Saturday, 2 February 2019

Mr. K.S. Rajagopalan (ರಾಜಗೋಪಾಲನ್ ಕೆ ಎಸ್)

ನಿವೃತ್ತ ಕಾಮರ್ಸ್ ಅಧ್ಯಾಪಕರು


Email: lekhana@ayvm.in


ಪರಿಚಯ (Introduction):

ಎಮ್ .ಕಾಮ್ ಪದವೀಧರರಾದ ಇವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಕಾಲ ಸೇವೆ ಸಲ್ಲಿಸಿ, ಸ್ವ ಇಚ್ಚೆಯಿಂದ ನಿವೃತ್ತರಾಗಿ ಅಧ್ಯಾಪನ ವೃತ್ತಿಯನ್ನು ಕೈಗೊಂಡು ತಾವೇ ಆವಿಷ್ಕರಿಸಿದ ವಿಧಾನಗಳಿಂದ ವಿಷಯಗಳನ್ನು ಬೋಧಿಸಿ ಜನಪ್ರಿಯ ಅಧ್ಯಾಪಕರಾಗಿ ಹೆಸರು ಮಾಡಿದವರು. 

ಶ್ರೀಯುತರು ಬರೆದ "Business laws" ಎಂಬ ಪುಸ್ತಕವು ಆರು ಆವೃತ್ತಿಗಳನ್ನು ಕಂಡಿರುವುದು ಪುಸ್ತಕದ ಜನಪ್ರಿಯತೆಗೆ ಒಂದು ಕನ್ನಡಿ. ಅರವತ್ತಕ್ಕೂ ಹೆಚ್ಚು ಕಾಲೇಜುಗಳಲ್ಲಿ ಭಾಷಣಗಳನ್ನು ಮಾಡಿ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕವೃಂದದವರಿಂದ ಗೌರವಾದರಗಳಿಗೆ ಭಾಜನರಾಗಿದ್ದಾರೆ. 

ತಮ್ಮ ವಿದ್ಯಾರ್ಥಿದೆಶೆಯಲ್ಲಿ ಭಾಷಣ, ನಾಟಕ, ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಚಿನ್ನದ ಪದಕವೂ ಸೇರಿದಂತೆ ನಾನಾ ಪಾರಿತೋಷಕಗಳನ್ನು ಪಡೆದ ಇವರು ಉತ್ತಮ ಸಂಗೀತವನ್ನು ಆಲಿಸುವ ಸದಭಿರುಚಿಯುಳ್ಳವರು.

ಉತ್ತಮ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಶ್ರೀರಂಗ ಮಹಾಗುರುಗಳ ನೇರ ಸಂಪರ್ಕಕ್ಕೆ ಬಂದವರು. ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರೀತ್ಯಾದರಗಳನ್ನು ಬೆಳೆಸಿಕೊಂಡು ಹಿರಿಯ ವಿದ್ವಾಂಸರ ಪಾಠಪ್ರವಚನಗಳನ್ನು ಕೇಳುತ್ತಾ ಬಂದಿದ್ದಾರೆ. ನಾಡಿನ ಹಲವು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಇವರ ಆಧ್ಯಾತ್ಮಿಕ ಲೇಖನಗಳು ಪ್ರಕಟಗೊಂಡು ಜನಪ್ರಿಯವಾಗಿದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages