Saturday, June 5, 2021

ಷೋಡಶೋಪಚಾರ- 3 (Shodashopachara - 3)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ನದಿಯ ನೀರು ಸಮುದ್ರಕ್ಕೆ ಸೇರುವಂತೆ ಪ್ರತಿಯೊಬ್ಬ ಜೀವಿಯೂ ತನ್ನ ಜೀವನಯಾತ್ರೆಯನ್ನು ಮುಗಿಸಿಭಗವಂತನಲ್ಲೇ ಸೇರಬೇಕು. ನದಿಯ ನೀರನ್ನು ಸಮುದ್ರವು ಅಷ್ಟು ಸುಲಭವಾಗಿಸೇರಿಸಿಕೊಳ್ಳುವುದಿಲ್ಲ. ಆ ನೀರು ಸಮುದ್ರದ ನೀರಿನ ತನವನ್ನು ಪಡೆಯುವ ತನಕ ಸಮುದ್ರದಿಂದಹೊರಗೆ ಇರಬೇಕಾಗುತ್ತದೆ. ಯಾವಾಗ ಅದು ಶುದ್ಧವಾಗಿ ತನ್ನ ನದೀಜಲತ್ವವನ್ನುಕಳೆದುಕೊಳ್ಳುತ್ತದೆಯೋ ಆಗ ಅದು ಸಮುದ್ರವನ್ನು ಸೇರುತ್ತದೆ. ಅದಕ್ಕೆ ಹೇಗೆ ನದೀಜಲದಶುದ್ಧೀಕರಣ ಪ್ರಕ್ರಿಯೆ ಇದೆಯೋ ಅಂತೆಯೇ ಈ ಜೀವವು ದೇವಭಾವವನ್ನು ಪಡೆಯಲು ಶುದ್ಧತೆಯಪ್ರಕ್ರಿಯೆ ಬೇಕು. ಇದಕ್ಕಾಗಿ ನಮ್ಮ ಹಿರಿಯರು ತಂದ ವ್ಯವಸ್ಥೆಯೇ ಉಪಚಾರ ಅಥವಾ ಪೂಜೆ.ನಾವು ಮಾಡುವ ಪೂಜೆಯು ನಮ್ಮಲ್ಲಿ ದೇವತ್ವವನ್ನು ಅಥವಾ ಭಗವದ್ಭಾವವನ್ನುತಂದುಕೊಡಬೇಕು. ಯಾವಾಗ ನಾವು ಒಂದು ವಿಷಯವನ್ನು ಭಾವಿಸುತ್ತಾ ಹೋಗುತ್ತೇವೋಕಾಲಕ್ರಮದಲ್ಲಿ ಅದೇ ಭಾವವನ್ನು ಪಡೆಯುತ್ತೇವೆ('ತ್ವಾಂ ಚಿಂತ ಮರ್ಚಯನ್ ತ್ವನ್ಮಯತಾಂ ಪ್ರಪನ್ನಃ'). ಭಗವದ್ಭಾವವು ನಮ್ಮನ್ನು ಆವರಿಸುತ್ತಾ ಹೋದಂತೆ ನಮ್ಮ ಜೀವಭಾವವು ತಾನಾಗಿಯೇ ಕಳಚುವುದು.ಹೀಗೆ ಭಾವಿಸುವ ವಿಧಾನಗಳನ್ನೇ ಉಪಚಾರ ಎನ್ನುತ್ತೇವೆ. ಉಪಚಾರಗಳಲ್ಲಿ ಅನೇಕಪ್ರಕಾರಗಳಿವೆ.ಚತುಃಷಷ್ಟಿ(೬೪)ಉಪಚಾರ, ಅಷ್ಟಾದಶೋಪಚಾರ(೧೮), ಷೋಡಶೋಪಚಾರ(೧೬), ದಶೋಪಚಾರ(೧೦),ಪಂಚೋಪಚಾರ(೫) ಎಂದೆಲ್ಲಾ ಬಗೆಗಳಿವೆ. ಇವುಗಳಲ್ಲಿ ಷೋಡಶೋಪಚಾರಗಳ ಬಗ್ಗೆ ಇಲ್ಲಿವಿವರಿಸಲಾಗುತ್ತದೆ.


"ಆಸನ, ಸ್ವಾಗತ, ಪಾದ್ಯ, ಅರ್ಘ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ,ಪುಷ್ಪ, ಧೂಪ, ದೀಪ, ನೈವೇದ್ಯ, ವಂದನ, ಅರ್ಚನ ಎಂದು ಒಂದು ಬಗೆಯ ಷೋಡಶೋಪಚಾರ.ಇನ್ನು ಕೆಲವು ಕಡೆ ೧.ಆವಾಹನ, ೨.ಆಸನ, ೩.ಪಾದ್ಯ, ೪.ಅರ್ಘ್ಯ, ೫.ಆಚಮನ, ೬.ಸ್ನಾನ, ೭.ವಸ್ತ್ರ೮.ಉಪವೀತ, ೯.ಗಂಧ, ೧೦.ಪುಷ್ಪಮಾಲಾ ೧೧.ಧೂಪ, ೧೨.ದೀಪ, ೧೩.ನೈವೇದ್ಯ ೧೪.ತಾಂಬೂಲ ೧೫.ಪ್ರದಕ್ಷಿಣೆ ೧೬.ಪುಷ್ಪಾಂಜಲಿ" ಎಂಬುದಾಗಿ ಇನ್ನೊಂದು ವಿಧಾನವಿದೆ. ಇವುಗಳಲ್ಲಿ ಎರಡನೆಯವಿಧಾನ ಹೆಚ್ಚು ರೂಢಿಯಲ್ಲಿರುವುದರಿಂದ ಅದನ್ನು ಇಲ್ಲಿ ವಿವರಿಸುತ್ತೇನೆ.ನಮ್ಮ ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವಾಗ "ಬನ್ನಿ, ಕುಳಿತುಕೊಳ್ಳಿ" ಎಂದು ಹೇಳಿ ಅವರಿಗೆ ಕೈಕಾಲನ್ನು ತೊಳೆಸಿ, ಅನಂತರ ಅವರಿಗೆ ವಸ್ತ್ರದಿಂದ ಅಲಂಕರಿಸಿ, ಊಟೋಪಚಾರ ಮಾಡುತ್ತೇವೆ. ಆಗಬಂದ ಅತಿಥಿಯು ಸಂತೋಷದಿಂದ ಹರಸುತ್ತಾನೆ. ಅಂತೆಯೇ ಮೂರ್ತಿಗಳಲ್ಲಿ ಭಗವಂತನನ್ನುಸತ್ಕರಿಸುವುದರಿಂದ ಅವನನ್ನು ತೃಪ್ತಿಪಡಿಸುವ ಪದ್ಧತಿಯನ್ನು ಷೋಡಶೋಪಚಾರ ಎಂದುಕರೆಯುತ್ತೇವೆ.


ಸೂಚನೆ : 5/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.