Saturday, April 6, 2019

ಬೇವು-ಬೆಲ್ಲ ಏಕೆ?! (Bevu bella eke?)

ಲೇಖಕರು:  ಡಾ||  ಪುನೀತ್ ಕುಮಾರ್ ಪದ್ಮನಾಭನ್


ಬಂತು ಯುಗಾದಿ. ವಸಂತ ಕಾಲದ ಆದಿಪರ್ವ. ಬೇವು ಬೆಲ್ಲ ಸೇವಿಸುವ ಪರ್ವ. ಸಾಮಾನ್ಯವಾಗಿ ಎಳೆವಯಸ್ಸಿನಿಂದಲೂ ಬೇವು-ಬೆಲ್ಲದ ವಿಚಾರ ಕೇಳಿಯೇ ಬೆಳೆದಿರುತ್ತೇವೆ. ಈ ಬೇವು ಬೆಲ್ಲ ಸೇವನೆಯು ಬೇಕಾ? ಇದೊಂದು ರೂಢಿ ಮಾತ್ರವೆ? ಇದರಿಂದ ಏನಾದರೂ ಪ್ರಯೋಜನ ಪರಿಣಾಮಗಳು ಉಂಟೆ? ಈ ಕೇಲವು ಅಪರೂಪದ ತರ್ಕ (out of the box) ಚಿಂತನೆಗೆ, ಇಗೋ ಇಲ್ಲಿದೆ ನೋಡಿ ಉತ್ತರ.

ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯು ವಿಜ್ಞಾನದ ವಿಕಸಿತರೂಪ. ಇದರಲ್ಲಿ ಒಳಗೊಂಡಿರುವ ಎಲ್ಲಾ ಆಚರಣೆಗಳು, ಪರ್ವಗಳು, ಹಬ್ಬ-ಹರಿದಿನಗಳು, ಜಾತ್ರೆಗಳು ವಿಜ್ಞಾನದ ತಳಪಾಯದಮೇಲೆ ನಿಂತಿವೆ. ಆಚರಣೆಗಳೆಲವೂ ಇಂದ್ರಿಯ-ದೇಹ-ಮನಸ್ಸುಗಳಿಗೆ ಆರೋಗ್ಯವನ್ನು ತರುವ ಕ್ರಮಗಳು, ತತ್‌ಪಶ್ಚಾತ್ ಆತ್ಮ ತೃಪ್ತಿ ಉಂಟುಮಾಡುವ ವಿಧಾನಗಳು. ಇವುಗಳೆಲ್ಲವು ಕೂಡ ದೇಹ-ಮನಸ್ಸಿನ ರೋಗನಿವಾರಕ ಹಾಗೂ ರೋಗ ನಿರೋಧಕಶಕ್ತಿಯನ್ನು ಕೊಟ್ಟು, ಆರೋಗ್ಯದಾಯಕ ಆಚರಣೆಗಳು. 

ಯುಗಾದಿಯ ಆಚರಣೆಯು ಸಂಕಲ್ಪ, ಹೋಮ, ಪಂಚಾಂಗ ಶ್ರವಣ, ಹೊಸ ಬಟ್ಟೆ ಧಾರಣೆ, ಬಂಧು ಬಾಂಧವರು ಒಟ್ಟುಗೂಡಿ ಒಳ್ಳೆಯ ಮಾತುಗಳನ್ನು ಆಡುವುದನ್ನು ಒಳಗೊಂಡಿದೆ. ಯುಗಾದಿಯೆಂದರೆ ವಸಂತ, ವಸಂತ ಎಂದರೆ ಸಂಭ್ರಮ. ವಸಂತ ಕಾಲದಲ್ಲಿ ಸೂರ್ಯನ ಪ್ರಾಬಲ್ಯ ಹೆಚ್ಚು. ಅವನ ಕಿರಣಗಳು ಅತ್ಯಂತ ಸೂಕ್ಷ್ಮವಾಗಿಯು ಪ್ರಖರವಾಗಿಯು ಇರುವ ಕಾಲ. ಇದರಿಂದಾಗಿ ನಮ್ಮ ದೇಹ ಬಲಹೀನವಾಗುವುದಲ್ಲದೆ, ನೀರಡಿಕೆ ಹೆಚ್ಚು, ಹಸಿವು ಕಡಿಮೆ, ಆಯಾಸ, ಸುಸ್ತು, ಬೆವರುಬಾಧೆ ಹೆಚ್ಚು. ಈ ಕಾಲದಲ್ಲಿ ಹೆಚ್ಚಾಗಿ ಕಫದಿಂದ ಉಂಟಾಗುವಜ್ವರ (viral fever), ವಾಂತಿ-ಭೇದಿ, ಅಸ್ತಮ, ತುರಿಕೆ, ಸೊರಿಯಾಸಿಸ್ ಇತ್ಯಾದಿ ಕಾಯಿಲೆಗಳು ಕಾಣಬರುತ್ತವೆ.

  •           ಯುಗಾದಿ ದಿನದಂದು ನಾವು ಮಾಡುವ ಎಳ್ಳು-ಎಣ್ಣೆಯ ಅಭ್ಯಂಗಸ್ನಾನ ನಮ್ಮ ದೇಹದಲ್ಲಿಯ ಶ್ರಮವನ್ನು ನೀಗಿಸಿ ತುರಿಕೆಯನ್ನು ನಿವಾರಿಸಿ ದೇಹಕ್ಕೆ ಪುಷ್ಟಿಯನ್ನು ನೀಡುವುದು.

  •          ನಾವು ಸೇವಿಸುವ ಬೇವಿನ ಎಲೆಗಳು ಕ್ರಿಮಿನಾಶಕವಾಗಿದ್ದು (ಂಟಿಣi-ಃಚಿಛಿಣeಡಿiಚಿಟ) ಜ್ವರ, ವಾಂತಿ, ಭೇದಿಗಳನ್ನು ನಿವಾರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಬೇವಿನ ಹೂ, ಎಲೆಗಳ ಕಷಾಯವನ್ನು ಜ್ವರನಾಶಕವಾಗಿ, ಅಜೀರ್ಣ ತೊಂದರೆಗಳಲ್ಲಿ ಸೇವಿಸಬೇಕು. ಬೇವು ಉತ್ತಮ ಕಫನಾಶಕ, ಚರ್ಮರೋಗ ನಿವಾರಕ. ಮೈತುರಿಕೆ, ಸರ್ಪಸುತ್ತು (ಊeಡಿಠಿes), ಕೀವುಗಾಯಗಳು, ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ರಾಮಬಾಣ. ಬೇವಿನಎಲೆ ರಸವನ್ನು ಸ್ನಾನದನೀರಿಗೆ ಸೇರಿಸಿ ಉಪಯೋಗಿಸಿದರೆ ದಡಾರ, ಚಿಕ್ಕನ್‌ಪೊಕ್ಸ್ ಕಾಯಿಲೆಗಳಿಗೆ ಉತ್ತಮ ಔಷಧಿ.

  •         ಬೆಲ್ಲವು ಮೂತ್ರದ ಸೋಂಕು (Uಡಿiಟಿe iಟಿಜಿeಛಿಣioಟಿ), ಅಸ್ತಮ, ಚರ್ಮ ತುರಿಕೆಗಳನ್ನು ಕಡಿಮೆಮಾಡಿ ದೇಹದ ಶ್ರಮನೀಗಿಸಿ, ರಕ್ತವನ್ನು ಶುದ್ಧೀಕರಿಸಿ ಆರೋಗ್ಯವನ್ನು, ಬಲವನ್ನು ಉಂಟುಮಾಡುವುದು. ನಾವು ಸೇವಿಸುವ ಬೇಲದಹಣ್ಣಿನ ಪಾನಕ, ಬಿಲ್ವದಹಣ್ಣಿನ ಚಟ್ನಿ ಕೂಡ ದೇಹದಲ್ಲಿನ ಸೋಂಕನ್ನು ತೆಗೆದು ವಾಂತಿ-ಬೇಧಿ ನಿವಾರಿಸಿ, ಆರೋಗ್ಯವನ್ನು ಉಂಟುಮಾಡುತ್ತದೆ.

  •          ರುಚಿಕರವಾದ ಹೋಳಿಗೆಯು ಕೂಡ ವಿಜ್ಞಾನ ಬದ್ಧವಾಗಿದ್ದು ಇದು ದೇಹಕ್ಕೆ ಬೇಕಾಗುವ ಬಲ, ಪುಷ್ಟಿ, ಇಂದ್ರಿಯತೃಪ್ತಿಯನ್ನು ಉಂಟುಮಾಡುವುದು.

  •          ಬೇವು ಹಾಗೂ ಬೆಲ್ಲದ ಮಿಶ್ರಣವು ರಕ್ತದಲ್ಲಿನ ಇಯೋಸಿನೋಫಿಲ್ ಕಣಗಳನ್ನು ಕಡಿಮೆಮಾಡಿ, ಇದರಿಂದಾಗಿರುವ ಶೀತ, ಕೆಮ್ಮು, ಮೂತ್ರದಸೊಂಕು, ತುರಿಕೆಗಳನ್ನು ನಿವಾರಣೆಮಾಡುತ್ತದೆ. ಬೇವುಬೆಲ್ಲದೊಂದಿಗೆ ಸಕ್ಕರೆ, ಕಾಳುಮೆಣಸು, ಉಪ್ಪು, ಓಮಕ್ಕಿಗಳನ್ನು ಸೇರಿಸಿ ಸೇವಿಸಿದರೆ ಕಫ ಪಿತ್ತಗಳು ನಿವಾರಣಯಾಗಿ ನೀರೋಗ ಉಂಟಾಗುವುದು.

  •          ಶ್ರೀಗಂಧ, ಕರ್ಪೂರ, ಧೂಪ (ಆಗರು) ದ್ರವ್ಯಗಳ ಲೇಪನವು ನಮ್ಮ ದೇಹದಲ್ಲಿನ ಶ್ರಮ-ಕ್ಲಮ- ದೌರ್ಗಂಧ್ಯ ನಿವಾರಿಸುವುವು.

 ಈ ರೀತಿಯಾಗಿ ನಮ್ಮ ಸಂಸ್ಕೃತಿಯ ಆಚರಣೆಗಳೆಲ್ಲವೂ ವಿಜ್ಞಾನ ಬದ್ಧವಾಗಿದ್ದು, ಅವುಗಳ ಆಚರಣೆ ಆರೋಗ್ಯಪಾಲನೆ ಹಾಗೂ ರೋಗನಿವಾರಣೆಗಳಿಗೆ ಅತಿಅಗತ್ಯವಾಗಿವೆ.


ಸೂಚನೆ: ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.