ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಶಿವ-ನಟರಾಜ
ಶಿವನಿಗೂ ನಾಟ್ಯಕ್ಕೂ ಅವಿನಾಭಾವ ಸಂಬಂಧವಿದೆ. ಶಿವ ಸಹಸ್ರನಾಮದಲ್ಲಿ ಅವನನ್ನು ನಾಟ್ಯಪ್ರಿಯ,ನಿತ್ಯನರ್ತಕ, ನರ್ತಕ, ಮಹಾನಟನಮೂರ್ತಿಎಂದೆಲ್ಲಾ ಸ್ತುತಿಸಲಾಗಿದೆ. ಹಾಗೆಯೇ ನಾಟ್ಯದ ಭಾಗವೇ ಆದ ಸಂಗೀತದ ಸಂಬಂಧವೂ ಶಿವನಿಗೆ ಹೇಳಿದೆ. ಅವನನ್ನು ಮಹಾಗೀತ,ವೇಣವೀ, ತುಂಬವೀಣಾವಾದನ ತತ್ತ್ವಜ್ಞನೆಂದೂ ವರ್ಣಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ, ನಾಟ್ಯಶಾಲೆಗಳಲ್ಲಿ, ದೇವಾಲಯಗಳಲ್ಲಿ ನಟರಾಜನ ನಾಟ್ಯಭಂಗಿಯನ್ನು ಕಾಣಬಹುದಾಗಿದೆ. ಶ್ರೀರಂಗ ಮಹಾಗುರುಗಳನ್ನೊಮ್ಮೆ ಯಾರೋ ಪ್ರಶ್ನಿಸಿದರಂತೆ- ನಟರಾಜನ ನಾಟ್ಯ , ನಾಟ್ಯ ರಸಿಕರಿಗೆ ಮನೋರಂಜಕವಾಗಬಹುದು ಸಾಮಾನ್ಯರಿಗೆ ಅದು ಹೇಗೆ ಸಂಬಂಧಿಸಿದೆ? ಎಂಬುದಾಗಿ. ಶ್ರೀರಂಗ ಮಹಾಗುರುಗಳು ಅವರ ಹೃದಯಭಾಗವನ್ನೊಮ್ಮೆ ಮುಟ್ಟಿಕೊಳ್ಳಲು ಹೇಳಿ, ಅಲ್ಲೇನು ಅನುಭವವಾಗುತ್ತಿದೆ ಎಂದು ಕೇಳಿದರಂತೆ. ಲಬ್-ಡಬ್ ಎಂಬ ಹೃದಯಬಡಿತದ ಶಬ್ದ ಅನುಭವಕ್ಕೆ ಬರುತ್ತಿದೆ ಎಂದು ಅವರು ಹೇಳಿದರು. ಆಗ ಮಹಾಗುರುಗಳು ಹೇಳಿದ ಮಾತು ಅವಿಸ್ಮರಣೀಯ- ಹಾಗೆ ಶಿವ-ಶಿವೆಯರು ನಿಮ್ಮ ಹೃದಯದಲ್ಲಿ ನರ್ತನ ಮಾಡುತ್ತಿರುವುದರಿಂದಲೇ ನಿಮ್ಮ ಅಸ್ತಿತ್ವ ಇರುವುದಪ್ಪಾ, ಅವರು ನಿಮ್ಮ ಹೃದಯದಲ್ಲಿ ತಮ್ಮ ನರ್ತನವನ್ನು ನಿಲ್ಲಿಸಿದರೆ ನಿಮ್ಮ ಬದುಕೂ ನಿಲ್ಲುತ್ತದೆ. ಅದೇ ಸಂಬಂಧ ನಟರಾಜನ ನೃತ್ಯಕ್ಕೂ, ನಿಮಗೂ,ಸಮಸ್ತ ಜೀವಲೋಕಕ್ಕೂ ಇರುವುದು. ಈ ಮಾತಿನಿಂದ ನಾವೆಲ್ಲರೂ ಬದುಕಿರುವುದು ಅವನ ಭಿಕ್ಷೆಯಿಂದಲೇ ಎಂಬುದು ಸ್ಪಷ್ಟವಾಗುತ್ತದೆ.

ಜೀವಲೋಕವೆಲ್ಲವೂ ನಾಟ್ಯಮಯ
ಒಂದು ದೃಷ್ಟಿಯಿಂದ ನೋಡಿದರೆ ಲೋಕದ ಎಲ್ಲ ನಡೆಯೂ, ಭಾವವೂ ನಾಟ್ಯದ ಭಾವಗಳೇ. ನಮಗೆ ಸಂತೋಷವಾದಾಗ ಅದು ಮುಖ ಮೈಗಳಲ್ಲಿ ಪ್ರಕಟವಾಗುತ್ತದೆ, ಹೀಗೆಯೇ ದುಃಖ, ದೈನ್ಯ, ಕಾರುಣ್ಯ, ಹಾಸ್ಯ, ಭಯ ಇತ್ಯಾದಿ ಎಲ್ಲಾ ಭಾವಗಳೂ ನಮ್ಮ ಮೇಲೆ ತಮ್ಮ ಅಚ್ಚೊತ್ತುತ್ತದೆ. ಇವೆಲ್ಲವುಗಳನ್ನೂ, ಇವಕ್ಕೆ ಮೀರಿದ ಅಲೌಕಿಕ ಅನುಭವಗಳನ್ನೂ ಸಕ್ರಮವಾಗಿ ಹೆಣೆದು ಪ್ರದರ್ಶಿಸಿದರೆ ಅದೊಂದು ಕಲೆಯಾಗುತ್ತದೆ. ಸೃಷ್ಟಿಯ ಈ ಎಲ್ಲಾ ಭಾವ ವೈವಿದ್ಯದ ಹಿಂದೆ ಕಲಾನಾಥನಾದ, ಸೃಷ್ಟೀಶನಾದ ಪರಮೇಶ್ವರನ ಆಶಯವಿದೆ. ಅವನ ಚೈತನ್ಯ ಕೆಲಸ ಮಾಡದಿದ್ದರೆ ಎಲ್ಲವೂ ಜಡ. ನಾವು, ನಮ್ಮನ್ನು ಹೊತ್ತ ಈ ಸೃಷ್ಟಿಯೆಲ್ಲವೂ ಜೀವಂತವಾಗಿ ಮೆರೆಯಬೇಕಾದರೆ ಅದರ ಹಿಂದೆ ಆ ನಟೇಶನ ನಿತ್ಯನರ್ತನವಿದೆ ಎಂಬುದು ಈ ದೇಶದ ಮಹರ್ಷಿಗಳ ದರ್ಶನ.

.
ಮಹಾದೇವನ ವಿಶ್ವನಾಟ್ಯ
ನಂದಿಕೇಶ್ವರ ವಿರಚಿತ ಅಭಿನಯ ದರ್ಪಣ ಎಂಬ ಗ್ರಂಥವು ಪರಶಿವನ ನಾಟ್ಯದ ವ್ಯಾಪ್ತಿಯನ್ನು ಹೀಗೆ ಚಿತ್ರಿಸುತ್ತದೆ-
ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಮ್
ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್||
ಒಂದು ನಾಟ್ಯದಲ್ಲಿ ನಾಲ್ಕು ಬಗೆಯ ಅಭಿನಯವಿರುತ್ತದೆ- ಆಂಗಿಕ-ಎಂದರೆ ದೇಹದ ಅಂಗಾಂಗಗಳ ಹಾವ, ಚಲನೆ. ವಾಚಿಕ- ಮಾತು, ಸಂಗೀತ ಇತ್ಯಾದಿ ಅಭಿನಯ, ಆಹಾರ್ಯ-ನಟನು ತೊಡುವ ವೇಷಭೂಷಗಳೇ ಮೊದಲಾದ ಅಲಂಕಾರಗಳು. ಸಾತ್ವಿಕ- ಯಾವ ರಸವನ್ನು ಅಭಿವ್ಯಕ್ತಗೊಳಿಸಲು ಈ ಎಲ್ಲಾ ಅಭಿನಯಗಳು ಹೊರಟಿವೆಯೋ ಆ ಪ್ರಧಾನವಾದ ರಸಭಾಗವೇ ಸಾತ್ವಿಕ ಎಂದಿರುವುದು. ಮೇಲಿನ ಶ್ಲೋಕದ ಅಭಿಪ್ರಾಯದಂತೆ- ಇಡೀ ಬ್ರಹ್ಮಾಂಡವೇ ಶಿವನ ಆಂಗಿಕ ಅಭಿನಯವಂತೆ. ಇಡೀ ವಿಶ್ವದ ಎಲ್ಲಾ ಕ್ರಿಯಾಕಲಾಪಗಳೂ ಅವನ ಆಂಗಿಕ ಅಭಿನಯದ ವ್ಯಾಪ್ತಿ. ಶಬ್ದಪ್ರಪಂಚವೆಲ್ಲವೂ ಅವನ ವಾಚಿಕ ಅಭಿನಯವಂತೆ. ಚಂದ್ರ- ನಕ್ಷತ್ರಗಳೆಲ್ಲವೂ ಅವನ ವಿಶ್ವನಾಟ್ಯದ ಅಲಂಕಾರವಂತೆ. ಅಂತಹ ರಸಸ್ವರೂಪಿಯಾದ ಪರಶಿವನಿಗೆ ನಮಸ್ಕಾರ ಎಂದಿದ್ದಾರೆ. ಅಂದರೆ ಅವನ ಆಶಯವೇ ಹೊರಪಡಬೇಕಾದ ಪ್ರಧಾನ ರಸ.

ಪಂಚಭೂತ ಪ್ರಭವೇ ನಮಃ
ಪಂಚಭೂತಗಳಿಂದ ಈ ಸೃಷ್ಟಿಯಾದುದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಇದು ಮೇಲ್ನೋಟದ ವಿಷಯ.ಈ ಪಂಚಭೂತ ತತ್ತ್ವಗಳು ವಾಸ್ತವವಾಗಿ ಜಡವೇ. ಜೀವನದ ಮೂಲದಲ್ಲಿ ಬೆಳಗುತ್ತಿರುವ ದೇವ ದೇವನಿಂದಲೇ ಇವು ಚೈತನ್ಯವನ್ನು ಪಡೆದು ಕ್ರಿಯಾಶೀಲಗೊಳ್ಳುತ್ತವೆ. ಆ ಪಂಚ ಭೂತಗಳ ಹಿಂಬದಿಯ ಚೈತನ್ಯವೇ ನಟರಾಜ. ಅವನು ಪಂಚಭೂತಗಳ ಪ್ರಭುವಾಗಿ ಅವುಗಳಲ್ಲಿ ಅನುಪ್ರವೇಶ ಮಾಡಿದಾಗಲೇ ವಿಶ್ವವೆಲ್ಲವೂ ಚೈತನ್ಯಮಯ. ಅವನು ಅರ್ಧನಾರೀಶ್ವರನಾಗಿ ತನ್ನ ದೇಹದ ಎಡಪಾರ್ಶ್ವದಲ್ಲಿ ಪಾರ್ವತಿಯನ್ನು ಧರಿಸಿ ಅವಳಲ್ಲಿ ಒಂದಾಗಿ ಜಗತ್ತಿನ ಸೃಷ್ಟಿಯನ್ನೂ, ತನ್ನಲ್ಲಿ ಅವಳನ್ನೂ ಒಂದಾಗಿಸಿ ಜಗತ್ತಿನ ಲಯವನ್ನೂ ಮಾಡುತ್ತಿರುವ ದೇವನಾಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ನಿತ್ಯಶಾಶ್ವತನಾದ ಪರಮಾತ್ಮಜ್ಯೋತಿಯೇ ಪರಮಶಿವ ನಟರಾಜಸ್ವಾಮಿ.

ಚಿದಂಬರ ನಟರಾಜ
ನಮ್ಮ ಶರೀರದಲ್ಲಿ ಹೃದಯಮಧ್ಯ ಸ್ಥಾನವನ್ನು ಚಿದಂಬರ ಎಂದು ಜ್ಞಾನಿಗಳು ಗುರುತಿಸಿದ್ದಾರೆ- ಚಿದಂಬರಂತು ಹೃನ್ಮಧ್ಯಂ ಎಂಬುದಾಗಿ. ಆ ಪ್ರದೇಶದಲ್ಲಿ ಪರಶಿವನು ನಟರಾಜನಾಗಿ ಶುದ್ಧಜ್ಞಾನಮಯವಾದ ಬೆಳಕಿನ ರೂಪವನ್ನು ತಳೆದು ನವ ವಿಧವಾದ ತಾಂಡವ ನೃತ್ಯವನ್ನು ಮಾಡುತ್ತಾ ಮಧ್ಯನಾಡಿಯಲ್ಲಿ ಪ್ರಕಾಶಮಯನಾಗಿ ಬೆಳಗುತ್ತಾನೆ ಎಂದು ಅವನನ್ನು ನಿತ್ಯದಲ್ಲೂ ದರ್ಶನ ಮಾಡುತ್ತಿರುವ ಯೋಗಿಗಳು ಸಾರುತ್ತಾರೆ. ಅಲ್ಲಿ ಪಂಚ ಸಭೆಯಲ್ಲಿ ಅವನ ನರ್ತನವು ನಡೆಯುತ್ತದೆ ಎಂದೂ ಆ ಪಂಚ ಸಭೆಯನ್ನು- ಚಿತ್ಸಭಾ, ದೇವಸಭಾ,ನಾಟ್ಯಸಭಾ, ಕನಕ ಸಭಾ ಮತ್ತು ರಾಜಸಭಾ ಎಂದು ಗುರುತಿಸಿದ್ದಾರೆ. ಅವನ ನವ ತಾಂಡವಗಳು ಕ್ರಮವಾಗಿ ಹೀಗಿವೆಯಂತೆ- ಆನಂದ ತಾಂಡವ, ಕಾಲೀ ನೃತ್ತ, ಗೌರೀ ತಾಂಡವ, ಮುನಿ ನೃತ್ತ, ಸಂಧ್ಯಾತಾಂಡವ, ಸಂಹಾರತಾಂಡವ,ತ್ರಿಪುರ ತಾಂಡವ, ಭುಜಂಗಲಲಿತ ತಾಂಡವ, ಭಿಕ್ಷಾಟನ ತಾಂಡವ. ಈ ಎಲ್ಲಾ ತಾಂಡವಗಳೂ ಭಕ್ತ ಜೀವಿಗಳ ಅನುಗ್ರಹಕ್ಕಾಗಿಯೇ ಸ್ವಾಮಿಯು ನಿತ್ಯನಿರಂತರವಾಗಿ ಮಾಡುತ್ತಿರುವನು. ಜೈಮಿನಿಯೇ ಮುಂತಾದ ಮಹರ್ಷಿಗಳು ತಮ್ಮ ಅಂತರಂಗದಲ್ಲಿ ಶಂಭುವಿನ ಆ ನವ ತಾಂಡವಗಳನ್ನೂ ನೋಡುತ್ತಾ ತಮ್ಮ ಅಸ್ತಿತ್ವವನ್ನೇ ಮರೆತು ಕೇವಲ ಆನಂದರಸದಲ್ಲಿ ತನ್ಮಯರಾದರು ಎಂದು ಜ್ಞಾನಿಗಳು ಆ ತಾಂಡವಗಳನ್ನು ಕೊಂಡಾಡುತ್ತಾರೆ.

ಸ್ವರೂಪಜ್ಞಾನ ಮೂಡಿಸುವ ಮೂರ್ತಿ
ಪ್ರಸಿದ್ಧವಾದ ನಟರಾಜ ಮೂರ್ತಿಯಲ್ಲಿ ನಾವು ಕಾಣುವ ಚಿತ್ರ ಹೀಗಿದೆ- ತನ್ನ ಸ್ವ ಸ್ವರೂಪವನ್ನು ಮರೆತು ಅಸುರನಾಗಿರುವ ಆಪಸ್ಮಾರನನ್ನು ತನ್ನ ಬಲಪಾದದಿಂದ ಮೆಟ್ಟಿದ್ದಾನೆ. ಮೆಟ್ಟಿರುವುದು ಮೂಲಾಧಾರ ಚಕ್ರದಿಂದ ಕಂಠಪರ್ಯಂತವಾದ ಪ್ರಕೃತಿಯ ಸ್ಥಾನವನ್ನು. ಮರೆವಿನ ಜಾಗವನ್ನು. ಆ ಜಾಗವನ್ನು ಮೆಟ್ಟಿದಾಗ ಆ ಅಸುರನಿಗೆ ತನ್ನ ಸ್ವರೂಪದ ಸ್ಮರಣೆ ಉಂಟಾಗಿ ಸಂತೋಷದಿಂದ ನಟರಾಜನನ್ನೇ ನೋಡುತ್ತಿದ್ದಾನೆ. ಈ ಚಿತ್ರವನ್ನು ನಟರಾಜಸ್ವಾಮಿಯ ಆನಂದ ತಾಂಡವದ ಚಿತ್ರಗಳಲ್ಲಿ ನಾವು ನೋಡಿ ಆನಂದಿಸಬಹುದು. ಒಂದು ದೃಷ್ಟಿಯಿಂದ ನಾವೆಲ್ಲರೂ ಅವನನ್ನು ಮರೆತ ಆಪಸ್ಮಾರರೇ. ಅವನ ಪಾವನಪಾದವು ನಮ್ಮಮೇಲೂ ಸೊಂಕಲಿ, ನಮ್ಮ ವಿಸ್ಮರಣೆಯೂ ನೀಗಿ ನಮ್ಮೆಲ್ಲರಲ್ಲೂ ಬೆಳಗುತ್ತಿರುವ ಆ ಸ್ವಾಮಿಯ ಸ್ಮರಣೆ ಉಂಟಾಗುವಂತೆ ಆಗಲಿ ಎಂದು ಈ ಮಹಾಶಿವರಾತ್ರಿಯ ಮಂಗಳ ಪರ್ವದಂದು ಅವನನ್ನು ಪ್ರಾರ್ಥಿಸೋಣ.