ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಚೈತ್ರಮಾಸದ ಶುಕ್ಲಪಕ್ಷದ ನವಮಿತಿಥಿಯು ಸನಾತನ ಭಾರತೀಯ ಎಲ್ಲಾ ಆಸ್ತಿಕರಿಗೂ ಅತ್ಯಂತ ಹೆಮ್ಮೆಯ ಮತ್ತು ತೃಪ್ತಿದಾಯಕವಾದ ದಿನ. ಏಕೆಂದರೆ ಅದು ಮರ್ಯಾದಾ ಪುರುಷೋತ್ತಮನಾಗಿ, ದಶರಥನ ನಂದನನಾಗಿ, 'ಶ್ರೀರಾಮಚಂದ್ರ' ಎಂಬ ಪದಭೂಷಿತನಾಗಿ ಭಗವಂತ ಧರೆಗೆ ಅವತರಿಸಿದ ಪಾವನಪರ್ವ. ಈ ದಿನ 'ರಾಮನವಮೀ' ಎಂಬುದಾಗಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆ ದಿನ ರಾಮನನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ವಿವಿಧ ಬಗೆಯಲ್ಲಿ ಅವನನ್ನು ಸ್ತುತಿಮಾಡಿ ಸಂತೋಷಪಡುತ್ತೇವೆ. ಈ ದಿನದಲ್ಲಿ ಅನೇಕ ಮಂತ್ರಗಳ ಪುರಶ್ಚರಣೆ ಇರುತ್ತದೆ; ಅನೇಕ ಬಗೆಯ ಪುಷ್ಪಾಲಂಕಾರಗಳಿರುತ್ತವೆ; ಅನೇಕ ಬಗೆಯ ನೈವೇದ್ಯಗಳು ಸಲ್ಲುತ್ತವೆ. ಹೀಗೆ ರಾಮನನ್ನು ಯಾವೆಲ್ಲ ವಿಧಾನಗಳಿಂದ ತೃಪ್ತಿಪಡಿಸಬಹುದೋ, ಆ ಎಲ್ಲ ವಿಧಾನಗಳನ್ನು ಈ ದಿನ ಬಳಸುತ್ತೇವೆ. ಅದರಿಂದ ನಾವು ತೃಪ್ತಿಪಡುತ್ತೇವೆ ಮತ್ತು ಧನ್ಯರಾಗುತ್ತೇವೆ. ಇಂತಹ ಶ್ರೇಷ್ಠವಾದ ದಿನವೇ ಶ್ರೀರಾಮನವಮಿ. ಈ ದಿನ ನಾವು ಅತ್ಯಂತ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ ವಿಷಯವೆಂದರೆ ರಾಮಮಂತ್ರದ ಮಹಿಮೆ. ರಾಮನ ಹೆಸರೇ ಅತ್ಯಂತ ಪವಿತ್ರವಾದದ್ದು. ಅನೇಕ ಪಾಪಗಳನ್ನು ನಾಶಮಾಡುವಂತಹದ್ದು. ರಾ ಮತ್ತು ಮ ಎಂಬ ಎರಡು ಅಕ್ಷರಗಳಿಂದ ಕೂಡಿದ್ದ ಈ ಪದ ಅತ್ಯಂತ ಮಹತ್ವಪೂರ್ಣವಾದು ಏಕೆ? ಎಂಬುದನ್ನು ಸ್ವಲ್ಪ ವಿವರಿಸುವ ಪ್ರಯತ್ನವಿದಾಗಿದೆ.
ಮಂತ್ರ
'ಮನನಾತ್ ತ್ರಾಣನಾತ್ ಮಂತ್ರಃ ಸರ್ವವಾಚಸ್ಯ ವಾಚಕಃ' ಎಂಬುದು ಉಪನಿಷತ್ತಿನ ಮಾತು. ಅಂದರೆ ಮನನಮಾಡಲು ಯೋಗ್ಯವಾದುದು ಮತ್ತು ನಮ್ಮನ್ನು ರಕ್ಷಣೆ ಮಾಡಲು ಸಮರ್ಥವಾದುದು. ಆ ಕಾರಣದಿಂದ ಅದನ್ನು 'ಮಂತ್ರ' ಎಂಬುದಾಗಿ ಕರೆಯುತ್ತಾರೆ. ಮಂತ್ರಗಳೆಲ್ಲವೂ ವಿಶೇಷ ಅರ್ಥವನ್ನು ಕೊಡುವ, ಋಷಿಗಳ ಉಗ್ರ ತಪಸ್ಸಿನ ಫಲವಾಗಿ ಅಂತರಂಗದಲ್ಲಿ ಗೋಚರವಾದ ದಿವ್ಯವಾದ ಶಕ್ತಿಯನ್ನು ಹೊಂದಿರುವ ಅಕ್ಷರಪುಂಜ. ಅವುಗಳಿಗೆ ಉಚ್ಚಾರಣ ಮಾತ್ರದಿಂದಲೇ ಫಲವನ್ನು ಕೊಡುವ ಶಕ್ತಿಯಿದೆ. ಶ್ರದ್ಧಾಪೂರ್ವಕವಾಗಿ ಆ ಮಂತ್ರ ಯಾರನ್ನು ಉದ್ದೇಶವಾಗಿಟ್ಟುಕೊಂಡು ಬಂದಿದೆಯೋ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಬಳಸುವುದುಂಟು. ಯಾವ ಋಷಿಗಳು ತಮ್ಮ ಅಂತರಂಗದಲ್ಲಿ ರಮಿಸುತ್ತಿರುವ ಯಾವ ಚೈತನ್ಯಶಕ್ತಿಯನ್ನು ಕಂಡು 'ರಾಮ' ಎಂಬುದಾಗಿ ಉದ್ಗಸಿದರೋ, ಅಂತಹ ಶಬ್ದವಿಶೇಷವೇ 'ರಾಮ' ಎಂಬ ಮಂತ್ರವಾಗಿದೆ. ಇದು ಎಂತವರನ್ನು ಉದ್ಧಾರ ಮಾಡಬಲ್ಲ ಮಂತ್ರವಾಗಿದೆ. ಅಷ್ಟೇ ಏಕೆ! ಒಂದು ಮಾತಿದೆ - ಇದನ್ನು ತಿರುಗುಮುರಗಾಗಿ ಹೇಳಿದರೂ ಉದ್ಧಾರಮಾಡುವ ಸಾಮರ್ಥ್ಯವಿದೆ ಎಂಬುದಾಗಿ. ಇದಕ್ಕೆ ಒಂದು ಜಾನಪದ ಕಥೆಯು ಕೂಡ ಇದೆ. ವಾಲ್ಮೀಕಿ ಬೇಡನಾಗಿದ್ದ. ಅವನಿಗೆ ಸರಿಯಾಗಿ ರಾಮ ಎಂದು ಉಚ್ಚರಿಸಲು ಕೂಡ ಗೊತ್ತಿರಲಿಲ್ಲ ಮತ್ತು ಸಾಧ್ಯವಾಗುತ್ತಿರಲಿಲ್ಲ. ನಾರದ ಮಹರ್ಷಿಗಳು ಬಂದು ಅವನಿಗೆ ರಾಮಮಂತ್ರವನ್ನು ಉಪದೇಶಿಸಿದರು. ಆದರೆ ಅದನ್ನು ಹಾಗೆಯೇ ಉಚ್ಚರಿಸಲಾಗದಾಗ 'ಮರ ಮರ' ಎಂಬುದಾಗಿ ಉಚ್ಚರಿಸುವಂತೆ ಹೇಳಿದರು; 'ಮರ ಮರ' ಎಂದು ಉಚ್ಚರಿಸಿದ ವಾಲ್ಮೀಕಿ. ಅದು ಕೊನೆಯಲ್ಲಿ 'ರಾಮ ರಾಮ' ಎಂದಾಯುತು ಎಂದು. ಆದ್ದರಿಂದ ಇಂತಹ ವಿಶೇಷ ಅರ್ಥವನ್ನು ಕೊಡುವಂತಹ ರಾಮಮಂತ್ರ ಎಂಥವರನ್ನೂ ಉದ್ಧರಣ ಮಾಡಬಲ್ಲದು; ಹಾಗಾಗಿ ಈ ರಾಮಮಂತ್ರಕ್ಕೆ ಅಷ್ಟು ವಿಶೇಷ.
ರಾಮಮಂತ್ರ
ರಾಮಮಂತ್ರಗಳು ಬಹಳ ಇವೆ.'ರಾ' ಎಂದರೆ ವಿಶ್ವ, ಮ ಎಂದರೆ ಈಶ್ವರ. ಅಂತಹ ವಿಶ್ವೇಶ್ವರನೇ ರಾಮ ಎಂದೂ, ರಮಾ ಎಂಬುವಳಿಂದ ರಮಿಸಲ್ಪಡುವವನು ರಾಮ ಎಂದೂ, ರ ಎಂದರೆ ಲಕ್ಷ್ಮೀ, ಮ ಎಂದರೆ ಈಶ್ವರ. ಅಂತಹ ಲಕ್ಷ್ಮೀಪತಿಯೇ ರಾಮ. ಬ್ರಹ್ಮಾದಿ ದೇವತೆಗಳನ್ನು ಸೂಚಿಸುವ ಶಬ್ದ ಎಂಬುದಾಗಿ ಉಪನಿಷತ್ತು ಸಾರುತ್ತದೆ. 'ಬ್ರಹ್ಮಾದಿ ದೇವತಾನಾಂ ವಾಚಕೋ ಮಂತ್ರಃ' - ಅಂದರೆ ಈ ರಾಮ ಎಂಬ ಮಂತ್ರವು. ರಾಮದೇವತೆಯನ್ನೂ ಸೂಚಿಸುವ ಶಬ್ದವಾಗಿದೆ. ಆದ್ದರಿಂದ ರಾಮ ಮಂತ್ರವನ್ನು ಜಪಿಸಿದವನು ರಾಮಭಾವವನ್ನು ಪಡೆಯುತ್ತಾನೆ. ಈ ಮಂತ್ರದಿಂದ ರಾಮನನ್ನು ಚಿಂತಿಸುತ್ತಾ ಚಿಂತಿಸುತ್ತಾ ಹೋದರೆ ಕೊನೆಗೆ ಅವನು ರಾಮನೇ ಆಗುತ್ತಾನೆ. 'ಓಂ ರಾಮಾಯ ನಮಃ, ಓಂ ರಾಮಚಂದ್ರಾಯ ನಮಃ, ಓಂ ರಾಮಭದ್ರಾಯ ನಮಃ, ಶ್ರೀರಾಮ ಜಯ ರಾಮ ಜಯ ಜಯ ರಾಮ' ಇತ್ಯಾದಿ ಮಂತ್ರಗಳಲ್ಲಿ ರಾಮ ಎಂಬ ಶಬ್ದವೇ ಇದೆ. ರಾಮ ಎಂಬ ಶಬ್ದದ ಮಹಿಮೆಯನ್ನು ಹೇಳಲೆಂದೇ ರಾಮತಾಪಿನೀ ಉಪನಿಷತ್ತು ಎಂಬ ಪ್ರಸಿದ್ಧವಾದ ಉಪನಿಷತ್ ಇದೆ. ಇಲ್ಲಿ ಅದರ ಬಗ್ಗೆ ವಿಶೇಷವಾದ ವಿವರಣೆಯು ಸಿಗುತ್ತದೆ.
ಶ್ರೀರಾಮನು ದಶರಥ ಪುತ್ರರಾದ ಲಕ್ಷ್ಮಣ, ಭರತ, ಶತ್ರುಘ್ನ ಎಂಬುದಾಗಿ ಮೂವರು ತಮ್ಮಂದಿರನ್ನು ಹೊಂದಿದ್ದಾನೆ. ಇವರೆಲ್ಲರೂ ಕೂಡ ದೇವತಾಂಶ ಸಂಭೂತರೇ ಆಗಿದ್ದಾರೆ. ಅದಕ್ಕೆ ಓಂ ಎಂಬ ಅಕ್ಷರದಲ್ಲಿ ನಾಲ್ಕು ಭಾಗಗಳಿವೆ; ಅಕಾರಕ್ಕೆ ಶತ್ರುಘ್ನ, ಉಕಾರಕ್ಕೆ ಭರತ, ಮಕಾರಕ್ಕೆ ಲಕ್ಷ್ಮಣ ಅರ್ಧಮಾತ್ರಾಕ್ಕೆ ಸ್ವತಃ ಶ್ರೀರಾಮನೇ ಅರ್ಥ ಎಂದು ಆ ನಾಲ್ಕು ಅಕ್ಷರಗಳಿಗೂ ಒಂದೊಂದು ಅರ್ಥವಿದೆ ಎಂದು ಉಪನಿಷತ್ತು ಸಾರುತ್ತದೆ.
ರಾಮಶಬ್ದದ ಅರ್ಥವಿಸ್ತಾರ
ರಾ ಎಂದರೆ ರಾತಿ, ವಿತರತಿ, ಅವರವರ ಕರ್ಮಾನುಸಾರ ಯಾರು ಫಲವನ್ನು ಕೊಡುತ್ತಾನೋ ಅವನಿಗೆ 'ರಾಮ' ಎಂಬುದಾಗಿ ಕರೆಯುತ್ತಾರೆ. ರಾವಣಾದಿ ರಾಕ್ಷಸರು ಯಾರಿಂದ ಮರಣ ಹೊಂದಿದ್ದಾರೋ ಅವನನ್ನು 'ರಾಮ' ಎಂಬುದಾಗಿ ಕರೆಯುತ್ತಾರೆ. ಹೇಗೆ ರಾಹು ಬಂದಾಗ ಸೂರ್ಯನಿಗೂ ಚಂದ್ರನಿಗೂ ಒಂದು ಗ್ರಹಣ ಏರ್ಪಟ್ಟು ಅವರು ಕಲಾಹೀನರಾಗುತ್ತಾರೋ, ಹಾಗೆ ರಾಮನು ಮನುಷ್ಯರೂಪದಲ್ಲಿ ಬಂದು ರಾವಣಾದಿ ರಾಕ್ಷಸರನ್ನು ತೇಜೋಹಿನರನ್ನಾಗಿ ಮಾಡುತ್ತಾನೆ. ಆದ್ದರಿಂದ ಆತ 'ರಾಮ'. 'ರಮತೇ, ಶೋಭತೇ' - ಜ್ಞಾನ ವೈರಾಗ್ಯ ಐಶ್ವರ್ಯಗಳಿಂದ ಯಾರು ಸಂಪನ್ನನಾಗಿದ್ದಾನೋ ಅಂತವನನ್ನು ರಾಮ ಎಂಬುದಾಗಿ ಕರೆಯಬೇಕು ಎಂಬಿತ್ಯಾದಿ ವಿವರಣೆಗಳು ಕೂಡ ಈ ರಾಮ ಶಬ್ದಕ್ಕೆ ಕಂಡುಬರುತ್ತವೆ.
ಶ್ರೀರಂಗ ಮಹಾಗುರುಗಳು ರಾಮನ ಬಗ್ಗೆ ಒಂದು ವಿವರಣೆಯನ್ನು ನೀಡಿದ್ದನ್ನು ನಾವಿಲ್ಲಿ ಸಂದರ್ಭಕ್ಕೆ ಉಚಿತವಾಗಿ ನೆನಪಿಸಿಕೊಳ್ಳಬಹುದು. "'ರಾಮ' ಎನ್ನುವ ಶಬ್ದವೇ ಜೋಗಿಹೃದಯದಲ್ಲಿ ಜ್ಞಾನಿಗಳ ಹೃದಯದಲ್ಲಿ ರಮಿಸಲು ಯೋಗ್ಯನಾದವನು ಎಂಬ ಅರ್ಥವನ್ನು ಕೊಡುತ್ತದೆ. ರಾಮ ಎಂಬ ಹೆಸರನ್ನು ಪಡೆದ ಸ್ತ್ರೀಯು ಪತಿಯೊಡನೆ ರಮಿಸುವಂತೆ ಜೀವವು ತನ್ನ ದೇವನೊಡನೆ ಒಂದಾಗಿ ಸೇರಿ ಪರಮಾತ್ಮನಲ್ಲಿ ಅಂದರೆ ಪರಮಪುರುಷನಲ್ಲಿ ರಮಿಸುವುದಾದರೆ ಹಾಗೆ ರಮಿಸಲು ಯೋಗ್ಯನಾದ ದೇವನೇ ರಾಮ, ಪರಮಪುರುಷನೇ 'ರಾಮ'ಪ್ಪ" ಎಂಬುದಾಗಿ.
ರಾಮಮಂತ್ರೋಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ?
ರಾಮನ ಮಂತ್ರದಿಂದ ಮಾಡುವ ಉಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ ಎಂಬ ಸಂಶಯವಿದೆ. ಇದಕ್ಕೆ ಹೀಗೆ ವಿಚಾರ ಮಾಡಬಹುದು, ಮಂತ್ರರಾಮಾಯಣ ಮತ್ತು ರಾಮತಾಪಿನೀ ಉಪನಿಷತ್ತಿನಿಂದ ಉದ್ಧೃತವಾಗಿರುವಂತಹ ವೇದಪ್ರತಿಪಾದಿತವಾಗಿದೆ. ಮತ್ತು ನಾರದತಂತ್ರಪ್ರಪಂಚ, ಶಾರದಾತಿಲಕ ಮೊದಲಾದ ತಂತ್ರಗ್ರಂಥಗಳಲ್ಲಿ ರಾಮನ ಉಪಾಸನೆಯನ್ನು ಕಾಣಬಹುದು. ಆದ್ದರಿಂದ ಇದು ತಾಂತ್ರಿಕವಾದ ಮಂತ್ರವೂ ಕೂಡ ಆಗಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಎರಡು ವಿಧದಿಂದಲೂ ರಾಮನ ಉಪಾಸನೆ ವಿಧ್ಯುಕ್ತವಾದುದೇ ಆಗಿದೆ.
ಅದೇನೆ ಇರಲಿ, ಚೈತ್ರ ಶುಕ್ಲ ನವಮಿಯು ಶ್ರೀರಾಮಚಂದ್ರ ಪ್ರಭುವಿನ ಅವತಾರದ ಪುಣ್ಯಪರ್ವ. ಅದನ್ನು ಯಾವ ರೀತಿಯಲ್ಲಿ ಆರಾಧಿಸಿದರೂ ಅದು ಶ್ರೇಷ್ಠವೇ. ಅದರಲ್ಲೂ ವಿಶೇಷವಾಗಿ ಶ್ರೀರಾಮನ ಮಂತ್ರೋಪಾಸನೆ ಅತ್ಯಂತ ಶೀಘ್ರಫಲವನ್ನು ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಪುರಂದರದಾಸರೇ ಮೊದಲಾದ ಜ್ಞಾನಿವರೇಣ್ಯರು "ರಾಮ ಎಂಬ ಎರಡಕ್ಷರದ ಮಹಿಮೆಯನ್ನು ತಾವೇನು ಬಲ್ಲಿರಿ?" ಎಂದು ರಾಮಮಹಿಮೆಯನ್ನು ಕೊಂಡಾಡಿದ್ದಾರೆ. ಇಷ್ಟೆ ಅಲ್ಲ ಎಷ್ಟೋ ಸಾಧುಸಂತರು ರಾಮನನ್ನು ಜಪಿಸಿ, ತಪ್ಪಿಸಿ, ಧ್ಯಾನಿಸಿ, ಪೂಜಿಸಿ ರಾಮಮಯವಾಗಿದ್ದಾರೆ. ಆದ್ದರಿಂದ ಈ ಪರ್ವಕಾಲ ರಾಮಮಂತ್ರದ ಮಹಿಮೆಯನ್ನು ತಿಳಿದು ರಾಮಮಯವಾಗುವುದಕ್ಕೆ ಅತ್ಯಂತ ಶುಭಕಾಲ