ಯಾರು ಒಳ್ಳೆಯವರೋ ಅವರು ಸತ್ಪುರುಷರು ಎಂದು ಸಾಮಾನ್ಯ ನೋಟ. ಯಾರಲ್ಲಿ ಒಂದಾದರೂ ಆತ್ಮಗುಣವಿದೆಯೋ - ಅಂದರೆ ದಯೆ, ಶಾಂತಿ (ಕ್ಷಾಂತಿ), ಅನಸೂಯೆ, ಶುಚಿ, ಅನಾಯಾಸ, ಮಂಗಳ, ಅಸ್ಪೃಹ - ಇವುಗಳಲ್ಲಿ ಯಾವುದೊಂದಾದರೂ ಇದ್ದರೆ, ಅವರೆಂದು. ಇನ್ನೊಂದು ಹೆಜ್ಜೆ ಮುಂದೆಹೋದರೆ ಯಾರು ಕೊಟ್ಟಸಾಲವನ್ನು ಹಿಂತಿರುಗಿ ಕೇಳುವುದಿಲ್ಲವೋ ಅಥವಾ ಒಂದು ಕೆನ್ನೆಗೆ ಬಾರಿಸಿದರೆ ಮತ್ತೊಂದು ಕೆನ್ನೆ ತೋರಿಸುವವರೋ ಅವರೆಂದು.
‘ಸದ್ವಸ್ತು’’ ಎನ್ನುವುದು ಪರಮಾತ್ಮ, ಬ್ರಹ್ಮವಸ್ತು. ಯಾವುದು ವಿಕಾರವನ್ನು ಹೊಂದುವುದಿಲ್ಲವೋ ಅದೇ ‘ಸತ್’. ಅಂತಹ ಸತ್ಯ ವಸ್ತುವನ್ನು ತಮ್ಮಲ್ಲಿ ಕಂಡು ನಿತ್ಯದಲ್ಲೂ ಅದರ ತಂಪಾದ ಅನುಭವವನ್ನು ಪಡೆದವರೇ ಸತ್ಪುರುಷರು.
ಅಂತಹ ಸತ್ಪುರುಷರ ಸಹವಾಸ ಎಲ್ಲಕ್ಕಿಂತಲೂ ಶ್ರೇಷ್ಠ ಎನ್ನುತ್ತಾನೆ ವಿದುರನಿಗೆ ಶ್ರೀಕೃಷ್ಣ ಶ್ರೀಮದ್ ಭಾಗವತದಲ್ಲಿ. “ಯೋಗವಾಗಲಿ, ಸಾಂಖ್ಯವಾಗಲಿ, ಅಧ್ಯಯನವಾಗಲಿ, ತಪಸ್ಸಾಗಲಿ, ತ್ಯಾಗವಾಗಲಿ, ಇಷ್ಟಾಪೂರ್ತವಾಗಲಿ (ಅಂದರೆ ವೈದಿಕ ಹಾಗೂ ಇನ್ನಿತರೇ ಧರ್ಮ ಕಾರ್ಯಗಳು), ದಕ್ಷಿಣೆ, ವ್ರತಗಳು, ಯಜ್ಞಗಳು, ವೇದ, ಯಮ-ನಿಯಮಗಳು ಇವು ನನಗೆ ಪ್ರಿಯವಾದವು. ಆದರೆ, ಇವೆಲ್ಲೆವೂ ನನ್ನನ್ನು ಸತ್ಸಂಗದಂತೆ ವಶಪಡಿಸಿಕೊಳ್ಳಲಾರವು” - ಶ್ರೀಕೃಷ್ಣನಮಾತು.
ಸತ್ಸಂಗವು ಬೇರೆಲ್ಲ ಸಂಗವನ್ನು ಹೋಗಲಾಡಿಸುತ್ತದೆ. ಭಗವಂತ ಹೇಳುತ್ತಾನೆ “ರಜಸ್ಸು- ತಮಸ್ಸುಳ್ಳ ಪ್ರಕೃತಿಯವರು, ಒಳ್ಳೆಯ ಸಂಸ್ಕಾರವಿಲ್ಲದಿರುವವರು ಅಂತಹವರೂ ಕೂಡ ಸತ್ಸಂಗದಿಂದ ನನ್ನ ಪಾದವನ್ನು ಹೊಂದಿದರು” ಎಂದು. ಉದಾಹರಣೆಗೆ ವೃತ್ರಾಸುರ, ಧರ್ಮವ್ಯಾಧ, ಕುಬ್ಜೆ, ಗೋಪಿಯರು ಇವರೆಲ್ಲರ ಭವಭಂಜನ ಸತ್ಸಂಗದಿಂದಲೇ. ಸಾಂಖ್ಯ - ಯೋಗಗಳು ಸಾಧನಾ ಮಾರ್ಗಗಳು. ಆದರೂ, ಅವು ತಾವೇ ಮುಕ್ತಿಯನ್ನು ಹೊಂದಿಸುವುದಿಲ್ಲ. ಸಾಮಾನ್ಯವಾಗಿ ಮನಸ್ಸು ಯಾವ ಸಹವಾಸವೂ ಇಲ್ಲದೆ ಇರುವುದಕ್ಕೆ ಇಷ್ಟಪಡುವುದಿಲ್ಲ. ಸತ್ಪುರುಷರ ಸಹವಾಸವಿಲ್ಲದಿದ್ದರೆ ಯಾವುದ್ಯಾವುದೋ ಭಾವನೆಗಳು ನಮ್ಮನ್ನಾಕ್ರಮಿಸುತ್ತವೆ. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು “ಕ್ಷೇತ್ರಕ್ಕೆ ವ್ಯವಸಾಯ ಮಾಡದೆ ಸರಿಯಾದ ಬೀಜವನ್ನು ಬಿತ್ತದಿದ್ದರೆ ಅಲ್ಲಿ ಪಾಪಾಸ್ ಕಳ್ಳಿ ಆಕ್ರಮಿಸುತ್ತದೆ” ಎಂದು. ಅಂತೆಯೇ ಸತ್ಸಹವಾಸವನ್ನು ಮಾಡದೇ ಇದ್ದರೆ ಬೇರೆ ಸಹವಾಸ ಸೇರಿಕೊಳ್ಳುತ್ತದೆ. ಸತ್ಪುರುಷರು ಬೆಳಕನ್ನು ಕಂಡವರು. ಅವರು ತಮ್ಮ ದೃಷ್ಟಿಯಿಂದಲೂ, ಸ್ಪರ್ಶದಿಂದಲೂ, ತಮ್ಮ ಮಾತುಗಳಿಂದಲೂ, ಸಾನಿಧ್ಯದಿಂದಲೂ ಸದ್ಧರ್ಮವನ್ನು ನಮ್ಮಲ್ಲಿ ಕೂರಿಸಬಲ್ಲರು. ಹಾಗೆಯೇ, ಅವರು ಭಗವಂತನಿಗೆ ಅರ್ಪಣೆಮಾಡಿ ವಿತರಿಸುವ ಪ್ರಸಾದ ಮತ್ತೂ ಶ್ರೇಷ್ಠ. ಅವರು ತಿಂದುಂಡು ಮಿಕ್ಕ ಶೇಷ ‘ಉಚ್ಚಿಷ್ಠ’ವೂ ಸಹ. ಆದ್ದರಿಂದಲೇ ಶ್ರೀ ಶಂಕರರು ಹೇಳುತ್ತಾರೆ ‘ಸತ್ಸಂಗತ್ವೇ ನಿಸ್ಸಂಗತ್ವಮ್, ನಿಸ್ಸಂಗತ್ವೇ ನಿರ್ಮಲಚಿತ್ತಮ್, ನಿರ್ಮಲಚಿತ್ತೇ ಜೀವನ್ಮುಕ್ತಿಃ’ - ಸತ್ಸಂಗದಿಂದ ಮನಸ್ಸಿನ ಅಂಟು ಹೋಗುತ್ತದೆ, ಆದ್ದರಿಂದ ಮನಸ್ಸು ನಿರ್ಮಲವಾಗುತ್ತದೆ. ನಿರ್ಮಲ ಮನಸ್ಸು ಜೀವನ್ಮುಕ್ತಿಗೆ ಕಾರಣವಾಗುತ್ತದೆ.
ಅಂತಹ ಸದ್ವಸ್ತುವನ್ನು ಕಂಡ ಸತ್ಪುರುಷರಿಗೆ ನಮೋನಮಃ

ಸೂಚನೆ : 17/10/2026 ರಂದು ಈ ಲೇಖನವು ವಿಜಯ ಕರ್ನಾಟಕದ ಬೋಧಿ ವೃಕ್ಷದ ಪತ್ರಿಕೆಯಲ್ಲಿ ಪ್ರಕಟವಾಗಿದೆ.