ಶ್ರೀಮತಿ ಡಾ. ಶ್ರುತಿ ಪ್ರಸಾದ್
(ಪ್ರತಿಕ್ರಿಯಿಸಿರಿ lekhana@ayvm.in)
ಒಮ್ಮೆ ದೇಶದ ವಿಜ್ಞಾನಿಗಳು ಹೀಗೊಂದುಪ್ರಯೋಗವನ್ನು ಮಾಡಿದರು. ಎಲ್ಲ ಮಕ್ಕಳ ಮುಂದೆಯೂ ಒಂದೊಂದು ಮಿಠಾಯಿಯನ್ನು ಇಟ್ಟು, ಅದನ್ನು ೧೫ ನಿಮಿಷಗಳು ಕಳೆದ ಬಳಿಕ ತಿಂದರೆ ಎರಡು ಮಿಠಾಯಿಗಳನ್ನು ಕೊಡುವುದಾಗಿ ಅವರಿಗೆ ತಿಳಿಸಿದರು. ಕೆಲವು ಮಕ್ಕಳುಎರಡು ಮಿಠಾಯಿಯ ಆಸೆಯಿಂದ, ಕಾದು, ಹೆಚ್ಚು ಲಾಭ ಪಡೆದರು. ಉಳಿದ ಮಕ್ಕಳುಕಾಯಲಾರದೆ, ತಕ್ಷಣ ಅದನ್ನು ತ್ವರಿತ ತೃಪ್ತಿಗಾಗಿಸಹನೆ ಇಲ್ಲದೆ ತಿಂದರು. ವರ್ಷಗಳು ಕಳೆದವು. ಮತ್ತೆ ಈ ಮಕ್ಕಳನ್ನು ಪರಿಶೀಲಿಸಲಾಯಿತು. ತಮ್ಮ ಕೈಗೆ ಬಂದಿದ್ದನ್ನು ಬಾಯಿಗೆ ಹಾಕದೆ,ತಾಳ್ಮೆಯಿಂದ ಇದ್ದ ಮಕ್ಕಳು ಇತರರಿಗಿಂತ ಭಾವನಾ ಪ್ರಚೋದನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳವರಾಗಿ ಬೆಳೆದಿದ್ದರು.ಶೈಕ್ಷಣಿಕ ಸಾಧನೆಗಳನ್ನು ಮಾಡಿ, ಕೆಟ್ಟ ಚಟಗಳಿಗೆ ತುತ್ತಾಗದ ಹಾಗೆ ಬೆಳೆದಿದ್ದರು. ಇಂದಿನ ಕಾಲದಲ್ಲಿ ಜಗತ್ತು ವೇಗದ ಗತಿಯಲ್ಲಿ ಸಾಗುತ್ತಿದೆ. ಅಂದುಕೊಂಡಿದ್ದು ತಕ್ಷಣಣ ನಡೆಯಬೇಕೆಂಬ ತವಕ. ತಾವಂದು ಕೊಂಡಿದ್ದಕ್ಕಿಂತ ಪರಿಣಾಮ ವಿರುದ್ಧವಾದರೆ ಸಹಿಸುವ ಧೃತಿಯಿಲ್ಲ. ಅನುಕೂಲವಾದ ಕಾಲಾವಕಾಶಕ್ಕೆ ಕಾಯುವ ತಾಳ್ಮೆಯಿಲ್ಲ. ದೊಡ್ದವರಾದ ನಮಗೇ ಈಗತಿಯಾದರೆ, ಇನ್ನು ಚಿಕ್ಕಮಕ್ಕಳ ಪಾಡು ಹೇಳತೀರದು. ಹೆಚ್ಚಾಗಿ ಈಗಿನ ಕಾಲದ ಮಕ್ಕಳಲ್ಲಿ ಅಸಹನೆ ಮತ್ತು ತ್ವರಿತ ತೃಪ್ತಿಯುಎದ್ದುಕಾಣುತ್ತಾ ಇದೆ. ಪೋಷಕರ ಸಮಯದ ಅಭಾವದಿಂದ ಮಕ್ಕಳ ನಡವಳಿಕೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮಆಗುತ್ತಿದೆ. ಗಗನಕ್ಕೆ ಹಾರುವ ಸಾಮರ್ಥ್ಯವನ್ನೂ ಬೆಳೆಸುತ್ತಿರುವ ಇಂದಿನ ಶಿಕ್ಷಣ ಪದ್ಧತಿಯು ಕೆಲವೊಮ್ಮೆ ವ್ಯಕ್ತಿತ್ವದ ಕೆಲವುಮುಖಗಳನ್ನು ಬೆಳೆಸುವ ಕೆಲಸದಲ್ಲಿ ಹಿಂದೆಬಿದ್ದಿದೆ. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಆತ್ಮಗುಣಗಳಲ್ಲೊಂದಾದ ಸಹನಶೀಲತೆಯನ್ನು ಬೆಳೆಸುವ ವ್ಯವಸ್ಥೆ ಇತ್ತು.