Friday, March 12, 2021

ನಾಗರಾಜ್ ಗುಂಡಪ್ಪ. (Nagaraj Gundappa)

     ನಾಗರಾಜ್. ಗುಂಡಪ್ಪ


ನಾಗರಾಜ್ ಗುಂಡಪ್ಪ ಅವರು Computer Science ನಲ್ಲಿ M.Tech. ಪದವೀಧರರು. Artificial Intelligence ಮತ್ತು Flight Control Systems ಕ್ಷೇತ್ರದಲ್ಲಿನ ಸಂಶೋಧನೆಯಿಂದ ವೃತ್ತಿಯನ್ನು ಪ್ರಾರಂಭ ಮಾಡಿದ ಇವರು ಕಾರ್ಪೊರೇಟ್ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. Wipro Technologies ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಇವರು ಅಲ್ಲಿಂದ ಹೊರಬಂದು ಈಗ ತಮ್ಮದೇ Management Consulting ಸಂಸ್ಥೆಯ ಮಾಲೀಕರಾಗಿ ವೃತ್ತಿಯನ್ನು ಮುಂದುವರೆಸಿದ್ದಾರೆ.

ಶ್ರೀಯುತರು ವೃತ್ತಿ ಕ್ಷೇತ್ರದಲ್ಲಿ ಹಲವಾರು ಉದ್ಯಮ ವೇದಿಕೆಗಳಲ್ಲಿ ಲೇಖನಗಳನ್ನು ಪ್ರಕಟವಾಗಿವೆ, ವಿಚಾರಗಳನ್ನು ಮಂಡಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಶ್ರೀಯುತರು ಭಾರತೀಯ ಸಂಸ್ಕೃತಿಗೆ ಸಂಬಂಧ ಪಟ್ಟಂತೆ, ಸಾಧಕ, ಶೋಧಕರಾಗಿ ಪ್ರಾರಂಭಿಸಿ ಈಗ ಬೋಧನೆಯ ರೂಪದಲ್ಲಿಯೂ ಸಂಸ್ಕೃತಿಯ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಂಗ ಮಹಾಗುರುಗಳ ವಿಚಾರಸರಣಿಯನ್ನು ಅವರ ಹಿರಿಯ ಶಿಷ್ಯರಾದ ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು, ಶ್ರೀ ವಿದ್ವಾನ್ ರಾಮಭದ್ರಾಚಾರ್ಯರೇ ಮೊದಲುಗೊಂಡು ಹಲವರ ಆಶ್ರಯದಲ್ಲಿ ಅಧ್ಯಯನ ಮಾಡಿದ್ದಾರೆ. ಆಯುರ್ವೇದ, ಯೋಗ, ಸಾಂಖ್ಯ, ತಂತ್ರಶಾಸ್ತ್ರ, ವೇದಾಂತ, ಧರ್ಮಶಾಸ್ತ್ರ ಮೊದಲಾದ ಶಾಸ್ತ್ರಗಳನ್ನು ಶ್ರೀ ಕೆ.ಎಲ್. ಶಂಕರನಾರಾಯಣ ಜೋಯಿಸರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ. ಶೋಧನೆಯ ನೇರದಲ್ಲಿ, ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ (WAVES – World Association for Vedic Studies, New Jersy) ವರ್ಣಾಶ್ರಮದ ಬಗ್ಗೆ ಪ್ರಬಂಧವನ್ನು ಮಂಡಿಸಿದ್ದಾರೆ.

ಆಷ್ಟಾಂಗ ಯೋಗ ವಿಜ್ಞಾನ ಮಂದಿರರಲ್ಲಿ ಮತ್ತು ಇತರ ಹಲವು ವೇದಿಕೆಗಳಲ್ಲಿ ಪ್ರವಚನ, ಕನ್ನಡ ದಿನಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿದೆ,.ಸಂಸ್ಕೃತಿ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ