ್ಟಿದ್ದರೂ ಶಿಷ್ಯನು ಚೆನ್ನಾಗಿ ಗ್ರಹಿಸಿ ಧರಿಸಿಲ್ಲದ ಕಾರಣವಾಗಿ, ಶಿಷ್ಯನಿಗೂ, ಅಂತಹ ಶಿಷ್ಯನಿಂದಾಗಿ ಆತನ ಗುರುವಿಗೂ, ಅಪಕೀರ್ತಿಯುಂಟಾಗಬಹುದಲ್ಲವೇ? ಆದ್ದರಿಂದ ಹಾಗಾದಲ್ಲಿ ಗುರುವಿಗೆ ಸಲ್ಲತಕ್ಕ ಗೌರವವು ಸಲ್ಲದೆ, ಗುರುವಿಗೆ ಅಪಚಾರವಾಗುವುದಲ್ಲವೆ? - ಎಂಬ ಪ್ರಶ್ನೆಯೂ ಉದ್ಭವಿಸುವುದೇ. ಹಾಗಾದಲ್ಲಿ ಒಳ್ಳೆಯ ವಿದ್ಯೆಯನ್ನು ಸಂಪಾದಿಸಿಯೂ ವಿದ್ಯೆಯನ್ನು  ಚೆನ್ನಾಗಿ ಹೇಳಿಕೊಟ್ಟೂ ಗುರುವಿಗೆ ದಕ್ಕಬೇಕಾದ ಸ್ಥಾನವು ದಕ್ಕದಂತಾಗುವುದಲ್ಲವೇ? - ಎಂಬುದು ಮುಂದಿನ ಪ್ರಶ್ನೆ. ಇದನ್ನೇ ಅದೇ ನಾಟಕದಲ್ಲಿಯ "ಅಮೇಧಾವಿನೀ ಶಿಷ್ಯಾ ಉಪದೇಶಂ ಮಲಿನಯತಿ ಯದಿ" ಎಂಬ ಪ್ರಶ್ನೆ ಕೇಳುತ್ತದೆ. "ಹಾಗಾದಾಗ ಅದನ್ನು ಆಚಾರ್ಯನ ದೋಷವೆಂದು ಹೇಳುವಿರೋ?" ಎಂಬ ಮಾತನ್ನು ರಾಣಿಯು ಕೇಳುತ್ತಾಳೆ.

ಅದಕ್ಕೆ ರಾಜನು ಕೊಡುವ ಉತ್ತರವು ಗಮನಕ್ಕೆ ಅರ್ಹವಾದುದೇ ಸರಿ.


'ಅದ್ರವ್ಯ'ಸ್ವೀಕಾರದ ದೋಷ

ಈ ಸಂದರ್ಭದಲ್ಲಿ ರಾಜನು ಉತ್ತರಕೊಡುತ್ತಾ "ಅದನ್ನು ಹೀಗೆಯೇ ಹೇಳಬೇಕಾಗಿಬರುತ್ತದೆ" ಎನ್ನುತ್ತಾನೆ. ದಡ್ಡನಾದ ಶಿಷ್ಯನನ್ನು ಸ್ವೀಕರಿಸುವುದು ಗುರುವಿನ ಮೊದಲ ತಪ್ಪು. "ಅದ್ರವ್ಯ-ಶಿಷ್ಯ"ನೆಂದರೆ ಸಾಮರ್ಥ್ಯರಹಿತನಾದ ಶಿಷ್ಯ. ಅಂತಹವನ ಸ್ವೀಕಾರವು ತೋರಿಸುವುದೇನನ್ನು? ಗುರುವಿನ "ಬುದ್ಧಿ-ಲಾಘವವನ್ನು": ಅರ್ಥಾತ್, ಗುರುವಿನ ಬುದ್ಧಿಯು ಗುರುವಾಗಿರದೆ, ಬದಲಾಗಿ ಲಘುವಾಗಿದೆಯೆಂಬುದನ್ನು! ಬುದ್ಧಿಯ ಈ ಲಾಘವವು ಒಂದು ದೋಷವೇ.


ಹೇಳಿಕೊಟ್ಟ ವಿದ್ಯೆಯು ಶಿಷ್ಯನಿಗೆ ದಕ್ಕುವುದಿಲ್ಲವೆಂದರೆ ಹೇಳಿಕೊಟ್ಟದ್ದೆಷ್ಟೋ ಭಾಗ, ಅಥವಾ ಬಹುಭಾಗವೇ, ವ್ಯರ್ಥವೇ ಆಯಿತು. ಗುರುವಿಗೆ ವಿದ್ಯೆ ಮರೆಯಲಿಲ್ಲ; ಶಿಷ್ಯನಿಗೆ ವಿದ್ಯೆ ತಲೆಹತ್ತಲಿಲ್ಲ - ಎಂಬಂತಾಗಿ, ಇಬ್ಬರ ಶ್ರಮವೂ ವ್ಯರ್ಥವೇ. ಇಬ್ಬರಿಗೂ ಅಸಮಾಧಾನ-ಅತೃಪ್ತಿಗಳು, ಕೊರಗು-ಕೋಪಗಳು - ಉಂಟಾಗತಕ್ಕವೇ. ಶಿಷ್ಯನು ವಿದ್ಯೆಯನ್ನು ಚೆನ್ನಾಗಿ ಕಲಿತು ಗುರುವಿಗೆ ಸತ್ಕೀರ್ತಿಯನ್ನು ತಂದುಕೊಡುವಂತಿರಬೇಕು. ಬದಲಾಗಿ ಅಪಕೀರ್ತಿಯನ್ನು ತಂದುಕೊಡುವಂತಾದಲ್ಲಿ, ಪ್ರಯೋಜನವಿಲ್ಲವೆಂದಷ್ಟೇ ಅಲ್ಲ. ನಾಲ್ಕು ಮಂದಿಯ ಮುಂದೆ ಗುರುವಿಗೆ ಪರಾಭವವಾಗಿ, ಆತನ ಹೆಸರು ಕೆಟ್ಟು, ಕೊನೆಗೆ ಆತನು ಕಲಿಸಿದ ವಿದ್ಯೆಗೂ ಅಪಕೀರ್ತಿ ಬಂದು, ಪೇಚಾಗುತ್ತದೆ. ಆದ್ದರಿಂದ, ಆರಿಸಿಕೊಳ್ಳುವಾಗಲೇ ಸರಿಯಾದ ಶಿಷ್ಯರನ್ನು ಆಯ್ದುಕೊಳ್ಳಬೇಕಾದದ್ದು ಗುರುವಿನ ಕರ್ತವ್ಯವಾಗುತ್ತದೆ. ಎಲ್ಲರಿಗೂ ಎಲ್ಲ ವಿದ್ಯೆಗಳೂ ರುಚಿಸಬೇಕೆಂದೇನಿಲ್ಲ. ಮನಸ್ಸಿಗೆ ಮುಟ್ಟದ, ಹೃದಯವನ್ನು ತಟ್ಟದ, ಬುದ್ಧಿಗೆ ಎಟುಕದ, ವಿದ್ಯೆಗಾಗಿ ಸಮಯ-ಸಂಪತ್ತುಗಳನ್ನು ವ್ಯಯಿಸಬೇಕೇಕೆ?


ಇದೆಲ್ಲವೂ ವಿದ್ಯೆಯ ಬಗ್ಗೆ ಇರಬೇಕಾದ ಒಂದು ಜವಾಬ್ದಾರಿಯನ್ನು ಆಧರಿಸಿದ ಮಾತು. ವಿದ್ಯೆಯನ್ನು ಯುಕ್ತವಾದ ಲಕ್ಷ್ಯಗಳಿಗಾಗಿ ಬಳಸುವವರನ್ನೇ ಆಯ್ದುಕೊಳ್ಳಬೇಕಾದ ಕರ್ತವ್ಯವಿದೆ. ದೂರದೃಷ್ಟಿಯಿಂದಲೇ ಇಂತಹ ನೋಟವು ಶಕ್ಯ: ದೀರ್ಘಂ ಪಶ್ಯತ, ಮಾ ಹ್ರಸ್ವಮ್ – ಎನ್ನುವರಲ್ಲವೇ?


ಮೇಧಾವಿಯಲ್ಲದ ಶಿಷ್ಯನಿಂದ ಗುರುವಿಗೆ ಮಾತ್ರವಲ್ಲದೆ ವಿದ್ಯೆಗೇ ಕಳಂಕ ಬಂದೀತೆಂಬ ಎಚ್ಚರಿಕೆಯನ್ನೂ ಇಲ್ಲಿ ಗ್ರಹಿಸಬಹುದಾಗಿದೆ. (ಇಂದು ಯೋಗವೆಂಬುದೂ ಫ್ಯಾಷನ್ ಎಂಬಂತಾಗುತ್ತಿದ್ದು, ಅದರ ಮೂಲೋದ್ದೇಶವೇ ಎಲ್ಲೋ ಮರೆಯಾಗುತ್ತಿಲ್ಲವೇ?)


ಸೂಚನೆ : 30/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, April 28, 2022

ஸ்ரீரங்கமஹாகுருவின் கண்ணோட்டம் – 6தேவர்களுக்குள் போட்டியா? விரோதமா?(Devargalukkul Pottiya? Virodama?)


மூலம்: ஶ்ரீ வரததேசிகாச்சார்ய ரங்கப்ரியர்

தமிழாக்கம்: திருமதி ஜானகி

மின்னஞ்சல் : (lekhana@ayvm.in)
புராண-இதிகாசங்களில் பக்தர்களின் கதைகள் பல காண்கிறோம். இறைவனால் தண்டிக்கப்பட்ட தெய்வவிரோதிகளின் கதைகளையும் காண்கிறோம். அவைகளில் சில கதைகள் பாமரர்களுக்கு புரியாத குழப்பங்களை ஏற்படுத்துகின்றன.


உதாரணத்திற்கு ராவணன் சிறந்த சிவபக்தன். சிவனை ஆராதித்து அற்புதமான சித்திகளை பெற்றவன். ஹிரண்யகசிபுவும் சிறந்த பக்தன். பிரம்மதேவரை மகிழ்வித்து கிடைத்தற்கரிய வரங்களை அடைந்தான். ஆயினும் மகாவிஷ்ணு ஶ்ரீராமன் மற்றும் நரசிம்ம அவதாரங்களை எடுத்து இவர்களை அழித்துவிட்டார். அவ்வாறே ருத்ரபகவானும் மகாவிஷ்ணுவின் அம்சமான மன்மதனை சுட்டெரித்த கதை அனைவரும் அறிந்ததே. அம்மூவரும் சிறந்த கடவுள் பக்தர்கள். பக்தர்கள் இறைவனுக்கு மிகவும் ப்ரியமானவர்கள். அவ்வாறாயினும் இறைவடிவமான விஷ்ணு-ருத்ர்களால் ஏன் அழிக்கப்பட்டார்கள்? சிவபக்தனை விஷ்ணுவும், விஷ்ணுஅம்சமான மன்மதனை சிவனும் அழித்தனர். ஆதலால் அத்தேவர்களுக்குள் விரோதமா? போட்டியா? சகிப்பு தன்மை இல்லாமையா? என்ற கேள்வி எழுகிறது.


இதற்கு சிலர் "இவை அனைத்தும் காக்காய்-குருவி கதை அல்லது வெவ்வேறு காலங்களில் மனிதர்கள் தங்கள் கற்பனைதெய்வங்களின் பெருமையை நிலைநாட்ட புனைந்த கதைகள் என சுலபமாக தீர்வு காண முயல்கிறார்கள்.

ஆனால் இது பொருத்தமான பதிலல்ல. அவர்கள் கதையின் அனைத்து பாகங்களையும் மனதில் கொள்ளவில்லை.

ராவணன், ஹிரண்யன், மன்மதன் மூவரும் இறைவனிடம் ஞானத்தை வேண்டவில்லை. மாறாக சரீர- புத்தி-அஸ்திரபலம் மற்றும் சரீரஅழகு முதலிய சித்திகளை வேண்டினர். அந்த சித்திகளை உலகநன்மைக்காக அல்லாது அதர்ம-அநியாய செயல்களுக்கு உபயோகித்தனர். ஆதலால் இவர்கள் விஷ்ணு, ருத்ரரால் அழிக்கப்பட்டனர். ராவணனை சிவபக்தன் என்ற காரணத்தால் விஷ்ணு அழிக்கவில்லை. உலகிற்கே கேடு விளைவிப்பவன் என்பதால் கொன்றார். அதேபோல் மன்மதனை விஷ்ணுவின் அம்சம் எனபதால் அல்லாது தன் சமாதிநிலையை குலைப்பவன் என்பதால் ருத்ரன் சுட்டெரித்தார். இத்தண்டனையினால் அவர்கள் பாவம் நீங்கி நற்கதி அடைந்தனர். இத்தண்டனை மும்மூர்த்திகளுக்கும் சம்மதமே. அதனால் தேவர்களுக்குள் விரோதம், போட்டி எனும் கேள்விக்கே இடமில்லை.


Wednesday, April 27, 2022

Let there be Purity of Thought in Offerings

 Kannada Article bySoumya Pradeep

English Rendering by: M R Bhashyam

Respond to (lekhana@ayvm.in)


It was during the period whence Pānḍavas were living in the jungle. One night, sage Durvāsa along with ten thousand of his disciples arrive to their dwelling.  Pānḍavas and Draupadī had already completed their dinner. Dharmarāja welcomes them with utmost devotion and enquires about their welfare. Sage Durvāsa instructs that they all would be arriving to partake food after finishing their daily oblations in the river. In the inexhaustible vessel of food (Akṣaya Pātre) bestowed by Sun god to Pānḍavas, the rule was that, once Draupadi had finished her dinnerthey had to wait till the next day's Sun rise for the food to reappearHow could they serve the guests? What was the means for not being the subjects of anger of sage Durvāsa? A worried Dharmarāja shares his dilemma with Draupadī. Draupadī after contemplating for a while, takes refuge in their ultimate protector from perils, Śrīkṛṣṇa. Responding to her prayers, Śrīkṛṣṇa appears there at that very instant, and lo, demands food. Draupadī consecrating all her thoughts unto Him, offers a single grain of cooked rice that had stuck to the vessel, and, the Lord is satiated partaking that fleck. The moment He consumes that, Sage Durvāsa and his disciples are satiated, they experience filled stomachs. Is it not true the god of fire in the belly of all, Vaiśvānara, is none other than the Soul of souls, Lord Kṛṣna himself? When He himself is satisfied with the food offered by Draupadī, His worshippers, Sage Durvāsa and his disciples, are also satiated and they bless Pānḍavas and take leave. As the Lord Himself says in Bhagavadgītā, He is satisfied with an offering of a leaf, a flower, a fruit or even a drop of water if presented with devotion.  The One who is ever satisfied, loves the sentiment of surrender behind the offering rather than the quantum of offering. He expects and accepts offerings with purity of sentiment, as those of Vidura and Śabarī. While making offerings to the Lord or preceptors or elders, or, for the use of Lord's tasks, the importance is for purity of thought and the sentiment of detachment. Only then it becomes an 'offering' in the true sense. Here, we can recall the words of Śrī Śrīraṅga MahāguruIn outer space, an ingot of gold and a bale of cotton lose the importance of weight and travel the same way. They become weightless. In the same way, when offerings are made to the Lord with purity of thought, either they are mounds of gold or a single piece of coin, they all take the same form. They take the form of the Lord himself and lose their relative valuations. 

Note: The Kannada version of this article can be viewed at AYVM blogs.

Tuesday, April 26, 2022

ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯ(Bharatiya Natyakaleya Vaishistya)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)ನಾಟ್ಯವೆನ್ನುವುದು ವಿಶ್ವದಾದ್ಯಂತ ನಾನಾರೀತಿಗಳಲ್ಲಿ  ಬೆಳೆದುಬಂದಿದೆ. ಬ್ರೇಕ್ಡಾನ್ಸ್, ಬಾಲ್ ಡಾನ್ಸ್ ಮುಂತಾದ ಅನೇಕ ನಟನಶೈಲಿಗಳು ಪ್ರಚಲಿತವಾಗಿವೆ. ವಿಶ್ವದ ಎಲ್ಲೆಡೆಗಳಲ್ಲಿಯೂ ಅವರವರದೇ ಆದ ಕ್ರಮಗಳು ಬೆಳೆದುಬಂದಿವೆ. ಸಾಮಾನ್ಯವಾಗಿ ಇವೆಲ್ಲದರ ಉದ್ದೇಶವೂ ತಮ್ಮ ಕಲಾನೈಪುಣ್ಯದ ಪ್ರದರ್ಶನದಿಂದ ಪ್ರೇಕ್ಷಕರಿಗೆ ಮನರಂಜನೆಯನ್ನುಂಟುಮಾಡುವುದೇ ಆಗಿದೆ. ಅಲ್ಲದೇ ಇದರ ಹಿಂಬದಿಯಲ್ಲಿ ನರ್ತಿಸುವವರ ಕೀರ್ತಿಕಾಮನೆ, ಧನಕಾಮನೆಗಳೂ ಇರುವುದುಂಟು.  ಇದು ಎಲ್ಲ ದೇಶಗಳಿಗೂ ಅನ್ವಯಿಸುವ ಸಾಮಾನ್ಯ ಅಂಶವೇ  ಆಗಿದೆ.  


ಭಾರತವೂ ಸಹ ತನ್ನದೇ ಆದ ನಾಟ್ಯಶೈಲಿಗಳನ್ನು ಬೆಳೆಸಿಕೊಂಡು ಬಂದಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ, ಮೋಹಿನಿಯಾಟ್ಟಂ, ಕೂಚಿಪುಡಿ ಮುಂತಾದ ಪ್ರಧಾನವಾದ ಎಂಟು ಶೈಲಿಗಳನ್ನು ನೋಡಬಹುದಾಗಿದೆ.  ಪ್ರತಿಯೊಂದು ಶೈಲಿಯೂ ತಾಳಬದ್ಧವಾದ  ಅಭಿನಯಗಳ ಮೂಲಕ ನವರಸಗಳನ್ನು ಪ್ರದರ್ಶಿಸುವಲ್ಲಿ ಕೆಲವು ಅಂಶಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತವೆ. ನಟ-ನರ್ತಕಿಯರ ಆಭರಣ ಅಲಂಕಾರಗಳು ಅವರ ಸೌಂದರ್ಯವನ್ನು ಹೆಚ್ಚಿಸುತ್ತ  ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತವೆ.

ನಾಟ್ಯದ ಮೂಲ     

ಒಬ್ಬ ವ್ಯಕ್ತಿಯು ಅತ್ಯಂತ ನೋವಿನಿಂದಲೋ ದುಃಖದಿಂದಲೋ ನರಳುವಾಗ ಆ ನೋವು ಮುಖ-ಅಂಗಾಂಗಗಳ ಮೇಲೆ ತನ್ನನ್ನು ಮುದ್ರಿಸಿಕೊಳ್ಳುವುದನ್ನು ಸಾಮಾನ್ಯ ಜೀವನದಲ್ಲಿ ನೋಡಬಹುದಾಗಿದೆ. ಅಂತೆಯೇ ಸಂತೋಷ-ಉಲ್ಲಾಸಗಳೂ ಸಹ ತಮ್ಮ ಭಾವವನ್ನು ವ್ಯಕ್ತಿಯ ದೇಹದ ಮೇಲೆ ಒತ್ತುತ್ತದೆಯೆನ್ನುವುದು ಸಾಮಾನ್ಯಜ್ಞಾನ. ತೊಟ್ಟಿಲ ಕೂಸೂ ಸಹ ಸಂತೋಷವಾದಾಗ ಕೈ-ಕಾಲುಗಳನ್ನು ಉತ್ಸಾಹದಿಂದ ಆಡಿಸುತ್ತಾ ನಗುತ್ತದೆ. ಅದರ ನಗು, ಕೈಕಾಲುಗಳ ಚಲನೆಯೇ ಸಂತೋಷದ ಮಟ್ಟವನ್ನು ಸೂಚಿಸುವಂತಿರುತ್ತದೆ. ಹೀಗೆ ವಯೋಧರ್ಮ, ಪ್ರಕೃತಿಧರ್ಮಗಳಿಗನುಗುಣವಾಗಿ ಮನಸ್ಸಿನಲ್ಲೇಳುವ ಭಾವಗಳು   ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತೋರ್ಪಡಿಸಿಕೊಳ್ಳುತ್ತವೆ.  ಈ ಭಾವಗಳೂ, ಅವುಗಳು ಉಂಟುಮಾಡುವ ಮುಖ-ಅಂಗ ವಿನ್ಯಾಸಗಳೂ ಜನಸಾಮಾನ್ಯರಿಗೆ  ಸುಪರಿಚಿತವಾಗಿರುವುದರಿಂದ  ಆಯಾ ಭಂಗಿಗಳ ಅನುಕರಣೆಯು ನೋಡುಗರನ್ನು ಒಡನೆಯೇ ಅದರ ಭಾವದೆಡೆ ಎಳೆಯುತ್ತದೆ. ಮಾನವನ  ಮನಸ್ಸಿನಲ್ಲಿ ಮಾತ್ರವಲ್ಲದೆ ಪಶುಪಕ್ಷಿಗಳಲ್ಲಿ ಸುಳಿಯಬಹುದಾದ ವಿವಿಧ ಭಾವಗಳ ಅನುಕರಣೆಯೇ ನಾಟ್ಯವಾಗಿ ಮನರಂಜನೆಗೆ ವಿಷಯವಾಗುವುದು. ಆದ್ದರಿಂದ ಮನಸ್ಸೇ ನಾಟ್ಯಕ್ಕೆ ಮೂಲ ಎನ್ನುವುದು ಎಲ್ಲ  ನಾಟ್ಯಗಳಿಗೂ ಅನ್ವಯಿಸುವ  ಸತ್ಯ.   


ಭಾರತೀಯ ನಾಟ್ಯಕಲೆಯ ಮೂಲ 

ಮನರಂಜನೆಯೇ ನಾಟ್ಯದ ಪ್ರಯೋಜನವೆನ್ನುವುದಾದರೆ ಭಾರತೀಯವಾದ ನಾಟ್ಯಗಳಿಗೂ ಇತರ  ನಾಟ್ಯಗಳಿಗೂ ಪರಿಣಾಮದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಹಾಗಿದ್ದಲ್ಲಿ ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯವೇನು? ಸನಾತನಾರ್ಯ ಭಾರತಮಹರ್ಷಿಗಳಿಂದ ಬೆಳೆಸಲ್ಪಟ್ಟಿರುವ ಈ ಕಲೆಯ ವೈಶಿಷ್ಟ್ಯವನ್ನರಿಯಲು ಮಹರ್ಷಿಗಳ ಮನೋಭೂಮಿಕೆಯಲ್ಲಾಡಿದ ವಿಚಾರಗಳನ್ನು ತಿಳಿಯುವುದು ಆವಶ್ಯಕ. ಈ ನಿಟ್ಟಿನಲ್ಲಿ ಮಹರ್ಷಿಹೃದಯವೇದಿಗಳಾದ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯು ಉಲ್ಲೇಖಾರ್ಹವಾಗಿದೆ. ಮನಸ್ಸಿನಲ್ಲಾಡುವ ವಿಚಾರಗಳೆಲ್ಲವೂ ಇಂದ್ರಿಯಪ್ರಪಂಚದಿಂದ ಇಂದ್ರಿಯಗಳ ಮೂಲಕವೇ ಬರುವುವೆಂಬುದು ಸಾಮಾನ್ಯಜ್ಞಾನ. ಆದರೆ ಭಾರತೀಯಮಹರ್ಷಿಗಳು ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಮನಸ್ಸನ್ನು ಒಳಪ್ರಪಂಚದತ್ತ ತಿರುಗಿಸಿದರು. ಹಿಂದೆ ಬೆಳಗುವ ದೇವತಾಶಕ್ತಿಗಳನ್ನೂ, ಅವುಗಳಿಗೂ ಶಕ್ತಿಯನ್ನೀವ ಮನಸಸ್ಪತಿಯಾದ ಪರಮಪುರುಷನನ್ನು ಕಂಡರು. ಆ ದರ್ಶನಗಳಿಂದ ಅವರಲ್ಲಿ ಲ್ಲಿ ತುಂಬಿದ ದೈವೀರಸದ ಪರಮಾನಂದಭಾವವು  ಮುಂದೆ ಅವರ ಮನದುಂಬಿ  ತನ್ನದೇ ಆದ ರೀತಿಯಲ್ಲಿ ಮುಖ-ಅಂಗಾಂಗಗಳ ಮೇಲೆಯೂ ಪ್ರಕಟಗೊಂಡಿತು.  ಆ ಭಾವ-ಭಂಗಿಗಳು ಸುಸಂಸ್ಕಾರಿಗಳಾದ ನೋಡುಗರನ್ನು ಭಾವಮೂಲವಾದ ಒಳ ಅನುಭವಸ್ಥಾನಕ್ಕೆ ಕರೆದೊಯ್ಯುವುವೆಂಬುದನ್ನು  ಅರಿತ ಮಹರ್ಷಿಗಳು ಅವುಗಳನ್ನು ಚಿತ್ರ-ಶಿಲ್ಪಗಳ ಮೂಲಕ ಹೊರಗಿಟ್ಟರು. ಆ ಭಾವಗಳನ್ನೇ ನಾಟ್ಯದ ರೂಪದಲ್ಲಿ ತೋರಲು ನಾಟ್ಯಶಾಸ್ತ್ರವನ್ನೂ ತಂದರು. 

ಆದ್ದರಿಂದ ಭಾರತೀಯ ನಾಟ್ಯಕಲೆಯ ಮೂಲ ಮನಸ್ಸಲ್ಲ, ಮನಸ್ಸಿಗೂ ಹಿಂದಿರುವ ಶಕ್ತಿಗಳು. ಮನಸ್ಸು ಒಂದು ಮಾಧ್ಯಮವಷ್ಟೆ. 


ನಾಟ್ಯ -ಒಂದು ಕಲೆ 

'ಕಲೆ'ಯೆಂಬ ಪದವು ಅಂಶ(ಭಾಗ) ಎಂಬರ್ಥವನ್ನೊಳಗೊಂಡಿದೆ.  ಅಂಶವು ತನ್ನ ಮೂಲವಾದ ಪೂರ್ಣದೊಂದಿಗೆ ಸಂಬಂಧವನ್ನುಳಿಸಿಕೊಂಡಿದ್ದರೆ ಮಾತ್ರ ಅಂಶವೆನಿಸಿಕೊಳ್ಳುವುದು. ಅಂತೆಯೇ ನಾಟ್ಯವೂ  ತನ್ನ ಮೂಲವಾದ  ಮನಸಸ್ಪತಿಯೊಂದಿಗೆ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡಾಗ ಮಾತ್ರವೇ 'ಕಲೆ'ಯಾಗುವುದು.  "ಕಲೆಯು ನೆಲೆಯನ್ನು ಮುಟ್ಟಿಸುವಂತಿರಬೇಕು" ಎನ್ನುವ ಶ್ರೀರಂಗಮಹಾಗುರುಗಳ ಸೂತ್ರರೂಪವಾದ ಮಾತು ಇಲ್ಲಿ ಸ್ಮರಣೀಯ. 

ಕೇವಲ ಭಾವಾಭಿನಯ ಮಾತ್ರವಿದ್ದಾಗ ಅದು ನೃತ್ತವೆನಿಸಿಕೊಳ್ಳುತ್ತದೆ. ತಾಳ-ಲಯಬದ್ಧವಾದಾಗ ನೃತ್ಯವೆನಿಸುವುದು. ಸಂಗೀತದೊಡನೆ ಸಮ್ಮಿಲಿತವಾಗಿ ಭಾವ-ರಾಗ-ತಾಳಗಳಿಂದ ಕೂಡಿದಾಗ   ನಾಟ್ಯಕಲೆಯಾಗಿ ಜನಮನವನ್ನು ಆಕರ್ಷಿಸುತ್ತದೆ.  ದೈವೀಭಾವದಲ್ಲಿ ಮುಳುಗಿ ಅ ಭಾವವನ್ನು ಹೊರತರಬಲ್ಲ ನರ್ತಕ-ನರ್ತಕಿಯರ ನಾಟ್ಯವು  ಸುಸಂಸ್ಕೃತರಾದವರನ್ನು ಜೀವನದ ಒಳ ಸತ್ಯದತ್ತ ಅವಶ್ಯವಾಗಿ ಸೆಳೆಯಬಲ್ಲದು. ನಾಟ್ಯದೊಂದಿಗೆ ಸೇರುವ ಸಂಗೀತವೂ ಸಹ  ಭಾರತೀಯ ಸಂಸ್ಕೃತಿಯಲ್ಲಿ ಸೃಷ್ಟಿಮೂಲವಾದ ಪ್ರಣವದ ವಿಸ್ತಾರವೇ ಆಗಿದೆ. 

ತಕಾರ-ಲಕಾರಗಳು ಶಂಕರ-ಶಕ್ತಿಯರನ್ನು ಸೂಚಿಸುವುದರಿಂದ 'ತಾಳ'ವು ಆ ಶಿವ-ಶಿವೆಯರ ಸಮ್ಮೇಳನವನ್ನೇ ಸೂಚಿಸುತ್ತದೆಂಬುದು ಜ್ಞಾನಿಗಳ ನೋಟ. ಶಿವ-ಶಕ್ತಿಯರ, ಸೃಷ್ಟಿ-ಸ್ಥಿತಿ-ಲಯ ಲೀಲಾವಿಲಾಸಗಳನ್ನೇ ಅವರ ದಿವ್ಯನಾಟ್ಯವೆಂಬುದಾಗಿ ನಮ್ಮ  ಮಹರ್ಷಿಗಳು ಕಂಡಿದ್ದಾರೆ. ಆದ್ದರಿಂದ        ಬ್ರಹ್ಮಾಂಡವೇ  ಪರಮಾತ್ಮನ ನಾಟ್ಯರಂಗವೆಂಬ ಸತ್ಯಾರ್ಥವನ್ನು ಸಾರಿದರು.

ನಾಟ್ಯದ ಜೊತೆಗೂಡುವ ವೀಣಾ-ವೇಣು-ಮೃದಂಗಾದಿ ವಾದ್ಯಗಳ ನಾದಗಳು ಮಹರ್ಷಿಗಳ ಅಂತ:ಶ್ರವಣ ಗೋಚರವಾದ ದಶವಿಧ ನಾದಗಳ ಹೊರರೂಪಗಳೇ ಆಗಿವೆ. ಈ  ಹೊರ ನಾದಗಳೂ ನಮ್ಮನ್ನು ತಮ್ಮ ಒಳಮೂಲದತ್ತ ಸೆಳೆಯಬಲ್ಲವು.  ಆದ್ದರಿಂದ ಭಾವ-ರಾಗ-ತಾಳಗಳಿಂದ ಕೂಡಿ ಜನರನ್ನು ರಂಜಿಸುವ ನಾಟ್ಯಕಲೆಯು ತನ್ನ ಪ್ರತಿಯೊಂದು ಅಂಶದಿಂದಲೂ ಜನಮನವನ್ನು ಭಗವಂತನೆಡೆ ಸೆಳೆಯಬಲ್ಲದಾದ್ದರಿಂದ ಅದೊಂದು ಕಲೆಯೇ ಆಗುವುದೆಂಬುದು ಜ್ಞಾನಿಗಳ ತೀರ್ಮಾನವಾಗಿದೆ. 


ನಾಟ್ಯ-ಒಂದು ವೇದ 

ನಾಟ್ಯವು 'ನಾಟ್ಯವೇದ`ವೆಂದೂ ಪ್ರಸಿದ್ಧವಾಗಿದೆ. ಯಾವುದೇ ವೇದಮಂತ್ರಗಳೂ ಕಾಣಿಸಿಕೊಳ್ಳದಿರುವ ನಾಟ್ಯವನ್ನು ವೇದವೆನ್ನುವುದು ಸೂಕ್ತವೇ? ಜ್ಞಾನಿಗಳ ಮತದಲ್ಲಿ ವೇದವೆನ್ನುವುದು ಮಂತ್ರರಾಶಿಯನ್ನೊಳಗೊಂಡ ಸಾಹಿತ್ಯಮಾತ್ರವಲ್ಲ. ಸೃಷ್ಟಿಮೂಲಶಕ್ತಿ-ಭಗವಂತನೇ ಋಷಿದೃಷ್ಟಿಯಲ್ಲಿ 'ವೇದ' ಎಂಬುದಾಗಿದೆ. ಅತೀಂದ್ರಿಯ ಪ್ರಪಂಚದಿಂದಲೇ ಉಗಮವಾಗುವ, ಅಂತ:ಶ್ರವಣಗೋಚರವಾದ ಮಂತ್ರಗಳೂ ವೇದವೆಂದು ಕರೆಯಲ್ಪಟ್ಟುದು ಈ ಹಿನ್ನೆಲೆಯಿಂದಲೇ. (ಅವುಗಳನ್ನೇ ಪುಸ್ತಕದಲ್ಲಿ ಉಲ್ಲೇಖಿಸಿದಾಗ ಪುಸ್ತಕವೂ ವೇದವೆನಿಸುವುದು). ಈ ಮಂತ್ರಗಳನ್ನು ಶ್ರುತವಾದಂತೆಯೇ ಉಚ್ಚರಿಸಿದಾಗ ಅವು ತಮ್ಮ ಮೂಲವಾದ ದೈವೀಸ್ಥಾನಕ್ಕೇ ಪಠಿಸುವವರನ್ನೂ ಕೇಳುವವರನ್ನೂ ಏರಿಸಬಹುದು. ನಾಟ್ಯವೂ ವೇದದಂತೆಯೇ  ಅತೀಂದ್ರಿಯ  ಪ್ರಪಂಚದಲ್ಲೇ ಜನಿಸಿ, ವೇದದಂತೆಯೇ ಪರಂಜ್ಯೋತಿಯ ಕಡೆಗೆ ಜೀವಿಗಳನ್ನು ಕರೆದೊಯ್ಯಬಲ್ಲುದು. ಆದ್ದರಿಂದಲೇ "ಪರಾತ್ಮಾ ವೇದ್ಯತೇ ಯೇನ ಸ ವೇದೋ ವೇದ ಉಚ್ಯತೇ"(ಪರಮಾತ್ಮನನ್ನು ತಿಳಿಯಲು ಸಹಾಯಕವಾದುದೆಲ್ಲವೂ ವೇದವೇ)  ಎಂಬ ಆರ್ಷವಾಣಿಯಂತೆ ನಾಟ್ಯಕ್ಕೂ ವೇದವೆಂಬ ಹೆಸರು ಸೂಕ್ತವೇ ಆಗಿದೆಯೆಂಬ ಮಹಾಗುರುಗಳ ವಿವರಣೆಯನ್ನು ಸ್ಮರಿಸುತ್ತೇವೆ.  

   

ನಾಟ್ಯ-ಒಂದು ಯಜ್ಞ 

ಯಜ್ಞವೆಂದರೆ ದೇವತಾಪ್ರೀತಿಯನ್ನುಂಟು ಮಾಡುವ ಕ್ರಿಯೆ. ನಾಟ್ಯವು ಕಲೆಯೇ ಆಗುವ ಪಕ್ಷದಲ್ಲಿ ನರ್ತಕ-ನರ್ತಕಿಯರು ದೇವಭಾವಕ್ಕೇರಿ ಅದನ್ನು ತಮ್ಮ ಹೊರ ಅಂಗಾಂಗಗಳ ಮೂಲಕ ಹೊರತರುವ ಕ್ರಿಯೆಯಾಗುತ್ತದೆ. ಹೀಗೆ ದೈವೀಭಾವಕ್ಕೇರುವುದೇ ದೇವತಾಪ್ರೀತಿಕರವಾದದ್ದು. ಆದ್ದರಿಂದ ನಾಟ್ಯಕಲೆಯು ಯಜ್ಞವೇ ಸರಿ ಎಂಬುದು ಜ್ಞಾನಿಜನಸಮ್ಮತವಾದ ಮಾತಾಗಿದೆ. 

ದೇವಾದಿದೇವನಾದ ಪರಮಾತ್ಮನ ಭಾವಕ್ಕೇರಿದಾಗ ಅಲ್ಲಿ ಮೂಡಿಬರುವುದು ಶಾಂತರಸ. ಆತನಿಂದ ವಿಸ್ತಾರವಾದ ಶಕ್ತಿಗಳು ಮತ್ತು ಅವರ ವಿಲಾಸಗಳನ್ನು ತೋರಿಸುವಾಗ ಅಲ್ಲಿ ತ್ರಿಗುಣಗಳ ಪಾತ್ರವು ಸೇರುತ್ತದೆ. ತ್ರಿಗುಣಗಳೇ ಶೃಂಗಾರಾದಿ ರಸಗಳನ್ನೊಳಗೊಂಡ ಸಮಸ್ತ ಲೋಕವ್ಯಾಪಾರಗಳನ್ನೂ ಆವರಿಸಿವೆ. ಆದ್ದರಿಂದ ನಾಟ್ಯದಲ್ಲಿ ರಸಗಳೆಲ್ಲಕ್ಕೂ ಮೂಲವಾದ ಶಾಂತರಸದ ಅಭಿನಯದಿಂದ ಪ್ರಾರಂಭವಾಗಿ, ನವರಸಗಳನ್ನೂ ಪ್ರದರ್ಶಿಸಿ ಕೊನೆಗೆ ಶಾಂತರಸದಲ್ಲೇ ನಿಲ್ಲಿಸುವ ಪದ್ಧತಿಯಿದೆ. ಅಂದರೆ ಜನರಿಗೆ ಪರಿಚಿತವಾದ ರಸಗಳನ್ನೇ ತೋರುತ್ತಾ ಅವರನ್ನಾಕರ್ಷಿಸಿ ಮೆಲ್ಲಗೆ ಶಾಂತರಸದಲ್ಲಿ ನಿಲ್ಲಿಸುವ ಜಾಣ್ಮೆಯನ್ನು ಇಲ್ಲಿ ಕಾಣಬಹುದಾಗಿದೆ. ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ  ಸಮಾರಾಧನಂ ಎಂದು ಮಹಾಕವಿ ಕಾಳಿದಾಸನು ಕೊಂಡಾಡುವಂತೆ ನಾನಾ ರಸಗಳಲ್ಲಿ ಅಭಿರುಚಿಯುಳ್ಳ  ಜನರೆಲ್ಲರನ್ನೂ ತೃಪ್ತಿಗೊಳಿಸುವ ಸಮಾರಾಧನೆಯೇ ಆಗಿದೆ. 

ಇಂದಿನ ಭಾರತೀಯ ನಾಟ್ಯಕಲೆಯು ಮನಮೋಹಕವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ನಿಸ್ಸಂಶಯ. ಇದರೊಂದಿಗೆ ಯೋಗದೃಷ್ಟಿಯೂ ಸಮ್ಮಿಲಿತವಾದಾಗ ಇದು ನಿಜವಾದ ನಾಟ್ಯಕಲೆಯಾಗುವುದರಲ್ಲಿ ಸಂಶಯವಿಲ್ಲ. ಆ ಗುರಿಯತ್ತ ಇಂದಿನ ನಾಟ್ಯಕಲಾಭ್ಯಾಸವು ಸಾಗಲೆಂದು ಆಶಿಸೋಣ.


ಸೂಚನೆ: 21/04/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.

Sunday, April 24, 2022

ಶ್ರೀ ರಾಮನ ಗುಣಗಳು - 52 ಶಿಷ್ಯೋತ್ತಮ- ಶ್ರೀರಾಮ (Sriramana Gunagalu -52 Sisyottama- Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)
ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯಇದು ಲಭಿಸುವುದು ಗುರುವಿನಿಂ. ಅವನಿಂದ ಶಿಕ್ಷಣಪಡೆಯುವವನೇ ಶಿಷ್ಯನಾಗುತ್ತಾನೆ. ಗುರು-ಶಿಷ್ಯಸಂಬಂಧದಿಂದಲೇ ವಿದ್ಯೆ ಪೂರ್ಣವಾಗುವುದು. ಶ್ರೀರಾಮನೂ ಕೂಡ ಒಬ್ಬ ಸಾಮಾನ್ಯಮಾನವನಾಗಿ ಧರೆಗೆ ಅವತರಿಸಿ. ಹಾಗಾಗಿ ಶಿಕ್ಷಣವೆಂಬುದು ಅನಿವಾರ್ಯವಾಗಿತ್ತುವಸಿಷ್ಠರ ಬಳಿ ವೇದಾಂಗಸಹಿತವಾಗಿ ನಾಲ್ಕು ವೇದಸ್ಮೃತಿಇತಿಹಾಸಪುರಾಣಾದಿಗಳನ್ನು ಕಲಿತವಾಲ್ಮೀಕಿಗಳು ಹೇಳುವಂತೆ 'ಧನುರ್ವೇದೇ ಚ ನಿಷ್ಠಿತಃಎನ್ನುವಂತೆ ಧನುರ್ವೇದದಲ್ಲೂ ಅತ್ಯಂತ ಪ್ರಾವೀಣ್ಯವನ್ನು ಸಂಪಾದಿಸಿದ್ದನುಇಂತಹ ಸಂದರ್ಭದಲ್ಲಿ ಬಹಳ ವಿಶೇಷವಾದ ಘಟನೆಯೊಂದು ಘಟಿಸುತ್ತದೆಇದು ಶ್ರೀರಾಮನು 'ಶಿಷ್ಯೋತ್ತಮ'ನಾಗಿದ್ದ ಎಂಬುದನ್ನು ಪುಷ್ಟೀಕರಿಸುತ್ತದೆ.

ಒಬ್ಬ ಗುರುವಾದವನು ತನ್ನೆಲ್ಲ ವಿದ್ಯೆಗಳನ್ನು ಉತ್ತಮ ಶಿಷ್ಯನಿಗೆ ಧಾರೆಯೆರೆಯಬೇಕೆಂಬ ತುಡಿತವಿರುತ್ತದೆಆಗ ಆ ವಿದ್ಯಾಧಿದೇವತೆಯೂ ಅರ್ಹನ ಬಳಿ ವಿರಾಜಮಾನಳಾಗುತ್ತಾಳೆವಿದ್ಯಾದೇವತೆಯು ಗುರುವಿನ ಬಳಿ ಹೋಗಿ ಹೀಗೆ ಪ್ರಾರ್ಥಿಸುತ್ತಾಳೆ ಎಂಬುದಾಗಿ ಉಪನಿಷತ್ತು ಸಾರುತ್ತದೆ – "ಹೇವಿದ್ಯಾಗುರುವೇನನ್ನನ್ನು ರಕ್ಷಿಸುನನ್ನನ್ನು ಅಪ್ರಾಮಾಣಿಕನಿಗೆಅಸೂಯಕನಿಗೆಕೃತಜ್ಞತೆ ಇಲ್ಲದಿರುವವನಿಗೆ ಕೊಬೇಡನಾನು ಯಾವ ರೀತಿ ವೀರ್ಯವತಿಯಾಗಿ ಇರಬೇಕೋಅಂತೆಯೇ ನನ್ನನ್ನು ರಕ್ಷಿಸುಎಂದು.

ಅನೇಕ ವರ್ಷಗಳಿಂದ ಮಕ್ಕಳಾಗದಿರುವುದರಿಂದ ದಶರಥರಾಜನಿಗೆ ಸಂತತಿಯ ಕೊರಗಿತ್ತುಅದು ಶ್ರೀರಾಮನ ಮುಖದರ್ಶನದಿಂದ ದೂರವಾಯಿತುಸ್ವಲ್ಪ ಸಮಯದಲ್ಲಿ ಮತ್ತೊಮ್ಮೆ ಬಿರುಗಾಳಿಯೇ ಎದ್ದಂತೆ ಅವನಿಗೆ ಅನಿಸಿತುಅದಾವುದೆಂದರೆ ವಿಶ್ವಾಮಿತ್ರ ಮಹಾಮುನಿಗಳ ಆಗಮನಅವರು ಬಂದು ಶ್ರೀರಾಮನನ್ನು ಯಜ್ಞರಕ್ಷಣೆಗಾಗಿ ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾರೆರಾಜನಾದರೋ 'ಊನಷೋಡಶವರ್ಷೀಯನಾದ ರಾಮನನ್ನು ಹೇಗಪ್ಪ ಕಳಿಸಲಿ!' ಎಂಬ ಆತಂಕಕ್ಕೆ ಒಳಗಾಗುತ್ತನೆಶ್ರೀರಾಮನ ನಿಜವಾದ ಸಾಮರ್ಥ್ಯ ಮತ್ತು ಸ್ವಭಾವವನ್ನು ಅರಿತಿದ್ದ ವಿಶ್ವಾಮಿತ್ರರು ಕಳಿಸಿಕೊಡುವಂತೆ ಒತ್ತಾಯಿಸುತ್ತಾರೆಅವರ ತುಡಿತವೇ ಬೇರೆಅವರಿಗೆ ಯಜ್ಞರಕ್ಷಣೆಯೆಂಬುದು ಒಂದು ನೆಪವಷ್ಟೆಎಂತೆಂಹ ರಾಕ್ಷಸರನ್ನೂ ಸಂಹರಿಸಬಲ್ಲ ಅಪಾರ ಶಕ್ತಿಸಂಪನ್ನರು ಅವರುಅವರಿಗೆ ಶ್ರೀರಾಮನ ಸಹಾಯದ ಅವಶ್ಯಕತೆ ಉಂಟೇಅಲ್ಲಿ ಶ್ರೀರಾಮನನ್ನು ಕರೆಯುತ್ತಿರುವ   ಉದ್ದೇಶ ಯಜ್ಞರಕ್ಷಣೆಯಲ್ಲಅದು ವಿದ್ಯಾದಾನದ ತುಡಿತಸತ್ಪಾತ್ರನಿಗೆ ವಿದ್ಯೆಯನ್ನು ಕೊಟ್ಟಾಗಲೇ ಗುರುವಿಗೆ ನೆಮ್ಮದಿಶ್ರೀರಾಮನಂತಹ ಸತ್ಪಾತ್ರರು ಇನ್ನಾರು ಸಿಕ್ಕಾರು?

ಶಿಷ್ಯ ಎಂಬ ಪದಕ್ಕೆ ಶ್ರೀರಂಗ ಮಹಾಗುರುಗಳ ಅಭಿಪ್ರಾಯದಂತೆ ಹೀಗೆ ವಿವರಿಸಬಹುದು – ಗುರುವಿನಲ್ಲಿ ಒಂದಾಗುವವನೇ ಶಿಷ್ಯ(ಶಿಷ್ಯತೇ ಇತಿ ಶಿಷ್ಯಃ) ಎಂದುಯಾರು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಗುರುವಿನ ರೂಪವನ್ನೇ ತಾಳುತ್ತಾನೋ ಆತನನ್ನು ಶಿಷ್ಯನೆಂದು ಕರೆಯಬಹುದುಶಾಸನಕ್ಕೆ ಅರ್ಹನಾದವನು ಎಂಬುದಾಗಿಯೂ ಅದಕ್ಕೆ ವಿವರಣೆಯನ್ನು ಭಾಷಾಶಾಸ್ತ್ರದ ಹಿನ್ನೆಲೆಯೆಲ್ಲಿ ನೀಡಬಹುದುಒಬ್ಬ ಶಿಷ್ಯನಿಗೆ ಉತ್ತಮ ಗುರುವಿನ ಲಭ್ಯತೆಯು ಹೇಗೆ ಸಾರ್ಥಕತೆಯನ್ನು ತಂದುಕೊಡುತ್ತದೆಯೋಅಂತೆಯೇ ಒಬ್ಬ ಗುರುವಿಗೆ ಉತ್ತಮಶಿಷ್ಯನ ಲಾಭವು ಅಂತಹ ಸಾರ್ಥಕಭಾವವನ್ನು ತಂದುಕೊಡುತ್ತದೆಇಂತಹ ಗುರುಶಿಷ್ಯಭಾವವನ್ನು  ವಿಶ್ವಾಮಿತ್ರರು ಮತ್ತು ಶ್ರೀರಾಮನಲ್ಲಿ ಕಾಲು ಸಾಧ್ಯವಸಿಷ್ಠರ ಅನುಮೋದನೆಯೊಂದಿಗೆ ದಶರಥನು ಶ್ರೀರಾಮನನ್ನು ವಿಶ್ವಾಮಿತ್ರರ ಜೊತೆ ಕಳಿಸಿಕೊಡಲು ಸಮ್ಮತಿಸುತ್ತಾನೆವಿಶ್ವಾಮಿತ್ರರು ಶ್ರೀರಾಮ-ಲಕ್ಷ್ಮಣರಿಗೆ ಅನೇಕ ಗುಹ್ಯವಾದ ಅಸ್ತ್ರವಿದ್ಯೆಗಳನ್ನು ಧಾರೆಯೆರೆಯುತ್ತಾರೆ. ಬಲ-ಅತಿಬಲ ಎಂಬ ಅಸ್ತ್ರಗಳನ್ನು ಉಪದೇಶಿಸುತ್ತಾರೆದಾರಿಯುದ್ದಕ್ಕೂ ರಘುವಂಶದ ಹಿರಿಮೆಯನ್ನು ಸಾರುವಂತಹ ಗಂಗಾವತರಣ ಮುಂತಾದ ಕಥೆಗಳನ್ನು ಹೇಳುತ್ತಾ ಅವನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಶಿಕ್ಷಿತನನ್ನಾಗಿ ಮಾಡುತ್ತಾರೆ.

ಸೂಚನೆ :24/4/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ. 


ಅಷ್ಟಾಕ್ಷರ ದರ್ಶನ -9 ಆ ಮೃತ್ಯೋಃ ಶ್ರಿಯಮನ್ವಿಚ್ಛೇತ್ (Astakshara Darshana -9 A Mrutyoh Shriyamanvicchet)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಭಾರತೀಯ ಸಂಸ್ಕೃತಿಯನ್ನು ದೂರುವ ಮಂದಿ ಪದೇ ಪದೇ ಹೇಳುವ ಮಾತೊಂದಿದೆ. ಜಗತ್ತು ನಶ್ವರವೆಂದೋ ಮಿಥ್ಯೆಯೆಂದೋ ಭಾರತೀಯರು ನಂಬಿಕೊಂಡರು; ಸದಾ ಪರಲೋಕಪರರಾಗಿದ್ದುಬಿಟ್ಟು, ಐಶ್ವರ್ಯಸಂಪಾದನೆ-ಭೋಗಪ್ರಾಪ್ತಿಗಳನ್ನು ಕಡೆಗಾಣಿಸಿದರು: ಎಂದೇ ಬಂದದ್ದು ದೇಶಕ್ಕೆ ಬಡತನ  - ಎಂದು.

 

ಆದರೆ ಆ ವಾದಕ್ಕೆ ಕೊಡಲಿ ಏಟನ್ನೇ ಕೊಡುತ್ತದೆ, ಈ ಮನುವಚನ:

ಸಾಯುವವರೆಗೂ ಸಂಪತ್ತನ್ನು ಬಯಸಬೇಕು (ಆ ಮೃತ್ಯೋಃ ಶ್ರಿಯಮನ್ವಿಚ್ಛೇತ್) – ಎನ್ನುತ್ತದೆ ಮನುಸ್ಮೃತಿ!  "ಎಷ್ಟಾದರೂ ಹಣ ಕೆಟ್ಟದ್ದೇ" – ಎನ್ನುವವರಿಗೆ "ಅಯ್ಯೋ, ಮನುವು ಹೀಗೆ ಹೇಳಿರುವನೇ!" – ಎಂದು ಅಚ್ಚರಿಯಾಗಬಹುದಲ್ಲವೇ?

 

ಧನದ ಬಗ್ಗೆ ತಿಳಿವಳಿಕೆಕೊಡುವ ಶಂಕರಾಚಾರ್ಯರ ಮಾತುಗಳಿಗೂ ಇದು ವಿರುದ್ಧವೆನಿಸುವುದಿಲ್ಲವೇ? ಅವರ ಪ್ರಸಿದ್ಧವಾದ ಭಜಗೋವಿಂದ-ಸ್ತೋತ್ರವು ಸೂಚಿಸುವ ಕೆಲವು ಎಚ್ಚರಿಕೆಗಳನ್ನೊಮ್ಮೆ ನೋಡೋಣವೇ?

 

ಧನಸಂಪಾದನದಾಹವನ್ನು ಬಿಡೆಲೋ ಮೂಢ, ಎಂದು ಆರಂಭದಲ್ಲೇ ಅದು ಎಚ್ಚರಿಸುತ್ತದೆ. ಹಣಗಳಿಸುತ್ತಿರುವವರೆಗೆ ಮಾತ್ರವೇ ಬಂಧುಬಾಂಧವರಿಗೆ ನೀ ಬೇಕಾಗುವುದು; ಶರೀರವು ಬೀಳಾಗುತ್ತಿರಲು ಕೇಳಲಾರಿದ್ದಾರು? - ಎಂದು ಮೂದಲಿಸಿ, ಲೋಕದ ಸಂಬಂಧಗಳು ಗಟ್ಟಿಯಲ್ಲವೆಂದು ಸೂಚಿಸುತ್ತದೆ. ಧನಬಲ-ಜನಬಲ-ಯೌವನಬಲಗಳು ಗರ್ವಕಾರಕ; ಅವನ್ನೆಲ್ಲಾ ಕ್ಷಣಮಾತ್ರದಲ್ಲಿ ಕಾಲ ಕಸಿಯಬಲ್ಲುದು! ನಿರಂತರ ಕಾಂತಾಚಿಂತೆ-ಧನಚಿಂತೆಗಳಿಂದೇನು ಬಂತು? ದಾಟಿಸತಕ್ಕದ್ದು ಸಜ್ಜನರ ಸಂಗವೇ; "ಅರ್ಥಂ ಅನರ್ಥಂ!" ಎಂದುಕೋ: ಅದರಿಂದ ಸುಖಲೇಶವೂ ಬಾರದು; ಹಣವಂತರಿಗೆ ತಮ್ಮ ಮಕ್ಕಳಿಂದಲೂ ಭೀತಿಯೇ!

 

ಹೀಗೆ ಧನವ್ಯಾಮೋಹವನ್ನೂ ಅದರ ದುಷ್ಪರಿಣಾಮಗಳನ್ನೂ ತೋರಿಸಿ, "ಸ್ವಂತದುಡಿಮೆಯಿಂದ  ಪಡೆದ ಧನವಷ್ಟರಿಂದಲೇ ಸಂತುಷ್ಟನಾಗು; ದೀನಜನರಿಗೆ ಧನದಾನ ಮಾಡು" - ಎಂದು ಹಿತವಚನವನ್ನೇ ಹೇಳುತ್ತದೆ.

 

ಲೋಕದ ಭ್ರಾಂತಿಗಳು ವಿಚಿತ್ರವಾದ್ದರಿಂದಲೇ ಇಷ್ಟೆಲ್ಲಾ ಎಚ್ಚರಗಳು. ಹಣವೆಂದರೆ ಹೆಣವೂ ಬಾಯಿಬಿಡುತ್ತದೆಯೆಂದು ಗಾದೆಯಿಲ್ಲವೇ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" - ಎಂಬ ಕಾಲ ಹೋಯಿತೋ ಏನೋ? ಎಲ್ಲರೂ ಮಾಡುವುದೂ ಹಣಕ್ಕಾಗಿ - ಎಂಬ ಯುಗವೊಂದು ಬಂದವತರಿಸಿದಂತಿದೆ.

 

ಹಣದ ಬಗೆಗಿನ ಲೋಕರೂಢಿಯ ಪ್ರಚುರನೀತಿವಚನಗಳನ್ನೂ ಒಮ್ಮೆ ನೋಡಿ: ಲೋಕದಲ್ಲಿ ಮನುಷ್ಯನಿಗೆ ಹಣವೇ ಬಂಧು; ಸಮಾಜದಲ್ಲಿ ಗೌರವವೆಂಬುದು ಹಣದಿಂದ; ಹಣವಂತನಿಗೇ ಮಿತ್ರರು ದೊರೆಯುವುದು; ಧನವಂತನೇ ಬಲವಂತ. ಹಣವಿದ್ದರೆ ಹೆಂಗಸೂ ಗಂಡಸಿನಂತೆ ಸಬಲೆ; ಹಣವಿಲ್ಲದಿದ್ದರೆ ಗಂಡಸೂ ಹೆಂಗಸಿನಂತೆ ಅಬಲ.

 

ಹಣವನ್ನು ಬೇಡವೆನ್ನುವಂತಿಲ್ಲ: ಆಪತ್ಕಾಲಕ್ಕಾಗಿಯೂ ಬೇಡವೆಂದೇವೇ? ದಾನ-ಭೋಗಗಳಿಗಾಗಿ ಬರುವುದೇ ಧನ. ಧನವಿಲ್ಲವೋ, ಧರ್ಮಕಾರ್ಯಗಳನ್ನು ಸಹ ನೀ ಮಾಡಲಾರೆ. ದಾನವನ್ನು ಬಿಡಬೇಡ: ಬೇಡುವವರಲ್ಲಿ ಬಡವರಲ್ಲಿ ವಿತರಣೆಗೆ ಬರುವಂತಹುದೇ ನಿಜವಾದ ಸಂಪತ್ತು. ಸಂಪಾದಿತವಾದ ಸೊತ್ತಿಗೆ ಸಂರಕ್ಷಣೆಯೊಂದು ಬೇಕಲ್ಲವೇ?: ದಾನವೇ ಆ ರಕ್ಷಣೆ. "ಧರ್ಮ-ಕಾಮಗಳಿಗೆ ಅರ್ಥವೇ ಮೂಲವಲ್ಲವೇ?" – ಎಂದಿದ್ದಾನಲ್ಲವೇ ಕೌಟಲ್ಯ?

 

ಕೆಲವು ಎಚ್ಚರದ ಮಾತುಗಳೂ ಉಂಟು: ಧನಿಕರಿಗೇ ದಾನ ಮಾಡುವುದು ತರವಲ್ಲ. ಏನೇ ಆದರೂ ಧನಿಕರಿಗೇ ಧನದಾಹ ಜಾಸ್ತಿ; ಧನಮದ ಬಂದವನು, ಬಿದ್ದಮೇಲೇ ಎಚ್ಚರಗೊಳ್ಳುವುದು; ಚಾರಿತ್ರವಿಲ್ಲದವನು ಎಷ್ಟೇ ಧನಿಕನಾದರೂ ಇಂದೋ ನಾಳೆಯೋ ಬೀಳತಕ್ಕವನೇ. ಹಣದ ಕಾರಣದಿಂದಾಗಿಯಷ್ಟೆ ಹೆಂಡತಿಯಾಗಿರುವವಳನ್ನು ಹೆಂಡತಿಯೆನ್ನಲಾದೀತೇ?

 

ಧರ್ಮದಿಂದ ಸಂಪಾದಿಸಿದ ಹಣವೇ ಸತ್ಯ: ಧನ-ಸಂಪಾದನೆಯಲ್ಲಿ ಶುಚಿಯಾಗಿರು; ಅಧರ್ಮದ ಹಣವನ್ನೊಲ್ಲೆಯೆನ್ನು. ಮೂಲಧನವನ್ನು ಕಾಪಾಡಿಕೋ. ಸಾಹುಕಾರನೆಂದರೆ ಹೆಚ್ಚು ಹಣವುಳ್ಳವನೆಂದು ಹೇಳುವರು; ವಾಸ್ತವವಾಗಿ ಗುಣವೇ ನಿಜವಾದ ಧನ. ವಿತ್ತ ಹೋದರೆ ನಷ್ಟವಿಲ್ಲ; ವೃತ್ತ(ನಡತೆ) ಹೋದರೆ ಎಲ್ಲವೂ ಹಾಳು.

 

ಇವೆಲ್ಲವೂ ಲೋಕನೀತಿಯ ಮಾತುಗಳೇ. ನಾನಾದೃಷ್ಟಿಗಳಿಂದ ಆಡಿದವು; ನಾನಾಸಂದರ್ಭಗಳಿಗೆ ಸಲ್ಲತಕ್ಕವೇ.

 

ಆದರೆ ಹಣದ ಸಂಪಾದನೆಯನ್ನು ಕುರಿತಾಗಿ ಮನುವು ಹೇಳಿರುವ ಮಾತು ಮಾರ್ಮಿಕವಾದುದೇ ಸರಿ: ನಾವು ಇರುವ ಪರ್ಯಂತವೂ ಸಿರಿಯನ್ನು ಬಯಸಬೇಕು. ಅಷ್ಟೇ ಅಲ್ಲ; "ಐಶ್ವರ್ಯವು ದುರ್ಲಭ (ಎಂದರೆ ಪಡೆಯುವುದಾಗದು)" - ಎಂಬುದಾಗಿ ಎಂದೂ ಭಾವಿಸಬಾರದು – ಎನ್ನುತ್ತಾನೆ ಮನು!

 

ಮನುವಿನ ಮಾತಿನ ಮರ್ಮವನ್ನು ಹಿಡಿದಿರುವ, ಆದರೆ ಮೇಲಿನೆಲ್ಲ ಮಾತುಗಳಿಗೆ ಪೂರಕವೋ ಪೋಷಕವೋ ಆಗಿದ್ದು, ಅವುಗಳ ಓರೆ-ಕೋರೆಗಳನ್ನು ತಿದ್ದಬಲ್ಲದ್ದೂ ಆದದ್ದೆಂದರೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಮತ್ತೂ ಮಾರ್ಮಿಕವಾದ ನೋಟ: "ಐಶ್ವರ್ಯ" ಎಂಬ ಪದವು ಬಂದಿರುವುದಾದರೂ ಈಶ್ವರ ಎಂಬುದರಿಂದಲೇ, ಅಲ್ಲವೇ? ಭಗವಂತನು ಕೊಟ್ಟ ಐಶ್ವರ್ಯವನ್ನು ಅನುಭವಿಸುವಾಗ ಶರೀರವು ಭೋಗಾಯತನವೆನಿಸುವುದು; ಆತನು ಕೊಟ್ಟದ್ದನ್ನು ಆತನಿಗೇ ಸಮರ್ಪಿಸಿ, ಆತನ ಸಂಕಲ್ಪದಂತೆಯೇ ಬೆಳೆಸಿದಲ್ಲಿ, ಜೀವ-ದೇವರನ್ನು ಸೇರಿಸುವುದಾಗಿ ಶರೀರವು ಯೋಗಾಯತನವೂ ಹೌದು. ಹೀಗೆ ಈಶ್ವರನಿಂದ ಪ್ರಾಪ್ತವಾದದ್ದು, ಈಶ್ವರನಿಗಾಗಿ ಸಮರ್ಪ್ಯವಾದದ್ದು, ಐಶ್ವರ್ಯವೆಂಬುದು.

 

ಹೀಗೆ ಯೋಗ-ಭೋಗಗಳ ಸಮರಸೀಭಾವದ ಸತ್ಸಂಕಲ್ಪದೊಂದಿಗೆ ಸಂಭ್ರಮಸಹಿತವಾದ ಸಜ್ಜೀವನವನ್ನು ನಡೆಸಿ, ಕೊನೆಯುಸಿರಿನ ಪರ್ಯಂತವೂ ಸಿರಿಯನ್ನು ಸದುಪಯೋಗಕ್ಕಾಗಿಯಷ್ಟೆ ಬಯಸುವ ಬಳಸುವ ಬೆಳೆಸುವ ಸ್ಫೂರ್ತ್ಯುತ್ಸಾಹಗಳು ಸರ್ವದಾ ಸೊಂಪಾಗಿರಬೇಕಾದದ್ದೇ ಸಮೀಚೀನವಲ್ಲವೇ?


ಸೂಚನೆ: 24/4/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Saturday, April 23, 2022

ಕಾಳಿದಾಸನ ಜೀವನದರ್ಶನ – 7 ವಿದ್ಯೆಯನ್ನು ಕಲಿಯುವುದು ಹೇಗೆ? (Kalidasana Jivanadarshana - 7 Vidyeyannu Kaliyuvudu Hege?)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಾಚೀನ-ಭಾರತೀಯ-ಪರಂಪರೆಯಲ್ಲಿ ಪುಸ್ತಕದಿಂದಲೇ ನೇರಾಗಿ ಅಧ್ಯಯನ ಮಾಡುವುದನ್ನೆಲ್ಲೂ ಪ್ರಶಂಸಿಸಿಲ್ಲ, ಪುರಸ್ಕರಿಸಿಲ್ಲ. ಹಾಗೆ ನೋಡಿದರೆ, ಪ್ರಾಚೀನಭಾರತವು ನಿರ್ಮಿಸಿದಷ್ಟು ಪುಸ್ತಕರಾಶಿಯನ್ನು ಪ್ರಪಂಚದಲ್ಲೆಲ್ಲೂ ಆ ಕಾಲಕ್ಕೆ ನಿರ್ಮಿಸಲಾಗಿ(ರಲಿ)ಲ್ಲ. ಆ ಕಾಲಕ್ಕೇನು? ಈಚಿನ ಕೆಲವು ಶತಮಾನಗಳವರೆವಿಗೂ ಆಗಿರಲಿಲ್ಲವೆಂದೇ ಹೇಳಬಹುದು. ( ಮುದ್ರಣಾಲಯಗಳು ಅಲ್ಲಿ ಹೇರಳವಾಗಿ ಆರಂಭವಾದ ಮೇಲಿನ ಮಾತು ಬೇರೆ). ಪ್ರಾ‍ಗ್-ಆಧುನಿಕ (pre-modern) ಯುಗದಲ್ಲಿ ವಿಶ್ವದ ಸಮಸ್ತ-ಭಾಷೆಗಳಲ್ಲೂ ಜನಿತವಾಗಿರುವ ಸಾಹಿತ್ಯರಾಶಿಯನ್ನೆಲ್ಲ ಒಟ್ಟುಗೂಡಿಸಿದರೂ ಸಂಸ್ಕೃತಮಾತ್ರದಲ್ಲಿರುವ ಅಪಾರ ಸಾಹಿತ್ಯಸಂಪತ್ತಿನ ಒಂದು ಸಣ್ಣಭಾಗವಷ್ಟೆ ಆದೀತು - ಎಂಬುದಾಗಿ (ವಸ್ತುತಃ ಭಾರತದ್ವೇಷಿಗಳೇ ಆದ ಷೆಲ್ಡನ್ ಪೊಲ್ಲಾಕ್ ಮೊದಲಾದ) ಈಚಿನ ವಿದೇಶೀಯ-ವಿದ್ವಾಂಸರು ಸಹ ಒಪ್ಪಿದ್ದಾರೆ.

ಪ್ರತಿಯೊಂದು ವಿದ್ಯೆಯಲ್ಲಿಯೂ ಅನೇಕಾನೇಕ-ಸೂಕ್ಷ್ಮವಿಷಯಗಳಿದ್ದು, ಅವೆಲ್ಲವನ್ನೂ ಬರವಣಿಗೆಗೆ ಇಳಿಸುವುದೆಂದರೆ ಗ್ರಂಥವು ಭಾರಿಯಾಗಿಬಿಡುವುದರಲ್ಲಿ ಸಂಶಯವಿಲ್ಲ. ಬದಲಾಗಿ, ಶಿಷ್ಯನು ತಪ್ಪಿದಾಗಲೆಲ್ಲ ತಿದ್ದುತ್ತಾ, ಎದ್ದ ಸಂಶಯಗಳನ್ನುಅಲ್ಲಲ್ಲೇ  ನಿವಾರಿಸುವ ಗುರುವೊಬ್ಬ ಬಳಿಯಿದ್ದರೆ, ಕಲಿಕೆಯು ಬಹಳವೇ ಸುಲಭವಾಗುವುದೆಂಬುದನ್ನು ಯಾರಾದರೂ ಮನಗಾಣಬಹುದಾಗಿದೆ. ಎಂದೇ, ಇಂದದೆಷ್ಟೇ ಆಧುನಿಕಸೌಕರ್ಯಗಳಿದ್ದರೂ, ಒಳ್ಳೆಯ ಗುರುವೊಬ್ಬ ಎದುರಿಗಿದ್ದು ಹೇಳಿಕೊಡುವುದನ್ನೇ ಬಹುತೇಕ(ರು) ಬಯಸುವುದು.

ಜ್ಞಾನಸಂಪಾದನೆಯು ಗುರೂಪದೇಶದಿಂದಲೇ ಆಗತಕ್ಕದ್ದೆಂಬ ನಿಯಮವೇ ನಮ್ಮಲ್ಲಿದ್ದುದು. "ಪುಸ್ತಕಾಧೀತವಿದ್ಯ"ನೆಂಬುದು ನಿಂದಾರ್ಥಕಪದವೇ ಸಂಸ್ಕೃತದಲ್ಲಿ! (ಆ ಪದಕ್ಕೆ, "ಪುಸ್ತಕಮಾತ್ರದಿಂದಲೇ ಅಧ್ಯಯನ ಮಾಡಿರುವವನು"; ಅರ್ಥಾತ್, "ಗುರುಮುಖೇನ ವಿದ್ಯಾಸಂಪಾದನೆಯನ್ನು ಮಾಡಿಲ್ಲದವನು (ಎಚ್ಚರ!)" - ಎಂದು ಅರ್ಥ).

ಅಭಿನವಗುಪ್ತನು ತನ್ನ ತಂತ್ರಾಲೋಕವೆಂಬ ಬೃಹದ್‍ಗ್ರಂಥದಲ್ಲಿ, "ಕೇವಲ ಪುಸ್ತಕದಿಂದಲೇ ಮಂತ್ರವನ್ನು ಪಡೆದುಕೊಂಡವರ" ಬಗ್ಗೆ ಎಚ್ಚರಿಸುತ್ತಾನೆ. ಅದು ತಾಮಸಪ್ರವೃತ್ತಿಯನ್ನು ಉಂಟುಮಾಡುವುದೆಂದೂ ಜಾಗರಿಸುತ್ತಾನೆ.

ವಿದ್ಯೆಯನ್ನು "ಅಂತರ್ಧನ"ವೆಂದು ಹೇಳುವುದೂ ಉಂಟು (ವಿದ್ಯಾಖ್ಯಮ್ ಅಂತರ್ಧನಮ್). ಮಕ್ಕಳಿಗೆ ಧನವನ್ನು ಕೊಡುವಾಗ, ಅದನ್ನು ಬಳಸುವ ಜವಾಬ್ದಾರಿಯೊಂದಿಗೇ ಕೊಡತಕ್ಕದ್ದು. ಇಲ್ಲವೋ ಹಣವು ಪೋಲಾಗಬಹುದು, ಅಪವ್ಯಯವಾಗಬಹುದು: ದುಶ್ಚಟಗಳಿಗಾಗಿ ವ್ಯಯಿತವಾಗಬಹುದು. ಇದೇ ಲೆಕ್ಕವು ವಿದ್ಯೆಗೂ ಅನ್ವಯಿಸದೇ? ಎಂದೇ ವಿದ್ಯೆಯನ್ನು ಕೊಡುವುದರ ಜೊತೆಗೇ, ಶಿಷ್ಯನ ಯೋಗ್ಯತೆಯನ್ನೂ ಆತನ ಪ್ರವೃತ್ತಿಯನ್ನೂ ಗಮನಿಸಿಕೊಂಡೇ ವಿದ್ಯೆಯನ್ನು ಕೊಡುವ ಸಂಪ್ರದಾಯವು ನಮ್ಮದು. ಪುಸ್ತಕಲಬ್ಧಜ್ಞಾನದ ವಿಷಯದಲ್ಲಿ ಇದನ್ನೆಲ್ಲಾ ಹೇಳಲಾಗದು. ವಿದ್ಯೆಯನ್ನು ಗುರುವು ಶಿಷ್ಯನಲ್ಲಿ ಯಾವ ಜವಾಬ್ದಾರಿಯೊಡನೆ ಹರಿಸುವನೋ ಅದೇ ಜವಾಬ್ದಾರಿಯೊಡನೆ ಪುಸ್ತಕವು ವಿದ್ಯೆಯನ್ನು ಆತನಲ್ಲಿ ಹರಿಸಲಾದೀತೇ?

ವಿದ್ಯೆಯ ಕಲಿಕೆ

ವಿದ್ಯೆಯನ್ನು ಕಲಿಯಬೇಕಾದದ್ದಾದರೂ ಒಬ್ಬ ಶ್ರೇಷ್ಠವಾದ ಗುರುವಿನಿಂದಲೇ. ಸಾಧಾರಣನಾದ ಗುರುವಿನಿಂದ ಕಲಿತ ವಿದ್ಯೆಯು ತಾನೂ ಸಾಧಾರಣವಾಗಿಯೇ ಇರುವ/ಉಳಿಯುವ ಸಂಭವವಿರುತ್ತದೆ.

ಹಿಂದೆ ತಂದೆತಾಯಿಯರನ್ನು "ತೀರ್ಥರೂಪ"ರೆಂದೇ ನಿರ್ದೇಶಿಸುತ್ತಿದ್ದರಲ್ಲವೇ? ಗುರುವಿಗೆ ಸಹ 'ತೀರ್ಥ' ಎಂಬ ಪ್ರಯೋಗವಿದೆ! ಒಬ್ಬ ಶ್ರೇಷ್ಠಗುರುವಿನಿಂದಲೇ ತಾನು ಅಭಿನಯವಿದ್ಯೆಯನ್ನು ಕಲಿತದ್ದೆಂದು ಸೂಚಿಸಲು, "ಮಯಾ ಸುತೀರ್ಥಾದ್ ಅಭಿನಯವಿದ್ಯಾ ಶಿಕ್ಷಿತಾ" ಎಂದು ಹೇಳುತ್ತಾನೆ, ಮಾಳವಿಕಾಗ್ನಿಮಿತ್ರನಾಟಕದ ಗಣದಾಸ. 'ತೀರ್ಥ' ಎಂಬುದಕ್ಕೇ ಬಹು ಪ್ರಶಸ್ತವಾದ ಅರ್ಥವಿದೆ. ಅಂದಮೇಲೆ,  'ಸು-ತೀರ್ಥ'ವೆನಿಸುವವನಿಂದ - ಎಂದರೆ ಆದರಣೀಯನಾದ ಆಚಾರ್ಯನಿಂದ - ತಾನು ವಿದ್ಯೆಯ ಶಿಕ್ಷಣವನ್ನು ಪಡೆದಿದ್ದೇನೆ  ಎಂದು ಹೇಳುವ ಗಣದಾಸನ ಮಾತು ಗಣನೀಯವೇ ಸರಿ.

ಶಿಕ್ಷಿತ-ಅಶಿಕ್ಷಿತ – ಎಂಬ ಪದಗಳನ್ನು ನಾವೆಲ್ಲಾ ಬಳಸುತ್ತಿರುತ್ತೇವೆ. ಯಾರು ಶಿಕ್ಷಿತ? ವಾಸ್ತವವಾಗಿ "ಶಿಕ್ಷೆಯನ್ನು ಪಡೆದವನೇ ಶಿಕ್ಷಿತ"ನಲ್ಲವೇ? 'ಶಿಕ್ಷೆ'ಯೆಂಬುದಕ್ಕೆ ಇಂದಿನ ಬಹುಮಂದಿ ತಿಳಿದಿರುವ ಅರ್ಥವೇನು?: "ತಪ್ಪುಮಾಡಿದವನಿಗೆ ಮಾಡಲಾಗುವ ಸರಿಯಾದ ಶಾಸ್ತಿ, ಛೀಮಾರಿಯೊಂದಿಗೆ ಆತನಿಗೆ ಕೊಡಲಾಗುವ ಏಟು ಮೊದಲಾದದ್ದು" - ಎಂಬುದಾಗಿ. ಆದರೆ ಶ್ರೀರಂಗ ಮಹಾಗುರುಗಳು "ಶಿಕ್ಷೆ" ಎಂಬ ಪದದ ವ್ಯುತ್ಪತ್ತಿಯನ್ನು ಕುರಿತು, ಅದು "ಶಿಕ್ಷ ವಿದ್ಯೋಪಾದಾನೇ" ಎಂಬ ಧಾತುವಿನಿಂದಲೇ ಬಂದಿರುವುದೆಂಬುದನ್ನು ನಮ್ಮ ಗಮನಕ್ಕೆ ತಂದುಕೊಟ್ಟಿದ್ದಾರೆ. ಅಲ್ಲಿಗೆ,  ದುಷ್ಟರಿಗೋ ಅಪರಾಧಿಗಳಿಗೋ ಕೊಡುವ ಶಿಕ್ಷೆಯೂ ಅಂತತೋ ಗತ್ವಾ - ಎಂದರೆ ಕೊನೆಯ ಫಲವಾಗಿ - ಒಂದು ಶಿಕ್ಷಣವನ್ನೇ ಉಂಟುಮಾಡುವಂತಿರಬೇಕು – ಎಂಬುದೇ ಆ ಪದದ ಮೂಲಾಶಯ – ಎಂಬುದನ್ನೂ ಬಿಡಿಸಿ ಹೇಳಿದ್ದರು.

ನಿಷ್ಣಾತತೆಯನ್ನು ಸಂಪಾದಿಸುವುದು

ಇದೇ ಸಂದರ್ಭದಲ್ಲಿ ಸ್ಮರಿಸಬೇಕಾದ ಮತ್ತೊಂದು ವಿಷಯವೆಂದರೆ, ಗುರುವು ಸಹ ವಿಷಯವನ್ನು ಎಷ್ಟೇ ಚೆನ್ನಾಗಿ ತಿಳಿದುಕೊಂಡಿದ್ದಾನೆಂದರೂ, ಮತ್ತೊಬ್ಬರಿಗೆ ಹೇಳಿಕೊಟ್ಟಾಗಲೇ ಆತನು ನಿಷ್ಣಾತನಾಗುವುದು. ಸುಭಾಷಿತಕಾರನು ಹೇಳುವಂತೆ, ವಿದ್ಯೆಯೆಂಬುದು "ವ್ಯಯೇ ಕೃತೇ ವರ್ಧತ ಏವ ನಿತ್ಯಂ": ವ್ಯಯ ಮಾಡಿದಷ್ಟೂ - ಎಂದರೆ ಹತ್ತಾರುಮಂದಿ ಶಿಷ್ಯರಿಗೆ ಹಂಚಿದಷ್ಟೂ - ವಿದ್ಯೆಯು ಬೆಳೆಯುತ್ತಲಿರುವುದು. "ನಾನು ಚೆನ್ನಾಗಿಯೇ ತಿಳಿದುಕೊಂಡಿದ್ದೇನೆ" ಎಂದು ಭಾವಿಸಿಕೊಂಡು, ವಿದ್ಯಾಪ್ರದಾನವನ್ನು ಮಾಡದೆ ಸುಮ್ಮನೆ ಕುಳಿತಲ್ಲಿ, ವಿದ್ಯೆಯು ಜಿತವಾಗದು; ಅಷ್ಟೇ ಅಲ್ಲ; ಕೊನೆಗೆ, ಕಲಿತಿದ್ದ ವಿದ್ಯೆಯೂ ಮರೆಯಾಗುತ್ತ ಹೋಗುವುದು. ಜಿಪುಣತನವೆಂಬುದು ವಿದ್ಯೆಗೆ ಹೀಗೆ ಮಾರಕವೇ ಆಗುವುದು!

ಇನ್ನೊಬ್ಬರಿಗೆ ಹೇಳಿಕೊಡಲು ಹೊರಟಾಗಲೇ ನಮಗೇ  ಗೊತ್ತಿಲ್ಲದಿರುವುದರ ಅರಿವಾಗುವುದೂ. ಎಷ್ಟೋ ಭಾಗ ಚೆನ್ನಾಗಿಯೇ ಗೊತ್ತಿದ್ದರೂ, ಅಲ್ಲಲ್ಲಿ ಅಸ್ಪಷ್ಟವಾದ (ಅಥವಾ ಕಿಂಚಿತ್-ಸಂಶಯಗ್ರಸ್ತವಾದ) ಅಂಶಗಳು ಉಳಿದಿರುವುದುಂಟು. ಜಾಣವಿದ್ಯಾರ್ಥಿಗಳು ಪ್ರಶ್ನೆ-ಉಪಪ್ರಶ್ನೆಗಳನ್ನು ಮಾಡಿದಾಗಲೇ ಅಲ್ಲವೇ, ತಾನು ಈ ವಿಷಯದ ಬಗ್ಗೆ ಏನೇನು ಎಷ್ಟೆಷ್ಟು ಎಲ್ಲೆಲ್ಲಿ ಅರಿತಿಲ್ಲವೆಂಬುದರ ಬಗ್ಗೆ ಅರಿಯಲಾಗುವುದು?: ನಮ್ಮ ಅಜ್ಞಾನದ ಬಗ್ಗೆ ನಮಗೇ ಜ್ಞಾನೋದಯವಾಗುವುದು! ಇದು ಅಧ್ಯಾಪಕರೆಲ್ಲರ ಅನುಭವವೇ ಸರಿ. 

ಜಾಣರ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಕೊಡುವುದರಲ್ಲಿ ಮಾತ್ರವೇ ಗುರುವಿನ ಜಾಣ್ಮೆಯೆಂದಲ್ಲ; ಉದಾಹರಣ-ಪ್ರತ್ಯುದಾಹರಣಗಳನ್ನಿತ್ತು ಜಾಣರಲ್ಲದವರಿಗೂ ಮನದಟ್ಟು ಮಾಡಿಸುವುದರಲ್ಲೂ ಗುರುವಿನ ಜಾಣ್ಮೆಯೆಂಬುದು ಗೋಚರವಾಗುವುದು.

ಎಂದೇ ನಮ್ಮ ಗೀತೆ-ಉಪನಿಷತ್ತುಗಳೆಲ್ಲ ಪ್ರಧಾನವಾಗಿ ಗುರು-ಶಿಷ್ಯ-ಸಂವಾದದ ರೂಪದಲ್ಲಿಯೇ ಇರುವುದು. ಪರಿಪ್ರಶ್ನವು ಮುಖ್ಯ.  ಪರಿಪ್ರಶ್ನವೆಂದರೆ ಒಂದು ವಿಷಯವನ್ನು ಕುರಿತಾಗಿ ನಾನಾಮುಖಗಳಿಂದೇಳುವ ಪ್ರಶ್ನೆಗಳನ್ನು ಕೇಳುವುದು. ಹಾಗೆ ಕೇಳುವುದನ್ನೂ ಅರಿವಿನ ಮಾರ್ಗವೊಂದೆಂಬುದಾಗಿ ಗೀತೆಯಲ್ಲಿ ಶ್ರೀಕೃಷ್ಣನು ಸೂಚಿಸುತ್ತಾನೆ.  "ಧರ್ಮಸಂಮೂಢಚೇತ"ನಾದ ಅರ್ಜುನನು ಕೃಷ್ಣನಿಗೆ "ನಿನ್ನ ವಾಕ್ಯ ವ್ಯಾಮಿಶ್ರವಾಗಿರುವಂತಿದೆ: ನನ್ನ ಬುದ್ಧಿಗೆ ಮಂಕು ಕವಿಯಿಸುವಂತಿದೆ" ಎಂದೆಲ್ಲ ಆಕ್ಷೇಪಿಸುವಂತೆ ಹೇಳಿದಾಗಲೂ ಬೇಸರಿಸಿಕೊಳ್ಳದೆ, ತಾಳ್ಮೆಗೆಡದೆ, ಕೊನೆಗೆ ಅರ್ಜುನನ ಬಾಯಲ್ಲೇ "ನನ್ನ ಸಂದೇಹಗಳೆಲ್ಲ ಕಳೆದವು" ಎಂಬ ಮಾತು ಬಂದಮೇಲೇ ತೃಪ್ತಿಪಟ್ಟುಕೊಳ್ಳುತ್ತಾನೆ, ನಿಷ್ಣಾತನಾದ ಕೃಷ್ಣ.

ಸೂಚನೆ : 23/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ನಾಯಕತ್ವಕ್ಕಾಗಿ ಅಧ್ಯಾತ್ಮಿಕ ಪ್ರಜ್ಞೆ (Nayakatvakkagi Adhyatmika Prajne)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಅಧ್ಯಾತ್ಮವೆಂದೊಡನೆಯೇ ಪ್ರಾಪಂಚಿಕ ಜೀವನದಿಂದ ದೂರವಿರುವಿಕೆ, ವಿರಕ್ತಿ, ತ್ಯಾಗಗಳೇ ಮನಸ್ಸಿಗೆ ಬರುತ್ತವೆ. ಅಧ್ಯಾತ್ಮಿಕ ಪ್ರಜ್ಞೆ ವೈರಾಗ್ಯವನ್ನುಂಟು ಮಾಡುವುದು, ಕೆಲವರನ್ನು ಪ್ರಾಪಂಚಿಕ ಜೀವನದಿಂದ ವಿರಕ್ತ ಜೀವನಕ್ಕೆ ಆಕರ್ಷಿಸುವುದು ಸತ್ಯವಾದರೂ ಸಹ ಎಲ್ಲರಿಗೂ ಹಾಗೆಯೇ ಆಗುತ್ತದೆಂದೇನಿಲ್ಲಾ. ಪ್ರಾಪಂಚಿಕ ವ್ಯವಹಾರಗಳ ನಡುವೆ ಇದ್ದುಕೊಂಡೂ ಸಹ ಅಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬಹುದು. ಇಂತಹ ಸನ್ನಿವೇಶಗಳಲ್ಲಿ ಅಧ್ಯಾತ್ಮ ಪ್ರಜ್ಞೆ ಪ್ರಾಪಂಚಿಕ ಜೀವನಕ್ಕೂ ಪೋಷಕವಾಗಿರುತ್ತದೆ.

ಇದಕ್ಕಿರುವ ಸರ್ವೋತ್ಕೃಷ್ಟ ಉದಾಹರಣೆಯೆಂದರೆ ಕೃಷ್ಣಾರ್ಜುನರ ಸಂವಾದ (ಭಗವದ್ಗೀತೆ). ಇಲ್ಲಿ ಶ್ರೀಕೃಷ್ಣ ಪರಮಾತ್ಮನ ಗೀತೋಪದೇಶದಿಂದ ಪ್ರಬೋಧಗೊಂಡ ಅರ್ಜುನನ ಅಧ್ಯಾತ್ಮ ಪ್ರಜ್ಞೆ, ಆತ ಏಕ ಮನಸ್ಸಿನಿಂದ ಯುದ್ಧಮಾಡುವಂತೆ ಮಾಡಿತು. ಶ್ರೀ ಡಿ.ವಿ.ಗುಂಡಪ್ಪನವರ ಭಗವದ್ಗೀತಾಧಾರಿತ ಗ್ರಂಥವಾದ ಜೀವನಧರ್ಮಯೋಗವು ಭಗವದ್ಗೀತೆಯು ಪ್ರಾಪಂಚಿಕ ಜೀವನವನ್ನು ಚೆನ್ನಾಗಿಟ್ಟುಕೊಳ್ಳುವುದಕ್ಕೆ ಪೋಷಕವಾಗಿದೆಯೆಂಬುದನ್ನು ಸಾರುತ್ತದೆ.

ಇನ್ನು ಕಾರ್ಪೊರೇಟ್ ವಲಯದಲ್ಲಿ ಈ ವಿಷಯ ಸ್ಪಿರಿಚುಯಲ್ ಇಂಟಲಿಜೆನ್ಸ್ (Spritiual Intelligence) ಎನ್ನುವ ಶೀರ್ಷಿಕೆಯಲ್ಲಿ ಚಾಲ್ತಿಗೆ ಬರುತ್ತಿದೆ. ನಾಯಕತ್ವದ ಸ್ಥಾನಗಳನ್ನು ನಿರ್ವಹಿಸುವುದಕ್ಕೆ ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಅಗತ್ಯ ಎಂದು ಪ್ರಭಾವೀ ಮ್ಯಾನೇಜ್ಮೆಂಟ್ ವಿದ್ಯಾಲಯಗಳು ಗುರುತಿಸಿ ಸಾರಲಿಕ್ಕೆ ಆರಂಭಿಸಿವೆ. ಏನಿದು ಸ್ಪಿರಿಚುಯಲ್ ಇಂಟಲಿಜೆನ್ಸ್ ಅಥವಾ ಅಧ್ಯಾತ್ಮಿಕ ಪ್ರಜ್ಞೆ? ನಾಯಕತ್ವ ನಿರ್ವಹಣೆಗೆ ಏಕೆ ಬೇಕು ಈ ಸ್ಪಿರಿಚುಯಲ್ ಇಂಟಲಿಜೆನ್ಸ್? ಯಾರು ಹೀಗೆ ಹೇಳುತ್ತಿದ್ದಾರೆ ಎನ್ನುವುದನ್ನು ವಿವರವಾಗಿ ಪರಾಮರ್ಶೆ ಮಾಡೋಣ.

ಅಧ್ಯಾತ್ಮ ಪ್ರಜ್ಞೆಯ ಒಂದು ಮುಖ್ಯ ಭಾಗವೆಂದರೆ, ನಾನು ಯಾರು? ನನ್ನ ಗುರಿ ಏನು? ನನ್ನತನವರಿತು, ನನ್ನಗುರಿಯನ್ನರಿತು ಯಾವ ಯಾವ ಸನ್ನಿವೇಶಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಬೇಕು? ಯಾವ ಸನ್ನಿವೇಶಗಳಲ್ಲಿ ನನ್ನ ಕರ್ತವ್ಯವೇನು ಎಂದು ನಿಶ್ಚಯ ಮಾಡಿ ಕಾರ್ಯರೂಪಕ್ಕೆ ತಂದು ಯಶಸ್ಸನ್ನು ಕಾಣುವ ಒಂದು ನಡೆಯನ್ನು ಇಂದು ಅಧ್ಯಾತ್ಮ ಪ್ರಜ್ಞೆ ಎಂದು ಗುರುತಿಸುತ್ತಿದ್ದಾರೆ. ಅದು ಇಂದಿನ ಪ್ರಾಪಂಚಿಕ ವ್ಯವಹಾರ ಕ್ಷೇತ್ರದಲ್ಲಿ ಹೇಗೆ ಅನ್ವಯವಾಗುತ್ತದೆಂದು ನೋಡೋಣ.

ಒಮ್ಮೆ ಕೋಕಕೋಲ ಸಂಸ್ಥೆಯು ಪೇಯಗಳ ಮಾರುಕಟ್ಟೆಯ ಅದ್ವಿತೀಯ ಸ್ವಾಮ್ಯವನ್ನು ಹೊಂದಿತ್ತು. ಪೆಪ್ಸಿ ಸಂಸ್ಥೆಯು ಮಾರುಕಟ್ಟೆಗೆ ಇಳಿದ ನಂತರ ಕೋಕಕೋಲಾದ ಗಣನೀಯ ಮಾರುಕಟ್ಟೆ ಪಾಲನ್ನು ತನ್ನದಾಗಿ ಮಾಡಿಕೊಂಡು ಬಿಟ್ಟಿತು. ಇದರಿಂದ ವ್ಯಗ್ರಗೊಂಡ ಕೋಕಕೋಲದ ನಾಯಕತ್ವ ತಂಡ ಈ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಆಲೋಚಿಸುತ್ತಿರುವಾಗ ಕೋಕಕೋಲಾದ ನಾಯಕರು (ಸಿ.ಯಿ.ಒ.) ತಮ್ಮ ತಂಡದ ಸದಸ್ಯರಿಗೆ ಬಿರುಸಿನ ಚಿಂತನೆ ನಡೆಸಿ ನಿಮ್ಮ ಐಡಿಯಾಗಳನ್ನು ಪಟ್ಟಿ ಮಾಡಿ ಎಂದು ಹೇಳಿ ತಾವು ಹೊರನಡೆದು ಮತ್ತೆ ಮುಕ್ಕಾಲು ಘಂಟೆಯ ನಂತರ ಮತ್ತೆ ಸಭೆಗೆ ಬಂದರು. ಅಷ್ಟರಲ್ಲಿ ತಂಡದವರು ತಮ್ಮ ಕಾರ್ಯಾವಳಿಯನ್ನು ಪಟ್ಟಿ ಮಾಡಿದ್ದರು. ಆ ಪಟ್ಟಿಯಲ್ಲಿ ಪೆಪ್ಸಿ ಪಾಲಾಗಿದ್ದ ಮಾರುಕಟ್ಟೆ ಪಾಲನ್ನು ತಿರುಗೆ ತಮ್ಮದಾಗಿಸಿಕೊಳ್ಳುವುದು ಹೇಗೆನ್ನುವ ಬಗ್ಗೆ ನಾನಾ ತಂತ್ರಗಳಿದ್ದವು. ಅದನ್ನು ನೋಡಿದ ಸಿ.ಇ.ಒ. ನೋಡಿ ಇಲ್ಲಿ ನೀವು ಪಟ್ಟಿ ಮಾಡಿರುವ ತಂತ್ರಗಳೆಲ್ಲದರ ಹಿಂದೆ ಮಾರುಕಟ್ಟೆಯ ಒಟ್ಟಳತೆ ನಿಗದಿತ ಆ ಪರಿಧಿಯೊಳಗೇ ನಾವು ಪೆಪ್ಸಿಯಿಂದ ನಮ್ಮ ಪಾಲನ್ನು ಪುನಃ ಪಡೆಯುವುದು ಹೇಗೆಂದು ಚಿಂತಿಸುತ್ತಿದ್ದೀರಿ. ಆದರೆ, ಮೂಲತಃ ನಮ್ಮ ಗುರಿಯೇನು, ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಗುರಿಯತ್ತ ಸಾಗುವುದು ಹೇಗೆಂದು ಯೋಚಿಸಬೇಕು. ಪಪ್ಸಿಯಿಂದಾಗಿ ಮಾರುಕಟ್ಟೆ ಪಾಲು ಕಡಿಮೆಯಾಗಿ ನಮ್ಮ ಆದಾಯ ಕಡಿಮೆಯಾಗಿದೆ. ಆದುದರಿಂದ ನಮ್ಮ ಆದಾಯವನ್ನು ಮತ್ತೆ ಹೆಚ್ಚಿಸಿಕೊಳ್ಳುವುದು ಹೇಗೆಂದು ಯೋಚಿಸಬೇಕೇ ಹೊರತು ಪೆಪ್ಸಿಯ ಪಾಲನ್ನೇ ಕಸಿದುಕೊಳ್ಳಬೇಕು ಅಂದುಕೊಂಡರೆ ಅದು ಬಹಳ ಸೀಮಿತ ಚಿಂತನೆಯಾಗುತ್ತದೆ. ಆದಾಯ ಹೆಚ್ಚಿಸಿಕೊಳ್ಳಬೇಕೆಂದರೆ, ಪೆಪ್ಸಿಯ ಪಾಲನ್ನು ಪುನಃ ಕಸಿಯವುದು ಒಂದು ಮಾರ್ಗವಷ್ಟೇ! ಆದರೆ ಅದು ಬಹಳ ದುರ್ಗಮವಾಗಿ ಕಾಣುತ್ತದೆ. ಅದರ ಬದಲು ಮಾರುಕಟ್ಟೆಯ ಗಾತ್ರವನ್ನೇ ಹೆಚ್ಚಿಸುವುದು ಹೇಗೆಂದು ನೋಡಿ. ಮಾರುಕಟ್ಟೆಯನ್ನೇ ವಿಸ್ತರಿಸಿದರೆ ನಮಗಿರುವ ಶೇಕಡಾವಾರು ಪಾಲಿನಲ್ಲೇ ನಮ್ಮ ಆದಾಯವೂ ಹೆಚ್ಚುತ್ತದೆ. ಆದಾಯ ಹೆಚ್ಚಿಸುವುದು ನಮ್ಮ ಗುರಿ ಅಷ್ಟೇ ಹೊರತು ಪೆಪ್ಸಿಯೊಂದಿಗೆ ಸೆಣೆಸುವುದಲ್ಲಾ ಎಂದರು. ನಂತರ ಮತ್ತೊಮ್ಮೆ ಚಿಂತನಾ ಸಭೆ ನಡೆಸಿದ ತಂಡ, ಕೊಕಕೋಲ, ನೀರು, ಹಣ್ಣಿನ ರಸ, ಮುಂತಾದ ಅನೇಕ ಪೇಯಗಳನ್ನು ಮಾರುಕಟ್ಟೆಗೆ ತಂದು ಅದರಿಂದಾಗಿ ಮಾರುಕಟ್ಟೆಯು ವಿಸ್ತರಿಸಿ ಕೋಕಕೋಲದ ಆದಾಯವೂ ಹೆಚ್ಚಿತು.

ಇಲ್ಲಿ, ಪೆಪ್ಸಿ ತಂದೊಡ್ಡಿದ ಪರಿಸ್ಥಿತಿಯ ಸೆಳೆತಕ್ಕೆ ಒಳಗಾಗಿ ಪೆಪ್ಸಿಯೊಡನೆ ಸೆಣೆಸಾಟ ಎನ್ನುವ ಸುಳಿಗೆ ಸಿಲುಕದೇ ತಮ್ಮ ಮೂಲಗುರಿ ಏನೆನ್ನುವುದನ್ನು ಸ್ಪಷ್ಟವಾಗಿಟ್ಟುಕೊಂಡು ಅದಕ್ಕೆ ಬದ್ಧರಾಗಿ ಕಾರ್ಯಾಚರಣೆ ರೂಪಿಸಿ ಇಂದಿಗೂ ವರ್ಧಿಸುತ್ತಿರುವ ಒಂದು ವಾಣಿಜ್ಯ ಸಂಸ್ಥೆಯನ್ನಾಗಿ ಕೋಕಕೋಲ ಸಂಸ್ಥೆಯನ್ನು ಉಳಿಸಿಕೊಂಡರು. ಇಲ್ಲಿ ತಮ್ಮ ಮೂಲಗುರಿಯ ಬಗ್ಗೆ ಇರುವ ಸ್ಪಷ್ಟತೆ, ಅದರ ಬಗ್ಗೆ ಬದ್ದತೆ ಇತ್ಯಾದಿಯನ್ನು ಸ್ಪಿರಿಚುಯಲ್ ಇಂಟಲಿಜೆನ್ಸ್ ಎಂದು ಪರಿಗಣಿಸುತ್ತಾರೆ. ಕೋಕಕೋಲ ನಾಯಕರಿಗೆ ಭಗವದ್ಗೀತೆಯಿಂದ ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಬಂದಿತೋ ಇಲ್ಲವೋ ತಿಳಿಯದು. ಆದರೆ ಕೋಕಕೋಲ ನಾಯಕರು ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಮೆರೆದಿರುವುದಂತೂ ಉಂಟು.

ಇನ್ನೊಂದು ಉದಾಹರಣೆಯೆಂದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರು ಅತ್ಯಂತ ಯಶಸ್ವೀ ನಾಯಕರಲ್ಲೊಬ್ಬರು. ಅವರು ಭಗವದ್ಗೀತೆಯ "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ" ಎನ್ನುವ ವಾಕ್ಯವನ್ನು ಅಕ್ಷರಶಃ ಪಾಲಿಸುತ್ತಿದ್ದರು. ಪ್ರತಿಯೊಂದು ಪಂದ್ಯದಲ್ಲಿಯೂ ಅವರ ಸಂಪೂರ್ಣ ಅಂಟು ಪ್ರಯತ್ನದೊಂದಿಗೆ ಇರುತ್ತಿತ್ತು. ಫಲಿತಾಂಶದ ಕಡೆಗೆ ಅಂಟಿಕೊಳ್ಳದೇ ಅತ್ಯುತ್ತಮ ಪ್ರಯತ್ನವನ್ನೇ ಪಡಬೇಕೆಂಬ ಅವರ ನೀತಿಯಿಂದಾಗಿ ಬಹಳ ಕ್ಲಿಷ್ಟಕರ ಪಂದ್ಯಗಳಲ್ಲಿಯೂ, ಸೋಲುವಂತಹ ಪಂದ್ಯಗಳಲ್ಲಿಯೂ ಅವರು ಒತ್ತಡಕ್ಕೊಳಗಾಗದೇ, ಸ್ಥಿಮಿತದಲ್ಲಿದ್ದು ಉತ್ತಮ ಪ್ರಯತ್ನವನ್ನು ಪಟ್ಟು ಪಂದ್ಯವನ್ನು ಗೆಲ್ಲುತ್ತಿದ್ದರು.

ಫಲಕ್ಕಿಂತ ಹೆಚ್ಚಿಗೆ ಪ್ರಯತ್ನಕ್ಕೆ ಆಂಟಿಕೊಳ್ಳುವುದೂ ಸಹ ಸ್ಪಿರಿಚುಯಲ್ ಇಂಟಲಿಜೆನ್ಸ್ ನ ಒಂದು ಅಂಶವೇ ಎನ್ನುವುದು ಇಲ್ಲಿ ಗಣನೀಯ.

ಈ ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಹೇಗೆ ವರ್ಧಿಸಿಕೊಳ್ಳುವುದು? ಇದಕ್ಕೆ ನಾನಾ ಮಾರ್ಗಗಳಿದ್ದರೂ ಭಗವದ್ಗೀತೆಯ ಅನುಸಂಧಾನವು ಸ್ಪಿರಿಚುಯಲ್ ಇಂಟಲಿಜೆನ್ಸ್ ಅನ್ನು ಹೆಚ್ಚಿಸಿಕೊಳ್ಳುವುದಕ್ಕಿರುವ ಅತ್ಯುತ್ತಮ ಸಾಧನ. ಕೋಕಕೋಲ ಸಿ.ಯಿ.ಒ. ನೇ ಆಗಲಿ, ಧೋನಿಯೇ ಆಗಲಿ ಭಗವದ್ಗೀತೆ ಓದಿದ್ದರೋ ಇಲ್ಲವೋ ತಿಳಿಯದು. ಆದರೆ ಅಂತಹ ನಾಯಕತ್ವದ ಸ್ಥಾನದಲ್ಲಿರುವವರಿಗೆ ಪಾಠ ಮಾಡುವ ನಾಯಕತ್ವ ಕ್ಷೇತ್ರದ ಅತ್ಯಂತ ಪ್ರಭಾವೀ ಬರಹಗಾರರಾದ ಸ್ಟೀಫನ್ ಕವೆ ಅವರು ತಮ್ಮ ಪ್ರಭಾವೀ ಪುಸ್ತಕವಾದ 
"The seven habits of highly effective people" ಭಗವದ್ಗೀತೆಯಿಂದ ಪ್ರೇರಿತವಾಗಿದೆಯೆಂದು ಸ್ಪಷ್ಟವಾಗಿ ನುಡಿದಿದ್ದಾರೆ. ಒಂದು ಕಾಲದಲ್ಲಿ "Fortune 500" ಪಟ್ಟಿಯ ಐನೂರು ಸಂಸ್ಥೆಗಳಲ್ಲಿ ಮುನ್ನೂರೈವತ್ತಕಿಂತ ಹೆಚ್ಚು ಸಂಸ್ಥೆಗಳು ಸ್ಟೀಫನ್ ಕವೆ ಅವರ ಪುಸ್ತಕವನ್ನು ತಮ್ಮ ನಾಯಕತ್ವ ತರಬೇತಿ ಪಠ್ಯದಲ್ಲಿ ಅಳವಡಿಸಿಕೊಂಡಿದ್ದರು. ಹೀಗೆ ಪರೋಕ್ಷವಾಗಿ ಭಗವದ್ಗೀತೆಯ ಪ್ರಭಾವವು ಕಾರ್ಪೊರೇಟ್ ಕ್ಷೇತ್ರದ ನಾಯಕರನ್ನು ಹೇಗೆ ಪ್ರಭಾವಗೊಳಿಸಿತ್ತು ಎಂದು ತಿಳಿಯುತ್ತದೆ.

ಹೀಗೆ ವಿಶ್ವಮಾನ್ಯವಾಗಿರುವ ಭಗವದ್ಗೀತೆಯನ್ನು ಅನುಸಂಧಾನ ಮಾಡಿ ನಮ್ಮ ಅಧ್ಯಾತ್ಮಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು, ಅದರಿಂದಾಗಿ ನಮ್ಮ ಅಧ್ಯಾತ್ಮ ಸಾಧನೆಗೂ ನೆರವು ಪಡೆದು ಪ್ರಾಪಂಚಿಕ ಜೀವನವನ್ನೂ ಚೆನ್ನಾಗಿಸಿಕೊಳ್ಳೋಣ.

ಸೂಚನೆ : 23/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಕರ್ಮವು ಕರ್ಮಯೋಗವಾಗುವುದು ಹೇಗೆ? (Karmavu Karmayogavaguvudu Hege?)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in) ಭಕ್ತಶ್ರೇಷ್ಠ ಆಂಜನೇಯನು ತನ್ನ ಪ್ರಾಣ ಪ್ರಭುವಾದ ಶ್ರೀರಾಮಚಂದ್ರನ ಸೇವಾಕಾರ್ಯಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿ ಶ್ರೀರಾಮ- ಸೀತಾಮಾತೆಯರ ಪ್ರೀತಿಗೆ ಪಾತ್ರನಾಗುತ್ತಾನೆ. ಸೀತಾನ್ವೇಷಣೆಯ ಸಮಯದಲ್ಲಿ ಮಹಾಸಮುದ್ರವನ್ನು ಹಾರಿ ಲಂಕೆಗೆ ಹೋಗಿ ಅಶೋಕವನದಲ್ಲಿದ್ದ ಸೀತಾಮಾತೆಯನ್ನು ಸಂದರ್ಶಿಸಿ, ಸಂತೈಸಿ, ಪ್ರಭುವಿನ ಸಂದೇಶವನ್ನು ತಲುಪಿಸಿ ನಂತರ ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯ ಸಂದೇಶವನ್ನು ಅರುಹಿ ಇಬ್ಬರ ಪುನರ್ಮಿಲನಕ್ಕೆ ಸೇತುವಾಗುತ್ತಾನೆ. ಅಂತೆಯೇ ರಾಮ-ರಾವಣರ ಯುದ್ಧದಲ್ಲಿ ಮೂರ್ಛಿತನಾದ ಲಕ್ಷ್ಮಣನ ಚಿಕಿತ್ಸೆಗಾಗಿ ಹಿಮಾಲಯ ಪರ್ವತಕ್ಕೆ ಹಾರಿ ಸಂಜೀವಿನಿ ಪರ್ವತವನ್ನೇ ತಂದು ಲಂಕೆಯಲ್ಲಿ ಸ್ಥಾಪಿಸುತ್ತಾನೆ. ಹೀಗೆ ಅನೇಕ ರೀತಿಯಾಗಿ ಭಗವಂತನ ಕಾರ್ಯಗಳನ್ನು ಪ್ರಸನ್ನವಾದ ಮನಸ್ಸಿನಿಂದ ಮಾಡುತ್ತಾನೆ.


 ಹನುಮಂತನ ಸೇವೆಯಿಂದ ಪ್ರಸನ್ನನಾದ ಶ್ರೀರಾಮ, ಆಂಜನೇಯನನ್ನು ಕುರಿತು, ನೀನು ನನಗಾಗಿ ಮಹತ್ತಾದ ಉಪಕಾರವನ್ನೇ ಮಾಡಿರುವೆ. ಆದರೆ ನನ್ನಿಂದ ಪ್ರತ್ಯುಪಕಾರವನ್ನು ಮಾತ್ರ ಅಪೇಕ್ಷಿಸಬೇಡ. 'ಏಕೆಂದರೆ ಯಾರು ಪ್ರತ್ಯುಪಕಾರವನ್ನು ಬಯಸುತ್ತಾರೋ ಅವರು ಆಪತ್ತನ್ನೇ ಬಯಸಿದಂತೆ' ಎಂದು ಹೇಳಿದನೆಂದು ಕವಿಯೊಬ್ಬರು ಚಮತ್ಕಾರಯುತವಾಗಿ ಕರ್ಮದ ಗತಿಯನ್ನು  ವರ್ಣಿಸಿದ್ದಾರೆ.

ನಾವು ಕಷ್ಟದಲ್ಲಿದ್ದವರಿಗೆ ಪ್ರತ್ಯುಪಕಾರದ ಅಪೇಕ್ಷೆಯಿಂದ ಉಪಕಾರವನ್ನು ಮಾಡಿದರೆ ನಮಗೆ ಕಷ್ಟ ಬಂದಾಗ ತಾನೇ ಅವರಿಂದ ಉಪಕಾರವನ್ನು ಪಡೆಯುವಂತಾಗುವುದು!


ಆಂಜನೇಯನಿಗೆ ಯಾವುದೇ ಕಷ್ಟಕಾರ್ಪಣ್ಯಗಳು ಬಾರದಿರಲಿ ಎಂಬ ಶ್ರೀರಾಮನ ಇಚ್ಛೆಯ ಜೊತೆಗೆ  ಪ್ರತಿಫಲವನ್ನು ಅಪೇಕ್ಷಿಸಿ ಕರ್ಮಗಳನ್ನು ಮಾಡಿದಾಗ ಕರ್ಮಬಂಧನಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತೆ ಎಂಬುದು ಲೋಕಕ್ಕೆ ಸಂದೇಶ. ನಾವು ಮಾಡುವ ಪ್ರತಿಯೊಂದು ಕರ್ಮಕ್ಕೂ ಅದರದರ ಫಲವೂ ನಿಶ್ಚಿತವಾಗಿಯೇ ಇದ್ದು, ಒಂದಲ್ಲ ಒಂದು ದಿನ ಸತ್ಕರ್ಮಕ್ಕನುಗುಣವಾದ ಸತ್ಫಲ ಹಾಗೂ ದುಷ್ಕರ್ಮಕ್ಕನುಗುಣವಾದ ದುಷ್ಫಲವನ್ನು ಪಡೆಯಬೇಕಾಗುತ್ತದೆ. ಕೆಲವು ಕರ್ಮಗಳ ಫಲ ಶೀಘ್ರವಾಗಿ ದೊರೆಯಬಹುದು ಮತ್ತೆ ಕೆಲವು ವಿಳಂಬವಾಗಬಹುದು. ಇನ್ನೂ ಕೆಲವನ್ನು ಜನ್ಮಾಂತರದಲ್ಲಿಯೂ ಅನುಭವಿಸಬೇಕಾಗಿ ಬರಬಹುದು. ಕರ್ಮಗಳ ಗತಿ ಅತ್ಯಂತ ಗಹನವಾದದ್ದು. ಹಾಗಾಗಿ, ದುಷ್ಕರ್ಮಗಳನ್ನು ಸರ್ವಾತ್ಮನಾ ತ್ಯಜಿಸಿ, ಸತ್ಕರ್ಮಗಳನ್ನು ಫಲಾ ಪೇಕ್ಷೆಯಿಲ್ಲದೇ, ಅಹಂಭಾವವನ್ನು ತೊರೆದು, ಭಗವದರ್ಪಣಭಾವದಿಂದ ಆಚರಿಸುತ್ತಾ ಬಂದಾಗ ಕರ್ಮವು ಸಂಸಾರ ಬಂಧನಕ್ಕೆ ಕಾರಣವಾಗದೇ  ಭಗವಂತನೊಡನೆ ಒಂದಾಗುವ ಮಾರ್ಗವಾಗಿ ಕರ್ಮಯೋಗ ವಾಗುತ್ತದೆ. "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ "ಎಂಬ ಭಗವದ್ವಾಣಿಯಂತೆ ನಮ್ಮ ಪಾಲಿನ ಕರ್ತವ್ಯಗಳನ್ನು ಶ್ರದ್ಧೆಯಿಂದ ಆಚರಿಸುವುದಷ್ಟೇ ನಾವು ಮಾಡಬೇಕಾಗಿರುವುದು. ಫಲಾಫಲಗಳು ಭಗವಂತನಿಗೆ ಸೇರಿದ್ದು. ಪ್ರತಿಫಲಾಪೇಕ್ಷೆಯನ್ನು ಬಿಟ್ಟು ಶ್ರದ್ಧಾ ಭಕ್ತಿಯಿಂದ ಕಾಯಾ ವಾಚಾ ಮನಸಾ ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿದ ಆಂಜನೇಯನು ಚಿರಂಜೀವತ್ವ ಹಾಗೂ ಶ್ರೀರಾಮಚಂದ್ರನ ಆಲಿಂಗನ ಸೌಖ್ಯದಂತಹ ಮಹಾಫಲವನ್ನೇ ಪಡೆದನು. ಅದೇ ರಾವಣನು ಸರ್ವದಾ ಭಗವದ್ಧರ್ಮಕ್ಕೆ ವಿರುದ್ಧವಾದ ಕಾರ್ಯಗಳನ್ನೇ ಗೈದು ರಾಮನ ಬಾಣಗಳ ಪ್ರಹಾರಕ್ಕೆ ತುತ್ತಾಗಿ ಮಡಿದನು. "ನಾವು ನಮ್ಮ ಜೀವಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡಿದರೂ ಅದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಉದ್ದೇಶವಿರಬೇಕು; ಮೂಲಕ್ಕೆ ಕರೆದೊಯ್ಯುವಂತಿರಬೇಕು ಪ್ರತಿನಿತ್ಯದ ನಮ್ಮ ಕಾರ್ಯಗಳೂ ಕೂಡ ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯುವಂತೆ ಇರಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ, ಭಗವತ್ಪ್ರೀತಿಕರವಾದ ಕರ್ಮಗಳನ್ನೇ ಆಚರಿಸಿ ಕರ್ಮಯೋಗಿಗಳಾಗೋಣ. 


ಸೂಚನೆ: 23/4/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Thursday, April 21, 2022

ஜீவனுக்கு இருக்கட்டும் காப்பீடு (Jivanukku Irukkattum Kappidu)

மூலம்: கே.எஸ். ராஜகோபாலன்
தமிழாக்கம்: ஆர். சுப்பராவ்
மின்னஞ்சல் : (lekhana@ayvm.in)ஒரு உழவன் இருந்தான். அவன் குழந்தைகளுக்கோ வேளாண்மைத் துறையில் ஈடுபாடு  இருக்கவில்லை. அவன் அகால மரணம் அடைந்தபின், அவனுடைய குழந்தைகள் வீட்டை சோதனையிட்டு விதை பாக்கெட்டுகளை கண்டெடுத்தனர். அவர்கள் அந்த விதைகளை, வளரும் என்கிற நம்பிக்கையுடன், வீட்டைச் சுற்றி நட்டனர். அவர்கள், தங்களுக்கு இருந்த சிறிதளவு அறிவால் விதைகளை சாகுபடி செய்தனர். சில விதைகள் மட்டுமே முளைப்பயிர் விட்டன. ஒரு முந்திய காலை பொழுதில், அவர்கள் உற்சாகத்துடன் தாங்கள் வளர்த்த செடியில்  பழங்கள் உள்ளனவா என்று தேடினர். செடிகளில் இருந்த முட்கள் அவர்கள் கைகளில் குத்தி காயத்தை ஏற்படுத்தின. ஏனென்றால் அவைகள் முட்செடிகளாயிற்றே !!!!  இந்த செடிகளை பராமரித்ததால் இந்த பயன்தானா நமக்கு ? என்று கூவினர். இதை கவனித்து கொண்டிருந்த அண்டை வீட்டிலிருந்த ஒருவர் என்னவென்று அவர்களை வினவினார். "பழம்தரும் செடிகளை வளர்த்தோம். ஆனால் எங்களுக்கு கிடைத்தது முட்செடிகளும், மன வேதனையும், காயங்களுன்தான் " என்று கூறினர். அதற்கு அவர் இவ்வாறு பதிலளித்தார் "உங்கள் தந்தை முட்செடிகளின் விதைகளை வேலி போடுவதற்காக சேமித்து வைத்திருந்தார். முட்செடிகள் பழம்தரும் விதைகளிலிருந்து வளரவில்லை. நீங்கள்  கவனமாக கவனித்தால்,  பழம்தரும் செடிகளும் கூட இங்கு   உள்ளனவே !! மற்றும் பாருங்கள், சில பழம்தரும் செடிகள் காய்க்க ஆரம்பித்துள்ளனவே !! மற்ற சில பழம்தரும் செடிகள் காய்க்க நீண்ட காலம் எடுத்துக் கொள்ளும்."       


அதே போல், பல ஜன்மாக்களில் விதைக்கப்பட்ட நல்ல கர்மா கெட்ட கர்மா என்னும் விதைகள் சரியான காலத்தில் பலனளிக்கின்றன - சிலது விறைவில், வேறு சிலது நிதானமாக வேறு காலக்கட்டத்தில் அதன் போக்கில். தெரிந்தோ தெரியாமலோ நாம் செய்த கெட்ட செயல்கள் அவ்வப்பொழுது துன்பங்களையும் வலிகளையும் நமக்கு தந்து கொண்டுதான் இருக்கின்றன. சில சமயங்களில், பழம்தரும் முட்செடி விதைகளும் காற்றுடன் கலந்து வருவதுண்டு. அவைகள் பழங்களை தருவதுண்டு.  நம் துன்பங்கள் வேறு சிலரின் தவறுகளால் ஏற்படுகின்றன என்னும் தோற்றத்தை கொடுக்கின்றன. நம் பொறுப்பு இது மட்டுமே - இயன்ற அளவு காலணிகளையும், கையுறைகளையும் அணிந்து நகருதலும், முட்செடிகளையும் களைகளையும் அகற்றுதலுமே. ஆனால், இந்த நடவடிக்கைகளால் எழும் துன்பங்கள் தவிர்க்க முடியாததே. 


என்றென்றும் செடிகள் பழங்களை தருவதில்லை. இதேபோல், துன்பங்களும்,  மகிழ்ச்சிகளும் நீண்ட நாட்கள் நீடிப்பதில்லை. பலாப்பழத்திலிருக்கும் முட்களும், பசைகளும் மற்றும் இனிப்பு கூழ்களும் அந்த பலாப்பழத்துடன் சேர்ந்தவைகளே. இந்த நினைவோடு, பலாபழத்தின் இனிப்புக் கூழை அனுபவிப்போமாக !! இதேபோல், மனிதப் பிறவி எடுத்த ஒவ்வொருவரும் கஷ்டத்திலும் மகிழ்ச்சியை காண முயல வேண்டும். நாம் அகால உடல் நலமின்மையிலிருந்தும், இறப்பிலிருந்தும் பாதுகாத்துக் கொள்ளவே காப்பீடு செய்து கொள்கிறோம். ஸ்ரீ ஸ்ரீரங்க மஹாகுருவின் வார்த்தைகளில் சொல்வோமேயானால் "ஆத்மாவுடன் செல்லும் ஒரே காப்பீடு இறைவன். அந்த காப்பீட்டை பெறுவோமாக". இந்த பொன்னான வார்த்தைகளை என்றென்றும் மறவாமல் நினைவு கூர்வோமாக. 


எவனொருவன் கஷ்டங்கள் வரும் பொழுது நிலை கலங்காமல் இருக்கின்றானோ அவனே மகிழ்ச்சியாக இருப்பவன். இதேபோல், நல்ல வசதி படைத்த ஒருவன், எல்லாமிருந்தும், மேலும் இன்னும் வசதிகள் வேண்டுமென நினைத்தால் அவன்  நிலை பரிதாபகரமானது. காப்பீட்டை வைத்திருப்பவன் தைரியத்துடன் வாழ்க்கையின் கஷ்டங்களை துணிச்சலுடன் எதிர்கொள்கிறான். அதேபோல், நாமும் வாழ்க்கையின் கஷ்டங்களை, எல்லாம் வல்ல இறைவனின் மீது நம்பிக்கை வைத்து எதிர்கொள்வோம். இதுவே நம் ஜீவனுக்கு இருக்கும் நிறந்தரமான காப்பீடாகும்.  
குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, April 19, 2022

ஸ்ரீரங்கமஹாகுருவின் கண்ணோட்டம் - 5 ப்ராயச்சித்தம் (பரிகாரம்-Prayashchittam)


கன்னட உரையாடல்: ஸ்ரீவரததேசிகாசார்யரங்கப்ரியர்
தமிழாக்கம்: திருமதி வனஜா

மின்னஞ்சல் : (lekhana@ayvm.in)
சிஷ்யன்: பாவங்கள் செய்தாலும் பரவாயில்லை என்று நம் சாஸ்திரங்கள்  அனுமதிப்பதுபோல் தோன்றுகிறதே?                         
குரு: அது எவ்வாறப்பா?
சிஷ்யன்: எந்த பாவம் செய்தாலும் அதற்கு பரிகாரம் கூறப்பட்டுள்ளதால் பயமின்றி பாவங்களை செய்யலாம். எவ்வாறாயினும் எளிதாக  பரிகாரம் செய்து பாபத்திலிருந்து விடுபடமுடியுமல்லவா?
                   
குரு: மகான்கள் ஆழ்ந்த சிந்தனையினால் ஆராய்ந்து நிரூபித்த உண்மைகளை குறித்து அத்துணை எளிதாக பேசக்கூடாதப்பா. பரிகாரம் செய்வது அவ்வளவு எளிதல்ல. எப்படியும் பரிகாரம் உள்ளதென்று பாவம் செய்யலாம் என்று எந்த சாஸ்திரத்தில் குறித்துள்ளது?

அவ்வாறு செய்வது விவேகமல்ல. நிறைய மருத்துவமனைகள், வைத்தியர்கள், மருந்துகள் உள்ளன என்று தானாகவே விபத்தை ஏற்படுத்திக்கொண்டு யாரேனும் கை, கால்களை உடைத்துக்கொள்வார்களா!?          
சிஷ்யன்: (அடக்கத்துடன்) இல்லை. 
         
குரு: களிம்பு(க்ரீம்) உள்ளதென்று வேண்டுமென்றே காயப்படுத்திக்கொள்ள கூடாது.              
சிஷ்யன்: அது சரி, பரிகாரம் செய்து கொண்டால் பாவம் எப்படி விலகுகிறது?   
குரு:  சரியான மருந்தால் காய்ச்சல் நீங்குகிறதல்லவா? சிஷ்யன்: நீங்குகிறது. 
 
குரு: அந்த காய்ச்சலுக்கு  மருந்துண்பதே பரிகாரம். அவ்வாறே பாவம் என்பது மனதிலுள்ள காய்ச்சல். வெகுகாலமாக உள்ளதாகவும் இருக்கலாம். தூயனான பரமாத்மனை குறித்த தியானத்தால் மனதில் படிந்துள்ள காய்ச்சல் தொலைகிறது. மனத்தின் அழுக்கு விலகுகிறது. அதுவே பாவபரிகாரம். தூய மந்திர ஜபம், புண்யதீர்த்தம், பஞ்சகவ்யம் முதலியவற்றால்  சப்ததாதுக்களில் படிந்திருக்கும் வியாதிகளும் தொலைந்து போகும். ஆனால் சரியான பரிகாரத்தையே செய்து கொள்ள வேண்டும்.

'ப்ராய:' என்றால் தவம்,  'சித்தம்' என்றால் மனம். மனம் சுத்தமாகும்படி செய்யும் தவமே ப்ராயச்சித்தம்(பரிகாரம்) என்று மகான்கள் கூறுகின்றனர். அவ்வாறு பரிகாரம் செய்து கொண்டால் உண்மையாகவே பாவம் தீர்கிறது. இல்லாவிடில் அது வீண் வேஷமாகும்.  பாவம் செய்பவன் தவறை உணர்ந்து வருந்தி பரிகாரம் செய்து கொள்ள வேண்டும். பிறகு மறுபடியும்  பாவம் செய்யாதிருக்க முயற்சி செய்ய வேண்டும்.