Saturday, June 12, 2021

ಷೋಡಶೋಪಚಾರ- 4 ಆವಾಹನ (Shodashopachara - 4 Aahavana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

     

ಷೋಡಶೋಪಚಾರಗಳಲ್ಲಿ ಮೊದಲನೆಯದು ಮತ್ತು ಮುಖ್ಯವಾದುದು ಆವಾಹನೆ. ನಾವು ಯಾವಅವ್ಯಕ್ತವಾದ ಚೈತನ್ಯ ಶಕ್ತಿಯನ್ನು ಆರಾಧಿಸಲು ವ್ಯಕ್ತವಾದ ವಿಷಯವನ್ನು ಅವಲಂಬಿಸುತ್ತೇವೋ ಆಪದಾರ್ಥದಲ್ಲಿ ಆ ಶಕ್ತಿಯು ಬರಬೇಕಾಗುತ್ತದೆ. ಹೇಗೆ ಒಬ್ಬ ಅತಿಥಿ ಮನೆಗೆ ಬಂದಾಗ ಮಾತ್ರ ಅವನಿಗೆಮಾಡುವ ಆದರಾತಿಥ್ಯಗಳು ಅವನಿಗೆ ಸಲ್ಲುತ್ತವೆಯೋ, ಅಂತೆಯೇ ವಿಗ್ರಹದಲ್ಲಿ ಭಗವಂತನ ಶಕ್ತಿಯುಆವಾಹಿತವಾದಲ್ಲಿ ಮಾತ್ರ ಮುಂದಿನ ಉಪಚಾರಗಳಿಗೆ ಅರ್ಥವಿರುತ್ತದೆ. ಇಲ್ಲಿ ಭಗವಂತ ಬಂದುಸಾನ್ನಿಧ್ಯವನ್ನು ಕೊಟ್ಟಾಗ ತಾನೆ ನಾವು ಮುಂದೆ ಕೊಡುವ ಪೂಜೆಯನ್ನು ಸ್ವೀಕರಿಸಲು ಸಾಧ್ಯ? ಈದೃಷ್ಟಿಯಿಂದ ಇದಕ್ಕೆ ಪ್ರಾಶಸ್ತ್ಯವಿದೆ.


ಆವಾಹನೆಯಲ್ಲಿ ಕಾಯಿಕ, ವಾಚಿಕ ಮತ್ತು ಮಾನಸಿಕವಾಗಿ ಮೂರರ ಸಹಯೋಗವಿರಬೇಕು. "ತಾವುಬರಬೇಕು, ಬರಬೇಕು" ಎಂದು ಕೈಯನ್ನು ಆಡಿಸಿ, "ಬರಬಾರದಿದ್ದರೆ ಒಳ್ಳೆಯದಿತ್ತು" ಎಂಬ ಧ್ವನಿಬರುವಂತೆ ಮಾತನ್ನು ಆಡಿದರೆ, ಅಥವಾ ಇವೆರಡೂ ಜೊತೆಗೂಡಿ, ಮನಸ್ಸಿನಲ್ಲಿ ಅದಕ್ಕೆ ಅನುಮತಿಇಲ್ಲದಿದ್ದರೂ ಬಂದ ವ್ಯಕ್ತಿಗೆ ಸತ್ಕಾರ ತಲುಪದು. ಅಂತೆಯೇ ಭಗವಂತನನ್ನುಬರಮಾಡಿಕೊಳ್ಳಬೇಕಾದರೂ ಈ ಮೂರರ ಸಾಂಗತ್ಯ ಅತಿಮುಖ್ಯ.ಭಗವಂತನನ್ನು ಆವಾಹಿಸಲು ಪ್ರಧಾನವಾಗಿ ಐದು ಅಥವಾ ಆರು ಸ್ವರೂಪಗಳಿವೆ.ಶ್ರೀಶಂಕರಭಗವತ್ಪಾದರು ಪ್ರತಿಪಾದಿಸಿರುವ ಪ್ರಧಾನವಾದ ಆದಿತ್ಯ, ಗಣಪತಿ, ದುರ್ಗಾ, ಶಿವ ಮತ್ತುವಿಷ್ಣು ಎಂಬ ಪಂಚಾಯತನ ಪೂಜಾವಿಧಾನವು ಇಂದು ಪ್ರಚಲಿತದಲ್ಲಿದೆ. ಇದರ ಜೊತೆಗೆ ಸ್ಕಂದನನ್ನುಸೇರಿಸಿ ಆರು ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಧರ್ಮದ ಚೌಕಟ್ಟಿನಲ್ಲಿ ಅರ್ಥ-ಕಾಮಗಳನ್ನುಪಡೆದು ಮೋಕ್ಷವನ್ನು ಪಡೆಯಲು ಅನುಗುಣವಾದ ಸಾಧನಾಮಾರ್ಗಗಳು ಈ ಆರು. ಭಕ್ತರಇಷ್ಟದೇವರು, ಕುಲದೇವರು ಅಥವಾ ಅವರವರ ಪ್ರಕೃತಿಗೆ ಹೊಂದಿಕೊಳ್ಳುವಂತಹ ಸಾಧನಾಮಾರ್ಗದಲ್ಲಿ ಭಗವಂತನ ಸ್ವರೂಪವನ್ನು ಭಾವಿಸಿದರೆ ನಿರ್ದಿಷ್ಟಮಾರ್ಗವನ್ನು ಸುಲಭವಾಗಿಕ್ರಮಿಸಬಹುದು. ಹಾಗಾಗಿ ಆರಾಧಕರು, ಈ ಅಂಶಗಳನ್ನು ಬಲ್ಲವರಿಂದ ತಿಳಿದು ಆವಾಹಿಸಬೇಕು. ಆಸ್ವರೂಪವನ್ನು ವಿಗ್ರಹ, ಕಲಶ ಮೊದಲಾದ ಸ್ಥಾನಗಳಲ್ಲಿ ಆವಾಹಿಸಬೇಕು.ಆಯಾ ದೇವರಿಗೆ ಸಂಬಂಧಪಟ್ಟ ಮಂತ್ರ ಮತ್ತು ಭಾವದಿಂದ ಆವಾಹಿಸಬೇಕು. "ನಾನುಪೂಜಿಸಬೇಕೆಂದಿರುವ ವಿಗ್ರಹದಲ್ಲಿ ಬಂದು, ಸಾನ್ನಿಧ್ಯವನ್ನು ಕೊಟ್ಟು, ಸಮಾಪ್ತಿಯ ತನಕ ಇಲ್ಲೇಇದ್ದು, ಸಂದರ್ಭಕ್ಕೆ ಅನುಗುಣವಾಗಿ ಸಂಕೋಚ ಮತ್ತು ವಿಕಾಸ ಎರಡನ್ನೂ ಪಡೆದು, ಸುಪ್ರಸನ್ನನಾಗಿಬಂದು ನನ್ನನ್ನು ಅನುಗ್ರಹಿಸು" ಎಂಬ ಆರು ಮುದ್ರೆಗಳೊಂದಿಗೆ ಭಗವಂತನನ್ನು ಭಾವಿಸುವ ವಿಧಾನವೇಆವಾಹನೆ.


ಸೂಚನೆ : 12/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.