Showing posts with label author_padminishrinivasan. Show all posts
Showing posts with label author_padminishrinivasan. Show all posts

Friday, December 20, 2024

ಗೀತಾಚಾರ್ಯ- ಸಂಗೀತಾಚಾರ್ಯ ಶ್ರೀಕೃಷ್ಣ (Geethacharya - Sangeethacharya Shreekrishna)

 ಲೇಖಕರು : ಪದ್ಮಿನಿ ಶ್ರೀನಿವಾಸನ್

ಪ್ರತಿಕ್ರಿಯಿಸಿರಿ (lekhana@ayvm.in)




ಕುರುಕ್ಷೇತ್ರ ಯುದ್ಧರಂಗದಲ್ಲಿ,  ಪಶ್ಚಾತ್ತಾಪದಲ್ಲಿ ಮುಳುಗಿದ ಅರ್ಜುನನಿಗೆ,  ಕ್ಷತ್ರಿಯ ಧರ್ಮವನ್ನು ಜ್ಞಾಪಿಸಿ, ಭಗವದ್ಗೀತೆಯನ್ನು ಉಪದೇಶಿಸಿದ ಪಾರ್ಥಸಾರಥಿಯ ಚಿತ್ರವು ಪ್ರಸಿದ್ಧವಾದದ್ದು. ರಥದ ಮಧ್ಯದಲ್ಲಿ ನಿಂತು, ಲೋಕಕಲ್ಯಾಣ-ಆತ್ಮಕಲ್ಯಾಣ ಎರಡೂ ಸಿದ್ಧಿಸುವ  ತತ್ವವನ್ನು ಅನುಗ್ರಹಿಸುತ್ತಿರುವನು ಶ್ರೀಕೃಷ್ಣ. ಕೊಳಲನ್ನೂದುತ್ತಿರುವ ಮುರಳೀಮನೋಹರನ ಚಿತ್ರವೂ ಅಷ್ಟೇ ಪ್ರಸಿದ್ಧವಾದದ್ದು. ತ್ರಿಭಂಗಿಯಲ್ಲಿ ನಿಂತು, ಜಗನ್ಮೋಹನನಾಗಿ ಇಂಪಾದ ವೇಣುಗಾನವನ್ನು ಲೋಕಕ್ಕೆ ವಿಸ್ತರಿಸುತ್ತಿರುವನು. 

ಆತ್ಮಯೋಗ, ನಾದಯೋಗಗಳ ರಹಸ್ಯಗಳನ್ನು ಬಲ್ಲವರಾದ ಶ್ರೀರಂಗಮಹಾಗುರುಗಳು, ಪೂಜನೀಯವಾಗಿರುವ ಈ ಚಿತ್ರಗಳಲ್ಲಿರುವ  ದಿವ್ಯಭಾವಗಳನ್ನು, ನಮ್ಮಗಳ ಬುದ್ಧಿಗೂ ಎಟುಕಿಸಿದವರು.  ತ್ಯಾಗರಾಜರ ‘ಗೀತಾರ್ಥಮು’ ಕೃತಿಯಲ್ಲಿ ಗೀತ-ಸಂಗೀತಗಳ ಏಕಸೂತ್ರತೆಯನ್ನು ತಿಳಿಸಿಕೊಡುತ್ತಾ, ಶ್ರೀಕೃಷ್ಣನು ಗೀತಾಚಾರ್ಯ-ಸಂಗೀತಾಚಾರ್ಯ ಎಂಬುದನ್ನೂ  ಧೃಡಪಡಿಸಿದ್ದರು. ಕೃತಿಯ ಭಾವಾರ್ಥ- “ಎಲೈ ಮನಸ್ಸೇ! ಗೀತಾರ್ಥವೂ ಸಂಗೀತಾನಂದವೂ ಎರಡೂ ನಿನ್ನ ಹತ್ತಿರದಲ್ಲಿರುವ ಈ ಸ್ಥಳದಲ್ಲಿ ಒಂದಾಗಿದೆ, ಗಮನಿಸು. ವಾತಾತ್ಮಜನಿಗೆ ಈ ವಿಷಯವು ಚೆನ್ನಾಗಿ ಗೊತ್ತು”. 

ಗೀತ-ಸಂಗೀತಗಳ  ಏಕಸೂತ್ರತೆ

ಗೀತ-ಸಂಗೀತವೆಂದರೆ  ಸಾಮಾನ್ಯವಾಗಿ ‘ಹಾಡು’ ಎಂದರ್ಥ. ಅಷ್ಟಕ್ಕೇ ಸೀಮಿತವಾಗದೆ, ಭಗವದ್ಗೀತೆ-ಸಂಗೀತಗಳು ಸೃಷ್ಟಿಕರ್ತನ  ಆಶಯದಂತೆ ಪ್ರಣವಮೂಲದಿಂದ ವಿಸ್ತಾರವಾಗಿ, ಅಲ್ಲಿಗೇ ಮತ್ತೆ ಹಿಂತಿರುಗಿಸುವ ವಿದ್ಯೆಗಳು. ಪರಮಾತ್ಮಜ್ಯೋತಿಯ ವಾಗ್ರೂಪಗಳಾಗಿ–  ಸ್ವರಾಕ್ಷರಗಳಾಗಿ, ಸಪ್ತಸ್ವರಗಳಾಗಿ ಪ್ರಕೃತಿಯಲ್ಲಿ ವಿಸ್ತರಿಸಿಕೊಂಡಿವೆ. ಇದರ ರಹಸ್ಯವನ್ನು ಬಲ್ಲ ಹನುಮಂತ, ಜೀವಿಗಳ ಪ್ರಾಣನಾಥ.  ನಾಲ್ಕೂ ವೇದಗಳನ್ನು ಕರಗತ ಮಾಡಿಕೊಂಡ ಗಾನನಿಪುಣ.

ಸಂಗೀತವೆಂದರೆ ಸಮ್ಯಕ್ ಗೀತೆ. ಗಾಯನ- ನೃತ್ಯ-ವಾದನಗಳು ಸೇರಿ, ತ್ರಿಕರಣಗಳ (ದೇಹ,ಮನಸ್ಸು,ಆತ್ಮ) ಸಾರೂಪ್ಯವುಳ್ಳದ್ದು. ಕೃಷ್ಣಲಹರಿ ಸ್ತೋತ್ರ "ಲೋಕಾನುನ್ಮದಯನ್  ...."  ಹೇಳುವಂತೆ –“ಲೋಕಗಳಿಗೆ ಉನ್ಮಾದವನ್ನು ಉಂಟುಮಾಡುತ್ತಾ; ವೃಕ್ಷಗಳನ್ನು ಹರ್ಷಪಡಿಸುತ್ತಾ; ಮೃಗಗಳನ್ನು ಪರವಶಗೊಳಿಸುತ್ತಾ; ಗೋವುಗಳನ್ನು ಆನಂದಿಸುತ್ತಾ; ಮುನಿಗಳನ್ನು ಮೊಗ್ಗಿನಂತೆ ಅಂತರ್ಮುಖರಾಗಿಸುತ್ತಾ, ಓಂಕಾರದ ಅರ್ಥವನ್ನು ವಿವರಿಸಿ ಹೇಳುತ್ತಿದೆಯೋ ಎಂಬಂತಿದೆ ಶ್ರೀಕೃಷ್ಣನ ವೇಣುನಾದ”. ಪ್ರಣವನಾದದೊಂದಿಗೇ ಕೂಡುತ್ತಿದೆ ಅದರ ಶ್ರುತಿ!

ಭಗವದ್ಗೀತೆಯು ಕೃಷ್ಣಾರ್ಜುನರ ಸಂಭಾಷಣೆಯಾಗಿದ್ದು, ಕೇವಲ ವೇದಾಂತ ತತ್ವವಾಗಿರದೆ, ಛಂದೋಬದ್ಧವಾಗಿ, ಧರ್ಮಾರ್ಥಕಾಮಮೋಕ್ಷಗಳನ್ನು ಹೊಂದಿಸುವ, ಕರ್ಮ, ಭಕ್ತಿ ಹಾಗೂ ಜ್ಞಾನ ಮಾರ್ಗಗಳನ್ನು ಉಪದೇಶಿಸುತ್ತದೆ. ವೇದೋಪನಿಷತ್ತುಗಳ ಸಾರವೇ ಆಗಿದೆ. ಪರಮಾನಂದದತ್ತ ನೊಂದಜೀವಿಗಳನ್ನು ಸೆಳೆಯುತ್ತದೆ. 

ಗೀತ-ಸಂಗೀತಗಳೆರಡೂ ಇಂದ್ರಿಯಗಳಿಂದ ಸೆಳೆಯಲ್ಪಡುತ್ತಿರುವ ಮನಸ್ಸುಗಳನ್ನು ಹರ್ಷದಿಂದ ಆಕರ್ಷಿಸುತಾ, ನಾದ ಮೂಲಕ್ಕೆ ಕೊಂಡೊಯ್ಯುತ್ತಿವೆ. ಎರಡೂ ಆತ್ಮನಿಗೆ ಜಯವನ್ನು (ಪರಮಾತ್ಮನಲ್ಲಿ ಒಂದಾಗುವುದು) ಘೋಷಿಸುತ್ತಿವೆ.

ಆಚಾರ್ಯ ಶ್ರೀಕೃಷ್ಣ

ಆಚಾರ್ಯನ ಲಕ್ಷಣಗಳೆಂದರೆ, ಸದಾಚಾರ ಸಂಪನ್ನನಾಗಿ, ಶಾಸ್ತ್ರಗಳನ್ನು ಸಂಗ್ರಹಿಸಿ, ಲೋಕದಲ್ಲಿ ನೆಲೆಗೊಳಿಸುವುದು. ಉಪದೇಶವೆಂದರೆ ವಿಷಯವನ್ನು  ಉಗಮಸ್ಥಾನಕ್ಕೆ ಕರೆದೊಯ್ಯುವ  ಮಾರ್ಗದರ್ಶನ. ಜೀವನದ ಪರಮಾದರ್ಶವನ್ನು  ಅರಿಯಲು ತತ್ವದರ್ಶಿಗಳಾದ ಆಚಾರ್ಯರ ಉಪದೇಶ ಬೇಕು. ಹಿರಿಯರಿಂದ ಕೇಳುವ- ಸತ್ಯವನ್ನುಡಿ ಇತ್ಯಾದಿ, ಧರ್ಮವನ್ನು ಉಳಿಸುವ ಹಿತೋಪದೇಶಗಳು. ಸಂತರ ಕೃತಿಗಳು ಇಹ-ಪರಗಳ ನಡುವೆ ಧರ್ಮಸೇತುವೆಯಂತಿರುವ ತತ್ವೋಪದೇಶಗಳು. ಇನ್ನು   ಶ್ರೀಕೃಷ್ಣನ ಗೀತೋಪದೇಶ ಪರಧರ್ಮವನ್ನು ಕುರಿತ ವಿಷಯವೇ ಆಗಿರಬೇಕಲ್ಲವೇ? 

ಯೋಗೇಶ್ವರ ಶ್ರೀಕೃಷ್ಣನಲ್ಲಿ ಪ್ರತಿಬಿಂಬಿಸುತ್ತಿರುವ ಭಾವಮುದ್ರೆಗಳು, ಅಂತರಂಗದ ಸ್ಥಿತಿಯನ್ನು ತಾನಾಗಿಯೇ ಪ್ರಕಟಪಡಿಸುತ್ತಿವೆ.  ಶಿರದ ಅತ್ಯುನ್ನತಸ್ಥಾನದಲ್ಲಿ ಧರಿಸಿದ ನವಿಲುಗರಿ, ಸೃಷ್ಟಿ ಹಾಗೂ ಸೃಷ್ಟಿಕರ್ತನ ಮುದ್ರೆಯನ್ನುಳ್ಳದ್ದಾಗಿದೆ. ಬಲಗೈ ಆತ್ಮಮುದ್ರೆ, ಜೀವ-ದೇವರ ಒಂದಾಗುವಿಕೆಯನ್ನು ಪ್ರತಿನಿಧಿಸುತ್ತಿದೆ. ಭಗವದ್ಗೀತೆಯನ್ನು ಅನುಗ್ರಹಿಸುವ ವ್ಯಾಖ್ಯಾ ಮುದ್ರೆಯೂ ಆಗಿದೆ.  ನರನಾರಾಯಣರ ಸೇರುವಿಕೆಗೆ ಬೇಕಾದ ಶಾಸನವನ್ನು  ಜಾರಿಗೆ ತರಲು ಹೃಷಿಕೇಶನಾಗಿ, ಎಡಗೈಯಲ್ಲಿ ಚಾವಟಿಕೋಲನ್ನು ಹಿಡಿದು ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸುತ್ತಾ ಜೀವಿಯನ್ನು ಆಕರ್ಷಿಸುತ್ತಿದ್ದಾನೆ.  ಕೋಲಿನ ಏಳು ಗಂಟುಗಳು, ಬೆನ್ನು ಹುರಿಯ(ಜ್ಞಾನರಜ್ಜು) ಏಳು ಚಕ್ರಗಳನ್ನು  ಪ್ರತಿನಿಧಿಸುತ್ತಿವೆ. ನರ-ರಥದ ಹೃದಯದಲ್ಲಿ ಆತ್ಮನಾಗಿ ವಾಸವಾಗಿದ್ದಾನೆ.

ಸ್ವತಃ ನಾದಮಯನಾದ ಮಾಧವ, ತನ್ನ ಉಸಿರನ್ನು ಕೊಳಲಿನೊಳಗೆ ತುಂಬಿ, ಜೀವಿಗಳನ್ನು ಆಕರ್ಷಿಸುತ್ತಿರುವನು. ಲೀಲಾಶುಕಕವಿಯ ಕೃಷ್ಣಕರ್ಣಾಮೃತದ "ಅಂಸಾಲಂಬಿತ ವಾಮಕುಂಡಲಭರಂ..." ಶ್ಲೋಕದಲ್ಲಿ- “ಎಡಕ್ಕೆ ಬಾಗಿದ ತಲೆ, ಮೇಲಕ್ಕೆ ಎತ್ತಿದ ಬಲ ಹುಬ್ಬು, ತ್ರಿಭಂಗಿಯಲ್ಲಿ ಕೊಳಲನ್ನು ಆನಂದದಿಂದ ನುಡಿಸುತ್ತಿರುವ, ಜಗವನೇ ಮೋಹಗೊಳಿಸುವ ಗೋಪಾಲನನ್ನು ಬಲ್ಲೆ” ಎನ್ನುತ್ತಾರೆ. ಅವನ ಆತ್ಮಭಾವವನ್ನು ಹೊರಸೂಸಿದ ಸಂಗೀತ, ಕೇವಲ ಇಂದ್ರಿಯ ತೃಪ್ತಿಗಲ್ಲ, ನಾದೋಪಾಸನೆಯಾಗಿ, ಪ್ರಣವದ ವ್ಯಾಖ್ಯಾನವಾಗಿದೆ. ಕೊಳಲಿನ  ಸಪ್ತರಂದ್ರಗಳು, ದೇಹದ ಸಪ್ತಚಕ್ರಗಳನ್ನು  ಪ್ರತಿನಿಧಿಸುತ್ತಿವೆ. ಆ ನಾದವನ್ನು ಅನುಸರಿಸಿದರೆ ಪ್ರಣವದ ಉಗಮ ಸ್ಥಾನದವರೆಗೆ ತಲುಪಬಹುದು ಎಂಬ ಗುಪ್ತ ಆದೇಶವನ್ನು ತಿಳಿಸುತ್ತಿದೆ. 

ನಾದಬ್ರಹ್ಮನ ಉಪಾಸನೆಯಿಂದ ಸಂಗೀತ ವಿಸ್ತರಿಸಿದ ಸಂಗೀತಾಚಾರ್ಯ, ಧರ್ಮಸಂಸ್ಥಾಪನೆಗಾಗಿ ಗೀತೋಪದೇಶ ಮಾಡಿದ ಗೀತಾಚಾರ್ಯ. ಅವನೇ ಹೇಳಿಕೊಂಡಿರುವಂತೆ- "ಗೀತೆಯೇ ನನ್ನ ಹೃದಯ". ಸಂಗೀತವೂ ಅವನ ಹೃದಯವೇ. ಅವನ ಉಸಿರು ಗೀತಯಲ್ಲಿ ವಾಗ್ರೂಪವಾದರೆ, ಸಂಗೀತದಲ್ಲಿ ವಾಕ್-ಗೇಯರೂಪವಾಗಿದೆ. 

ಗೀತ-ಸಂಗೀತಗಳೆರಡೂ ಅಧ್ಯಯನಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಸಂಗೀತ ಪಿತಾಮಹರಾದ ಪುರಂದರದಾಸರು 'ನಳಿನಜಾಂಡ ತಲೆಯದೂಗಿ ಮೋಹಿಸುತ್ತಿರಲು ಕೊಳಲನೂದಿ ಭ್ರಾಜಿಸುವ ಕೃಷ್ಣರಾಯನ ನೋಡಿ ' ಎಂಬ ಕೃತಿಯಲ್ಲಿ ಪುರಾತನ  ರಾಗಗಳನ್ನು ಉಲ್ಲೇಖಿಸುತ್ತಾರೆ. ನಮ್ಮವರೆಗೆ ತಲುಪಿರುವ ಸೃಷ್ಟಿಸಹಜವಾದ ಈ ರಾಗಗಳು ಕಾಲಕ್ರಮೇಣ ಸಂತರ  ಅಂತರ್ದೃಷ್ಟಿಯಿಂದ, ಭಿನ್ನವಾದ ಹೆಸರನ್ನು ಪಡೆದಿರಬಹುದು. ಜೀವಕೋಟಿಗಳನ್ನು ಉದ್ಧರಿಸುವ ವಿದ್ಯೆಗಳನ್ನು ಕರುಣಿಸಿದ ಪ್ರಥಮಾಚಾರ್ಯನಾದ ಶ್ರೀಕೃಷ್ಣಪರಂಜ್ಯೋತಿಗೆ ಶಿರಬಾಗಿ ನಮಿಸೋಣ!


Friday, July 5, 2024

ಯುದ್ಧವಿಲ್ಲದ ಅ-ಯೋಧ್ಯೆಯೆಲ್ಲಿದೆ ? (Yuddhavillada A-Yodhyeyellide?)

ಮೋಕ್ಷದಾಯಿನಿಯಾಗಿ  ಪ್ರಸಿದ್ಧಿಪಡೆದಿರುವ ಏಳು ತೀರ್ಥ ಕ್ಷೇತ್ರಗಳಲ್ಲಿ, ಅಯೋಧ್ಯೆಯು ವಿಷ್ಣುವಿನ ಆದಿಪುರಿ.  ಸ್ಕಾಂದ ಪುರಾಣವು ಕೊಂಡಾಡುವ, ಪವಿತ್ರವಾದ ಶ್ರೀರಾಮನ ಜನ್ಮಸ್ಥಳ. ಮೋಕ್ಷವೇನೆಂದು ಅರಿಯದಿದ್ದರೂ ತೀರ್ಥಯಾತ್ರೆಯನ್ನಂತು  ಮಾಡಿ, ಶ್ರೀರಾಮನ ಪ್ರತಿಷ್ಠಿತ ಮೂರ್ತಿಯನ್ನು ದರ್ಶನಮಾಡಿ ಧನ್ಯರಾಗಬೇಕೆಂಬುದು ನಮ್ಮ ಸಂಸ್ಕೃತಿಯಲ್ಲಿರುವ  ಧೃಡವಾದ ನಂಬಿಕೆ. ಈ ನಂಬಿಕೆಗಳನ್ನು ಕುರಿತು ಆಧುನಿಕ ವಿಜ್ಞಾನದಿಂದ  ಶಿಕ್ಷಿತವಾಗಿರುವ ಬುದ್ಧಿಗಳಿಗೆ ಪ್ರಶ್ನೆಗಳು ಏಳದಿಲ್ಲ. ಮೂರ್ತಿಯನ್ನು ಚಿತ್ರಿಸಿದವರಾರು? ಅವರು ಶ್ರೀರಾಮನನ್ನು  ದರ್ಶನ ಮಾಡಿದವರೇ? ಕಲಿಯುಗದಲ್ಲಿ ತ್ರೇತಾಯುಗದ ರಾಮನನ್ನು ನೋಡಲು ಸಾಧ್ಯವೇ? ದರ್ಶನ ಮಾಡಿದವರೆಲ್ಲರಿಗೂ ಮೋಕ್ಷ ಕಟ್ಟಿಟ್ಟಬುತ್ತಿಯೇ? ಇತ್ಯಾದಿ

ತುಲಸೀದಾಸ್, ಭದ್ರಾಚಲ ರಾಮದಾಸ್, ತ್ಯಾಗರಾಜಾದಿ ಸಂತರು,  ನರೋತ್ತಮನಾಗಿ ಅವತರಿಸಿದ ರಾಮನನ್ನು, ಕಲಿಯುಗದಲ್ಲಿಯೂ ದರ್ಶನ ಮಾಡಿದವರು! ಹೇಗೆ ಸಾಧ್ಯ?  ಎಂದರೆ, ತ್ಯಾಗರಾಜರೇ 'ಕನುಗೊನುಸೌಖ್ಯಮು' ಎಂಬ  ಕೃತಿಯಲ್ಲಿ ಹೇಳುವಂತೆ – "ರಾಮನ ದರ್ಶನವಾಗಬೇಕಾದರೆ ಭಗವದನುಗ್ರಹದಿಂದ ಮಾತ್ರವೇ ಸಾಧ್ಯ". ತೊಂಬತ್ತಾರು ಕೋಟಿ ರಾಮ ನಾಮವನ್ನು ಜಪಿಸಿ, ಪ್ರತಿ ಕೋಟಿಯ ಜಪಕ್ಕೂ ಶ್ರೀರಾಮನ ದರ್ಶನವನ್ನು ಪಡೆಯುತ್ತಿದ್ದರು.  ರಾಮದರ್ಶನ ಮಾಡಲು ಅಯೋಧ್ಯೆಗೆ ಹೊರಟ ಭಕ್ತರನ್ನು ಕುರಿತು 'ನಡಚಿ ನಡಚಿ' ಎಂಬ  ಕೃತಿಯಲ್ಲಿ ಹಾಡುತ್ತಾರೆ (ಆದಿಯಲ್ಲಿ  ಕಾಲು ನಡಿಗೆಯಲ್ಲಿಯೇ ಯಾತ್ರೆ ಮಾಡಲಾಗುತ್ತಿತ್ತು) -"ಅಯೋಧ್ಯಾ  ನಗರಕ್ಕೆ ನಡೆದು ನಡೆದು, ಎಲ್ಲಿ ಹುಡುಕಿದರೂ  ರಾಮನು ಕಾಣಲಿಲ್ಲ.  ಯೋಗ ಶಾಸ್ತ್ರ  ತಳಿಸುವಂತೆ, ಕಣ್ಣುಗಳನ್ನು ಭ್ರೂ ಮಧ್ಯಕ್ಕೆ ಕೇಂದ್ರೀಕರಿಸಿ, ಕಟ್ಟೆಯಂತೆ  ಕುಳಿತು, ಜಪಮಾಲೆ ಹಿಡಿದು, ಆತ್ಮಾರಾಮನಲ್ಲಿ ಒಂದಾಗಲು ಹೊರಟ ಸಾಧಕರಿಗೂ ರಾಮ ಕಾಣಲಿಲ್ಲ".  ಪ್ರವೃತ್ತಿ-ನಿವೃತ್ತಿ ಮಾರ್ಗಗಳೆರಡರಲ್ಲೂ  ದಾರಿತಪ್ಪಿದ ಭಕ್ತರಿಗೆ ಮಾರ್ಗದರ್ಶನ– "ಹುಟ್ಟು ಸಾವಿಲ್ಲದ ಅವನ ನಿಜವಾದ ವಾಸಸ್ಥಳವನ್ನು ತಿಳಿಯಬೇಕು".

ಹುಟ್ಟು ಸಾವು ಇಲ್ಲದ ಸ್ಥಳವೆಲ್ಲಿದೆ?

ಅಥರ್ವವೇದವು ಹೇಳುವಂತೆ  - ಅಷ್ಟ ಚಕ್ರ(ಶಕ್ತಿಕೇಂದ್ರಗಳು), ನವ ದ್ವಾರಗಳಿಂದ  ಕೂಡಿರುವ ಈ ಮಾನವ ದೇಹವೆಂಬ ಪುರದಲ್ಲಿರುವ ಅ-ಯೋಧ್ಯಾ  ಸ್ಥಾನದಲ್ಲಿ ಆತ್ಮನು ವಾಸಿಸುತ್ತಾನೆ. ಅ-ಯೋಧ್ಯಾ  ಎಂದರೆ ಯುದ್ಧದಿಂದ ಗೆಲ್ಲಲಾಗದ ಸ್ಥಾನ. ಯಾವ ಯುದ್ಧ? 

 ಸೃಷ್ಟಿಯ ವಿಕಾಸದಲ್ಲಿ,  ಭಗವಂತನ ಮೂಲ ರೂಪದ ಮೂರು ಸ್ವರೂಪಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳು, ಮೊದಲ ಹೆಜ್ಜೆಗಳು. ಈ ಶಕ್ತಿಗಳು ದೇಹ ಪ್ರಕೃತಿಯಲ್ಲಿ ಕ್ರಮವಾಗಿ ರಜಸ್ಸು, ಸತ್ವ ಹಾಗೂ ತಮೋಗುಣಗಳಾಗಿ ವಿಕಾಸ ಗೊಳ್ಳುತ್ತವೆ. ನಮ್ಮ ಇಹ-ಪರ ಜೀವನಗಳಿಗೆ ಆಶ್ರಯ. ಈ ಮೂವರ ಪೋಟಿಯ ಕಾರಣ ತ್ರಿಗುಣಗಳಲ್ಲಿ ನಿರಂತರ ಯುದ್ಧವೇ! ಭಗವಂತನು ತನ್ನನ್ನು ಮರೆಸಿಕೊಂಡು, ನಮ್ಮನ್ನು ಪ್ರಕೃತಿಯೊಂದಿಗೆ ಕಟ್ಟಿಹಾಕಿರುವ ಪಾಶವೇ ಈ  ತ್ರಿಗುಣಗಳು. ತಮೋಗುಣವಿಲ್ಲದೆ ನಿದ್ರೆಬಾರದು,  ರಜೋ ಗುಣವಿಲದೇ ಚಟುವಟಿಕೆಗಳಾಗದು. ಚಟುವಟಿಕೆ-ನಿದ್ರೆ ನಿತ್ಯಜೀವನಕ್ಕೆ ಅನಿವಾರ್ಯ. ಈ ಅಂಟುಗಳಿಲ್ಲದ, ತ್ರಿಗುಣಾತೀತವಾದ, ಯುದ್ಧವಿಲ್ಲದ  ಸ್ಥಳವೇ  ಹುಟ್ಟು-ಸಾವು ಇಲ್ಲದ ಭಗವಂತನ ಪರಮಪದ ಸ್ಥಾನ. ಅಲ್ಲಿಗೆ ತಲುಪಲು ಅತ್ಯವಶ್ಯಕವಾದದು ಸತ್ವಗುಣವೊಂದೇ.

ತ್ಯಾಗರಾಜರ  ಕೃತಿಗಳ ಅಂತರಾಳವನ್ನು  ಅಳೆಯಬಲ್ಲವರಾಗಿದ್ದ   ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು – "ತ್ರಿಗುಣಗಳ ತೆರೆಯನ್ನು ತೆರೆದಾಗ ತಾನೇ ಭಗವಂತನ ದರ್ಶನವಾಗುತ್ತೆ. ಅದಕ್ಕಾಗಿಯೇ ದೇವಾಲಯಗಳಲ್ಲಿ ಭಗವಂತನ ಪ್ರತಿನಿಧಿಯಾದ ಅರ್ಚಕನು ದೇವರ ಮುಂದೆ ಹಾಕಿರುವ ಮೂರು ಬಣ್ಣದ ತೆರೆಯನ್ನು  ತೆರೆದು, ದೇವತಾಮೂರ್ತಿಯ ದರ್ಶನವನ್ನು ಮಾಡಿಸುವ ಸಂಪ್ರದಾಯ ಬಂದಿದೆ" ಎಂದು. 

ರಾಮ ದರ್ಶನದತ್ತ ..

ತ್ರಿಗುಣಾತ್ಮಕವಾದ ಪ್ರಕೃತಿಯಿಂದ ಮುಕ್ತರಾಗಿ ಒಳನಗರವಾದ ಅ-ಯೋಧ್ಯೆಯನ್ನು ಭಾರತದ  ಮಹರ್ಷಿಗಳು  ಧ್ಯಾನದಿಂದ ಮುಟ್ಟಿದರು. ಅಂತರಂಗದಲ್ಲಿ ದೇವತೆಗಳನ್ನು, ತ್ರಿಮೂರ್ತಿಗಳನ್ನು  ಅವರವರ ಕ್ಷೇತ್ರಗಳಲ್ಲಿ ದರ್ಶನ ಮಾಡಿದರು.  ಯುದ್ಧದ ಮಾತಿಲ್ಲದ, ಹೃದಯಗಹ್ವರದ ಅ-ಯೋಧ್ಯೆಯಲ್ಲಿ , ಆತ್ಮಾರಾಮನ್ನು ದರ್ಶನಮಾಡಿದರು. ಭಾರತಮಾತೆಯ ಹೃದಯ ಸ್ಥಾನದಲ್ಲಿರುವ ಹೊರನಗರಕ್ಕೆ ಅದೇ ಹೆಸರನ್ನಿಟ್ಟು, ಅಂತರ್ದರ್ಶನದ ಪ್ರತಿನಿಧಿಯಾಗಿ ಗುರುತಿಸಿದರು. ದೇವಾಲಯದ ಮೂರ್ತಿಯನ್ನೂ ವಿಧಿವತ್ತಾಗಿ ಸ್ಥಾಪಿಸಿ, ಪೂಜಾ ಕ್ರಮವನ್ನೂ ವಿಧಿಸಿದರು. ಅಂತೆಯೇ ಸಂತರು ಗಾನ ಮಾಡಿದ ಕೃತಿಗಳೂ ಅಂತರ್ದರ್ಶನದ ಹೊರಗಿನ ರೂಪಗಳೇ.

 ಪೂಜೆ, ಧ್ಯಾನ, ನಾಮಸಂಕೀರ್ತನೆ ಇತ್ಯಾದಿ ಆತ್ಮಕಲ್ಯಾಣಕ್ಕಾಗಿ ಬೇಕಾದ ಶಾಸ್ತ್ರ ಸಂಪ್ರದಾಯಗಳೆಲ್ಲವೂ ಒಟ್ಟುಗೂಡಿರುವ ಜಾಗವೇ ದೇವಾಲಯ. ದೇವತಾಮೂರ್ತಿಯ ದರ್ಶನ ಭಗವದನುಗ್ರಹವನ್ನು ಕೂಡಿಕೊಳ್ಳುವ ಸಾಂಪ್ರದಾಯಿಕ ವಿಧಿ. ಎಲ್ಲರಿಗೂ ಅಧಿಕಾರವಿರುವ. ಭಕ್ತಿಮಾರ್ಗವನ್ನಪ್ಪಿದರೆ, ಪ್ರಕೃತಿಯ ಪರಿಷ್ಕರಣದಿಂದ ಅಂತರಂಗದ ಮೋಕ್ಷಮಾರ್ಗ ತೆರೆಯುವುದೆಂಬುದೇ ಸಂತರ ಒಟ್ಟಾರೆ ಅಭಿಪ್ರಾಯ. (ರಾಮಲಲ್ಲನ) ಬಾಲರಾಮನ ದರ್ಶನಕ್ಕಾಗಿ ಪಾದಬೆಳೆಸೋಣ. ಕ್ಯಾಮರ ಚಿತ್ರವನ್ನು ಹಿಡಿಯುವಂತೆ, ದೇವತಾಮೂರ್ತಿಯ ಚಿತ್ರವನ್ನು ಮನಸ್ಸಿನಲ್ಲಿ ಶುಭಾವಲಂಬನೆಯಾಗಿ ನಿಲ್ಲಿಸಿಕೊಂಡು, ಸಾತ್ವಿಕಗುಣವನ್ನು ಅನುಗ್ರಹಿಸುವಂತೆ ಪ್ರಾರ್ಥಿಸೋಣ.

ಸೂಚನೆ: 4/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Thursday, May 9, 2024

The greatness of Prasaada

Article by: Padmini Shrinivasan
Respond to (lekhana@ayvm.in)



Nadayogi Nadamuni’s grandson Yaamuna was a small boy. Foreseeing his last days, the great yogi, blessed his disciple Manakkaal Nambi with Yogavidya (the science of uniting internally with the indwelling Lord), instructing him to initiate his grandson at the most opportune time. The lad grew up to become a great scholar. Defeating the courtiers of the Pandya kings, he won half the kingdom based on a bet between the king and the queen, which he ruled righteously. Getting used to the comforts of a royal life, the rigour and ordained duties associated with the lineage of yogis faded away. 

Although Nambi was too eager to impart yogavidya, getting to meet the king was next to impossible. Initiating a ruse, offering a special herb to the Lord every day, he instructed the royal chefs to feed it to the king. The herb was presented to the Lord with an intention, that the person who consumes it must imbibe divine sentiments. Just as the king started to develop a taste for the herb, he stopped sending it. The king enquired his chefs and learnt that the person who brought it daily, was not coming anymore.  He sent a word to him and Nambi met the king, introducing himself as the disciple of the king’s grandfather. He added that he had the responsibility of handing over a great treasure passed on to him by his grandfather. The king immediately quipped “My grandfather was a recluse of a tall order. He did not possess any such treasure. Moreover being a king I have no need for any treasure now”. Nambi continued saying that the treasure was kept guarded without his knowledge and was much more precious than his kingdom. He added that before handing over the treasure he had couple of things to speak to him. Their mutual talk went on and on for a couple of days, with Nambi constantly reminding the king of his rich yogic lineage, while the king enquired on and off about the treasure. One fine day, Nambi broke the news that he could collect the treasure, in solitude and silence. The king who had no desire for wealth, desired to receive the treasure as a blessing of his elders.  Nambi took him to the holy island, Sriranga kshetra and pointing to the Lord reclining over Adisesha (serpent) at the Ranganaatha temple, remarked “There lies the treasure!!” All of the kings prior merits (samskaras) swelled to the fore, granting him an inner Yogic vision of the Lord. The king stood speechless in awe, looking at the deity!

Effect of naivedya-prasada:

In the human body, the tridoshas (vaata-pitta-shleshma) represent the power of the trinity Gods (Brahma, Vishnu, Maheshwara). The fundamental saptadhaatus (blood, muscle, bones etc..) energise the internal dynamics. When these three doshas as well as the seven dhaatus reach a state of equilibrium, a body state known in yogic parlance as dhaatusamyata occurs. 

As per vedic tradition, food must essentially be cooked as an offering to the Lord. The rules laid for this offering recommend foods which promote divine sentiments – saatvic character. The herb which was fed to the king possessed a special property of inducing a state of dhaatusamyata, in the person who consumed it. To pepper it, while offering the herb to the Lord, Nambi who had yogic powers, prayed and appealed that the Lord should impregnate his divinity into the herb. Such herb was fed to the king. 

In every human, the mind serves as a bridge between the external sense organs and the indwelling Lord as soul. Through yogavidya, starting from the physical plane, the mind can be made to flow right up to the soul and the same divine sentiment cascaded down up to the herb offered, then the mental plane of the chefs as well as that of the king. Nambi ensured that such a process brought about dhatuprasannata (a state in which divine bliss is experienced) through dhaatusaamyata. The maharshis of yore, discovered through deep penance that, a state of dhaatuprasannata, where all sense organs  are pulled inwards, enables a  vision of the Lord internally.   A caveat – not that everyone who consumes that herb will go through a similar experience!!!

The food consumed after naivedya- offering to Lord – is called a prasaada as it is ingrained with the benevolence of the Lord.  Such a prasaada is superior as it brings about happiness of the sense organs as well as the mind. It ensures the equilibrium of the basic body tissues (dhaatus). The king was able to receive a lofty treasure, none other than Sriranganidhi, due to the consumption of such a superior prasaada. 

 Let us all consume such a prasadam every day

Method of food preparation, purity of its ingredients, intentions of the person who cooks and serves, method of serving - all put together make an impact on the person who consumes it. Food offered to God, works as per its prior intentions and aids the process of uplifting in a spiritual plane. The inherent properties of the ingredients, too have their role to play. 

These days paucity of time is forcing us to eat out more often. Let us all try to curtail this habit and prepare food with good intentions and offer it to the Lord every day. By doing so, let us all inculcate devotion to the Lord through the consumption of such holy prasadam. An aphorism of Srirangamahaaguru is worthy of recollection at this point -“cooking food items (aduge in Kannada)  which bring home  Lord’s memory at every step (adigadige in Kannada- ingredient collection to preparation and ingestion) alone is to be considered as an ideal food preparation”.


Saturday, February 10, 2024

ಪ್ರಸಾದದ ಶ್ರೇಷ್ಠತೆ (Prasadada Shresthate)

ಲೇಖಕರು : ಪದ್ಮಿನಿ ಶ್ರೀನಿವಾಸನ್
ಪ್ರತಿಕ್ರಿಯಿಸಿರಿ (lekhana@ayvm.in)  



ನಾದಯೋಗಿಗಳಾದ ನಾದಮುನಿಗಳ ಮೊಮ್ಮಗ ಯಾಮುನ ಚಿಕ್ಕ ಹುಡುಗ. ಶಿಷ್ಯನಾದ ಮಣಕ್ಕಾಲ್ನಂಬಿಗೆ ಯೋಗವಿದ್ಯೆಯನ್ನು ಅನುಗ್ರಹಿಸಿ, ಉಚಿತ ಕಾಲ ಒದಗಿದಾಗ ಯಾಮುನನಿಗೆ ಅನುಗ್ರಹಿಸುವಂತೆ ತಿಳಿಸಿ ಪರಮಪದವನ್ನು ಹೊಂದಿದರು. ಹುಡುಗ ದೊಡ್ಡಪಂಡಿತನಾದ. ಪಾಂಡ್ಯರಾಜರ ಆಸ್ಥಾನಪಂಡಿತರನ್ನು ಸೋಲಿಸಿ, ರಾಜ-ರಾಣಿಯರ ಮಧ್ಯೆ ಇದ್ದ ಶರತ್ತಿನಂತೆ ಅರ್ಧರಾಜ್ಯವನ್ನುಗೆದ್ದು, ಧರ್ಮದೊಂದಿಗೆ ರಾಜ್ಯವಾಳುತ್ತಿದ್ದ. ರಾಜಸುಖ-ಭೋಗಗಳೊಂದಿಗೆ ಜವಾಬ್ದಾರಿಗಳನ್ನೂ ಹೊತ್ತಿರುವಾಗ ಯೋಗವಂಶದ ಪರಂಪರೆಯ ಕಟ್ಟುನಿಟ್ಟು, ಪರಮಾತ್ಮನ ವಿಷಯಗಳು ಮರೆಯಾದವು!

ನಂಬಿಗಳು ಯೋಗವಿದ್ಯೆಯನ್ನು ಅನುಗ್ರಹಿಸಲು ಕಾತುರರಾಗಿದ್ದರೂ ರಾಜರನ್ನು ಭೇಟಿಮಾಡುವುದು ಅಸಂಭವವಾಗಿತ್ತು. ಉಪಾಯವೊಂದನ್ನು ಯೋಚಿಸಿ, ಶ್ರೇಷ್ಠವಾದ ಸೊಪ್ಪೊಂದನ್ನು ದೇವರಿಗೆ ನಿತ್ಯವೂ ನಿವೇದನ ಮಾಡಿ, ರಾಜರಿಗೆ ತಿನಿಸುವಂತೆ ಅಡುಗೆ ಭಟ್ಟರಿಗೆ ತಿಳಿಸಿದರು.

ರಾಜರಿಗೆ ರುಚಿ ಚೆನ್ನಾಗಿ ಹತ್ತಿದಂತೆ, ಸೊಪ್ಪನ್ನು ಕಳಿಸುವುದನ್ನು ನಿಲ್ಲಿಸಿದರು. ಸೊಪ್ಪೆಲ್ಲಿ? ಎಂದು ರಾಜರು ಕೇಳಲು, ಅದನ್ನು ತರುತ್ತಿದ್ದವರು ಬರಲಿಲ್ಲವೆಂದು ಭಟ್ಟರು ತಿಳಿಸಿದರು. ಅವರನ್ನು ಕರೆಸಿ, ಅವರಾರೆಂದು ರಾಜ ಕೇಳಲು - "ನಿಮ್ಮ ತಾತನ ಶಿಷ್ಯರು"- ಎಂದು ಪರಿಚಯಮಾಡಿಕೊಂಡು, "ನಿಮ್ಮ ತಾತ, ಒಂದು ದೊಡ್ಡ ನಿಧಿಯನ್ನು ತಲುಪಿಸುವಂತೆ ತಿಳಿಸಿದ್ದಾರೆ'  ಎಂದರು ನಂಬಿಗಳು. "ನನ್ನ ತಾತ ಉತ್ತಮ ಶ್ರೇಣಿಯ ಯೋಗಿಗಳು. ಅವರಲ್ಲಿ ಯಾವ ನಿಧಿಯೂ ಇರಲಿಲ್ಲ. ನಾನೇ ರಾಜನಾಗಿರುವಾಗ, ನನಗೇಕೆ ಆ ನಿಧಿ?" ಎಂದರು ರಾಜರು. "ನಿಮಗೆ ಗೊತ್ತಿಲ್ಲದೆ ಗುಪ್ತವಾಗಿ ಕಾಪಾಡಿದ್ದರು. ನಿಮಗೆ ತಲುಪಿಸುವಂತೆ ಅಪ್ಪಣೆ ಮಾಡಿದ್ದರು. ಆದರೆ, ಅದನ್ನು ಕೊಡುವ ಮುಂಚಿತವಾಗಿ ನಿಮ್ಮೊಂದಿಗೆ ಕೆಲವು ವಿಷಯಗಳು ಮಾತನಾಡಬೇಕು "ಎಂದರು ನಂಬಿಗಳು. ಹಲವಾರು ದಿವಸಗಳ ಪರಸ್ಪರ ಮಾತುಕಥೆಯ ಆನಂತರದಲ್ಲಿ, ಹಳೆಯ ನೆನಪುಗಳನ್ನು ಪುನರುದ್ದೀಪನ ಮಾಡಿದರು ನಂಬಿಗಳು. ರಾಜರು ಮತ್ತೆ ಮತ್ತೆ 'ನಿಧಿಯೆಲ್ಲಿ?' ಎಂದು ಕೇಳುತ್ತಿರಲು, ಒಂದು ದಿನ " ಗುಪ್ತವಾಗಿ ಕೊಡುವಂತಹದ್ದು. ರಾಜ್ಯನಿಧಿಗಿಂತಲೂ ಬಹುಪಾಲು ಶ್ರೇಷ್ಠವಾದದ್ದು. ಏಕಾಂತದಲ್ಲಿ, ಮೌನವಾಗಿ ಬಂದು ಸ್ವೀಕರಿಸುವಂತಹದ್ದು" ಎಂದರು ನಂಬಿ. ಧನದ ಆಸೆಯಿಲ್ಲದವರು ರಾಜರು. ವಂಶದ ಹಿರಿಯರ ಪ್ರಸಾದವೆಂದು ಭಾವಿಸಿ, ಸ್ವೀಕರಿಸಲು ಒಪ್ಪಿ ಹೊರಟರು. ರಾಜರನ್ನು ಶ್ರೀರಂಗಕ್ಷೇತ್ರಕ್ಕೆ ಕರೆದೊಯ್ದು "ಅಗೋ! ಆದಿಶೇಷನ ಮೇಲೆ ಮಲಗಿರುವುದೇ ನಿಧಿ" ಎಂದರು ನಂಬಿ. ಪೂರ್ವಸಂಸ್ಕಾರಗಳು ಜಾಗೃತವಾಗಿ, ವಿಸ್ಮಯಗೊಂಡು, ಭಗವಂತನ ಯೋಗದಿಂದ ಉಂಟಾದ ಸಂತೋಷದೊಂದಿಗೆ ದೇವರನ್ನು ನೋಡುತ್ತಾ ನಿಂತರು ರಾಜರು!

ನೈವೇದ್ಯ-ಪ್ರಸಾದಗಳ ಪರಿಣಾಮ

ದೇಹದಲ್ಲಿ ತ್ರಿದೋಷಗಳು(ವಾತ-ಪಿತ್ತ-ಶ್ಲೇಷ್ಮ) ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ. ದೇಹದಲ್ಲಿನ ಮೂಲಭೂತ ಶಕ್ತಿಗಳೇ ಸಪ್ತಧಾತುಗಳು. ತ್ರಿದೋಷ ಹಾಗೂ ಸಪ್ತದಾತುಗಳ ಸಾಮ್ಯತೆ(ಊರ್ಧ್ವಗತಿಯನ್ನು ಪೋಷಿಸುವ ಸ್ಥಿತಿ)ಯಿಂದಲೇ ಧಾತುಪ್ರಸನ್ನತೆಯು ಏರ್ಪಡುತ್ತದೆ. ವೈದಿಕಸಂಪ್ರದಾಯವು, ಭೋಜನವು ದೇವರ ನೈವೇದ್ಯಕ್ಕಾಗಿ ಎಂಬ ಮನಸ್ಸಿನಿಂದಲೇ ಪಾಕವನ್ನು ಮಾಡಬೇಕೆನ್ನುತ್ತದೆ. ಪಾಕಶಾಸ್ತ್ರವು ಸತ್ವಪ್ರಧಾನವಾದ ಆಹಾರವನ್ನು ನಿವೇದನೆಗೆ ವಿಧಿಸುತ್ತದೆ. ಆ ಸೊಪ್ಪು ಧಾತುಸಾಮ್ಯತೆಯನ್ನು ತಂದುಕೊಡಬಲ್ಲದ್ದಾಗಿತ್ತು. ನಂಬಿಯವರು "ಇದನ್ನು ತಿಂದವರಿಗೆ ಭಗವತ್ಭಾವ ಉಂಟಾಗಲಿ" ಎಂಬ ಸಂಕಲ್ಪದೊಂದಿಗೆ ಯೋಗಬಲದಿಂದ ಭಗವದನುಗ್ರಹವೆಂಬ ದಿವ್ಯಶಕ್ತಿಯನ್ನು ಹರಿಸಿದ್ದರು. ಆ ಸೊಪ್ಪು ದೇವರಿಗೆ ನೈವೇದ್ಯವಾಗಿ ರಾಜನಿಗೆ ಬಡಿಸಲಾಗಿತ್ತು. ಆತ್ಮನಿಗೂ, ಇಂದ್ರಿಯಗಳಿಗೂ ನಡುವಿನ ಸೇತುವೆಯೇ ಮನಸ್ಸು. ಪ್ರಕೃತಿತತ್ವದಿಂದ ಮನಸ್ಸನ್ನು ಆತ್ಮನವರೆಗೆ ಹರಿಸಿ, ಆ ಮನೋಧರ್ಮವನ್ನು ಸೊಪ್ಪು ಮತ್ತು ಅಡುಗೆಭಟ್ಟರ ಮೂಲಕ ರಾಜರವರೆಗೂ ಹರಿಸಿ, ಆತನಲ್ಲಿ ಧಾತುಪ್ರಸನ್ನತೆಯನ್ನುಂಟು ಮಾಡಿದರು. ಧಾತುಪ್ರಸನ್ನತೆಯಿಂದಾಗುವ ಉತ್ತಮ ಮನೋಧರ್ಮದಿಂದ ಮನಸ್ಸು ಹಿಂದಕ್ಕೆ ಹರಿದು, ಭಗವಂತನ ದರ್ಶನವಾಗುತ್ತೆ, ಅನ್ನುವುದು ಮಹರ್ಷಿಗಳು ಯೋಗದಿಂದ ಕಂಡ ಸತ್ಯ. ಆ ಸೊಪ್ಪನ್ನು ತಿಂದವರೆಲ್ಲರಿಗೂ ಇಷ್ಟು ಆಳವಾದ ಪರಿಣಾಮವಾಗುವುದೆಂದು ಹೇಳಲಾಗದು!! ನೈವೇದ್ಯದ ನಂತರ ಸೇವಿಸುವ ಆಹಾರ, ದೇವರ ಕೃಪೆಯೊಂದಿಗೆ ಕೂಡಿದಾಗ ಪ್ರಸಾದವಾಗುತ್ತದೆ. ಅಂತಹ ಪ್ರಸಾದವು ಸಂತೋಷವನ್ನು, ಮನಃ ಪ್ರಸನ್ನತೆಯನ್ನು ತಂದುಕೊಡುವ ಶ್ರೇಷ್ಠವಾದ ಪದಾರ್ಥ. ಧಾತುಗಳಲ್ಲಿ ಸಾಮ್ಯತೆಯನ್ನು ತರುವುದು. ಈ ರೀತಿಯಾಗಿ , ಸಂಸ್ಕಾರಗಳೊಂದಿಗೆ ಪ್ರಸಾದವನ್ನು ಸೇವಿಸಿದರಿಂದಲೇ ರಾಜರು 'ಶ್ರೀರಂಗನಿಧಿ'ಯನ್ನು ಪಡೆಯುವಂತಾಯಿತು. ನಿತ್ಯವೂ ಪ್ರಸಾದ ಸೇವಿಸುವವರಾಗೋಣ ಪಾಕತಯಾರಿಕೆಯ ವಿಧಾನ, ಪರಿಕರಗಳ ಶುದ್ಧಿ, ತಯಾರಿಸುವವರ ಮನೋಧರ್ಮ, ಬಡಿಸುವ ವಿಧಾನ, ಬಡಿಸುವವರ ಮನೋಧರ್ಮ - ಎಲ್ಲ ಒಟ್ಟುಗೂಡಿ ಆಹಾರವನ್ನು ಸೇವಿಸಿದವರ ಮೇಲೆ ಪರಿಣಾಮವನ್ನು ಮಾಡುತ್ತದೆ. ಪ್ರಸಾದರೂಪವಾದ ಆಹಾರವು ಪೂರ್ವಸಂಕಲ್ಪಕ್ಕನುಗುಣವಾಗಿಯೇ ಪರಿಣಾಮವನ್ನು ಬೀರುವವು. ಪದಾರ್ಥಗಳ ಗುಣಧರ್ಮಗಳೂ ಕೂಡಿಕೊಂಡು, ಆಧ್ಯಾತ್ಮಿಕ ಬೆಳವಣಿಗೆಗೆ ಪೋಷಕವಾಗಿರುತ್ತವೆ.

ಇಂದು ಸಮಯದ ಕೊರತೆಯಿಂದ ಬಹುಮಟ್ಟಿಗೆ ಹೊರಗೆ ತಿನ್ನುವ ಅಭ್ಯಾಸವೇ ಹೆಚ್ಚುತ್ತಿದೆ. ಇದರಿಂದ ಬಿಡಿಸಿಕೊಂಡು ನಾವೇ ಉತ್ತಮ ಸಂಕಲ್ಪದೊಂದಿಗೆ ಪಾಕಮಾಡಿ ನಿತ್ಯವೂ ದೇವರಿಗೆ ನೈವೇದ್ಯ ಮಾಡೋಣ. ಪವಿತ್ರವಾದ ಪ್ರಸಾದವನ್ನು ಸೇವಿಸಿ ಭಗವದ್ಭಕ್ತಿಯನ್ನು ಮೂಡಿಸಿಕೊಳ್ಳಲು ಸಮರ್ಥರಾಗೋಣ. "ಅಡಿಗಡಿಗೆ ಭಗವತ್ ಸ್ಮರಣೆಯನ್ನು ತಂದುಕೊಡುವ ಅಡುಗೆಯೇ ಅಡುಗೆ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ.

ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Wednesday, December 20, 2023

Chandrayaana - 3,4 and beyond…

Padmini Shrinivasan
Respond to (lekhana@ayvm.in)


Humanity's quest to explore outer space started with a modest beginning in our country Bhaarata six decades ago. Space technology was considered most essential for an all round economic development of the nation. This vision made giant leaps recently, as the headline news read  "India goes where no nation's gone before.." (Aug 23, 2023). This day would be remembered in future by all Bharateeyas as a red-letter day – the day on which our country became the first to land a spacecraft Chandrayaana-3 on the South pole of Moon, joining as the fourth member of the elite lunar club. Extremely meticulous planning, perseverance learnt through failures and dedicated efforts to top it, by the project team, culminated in the successful landing on Moon. The entire nation catapulted into jubilation, as they watched the flawless landing. The spacecraft, a sort of mini lab, was designed to study the space surrounding the moon, its surface as well as its interior through a battery of instruments (payloads). Understanding the Moon is believed to serve as a springboard for future interplanetary missions, to explore our cosmos beyond the confines of our cozy planet earth. A more challenging and ambitious Chandrayaan-4 mission, which is in the offing, is expected to bring back lunar samples.

Moon in scriptures

In ancient astronomy, 'Chandra' meaning bright and shining, identifies our immediate celestial neighbor, the moon. Several millennia old sacred scriptures - Puraanas - associate moon with night – who as Soma nurtures plants. Somadeva (Shiva) is believed to energize and control Soma. Several stories speak about the waxing and waning of the moon; the crescent moon adorning the matted hair of lord Shiva etc. Hence, an object of worship. Somarasa, the internally dripping nectar of Chandra, is considered an elixir by yogis. Moon has lent itself as a natural simile to describe the indescribable in Sanskrit literature too. It is also associated with the mind - manas – of humans.

If an object is so sacred, is man allowed to step over and excavate it? Is the present space age thinking which thrives on knowledge and technology different from what the scriptures say? Should we debunk the old in favour of the new? Or is it possible to gel all of these diverse viewpoints harmoniously? Above all, where do we find a qualified person to answer these queries with a holistic perspective?

The perspective of Bhaarateeya maharshis

A yogi par excellence and a great patriot that he was, Sriranga Mahaguru lived at a time when our own space program was just taking shape, while the other members of the elite space club were racing to the moon. Excerpts from his teachings are summarized below. 

"This land Bhaarata derives its name from bhaa – meaning effulgence and rata – meaning to sport i.e. A land conducive to sport in the Supreme light – paramaatma jyoti. The sages - maharshis of yore were accomplished personae in mundane as well as spiritual domains. Having experienced the paramaatma jyoti, being engrossed, they studied and researched about the origin, evolution and dissolution of the human life, while experiencing Supreme joy - paramaananda  in that exalted state. 

Through a flight in a rocket, we get to know the mysteries of the Moon. The common man would be simply amazed at the  rocket reaching the moon, without having any knowledge about the rocket or its payload, as there is nothing for his intellect. But, the scientists who designed it have a totally different view, looking at everything like its structure, mechanism, its functions etc. in great detail. Devoid of this depth, the view is merely superficial. 

In much the same way, the human body is indeed a machine made up of smaller compact machineries. The maharshis, who were conversant with the science of this ready-made 'body-machine' steered it in diverse ways. This everlasting laboratory of maharshis spans the entire region from bhuvi to divi (earth to heaven). On entering it, the Nature's womb has to be penetrated with a spade called manas, to start the exploration. When such a research is undertaken, encompassing the physical, divine and spiritual spheres - bhuh, bhuvah, suvah, age-old principles regarding the Bhaarateeya culture, hidden in the core of aatma  - soul - can be brought out."

The bidirectional manas

Manas is one among the four internal tools – antahkaranas – which powers all activities of the body, be it mundane, intellectual or spiritual. While manas acts with its foraging nature, buddhi - intellect, also an antahkarana helps in decisive thinking. The nature of the mind is to flow. Manas has the power to stretch itself and fly to any distance. 

When manas is made to flow outwards, along with buddhi, it directs the sense organs to execute jobs in the physical world - pravritti maarga. This mode promotes all activities including intellectual thinking and research in the physical plane. 

Just as streaming water surges backwards, when obstructed by a dam, the outflowing mind drifts inwards - nivritti maarga, when blocked. Maharshis relishing the divinity, made their mind to flow backwards through bhuh, bhuvah, suvah to eternity and realized that the pindaanda (human body) is nothing but a miniature brahmaanda (universe). They visualized the internal Soorya -Sun and Chandra - Moon as true benedictory forms of jnaana - the Supreme Lord, with the external cosmic bodies serving as true representatives of their internally visualized counterparts.

Puraanas narrate these aspects as stories about the invisible power of the personified deities – devatas, which energize the dynamics of the human body as well as the Lord's creation.

Aananda vs Paramaananda

The maharshis regressing their mind through deep penance, also brought out a comprehensive design of evolution from paramatman towards the physical universe known as Bhaarateeya samskruti, which encompasses scriptures, ordained duties, lifestyle, attire, food habits, worship procedures, visit to temples etc, all impregnated with droplets of paramaananda, for the  common man to enjoy happiness – aananda.

The excitement - euphoria experienced  on the success of any human endeavor is termed 'manusheeya aananda'. Aananda mimaamsa, a sacred text quantifies the state of brahmaananda as the maximum possible joy a human can experience, which is several trillion trillion times the manusheeya aananda!! The former happiness experienced through our sensory organs, is but a spark, backed by the latter. 

Looking ahead

The value system embedded in our culture by the maharshis, has lit the torch of jnaana as vijnaana (extension of jnaana) in innumerable ways to nurture our body, mind as well as the soul. Blessed are we to be born through the lineage of these rshis, as Bhaarateeyas. As our country gallops ahead with the already launched  Aditya-L1 and future launch of Gaganyaan, Shukrayaan and Chandrayaan-4, let us augment our thoughts with a true spirit of exploration, without belittling the contribution of these great sages. Saint Tyaagaraja salutes these realized souls, who engineered their minds, in his famous song "endaro mahaanubhaavulu andariki vandanamulu". Salutations to Bhaarata Maata! who nurtured the intellectual rocket scientists as well as jnaanis, who rocketed themselves into the metaphysical space.


Sunday, September 10, 2023

ಆನಂದಾಮೃತವನ್ನು ಕರ್ಷಿಸುವ ಅಮೃತವರ್ಷಿಣಿ (Anandamrtavannu Karsisuva Amrstavarsini)

  ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)



ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರಾದ ಮುತ್ತುಸ್ವಾಮಿ ದೀಕ್ಷಿತರ (1776-1835 ಕ್ರಿ.ಶ) ಜೀವನದಲ್ಲಿ ಒಂದು ಕುತೂಹಲಕಾರಿ ಪ್ರಸಂಗ ನಡೆಯಿತು. ಕ್ಷಾಮ ಪೀಡಿತ ಮಾರ್ಗದ ಮೂಲಕವಾಗಿ ಎತ್ತಿನ ಗಾಡಿಯಲ್ಲಿ ಎಟ್ಟಿಯಾಪುರಕ್ಕೆ ಹೋಗುತ್ತಿದ್ದರು. ಅವರ ಧರ್ಮಪತ್ನಿ ತೀವ್ರವಾದ ಬಾಯಾರಿಕೆಯನ್ನು ವ್ಯಕ್ತಪಡಿಸಿದರು. ನೀರನ್ನೆಲ್ಲೂ ಕಾಣದೆ, ದೇವಿ ಉಪಾಸಕರಾದ ದೀಕ್ಷಿತರು, ಒಡನೆಯೇ ಅಮೃತೇಶ್ವರಿ ದೇವಿಯನ್ನು ಸ್ತುತಿಸುತ್ತಾ ಅಮೃತವರ್ಷಿಣಿ ರಾಗದಲ್ಲಿ, "ಆನಂದಾಮೃತ ಕರ್ಷಿಣಿ ಅಮೃತವರ್ಷಿಣಿ…" ಎಂದು ಕೃತಿಯನ್ನು ರಚಿಸಿ, ಅವರ ಶಿಷ್ಯನಾದ ತೇವೂರ್ ಸುಬ್ರಹ್ಮಣ್ಯಅಯ್ಯರ್ ಅನ್ನುವವನಿಗೆ ಕಲಿಸಿ ಹಾಡಿಸುತ್ತಾರೆ. ಹಾಡು ಮುಗಿಯುತ್ತಲೇ, ಮೋಡಕವಿದು, ಜೋರಾಗಿ ಮಳೆ ಸುರಿಯುತ್ತದೆ. ಮೊಣಕಾಲಿನಷ್ಟು ಆಳವಾದ ನೀರಿನಲ್ಲಿ ಪ್ರಯಾಣ ಮುಂದುವರಿಸಿ ಎಟ್ಟಿಯಾಪುರ ತಲುಪುತ್ತಾರೆ. 


ಇದು ಪವಾಡವೇ? ನಿತ್ಯ ಅನುಷ್ಠಾನ, ಮಂತ್ರ ಜಪ, ಹೋಮಾದಿಗಳನ್ನು ಆಚರಿಸುತ್ತಿದ್ದ ದೀಕ್ಷಿತರಂತಹ ಕೆಲವರಿಂದ ಮಾತ್ರ ಸಾಧ್ಯವೇ? ಶಿಷ್ಯ ಪರಂಪರೆಯಲ್ಲಿ ನಮ್ಮವರೆಗೆ ತಲುಪಿರುವ ಇದೇ ಕೃತಿಯನ್ನು ನಾವಿಂದು ಹಾಡಿದಾಗಲೆಲ್ಲಾ ಮಳೆ ಸುರಿಯುತ್ತಿದೆಯೇ?  ಕೇವಲ ಮಳೆ  ಬಾರದಿದ್ದಾಗ ಹಾಡುವ ರಾಗವೆಂದು ಸಂಪ್ರದಾಯವನ್ನು ಮಾತ್ರ ಉಳಿಸಿಕೊಂಡಿದ್ದೇವೆಯೆ? ಇಷ್ಟೆಲ್ಲಾ ಏಕೆ ಕಷ್ಟಪಡಬೇಕು? ಇಂದು ವಿಮಾನಗಳಿಂದ ರಾಸಾಯನಿಕ ವಸ್ತುಗಳನ್ನು ಮೋಡಗಳ ಮೇಲೆ ಬಿತ್ತರಿಸಿ, ಬೇಕಾದ ಸ್ಥಳಗಳಲ್ಲಿ ಮಳೆಯನ್ನು ಬರಿಸಲು ಸಾಧ್ಯವಿದೆಯಲ್ಲ! ಎಂದೂ ಆಧುನಿಕ ವಿಜ್ಞಾನದಿಂದ ಶಿಕ್ಷಿತರಾದ ನಮ್ಮಗಳ ಬುದ್ಧಿಗೆ ಅನ್ನಿಸಬಹುದು. 


ಸಂಗೀತ  ಸಾಹಿತ್ಯಗಳ ಅನ್ಯೋನ್ಯ ಸಂಬಂಧ


 ಜ್ಞಾನ–ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ಸಂಗೀತ-ಸಾಹಿತ್ಯಗಳ ಅನ್ಯೋನ್ಯ ಸಂಬಂಧದ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದರು. ಸಂಗೀತ–ಸಾಹಿತ್ಯಗಳನ್ನು ಭಗವಂತನ ಇಚ್ಛೆಯಂತೆ, ವಿದ್ಯೆಗಳಾಗಿ ಲೋಕಕ್ಕೆ ಅಮೃತ ಧಾರೆಯಾಗಿ ಹರಿಸುತ್ತಿರುವಳು ದೇವಿ. 


"ಕರೆಂಟ್ ಹರಿಸಲು ಕಾಪರ್ ವೈರ್ ಹೇಗೆ ಅವಶ್ಯವೋ ಹಾಗೇ, 'ವಾಕ್ಕು', ವಿದ್ಯೆಯನ್ನು ಹೊರತರಲು ಮಾಧ್ಯಮವಾಗಿದ್ದು, ನಾದ ಮೂಲದಿಂದ ಪರಾ, ಪಶ್ಯಂತೀ, ಮಧ್ಯಮಾ ಹಾಗೂ ವೈಖರೀಗಳೆಂಬ ನಾಲ್ಕು ದಶೆಗಳಲ್ಲಿ ವಿಕಾಸವಾಗುತ್ತೆ. ಶಬ್ದ ರೂಪದಲ್ಲಿ ಗೋಚರವಾಗುವುದು ವೈಖರೀ. ಉಳಿದ ಮೂರು ನಾದರೂಪಗಳು."


 ಪ್ರಣವ ಮೂಲದಿಂದ ಹೊರಟು, ಸಪ್ತಸ್ವರಗಳಾಗಿ ವಿಸ್ತಾರ ಹೊಂದಿ, ಒಂದು ಅಪೇಕ್ಷೆಗೆ ಅನುಗುಣವಾಗಿ ರಾಗಗಳು ಹುಟ್ಟುತ್ತವೆ. ಸಾಹಿತ್ಯದೊಡನೆ ಅದರ ರಸವನ್ನೂ ಹೊರಹೊಮ್ಮಿಸುವಂತಿರಬೇಕು ರಾಗಗಳು. ಸಂಗೀತ ಕಲೆಯನ್ನು ದೈವದ ಗುಣಗಾನಕ್ಕಾಗಿ ಬಳಸಿ,  ಭಗವಂತನನ್ನು ಒಲಿಸಿಕೊಂಡಲ್ಲಿ, ಜೀವನಕ್ಕೆ ಒಂದು ಸ್ನಾನ, ಅದರಿಂದ ನಿತ್ಯವೂ ಅಮೃತಪಾನವೂ ದೊರಕುತ್ತೆ. 


ದೀಕ್ಷಿತರ ಪ್ರಾರ್ಥನೆ


ಸುಬ್ರಹ್ಮಣ್ಯನಿಂದ ಅನುಗೃಹೀತರಾಗಿ, ದೀಕ್ಷಿತರು ದೈವಭಾಷೆಯಾದ ಸಂಸ್ಕೃತ ಹಾಗೂ ಸಂಗೀತಗಳಲ್ಲಿ ಪಾಂಡಿತ್ಯ ಹೊಂದಿದ್ದರಲ್ಲದೆ, ಮಂತ್ರ-ತಂತ್ರ-ಶಾಸ್ತ್ರ-ಜೋತಿಷ್ಯಗಳನ್ನೂ ಬಲ್ಲವರು. ಶ್ರೀವಿದ್ಯಾ ಉಪಾಸಕರು. ಅಷ್ಟಾಂಗ ಯೋಗವನ್ನು ಬಲ್ಲವರು; ನಿತ್ಯವೂ ಸಂಗೀತದಿಂದ ದೇವಿಯನ್ನು ಪೂಜಿಸುತ್ತಿದ್ದರು. ಯೋಗಬಲದಿಂದ ತೋರಬಹುದಾದ ಪವಾಡಗಳಿಂದ ಜನರನ್ನು ಮೆಚ್ಚಿಸುವ ಧ್ಯೇಯ ಅವರದ್ದಲ್ಲ. ಜನರು ಕಷ್ಟಗಳನ್ನು ಅವರಲ್ಲಿ ತೋಡಿಕೊಂಡಾಗ,  ಲೋಕ ಹಿತ ದೃಷ್ಟಿಯಿಂದಲೇ ದೇವಿಯನ್ನು ಪ್ರಾರ್ಥಿಸುತ್ತಿದ್ದರು. "ಆನಂದ(ಧ್ಯಾನಮಗ್ನ  ಶಿವನ ಸ್ಥಿತಿ)ವೆಂಬ ಅಮೃತವನ್ನು ಕರ್ಷಿಸುವವಳೇ, ಅಮೃತವನ್ನು ವರ್ಷಿಸುವವಳೇ, ಸುವೃಷ್ಟಿಯನ್ನು ಸುರಿಸುವವಳೇ, ನಿನ್ನನ್ನು ಸದಾ ಚಿಂತಿಸುತ್ತೇನೆ (ಧ್ಯಾನ ಮಾಡುತ್ತೇನೆ).  ತಾಯೇ ಅಮೃತೇಶ್ವರಿ, ನೀರನ್ನು ವರ್ಷಿಸು"- ಎಂದೇ ಈ ಸಂದರ್ಭದಲ್ಲಿಯೂ ಪ್ರಾರ್ಥಿಸಿದರು.  


ಇಂದೂ ಮಳೆ ಬರಿಸುವುದು ಸಾಧ್ಯವೇ?

ಇದೇ ಕೃತಿಯ ಗಾಯನ, ನಮ್ಮ ಇಂದಿನ ವೈಖರೀ ರೂಪಕ್ಕೆ ಸೀಮಿತವಾಗಿರುವ ಕಲಿಕೆಯಿಂದ, ತಕ್ಷಣದಲ್ಲಿ ಮಳೆ ಸುರಿಸುವುದು ಅಸಂಭವ. ಅದರ ಹಿಂದಿನ ನಾದರೂಪಗಳನ್ನು ಅರಿತು ಕೂಡಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯ. 

ಮಹರ್ಷಿ ಸಂಸ್ಕೃತಿಯ ಪರಿಪೂರ್ಣ ನೋಟ- ಅರ್ಥಾತ್ ಪ್ರಕೃತಿಯ ಸಹಜ ನಡೆ, ದೇವತಾ ಪ್ರಕೋಪ ನಿವಾರಣೆ, ದೈವಾನುಗ್ರಹದ ಸನ್ನಿವೇಶಗಳು ಇಂದು ಬಹುಮಟ್ಟಿಗೆ ಲುಪ್ತವಾಗಿವೆ. 


ಇಂದಿಗೂ ಗುರ್ವನುಗ್ರಹವನ್ನು ಹಿಂದಿಟ್ಟುಕೊಂಡು, ಶಿಸ್ತಿನಿಂದ, ಶಾಸ್ತ್ರಬದ್ಧವಾಗಿ, ಗುರುಮುಖೇನ ಕಲಿತಲ್ಲಿ, ಈ ಉತ್ತಮ ರಚನೆಗಳು ಕಾಲಕ್ರಮೇಣ ಅವುಗಳ ಮನೋಭೂಮಿಕೆಗೆ ನಮ್ಮನ್ನು ಸೆಳೆಯುತ್ತಾ, ಸರಿದಾರಿಗೆ ಖಂಡಿತವಾಗಿಯೂ ಕೊಂಡೊಯ್ಯುತ್ತವೆ. ಇಂತಹ ಉತ್ತಮ ವಾಗ್ಗೇಯಕಾರರು,  ರಚಿಸಿದ ಕೃತಿಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಸನ್ಮತಿ, ಸದ್ಬುದ್ಧಿಗಳನ್ನು ದೇವಿಯು ಕರುಣಿಸಲೆಂದು ಪ್ರಾರ್ಥಿಸೋಣ.


ಸೂಚನೆ : 9/09/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Saturday, August 12, 2023

ಸುಸಂಸ್ಕಾರಗಳು ನಮ್ಮನ್ನು ಉದ್ಧರಿಸುವುವು (Susanskaragalu Nammannu Uddharisuvuvu)

 ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)


https://www.ayvm.in/publications )


ತಮಿಳು ಪ್ರಾಂತದಲ್ಲಿ ಶಿವಭಕ್ತ ಕುಟುಂಬವೊಂದರಲ್ಲಿ ಮಗುವಿನ ಜನನವಾಯಿತು. ಮಗುವಿನ ತಂದೆ ಜನಸಾಮಾನ್ಯರೆಲ್ಲರಿಗೂ ಶಿವಭಕ್ತಿಯನ್ನು ಸಾರುತ್ತಾ, ಶಿವಭಕ್ತಿಯಲ್ಲೇ ಮುಳುಗಿದ್ದ. ಮಗನನ್ನೂ ಶಿವಾರಾಧನೆ, ಶಿವಸ್ಮರಣೆಗಳೊಂದಿಗೇ ಬೆಳೆಸಿದ. ವಿಧೇಯನಾಗಿದ್ದ ಮಗ. ಆದರೆ ಎಲ್ಲೋ ಮಧ್ಯದಲ್ಲಿ ಲೌಕಿಕ ವ್ಯವಹಾರಗಳಲ್ಲಿ ವ್ಯಸ್ತನಾಗಿ, ಶಿವ ಸ್ಮರಣೆಯನ್ನು ಮರೆತ.


 ವಯಸ್ಸಿಗೆ ಬಂದಾಗ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಲಾಯಿತು. ವಿವಾಹವು  ಧರ್ಮಪ್ರಜೆಯನ್ನು ಪಡೆಯಲು, ಧರ್ಮಪತ್ನಿಯನ್ನು ಸ್ವೀಕರಿಸುವ  ಸಂಸ್ಕಾರ, ಎಂಬುದನ್ನು ಮರೆತು, ಕೇವಲ ಇಂದ್ರಿಯಗಳ ತೃಪ್ತಿಗಾಗಿ, ಆಡಂಬರಗಳೊಂದಿಗೆ ಏರ್ಪಟ್ಟಿತ್ತು. ಆಹ್ವಾನಿತ ಅತಿಥಿಗಳೆಲ್ಲರೂ ಆಗಮಿಸಿದ್ದರು. ವರನು ವಧುವಿಗೆ ಮಾಂಗಲ್ಯವನ್ನು ಕಟ್ಟಬೇಕೆನ್ನುವಾಗ, ವೃದ್ಧ ಬ್ರಾಹ್ಮಣನೊಬ್ಬ "ಇಲ್ಲ, ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿ" ಎಂದು ಕೂಗುತ್ತಾ ಬಂದನು. ಯಾವುದೋ ಆಶೌಚ ಬಂದಿರಬಹುದು, ಎಂದು ಆತಂಕಗೊಂಡ ಜನ ಪಿಸುಗುಟ್ಟಿದರು. "ಇಲ್ಲ ಯಾವ ಆಶೌಚವೂ ಇಲ್ಲ. ವಿಷಯವೇನೆಂದರೆ, ಈ ವರ ನನ್ನ ದಾಸ. ನನ್ನ ಅನುಮತಿಯಿಲ್ಲದೆ ಮದುವೆಯಾಗುವಂತಿಲ್ಲ" ಎಂದ ಬ್ರಾಹ್ಮಣ. "ಎಲೋ! ನಿನಗೆ ತಲೆ ಕೆಟ್ಟಿದೆ. ಅವನ ಕೆಳಗೆ ಹಲವಾರು  ಸೇವಕರು ಕೆಲಸ ಮಾಡುವರು. ಅವನು ದಾಸನಲ್ಲ" ಎಂದು ಅಲ್ಲಿದ್ದವರೆಲ್ಲಾ ತರ್ಕ ಮಾಡಿದರು. "ನಾನು ವ್ಯರ್ಥ ಮಾತನಾಡುವವನಲ್ಲ. ಇಗೋ ನೋಡಿ ಪತ್ರ" ಎಂದು ವರನ ಕೈಬರಹದಿಂದಲೇ ಲಿಖಿತವಾದ ಪತ್ರವನ್ನು ತೋರಿಸಿದ ಬ್ರಾಹ್ಮಣ. ಅದರಲ್ಲಿ "ನಾನು ಬಹಳ ಕಾಲದಿಂದ ನಿನ್ನ ದಾಸ" ಎಂದು ಬರೆದಿತ್ತು..


 ಸತ್ಯ ಧರ್ಮಗಳನ್ನು ಆದರಿಸುತ್ತಿದ್ದ ಅಂದಿನ ಸಮಾಜವು, ಮದುವೆಯ ಸಡಗರವನ್ನು ಬಿಟ್ಟು ಸತ್ಯಾನ್ವೇಷಣೆಗೆ ಉದ್ಯುಕ್ತರಾದರು. ವರನಿಗೆ ಆಶ್ಚರ್ಯ! ಪತ್ರವನ್ನಾವಾ ಬರೆದನೆಂದು ನೆನಪಾಗದಿದ್ದರೂ, ಅವನ ಹಸ್ತಾಕ್ಷರದಲ್ಲಿ ಕಪಟವಿಲ್ಲವೆಂದು ನಂಬಿದನು. ಕ್ಷಣಮಾತ್ರದಲ್ಲಿ ಕೋಪಗೊಂಡು ಪತ್ರವನ್ನು ಹರಿದು ಬಿಸಾಡಿದ. ಬ್ರಾಹ್ಮಣನು ನಕ್ಕು "ನೀನು ಹರಿದರೇನಂತೆ, ಅದರ ಅಸಲು ನನ್ನ ಹಳ್ಳಿಯಲ್ಲಿದೆ" ಎಂದ. "ನನಗೆ ತೋರು" ಎಂದ ವರ. "ಸತ್ಯವನ್ನು ಬಯಸುವ ಹಿರಿಯರೆಲ್ಲರೂ ನನ್ನೊಂದಿಗೆ ಬನ್ನಿ" ಎಂದು ಹೇಳಿ, ಶಿವದೇವಾಲಯಕ್ಕೆ ಎಲ್ಲರನ್ನೂ ಕರೆದೊಯ್ದ ವೃದ್ಧ. 


"ಇವನು ದಾಸ. ಇಂದಿನಿಂದ ಮಾತ್ರವಲ್ಲ, ಇವನ ತಂದೆ, ತಾತ, ಮುತ್ತಾತ, ಏಳು ಪೀಳಿಗೆಗಳಿಂದ ಎಲ್ಲರೂ ನನ್ನ ದಾಸರು" ಎಂದು ಪತ್ರದಲ್ಲಿ ಬರೆದಿತ್ತು. ವರನಿಗೆ ಮರುಮಾತೇ ಹೊರಡಲಿಲ್ಲ. ಬ್ರಾಹ್ಮಣ ಅದೃಶ್ಯನಾದ!! ಅವನ ಪೂರ್ವ ಸಂಸ್ಕಾರಗಳು ಅವನ ಹಿಂದಿನ ಧಾರ್ಮಿಕ ಜೀವನವನ್ನು ನೆನಪಿಗೆ ತರಿಸಿದವು. ಭಗವಂತನಲ್ಲಿ " ನಾನು ನಿನ್ನ ದಾಸಾನುದಾಸ, ನನ್ನ ದಾಸ್ಯವನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸು ಎಂದು ಪ್ರಾರ್ಥನೆ ಮಾಡಿದ್ದೆಲ್ಲವೂ ಸ್ಮರಣೆಯಾಯಿತು. "ದೇವರೇ! ಇಂದ್ರಿಯಗಳ ದುರ್ವ್ಯವಹಾರವನ್ನು ತಡೆಗಟ್ಟಿ, ದಾಸನಾಗಿಸಿದೆಯಪ್ಪಾ" ಎಂದು ಅಡ್ಡಬಿದ್ದ. "ನಿನಗೆ ನಾನು ಶರಣಾಗಿದ್ದೇನೆ,ನನ್ನನ್ನು ನಿನ್ನ ಚರಣಕಮಲಗಳಲ್ಲಿ ಸೇರಿಸಿಕೊ ", ಎಂಬುದು ಅವನ ಚಿಕ್ಕಂದಿನ ಪ್ರಾರ್ಥನೆಯಾಗಿತ್ತು. ಅವನು ಮರೆತರೂ ದೇವರು ಅದನ್ನು ಮರೆತಿರಲಿಲ್ಲ. ಸೂಕ್ತ ಸಮಯದಲ್ಲಿ ಜ್ಞಾಪಿಸಿದ. 


ಪೂರ್ವಸುಕೃತಗಳ ಪಾತ್ರ:

ಅವನ ಪೂರ್ವಸಂಸ್ಕಾರಗಳು ಅವನನ್ನು ಹೀಗೆ ಶರಣಾಗುವಂತೆ ಮಾಡಿತು, ಎಂದು ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಈ ಕಥೆಯನ್ನು ಹೇಳುತ್ತಿದ್ದರು. ಪೂರ್ವಸಂಸ್ಕಾರವೆಂದರೆ, ವಂಶವಾಹಿಯಾಗಿ, ಹಾಗೂ ನಮ್ಮ ಆಚರಣೆಗಳಿಂದ ಪಡೆದುಕೊಂಡಿರುವ  ದೇಹಾತ್ಮಶುದ್ಧಿ. ಹೇಗೆ ಒಂದು ರಸ್ತೆಯು ಚೆನ್ನಾಗಿದ್ದರೂ, ಬಹುಕಾಲ ಬಳಸದಿದ್ದರೆ, ಮುಳ್ಳುಗಿಡಗಳು ಬೆಳೆದು, ನಡೆಯಲು ದುಸ್ತರವಾಗುತ್ತದೆಯೋ,, ಹಾಗೇ ಜನ್ಮದಿಂದ ಸಂಸ್ಕಾರಿಯಾಗಿದ್ದರೂ,ಈ ವರನು ಹಿರಿಯರು ಹಾಕಿಕೊಟ್ಟ ಧರ್ಮದ ದಾರಿಯನ್ನು ಮರೆತಿದ್ದರಿಂದ, ಆ ಮಾರ್ಗ ಮುಸುಕಾಗಿತ್ತು. ಮೋಡಗಳು ಮರೆಯಾಗಿ ಸೂರ್ಯ ದರ್ಶನವಾದಂತೆ ತೀವ್ರವಾದ ಅವನ ಪೂರ್ವ ಸಂಸ್ಕಾರಗಳು ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದವು.


ಪವಿತ್ರ ಸಂಸ್ಕಾರ-ವಿವಾಹ

ವಿವಾಹವು ಸತ್ಸಂತಾನವನ್ನು ಪಡೆಯಲು, ಧರ್ಮ,ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಲು ಋಷಿಗಳು ತಂದಿರುವ  ಸಂಸ್ಕಾರ.  ಜಗನ್ಮಾತಾಪಿತೃಗಳ ಸಂಕಲ್ಪದಂತೆ ಇಬ್ಬರೂ ಸೇರಿ, ಪುರುಷಾರ್ಥಮಯವಾಗಿ ಜೀವನ ನಡೆಸೋಣ, ಅನ್ನುವುದು ವಿವಾಹದ ಪವಿತ್ರ ಸಂಕಲ್ಪ. ಅಂತಹ ಸಂಕಲ್ಪದೊಂದಿಗಿನ ಮಿಲನ ಸತ್ಸಂತಾನವನ್ನು ಸೃಷ್ಟಿಯಲ್ಲಿ ಮುಂದುವರೆಸಲು ಸಹಾಯಕವಾಗುತ್ತದೆ.ಅದಿಲ್ಲದೇ ಪಶುಗಳಂತೆ ಕೇವಲ ಇಂದ್ರಿಯ ಸುಖದ ಅಪೇಕ್ಷೆಯಿಂದಷ್ಟೇ ಆದ ಒಂದುಗೂಡುವಿಕೆ ಮಹರ್ಷಿಗಳು ತಂದ ಪವಿತ್ರ ಸಂಸ್ಕಾರವಾದ ವಿವಾಹ ಆಗದು. ಎಂದೇ ಅವನನ್ನು ಅಂತಹ ಕಾರ್ಯಕ್ಕೆ ಅಣಿಗೊಳಿಸಿದ ಕರುಣೆ ಭಗವಂತನದು.


ಇಂದ್ರಿಯಕ್ಷೇತ್ರಕ್ಕೆ ಜಾರಿದ ವರನನ್ನು ಮತ್ತೊಮ್ಮೆ ಧರ್ಮ ಮಾರ್ಗಕ್ಕೆ ಎಳೆದು, ಆನಂತರವೇ ವಿವಾಹ ನಡೆಯಬೇಕೆಂಬುದು ಬ್ರಾಹ್ಮಣ ರೂಪಿಯಾದ ಭಗವಂತನ ಇಚ್ಛೆಯಾಗಿತ್ತು.


 "ಸತ್ಯಕ್ಕೆ ಕವಚವಾದ ಧರ್ಮವನ್ನು ಸತ್ಯರೂಪನಾದವನು ಉಳಿಸುತ್ತಾನೆ. ಧರ್ಮಕ್ಕೆ ಬಂದ ಮುಸುಕನ್ನು ತೆಗೆಯಲು ಅವನೇ ಯತ್ನಿಸುತ್ತಾನೆ. ಭಗವಂತನ ಬಳಿಯಿದ್ದ ಜೀವ, ಇಂದ್ರಿಯಗಳ ಕೈಗೆ ಸಿಕ್ಕಿಹಾಕಿಕೊಂಡು ಬಿದ್ದಿದೆ. ಈ ರೀತಿ ಬಿದ್ದಿದ್ದನ್ನು ಮೆಲಕ್ಕೆತ್ತುವುದೇ ಧರ್ಮ". "ಬಿದ್ದವನನ್ನು, ಬೀಳುತ್ತಿರುವವನನ್ನು, ಬೀಳುವವನನ್ನು ಮೇಲೆತ್ತುವುದೇ ಧರ್ಮ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ..


ನಿರಂತರವಾಗಿ ಭಗವಂತನ ಸ್ಮರಣೆಯಿಂದ, ಸಜ್ಜನರ ಸಹವಾಸದಿಂದ ಸಂಸ್ಕಾರಿಗಳಾಗಿದ್ದರೆ, ಅದು ಎಂದೆಂದಿಗೂ ನಮ್ಮ ಜೊತೆಯಿದ್ದು ಬೀಳದಂತೆ ರಕ್ಷಿಸುತ್ತದೆ. ಅಂತಹ ಜ್ಞಾನೀ ಜನರ ಮಾರ್ಗದಲ್ಲಿ ಹೆಜ್ಜೆ ಹಾಕೋಣ.


ಸೂಚನೆ : 12/08/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.