Sunday, May 2, 2021

ಶ್ರೀರಾಮನ ಗುಣಗಳು-3 ಶ್ರೀರಾಮ ಸದಾ ಸತ್ಯಕ್ಕೆ ಬದ್ಧ (Sriramana Gunagalu-3) Srirama Sada Satyakke Baddha

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಮದ್ವಾಲ್ಮೀಕಿರಾಮಾಯಣದ ಆದಿಯಲ್ಲಿ ಒಂದು ಸಂವಾದ ನಡೆಯುತ್ತದೆ. ತಪಸ್ವಿಗಳಲ್ಲಿ ಶ್ರೇಷ್ಠರಾದನಾರದರಲ್ಲಿ ಮುನಿಶ್ರೇಷ್ಠರಾದ ವಾಲ್ಮೀಕಿಗಳು ಪ್ರಶ್ನಿಸುತ್ತಾರೆ- "ಈ ಲೋಕದಲ್ಲಿ ಧರ್ಮಜ್ಞ, ಕೃತಜ್ಞ,ಸತ್ಯಸಂಧ ಮೊದಲಾದ ಸದ್ಗುಣಗಳ ಗಣಿಯಾದ ಒಬ್ಬ ವ್ಯಕ್ತಿಯ ಕುರಿತು ತಿಳಿಯುವ ಆಸೆಯಾಗಿದೆ.ದಯವಿಟ್ಟು ಅಂತಹ ಮಹಾಮಹಿಮ ಯಾರಾದರೂ ಇದ್ದರೆ ಹೇಳಿ" ಎಂಬುದಾಗಿ.  ಅದಕ್ಕೆನಾರದಮಹರ್ಷಿಗಳು ಶ್ರೀರಾಮನೆಂಬ ಹೆಸರಿನ ಒಬ್ಬ ವ್ಯಕ್ತಿಯನ್ನು ಪರಿಚಯಿಸುತ್ತಾ ಅವನಲ್ಲಿರುವ ಕೆಲವುಗುಣಗಳ ಪಟ್ಟಿಯನ್ನು ಮಾಡಿ ಹೇಳುತ್ತಾರೆ. ಆ ಗುಣಗಳು ವಾಲ್ಮೀಕಿರಾಮಾಯಣದ ಮೊದಲ ಸರ್ಗದಲ್ಲಿಸುಮಾರು ಹತ್ತು ಶ್ಲೋಕಗಳಲ್ಲಿ ವರ್ಣಿತವಾಗಿವೆ. ಅವುಗಳನ್ನು ಒಂದೊಂದಾಗಿ ಕಾಲ-ದೇಶದ ಪರಿಮಿತಿಯಲ್ಲಿಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. 


ಶ್ರೀರಾಮನು ಸದಾ ಸತ್ಯಕ್ಕೆ ಬದ್ಧನಾಗಿದ್ದ. ಸತ್ಯವನ್ನು ಬಿಟ್ಟು ಸ್ವಲ್ಪವೂ ಕದಲುತ್ತಿರಲಿಲ್ಲ. ಅವನ ಪ್ರತಿಯೊಂದು ಕ್ರಿಯೆಯೂ ಸತ್ಯದ ಪರಿಮಿತಿಯಲ್ಲೇ ಇತ್ತು. ಯಾವ ಕ್ರಿಯೆಯು ಸತ್ಯಕ್ಕೆವಿರೋಧವಾಗುವಂತಿತ್ತೋ ಅದನ್ನು ಸರ್ವಥಾ ಬಹಿಷ್ಕರಿಸುತ್ತಿದ್ದನು. ಎಂತಹ ಕಷ್ಟದ ಸ್ಥಿತಿಯಲ್ಲೂಸತ್ಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಇವೆಲ್ಲವೂ ಅವನ ಸತ್ಯಸಂಧತೆಗೆ ಸಾಕ್ಷಿಯಾಗಿವೆ. ಸತ್ಯವೆಂದರೆಸುಳ್ಳನ್ನು ಹೇಳದಿರುವುದು ಎಂಬ ಅರ್ಥ ಮಾತ್ರವಲ್ಲ. ಶ್ರೀರಂಗಮಹಾಗುರುವು "ಸತ್ಯ ಎಂದರೆ "ಸತಿಯಂ" -ಅಮರವಾದದ್ದಕ್ಕೂ, ಮರವಾದದ್ದಕ್ಕೂಸೇತುವೆಯನ್ನು ಹಾಕುವುದು 'ಸ-ತಿ-ಯ' ಎಂದು ಉಪನಿಷತ್ತು ಹೇಳುತ್ತದೆ ಎಂದು ವಿವರಣೆಯನ್ನು ನೀಡಿದ್ದರು.  ಈದೃಷ್ಟಿಯಿಂದ ಸತ್ಯ ಎಂಬ ಪದವನ್ನು ಅರ್ಥಮಾಡಿಕೊಳ್ಳಬೇಕು. ಶ್ರೀರಾಮನೆಂಬುದು ಅಮರರೂಪವಾದಸತ್ಯವನ್ನು ತಲುಪಲು ಮರರೂಪ-ಮಾನವರೂಪವನ್ನು ತಾಳಿ ಸತ್ಯಲೋಕಕ್ಕೆ ಸೇತುವೆಯಾಗಿ ಬಂದಸತ್ಯರೂಪ. ಹಾಗಾಗಿ ಶ್ರೀರಾಮನ ಪ್ರತಿಯೊಂದು ಕಾರ್ಯವೂ, ಆ ಸತ್ಯಕ್ಕೆ ಅವಿರೋಧವಾಗಿಯೇಇರುತ್ತಿತ್ತು. ವೈರಿಯನ್ನೂ ಒಂದು ಹಂತದವರೆಗೆ ಮಾತ್ರ ವೈರಿಯನ್ನಾಗಿ ಕಂಡ. 'ಮರಣಾಂತಾನಿವೈರಾಣಿ' ಎಂಬುದಾಗಿ ಪರಿಗಣಿಸಿ ವೈರಿಯ ಮರಣಾನಂತರದಲ್ಲಿ ಅವನನ್ನು ತನ್ನ ಭಾವಕ್ಕೆ ಸೇರಿಸಿಕೊಂಡಉದಾತ್ತಮಹಾಪುರುಷ ಈತ." ಯುದ್ಧದಿಂದ ಮರಣ ಹೊಂದಿದ ರಾವಣನಿಗೆ ಮರಣೋತ್ತರಸಂಸ್ಕಾರಮಾಡಲು ವಿಭೀಷಣನಿಗೆ ಆದೇಶ ಮಾಡಿದ್ದು ಇದಕ್ಕೆ ಸಾಕ್ಷಿ. ಪಕ್ಕದಲ್ಲಿರುವವರು ಎಷ್ಟೇ ಉದ್ವೇಗಗೊಂಡರೂ ತಾನು ಮಾತ್ರ ಸ್ವಲ್ಪವೂ ವಿವೇಕವನ್ನು ಕಳೆದುಕೊಳ್ಳದೆ ಸತ್ಯಕ್ಕೆ ಅಪಚಾರವಾಗದ ರೀತಿಯಲ್ಲಿ ವರ್ತಿಸಿದ.ರಾವಣನ ಸಂಹಾರಕ್ಕಾಗಿ ಸುಗ್ರೀವನು ಒಪ್ಪಂದವನ್ನು ಮಾಡಿಕೊಂಡಿದ್ದನು. ಆದರೆ ಯಾವುದೋಕಾಲವಶನಾಗಿ ತನ್ನ ಕರ್ತವ್ಯವನ್ನು ಮರೆತ ಸುಗ್ರೀವನನ್ನು ಶಿಕ್ಷಿಸುವುದಾಗಿ ಕ್ರೋಧಭರಿತನಾದಲಕ್ಷ್ಮಣನನ್ನು ಸಾಂತ್ವನ ಮಾಡಿದ ರೀತಿ ಅವನ ಸತ್ಯಕ್ಕೆ ಅವಿರೋಧವಾದ ನಡೆಯನ್ನು ಪ್ರತೀಕಿಸುತ್ತದೆ.ವನಕ್ಕೆ ತೆರಳುವಂತೆ ತನ್ನ ಮಾತೃಸಮಳಾದ ಕೈಕೇಯಿಯು ಆಜ್ಞೆ ಮಾಡಿದಾಗ ತಂದೆಯ ಆಜ್ಞಾಪಾಲನೆಮಾಡುವುದು ಮಾತ್ರ ತನ್ನ ಕರ್ತವ್ಯವೆಂದು ತಿಳಿದು ಮರುಮಾತಾಡದೆ ಹೊರಟಿರುವುದು ಸತ್ಯಕ್ಕೆ ಇರುವಬದ್ಧತೆಯನ್ನು ಎತ್ತಿ ಹಿಡಿಯುವ ಪರಿ. ಹೀಗೆ ಶ್ರೀರಾಮನು ತನ್ನ ಜೀವನದುದ್ದಕ್ಕೂ ಸತ್ಯಕ್ಕೆ ಬದ್ಧನಾಗಿ-ಸತ್ಯಸಂಧನಾಗಿ ತಾನೊಬ್ಬ ಆದರ್ಶಪುರುಷನಾಗಿ ಇಂದಿಗೂ ನಮ್ಮೆಲ್ಲರ ಮನೆ-ಮನಗಳಲ್ಲಿ ಶಾಶ್ವತವಾದಜಾಗವನ್ನು ಪಡೆದಿದ್ದಾನೆ.

ಸೂಚನೆ : 2/5/2021 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.