Sunday, September 29, 2019

ஶ்ரீரங்கமஹாகுரு - 37 (Sriranga Mahaguru - 37)

ஶ்ரீகுருவின் கண்ணோட்டம் – 26 

ஏன் இந்த முணுமுணுப்பு?
===========================================================

மூலம்: திரு. வரததேசிகாசார்யர்
தமிழாக்கம்: திருமதி வனஜா


"வியாதி குணமாக நல்ல மருந்தை உட்கொள்ள வேண்டும்.  பத்தியமும் கடைபிடிக்க தேவையாகும். ஆனால் இவ்விரண்டிற்கும் இடையே ஒரு பயனற்ற மூட வழக்கத்தையும் கடைபிடிக்கிறார்களே"
 "என்ன வழக்கமப்பா அது"?
"மருந்து, மாத்திரை மற்றும் லேகியம் போன்றவற்றை உட்கொள்ளும்போது ஏதோ மந்திரத்தை வேறு முணுமுணுக்கின்றனர்."
"அந்த மந்திரத்தை கவனித்தருக்கிறாயா"
"நன்றாக கவனித்திருக்கிறேன். முன்காலத்தின் மூட நம்பிக்கையின் அடையாளம் என்று அதனை பதிவு செய்திருக்கின்றேன் "
"நான் அதனை கேட்கலாமா?"
 "கேளுங்கள்- சரீரே ஜர்ஜரீ பூதே வ்யாதிக்ரஸ்தே களேபரே|
         ஔஷதம் ஜாஹ்னவீ தோயம் வைத்யோ நாராயணோ ஹரி:"  
"அதன் பொருள் என்ன தெரியுமா?"
"உடல்நலம் குன்றி, நோய்வாய்படும்போது கங்கை நீரே மருந்தாகும், இறைவனே வைத்தியன் என்பது கருத்து."
"மருந்து உட்கொள்ளும்போது இதனை உச்சரிப்பதில் ஏதாவது இடைஞ்சல் உள்ளதா? அல்லது தவறா?"
"தவறேதும் இல்லை. ஆனால் பயனும் ஏதுமில்லை. அதனை உச்சரிப்பவனுக்கு இறைவனிடத்தோ, மருந்து, மற்றும் வைத்தியனிடத்தோ முழு நம்பிக்கை இருப்பதில்லை."
"அவ்வளவு விரைவில் முடிவு செய்யக்கூடாதப்பா.உண்மையில் இறைவனை நினைக்காவிடில் நோய்முற்றிலும்  குணமாவதே இல்லை "
"அது எவ்வாறு"?
"இறைவன் நிம்மதி, மகிழ்ச்சி, சமாதானம், தைர்யம், வீரம் இவற்றின் முழு உருவம். அவன் நினைவுடன் மருந்து உட்கொள்கையில் மனதின் குற்றமும் குறையும் நீங்கி உடல் நோயும் நீங்குகிறது. மருந்தை மட்டுமே  உட்கொண்டால்  உடலின் வெளியில் காணும் நோய் மடடும் குணமாகலாம். ஆனால் மனதில் உள்ள நோய்(ஆதி) மற்றும் உடலில் உள்ள நோய்(வியாதி) இரண்டும்  நீங்குவதே உண்மையான நலம். ஆதி, வியாதிகளிரண்டும் நீங்க வேண்டுமெனில் மருந்து உட்கொள்கையில் இறைவனை நினைவதும் மிக முக்கியமாகும்.

ಸಾರ್ಥಕ ಜೀವನಕ್ಕೆ ಗೃಹಸ್ಥಾಶ್ರಮ (Saarthaka jeevanakke gruhasthaashrama)

ಲೇಖಕರು:  ನಾಗರಾಜ್ ಗುಂಡಪ್ಪ


ಭಾರತೀಯರ ಚಿಂತನೆಯ ವೈಶಿಷ್ಟ್ಯ, ಯೋಗ ಭೋಗಗಳ ಸಾಮರಸ್ಯದಿಂದೊಡಗೂಡಿದ ಜೀವನವೆಂಬುದನ್ನು ಹಿಂದಿನ ಲೇಖನದಲ್ಲಿ ಸ್ಮರಿಸಿಕೊಂಡಿದ್ದೆವು. ಇದಕ್ಕಾಗಿ ವ್ಯಕ್ತಿಯು ಬಾಲ್ಯದಲ್ಲಿ ಇಂದ್ರಿಯ ಸಂಯಮ ಹಾಗೂ ಕಟ್ಟುನಿಟ್ಟಿನ ನಿಯಮಗಳಿಂದ ಕೂಡಿದ ಬ್ರಹ್ಮಚರ್ಯಾಶ್ರಮದಲ್ಲಿ ಬ್ರಹ್ಮ ಜ್ಞಾನವನ್ನು ಸಂಪಾದಿಸುತ್ತಾನೆ. ನಂತರ, ಯೌವನಾವಸ್ಥೆಯಲ್ಲಿ ಸಂಪಾದಿಸಿದ ಜ್ಞಾನವು ಸಂತಾನದ ಮೂಲಕ ವೃದ್ಧಿಸಲಿ ಎಂದು ವಿವಾಹವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸುತ್ತಾನೆ. ಗೃಹಸ್ಥಾಶ್ರಮದಲ್ಲಿ ಯೋಗಕ್ಕೆ ವಿರೋಧವಲ್ಲದ ಇಂದ್ರಿಯ ಸುಖಗಳಿಗೆ ಅವಕಾಶವುಂಟು.

ಗೃಹಸ್ಥಾಶ್ರಮಕ್ಕೆ ಪ್ರವೇಶ ದ್ವಾರವಾದ ವಿವಾಹದಲ್ಲಿಯೇ ಮುಂದಿನ ಜೀವನದ ರೂಪುರೇಷೆಗಳಿಗೆ ಅನುಗುಣವಾದ ಬುನಾದಿಯಿರುತ್ತದೆ. ಇಂದು ವಿವಾಹದಲ್ಲಿ ಕಾಶೀಯಾತ್ರೆ ಎನ್ನುವ ಅಂಗವುಂಟು. ಗುರುಕುಲವಾಸದ ನಂತರ, ಬ್ರಹ್ಮಚಾರಿಗೆ ಇಂದ್ರಿಯ ಸಂಯಮದ ಜೀವನ ಅಭ್ಯಾಸವಾಗಿ, ಜ್ಞಾನದ ಕಡೆಗೇ ಹೆಚ್ಚು ಆಕರ್ಷಣೆ ಇರುತ್ತದೆ. ಆದುದರಿಂದ ಜ್ಞಾನಪರನಾಗಿಯೇ ಇದ್ದು, ಅದರಲ್ಲಿಯೇ ಹೆಚ್ಚು ವಿಶೇಷತೆಯನ್ನು ಪಡೆಯುವುದಕ್ಕಾಗಿ ಕಾಶಿಗೆ ಹೋಗುತ್ತೇನೆ ಎಂದು ಅತ್ತ ಹೆಜ್ಜೆ ಇಟ್ಟಿರುತ್ತಾನೆ. ಆಗ ಕನ್ಯಾಪಿತನು ಬೇಡಪ್ಪಾ, ನನ್ನ ಬಳಿ ಜ್ಞಾನವನ್ನು ಸಂತತಿಯ ರೂಪದಲ್ಲಿ ವಿಸ್ತಾರಗೊಳಿಸುವುದಕ್ಕೆ ಯೋಗ್ಯಳಾದ ಕನ್ಯೆಯಿದ್ದಾಳೆ, ಆಕೆಯನ್ನು ವಿವಾಹವಾಗಿ ಆಕೆಯನ್ನೂ ಜ್ಞಾನಿಯನ್ನಾಗಿ ಮಾಡಿ, ಆಕೆಯಲ್ಲಿ ಸಂತತಿಯನ್ನು ಪಡೆದು ಜ್ಞಾನವು ಸಂತಾನದ ಮೂಲಕವೂ ವಿಸ್ತಾರವಾಗುವಂತೆ ಮಾಡು ಎಂದು ಒಲಿಸಿ ತನ್ನ ಕನ್ಯೆಯನ್ನು ಧಾರೆ ಎರೆದು ಕೊಡುತ್ತಾನೆ. ಇಂದು ನಿಜವಾದ ಗುರುಕುಲವಾಸ, ಜ್ಞಾನ ಪ್ರಾಪ್ತಿ ಹಾಗೂ ಕಾಶಿಗೆ ಹೊರಡಬೇಕೆಂಬ ನೈಜವಾದ ಉದ್ದೇಶವಿಲ್ಲದೇ, ಕಾಶೀಯಾತ್ರೆ ಪದ್ಧತಿಯು ಕೇವಲ ಅನುಕರಣೆಯಾಗಿ ಉಳಿದುಕೊಂಡಿದ್ದರೂ ಸಹಾ, ತಾನು ಜ್ಞಾನಿಯಾಗಿರಬೇಕಾಗಿತ್ತು, ಜ್ಞಾನವನ್ನು ಕನ್ಯೆಯಲ್ಲಿ ಮತ್ತು ಸಂತತಿಯಲ್ಲಿ ಬೆಳೆಸುವ ಜವಾಬ್ದಾರಿಯಿದೆಯೆಂಬ ಸಂಸ್ಕಾರವನ್ನು ವರನಲ್ಲಿ ಉಂಟುಮಾಡುತ್ತದೆ ಎಂದು ಶ್ರೀರಂಗ ಮಹಾಗುರುಗಳು ಕಾಶೀಯಾತ್ರೆಯ ಒಳ ಮರ್ಮವನ್ನು ತಿಳಿಸಿಕೊಟ್ಟಿದ್ದರು.  

ನಂತರ ವರನು ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ ಎಂದು ಪ್ರತಿಜ್ಞೆ ಮಾಡಿ ಕನ್ಯೆಯನ್ನು ವಿವಾಹವಾಗುತ್ತಾನೆ. ಅಂದರೆ ಪತ್ನಿಯನ್ನು ಬಿಟ್ಟು ಧರ್ಮಾರ್ಥಕಾಮಗಳನ್ನು ಅನುಭವಿಸುವುದಿಲ್ಲ ಎಂದು ಘೋಷಿಸಿ ಮುಂದೆ ಪತ್ನಿಯ ಜೊತೆ ಧರ್ಮಾರ್ಥಕಾಮಮಯವಾದ ಜೀವನವನ್ನು  ನಡೆಸುವುದಕ್ಕಾಗಿ ಸಿದ್ಧನಾಗುತ್ತಾನೆ. ಧರ್ಮಾರ್ಥಕಾಮಗಳು ಮೋಕ್ಷಕ್ಕೆ ಕಾರಣವಾಗುತ್ತವೆ. ಹೀಗೆ ಗೃಹಸ್ಥಾಶ್ರಮವು ನಾಲ್ಕೂ ಪುರುಷಾರ್ಥಗಳನ್ನು ಸಂಪಾದಿಸುವ ಶ್ರೇಷ್ಠವಾದ ಆಶ್ರಮವಾಗಿದೆ. ಉಳಿದ ಮೂರೂ ಆಶ್ರಮಗಳಿಗೆ ಆಶ್ರಯ ಕೊಡುವ ತಾಯಿಯ ಸ್ಥಾನದಲ್ಲಿರುತ್ತದೆ. ಇಂದಿಗೂ ಸಹಾ ಮಹರ್ಷಿಗಳ ಗೃಹಸ್ಥಾಶ್ರಮವು ನಾವು ಅಧ್ಯಯನ ಮಾಡಿ ವೈವಾಹಿಕ ಜೀವನವನ್ನು ಪರಿಷ್ಕರಿಸಿಕೊಳ್ಳುವ ಅನೇಕ ಅಂಶಗಳನ್ನು ಒಳಗೊಂಡು ಸಾರ್ಥಕ ಜೀವನಕ್ಕೆ ಕೈ ದೀವಿಗೆಯಾಗಿದೆ.

ಸೂಚನೆ: 28/09/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, September 24, 2019

ज्ञानं-विज्ञानं (Jnaanam- vijnanam)

लेखकः – विद्वान् नरसिंह भट्टः 

ज्ञानं तथा विज्ञानम् इति पदद्वयम् अस्माभिः श्रुतप्रायम् । ज्ञानं प्रमा तथा विज्ञानं विशेषप्रमा इति साधारणतया ज्ञायते । अयं बालः इयं महिला इदं गृहम् इत्याकारकप्रतीतिविषयः ज्ञानमिति व्यवहरन्ति । ‘विज्ञानं शिल्पशास्त्रयोः’ इति अमरकोशे शिल्पादिकलासु तथा शास्त्रादि विद्यासु विज्ञानपदस्य प्रयोगः दृश्यते । अयमेव विशेषः अनयोः पदयोः भवेताम् अथवा अन्यः यः कोऽपि विशेषः अस्ति वा इत्यत्र अयं विचारः प्रवत्तः ।

पदनिष्पत्तिः-

ज्ञा – अवबोधने इति धातुना ल्युट् प्रत्यययोगेन ज्ञानशब्दस्य निष्पत्तिः । ‘मोक्षे धीर्ज्ञानम्’ इति अमरकोशरीत्या मोक्षविषयिका या बुद्धिः भवति तद् ज्ञानमिति व्यवह्रियते । ज्ञानपदेन ‘वि’ उपसर्गस्य योगः विज्ञानपदहेतुः । एवं च विज्ञाने ज्ञानमस्ति । ज्ञाने विज्ञानं भागशः अस्ति इति तयोः सम्बन्धः अनितरसाधारणः । तर्हि कथम् इति सुस्पष्टं ज्ञातव्यं भवति । एनं विषयम् अवगन्तुं बीजवृक्षयोः उदाहरणम् अवश्यम् अवगन्तव्यम् । अष्टाङ्गयोगविज्ञानमन्दिरस्य स्थापकाध्यक्षः श्रीरङ्गमहागुरुः इदमुदहारणम् बहुवारं स्वप्रवचनसन्दर्भे उद्धरन्ति स्म ।

बीजवृक्षन्यायः-    



बीजवृक्षन्यायः न केवलं ज्ञानविज्ञानविषयावगमने साध्यम् अपि तु भारतीयसंस्कृतिं बोद्धुम् । सामान्यतः विज्ञानपदम् आङ्ग्लभाषायां ‘सैन्स्’ इत्युच्यते एतत्तु आंशिकं न तु पूर्णम् । वस्तुतः विज्ञानपदस्य व्याप्तिः बह्वी । ऐन्द्रियकम् इन्द्रियातीतं च प्रपञ्चं व्याप्तम् इदं विज्ञानपदम् । तत्कथम् । उदाहरणार्थम् एकम् आम्रबीजं स्वीकुर्मः । बीजे यथा आम्रः इति व्यवहारः भवति तथा बीजात् अभिवर्धमानेषु शाखोपशाखाफलपुष्पादिषु भवति । अत्र आम्रत्वं बीजात् आबीजम् समानम् । तथैव ज्ञानं प्रथतया सृष्टिमूलस्य सच्चिदानन्दात्मकजगद्बीजे परब्रह्मणि प्रयुत्कम् । अत एवोच्यते उपनिषदि “ सत्यं ज्ञानमनन्तं ब्रह्म” इति । अतः परमात्मा ज्ञानपदबोध्यः । तेन भगवता इदं विश्वं प्रादुरभूत् । यथा आम्रबीजात् उत्पन्नं सर्वमपि आम्रं भवति भगवता उत्पन्नमखिलमपि जगत् विज्ञानपदबोध्यं भवति ।

Sunday, September 22, 2019

ಮಾನವನಿಗೆ ಮೃಗೇಂದ್ರನ ಸಂದೇಶ (Manavanige mrugendrana sandesha)

ಲೇಖಕರು:  ತಾರೋಡಿ ಸುರೇಶ 



ಸಿಂಹವು ಕಾಡಿಗೇ ರಾಜ. ಅದರಲ್ಲಿಯೂ ನಿಸರ್ಗಸಹಜವಾಗಿ ಒದಗಿಬಂದ ಪ್ರಭುತ್ವ. ‘ಸ್ವಯಮೇವ ಮೃಗೇಂದ್ರತಾ’ ಎಂಬ ಬಿರುದಾಂಕಿತನು. ಯಾರೂ ಅದಕ್ಕೆ ನೀನು ಕಾಡಿನ ರಾಜ ಎಂದು ಪಟ್ಟಾಭಿಷೇಕ ಮಾಡಬೇಕಿಲ್ಲ. ಜನ್ಮಜಾತವಾದ ಭಾಗ್ಯ. ಇಂತಹ ಸಿಂಹದಲ್ಲಿ ಒಂದು ವಿಶೇಷವಾದ ನಡೆಯನ್ನು ನಾವು ಗಮನಿಸಬಹುದು. ಅದು ತಾನು ನಡೆಯುತ್ತಿರುವಾಗ ಒಂದಿಷ್ಟು ದೂರ ಸಾಗಿದ ಮೇಲೆ ನಿಂತು ಒಮ್ಮೆ ಹಿಂದೆ ತಿರುಗಿ ತಾನು ನಡೆದುಬಂದ ದಾರಿಯನ್ನು ಗಮನಿಸುತ್ತದೆ. ಕ್ಷಣಕಾಲ ನಿಂತು ಪುನಃ ಮುಂದೆ ಸಾಗುತ್ತದೆ. ಹಾಗೆಯೇ ಪುನಃ ಮುಂದೆ ಕೆಲವು ಹೆಜ್ಜೆ ಸಾಗಿ ಮತ್ತೆ ಹಿಂದಿರುಗಿ ನೋಡುತ್ತದೆ. ಈ ಕ್ರಮವು ಅದು ಗಮ್ಯಸ್ಥಾನವನ್ನು ಸೇರುವವರೆಗೂ ಇರುತ್ತದೆ. ಹೀಗೆ ಸಿಂಹವು ಮಾಡುವ ಅವಲೋಕನವನ್ನು ಸಿಂಹಾವಲೋಕನ ಎಂಬುದಾಗಿ ಕರೆಯುತ್ತಾರೆ.

ಅನೇಕರು ಇದನ್ನು ನಿತ್ಯವೂ ಮಾಡುತ್ತಾರೆ. ಅದನ್ನು ಆತ್ಮಾವಲೋಕನ ಎಂದೋ ಆತ್ಮವಿಮರ್ಶೆ ಎಂದೋ ಕರೆಯುತ್ತಾರೆ. ಅಂದಿನ ದಿನದ ಅಥವಾ ವರ್ಷದ ಆಗುಹೋಗುಗಳು, ತಮ್ಮ ವ್ಯಕ್ತಿಗತವಾದ ತಪ್ಪು ಒಪ್ಪುಗಳು, ಹಾಗೆಯೇ ಮುಂದಿನ ಗುರಿ, ಅದಕ್ಕಾಗಿ ನಡೆಸಬೇಕಾದ ಪ್ರಯತ್ನಗಳು ಇವೆಲ್ಲವನ್ನೂ ಯೋಚಿಸಿ ಯೋಜಿಸಿಕೊಳ್ಳುತ್ತಾರೆ. ಆದರೆ ಇದು ಇಂದ್ರಿಯಜೀವನಕ್ಕಷ್ಟೇ ಸೀಮಿತವಾಗಿರುತ್ತದೆ. ಇದನ್ನೇ ಒಂದು ರೀತಿಯಲ್ಲಿ ಸಿಂಹಾವಲೋಕನ ಎಂದು ಅವರು ಕರೆದುಕೊಳ್ಳುತ್ತಾರೆ. 

‘ಮನ್ ಅವಬೋಧನೇ’ ಎಂಬ ಮೂಲಧಾತುವಿನಿಂದ ಮಾನವ ಎಂಬ ಶಬ್ಧವು ವಿಕಾಸಗೊಂಡಿದೆ. ಒಂದು ಪರಿಪೂರ್ಣವಾದ ನೋಟವುಳ್ಳವನು ಎಂದು ಇದರ ಅರ್ಥ. ಮಾನವನ ಜೀವನವು ಕೇವಲ ಇಂದ್ರಿಯಕ್ಷೇತ್ರದ ಸ್ಥೂಲ ಜೀವನ ಮಾತ್ರವಲ್ಲ. ಜೀವವು ಇಂದ್ರಿಯಕ್ಷೇತ್ರದಲ್ಲಿ ಆಡಿದಂತೆಯೇ ಆಧಿದೈವಿಕ, ಆಧ್ಯಾತ್ಮಿಕ ಎಂಬುದಾಗಿ ಇನ್ನೆರಡು ಕ್ಷೇತ್ರಗಳಲ್ಲಿಯೂ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಅಲ್ಲಿ ದೊರೆಯುವ ಆನಂದ ಇಂದ್ರಿಯಗಳಿಂದ ದೊರೆಯುವ ಸುಖಕ್ಕಿಂತ ಕೋಟಿಕೋಟಿ ಪಾಲು ದೊಡ್ಡದು. ದಿವ್ಯದೃಷ್ಟಿಯನ್ನು ಪಡೆದ ಋಷಿಮುನಿಗಳು, ಜೀವನದ ಪರಿಪೂರ್ಣ ವ್ಯಾಪ್ತಿಯನ್ನು ಅರಿತು ಆಡಿದ ಮಾತುಗಳು ಇವು. ಶ್ರೀ ಶಂಕರ ಭಗವತ್ಪಾದರು ಈ ಹಿನ್ನೆಲೆಯಲ್ಲಿಯೇ ‘ಸ್ವದೇಶೋ ಭುವನತ್ರಯಮ್’- ಮೂರು ಲೋಕಗಳೂ ನನ್ನ ದೇಶವೇ
ಆಗಿದೆ ಎಂದು ಹಾಡಿದರು.

ಆದರೆ ಇಂದ್ರಿಯಗಳ ವ್ಯಾಪ್ತಿಯಲ್ಲಿ ಮಾತ್ರವೇ ಬಾಳಿ ಅಭ್ಯಾಸವಾಗಿರುವ ನಮಗೆ ಸ್ಥೂಲವಾದ ದೇಹದ ಹಿಂದಿರುವ ಸೂಕ್ಷ್ಮವಾದ ತತ್ವಗಳ ಮತ್ತು ಆ ತತ್ವಗಳಿಗೂ ಹಿಂದೆ ಇದ್ದು ಬೆಳಗುತ್ತಿರುವ ಪರಂಜ್ಯೋತಿಯವರೆಗೆ ನಮ್ಮ ದೃಷ್ಟಿಯನ್ನು ಹಾಯಿಸಲು ಸಾಮರ್ಥ್ಯವಿಲ್ಲದಾಗಿದೆ. ಇದಕ್ಕೆ ತಪಸ್ಸಿಲ್ಲದಿರುವುದು ಒಂದು ಕಾರಣವಾದರೆ ನಮ್ಮ ಜೀವನದ ಹಿಂಬದಿಯತ್ತ ನೋಡುವ ಪ್ರಯತ್ನವೇ ಇಲ್ಲದಿರುವುದು ಇನ್ನೊಂದು ಕಾರಣ. ಸಿಂಹದ ಸಿಂಹಾವಲೋಕನವು ಇಲ್ಲಿ ನಮಗೊಂದು ಪಾಠವಾಗಿದೆ.

ಶ್ರೀರಂಗಮಹಾಗುರುಗಳು ಅವತಾರಪುರುಷ ಮತ್ತು ಸಾಧಾರಣ ಮನುಷ್ಯ ಇವರ ನಡುವಣ ಒಂದು ಪ್ರಮುಖ ವ್ಯತ್ಯಾಸವನ್ನು ಹೀಗೆ ವಿವರಿಸಿದ್ದರು. “ಅವತಾರವೆಂದರೆ ಇಳಿದುಬರುವುದು ಎಂದರ್ಥ.ಅವತಾರಪುರುಷರಿಗೆ
ತಮ್ಮ ಅವತಾರದ ಉದ್ಧೇಶ, ಮತ್ತು ತಾವು ಇಳಿದುಬಂದಿರುವ ತತ್ವಸೋಪಾನ ಮತ್ತು ಪುನಃ ಆ ತತ್ವಸೋಪಾನವನ್ನೇ ಏರಿ ಮೂಲವನ್ನು ಸೇರುವುದು ಇಷ್ಟೂ ತಿಳಿದಿರುತ್ತದೆ. ಮಹಡಿಯಿಂದ ಮೆಟ್ಟಲಿಳಿದು ಬಂದಂತೆ ಅವರ ಅಭಿವ್ಯಕ್ತಿ. ಆದರೆ ಸಾಧಾರಣರ ಜನ್ಮ ಮಹಡಿಯಿಂದ ಕೆಳಗೆ ಬಿದ್ದುಬಿಟ್ಟಂತೆ ಇರುತ್ತದೆ”. ಆ ತತ್ವಸೋಪಾನಗಳ ಪರಿಚಯಕ್ಕೆ ಬೇಕಾದ ಹಿನ್ನೋಟವನ್ನು ಪಡೆಯಲು ಸಿಂಹಾವಲೋಕನವು ಸ್ಪೂರ್ತಿಯನ್ನು ಕೊಡುತ್ತದೆ. ಜ್ಞಾನಿಗಳು ಪರಂಜ್ಯೋತಿಯವರೆಗೂ ತಮ್ಮ ದೃಷ್ಟಿಯನ್ನು ಹರಿಸುತ್ತಾರೆ.ಆದರೆ ಸಾಮಾನ್ಯ ಮಾನವನು ಅವರ ಮಾರ್ಗದರ್ಶನದಲ್ಲಿ ಹಾಗೆ ಅವಲೋಕನ ಮಾಡುವುದನ್ನು ಕಲಿಯಬೇಕಾಗುವುದು. ತಾನು ದೇವನಿಂದ ವಿಕಾಸಗೊಂಡು ಜೀವಭಾವವನ್ನು ಪಡೆದು ಬಾಳ್ವೆಯನ್ನು
ನಡೆಸುತ್ತಿರುವಾಗ ತಾನು ನಡೆದು ಬಂದ ಹಾದಿಯನ್ನು ಗಮನಿಸಿ. ಪುನಃ ಸೇರಬೇಕಾದ ಗಮ್ಯಸ್ಥಾನವನ್ನು ನೆನಪಿಸಿಕೊಂಡು ಸಾಗಲು ಸಿಂಹವು ಸಾರ್ಥಕವಾದ, ಸಾರಭೂತವಾದ ಸಂದೇಶವನ್ನು ನೀಡುತ್ತಿದೆ.  

ಸೂಚನೆ:  22/09/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಸಣ್ಣ ಸುಖಕ್ಕಾಗಿ ದೊಡ್ಡ ಸುಖವನ್ನು ತ್ಯಾಗಮಾಡದಿರೋಣ (Sanna sukhakkago dodda sukhavannu thyaagamaadadirona)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ



ಒಮ್ಮೆ ವಾರಣಾಸಿಯ ಗಂಗಾ ತೀರದಲ್ಲಿ ಒಬ್ಬರು ಸಾಧುಗಳು ಧ್ಯಾನಮಗ್ನರಾಗಿದ್ದರು. ಅನತಿ ದೂರದಲ್ಲಿ ಕುಳಿತಿದ್ದವನೊಬ್ಬ ಬಹಳ ಹೊತ್ತಿನಿಂದ ಅವರನ್ನೇ ಗಮನಿಸುತ್ತಿದ್ದ. ಬೆಳಿಗ್ಗೆ,ಸಂಜೆ, ರಾತ್ರಿಯಾದರೂ ಅವರು ಅಂತರ್ಮುಖರಾಗಿಯೇ ಇದ್ದರು. ಇದು ಕೆಲವು ದಿನಗಳೇ ನಡೆಯಿತು. ಇವರನ್ನು ಗಮನಿಸುತ್ತಿದ್ದ ವ್ಯಕ್ತಿಗೆ, ಅವರಿಗೆ ನಮಸ್ಕಾರ ಮಾಡಬೇಕು, ಆಶೀರ್ವಾದ ಪಡೆಯಬೇಕು ಎಂಬ ಹಂಬಲವಾಯಿತು. ಆ ಮಹಾತ್ಮರು ಬಹಿರ್ಮುಖವಾಗುವುದನ್ನೇ ಕಾದಿದ್ದು, ಒಡನೆಯೇ ಅವರ ಬಳಿಸಾಗಿ – ಬದ್ಧಾಂಜಲಿಯಾಗಿ ಹೀಗೆಂದನು - ಸ್ವಾಮೀ ತಾವೆಷ್ಟು ದೊಡ್ಡ ತ್ಯಾಗಿಗಳು! ದಿನಗಟ್ಟಲೆ ಹೀಗೆ ಅಂತರ್ಮುಖರಾಗಿದ್ದೀರಿ, ಎಲ್ಲ ಸುಖಗಳನ್ನೂ ತ್ಯಾಗ ಮಾಡಿದ್ದೀರಿ. ನಿಮ್ಮನ್ನು ದರ್ಶನ ಮಾಡಿ ನಾನು ಕೃತಕೃತ್ಯನಾದೆ. ಎಂದು ದೀರ್ಘದಂಡ ನಮಸ್ಕಾರ ಮಾಡಿದನು. ಆಗ ಆ ಸಾಧುಗಳು ಮುಗುಳ್ನಗುತ್ತಾ – “ಅಪ್ಪಾ, ನಾನೇನೂ ದೊಡ್ಡ ತ್ಯಾಗ ಮಾಡಿಲ್ಲವಪ್ಪಾ, ಅಷ್ಟು ದೊಡ್ಡ ಭಗವಂತನನ್ನು ಪಡೆಯಲು, ಈ ಚಿಕ್ಕ ಚಿಕ್ಕ ಇಂದ್ರಿಯ ಸುಖಗಳೆಲ್ಲವನ್ನು ಮಾತ್ರವೇ ಬಿಟ್ಟಿದ್ದೇನೆ. ಆದರೆ ನೀನು ಮಹಾ ತ್ಯಾಗಿ, ಇಷ್ಟು ಚಿಕ್ಕ ಇಂದ್ರಿಯ ಸುಖಗಳಿಗಾಗಿ ಅಷ್ಟು ದೊಡ್ಡ ಭಗವಂತನನ್ನೇ ತ್ಯಾಗ ಮಾಡಿದ್ದೀಯಲ್ಲ ! ಎಂದರು. ಎಷ್ಟು ಸತ್ಯವಾದ ಮಾತು!

ಆ ವ್ಯಕ್ತಿಯನ್ನು ನಿಮಿತ್ತ ಮಾಡಿಕೊಂಡು ನಮ್ಮೆಲ್ಲರಿಗೆ ಹೇಳಿದ ಮಾತಾಗಿದೆಯಲ್ಲವೇ ಇದು? ನಮ್ಮ ಜೀವನದಲ್ಲಿ ಪಡೆಯಬೇಕಾದ ಅಂತರಂಗದ ಆನಂದ, ಸಂತೋಷ, ನೆಮ್ಮದಿ ಇವುಗಳಿಗಾಗಿ ಸಣ್ಣ ಸಣ್ಣ ಇಂದ್ರಿಯಾಪೇಕ್ಷೆಗಳನ್ನು ನಾವು ತ್ಯಾಗ ಮಾಡುವುದಿಲ್ಲ. ಈ ಅಪೇಕ್ಷೆಗಳನ್ನು ಈಡೇರಿಸುತ್ತಾ ಬದುಕಿನ ಪರಮೋನ್ನತ ಧ್ಯೇಯವನ್ನೇ ತ್ಯಾಗ ಮಾಡುತ್ತೇವೆ. ನಮ್ಮ ಹಿರಿಯರೊಬ್ಬರು ಹೇಳುತ್ತಿದ್ದರು- ಸಣ್ಣ ಸಣ್ಣ ಸಂಗತಿಗಳನ್ನು ತುಂಬಾ ಹತ್ತಿರ ಮಾಡಿಕೊಂಡರೆ ಅದು ದೊಡ್ಡದನ್ನು ಮರೆಯಿಸಿಬಿಡುತ್ತದೆ, ಬೆರಳನ್ನು ಕಣ್ಣಿಗೆ ಹತ್ತಿರವಾಗಿಟ್ಟುಕೊಂಡರೆ ಅದು ಅನಂತ ಆಕಾಶವನ್ನೇ ಮರೆ ಮಾಡಿಬಿಡುತ್ತದೆ, ಎದುರಿಗಿನ ಮಹಾ ಪರ್ವತವನ್ನೇ ಮರೆಮಾಡುತ್ತದೆ. ಬೆಟ್ಟು, ಬೆಟ್ಟವನ್ನೇ ಮರೆಮಾಡುತ್ತದೆ. ಹೀಗೆಯೇ ನಮ್ಮ ಇಂದ್ರಿಯಗಳೂ ಸಹ. ಅವನ್ನು, ಅವುಗಳ ಅಪೇಕ್ಷೆಗಳನ್ನು ಬಹಳ ಹತ್ತಿರ ಮಾಡಿಕೊಂಡರೆ ಅವುಗಳ ಹಿಂಬದಿಯಲ್ಲಿ ಬೆಳಗುತ್ತಿರುವ ಮಹಾ ಚೈತನ್ಯವನ್ನೇ ಮರೆಮಾಡಿಬಿಡುತ್ತದೆ.ಹಾಗೆಂದು ಇಂದ್ರಿಯ ಸುಖಗಳನ್ನು ಕಡೆಗಣಿಸ ಬೇಕೆಂದಲ್ಲ. ಆದರೆ ಅದಕ್ಕೊಂದು ಕಡಿವಾಣ ಬೇಕು. ರುಚಿ ರುಚಿಯಾದ ತಿಂಡಿಯನ್ನು ತಿನ್ನಬೇಕು. ಆದರೆ ಅದನ್ನು ಮಿತಿಮೀರಿ ತಿಂದರೆ ಅಜೀರ್ಣವಾಗಿ ತಿನ್ನುವ ಪ್ರವೃತ್ತಿಯೇ ನಷ್ಟವಾಗುವಂತೆ ಆಗಬಾರದಲ್ಲವೇ?

ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-“ಹೆಂಡತಿ, ಮಕ್ಕಳು, ಒಡವೆ, ಹಣ ಇವೆಲ್ಲಕ್ಕಾಗಿ ಅಳುವುದನ್ನು ಕಲಿತಿದ್ದೇವಪ್ಪಾ, ಹಾಗೆಯೇ ನಮ್ಮ ಜೀವನದ ಮೂಲನಾದ ಭಗವಂತನಿಗಾಗಿ ಅಳುವುದನ್ನೂ ಕಲಿಯಬೇಕಪ್ಪಾ” ಎಂದು. ನಮ್ಮ ದೇಶದ ಮಹರ್ಷಿಗಳು ಹೊರಗಿನ ಇಂದ್ರಿಯ ಸುಖ ಒಳಗಿನ ಆತ್ಮ ಸುಖ ಇವೆರಡನ್ನೂ ಒಂದು ಸಮತೋಲನದಲ್ಲಿಟ್ಟುಕೊಳ್ಳುವ ಜೀವನ ವಿಧಾನವನ್ನು ಈ ನಾಡಿನಲ್ಲಿ ತಂದುಕೊಟ್ಟರು. ಅಂತಹ ಜೀವನವಿಧಾನದ ಫಲವಾಗಿ ಸಮೃದ್ಧವಾದ ಒಳ ಹೊರ ಜೀವನಗಳೆರಡನ್ನೂ ಅನುಭವಿಸಿದ ಬಾಳಾಟ ಎಷ್ಟು ಆನಂದಮಯವಾಗಿತ್ತು ಎಂಬುದಕ್ಕೆ ಪ್ರಾಚೀನ ಭಾರತದ ವೈಭವದ ಇತಿಹಾಸವೇ ಸಾಕ್ಷಿಯಾಗಿದೆ.

ಇವತ್ತಿಗೂ ನಮ್ಮ ಜೀವನಗಳು ಅವರು ನೀಡಿದ ಜ್ಞಾನದ ಬೆಳಕಿನಲ್ಲಿ ಅರಳುವಂತಾದರೆ ಎಲ್ಲರೂ ನೆಮ್ಮದಿಯ ಬದುಕನ್ನು ನಡೆಸಬಹುದಲ್ಲವೇ?


ಸೂಚನೆ:  21/09/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

ಬ್ರಹ್ಮಚರ್ಯವು ಐಹಿಕ ಮತ್ತು ಪಾರಮಾರ್ಥಿಕ (Brahmavu aihika mattu paaramarthika)

ಲೇಖಕರು: ಜಿ. ನಾಗರಾಜ್


ಭಾರತೀಯ ಚಿಂತನೆಯಲ್ಲಿರುವ ವಿಶೇಷತೆ ಎಂದರೆ ಪ್ರಾಪಂಚಿಕ ಸುಖ ಹಾಗೂ ಪಾರಮಾರ್ಥಿಕ ಸುಖಗಳೆರಡರ ಸಾಮರಸ್ಯ.

ಈ ಚಿಂತನೆಯನ್ನು ಕೇವಲ ಹಗಲುಗನಸಾಗಿ ಬಿಡದೇ, ಮಹರ್ಷಿಗಳು ಈ ಚಿಂತನೆಗನುಗುಣವಾದ ಜೀವನಕ್ರಮವನ್ನೇ ಸಮಾಜದಲ್ಲಿ ತಂದಿದ್ದಾರೆ. ಈ ಜೀವನಕ್ರಮಕ್ಕನುಗುಣವಾದ ವ್ಯವಸ್ಥೆಯೇ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳು.

ಚರ್ಯೆ ಎಂದರೆ ನಡೆ ಅಥವಾ ನಡೆವಳಿಕೆ ಎಂದಾಗುತ್ತದೆ. ಬ್ರಹ್ಮಚರ್ಯೆ ಎಂದರೆ ಸೃಷ್ಟಿಮೂಲದಲ್ಲಿ ಬೆಳಗುವ ಸೃಷ್ಟಿಯ ನಿಯಮಗಳೆಲ್ಲವನ್ನೂ ತನ್ನಲ್ಲಿಟ್ಟುಕೊಂಡಿರುವ ಬ್ರಹ್ಮನ ಆಶಯಕ್ಕೆ ಅನುಗುಣವಾದ ಜೀವನಕ್ರಮ ಎಂದಾಗುತ್ತದೆ. ನಮ್ಮ ಮೂಲದಲ್ಲಿರುವ ಬ್ರಹ್ಮದ ಕಡೆ ನಮ್ಮ ಮನಸ್ಸು ಹರಿಯಬೇಕಾದರೆ ನಮ್ಮ ಶಕ್ತಿಗಳು ಇಂದ್ರಿಯಪ್ರಪಂಚದಲ್ಲಿ ಹರಿದು ಹಂಚಿಹೋಗದೇ ಇರಬೇಕಾಗಿರುವುದರಿಂದ ಪುರುಷ-ಸ್ತ್ರೀ ಸಂಭೋಗದಿಂದ ದೂರವಿರುವಿಕೆಯನ್ನೇ ಬ್ರಹ್ಮಚರ್ಯವೆಂದು ವಿಶೇಷಾರ್ಥದಲ್ಲಿ ಬಳಸುತ್ತಾರೆ. ಸಾಮಾನ್ಯ ಅರ್ಥದಲ್ಲಿ ಈ ಬ್ರಹ್ಮಚರ್ಯೆಯು ಪ್ರತಿಯೊಬ್ಬ ಮಾನವನಿಗೂ ಜೀವನ ಪೂರ್ತಿ ಬೇಕಾದ ನಡವಳಿಕೆಯಾಗಿದೆ. ಗೃಹಸ್ಥರಲ್ಲದವರು ಸ್ತ್ರೀಸಂಗದಿಂದ ದೂರವಿದ್ದು, ಗೃಹಸ್ಥರು ಸ್ವಸ್ತ್ರೀಯಲ್ಲಿ ಮಾತ್ರ ಸಂಪರ್ಕವನ್ನಿಟ್ಟುಕೊಳ್ಳುವುದನ್ನೂ ಬ್ರಹ್ಮಚರ್ಯೆಯೆನ್ನುತ್ತಾರೆ ಎಂದು ಶ್ರೀರಂಗಮಹಾಗುರುಗಳು ಸೂಕ್ಷ್ಮಾರ್ಥವನ್ನು ಬಿಡಿಸಿಕೊಟ್ಟಿದ್ದರು.

ಆದರೆ, ವಿಶೇಷಾರ್ಥದಲ್ಲಿ ಗುರುಕುಲವಾಸದಲ್ಲಿ, ಇಂದ್ರಿಯ ಸಂಯಮದಿಂದ ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡು ನಡೆಸುವ ಜೀವನಕ್ಕೇ ಬ್ರಹ್ಮಚರ್ಯಾಶ್ರಮ ಎನ್ನುತ್ತಾರೆ. ಜೀವನದ ಕೊನೆಯಲ್ಲಿ ಮೋಕ್ಷವನ್ನೇ ಪಡೆಯಬೇಕಾದುದರಿಂದ, ಅದಕ್ಕವಶ್ಯಕವಾದ ಬ್ರಹ್ಮಜ್ಞಾನವನ್ನು ಬಾಲ್ಯದಲ್ಲಿಯೇ ಪಡೆಯಬೇಕಾಗುತ್ತದೆ. ಇದೇ ಬ್ರಹ್ಮಚರ್ಯಾಶ್ರಮದ ಪರಮ ಗುರಿ. ಈ ಜ್ಞಾನ ಸಂಪಾದನೆಗೆ ಕಟ್ಟುನಿಟ್ಟಿನ ಇಂದ್ರಿಯ ಸಂಯಮ ಪೋಷಕವಾಗಿರುತ್ತದೆ. ಹೀಗಾಗಿ ದೇಹಾಲಂಕಾರ ತ್ಯಾಗ, ಕನ್ನಡಿ ನೋಡಿಕೊಳ್ಳದಿರುವುದು, ಹಾಸಿಗೆಯ ಮೇಲೆ ಮಲಗಬಾರದು, ರುಚಿ ರುಚಿಯಾದ ಭಕ್ಷ್ಯಗಳಿಗೆ ಆಸೆ ಪಡದೇ ಭಿಕ್ಷಾಟನೆಯಿಂದ ದೊರೆತ ಆಹಾರದಿಂದ ತೃಪ್ತಿಯಿಂದಿರಬೇಕು ಮೊದಲಾದ ನಿಯಮಗಳೊಂದಿಗೆ ವಿದ್ಯಾಭ್ಯಾಸ ಮಾಡುತ್ತಾನೆ. ತನ್ಮೂಲಕ ಬ್ರಹ್ಮವನ್ನು ಅರಿತುಕೊಂಡು, ಅದರ ವಿಸ್ತಾರವಾದ ಪ್ರಪಂಚ ಮತ್ತು ಜೀವನವನ್ನೂ ತಿಳಿದುಕೊಂಡು, ಜ್ಞಾನಿಯಾಗುತ್ತಾನೆ. ಈ ಜ್ಞಾನದ ಬಲದಿಂದಲೇ ಮುಂದಿನ ಜೀವನದಲ್ಲಿ ಪಾರಮಾರ್ಥಿಕ ಹಾಗೂ ಐಂದ್ರಿಕ ಸುಖವನ್ನನುಭವಿಸಿ ಕೊನೆಗೆ ಜ್ಞಾನಬಲದಿಂದಲೇ ಮೋಕ್ಷವನ್ನೂ ಪಡೆಯುತ್ತಾನೆ.

ಹೀಗೆ, ಬ್ರಹ್ಮಚರ್ಯವು ಐಹಿಕ ಮತ್ತು ಪಾರಮಾರ್ಥಿಕ ಸುಖಗಳೆರಡನ್ನೂ ಒಳಗೊಂಡಂತಹಾ ಪೂರ್ಣಜೀವನಕ್ಕೆ ಬುನಾದಿಯಾಗಿದೆ. ಇಂದು ಬ್ರಹ್ಮಚರ್ಯಾಶ್ರಮಕ್ಕೆ ಅನುಕೂಲವಾದ ಸಾಮಾಜಿಕ ವ್ಯವಸ್ಥೆಯಿಲ್ಲದಿದ್ದರೂ ಸಹಾ, ಸಾಮಾನ್ಯ ಅರ್ಥದ ಬ್ರಹ್ಮಚರ್ಯವು ಎಲ್ಲರಿಗೂ ಅವಶ್ಯಕವಾದ, ಹಾಗೂ ಪಾಲಿಸಬಹುದಾದ ನಡವಳಿಕೆಯಾಗಿದೆ. ಮತ್ತು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಸಹಾ ಬಾಲಕರು ಅನುಸರಿಸಬಹುದಾದ ಅನೇಕ ಆದರ್ಶಗಳನ್ನೊಳಗೊಂಡ ಕೈದೀವಿಗೆಯಾಗಿಯೂ ಇದೆ, ಮಹರ್ಷಿಗಳ ಬ್ರಹ್ಮಚರ್ಯಾಶ್ರಮ.

ಸೂಚನೆ: 21/09/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

अहंकार से बच के रहिये (Ahankar se bach ke rahiye)

लेखक: श्री के.एस.राजगोपा
हिन्दी अनुवाद: श्रीमती पूजा धवन



महाविष्णु के निवास स्थान वैकुंठ के द्वार्पाल जय और विजय हैं। एक बार, महान सनक और उनके साथी संत जन महाविष्णु से मिलने आए। अहंकार के कारण, इन ऋषियों की महानता से अवगत होते हुऎ भी, द्वार्पालो ने उन्हें वैकुंठ में प्रवेश करने से रोक दिया   ऋषियों ने क्रोध में आकर जय और विजय को शाप दिया: “तुम इस पवित्र स्थान पर रहने के लिए अयोग्य हो ; राक्षसों के रूप में पृथ्वी पर जन्म लो तब महाविष्णु वहाँ स्वयं प्रकट हुए और जय और विजय को दो विकल्प दिएयाँ तो तीन जन्मों के लिए विष्णु के जन्म जाट शत्रु के रूप में जन्म लेना, याँ सात जन्मों के लिए उनके मित्र के रूप में - उन्होंने उत्सुकता से पहला विकल्प चुना ताकि वे शीघ्र ही वैकुंठ लौट सकें विष्णु ने अब ऋषियों को संबोधित किया क्योंकि वह उन्हें ज्ञानोदय करना चाहते थे। हस्ते हुए, उन्होंने टिप्पणी की: "यह जय और विजय का अत्यधिक अनुप्युक्ता है, कि आपके समान ऋषियों को द्वार पर रोक दिया, जो कि जितेन्द्रिय के रूप में जाने जाते हैं, (इन्द्रियों के विजेता) और क्रोध पर नियंत्रण के लिए प्रतिष्ठित मैं व्यक्तिगत रूप से उनकी गलती के लिए क्षमा माँगता हूँ!” तुरन्त ही ऋषियों ने विष्णु के सहायकों के साथ अपने क्रोध पर नियन्त्रन रखने की अपनी मूर्खता को समझा यह भारतीय पौराणिक कथाओं के छात्रों के लिए एक प्रसिद्ध कहानी है।      

कई लोग यह निष्कर्ष निकाल सकते हैं कि जय और विजय का वैकुंठ लौटने का आग्रह समझ में आता है क्योंकि वे अपने प्रभु महाविष्णु से अलग होने में असमर्थ थे।

श्रीरंगा महागुरु ने इस कथा को सुंदर विधान से समझाया था जब जय-विजय ने दो विकल्पों का सामना किया - शत्रु या मित्र बनने के लिए - और पूर्व को चुना, तो इसका कारण यह था कि शाप पहले से ही फल देने लगा था, इस प्रकार इस विकल्प के प्रति उनकी बुद्धि चली वे विष्णु के सहयोगी होने के लिए चुन सकते थे, चाहे सात जन्मों के लिए हों या सौ के लिए! वैकुंठ के निवासियों के रूप में, उन्हें अपने मन को हमेशा प्रभु पर रखना चाहिए था भले ही वे शाप के कारण पृथ्वी पर जन्म लेते, यदि उनका मन विष्णु के प्रति अगाध रूप से समर्पित होता, तो जन्मों की संख्या और ही उनके रेहने का स्थान दोनो ही उपेक्षित है वे इस सरल सिद्धांत को ही समझ नहीं  पाए! "चाहे स्वर्ग में हो या नरक में, सुख में या दुःख में, मैं हमेशा तुम्हें याद रख सकता हूँ" - इस प्रकार प्रार्थना करना भारतीय संस्कृति की प्रमुखता है।

जय और विजय का प्रसंग समयग रूप से यह दर्शाता है कि कैसे एक महान भक्त भी, अगर प्रसिद्धि या स्थान के लिए एक लालसा विकसित करता है, या इस प्रकार के अन्य स्वार्थों से युक्त होता है, तो जीवन में अपने अंतिम उद्देश्य को भूल सकता है। अगर भगवान विष्णु के सेवादारों के साथ भी ऐसा हो सकता है, तो हममें से बाकी लोगों की क्या बात है? यही कारण है कि बुजुर्गों ने चेतावनी दी "प्रत्यहं प्रत्ययवेक्षेत नरश्चरितमात्मनः। किं नं मे पशुभिस्तुल्यं किं नु सत्पुरुषैरिति (एक मनुष्य को प्रति दिन आत्मनिरीक्षण करना चाहिए कि: क्या मैं जानवर की तरह व्यवहार कर रहा हूं या एक महान व्यक्ति की तरह?) पशु केवल स्वाभाविक प्रवृत्ति पर कार्य कर सकते हैं। एक पशु ही है जो जीवन के अन्त तक अपनी मूल प्रवृत्ति के अनुसार जीवन व्यतीत करता है  परन्तु एक मनुष्य ही है जो अपने विवेक से जीवन के परम लक्ष्य अथवा मोक्ष का  जीवन चलाकर उसको सार्थक कर सकता है इसलिये हमें, अपना वातावरण, संगत, इत्यादियों को अपने लक्ष्य के अनुकूल रख कर गलत विष्यों से अपने आप को बचाकरअपने विवेक के साधन से, गलतियां सुधारते हुए अपने लक्ष्य की ओर बडकर जीवन को सार्थक बनाना चहिये

सूचन : इस लेख का कन्नड़ संस्करण AYVM   ब्लॉग पर देखा जा सकता है I