Sunday, July 4, 2021

ಶ್ರೀರಾಮನ ಗುಣಗಳು - 12 ವೇದ-ವೇದಾಂಗ-ತತ್ತ್ವಜ್ಞ- ಶ್ರೀರಾಮ (Sriramana Gunagalu - 12 Veda-Vedanga Tattvajna - Sri Rama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನಿಗೆ ವೇದವೇದಾಂಗತತ್ತ್ವಜ್ಞ ಎಂಬ ಬಿರುದಿತ್ತು. ನಾಲ್ಕು ವೇದಗಳು, ಆರು ವೇದಾಂಗಗಳು, ಒಂದೊಂದು ವೇದಗಳಲ್ಲೂ ಅನೇಕ ಶಾಖೆಗಳು.ಅವುಗಳೆಲ್ಲವನ್ನೂ  ಒಬ್ಬನಿಂದ ತಿಳಿಯಲು ಸಾಧ್ಯವೇ? ಇಲ್ಲಿ 'ವೇದವೇದಾಂಗಜ್ಞ' ಎಂದು ಹೇಳಿಲ್ಲ. 'ವೇದವೇದಾಂಗತತ್ತ್ವಜ್ಞ' ಎನ್ನಲಾಗಿದೆ. ಅಂದರೆವೇದ ಬೇರೆ, ವೇದಗಳ ತತ್ತ್ವ ಬೇರೆ ಎಂದರ್ಥವೇ? ವೇದಗಳನ್ನು ಕೇವಲ ಕಂಠಸ್ಥ ಮಾಡಿಕೊಂಡರೆ ಅವುಗಳ ತತ್ತ್ವವನ್ನು ತಿಳಿದಂತೆ ಅಲ್ಲ.ವೇದಗಳು ಭಗವಂತನ ವಿಸ್ತಾರರೂಪವಾದ ಬ್ರಹ್ಮಾಂಡದ ವಿವರಣೆಯ ಸಾಹಿತ್ಯರೂಪ. ಒಬ್ಬ ಕೃಷಿಕನಾದವನು ಒಂದುಬೀಜವನ್ನು ನೆಟ್ಟರೆ, ಆ ಬೀಜವು ನೀರು ಗೊಬ್ಬರಗಳೆನ್ನೆಲ್ಲಾ ಪಡೆದು ಮರವಾಗಿ ಬೆಳೆದು, ಮತ್ತೆ ತನ್ನ ಮೂಲವಾದಬೀಜದ ರೂಪವನ್ನೇ ಪಡೆದುಕೊಳ್ಳುತ್ತದೆ. ಈ ಬೀಜವು ಮತ್ತೆ ಬೀಜವಾಗುವಾಗ ಅದು ಸೃಷ್ಟಿ, ಸ್ಥಿತಿ, ಲಯವೆಂಬಪರಿಮಿತಿಯಲ್ಲಿ ಬೆಳೆದಿರುತ್ತದೆ. ಇದನ್ನೇ ಒಬ್ಬ ವ್ಯವಸಾಯಿಯಾದವನು ಒಂದು ಪ್ರಬಂಧದ ರೂಪದಲ್ಲೋ ಅಥವಾಲೇಖನರೂಪದಲ್ಲೋ ಬರೆದರೆ ಅದು ಆ ಬೀಜವನ್ನು ತಿಳಿಸುವ ಬೀಜದ ವೇದವಾಗುತ್ತದೆಯಲ್ಲವೇ! ಬೀಜದಆಮೂಲಾಗ್ರವಾದ ಪರಿಚಯವನ್ನು ಒಬ್ಬ ವ್ಯವಸಾಯಿಯಾದವನು ಮಾತ್ರ ಮಾಡಬಲ್ಲ. ಅವನು ಬರೆದಸಾಹಿತ್ಯರೂಪವನ್ನು ನೋಡಿ ಬೀಜದ ಒಂದು ಮಟ್ಟಿನ ಅರಿವನ್ನು ಪಡೆಯಬಹುದು.  ವ್ಯವಸಾಯಿಯಲ್ಲದ ಯಾವನೋ ಒಬ್ಬನುಮಧ್ಯದಲ್ಲಿ ಬಂದು ನೋಡಿದರೆ ಆಗ ಅವನಿಗೆ ಆ ಬೀಜದ ಸಮಗ್ರ-ಪರಿಚಯವಾಗಲಾರದು. ಈ ಪರಿಚಯವುವ್ಯವಸಾಯಿಯು ಕೊಡುವ  ಪರಿಚಯದಷ್ಟು ಸಮಗ್ರವೂ ಆಗಲಾರದು.ಸೃಷ್ಟಿಬೀಜದ ಮೂಲ ಮತ್ತು ಅದರ ವಿಕಾಸ, ವಿಲಯಗಳನ್ನು ಯಾರು ಬಲ್ಲವರು? ಎಂಬುದನ್ನು ತಿಳಿಯಹೊರಟಾಗನಮಗೆ ಮೇಲಿನ ಉದಾಹರಣೆಯು ಸ್ಪಷ್ಟಪಡಿಸುವುದು, ಇದನ್ನು ತಿಳಿಯಲು ಅದರ ವ್ಯವಸಾಯಿಗೆ ಮಾತ್ರ ಸಾಧ್ಯಎಂದು. ಹಾಗಾದರೆ ಆ ವ್ಯವಸಾಯಿ ಯಾರು? ಅವನನ್ನೇ ಭಗವಂತ, ಪರಬ್ರಹ್ಮ ಇತ್ಯಾದಿ ಪದಗಳಿಂದ ಕರೆಯುತ್ತೇವೆ. ಅಂದರೆ ಭಗವಂತನು ಇವೆಲ್ಲದರ ಮರ್ಮವನ್ನು ಅಥವಾ ಅವುಗಳ ತತ್ತ್ವವನ್ನು ಅರಿತಿರುವವನು. 


ತತ್ತ್ವ ಎಂದರೆಮರ್ಮ; ಅದರ ಆಮೂಲಾಗ್ರವಾದ ಪರಿಚಯ. ಈ ನೇರದಲ್ಲಿ ವಿಚಾರಮಾಡಿದಾಗ, ವೇದ ಮತ್ತು ವೇದಾಂಗಗಳಪರಿಚಯವನ್ನು ಪಡೆದವನು ಆ ಭಗವಂತ ತಾನೆ. ಶ್ರೀರಂಗ ಮಹಾಗುರುಗಳು ಹೇಳುವಂತೆ "ನಾರಾಯಣನು ನರನಾಗಿಅವತರಿಸಿ, ನರರೊಡನೆ ತಾನೂ ಬೆರೆತು, ಅವರನ್ನು ತನ್ನ ಪರಮಪದಕ್ಕೆ ಕರೆದುಕೊಂಡುಹೋಗಲು ಬಂದಧರ್ಮಸೇತುವೆಯೇ ಶ್ರೀರಾಮ". ಅವನು ಮಾನವರೂಪೀ ದಶರಥ ಪುತ್ರ ಮಾತ್ರನಲ್ಲ.ಶ್ರೀಮದ್ರಾಮಾಯಣದಲ್ಲಿ ಶ್ರೀಮನ್ನಾರಾಯಣನು ದೇವತೆಗಳಿಗೆ ಆಶ್ವಾಸನೆಯನ್ನು ಕೊಡುತ್ತಾನೆ –"ನಾನೇ ದಶರಥ ಪುತ್ರನಾಗಿ ರಾಮನಾಗಿ ಅವತರಿಸಿ ಬರುತ್ತೇನೆ" ಎಂದು.ಹಾಗಾಗಿ ಶ್ರೀರಾಮನು ಭಗವಂತನೇ. ಅವನು ತಾನೇತನ್ನ ವಿಕಾಸ ವಿಲಯಗಳ ಅರಿವನ್ನು ಪಡೆಯಲು ಸಾಧ್ಯ. ಈ ರೀತಿಯಾಗಿ ವೇದಗಳ ಮರ್ಮಜ್ಞನಾಗಿದ್ದ ಎಂಬ ಅರ್ಥವೇಹೊರತು, ಎಲ್ಲಾ ವೇದಗಳ ಶಬ್ದರೂಪವಾದ ಪುಸ್ತಕದ ಜ್ಞಾನವನ್ನು ಪಡೆದಿದ್ದ ಎಂಬ ಅರ್ಥವಲ್ಲ. ಅದನ್ನೂತಿಳಿದಿದ್ದರೆ ಆಶ್ಚರ್ಯವೇನಿಲ್ಲ. ಈ ನೇರದಲ್ಲಿ ಶ್ರೀರಾಮನನ್ನು ವೇದ-ವೇದಾಂಗ-ತತ್ತ್ವಜ್ಞ ಎಂಬ ಗುಣದಿಂದಗುರುತಿಸುವುದು ಸರಿಯೇ.


ಸೂಚನೆ : 4/7/2021 ರಂದು ಈ ಲೇಖನವು  
ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.