೧೯೪೭ರ ನಂತರ ಮೊದಲಬಾರಿಗೆ ಸಂಸತ್ ಭವನದಲ್ಲಿ'ಸೆಂಗೋಲೀನ' ಪುನರ್ ಪ್ರತಿಷ್ಠಾಪನೆಯ ಸುದ್ದಿ ಎಲ್ಲೆಲ್ಲೂ ಹರಡುತ್ತಿದೆ. ಚಾರಿತ್ರಿಕವಾಗಿ ಸೆಂಗೋಲು, ಭಾರತೀಯ ರಾಜಪರಂಪರೆಯ ಅಧಿಕಾರದ ಪ್ರತೀಕ. ಅದರಲ್ಲೂ, ತಮಿಳು ಅರಸರು ಅದಕ್ಕೆ 'ಸೆಂಗೋಲ್' ಎಂದು ನಾಮಧೇಯವಿತ್ತು, ಧರ್ಮ, ಸಮೃದ್ಧಿ ಮತ್ತು ಸಂಪತ್ತಿನ ಚಿಹ್ನೆಯಾಗಿ ಪರಿಗಣಿಸುತ್ತಿದ್ದರು. ತಮಿಳು1 ಮತ್ತು ಸಂಸ್ಕೃತ2 ಸಾಹಿತ್ಯಗಳಲ್ಲಿ ಬಹಳವಾಗಿ ಆದ್ಯಕರ್ತವ್ಯವೆಂದು, ಅಷ್ಟೇಕೆ, ಆತನ ಜೀವನದ ಪರಮೋದ್ದೇಶವೆಂದು ಪರಿಗಣಿಸಲ್ಪಡುತ್ತಿತ್ತು. 'ದಂಡಧರ'3 ಎಂಬ ಪದ ಧರ್ಮಸಂರಕ್ಷಕನಾದ ಕೊಂಡಾಡಲ್ಪಟ್ಟ ಈ 'ಸೆಂಗೋಲ್' ಅಥವಾ 'ಧರ್ಮದಂಡ', ಧರ್ಮದ ಮೂರ್ತವೆತ್ತರೂಪವೆಂದೂ, ಮತ್ತು ಧರ್ಮದ ಸಂರಕ್ಷಣೆಯೇ ರಾಜನ
ಯಮಧರ್ಮರಾಜನ ಮತ್ತೊಂದು ನಾಮಧೇಯವಾದರೂ, ಸಾಮಾನ್ಯವಾಗಿ ಎಲ್ಲ ರಾಜರಿಗೂ ಅನ್ವಯಿಸುತ್ತದೆ. 'ರಾಜನೀತಿಯನ್ನು', 'ದಂಡನೀತಿ'4 ಎಂದೇ ಉಲ್ಲೇಖಿಸುವುದುಂಟು. ಇಷ್ಟೆಲ್ಲ ಇದ್ದರೂ ಸಹ, ದಂಡವನ್ನೇ ಏಕೆ ರಾಜನ ಅಧಿಕಾರದ ಸಂಕೇತವೆಂದು ಪರಿಗಣಿಸಲಾಗುತ್ತದೆಂಬ ಪ್ರಶ್ನೆ, ಸಹಜ. 'ದಂಡ' - ಕತ್ತಿ, ಗದೆ, ಶೂಲ, ಬಿಲ್ಲು ಮೊದಲಾದ ಆಯುಧಗಳ ತುಲನೆಯಲ್ಲಿ ಅಂತಹ ಹೀರಿದಾದುದೇನೂ ಅಲ್ಲ. ಸಾರ್ವಭೌಮತ್ವವನ್ನು ಅರುಹುವ ಚಿನ್ಹೆಗಳಾಗಿ ಛತ್ರ, ಚಾಮರಗಳಿದ್ದರೂ ಸಹ, 'ದಂಡ' ವೇ ಅಧಿಕಾರ ಸೂಚಕ.
ಈ ಸಂಧರ್ಭದಲ್ಲಿ ಶ್ರೀ ಶ್ರೀರಂಗಮಹಾಗುರುಗಳು ಇತ್ತ ನೋಟದ ಮರು ಪರಿಶೀಲನೆ ಅಗತ್ಯ. ಅವರು ರಾಜರ ಧರ್ಮದಂಡವನ್ನು, ನಮ್ಮಲ್ಲೇ ಇರುವ 'ಮೇರುದಂಡ' ಅಥವಾ ಬೆನ್ನುಹುರಿಯನ್ನೊಳಗೊಂಡ 'ಬೆನ್ನುಮೂಳೆ'ಯ ಪ್ರತೀಕವಾಗಿ ಗುರಿತಿಸುತ್ತಾರೆ. 'ನಿಜವಾದ ರಾಜ' ಎರಡು ರಾಜ್ಯಗಳ ಅಧಿಪತಿ - ಸ್ವರ್ಗಕ್ಕೆ ಮತ್ತು ಭೂಭಾಗಕ್ಕೆ5. ಸ್ವರ್ಗದ ರಾಜ್ಯವನ್ನು ಯೋಗಿಗಳು ತಮ್ಮಲ್ಲೇ ಕಾಣುತ್ತಾರೆ. ಅವರುಗಳು, ಒಳ ಧುಮುಕಿ, ಆಳವಾಗಿಮುಳುಗಿ, ತಮಲ್ಲೇ ಇರುವ ಅತೀವ ಆನಂದವನ್ನು ಅನುಭವಿಸುತ್ತಾರೆ. ಮಸ್ತಿಷ್ಕದಲ್ಲಿರುವ ಸಹಸ್ರಾರಸ್ಥಾನವನ್ನು ಪ್ರವೇಶಿಸಿದಾಗ ಮಾತ್ರ, ಈ ಆನಂದದ ಪರಾಕಾಷ್ಠೆಯ ಅನುಭವವೆಂದು ಯೋಗಶಾಸ್ತ್ರಗಳು ಅರುಹುತ್ತವೆ. ಆ ಆನಂದದ ಅನುಭವ6, ಅಮೃತ ಧಾರೆಯಾಗಿ ಕೆಳಹರಿದು7 ಇಂದ್ರಿಯ, ಮನಸ್ಸು,ದೇಹಗಳೆಲ್ಲವನ್ನೂ ಉಣಿಸಿ ತಣಿಸುತ್ತದೆ. ಯೋಗದ ಈ ಪ್ರಕ್ರಿಯೆ, ಆಂತರಿಕವಾಗಿ ಅತೀವ ಆನಂದವನ್ನು ಒದಗಿಸುವುದಲ್ಲದೆ, ಮಾನಸಿಕ ಸಮತೋಲನವನ್ನು ಕಾಪಿಟ್ಟುಕ್ಕೊಂಡು ದೇಹೇಂದ್ರಿಯಗಳಿಗೆ ಭೌತಿಕ ಹೊರಸುಖವನ್ನು ಅನುಭವಿಸಲು ಬೇಕಾದ ಲವಲವಿಕೆಯನ್ನೊದಗಿಸುತ್ತದೆ. ಯಾವ ರಾಜಕುಮಾರ, ಗುರುಗಳ ಮಾರ್ಗದರ್ಶನದಿಂದ, ತನ್ನ ಸಾಧನೆಯಿಂದ, ಯೋಗದ ರಹಸ್ಯಗಳನ್ನು ಅರಿಯುತ್ತಾನೆಯೋ, ಆತ ಸಮಚಿತ್ತತೆ-ಸಮತೋಲನಗಳನ್ನು ಕಾಯ್ದುಕ್ಕೊಂಡು ಒಳ ಸ್ವರ್ಗದ ನಿಜವಾದ ಅಧಿಪತಿ ಮತ್ತು ಭೌತಿಕ ಸುಖವನ್ನನುಭವಿಸಲು ಸಮರ್ಥನಾಗುತ್ತಾನೆ.
ಅಂತಹ ರಾಜಕುಮಾರ ಕಾಲಕ್ರಮದಲ್ಲಿ ರಾಜನಾಗಿ ಅಭಿಷಿಕ್ತನಾಗುತ್ತಾನೆ. ಆತನ ಗುರಿ ಹಾಗೂ ಕರ್ತವ್ಯಗಳು, ತಾನು ಅನುಭವಿಸುವ ಒಳ - ಹೊರ ಆನಂದಗಳನ್ನು ತನ್ನ ಪ್ರಜೆಗಳಿಗೂ ದೊರಕಿಸಿ ಕೊಡುವುದು . ಆತನು ಎತ್ತಿ ಹಿಡಿಯಬೇಕಾದ ಧರ್ಮ ಇದೇ. ಆತನಿಗೆ ಆಧಿಪತ್ಯವನ್ನು ರಾಜಗುರುಗಳು ವಹಿಸಿಕೊಡುವ ಸಮಾರಂಭ, ಆತ ಪಾಲಿಸಬೇಕಾದ ಧರ್ಮದ ಮೂಲ ಮತ್ತು ಅದನ್ನು ನಿವರ್ಹಿಸುವ ವಿಧಿ-ವಿಧಾನಗಳ ನೆನಪನ್ನು ಕೊಡುತ್ತದೆ. ಆತನ ಪರಸೌಖ್ಯದ ಪ್ರಭುತ್ವ, ಆತನ 'ದಮಾ' ಎಂಬ ಇಂದ್ರಿಯ ಸಂಯಮದಮೇಲೆ ಅವಧರಿಸಿದೆ. ಆತನಿಗೆ ವಹಿಸಿಕೊಡುವ ಧರ್ಮದಂಡ ಅಥವಾ ರಾಜದಂಡ, ಮೇರುದಂಡ ಅಥವಾ ಹುರಿಯನ್ನು ಹೊತ್ತ ಬೆನ್ನುಮೂಳೆಯ ಪ್ರತೀಕ. ದಮೆಯಿಂದ ಮಾತ್ರ ಮೇರುದಂಡದಹುರಿಯಲ್ಲಿ ಅಡಗಿರುವ ಸುಷುಮ್ನೆಯ ಆರೋಹಣ ಮತ್ತು ಸಹಸ್ರಾರದಲ್ಲಿ ಹುದುಗಿರುವ ಆನಂದವನ್ನು ಅನುಭವಿಸಲು ಸಾಧ್ಯ. ಆತನ ಮಸ್ತಿಷ್ಕಕದಮೇಲೆ ಬೆಳಗುವ ಶ್ವೇತಚ್ಛತ್ರ, ಮೇರುದಂಡವನ್ನು ನೇರವಾಗಿ ಏರಿ, ತನ್ನ ಹೆಡಯನ್ನು ಅಗಲಿಸಿ ಶಿರಸ್ಸಿನಮೇಲೆ ಓಲಾಡುವ ಕುಂಡಲಿನೀ ಶಕ್ತಿಯ ಪ್ರತೀಕ. ಶ್ವೇತಚ್ಛತ್ರ ಆನಂದಾಮೃತವನ್ನು ಒಸರುವ ಅಧೋಮುಖ ಕಮಲದ ಗುರುತೂ ಹೌದು. ಪುಣ್ಯನದಿಗಳಿಂದ ತಂದ ಮಂತ್ರಪೂತವಾದ ಜಲಗಳಿಂದ ಶಿರಸ್ಸಿನ ಮೇಲಾಗುವ ಅಭಿಷೇಕ ಈ ಅಮೃತಧಾರೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ಭಾರತೀಯ ಪರಂಪರೆಯಲ್ಲಿನ ರಾಜ್ಯಾಭಿಷೇಕ8, 'ಅಧಿಕಾರ' ವರ್ಗಾವಣೆಯ ಕುರುಹಾಗದೆ, ಅರಸರ ಇಹಲೋಕದ ಕರ್ತವ್ಯವನ್ನು ನೆನೆಪಿಸಿಕೊಡುತ್ತದೆ. ರಾಜನು ವಿಷ್ಣುವಿನಂತೆ ತನ್ನ ಪ್ರಜೆಗಳ ಸಂತೋಷ ಆನಂದಗಳನ್ನು ಸುಭದ್ರಪಡಿಸುತ್ತಾನೆ. ಆದುದರಿಂದಲೇ, ರಾಜನನ್ನು 'ಭೂಲೋಕದ ವಿಷ್ಣು'9 ಎಂದು ಪರಿಗಣಿಸಲಾಗುತ್ತದೆ.
ಅರಸ, ಇದನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕಾದರೂ ತರುವುದೆಂತು? ರಾಜ್ಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ, ಅದನ್ನು ಸ್ಥಾಪಿಸುವುದರ ಮೂಲಕ. ಅವುಗಳಿದ್ದರೆ, ಅವುಗಳನ್ನು ಉಳಿಸಿ, ಬೆಳೆಸಿ, ಎತ್ತಿಹಿಡಿಯುವುದರ ಮೂಲಕ. ಯಜ್ಞ ಮತ್ತು ಅದರ ಬೆನ್ನೆಲುಬಾಗಿ, ಎಲ್ಲಾ ಇಷ್ಟಾರ್ಥಗಳನ್ನೂ ಒದಗಿಸಿಕೊಡುವ ತಪಸ್ಸು, ಇವುಗಳ ಸಂರಕ್ಷಣೆ, ಅವನ ಆದ್ಯಕರ್ತವ್ಯ. ಬೇರೆ ದೇಶ - ಕಾಲ-ವರ್ತಮಾನಗಳಲ್ಲಿ, ಈ ಯಜ್ಞ ಮತ್ಯಾವುದಾದರೂ ಆಧ್ಯಾತ್ಮಿಕ ಪದ್ಧತಿ ಅಥವಾ ಪೂಜಾರೂಪ ತಾಳಬಹುದು. ಆತನ ಮೊದಲ ಜವಾಬ್ದಾರಿ, ಯೋಗ, ಆಧ್ಯಾತ್ಮಿಕ ವಿದ್ಯೆಗಳ ವಾರಸುದಾರರರಾದ ಋಷಿಗಳ ಸಂರಕ್ಷಣೆ ಮತ್ತು ಅವರ ಜೀವನ ನಿರ್ವಹಣೆ. ಗುರು-ಶಿಷ್ಯ ಪರಂಪರೆಯನ್ನು ಮಧ್ಯೆ ಛೇದವಾಗದಂತೆ ಚೆನ್ನಾಗಿ ರಕ್ಷಿಸಬೇಕು; ಏಕೆಂದರೆ ಅದರ ಮೂಲಕವೇ ಈ ವಿದ್ಯೆಗಳ ಪರಂಪರಾಗತ ವಹನೆ. ಇದು ಧರ್ಮವನ್ನು ಕಾಪಿಡುತ್ತದೆ.
ಎರಡನೆಯದಾಗಿ, ಪ್ರಜೆಗಳು ತಮ್ಮ ದಿನನಿತ್ಯ ಜೀವನದಲ್ಲಿ ಸಾಕಷ್ಟು ಸಂಯಮ ವಹಿಸಬೇಕು. ಮತ್ತು ಕಾಮ, ಕ್ರೋಧ, ಲೋಭ , ಮದ ಮುಂತಾದುವುಗಳ ಮಾರಕ ಪ್ರಕ್ರಿಯೆಗಳಿಂದ ಧರ್ಮಕ್ಕೆ ಹಾನಿ ಬರದಂತೆ ಎಚ್ಚರ ವಹಿಸಬೇಕು. ಎಲ್ಲರ ಇಹ-ಪರಗಳ ಸುಖ - ಉನ್ನತ ಮಟ್ಟದ ಸೌಖ್ಯಾನುಭವಕ್ಕೋಸ್ಕರ ರಾಜನು, ನಡೆ-ಕಟ್ಟಳೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಚಕ್ರವರ್ತಿಗಳಾದ ರಾಮ- ಯುಧಿಷ್ಟಿರರು, ಪ್ರಜೆಗಳಲ್ಲಿ, ಮನೆಗಳಲ್ಲಿ, ಸಮಾಜದಲ್ಲಿ ಮತ್ತು ರಾಷ್ಟ್ರದಲ್ಲಿ ಧರ್ಮವನ್ನು ಎತ್ತಿಹಿಡಿದು-ಕಾಪಿಡುವುದರಲ್ಲಿ ನಿಷ್ಣಾತರೆಂದು ಪ್ರಸಿದ್ಧಿ. ಅವರುಗಳು, ಅದನ್ನು ಕಟ್ಟುನಿಟ್ಟಾಗಿ ಎಚ್ಚರಿಕೆಯಿಂದ ಜಾರಿಗೊಳಿಸುತ್ತಿದ್ದರು, ತಮ್ಮದೇ ಉದಾಹರಣೆಯ ಮೂಲಕ. ಅಂತರ್ ಧಾರೆಯ ಅಮೃತದಲ್ಲಿ ಮಿಂದವರಾದ ಅವರ ಮನಸ್ಸು, ಮಾತುಕತೆ ಮತ್ತು ವ್ಯವಹಾರ, ಮೃದು -ಮಧುರವಾಗಿ, ಆಕರ್ಷಕವಾಗಿ, ದುರಾಚಾರ-ರಹಿತವಾಗಿರುತ್ತಿತ್ತು. ದಯಾ-ಸಂವೇದನಾಶೀಲರಾಗಿದ್ದರೂ, ಧರ್ಮದ ವಿಷಯ ಬಂದಾಗ, ತಮ್ಮ ಸ್ವಂತದವರಲ್ಲಿಯೂ, ನಿಷ್ಠುರರಾಗಿರುತ್ತಿದ್ದರು. ಆದುದರಿಂದಲೇ ರಾಮರಾಜ್ಯ `ಧರ್ಮರಾಜ್ಯ' ವೆಂದೆನಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತು, ಶ್ರೀರಾಮನನ್ನು 'ಧರ್ಮದ ಮೂರ್ತರೂಪ'ವೆಂದೇ ಪರಿಗಣಿಸಲಾಗುತ್ತದೆ.
ಆದುದರಿಂದ, ಭಾರತದ ಧರ್ಮವನ್ನು ಎತ್ತಿಹಿಡಿಯುವ ಕರ್ತವ್ಯವನ್ನು ನಿಭಾಯಿಸುವ ಹೊಣೆ ಹೊತ್ತ ಸಂಸದೀಯರ ಮಧ್ಯದಲ್ಲಿ ಇತ್ತೀಚೆಗೆ ನಡೆದ ಧರ್ಮದಂಡ ಅಥವಾ ಸೆಂಗೋಲಿನ ಸಂಸ್ಥಾಪನೆ, ಅತ್ಯಂತ ಸೂಕ್ತವಾಗಿದೆ.
ಸೂಚನೆ : 26/05/2023 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ AYVM blogs ಪ್ರಕಟವಾಗಿದೆ.
------------------------------------------------------------------------------------------------------------------------------------------------------------------------
1. ತಿರುಕ್ಕುರಳ್ ೫೪೩. ಅಂದಣರ್ ನೂರ್ಕುಮ್ ಅರತ್ತಿರ್ಕುಮ್ ಆದಿಯಾಯ್ ನಿನ್ರದು ಮನ್ನವನ್ ಕೋಲ್
2. ದೇವೀ ಭಾಗವತ ಪುರಾಣ : : ೧. ೭. ವೀಣಾ ದಂಡಂ ಕಥಮ್ ರಾಜ್ಯಾಮ್ ಕರೋತಿ ಜನಕಹ ಕಿಲ । ಧರ್ಮೇ ನ ವರ್ತತೇ ಲೋಕೋ ದಂಡಶ್ಚೇನ್ನ ಭವೇದ್ಯದಿ
3. ಶಬ್ದಕಲ್ಪದ್ರುಮ: ದಂಡಧರಃ
4. ಶಬ್ದಕಲ್ಪದ್ರುಮ: ದಂಡನೀತಿ:; ತತ್ ಚಾಣಕ್ಯಾದಿ ಪ್ರಣೀತಂ ನೀತಿಶಾಸ್ತ್ರಂ
5. ಋಗ್ವೇದ ೪.. ೧ ಮಮ ದ್ವಿತಾ ರಾಷ್ಟ್ರಮ್ ಕ್ಷತ್ರಿಯಸ್ಯ ವಿಶ್ವಾಯೋರ್ವಿಶ್ವೇ ಅಮೃತಾ ಯಥಾ ನಃ
6. ಷಟ್ಚಕ್ರ ನಿರೂಪಣಂ: ೪೦: ದಶಶತದಳಂ ಪೂರ್ಣಚಂದ್ರಾತಿ ಶುಭ್ರಂ …. ಪ್ರವಿಲಸಿತವಪುಹು ಕೇವಲಾನಂದರೂಪಮ್
7. ಷಟ್ಚಕ್ರ ನಿರೂಪಣಂ: ೪೩: ಸುಧಾ ಧಾರಾ ಸಾರಂ ನಿರವಧಿ ವಿಮುಂಚನ್ನತಿತರಾಮ್
8. ರಾಜ್ಯಾಭಿಷೇಕದ ಈ ಎಲ್ಲ ಅಂಶಗಳನ್ನೊಳಗೊಂಡ ವಿವರಗಳು ವಾಲ್ಮೀಕಿ ರಾಮಾಯಣದ ೬. ೧೩೧. ೬೦ಳಿಂದ ಮುಂದಿನ ಕೆಲ ಸ್ಲೋಕಗಳಲ್ಲಿ ಕಾಣಬಹುದು:
ವಶಿಷ್ಠೋ ವಾಮದೇವಶ್ಚಜಾಬಾಲಿರಥಕಾಶ್ಯಪಹ । ಕಾತ್ಯಾಯನೋಸುಯಜ್ಞಶ್ಚಗೌತಮೋವಿಜಯಸ್ತಥಾ ।।
ಅಭ್ಯಷಿಂಚನ್ನರವ್ಯಾಘ್ರಮ್ ಪ್ರಸನ್ನೇನ ಸುಗಂಧಿನಾ।
ಸಲಿಲೇನ ಸಹಸ್ರಾಕ್ಷಮ್ ವಸವೋ ವಾಸವಂ ಯಥಾ ।।
9. ದೇವಿಭಾಗವತಪುರಾಣಂ: 6.10.24 ; ನಾದೇವಾಂಶೋ ದದಾತ್ಯನ್ನಮ್ ನಾವಿಷ್ಣು: ಪೃಥಿವೀಪತಿ: