Saturday, 2 February 2019

Mr. B.U. Subramanya Somayaji (ಬಿ. ಉ. ಸುಬ್ರಹ್ಮಣ್ಯ ಸೋಮಯಾಜಿ)

ಮಾಲೀಕರು, ಮ್ಯಾನ್ ಮಾರ್ಕ್ ಎಂಟರ್ಪ್ರೈಸಸ್ (Man Mark Enterprises),
ಬೆಂಗಳೂರು (Bangalore).ಇಮೈಲ್ (Email): somayajisubramanya@gmail.com


ಪರಿಚಯ (Introduction):

ಶ್ರೀಯುತರು ಮೂಲತಃ ಶೃಂಗೇರಿಯವರು.ಶೃಂಗೇರಿಯಲ್ಲೇ ಬಿ.ಕಾಂ. ಪದವಿ ಶಿಕ್ಷಣ. ವಿದ್ಯಾರ್ಥಿ ದೆಸೆಯಿಂದಲೂ ಸಾಮಾಜಿಕ ಕಾರ್ಯಕರ್ತರಾಗಿ, ಸುಮಾರು ೨೫ ವರ್ಷಗಳು ಅನ್ಯಾನ್ಯ ಜವಾಬ್ದಾರಿಯಿಂದ ಸಾಮಾಜಿಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಒಂದು ಪಿ.ವಿ.ಸಿ.ಉದ್ಯಮವನ್ನು ನಡೆಸುತ್ತಿದ್ದಾರೆ. ೧೯೯೪ ರಲ್ಲಿ ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಸಂಪರ್ಕಕ್ಕೆ ಬಂದು, ಶ್ರೀರಂಗ ಮಹಾಗುರುಗಳಿಂದ ಪ್ರೇರಿತರಾದ ಸರ್ವಶ್ರೀ-ಎನ್.ಎಸ್.ರಾಮಭಾದ್ರಾಚಾರ್ಯರು, ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಮುಂತಾದ ಪ್ರಸಿದ್ಧ ಗುರುಜನರೂ,ವಿದ್ವಾಂಸರುಗಳಿಂದ ಭಾರತೀಯ ಸಂಸ್ಕೃತಿಯ ಬಹುಮುಖ ಕ್ಷೇತ್ರಗಳ ಪರಿಚಯ,ಅಧ್ಯಯನದಲ್ಲಿ ಬಿಡುವಿನ ಸಮಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರ್ಯ ಸಂಸ್ಕೃತಿ,ಬೋಧಿವೃಕ್ಷ,ಹರ್ಷವಾಣಿ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

ಹವ್ಯಾಸ (Hobbies):

ಭಾರತೀಯ ಸಂಸ್ಕೃತಿ ವಿಷಯಗಳ ಕುರಿತ ಲೇಖನ ಬರೆಯುವುದು, ಪ್ರವಚನ, ಸಂವಾದದಲ್ಲಿ ಭಾಗವಹಿಸುವುದು.

ಆಸಕ್ತಿ (Interests):

ನಮ್ಮ ಉದಾತ್ತವಾದ ಸಂಸ್ಕೃತಿ,ಪರಂಪರೆಗಳ ವೈಜ್ಞಾನಿಕ ವಿಶ್ಲೇಷಣೆ, ಮಹರ್ಷಿ ಸಂಸ್ಕೃತಿಯ ಹೃದಯವನ್ನು ಲೋಕಕ್ಕೆ ಅರುಹಿದ ಶ್ರೀರಂಗ ಮಹಾಗುರುಗಳ ವಿಚಾರಧಾರೆಯನ್ನು ಯಥಾಶಕ್ತಿ ಅಧ್ಯಯನ ಮಾಡುವುದು.


To know more about Astanga Yoga Vijnana Mandiram (AYVM) please visit our Official Website, Facebook and Twitter pages