Showing posts with label author_bhashyam. Show all posts
Showing posts with label author_bhashyam. Show all posts

Thursday, August 24, 2023

ಜಡಭರತನ ಶ್ರೇಷ್ಠ ಜೀವನಗಾಥೆ (Jadabharatana Srestha Jivanagathe)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಜುಳು ಜುಳು ಮಂಜುಳ ನಾದದಿಂದ ಪ್ರಶಾಂತವಾಗಿ ಹರಿಯುತ್ತಿದ್ದ ನದಿ. ಸುತ್ತಲೂ ಅರಣಿಕರು ವಿಹರಿಸುತ್ತಿದ್ದ ಕಾಡು, ಅದರಲ್ಲಿನ ದುಂಬಿ - ಜೀರುಂಡೆಗಳ ನಾದ. ಹತ್ತಿರದಲ್ಲೇ ಸಪ್ತಋಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮ. ಈ ಪ್ರಶಾಂತ ವಾತಾವರಣದಲ್ಲಿ ಆಗತಾನೆ ಆಹ್ನಿಕ ಧ್ಯಾನಗಳನ್ನು ಮುಗಿಸಿದ ರಾಜರ್ಷಿ ಭರತರು, ದಹರಾಕಾಶದಲ್ಲಿ ಕಂಡು ಅನುಭವಿಸಿದ ಜ್ಞಾನಸೂರ್ಯನ ಪ್ರಕಾಶ- ಪ್ರಶಾಂತತೆಯ ವಿಸ್ತಾರವನ್ನು, ಪ್ರಣವ ನಾದದ ವಿಸ್ತಾರವನ್ನು ಹೊರಪ್ರಕೃತಿಯಲ್ಲೂ ಅನುಭವಿಸುತ್ತ ಇನ್ನೂ ಒಳಅನುಭವದ ಗುಂಗಿನಲ್ಲೇ ಇದ್ದರು. ಈ ಮಧ್ಯೆ, ಈ ವಾತಾವರಣವನ್ನು ಭೇದಿಸಿ ಹೊರಟ ಸಿಂಹದ ಘರ್ಜನೆ. ಹತ್ತಿರದಲ್ಲೇ ಮೇಯುತ್ತಿದ್ದ ತುಂಬು ಗರ್ಭಿಣಿಯಾದ ಒಂದು ಹರಿಣಿ, ಬೆಚ್ಚಿ, ಬೆದರಿ ದಿಕ್ಕು ಕಾಣದೆ ತನ್ನನ್ನು, ತನ್ನ ಒಳಗಿನ ಕಿರು ಜೀವವನ್ನು ಪಾರುಮಾಡಲೋಸುಗ ಶಕ್ತಿಮೀರಿದ ಪ್ರಯತ್ನದಿಂದ ನದಿಯನ್ನು ಹಾರಿ ದಾಟಲು ಉದ್ಯುಕ್ತವಾಯಿತು. ತನ್ನ ಭಾರವನ್ನು ಮತ್ತು ಉದರದಲ್ಲಿದ್ದ ಕಿರಿಯ ಭಾರವನ್ನೂ ದಾಟಿಸಲಾಗದೆ ನೀರಿನಲ್ಲಿ ಬಿದ್ದು ಅಸು ನೀಗಿತು. ಅದೃಷ್ಟವಶಾತ್ ಗರ್ಭದಲ್ಲಿದ್ದ ಮರಿ ಹೊರಬಂದಿತು. ಈ ಘಟನೆಗಳನ್ನು ಇನ್ನೂ ಒಳಗುಂಗಿನಲ್ಲೇ ಇದ್ದ ಆತ್ಮಗುಣಸಂಪನ್ನನಾದ ಋಷಿಯ ಮನಸ್ಸು ಗುರುತಿಸಿ, ದಯೆ ಒಸರಿ, ಕರುಣಾರಸವಾಗಿ ದ್ರವಿಸಿ, ಅವರ ಹೊರ ಇಂದ್ರಿಯಗಳಿಗೆ ಚೈತನ್ಯವನ್ನು ಕೊಟ್ಟು, ನದಿಯಲ್ಲಿ ಧುಮಿಕಿಸಿ ಆ ಕಂದನನ್ನು ಕಾಪಾಡುವಂತೆ ಮಾಡಿತು. ಮರಿಯನ್ನು ಆಶ್ರಮಕ್ಕೆ ತಂದ ಅವರು, ಅದಕ್ಕೆ ಹಾಲುಯ್ದು, ಮೇವುಣಿಸಿ ಸಂರಕ್ಷಿಸಲುದ್ಯುಕ್ತರಾದರು. ಕ್ರಮೇಣ ಬೆಳೆಯುತ್ತಿದ್ದ ಆ ಜಿಂಕೆ , ತನ್ನ ಮಿಂಚಿನ ಕುಡಿನೋಟದಿಂದ, ಚಿಮ್ಮುವ ಹಾರುವಿಕೆಯಿಂದ, ಪ್ರೀತಿಯವರ್ತನೆಯಿಂದ ಅವರ ಕರುಣೆಯನ್ನು ವಾತ್ಸಲ್ಯವಾಗಿ, ಪ್ರೀತಿಯಾಗಿ ಅವರಿಗೇ ತಿಳಿಯದಂತೆ ಮಾರ್ಪಡಿಸಿತು. ತಾನು ದರ್ಭ ಸಂಗ್ರಹಕ್ಕೆ ಹೋದರೂ ಮರಿಯದೇ ಗುಂಗು, ಧ್ಯಾನದಲ್ಲೂ ಕೆಲವೊಮ್ಮೆ ಅದರ ಯೋಚನೆಯೇ! ಪ್ರೀತಿ ಕೊನೆಗೆ ಎಲ್ಲಿಲ್ಲದ ಮೋಹವಾಗಿ ಪರಿಣಮಿಸಿ, ಭಗವಂತನ ಧ್ಯಾನದ ಬದಲಿಗೆ ಜಿಂಕೆಯ ಧ್ಯಾನದಲ್ಲಿ ಪರ್ವ್ಯವಸಾನಗೊಂಡಿತು. ತನ್ನ ಅಂತ್ಯಕಾಲದಲ್ಲೂ ಆ ಹರಿಣದ ನೆನಪಿನಲ್ಲೇ ಋಷಿ ಅಸುನೀಗಿದರು. ಅಂತ್ಯಕಾಲದಲ್ಲಿ ಯಾವ ಚಿಂತೆಯಲ್ಲಿರುತ್ತೇವೆಯೋ ಮರು ಜನ್ಮ ಅದರಲ್ಲೇ ಎಂಬ ಭಗವಂತನ ನಿಯಮದಂತೆ , ಭರತರು ಜಿಂಕೆಯಾಗಿಯೇ ಜನ್ಮ ಪಡೆದರು. ಆದರೂ ಪೂರ್ವಜನ್ಮದ ಸಂಸ್ಕಾರ ಬಲವಾಗಿದ್ದದರಿಂದ, ತನ್ನ ಹಿಂದಿನ ಜನ್ಮದ ನೆನಪು ಪ್ರಖರವಾಗಿಯೇ ಇದ್ದಿತು. ಈ ತಪ್ಪನ್ನು ಮತ್ತೆ ಮಾಡಬಾರದು ಎಂದು ಸಂಕಪಲ್ಪಿಸಿದ ಆ ಋಷಿ ಜಿಂಕೆ, ಒಬ್ಬ ಋಷಿ ಆಶ್ರಮದಲ್ಲಿ ತನ್ನ ಜೀವನವನ್ನು ಕಳೆದು ಮತ್ತೆ ಮಾನವನಾಗಿ ಜನಿಸಿತು. ಹುಟ್ಟಿನಿಂದಲೇ ಆಧ್ಯಾತ್ಮದಲ್ಲೇ ತಲ್ಲೀನರಾಗಿ, ಮಹಾಬುದ್ಧಿವಂತರಾಗಿದ್ದರೂ, ಲೌಕಿಕವಿಷಯಗಲ್ಲಿ ಜಡರಾಗಿ 'ಜಡಭರತ' ಎಂಬ ಬಿರುದು ಪಡೆದರು. ತಂದೆ -ತಾಯಿಯರು ಸ್ವರ್ಗಸ್ಥರಾದ ಬಳಿಕ ಅವರ ಅಣ್ಣ - ತಮ್ಮಂದಿರು ಅವರನ್ನು ಕೂಲಿಯವನಂತೆ ದುಡಿಸಿಕೊಂಡು, ಅಧಮ ಆಹಾರವನ್ನು ಕೊಡುತ್ತಿದ್ದರಂತೆ. ಆದರೂ ಧೃಢಕಾಯರಾಗಿದ್ದ ಇವರು ಒಮ್ಮೆ ಹೊಲದ ಬಳಿಯಲ್ಲಿದ್ದಾಗ, ಕೆಲವು ಬೇಡರು ಕಾಳಿಕಾದೇವಿಗೆ ಬಲಿಕೊಡುವುದಕ್ಕಾಗಿ ಕರೆದೊಯ್ದರಂತೆ. ಒಳ್ಳೆಯ ಆಹಾರ ಸಿಕ್ಕದ ಇವರಿಗೆ ಮೃಷ್ಟಾನ್ನ ಭೋಜನ ಬಡಿಸಿದಾಗ ಆನಂದದಿಂದ ಆಸ್ವಾದಿಸಿದರಂತೆ. ಬೇಡರು ಇವರನ್ನು ಬಲಿಕೊಡಲು ಉದ್ಯುಕ್ತರಾದಾಗ, ಕಾಳಿಕಾದೇವಿ ಪ್ರತ್ಯಕ್ಷಳಾಗಿ , ಅವರ ಕತ್ತಿಯಿಂದ ಅವರನ್ನೇ ಕತ್ತರಿಸಿ, ' ಬ್ರಹ್ಮ ಜ್ಞಾನಿಗೆ ನಮಸ್ಕಾರ' ಎಂದು ಇವರಿಗೇ ನಮಸ್ಕರಿಸಿ ಅಂತರ್ಧಾನಳಾದಳಂತೆ.

ಈ ಮಧ್ಯೆ, ಸಿಂಧುಸೌವೀರದೇಶದ ರಾಜ ರಾಹುಗಣ ಎಂಬುವವನು ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರಲ್ಲಿ ಜ್ಞಾನ- ವೈರಾಗ್ಯ ಪಾಠವನ್ನು ಕಲಿಯಲು ಬೋವಿಗಳು ಹೊತ್ತ ಪಲ್ಲಕ್ಕಿಯಲ್ಲಿ ಪ್ರಯಾಣಮಾಡುತ್ತಿದ್ದನಂತೆ. ಪಲ್ಲಕ್ಕಿ ಹೊರುವರಲ್ಲಿ ಒಬ್ಬನಿಗೆ ಅನಾರೋಗ್ಯವಾದಾಗ, ಗಟ್ಟಿಮುಟ್ಟಾಗಿದ್ದ ಭರತರು ಕಣ್ಣಿಗೆ ಬೀಳಲು, ಅವರನ್ನೇ ಪಲ್ಲಕ್ಕಿಯನ್ನು ಹೊರಲು ನಿಯಮಿಸಿಕ್ಕೊಂಡರಂತೆ. ಎಲ್ಲರಿಗಿಂತಲೂ ಎತ್ತರವಾಗಿದ್ದ ಭರತರು, ನೆಲವನ್ನು ನೋಡುತ್ತಾ, ಭೂಮಿಯಲ್ಲಿ ಓಡಾಡುವ ಕ್ರಿಮಿ ಕೀಟಗಳಿಗೆ ತೊಂದರೆಯಾಗದಂತೆ ವಕ್ರ ವಕ್ರವಾಗಿ ಕಾಲಿಡುತ್ತಿದ್ದರು. ಒಳಗಿದ್ದ ಮಹಾರಾಜನಿಗೆ ಹಿಂಸೆಯಾಗಿ ತಡೆಯಲಾಗದ ಕೋಪದಿಂದ 'ಸರಿಯಾಗಿ ನಡೆ, ಇಲ್ಲದಿದ್ದರೆ ತಕ್ಕ ಶಿಕ್ಷೆಮಾಡುತ್ತೇನೆ ನಾನು' ಎಂದು ಗದರಿಸುತ್ತಾನೆ. ಬ್ರಹ್ಮಭಾವವನ್ನು ಪಡೆದು ವಿವೇಕಿಯಾಗಿರುವ ನನ್ನನ್ನು ಶಿಕ್ಷೆಮಾಡುವುದರಿಂದ ನಿನಗೇನೂ ಲಾಭ? ನಾನು ತಲುಪಬೇಕಾದ ಸ್ಥಾನ ಯಾವುದು ಇಲ್ಲ. ನನಗೆ ಎಲ್ಲವೂ ಒಂದೇ' ಎಂದು ಉತ್ತರಿಸುತ್ತಾರೆ. ಕೇಳಿದ ರಾಜ ಕಕ್ಕಾ ಬಿಕ್ಕಿಯಾಗಿ, ಇಳಿದು, ಸಾತ್ವಿಕ ತೇಜಸ್ಸಿನಿಂದ ಬೆಳಗುತ್ತಿದ್ದ ಮೂರ್ತಿಯನ್ನು ಕಂಡು, ಒಡನೆಯೇ ನಮಸ್ಕರಿಸಿ, 'ಮಹಾತ್ಮರೇ ತಾವು ಯಾರು? ಪರಮ ತೇಜಸ್ಸಿನಿಂದ ತುಂಬಿರುವಿರಲ್ಲ? ನಾನು ಅರೆಸಿಕೊಂಡು ಹೊರಟ ದತ್ತಾತ್ರೇಯರೇ ನನಗೆ ತಿಳುವಳಿಕೆ ಕೊಡಬೇಕೆಂದು ಇಲ್ಲಿ ಬಂದಿದ್ದಾರೆಯೇ? ತತ್ವವನ್ನು ಉಪದೇಶ ಮಾಡಬೇಕು ತಾವು' ಎಂದು ಬೇಡಿಕ್ಕೊಳ್ಳುತ್ತಾನೆ.

ಆಗ ಭರತರು, ಸಂಸಾರವನ್ನು ಒಂದು ಅರಣ್ಯಕ್ಕೆ ಹೋಲಿಸಿ, ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಗಳೆಂಬ ಕ್ರೂರ ಮೃಗಗಳಿಂದ ತುಂಬಿರುವ ಸಂಸಾರವನ್ನು ಕೆಲವೊಮ್ಮೆ ಕುಶಲತೆಯಿಂದ, ಕೆಲವೊಮ್ಮೆ ಚಾತುರ್ಯದಿಂದ, ಕೆಲವೊಮ್ಮೆ ಬಲಪ್ರಯೋಗದಿಂದ ಹೇಗೆ ತಪ್ಪಿಸಿ ಕೊಳ್ಳಬೇಕು ಎಂದು ವಿಶದವಾಗಿ ತಿಳಿಯಪಡಿಸಿ ತತ್ವೋಪದೇಶವನ್ನು ಮಾಡುತ್ತಾರೆ. ಉಪದೇಶವನ್ನು ಪಡೆದ ರಾಜ, ವಾನಪ್ರಸ್ಥಾಶ್ರಮದಲ್ಲಿದ್ದುಕೊಂಡು, ತಪಸ್ಸು ಮಾಡಿ ಆತ್ಮೋದ್ಧಾರವನ್ನು ಮಾಡಿಕೊಳ್ಳುತ್ತಾನೆ.

ರಾಜರ್ಷಿ ಭರತರ ಹಿಂದಿನವರ ಕಥೆಯೂ ಬಹಳ ರಮಣೀಯ. ಪ್ರಿಯವ್ರತ ಮತ್ತು ಉತ್ತಾನಪಾದ ಸ್ವಾಯಂಭು ಮನುವಿನ ಪುತ್ರರು. ಉತ್ತಾನಪಾದನ ಮಗನೇ ಧ್ರುವಕುಮಾರ. ಪ್ರಿಯವ್ರತ ಉತ್ತಾನಪಾದನ ಅಣ್ಣ. ಬ್ರಹ್ಮ ದೇವರ ಆಜ್ಞೆಯಂತೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಧರ್ಮಮಾರ್ಗದಲ್ಲಿ ರಾಜ್ಯವಾಳಿ, ಜಿತೇಂದ್ರಿಯನಾಗಿ ಕೊನೆಗೆ ಭಗವಂತನ ಪಾದವನ್ನು ತಲುಪುತ್ತಾನೆ. ಆ ಪರಂಪರೆಯಲ್ಲಿ ನಾಭಿ ಎಂಬ ರಾಜರ್ಷಿ. ಆತನು ಮತ್ತು ಅವನ ಧರ್ಮ ಪತ್ನಿ ಮೇರುದೇವಿ, ಶ್ರೀಮನ್ನಾರಾಯಣನನ್ನು ಆರಾಧಿಸಿ ತಮಗೆ ಅವನಂತಹ ಪುತ್ರ ಬೇಕು ಎಂಬ ವರ ಬೇಡುತ್ತಾರೆ. ತನ್ನಂತೆ ಅಥವಾ ತನಗಿಂತ ಮಿಗಿಲಾದವರು ಯಾರೂ ಇಲ್ಲವೆಂದ ಭಗವಂತ, ತನ್ನ ಕಲೆಯಿಂದ ಅವರ ಪುತ್ರನಾಗಿ ಜನಿಸುತ್ತಾನೆ. ಅವನೇ ಮಹಾತ್ಮನಾದ ಋಷಭದೇವ. ಈ ಅವತಾರದ ಉದ್ದೇಶ, ಆದರ್ಶ ಗೃಹಸ್ಥಾಶ್ರಮದ ಧರ್ಮವನ್ನು ಬೋಧಿಸಿ, ಭಗವಂತನನ್ನು ಆರಾಧಿಸಿ ನಂತರ ಅವಧೂತರ ಆದರ್ಶವನ್ನು ತೋರಿಸುವುದು. ಈ ಉದ್ದೇಶಕ್ಕೆ ತಕ್ಕಂತೆ, ಋಷಭದೇವ, ಜಯಂತಿ ಎಂಬ ದಿವ್ಯಕನ್ಯೆಯನ್ನು ವಿವಾಹವಾಗಿ ಅನೇಕ ಪುತ್ರರನ್ನು ಪಡೆಯುತ್ತಾನೆ. ಅವರ ಪುತ್ರನೇ ಮಹಾತ್ಮನಾದ ಭರತ, ಮುಂದೆ ಜಡ-ಭಾರತನಾದವನು. ನಮ್ಮ ದೇಶಕ್ಕೆ 'ಭಾರತ' ಎಂಬ ಹೆಸರು ಬರುವುದಕ್ಕೆ ಈ ಭರತನೇ ಕಾರಣ ಎಂದು ಶ್ರೀಮದ್ಭಾಗವತವು ತಿಳಿಸುತ್ತದೆ ಆದರ್ಶ ಗೃಹಸ್ಥ ಧರ್ಮ ವನ್ನು ಪಾಲಿಸಿದ ಋಷಭ ಮಹಾರಾಜ, ತನ್ನ ಸುಪುತ್ರನಾದ ಭರತನಿಗೆ ಪಟ್ಟಕಟ್ಟಿ, ತಾನು ಅಕ್ಷರ ಬ್ರಹ್ಮದಲ್ಲಿ ತಾದಾತ್ಯ್ಮವನ್ನು ಹೊಂದಿ, ವರೇಣ್ಯ ಎಂಬುದಕ್ಕೆ ವಿಷಯನಾಗಿ, ಪಾಪಾದಿ ಬಂಧನಗಳೆನ್ನೆಲ್ಲ ಅಶ್ವ ಧೂಳು ಕೊಡವುವಂತೆ ಕೊಡವಿ, ತತ್ವಮಸಿ ಎಂಬ ಶ್ರುತಿ ವಾಕ್ಯಕ್ಕೆ ವಿಷಯನಾದ ಭಗವಂತನಲ್ಲಿ ತಾದಾತ್ಮ್ಯಹೊಂದಿ ಅ-ವ-ಧೂ-ತ ನಾಗಿ, ಆಧರ್ಮವನ್ನು ಬೊಧಿಸುತ್ತಾ, ಯಾವ ಬಂಧನಗಳೂ ಇಲ್ಲದೆ, ಕೊನೆಗೆ ಅನಂತದಲ್ಲೇ ಲೀನವಾಗುತ್ತಾನೆ. ಈ ಋಷಭದೇವನನ್ನು ವೈದಿಕರು ಪೂಜಿಸುವಂತೆಯೇ ಜೈನರೂ ಆದಿತೀರ್ಥಂಕರನೆಂದು ಪೂಜಿಸುತ್ತಾರೆ.

 ಮಹಾತ್ಮನಾದ ಭರತ, ಚಕ್ರವರ್ತಿಯಾಗಿ, ವಿಶಾಲ ಭೂಮಂಡಲವನ್ನು ತನ್ನ ತಮ್ಮಂದಿರಿಗೆ ವಿಭಜಿಸಿಕೊಟ್ಟು, ಸಾಮ, ದಾನ, ಭೇದ, ದಂಡವೆಂಬ ನಾಲ್ಕು ಉಪಾಯಗಳಲ್ಲೂ ಪರಿಣಿತನಾಗಿ ಧರ್ಮದಿಂದ ತಾನೇ ನೇರವಾಗಿ ಆಳುತ್ತಿದ್ದ ಭಾಗಕ್ಕೆ 'ಭಾರತವರ್ಷ' ಎಂದು ಹೆಸರು ಬರುವಂತೆ ಮಾಡಿದನು. ಭರತನು ವಿಶ್ವರೂಪನ ಪುತ್ರಿಯಾದ ಪಂಚಜನೀ ಎಂಬ ಕನ್ಯೆಯನ್ನು ವರಿಸಿ ಸದ್ಗೃಹಸ್ಥನಾಗಿ, ಭೂಮಿಯನ್ನು ಆಳಿದನು. ನಂತರ ವಾನಪ್ರಸ್ಥವನ್ನು ಸ್ವೀಕರಿಸಿ ಸಪ್ತರ್ಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮದಲ್ಲಿದ್ದುಕೊಂಡು ಅದ್ಭುತವಾದ ತಪಸ್ಸನ್ನು ಆಚರಿಸಿದನು. ಅಲ್ಲಿದ್ದಾಗಲೇ ನಡೆದಿದ್ದು ಜಿಂಕೆಯ ಕಥೆ.

'ಶ್ರೀಮದ್ ಭಾಗವತಕಥಾಮೃತಸಾರದಲ್ಲಿ' ಪೂಜ್ಯ ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಿಂದ ವರ್ಣಿಸಿರುವ ಶ್ರೀಮದ್ಭಾಗವತದ ಐದನೆಯ ಸ್ಕಂಧವನ್ನಲಂಕರಿಸಿರುವ 'ಭರತೋಪಾಖ್ಯಾನ'ದ ಮೇಲೆ ಈ ಲೇಖನ ಆಧರಿಸಿದೆ. ಸಂಸಾರದಲ್ಲಿದ್ದರೂ ಕುಶಲತೆಯಿಂದ ಅರಿಷಡ್ವರ್ಗಗಳಿಂದ ತಪ್ಪಿಸಿಕ್ಕೊಂಡು, ರಾಗ-ಮೋಹಗಳ ಬಂಧಗಳಿಗೆ ಒಳಗಾಗದೆ, ಭಗವಂತನ ತಾದಾತ್ಮ್ಯ ವನ್ನು ಹೊಂದಿ, ಅಂತ್ಯ ಕಾಲದಲ್ಲಿ ಅವನೆಡೆಯಲ್ಲಿಯೇ ಮನಸ್ಸಿದ್ದರೆ, ಅವನಲ್ಲೇ ಲೀನವಾಗಬಹುದು ಎಂದು ಈ ಕಥೆಗಳ ಸಾರಾಂಶ. ಭಗವಂತನ ಧ್ಯಾನ ಬಿಟ್ಟು ಜಿಂಕೆಯ ವ್ಯಾಮೋಹದಲ್ಲಿ ತೊಡಗಿದ್ದರಿಂದ ಜಿಂಕೆಯಾಗಿ ಜನ್ಮ ತಳೆಯಬೇಕಾದುದು ದುರ್ದೈವ. ಆದರೂ ಒಳ್ಳೆಯ ಸಂಸ್ಕಾರ, ಕರ್ಮಗಳು ಅವನ ಪೂರ್ವಜನ್ಮದ ಸ್ಮರಣೆಯನ್ನು ಹಾಗೇ ಉಳಿಸಿ ಮತ್ತೆ ಮಹಾ ಧ್ಯೇಯದತ್ತ ಸಾಗುವಂತಾದುದು ಸುಕೃತದ ಫಲ. ನಾವೆಲ್ಲಾ ಕಲಿಯಬೇಕಾದ ಜೀವನ ಪಾಠಗಳನ್ನು ಬಿತ್ತರಿಸುವ ಕಥೆಯಾಗಿ, 'ಭಾರತ' ಎಂಬ ನಾಮಧೇಯಕ್ಕೆ ಕಾರಣರಾದ ಭರತ ಮಹಾಮುನಿಗೆ ನಮೋನಮಃ.

ಸೂಚನೆ: 24/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.

Thursday, August 10, 2023

ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ (Putraninda Brahmajnana Padeda Mahatayi Devahuti)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 
ಪ್ರತಿಕ್ರಿಯಿಸಿರಿ lekhana@ayvm.in)




ಹಿಮಾಲಯದ ಪರ್ವತ ಶ್ರೇಣಿ. ಪಾರ್ವತೀ- ಪರಮೇಶ್ವರರು ವಿಹರಿಸುವ ತಾಣ. ಪ್ರಶಾಂತ ಗಂಭೀರ ವಾತಾವರಣ. ಅಲ್ಲೊಂದು
ಸುಂದರ, ರಮಣೀಯ ಆಶ್ರಮ. ಪ್ರಜಾಪತಿಗಳಲ್ಲಿ ಒಬ್ಬರಾದ ಕರ್ದಮ ಮಹರ್ಷಿಗಳು ತಪೋ- ಧ್ಯಾನ - ಸಮಾಧಿಯಲ್ಲಿ ಮುಳುಗಿ
ಆಗತಾನೆ ಹೊರಬಂದು ಬಾಹ್ಯಪ್ರಪಂಚದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಆಸೀನರಾಗಿದ್ದಾರೆ. ಅಲ್ಲಿಗೆ
ಸ್ವಾಯಂಭುವ ಮನು, ಅವರ ಪತ್ನಿ ಶತರೂಪಾ ಮತ್ತು ಪುತ್ರಿ ದೇವಹೂತಿಯರು ದೇದೀಪ್ಯಮಾನವಾದ ರಥದಲ್ಲಿ
ಆಗಮಿಸುತ್ತಾರೆ. ಕರ್ದಮರನ್ನು ಏಕಾಂತದಲ್ಲಿ ಕಂಡ ಸ್ವಾಯಂಭುವ ಮನುವು, ತನ್ನ ಮಗಳಾದ ಸರ್ವ ಗುಣ ಸಂಪನ್ನೆಯಾದ
ದೆವಹೂತಿಯನ್ನು ವರಿಸುವಂತೆ ಕರ್ದಮರಲ್ಲಿ ಪ್ರಾರ್ಥಿಸುತ್ತಾನೆ. ಬ್ರಹ್ಮಚರ್ಯಾಶ್ರಮದಲ್ಲಿ ಸಾಧಿಸಬೇಕಾದ ಭಗವತ್ಸಾಕ್ಷಾತ್ಕಾರ
ಸಿದ್ಧಿಗಳನ್ನೆಲ್ಲ ಪಡೆದ ಕರ್ದಮರು, ವಂಶವೃದ್ಧಿಗೋಸ್ಕರ ಗೃಹಸ್ಥಾಶ್ರಮವನ್ನು ಸ್ವೀಕರಿಸುವ ಉದ್ದೇಶದಿಂದ
ಪರವಾಸುದೇವನನ್ನು ಕುರಿತು ತಪಸ್ಸು ಮಾಡಿರುತ್ತಾರೆ. ಪ್ರತ್ಯಕ್ಷನಾದ ಭಗವಂತ 'ನಿನಗೆ ಯೋಗ್ಯಳಾದ ಕನ್ಯೆಯು ತಾನಾಗಿಯೇ
ಶೀಘ್ರದಲ್ಲಿ ಬರುವವಳಿದ್ದಾಳೆ. ಸ್ವಾಯಂಭುವ ಮನುವಿನ ಪುತ್ರಿ. ಅವಳನ್ನು ನೀನು ವಿವಾಹವಾಗು. ನಾನೇ ನಿನ್ನ ವೀರ್ಯದಲ್ಲಿ
ಇಳಿದು, ನಿನಗೆ ಪುತ್ರನಾಗಿ ಜನಿಸುವೆ' ಎಂಬ ವರ ಕೊಟ್ಟಿರುತ್ತಾನೆ. ಇದನ್ನು ನೆನೆದ ಕರ್ದಮರು- ತಾನು
ಸಂತಾನೋತ್ಪತ್ತಿಯವರೆವಿಗೂ, ಗೃಹಸ್ಥ ಧರ್ಮಪಾಲಿಸಿ ಅನಂತರ ಸಂನ್ಯಾಸಧರ್ಮಕ್ಕೆ ಮನಕೊಡುವೆನೆಂಬ ನಿಬಂಧನೆಯ ಮೇಲೆ
ವಿವಾಹಕ್ಕೆ ಸಮ್ಮತಿಸುತ್ತಾರೆ, ಒಪ್ಪಿದ ರಾಜದಂಪತಿಗಳು, ಆ ಆಶ್ರಮದಲ್ಲೇ ತಮ್ಮ ಪ್ರೀತಿಯಪುತ್ರಿ ದೇವಹೂತಿಯನ್ನು
ಕರ್ದಮರಿಗೆ ವಿವಾಹ ಮಾಡಿಕೊಡುತ್ತಾರೆ.

ತಾನಿರುವುದು ಒಬ್ಬ ಋಷಿವರೇಣ್ಯರ ಆಶ್ರಮವೆಂದು ಅರಿತ ದೇವಹೂತಿ, ರಾಜಪುತ್ರಿಯೆಂದು ಮರೆತು, ಆಶ್ರಮದ ಗಾಂಭೀರ್ಯಕ್ಕೆ
ತಕ್ಕಂತೆ, ಸರ್ವಜ್ಞರಾದ ಕರ್ದಮರ ಸೇವೆಯಲ್ಲಿ ನಿರತಳಾಗುತ್ತಾಳೆ, ಪಾರ್ವತೀದೇವಿ ಪರಶಿವನ ಸೇವೆಯಲ್ಲಿ ನಿರತಳಾದಂತೆ.
ಹಲವು ಕಾಲದ ಸೇವೆಯಿಂದ ಸಂತೃಪ್ತರಾಗಿ, ಸೊರಗಿದ ರಾಜಕುಮಾರಿಯನ್ನು ಕಂಡ ಕರ್ದಮರು, ಅವಳಿಗೆ ದೇವತೆಗಳ
ಭೋಗವನ್ನು ಅನುಭವಿಸಲು ಯೋಗ್ಯವಾದಂತಹ ದಿವ್ಯದೇಹವನ್ನು ಅನುಗ್ರಹಿಸುತ್ತಾರೆ, ತಮ್ಮ ತಪೋಬಲದಿಂದ. ಕಾಲಕ್ರಮದಲ್ಲಿ
ಕರ್ದಮ-ದೇವಹೂತಿಯರಿಗೆ ಒಂಭತ್ತು ಸ್ತ್ರೀ ರತ್ನಗಳು ಜನಿಸುತ್ತವೆ. ಅವರನ್ನೆಲ್ಲಾ ಸರಿಯಾದ ವರರಿಗೆ
ವಿವಾಹಮಾಡಿಕೊಡುತ್ತಾರೆ.

ಇಷ್ಟೆಲ್ಲಾ ಭೋಗ ಭಾಗ್ಯಗಳಿದ್ದರೂ ದೇವಹೂತಿಯ ಮನದಲ್ಲಿ ಒಂದು ಕೊರತೆ - ತಾನೊಬ್ಬ ಬ್ರಹ್ಮರ್ಷಿಯ ಪತ್ನಿಯಾದರೂ
ಅವರಿಂದ ಬ್ರಹ್ಮ ಮಾರ್ಗವನ್ನು ತಿಳಿದುಕ್ಕೊಳ್ಳಲಿಲ್ಲವಲ್ಲವೆಂದು. ಪತಿಯನ್ನು ಏಕಾಂತದಲ್ಲಿ ಕಂಡ ಅವಳು, ಬ್ರಹ್ಮಕ್ಕೆ
ದಾರಿಯನ್ನು ಬೇಡುತ್ತಾಳೆ. ಮಹಾಜ್ಯೋತಿಯನ್ನು ಗರ್ಭದಲ್ಲಿ ಧರಿಸಿರುವಳೆಂದು ಅರಿತ ಅವರು, ದೇವಹೂತಿಗೆ ತಿಳಿಸುತ್ತಾರೆ
'ನಿನ್ನ ಗರ್ಭದಲ್ಲಿ ಈಗ ಬೆಳಗುತ್ತಿರುವವನು ಸಾಕ್ಷಾತ್ ಶ್ರೀಮನ್ನಾರಾಯಣನೇ. ಅವನೇ ನಿನಗೆ ದಾರಿಯನ್ನು ತೋರಿಸುತ್ತಾನೆ. ಈಗ
ನನ್ನ ಗೃಹಸ್ಥಧರ್ಮದ ಸಂಕಲ್ಪ ಮುಗಿದಿರುವುದರಿಂದ, ಮಾತಿನಂತೆ ಸನ್ಯಸ್ಥನಾಗುತ್ತೇನೆ' ಎಂದು ತಿಳಿಸಿ ತಮ್ಮ ಮುಂದಿನದಾರಿಗೆ
ಹೊರಡುತ್ತಾರೆ.

ದೇದೀಪ್ಯಮಾನವಾದ ಶಿಶು ಜನಿಸುತ್ತದೆ. ತಾನ್ಯಾರೆಂದು ಹುಟ್ಟಿನಿಂದಲೇ ಅರಿತ ಮಗು, ಶೀಘ್ರವಾಗಿ ಬೆಳೆದು ತಾರುಣ್ಯಕ್ಕೆ
ಕಾಲಿಡುತ್ತದೆ, ಕಪಿಲರಾಗಿ, ಮಹಾಮುನಿಯಾಗಿ. ಬೆಳೆದುನಿಂತ ದಿವ್ಯ ಮಂಗಲಸುಂದರಾಂಗನಾದ ಪುತ್ರ ಶ್ರೀಮನ್ನಾರಾಯಣನೇ
ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ 'ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ.
ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು' ಎಂದು ಬೇಡುತ್ತಾಳೆ. ತಾಯಿ ಮಗನಿಗೆ ನಮಸ್ಕರಿಸಬಹುದೇ? ಆದರೆ ಮಗ
ಭಗವಂತನೇ ಆದಾಗ? ಗುರುವಾಗಬೇಕಾದಾಗ? ದೇವಕೀದೇವಿಯು ತನ್ನಪುತ್ರನಿಗೆ ನಮಸ್ಕರಿಸಲಿಲ್ಲವೇ?

ನಮಸ್ಕರಿಸಿದ ತಾಯಿಗೆ ಕಪಿಲರು' ಸಾಂಖ್ಯಯೋಗದರ್ಶನ'ವನ್ನು ಉಪದೇಶಿಸುತ್ತಾರೆ. ತ್ರಿಗುಣಾತ್ಮಕವಾದ ಪ್ರಕೃತಿ ಹೇಗೆ ಆತ್ಮಕ್ಕೆ
ಮೋಸಮಾಡುತ್ತದೆ - ಸರಿಯಿಲ್ಲದ ಕನ್ನಡಿ ಪ್ರತಿಬಿಂಬವನ್ನು ಹೇಗೆಹೇಗೋ ತೋರಿಸುವಂತೆ. ಆತ್ಮ ನಮ್ಮೊಳಗಡೆಯೇ ಅಡಗಿದೆ -
ಆತ್ಮಾ ಗುಹಾಯಾಂ ನಿಹಿತೊsಸ್ಯ ಜಂತೋ: ಮಾನವರು ತಮ್ಮೊಳಗೇ ಇರುವ ಹಿರಣ್ಯಗರ್ಭನನ್ನು ಅರಿಯದೆ ದುಃಖದ
ಕಡಲಿನಲ್ಲಿ ಮುಳುಗಿರುತ್ತಾರೆ - ಭೂಮಿಯಲ್ಲಿ ಅಡಗಿರುವ ಸುವರ್ಣದ ಮೇಲೆ ಓಡಾಡುತ್ತಿದ್ದರೂ ಭಿಕಾರಿಯಾಗಿ ಅಲೆಯುವಂತೆ.
ಪಂಚಮಹಾಭೂತಗಳು, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಪಂಚ ತನ್ಮಾತ್ರೆಗಳು, ಮನಸ್ಸು, ಅಹಂಕಾರ, ಬುದ್ಧಿ
(ಮಹತ್), ಪ್ರಕೃತಿ ಇವುಗಳಿಂದ ಮಾಡಿದ ಇಪ್ಪತ್ತುನಾಲ್ಕು ಪೊರೆಗಳನ್ನು, ತಾನ್ಯಾರೆಂದು ಚಿಂತಿಸುವುದರಮೂಲಕ, ಭಕ್ತಿಯಿಂದ,
ಮಹಾಪುರುಷನ ಧ್ಯಾನದಿಂದ, ಮತ್ತು ಇವೆಲ್ಲವನ್ನೂ ಸೇರಿಸಿಕೊಂಡು ಹೇಗೆ ಬಂಧನದಿಂದ ಬಿಡುಗಡೆ ಹೊಂದುವುದು
ಎಂಬುದೆಲ್ಲವನ್ನೂ ತಿಳಿಸಿಕೊಟ್ಟು, ತನ್ನ ಮೂರ್ತಿಯೇ ಒಳಮಾರ್ಗದಲ್ಲಿ ಕೊಂಡೊಯ್ಯುವ ಮಂಗಲವಿಗ್ರಹವಾದುದರಿಂದ

ಅದನ್ನೇ ಹೇಗೆ ಧ್ಯಾನಮಾಡುವುದೆಂದು ತಿಳಿಸಿಕೊಟ್ಟು, 'ನಾನು ನಿನಗೆ ಬಹಳ ಪ್ರಿಯವಾದವನು, ದೇಹ ಸಂಬಂಧದಿಂದ
ಮಾತ್ರವಲ್ಲ, ಆತ್ಮಸಂಬಂಧದಿಂದಲೂಕೂಡ. ನನ್ನನು ಪ್ರೀತಿಯಿಂದ, ಅಥವಾ ಭಕ್ತಿಯಿಂದ, ತಂದೆಯಾಗಿ, ಗುರುವಾಗಿ ಕೊನೆಗೆ
ನಾನೇ ಆತ್ಮವೆಂದು ಧ್ಯಾನಮಾಡಮ್ಮ' 'ತಿಳಿಯಿತೇ?ಅರ್ಥವಾಯಿತೇ? ಮನಸ್ಸಿಗೆ ಬಂತೇ?' ಎಂದು ಮತ್ತೆಮತ್ತೆ ಕೇಳಿ, ಅವಳಿಗೆ
ತಿಳಿಯಿತೆಂದು ಮನದಟ್ಟುಮಾಡಿಕೊಂಡು, ತಾನೂ ಈಶಾನ್ಯ ದಿಕ್ಕಿಗೆ ತಪಸ್ಸಿಗೆ ಹೊರಡುತ್ತಾರೆ.

ನಾವೆಲ್ಲಾ ಭಗವಂತನಿಂದ ೨೫ ಮೈಲಿಗಳ ದೂರದಲ್ಲಿ ಇದ್ದೇವೆ. ೨೪ ಪ್ರಕೃತಿ ತತ್ವಗಳು, ೨೫ ನೆಯ ಜೀವ. ೨೬ ನೇ ಪರತತ್ತ್ವವೇ
ಭಗವಂತ ಎಂದು ಶ್ರೀರಂಗ ಮಹಾಗುರುಗಳು ಮಾರ್ಮಿಕವಾಗಿ ತಿಳಿಸಿದ್ದು ಇಲ್ಲಿ ಸ್ಮರಣೀಯ. ಸಕಲ ಸುಖ ಭೋಗಗಳು
ಮುಂದಿದ್ದರೂ ಪರಮಾನಂದದ ನೆಲೆಯಾದ ಬ್ರಹ್ಮತತ್ತ್ವದ ಉಪದೇಶಕ್ಕಾಗಿ ಮಗನನ್ನೇ ಆಶ್ರಯಿಸಿದ ಮಹಾತಾಯಿ ದೆವಹೂತಿಗೆ
ನಮೋನಮಃ. ಹಿಮಾಲಯದ ಮಡಿಲಲ್ಲಿ ಕಪಿಲವಸ್ತು ಎಂದು ಅವರಹೆಸರಿನಿಂದಲೇ ಪ್ರಸಿದ್ಧವಾದ ಸ್ಥಳದಲ್ಲಿ ಜನಿಸಿ (ಗೌತಮ
ಬುದ್ಧರಿಗೆ ಬಹಳ ಮೊದಲು), ತಾಯಿಗೆ ಉಪದೇಶಮಾಡುವ ನೆಪದಲ್ಲಿ ಲೋಕೋದ್ಧಾರಕ್ಕಾಗಿ ಎಲ್ಲಾ ಶಾಸ್ತ್ರಗಳಿಗೆ
ಬೆನ್ನುಮೂಳೆಯಂತಿರುವ - ಪಾತಂಜಲಂ ಕಾಪಿಲಂಚ ಸರ್ವಶಾಸ್ತ್ರೋಪಕಾರಕಂ - 'ಸಾಂಖ್ಯ ದರ್ಶನ' ವನ್ನು ಉಪದೇಶಿಸಿ, -
ಪ್ರಕೃತಿಯನ್ನು ದಾಟುವಮಾರ್ಗವನ್ನು ತಿಳಿಯಪಡಿಸಿ, ಈಶಾನ್ಯವನ್ನು ಪವಿತ್ರಗೊಳಿಸಿರುವ ಸಿದ್ಧರಲ್ಲಿ ಅತ್ಯಂತ ಶ್ರ್ರೇಷ್ಠರಾದ ,
ಭಗವಂತನ ಅವತಾರವೇ ಆದ ಕಪಿಲ ಮಹರ್ಷಿಗಳಿಗೆ ನಮೋನಮಃ. ದೇವಹೂತಿಯ ಆದರ್ಶ, ಕಪಿಲರ ಉಪದೇಶ ನಮ್ಮೆಲ್ಲರ
ದಾರಿದೀವಿಗೆಯಾಗಲಿ.

ಸೂಚನೆ: 10/08/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.

Friday, June 2, 2023

ಸೆಂಗೋಲಿನ ಆಧ್ಯಾತ್ಮಿಕ ಸಂಕೇತ (Sengolina Adhyatmika Sanketa)

ಆಂಗ್ಲ ಭಾಷೆ : ಮೋಹನ ರಾಘವನ್.
ಅನುವಾದ  : ಎಂ . ಆರ್.  ಭಾಷ್ಯಮ್ 
(ಪ್ರತಿಕ್ರಿಯಿಸಿರಿ lekhana@ayvm.in)

೧೯೪೭ರ  ನಂತರ ಮೊದಲಬಾರಿಗೆ   ಸಂಸತ್ ಭವನದಲ್ಲಿ'ಸೆಂಗೋಲೀನ' ಪುನರ್ ಪ್ರತಿಷ್ಠಾಪನೆಯ  ಸುದ್ದಿ ಎಲ್ಲೆಲ್ಲೂ ಹರಡುತ್ತಿದೆ. ಚಾರಿತ್ರಿಕವಾಗಿ ಸೆಂಗೋಲು,  ಭಾರತೀಯ ರಾಜಪರಂಪರೆಯ ಅಧಿಕಾರದ ಪ್ರತೀಕ.  ಅದರಲ್ಲೂ, ತಮಿಳು ಅರಸರು ಅದಕ್ಕೆ 'ಸೆಂಗೋಲ್' ಎಂದು ನಾಮಧೇಯವಿತ್ತು, ಧರ್ಮ, ಸಮೃದ್ಧಿ ಮತ್ತು ಸಂಪತ್ತಿನ  ಚಿಹ್ನೆಯಾಗಿ  ಪರಿಗಣಿಸುತ್ತಿದ್ದರು. ತಮಿಳು1  ಮತ್ತು ಸಂಸ್ಕೃತ2 ಸಾಹಿತ್ಯಗಳಲ್ಲಿ ಬಹಳವಾಗಿ ಆದ್ಯಕರ್ತವ್ಯವೆಂದು, ಅಷ್ಟೇಕೆ,  ಆತನ ಜೀವನದ ಪರಮೋದ್ದೇಶವೆಂದು ಪರಿಗಣಿಸಲ್ಪಡುತ್ತಿತ್ತು. 'ದಂಡಧರ'3  ಎಂಬ ಪದ ಧರ್ಮಸಂರಕ್ಷಕನಾದ ಕೊಂಡಾಡಲ್ಪಟ್ಟ ಈ 'ಸೆಂಗೋಲ್' ಅಥವಾ 'ಧರ್ಮದಂಡ', ಧರ್ಮದ ಮೂರ್ತವೆತ್ತರೂಪವೆಂದೂ, ಮತ್ತು ಧರ್ಮದ ಸಂರಕ್ಷಣೆಯೇ ರಾಜನ

ಯಮಧರ್ಮರಾಜನ  ಮತ್ತೊಂದು ನಾಮಧೇಯವಾದರೂ, ಸಾಮಾನ್ಯವಾಗಿ  ಎಲ್ಲ ರಾಜರಿಗೂ ಅನ್ವಯಿಸುತ್ತದೆ. 'ರಾಜನೀತಿಯನ್ನು', 'ದಂಡನೀತಿ'4 ಎಂದೇ ಉಲ್ಲೇಖಿಸುವುದುಂಟು. ಇಷ್ಟೆಲ್ಲ ಇದ್ದರೂ ಸಹ,  ದಂಡವನ್ನೇ ಏಕೆ  ರಾಜನ ಅಧಿಕಾರದ ಸಂಕೇತವೆಂದು  ಪರಿಗಣಿಸಲಾಗುತ್ತದೆಂಬ ಪ್ರಶ್ನೆ, ಸಹಜ.   'ದಂಡ' - ಕತ್ತಿ, ಗದೆ, ಶೂಲ, ಬಿಲ್ಲು ಮೊದಲಾದ  ಆಯುಧಗಳ ತುಲನೆಯಲ್ಲಿ ಅಂತಹ ಹೀರಿದಾದುದೇನೂ ಅಲ್ಲ. ಸಾರ್ವಭೌಮತ್ವವನ್ನು ಅರುಹುವ  ಚಿನ್ಹೆಗಳಾಗಿ ಛತ್ರ, ಚಾಮರಗಳಿದ್ದರೂ ಸಹ, 'ದಂಡ' ವೇ ಅಧಿಕಾರ ಸೂಚಕ. 

ಈ ಸಂಧರ್ಭದಲ್ಲಿ ಶ್ರೀ ಶ್ರೀರಂಗಮಹಾಗುರುಗಳು ಇತ್ತ ನೋಟದ ಮರು ಪರಿಶೀಲನೆ ಅಗತ್ಯ. ಅವರು ರಾಜರ ಧರ್ಮದಂಡವನ್ನು, ನಮ್ಮಲ್ಲೇ ಇರುವ 'ಮೇರುದಂಡ' ಅಥವಾ ಬೆನ್ನುಹುರಿಯನ್ನೊಳಗೊಂಡ  'ಬೆನ್ನುಮೂಳೆ'ಯ ಪ್ರತೀಕವಾಗಿ ಗುರಿತಿಸುತ್ತಾರೆ.  'ನಿಜವಾದ ರಾಜ' ಎರಡು ರಾಜ್ಯಗಳ ಅಧಿಪತಿ - ಸ್ವರ್ಗಕ್ಕೆ ಮತ್ತು ಭೂಭಾಗಕ್ಕೆ5. ಸ್ವರ್ಗದ  ರಾಜ್ಯವನ್ನು ಯೋಗಿಗಳು ತಮ್ಮಲ್ಲೇ ಕಾಣುತ್ತಾರೆ. ಅವರುಗಳು, ಒಳ ಧುಮುಕಿ, ಆಳವಾಗಿಮುಳುಗಿ, ತಮಲ್ಲೇ ಇರುವ ಅತೀವ  ಆನಂದವನ್ನು ಅನುಭವಿಸುತ್ತಾರೆ.   ಮಸ್ತಿಷ್ಕದಲ್ಲಿರುವ ಸಹಸ್ರಾರಸ್ಥಾನವನ್ನು ಪ್ರವೇಶಿಸಿದಾಗ ಮಾತ್ರ, ಈ ಆನಂದದ ಪರಾಕಾಷ್ಠೆಯ ಅನುಭವವೆಂದು ಯೋಗಶಾಸ್ತ್ರಗಳು ಅರುಹುತ್ತವೆ. ಆ ಆನಂದದ ಅನುಭವ6, ಅಮೃತ ಧಾರೆಯಾಗಿ ಕೆಳಹರಿದು7 ಇಂದ್ರಿಯ, ಮನಸ್ಸು,ದೇಹಗಳೆಲ್ಲವನ್ನೂ ಉಣಿಸಿ ತಣಿಸುತ್ತದೆ. ಯೋಗದ ಈ ಪ್ರಕ್ರಿಯೆ, ಆಂತರಿಕವಾಗಿ ಅತೀವ ಆನಂದವನ್ನು ಒದಗಿಸುವುದಲ್ಲದೆ, ಮಾನಸಿಕ ಸಮತೋಲನವನ್ನು ಕಾಪಿಟ್ಟುಕ್ಕೊಂಡು ದೇಹೇಂದ್ರಿಯಗಳಿಗೆ ಭೌತಿಕ ಹೊರಸುಖವನ್ನು ಅನುಭವಿಸಲು ಬೇಕಾದ ಲವಲವಿಕೆಯನ್ನೊದಗಿಸುತ್ತದೆ. ಯಾವ ರಾಜಕುಮಾರ, ಗುರುಗಳ ಮಾರ್ಗದರ್ಶನದಿಂದ, ತನ್ನ ಸಾಧನೆಯಿಂದ, ಯೋಗದ ರಹಸ್ಯಗಳನ್ನು ಅರಿಯುತ್ತಾನೆಯೋ, ಆತ ಸಮಚಿತ್ತತೆ-ಸಮತೋಲನಗಳನ್ನು  ಕಾಯ್ದುಕ್ಕೊಂಡು ಒಳ ಸ್ವರ್ಗದ  ನಿಜವಾದ ಅಧಿಪತಿ ಮತ್ತು ಭೌತಿಕ ಸುಖವನ್ನನುಭವಿಸಲು ಸಮರ್ಥನಾಗುತ್ತಾನೆ. 

ಅಂತಹ ರಾಜಕುಮಾರ ಕಾಲಕ್ರಮದಲ್ಲಿ ರಾಜನಾಗಿ ಅಭಿಷಿಕ್ತನಾಗುತ್ತಾನೆ. ಆತನ ಗುರಿ ಹಾಗೂ ಕರ್ತವ್ಯಗಳು, ತಾನು ಅನುಭವಿಸುವ  ಒಳ - ಹೊರ  ಆನಂದಗಳನ್ನು ತನ್ನ ಪ್ರಜೆಗಳಿಗೂ ದೊರಕಿಸಿ  ಕೊಡುವುದು . ಆತನು ಎತ್ತಿ ಹಿಡಿಯಬೇಕಾದ ಧರ್ಮ ಇದೇ. ಆತನಿಗೆ ಆಧಿಪತ್ಯವನ್ನು ರಾಜಗುರುಗಳು ವಹಿಸಿಕೊಡುವ ಸಮಾರಂಭ, ಆತ  ಪಾಲಿಸಬೇಕಾದ ಧರ್ಮದ ಮೂಲ ಮತ್ತು  ಅದನ್ನು ನಿವರ್ಹಿಸುವ ವಿಧಿ-ವಿಧಾನಗಳ ನೆನಪನ್ನು ಕೊಡುತ್ತದೆ.   ಆತನ ಪರಸೌಖ್ಯದ ಪ್ರಭುತ್ವ, ಆತನ 'ದಮಾ' ಎಂಬ ಇಂದ್ರಿಯ ಸಂಯಮದಮೇಲೆ ಅವಧರಿಸಿದೆ. ಆತನಿಗೆ ವಹಿಸಿಕೊಡುವ ಧರ್ಮದಂಡ ಅಥವಾ ರಾಜದಂಡ, ಮೇರುದಂಡ ಅಥವಾ ಹುರಿಯನ್ನು ಹೊತ್ತ ಬೆನ್ನುಮೂಳೆಯ ಪ್ರತೀಕ. ದಮೆಯಿಂದ ಮಾತ್ರ  ಮೇರುದಂಡದಹುರಿಯಲ್ಲಿ ಅಡಗಿರುವ ಸುಷುಮ್ನೆಯ ಆರೋಹಣ ಮತ್ತು ಸಹಸ್ರಾರದಲ್ಲಿ ಹುದುಗಿರುವ  ಆನಂದವನ್ನು ಅನುಭವಿಸಲು ಸಾಧ್ಯ. ಆತನ ಮಸ್ತಿಷ್ಕಕದಮೇಲೆ ಬೆಳಗುವ ಶ್ವೇತಚ್ಛತ್ರ, ಮೇರುದಂಡವನ್ನು ನೇರವಾಗಿ ಏರಿ, ತನ್ನ  ಹೆಡಯನ್ನು ಅಗಲಿಸಿ ಶಿರಸ್ಸಿನಮೇಲೆ ಓಲಾಡುವ  ಕುಂಡಲಿನೀ ಶಕ್ತಿಯ ಪ್ರತೀಕ. ಶ್ವೇತಚ್ಛತ್ರ ಆನಂದಾಮೃತವನ್ನು ಒಸರುವ ಅಧೋಮುಖ ಕಮಲದ ಗುರುತೂ ಹೌದು. ಪುಣ್ಯನದಿಗಳಿಂದ ತಂದ ಮಂತ್ರಪೂತವಾದ ಜಲಗಳಿಂದ ಶಿರಸ್ಸಿನ ಮೇಲಾಗುವ ಅಭಿಷೇಕ ಈ ಅಮೃತಧಾರೆಯನ್ನು ಪ್ರತಿಬಿಂಬಿಸುತ್ತದೆ.  ಆದ್ದರಿಂದ, ಭಾರತೀಯ ಪರಂಪರೆಯಲ್ಲಿನ ರಾಜ್ಯಾಭಿಷೇಕ8, 'ಅಧಿಕಾರ' ವರ್ಗಾವಣೆಯ ಕುರುಹಾಗದೆ, ಅರಸರ ಇಹಲೋಕದ ಕರ್ತವ್ಯವನ್ನು ನೆನೆಪಿಸಿಕೊಡುತ್ತದೆ.  ರಾಜನು ವಿಷ್ಣುವಿನಂತೆ ತನ್ನ ಪ್ರಜೆಗಳ ಸಂತೋಷ ಆನಂದಗಳನ್ನು ಸುಭದ್ರಪಡಿಸುತ್ತಾನೆ. ಆದುದರಿಂದಲೇ, ರಾಜನನ್ನು 'ಭೂಲೋಕದ ವಿಷ್ಣು'9 ಎಂದು ಪರಿಗಣಿಸಲಾಗುತ್ತದೆ.

ಅರಸ, ಇದನ್ನು ಪ್ರಾಯೋಗಿಕವಾಗಿ  ಕಾರ್ಯರೂಪಕ್ಕಾದರೂ ತರುವುದೆಂತು? ರಾಜ್ಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ, ಅದನ್ನು ಸ್ಥಾಪಿಸುವುದರ ಮೂಲಕ. ಅವುಗಳಿದ್ದರೆ, ಅವುಗಳನ್ನು ಉಳಿಸಿ, ಬೆಳೆಸಿ, ಎತ್ತಿಹಿಡಿಯುವುದರ ಮೂಲಕ.  ಯಜ್ಞ ಮತ್ತು ಅದರ ಬೆನ್ನೆಲುಬಾಗಿ, ಎಲ್ಲಾ ಇಷ್ಟಾರ್ಥಗಳನ್ನೂ ಒದಗಿಸಿಕೊಡುವ ತಪಸ್ಸು,  ಇವುಗಳ ಸಂರಕ್ಷಣೆ, ಅವನ ಆದ್ಯಕರ್ತವ್ಯ. ಬೇರೆ ದೇಶ - ಕಾಲ-ವರ್ತಮಾನಗಳಲ್ಲಿ, ಈ ಯಜ್ಞ ಮತ್ಯಾವುದಾದರೂ ಆಧ್ಯಾತ್ಮಿಕ ಪದ್ಧತಿ ಅಥವಾ ಪೂಜಾರೂಪ ತಾಳಬಹುದು.  ಆತನ ಮೊದಲ ಜವಾಬ್ದಾರಿ, ಯೋಗ, ಆಧ್ಯಾತ್ಮಿಕ ವಿದ್ಯೆಗಳ  ವಾರಸುದಾರರರಾದ  ಋಷಿಗಳ ಸಂರಕ್ಷಣೆ ಮತ್ತು ಅವರ ಜೀವನ ನಿರ್ವಹಣೆ.  ಗುರು-ಶಿಷ್ಯ ಪರಂಪರೆಯನ್ನು ಮಧ್ಯೆ ಛೇದವಾಗದಂತೆ  ಚೆನ್ನಾಗಿ ರಕ್ಷಿಸಬೇಕು; ಏಕೆಂದರೆ ಅದರ ಮೂಲಕವೇ ಈ ವಿದ್ಯೆಗಳ ಪರಂಪರಾಗತ ವಹನೆ. ಇದು ಧರ್ಮವನ್ನು ಕಾಪಿಡುತ್ತದೆ.

ಎರಡನೆಯದಾಗಿ, ಪ್ರಜೆಗಳು ತಮ್ಮ ದಿನನಿತ್ಯ ಜೀವನದಲ್ಲಿ ಸಾಕಷ್ಟು  ಸಂಯಮ ವಹಿಸಬೇಕು.  ಮತ್ತು ಕಾಮ, ಕ್ರೋಧ, ಲೋಭ , ಮದ ಮುಂತಾದುವುಗಳ ಮಾರಕ ಪ್ರಕ್ರಿಯೆಗಳಿಂದ ಧರ್ಮಕ್ಕೆ ಹಾನಿ ಬರದಂತೆ ಎಚ್ಚರ ವಹಿಸಬೇಕು. ಎಲ್ಲರ ಇಹ-ಪರಗಳ  ಸುಖ - ಉನ್ನತ ಮಟ್ಟದ ಸೌಖ್ಯಾನುಭವಕ್ಕೋಸ್ಕರ ರಾಜನು, ನಡೆ-ಕಟ್ಟಳೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.  ಚಕ್ರವರ್ತಿಗಳಾದ   ರಾಮ- ಯುಧಿಷ್ಟಿರರು, ಪ್ರಜೆಗಳಲ್ಲಿ, ಮನೆಗಳಲ್ಲಿ, ಸಮಾಜದಲ್ಲಿ ಮತ್ತು ರಾಷ್ಟ್ರದಲ್ಲಿ ಧರ್ಮವನ್ನು  ಎತ್ತಿಹಿಡಿದು-ಕಾಪಿಡುವುದರಲ್ಲಿ ನಿಷ್ಣಾತರೆಂದು ಪ್ರಸಿದ್ಧಿ. ಅವರುಗಳು, ಅದನ್ನು ಕಟ್ಟುನಿಟ್ಟಾಗಿ ಎಚ್ಚರಿಕೆಯಿಂದ ಜಾರಿಗೊಳಿಸುತ್ತಿದ್ದರು, ತಮ್ಮದೇ ಉದಾಹರಣೆಯ  ಮೂಲಕ.  ಅಂತರ್ ಧಾರೆಯ ಅಮೃತದಲ್ಲಿ ಮಿಂದವರಾದ ಅವರ ಮನಸ್ಸು, ಮಾತುಕತೆ ಮತ್ತು ವ್ಯವಹಾರ, ಮೃದು -ಮಧುರವಾಗಿ, ಆಕರ್ಷಕವಾಗಿ, ದುರಾಚಾರ-ರಹಿತವಾಗಿರುತ್ತಿತ್ತು.  ದಯಾ-ಸಂವೇದನಾಶೀಲರಾಗಿದ್ದರೂ, ಧರ್ಮದ ವಿಷಯ ಬಂದಾಗ, ತಮ್ಮ ಸ್ವಂತದವರಲ್ಲಿಯೂ, ನಿಷ್ಠುರರಾಗಿರುತ್ತಿದ್ದರು. ಆದುದರಿಂದಲೇ ರಾಮರಾಜ್ಯ `ಧರ್ಮರಾಜ್ಯ' ವೆಂದೆನಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತು, ಶ್ರೀರಾಮನನ್ನು 'ಧರ್ಮದ ಮೂರ್ತರೂಪ'ವೆಂದೇ ಪರಿಗಣಿಸಲಾಗುತ್ತದೆ. 

ಆದುದರಿಂದ, ಭಾರತದ ಧರ್ಮವನ್ನು ಎತ್ತಿಹಿಡಿಯುವ ಕರ್ತವ್ಯವನ್ನು ನಿಭಾಯಿಸುವ ಹೊಣೆ ಹೊತ್ತ ಸಂಸದೀಯರ ಮಧ್ಯದಲ್ಲಿ  ಇತ್ತೀಚೆಗೆ  ನಡೆದ  ಧರ್ಮದಂಡ ಅಥವಾ ಸೆಂಗೋಲಿನ ಸಂಸ್ಥಾಪನೆ,  ಅತ್ಯಂತ ಸೂಕ್ತವಾಗಿದೆ.

ಸೂಚನೆ : 26/05/2023 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ  AYVM blogs ಪ್ರಕಟವಾಗಿದೆ.

------------------------------------------------------------------------------------------------------------------------------------------------------------------------

1. ತಿರುಕ್ಕುರಳ್ ೫೪೩. ಅಂದಣರ್ ನೂರ್ಕುಮ್ ಅರತ್ತಿರ್ಕುಮ್ ಆದಿಯಾಯ್ ನಿನ್ರದು ಮನ್ನವನ್   ಕೋಲ್

  2. ದೇವೀ ಭಾಗವತ ಪುರಾಣ : : ೧. ೭. ವೀಣಾ ದಂಡಂ ಕಥಮ್ ರಾಜ್ಯಾಮ್ ಕರೋತಿ ಜನಕಹ ಕಿಲ । ಧರ್ಮೇ ನ ವರ್ತತೇ ಲೋಕೋ ದಂಡಶ್ಚೇನ್ನ  ಭವೇದ್ಯದಿ

 3. ಶಬ್ದಕಲ್ಪದ್ರುಮ: ದಂಡಧರಃ

 4. ಶಬ್ದಕಲ್ಪದ್ರುಮ: ದಂಡನೀತಿ:; ತತ್ ಚಾಣಕ್ಯಾದಿ  ಪ್ರಣೀತಂ  ನೀತಿಶಾಸ್ತ್ರಂ

 5. ಋಗ್ವೇದ  ೪.. ೧ ಮಮ ದ್ವಿತಾ  ರಾಷ್ಟ್ರಮ್ ಕ್ಷತ್ರಿಯಸ್ಯ ವಿಶ್ವಾಯೋರ್ವಿಶ್ವೇ ಅಮೃತಾ  ಯಥಾ ನಃ

 6. ಷಟ್ಚಕ್ರ ನಿರೂಪಣಂ: ೪೦: ದಶಶತದಳಂ ಪೂರ್ಣಚಂದ್ರಾತಿ ಶುಭ್ರಂ …. ಪ್ರವಿಲಸಿತವಪುಹು  ಕೇವಲಾನಂದರೂಪಮ್

 7. ಷಟ್ಚಕ್ರ ನಿರೂಪಣಂ: ೪೩: ಸುಧಾ ಧಾರಾ ಸಾರಂ ನಿರವಧಿ ವಿಮುಂಚನ್ನತಿತರಾಮ್

 8. ರಾಜ್ಯಾಭಿಷೇಕದ ಈ ಎಲ್ಲ ಅಂಶಗಳನ್ನೊಳಗೊಂಡ ವಿವರಗಳು ವಾಲ್ಮೀಕಿ ರಾಮಾಯಣದ ೬. ೧೩೧. ೬೦ಳಿಂದ ಮುಂದಿನ ಕೆಲ  ಸ್ಲೋಕಗಳಲ್ಲಿ  ಕಾಣಬಹುದು:

ವಶಿಷ್ಠೋ ವಾಮದೇವಶ್ಚಜಾಬಾಲಿರಥಕಾಶ್ಯಪಹ । ಕಾತ್ಯಾಯನೋಸುಯಜ್ಞಶ್ಚಗೌತಮೋವಿಜಯಸ್ತಥಾ ।।

ಅಭ್ಯಷಿಂಚನ್ನರವ್ಯಾಘ್ರಮ್ ಪ್ರಸನ್ನೇನ ಸುಗಂಧಿನಾ।

ಸಲಿಲೇನ  ಸಹಸ್ರಾಕ್ಷಮ್ ವಸವೋ ವಾಸವಂ  ಯಥಾ ।।

9. ದೇವಿಭಾಗವತಪುರಾಣಂ: 6.10.24 ; ನಾದೇವಾಂಶೋ ದದಾತ್ಯನ್ನಮ್ ನಾವಿಷ್ಣು:   ಪೃಥಿವೀಪತಿ:


Saturday, February 11, 2023

ಪ್ರಕೃತಿಯಿಂದ ಈ ಅವಧೂತರು ಏನನ್ನು ಕಲಿತರು?(Prakrtiyinda E Avadhutaru Enannu Kalitaru?)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಕೃತಿಯ ಧೂಳನ್ನು ಅಶ್ವ  ಒದರುವಂತೆ ಕೊಡವಿ, ವಿಧಿ - ನಿಷೇಧಗಳೆಂಬ ಕಟ್ಟಲೆಗಳನ್ನು  ಮೀರಿ, ಕರ್ಮಬಂಧಗಳನ್ನು ದಾಟಿ ಬ್ರಹ್ಮದಲ್ಲಿಯೇ ನೆಲೆಸಿರುವರು.  ಅವಧೂತರು - ಅವ - ಧೂತ. 'ಅ' ಅಂದರೆ 'ಅಕ್ಷರರೂಪವಾದ ಪರಂಬ್ರಹ್ಮ'; 'ವ' ಅಂದರೆ 'ವರೇಣ್ಯ ವಾಗಿರುವುದು - ಶ್ರೇಷ್ಠತಮವಾಗಿರುವುದು'; ಭಗವಂತನಂತೆ ತೇಜೋರೂಪಿಯಾಗಿರುವುದು; 'ಧೂತ' ಎಂದರೆ ಸಂಸಾರ ಬಂಧನಗಳನ್ನು ಅಶ್ವ ಧೂಳನ್ನು  ಒದರುವಂತೆ ಒದರಿಹಾಕುವವರು. 


ಒಮ್ಮೆ ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರು ಯದು ಮಹಾರಾಜರ ಆಸ್ಥಾನಕ್ಕೆ ಆಗಮಿಸುತ್ತಾರೆ. ಅಂತಸ್ತಿಗೆ  ತಕ್ಕ ಮಧು -ಪರ್ಕ - ಆಸನಾದಿಗಳನ್ನು ಸಮರ್ಪಿಸಿದ ಯದುಮಹಾರಾಜ, ಅವರನ್ನು ಪ್ರಶ್ನಿಸುತ್ತಾನೆ "ಇಂದ್ರಿಯಗಳಿಗೆ ಸಂತೋಷವನ್ನುಂಟುಮಾಡುವ ಯಾವ ಪದಾರ್ಥಗಳೂ ತಮ್ಮಲ್ಲಿಲ್ಲದಿದ್ದರೂ, ತಾವು ಯಾವಾಗಲೂ ಸಂತೋಷವಾಗಿರುತ್ತೀರಿ.  ತಾವು ಅತ್ಯಂತ ಬುದ್ಧಿಶಾಲಿಗಳು. ಇಷ್ಟು ತಿಳುವಳಿಕೆ ತಾವು ಹೇಗೆ ಗಳಿಸಿದಿರಿ?". ಅದಕ್ಕೆ ಉತ್ತರಿಸಿದ ದತ್ತಾತ್ರೇಯರು "ನನ್ನ ತಿಳುವಳಿಕೆಯೆನ್ನೆಲ್ಲಾ ನಾನು ಪ್ರಕೃತಿಯಲ್ಲಿನ ಇಪ್ಪತ್ತುನಾಲ್ಕು ಗುರುಗಳು (ಆಚಾರ್ಯರು) ಮತ್ತೊಂದರ (೨೪+೧) ಮೂಲಕ ಗಳಿಸಿದೆ" ಎಂದೆನ್ನುತ್ತಾರೆ. 


ಈ ಇಪ್ಪತ್ತುನಾಲ್ಕು ಆಚಾರ್ಯರು ಯಾರೆಂದರೆ ಪೃಥಿವೀ, ನೀರು, ಅಗ್ನಿ, ವಾಯು, ಆಕಾಶ, ಚಂದ್ರಮ, ರವಿ,  ಪಾರಿವಾಳ,  ಹೆಬ್ಬಾವು,  ಸಾಗರ, ಪತಂಗ, ಜೇನುಬಿಡಿಸುವವನು, ಜಿಂಕೆ, ಗಜ, ಜೇನುಹುಳು, ದುಂಬಿಗೆ  ಆಹಾರವಾಗುವ ಹುಳು, ಹದ್ದು, ಮದುಮಗಳು, ಆಗತಾನೆ ಹುಟ್ಟಿದ ಮಗು, ಮೀನು, ಬಾಣವನ್ನು ಮಾಡುವನು, ಜೇಡರಹುಳು, ಭ್ರಮರಕೀಟ ,ಪಿಂಗಲಾ ಎನ್ನುವ ವೇಶ್ಯೆ, ಮತ್ತು ಇಪ್ಪತ್ತೈದನೆಯದು ಮಾನುಷ  ದೇಹ.  


ದತ್ತಾತ್ರೇಯರು ಇವುಗಳಿಂದ ಏನು ಪಾಠ ಕಲಿತರು ಎಂದು ಸಂಕ್ಷಿಪ್ತವಾಗಿ ನೋಡೋಣ. 


ಭೂಮಾತೆ ಕ್ಷಮೆಗೆ  ಆದರ್ಶ; ಅವಳಿಂದ ಕ್ಷಮೆ ಕಲಿತೆ.  ನೀರು, ಗಂಗಾಜಲ ಸ್ವಚ್ಛತೆಗೆ ಪ್ರತೀಕ, ತಂಪು  - ನಮ್ಮ ಮನಸ್ಸೂ  ಸ್ವಚ್ಛವಾಗಿ, ತಂಪಾಗಿರಬೇಕು. ಅಗ್ನಿ ಎಲ್ಲವನ್ನೂ ದಹಿಸುತ್ತದೆ(ಪಾವಕ).  ಅದರಿಂದ ಪಾಪಗಳನ್ನು   ಸುಡುವುದನ್ನು  ಕಲಿತೆ. ವಾಯುವು  ದೇಹದ ಒಳಗಡೆ   ಪ್ರಾಣಶಕ್ತಿಯಾಗಿಯೂ, ಹೊರಗಡೆ ಗಾಳಿಯಾಗಿಯೂ ಕೆಲಸ ಮಾಡುತ್ತದೆ. ಪ್ರಾಣವು ಏನನ್ನೂ ಅಪೇಕ್ಷೆ ಪಡದೆ  ತನ್ನ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಹೊರಗಡೆ ಗಾಳಿಯು ಏನನ್ನೂ ಬಯಸದೆ ಸಂಚರಿಸುತ್ತಾ ಶುದ್ಧಿ  ಮಾಡುತ್ತಿರುತ್ತದೆ (ಪವಮಾನ).  ಪ್ರಾಣ - ಗಾಳಿಗಳು ನಿರ್ಲಿಪ್ತ. ಈ ನಿರ್ಲಿಪ್ತತೆಯನ್ನು ವಾಯುವಿನಿಂದ ಕಲಿತೆ. ಆಕಾಶವು ವ್ಯಾಪಿಸಿರುತ್ತದೆ. ಬ್ರಹ್ಮವೂ ವ್ಯಾಪಿಸಿರುತ್ತದೆ. ವ್ಯಾಪಿಸಿದ್ದರೂ ಎರಡಕ್ಕೂ ಯಾವುದರೊಡನೆಯೂ  ಸಂಗವಿಲ್ಲ. ಈ ಅಸಂಗತ್ವವನ್ನು ಆಕಾಶದಿಂದ ಕಲಿತೆ. ಚಂದ್ರ ಆಹ್ಲಾದವನ್ನುಂಟುಮಾಡುತ್ತಾನೆ. ಈ ಗುಣವನ್ನು ಚಂದ್ರಮನಿಂದ ಕಲಿತೆ. ಸೂರ್ಯ ಪ್ರಕಾಶ ರೂಪಿ, ಪ್ರಪಂಚಕ್ಕೆ ಚೈತನ್ಯ ದಾಯಿ,  ಆಕಾಶದಲ್ಲಿರುವವನು; ಎಲ್ಲೆಲ್ಲೂ ಪ್ರತಿಬಿಂಬಿಸುವನಾಗಿದ್ದರೂ ಆತ ಒಬ್ಬನೇ.   ಜ್ಞಾನ ಸೂರ್ಯನೂ ಅಷ್ಟೇ, ವಿಶ್ವಕ್ಕೆಲ್ಲಾ ಚೈತನ್ಯದಾಯಿ, ದಹರಾಕಾಶದಲ್ಲಿ ಪ್ರಕಾಶಿಸುವವನು, ಸೃಷ್ಟಿಯಲ್ಲಿ ಎಲ್ಲೆಲ್ಲೂ ಪ್ರಕಾಶಿಸುತ್ತಿದ್ದರೂ ಆತ ಒಬ್ಬನೇ. ಪರಮಹಂಸ ಸೂರ್ಯರೂ  ಹೀಗೆಯೇ ಇರಬೇಕು ಎಂಬ ಪಾಠ ಅಂತರಂಗ ಸೂರ್ಯವನ್ನು ಪ್ರತಿಬಿಂಬಿಸುವ ಹೊರ ಸೂರ್ಯನಿಂದ ಕಲಿತೆ.  

  

ಪಾರಿವಾಳಗಳು ಮನುಷ್ಯರಂತೆ ಸಂಸಾರಸುಖದಲ್ಲಿ ಸಂತೋಷವಾಗಿರುತ್ತವೆ. ಹೀಗೆ ಮೈಮರೆತಿರುವಾಗ ಮರಿಗಳು ಬೇಡನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಬಿಡಿಸಲು ಬರುವ ತಾಯಿ ತಾನೂ ಅದರಲ್ಲಿ ಬಂಧಿತವಾಗುತ್ತದೆ. ಹಾಗೆಯೇ ಗೃಹಸ್ಥನಾದವನು  ಸಂಸಾರಬಂಧನದಲ್ಲಿ ಸಿಲುಕುತ್ತಾನೆ. ಹೀಗಾಗಬಾರದೆಂಬ ಪಾಠ ಪಾರಿವಾಳದಿಂದ ಕಲಿತೆ. ಹೆಬ್ಬಾವು, ಆಹಾರಕ್ಕೋಸ್ಕರ ಕಷ್ಟ ಪಡುವುದಿಲ್ಲ. ಇದ್ದಲ್ಲಿಯೇ ಪ್ರಾರಬ್ಧವಶದಿಂದ ಸಿಕ್ಕುವ ಯಾವ ಪ್ರಾಣಿಯನ್ನಾದರೂ ನುಂಗಿ ತೃಪ್ತಿಪಟ್ಟುಕೊಳ್ಳುತ್ತದೆ. ಅನಾಯಾಸವಾಗಿ ಏನು ಪ್ರಾಪ್ತವಾಗುತ್ತದೋ ಅದರಿಂದ ಸಂತೋಷವಾಗಿರಬೇಕೆನ್ನುವ ಪಾಠವನ್ನು ಹೆಬ್ಬಾವಿನಿಂದ ಕಲಿತೆ. ಸಮುದ್ರ ಎಷ್ಟೆಲ್ಲ ನದಿಗಳು ಸೇರಿದರೂ, ಆಳವಾಗಿ,ಗಂಭೀರವಾಗಿ, ಅಂತರಂಗವನ್ನು ತೋರಗೊಡದೆ ಇರುತ್ತದೆ. ಅಂತಹ ಗಾಂಭೀರ್ಯವನ್ನು, ಮನಸ್ಸಿನ ಆಳವನ್ನು ಸಮುದ್ರದಿಂದ ಕಲಿತೆ. 


ಪತಂಗ,  ಪ್ರಕಾಶದಿಂದ ಆಕರ್ಷಿತವಾಗಿ ಬೆಂಕಿಗೆ ಬೀಳುತ್ತದೆ. ಸಂಸಾರದ ಆಕರ್ಷಣೆಗೆ ವಶವಾಗಬಾರದೆಂದು ಪತಂಗದಿಂದ ಕಲಿತೆ. ಕೂಡಿಟ್ಟ ಸಂಪತ್ತು ಜೇನಿನ ಗೂಡಿನಂತೆ  ಕದಿಯಲ್ಪಡುತ್ತದೆಂದು ಜೇನು ಬಿಡಿಸುವವನನ್ನು ನೋಡಿ ಕಲಿತೆ. ಗ್ರಾಮ್ಯ ಗೀತೆಯಲ್ಲಿನ ಆಸಕ್ತಿಯಿಂದ ಜಿಂಕೆ ಬಲೆಯಲ್ಲಿ ಸಿಕ್ಕುತ್ತದೆ. ಇಂದ್ರಿಯ ಸೆಳೆತಕ್ಕೆ ಸಿಗಬಾರದೆಂದು ಜಿಂಕೆಯಿಂದ ಕಲಿತೆ. ಹೆಣ್ಣಾನೆಯ ಆಸೆಗೆ ಸಿಲುಕಿ ಗಂಡಾನೆ ಹಳ್ಳಕ್ಕೆ ಬೀಳುತ್ತದೆ. ಸಂಗದ  ಆಸೆಗೆ ಸಿಕ್ಕಿ ಪತನಕ್ಕೆ ಒಳಗಾಗಬಾರದೆಂದು ಆನೆಯಿಂದ  ಕಲಿತೆ. ಜೇನುಹುಳು ಹೂವಿಗೆ ಸ್ವಲ್ಪವೂ ನೋವಾಗದಂತೆ ಮಧುವನ್ನು ಹೀರುತ್ತದೆ.  ಮಧುಕರವೃತ್ತಿಯಿಂದ ಭಿಕ್ಷೆ ಬೇಡುತ್ತಿರುವಾಗ  ಗೃಹಸ್ಥರಿಗೆ ಸ್ವಲ್ಪವೂ ತೊಂದರೆಯಾಗಬಾರದೆಂಬ ಪಾಠವನ್ನು ಮಧುಕರನಿಂದ(ಜೇನಿನಿಂದ)  ಕಲಿತೆ. 


ಕುರರ ಪಕ್ಷಿ - ಒಂದು ಪ್ರಕಾರದ  ಹದ್ದು- ಮಾಂಸವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು, ಇನ್ಯಾವುದೋ ಬಲಿಷ್ಠಪಕ್ಷಿ ಕಿತ್ತು ತಿನ್ನುತ್ತದೆ ಎಂಬ ಭಯದಲ್ಲಿ ನೆಮ್ಮದಿಯಿಲ್ಲದೆಯೇ ಹಾರಾಡುತ್ತಿರುತ್ತದೆ. ವಸ್ತುಸಂಗ್ರಹ ಮಾಡಿ, ಅದರ ರಕ್ಷಣೆಯಲ್ಲಿಯೇ ಆಸಕ್ತನಾಗಿ, ಭಯದಿಂದ ಜೀವನ ನಡೆಸಬಾರದೆಂಬ ಪಾಠವನ್ನು ಕುರರದಿಂದ ಕಲಿತೆ. ಮದುವೆಗೆ ಸಿದ್ಧಳಾದ ಕುಮಾರಿ, ಬಂದ ಅತಿಥಿಗಳಿಗೆ ತಾನು ಕುಟ್ಟುತ್ತಿರುವ ಭತ್ತದ ಶಬ್ದ, ಬಳೆಗಳ ಘರ್ಷಣೆಗಳಿಂದ ತಿಳಿಯಬಾರದೆಂದು ಒಂದೊಂದೇ ಬಳೆಯನ್ನು ತೆಗೆದಿಡುತ್ತಾಳೆ. ಒಂದೇ ಬಳೆಯಾದಾಗ ಶಬ್ದ ಕೇಳಿಸುವುದಿಲ್ಲ . ಎರಡಿಲ್ಲದ ಸ್ಥಿತಿ ಇದ್ದಾಗ, ದ್ವೈತವಿಲ್ಲದಿದ್ದಾಗ, ನೆಮ್ಮದಿಯೆಂದು ಇದರಿಂದ ಕಲಿತೆ. ಮಗು ತಾಯಿಯ ಗರ್ಭದಲ್ಲಿದ್ದಾಗ ತನ್ನ ಎಂಟನೆಯ ಮಾಸದಲ್ಲಿ ಪರಂಜ್ಯೋತಿಯನ್ನನುಭವಿಸಿ ಆನಂದದಲ್ಲಿರುತ್ತದೆ. ಹೊರಗೆ ಬಂದಾಗಲೂ ಅದಕ್ಕೆ ಇನ್ನೂ ಒಳಗುಂಗೇ. ಜ್ಞಾನಿಯಾದವನು ಸದ್ಯೋಜಾತ(ಆಗ ತಾನೆ ಹುಟ್ಟಿದ)  ಮಗುವಿನಂತೆ  ಇರಬೇಕೆಂಬುದನ್ನು ಅದರಿಂದ ಕಲಿತೆ. ಮೀನು ಸುಖದ ಆಸೆಯಿಂದ ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಹಾಗೆ ಆಸೆಗೆ ಸಿಲುಕಬಾರದೆಂಬುದನ್ನು ಮೀನಿನಿಂದ ಕಲಿತೆ. ಬಾಣದ ವಕ್ರತೆಯನ್ನು ಸರಿಮಾಡುವ ಇಷುಕಾರ, ರಾಜನ ಮೆರವಣಿಗೆ ಹೋಗುತ್ತಿದ್ದರೂ ಗಮನ ಅತ್ತ ಹರಿಸಲಿಲ್ಲ. ವಕ್ರವಾಗಿರುವುದನ್ನು ಸರಿಮಾಡಬೇಕು ಮತ್ತು ಏನೆಲ್ಲ ಆಕರ್ಷಣೆಗಳಿದ್ದರೂ ಧ್ಯಾನದ ಗಮನ ಅತ್ತಕಡೆ ಹರಿಯಬಾರದೆಂಬುದನ್ನು ಇಷುಕಾರನಿಂದ ಕಲಿತೆ. 


ಜೇಡರಹುಳು ತಾನೇ ಉಗುಳಿದ ನೂಲಿನಲ್ಲಿ ಬಲೆಯನ್ನು ಮಾಡಿ, ಅದರಲ್ಲೇ ವಿಹರಿಸಿ, ಮತ್ತೆ ಅದನ್ನು ತಾನೇ ನುಂಗುತ್ತದೆ. ಭಗವಂತನೂ ತಾನೇ ಸೃಷ್ಟಿಸಿದ ಜಗತ್ತಿನಲ್ಲಿ ವಿಹರಿಸಿ ತಾನೇ ಅಂತ್ಯಮಾಡುತ್ತಾನೆ. ಭಗವಂತನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣನೆಂದು ಜೇಡರಹುಳುವನ್ನು ನೋಡಿ ಅರಿತುಕೊಂಡೆ.  ತನ್ನ ಆಹಾರಕ್ಕೋಸ್ಕರ  ತಂದು ಅಂಟಿಸಿದ ಕೀಟ, ದುಂಬಿಯ ಭಯದಿಂದ ದುಂಬಿಯನ್ನೇ  ಯಾವಾಗಲೂ ನೆನೆಯುತ್ತಾ  ಕೊನೆಗೆ ದುಂಬಿಯೇ  ಆಗಿಬಿಡುತ್ತದೆ. ಭಯದಿಂದಲಾದರೂ ಪರಮಾತ್ಮನಲ್ಲಿ ತನ್ಮಯತೆಯನ್ನು ಹೊಂದಿದವ, ಪರಮಾತ್ಮನೇ  ಆಗಿಬಿಡುತ್ತಾನೆ ಎಂದು ಆ ಕೀಟದಿಂದ ಕಲಿತೆ.   ಧನದಾಸೆಗೆ ತನ್ನನ್ನು ಮಾರಿಕೊಂಡ ಪಿಂಗಳಾ ಎನ್ನುವ ವೇಶ್ಯೆ , ಒಂದು ದಿನ ಪುರುಷನಿಗೋಸ್ಕರ ಕಾದು  ಕಾದು  ಬೇಸತ್ತು, ಕೊನೆಗೆ ಭಗವಂತನನ್ನು ನೆನೆಸಿಕೊಂಡು ಆತನ ಮಡಿಯಲ್ಲಿ   ನಿದ್ರೆಮಾಡಿ ಅದೇ ಸೌಖ್ಯವೆಂದು, ಆತ ಎಂದೂ ನಿರಾಸೆಯನ್ನು ಉಂಟುಮಾಡುವುದಿಲ್ಲವೆಂದು ಕಂಡುಕೊಂಡು ಆತನಲ್ಲಿಯೇ ರತಿಯನ್ನು ಹೊಂದುತ್ತಾಳೆ. ಭಗವಂತನಲ್ಲೇ   ಎಂದೂ ರಮಿಸಬೇಕು ಎನ್ನುವುದನ್ನು  ಆ ವೇಶ್ಯೆಯಿಂದ   ಕಲಿತುಕೊಂಡೆ. 


ಶರೀರವು  ಯೋಗ ಮತ್ತು ಭೋಗ- ಇವುಗಳೆರಡಕ್ಕೂ  ಆಯತನ  ಎಂಬುದನ್ನು ಈ ಶರೀರದಿಂದ ಕಂಡುಕೊಂಡೆ  ಎಂದು ತಿಳಿಸುತ್ತಾರೆ. ಹೀಗೆ  ತಿಳಿಸಿ ರಾಜನಿಂದ ಸತ್ಕಾರವನ್ನು ಪಡೆದು, ದತ್ತಾತ್ರೇಯರು ಹೊರಟುಬರುತ್ತಾರೆ. 


ಸಾಂಸಾರಿಕರಾಗಿದ್ದರೂ ಕೂಡ, ನಾವುಗಳು ಇವುಗಳಲ್ಲಿನ ಅನೇಕ ವಿಷಯಗಳನ್ನು ಅಳವಡಿಸಿಕೊಳ್ಳಬಹುದು ಎಂದನಿಸುತ್ತದೆ  - ಕ್ಷಮೆ, ಗಾಂಭೀರ್ಯ, ಅನಾಯಾಸ, ನಿಃಸ್ಪೃಹತೆ, ಭಗವಂತನಲ್ಲಿ ಭಕ್ತಿ- ನಂಬಿಕೆಗಳು, ನೇರಬಾಣದಂತಹ ಸರಳವಾದ ಮನಸ್ಸು, ತನ್ಮಯತೆ, ಬೇಡದುದಕ್ಕೆ  ಆಸೆಪಡದಿರುವುದು   ಮತ್ತು  ಇನ್ನೂ  ಅನೇಕ ಪಾಠಗಳನ್ನು ನಾವು ಈ ವೃತ್ತಾಂತದಿಂದ ಕಲಿಯಬಹುದಾಗಿದೆ.


ಸೂಚನೆ : 11/2/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Sunday, December 11, 2022

ಯಾರೀ ಪುರವಾಸಿ? (Yari Puravasi?)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in)


'ಪುರಂಜನ' ಒಬ್ಬರಾಜ. ಆತ ಸುಖ-ಭೋಗ್ಯಗಳನ್ನರಸುತ್ತಾ ಒಂದು ನಗರದಿಂದ ಮತ್ತೊಂದಕ್ಕೆ ತೃಪ್ತಿಯಿಲ್ಲದೆ ಅಲೆಯುತ್ತಿರುತ್ತಾನೆ. ಕೊನೆಗೂ ತನ್ನೆಲ್ಲ ಆಸೆ-ಆಮಿಷಗಳನ್ನು ತೀರಿಸಬಲ್ಲ, ಸೌಂದರ್ಯ ಮತ್ತು ಸಂಪತ್ತುಗಳಿಂದ ಕೂಡಿದ  ಒಂಭತ್ತು  ದ್ವಾರಗಳುಳ್ಳ ಒಂದು ಸುಂದರನಗರಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ  ಸಖಿಯರು - ಭಟರಿಂದೊಡಗೂಡಿದ  ರೂಪ-ಲಾವಣ್ಯ -ತಾರುಣ್ಯಗಳ ಖನಿಯಾದ  ಒಬ್ಬ  ಯುವತಿಯನ್ನು ಕಾಣುತ್ತಾನೆ.  ಕಂಡೊಡನೆ, ಅವಳಲ್ಲಿ ಅನುರಕ್ತನಾದ  ಪುರಂಜನ ಕೇಳುತ್ತಾನೆ -"ತರುಣಿ ನೀನ್ಯಾರು? ಈ ಪುರ ಯಾರದು? ಇವರೆಲ್ಲರೂ ಯಾರು? ನಿನ್ನಲ್ಲಿ ನಾನು ಅನುರಕ್ತನಾಗಿದ್ದೇನೆ. ನನ್ನನ್ನು ವರಿಸುವೆಯಾ?"  'ಬುದ್ಧಿ' ಎಂಬ ಅವಳು ಉತ್ತರಿಸುತ್ತಾಳೆ-  "ನಾನು ಯಾರೆಂದು ನನಗೇ ತಿಳಿಯದು. ಇವರೆಲ್ಲರೂ ನನ್ನ  ಸಖ- ಸಖಿಯರು; ನನ್ನನ್ನು ರಕ್ಷಿಸುತ್ತಿದ್ದಾರೆ. ಈ ಪುರವನ್ನು  ಒಂದು ಐದು  ಹೆಡೆ ಸರ್ಪ ಹಗಲು -ಇರುಳೆನ್ನದೆ ಕಾಯುತ್ತಿದೆ.  ಇವರುಗಳ ರಕ್ಷಣೆಯಲ್ಲಿ ನಾನು ಸುಖಿ. ನನಗೂ ನಿನ್ನ ಮೇಲೆ ಒಲವು. ನಿನ್ನನ್ನು ವರಿಸುವೆ" . 


ಅವಳಿಂದೊಡಗೂಡಿದ ಪುರಂಜನ ಎಡೆಬಿಡದೆ, ಹಗಲಿರುಳೆನ್ನದೆ,  ಸುಖ- ಐಶ್ವರ್ಯಗಳನ್ನೆಲ್ಲ ಅನುಭವಿಸುತ್ತಿರುತ್ತಾನೆ. ಪುರಂಜನನಿಗೆ ಒಬ್ಬ ಸ್ನೇಹಿತ - 'ಅವಿಜ್ಞಾತ' ನೆನ್ನುವವ. ತನ್ನ ವಿಷಯ ಲೋಲುಪತೆಯಲ್ಲಿ ಪುರಂಜನ, ಅವಿಜ್ಞಾತನನ್ನು  ಪೂರ್ಣ ಮರೆಯುತ್ತಾನೆ. ಆದರೂ ಅವಿಜ್ಞಾತ ಅವಶ್ಯವಿದ್ದಾಗಲೆಲ್ಲ ಆತನ ರಕ್ಷಣೆ ಮಾಡುತ್ತಿರುತ್ತಾನೆ -ಇವನ ಅರಿವಿಗೆ ಬಾರದೆಯೇ. 

ಈ ನಗರದಮೇಲೆ 'ಚಂಡವೇಗ'ನೆನ್ನುವ ಗಂಧರ್ವರಾಜನ ಕಣ್ಣು ಬೀಳುತ್ತದೆ. ತನ್ನ ಮುನ್ನೂರ-ಅರವತ್ತು ಗಂಧರ್ವ ಪುರುಷ- ಸ್ತ್ರೀಯರೊಡಗೂಡಿ ಈ ನಗರದ ಮೇಲೆ ಸತತ ದಾಳಿ ಮಾಡುತ್ತಾನೆ. ಜೊತೆಗೆ 'ಜರಾ' ಎನ್ನುವ ಕುರೂಪಿ ಸ್ತ್ರೀಗೂ ಪುರಂಜನನ ಮೇಲೆ ಎಲ್ಲಿಲ್ಲದ ಪ್ರೀತಿ. ತಾನು ಕಣ್ಣಿಟ್ಟವರನ್ನು ವಶಪಡಿಸಿಕೊಳ್ಳಬಹುದೆಂಬ  'ವರ' ಬೇರೆ ಆಕೆಗೆ ಇತ್ತು. ಜರೆಗೆ ಯವನರಾಜನಾದ 'ಭಯ' ಎನ್ನುವವನ ಸಹೋದರ 'ಪ್ರಜ್ವಾರ' ನ ಸಹಾಯ ಬೇರೆ. ಚಂಡವೇಗ ಮತ್ತು ಪ್ರಜ್ವಾರ, ಪುರದಮೇಲೆ ಲಗ್ಗೆ ಹತ್ತಿ ಬೆಂಕಿ ಇಟ್ಟರೆ, ಜರೆ, ಪುರಂಜನನನ್ನು ಆಕ್ರಮಿಸಿಕೊಳ್ಳುತ್ತಾಳೆ. ಆಕ್ರಮಣವನ್ನೆದುರಿಸಿ,  ಭಟರು ಕ್ರಮೇಣ ಕ್ಷೀಣಿಸುತ್ತಾರೆ. ಹಾಗೂ ಎಡೆಬಿಡದ ಸಾಹಸದಿಂದ ಹೋರಾಡಿ, ಬೆಂಕಿಯಿಂದ ಮೈಯೆಲ್ಲಾ ಸುಟ್ಟ  ಸರ್ಪ, ಕೊನೆಗೂ ಪುರವನ್ನು ತ್ಯಜಿಸುತ್ತದೆ. ಇದಕ್ಕೆ ಮೊದಲೇ, ಜರೆಯ ಆಘಾತದಿಂದ ಘಾಸಿಗೊಂಡ ಬುದ್ಧಿಯು ಪುರಂಜನನನ್ನು ತ್ಯಜಿಸಿರುತ್ತಾಳೆ. ಇಷ್ಟೆಲ್ಲಾ ಆದರೂ ಇನ್ನೂ ವಿಷಯ - ಲೋಲುಪತೆಯಿಂದ ನರಳುತ್ತಿದ್ದ ಪುರಂಜನ, ಕೊನೆಗೂ  ಅಸುನೀಗುತ್ತಾನೆ.

 

ಸ್ತ್ರೀ ಚಿಂತೆಯಲ್ಲೇ ಅಸುನೀಗಿದ ಪುರಂಜನ, ಒಂದು ಸ್ತ್ರೀಯಾಗಿಯೇ ಜನ್ಮತಾಳುತ್ತಾನೆ, ವಿದರ್ಭದೇಶದ ರಾಜಕುಮಾರಿಯಾಗಿ. ಅವಳ ತಂದೆ ಆಕೆಯನ್ನು ಪಾಂಡ್ಯದೇಶದ 'ಮಲಯಧ್ವಜ' ಎಂಬ ಜ್ಞಾನಿ ರಾಜನಿಗೆ  ವಿವಾಹ ಮಾಡಿಕೊಡುತ್ತಾನೆ. ಇಹಸೌಖ್ಯವನ್ನು, ಪರ ಆನಂದಕ್ಕೆ ಧಕ್ಕೆ ಇಲ್ಲದೆ ಅನುಭವಿಸಲು  ಪರಿಣತನಾಗಿದ್ದ ಮಲಯಧ್ವಜ, ತನ್ನ ಕರ್ತವ್ಯಗಳನ್ನೆಲ್ಲ ನಿರ್ವಹಿಸಿ, ಧರ್ಮ ಆದೇಶಿಸುವ  ರೀತಿಯಲ್ಲಿ  ಕಾಲಕ್ರಮದಲ್ಲಿ ವಾನಪ್ರಸ್ಥ ಆಶ್ರಮವನ್ನು  ಸ್ವೀಕರಿಸುತ್ತಾನೆ. ತಪಸ್ಸಿನಲ್ಲಿ ಮುಳುಗಿದ್ದ ಆತ, ಅಂತ್ಯಕಾಲದಲ್ಲಿ ಸಮಾಧಿಯಿಂದ ತನ್ನ ಆತ್ಮವನ್ನು ಭಗವಂತನಲ್ಲಿ ಸಮರ್ಪಿಸುತ್ತಾನೆ - 'ಯೋಗೇನಾಂತೇ ತನುತ್ಯಜಾಮ್' ಎಂಬ ರೀತಿಯಲ್ಲಿ.  ಏನೂ ಅರಿಯದ ಆತನ ಪತ್ನಿ ರೋದಿಸುತ್ತಿರುತ್ತಾಳೆ, ದಿಕ್ಕುತೋಚದೆ. ಆಗ ಪ್ರತ್ಯಕ್ಷನಾದ ಅವಳ  ಜನ್ಮ-ಜನ್ಮಾಂತರದ ಸ್ನೇಹಿತ, ಅವಿಜ್ಞಾತ,  ಆತ ಸ್ತ್ರೀಯಲ್ಲ, ಸುಖ- ಸೌಖ್ಯಗಳನರಸುತ್ತಾ ಓಡಾಡುವ ಪುರಂಜನ ಎಂಬ ಪುರುಷ ಎಂಬುದನ್ನು ನೆನಪಿಗೆ ತಂದುಕೊಡುತ್ತಾನೆ. ಜೊತೆಗೆ " ನಾನು ನಿನ್ನ ಜನ್ಮಜನ್ಮಾಂತರದ ಸ್ನೇಹಿತ. ಎಲ್ಲ ಕಾಲಗಳಲ್ಲೂ ಆನಂದ ತುಂಬಿ, ಹಂಸಗಳು ನಲಿದಾಡುವ, ಸೂರ್ಯಾಸ್ತವಿಲ್ಲದ, ಶತ್ರುಗಳೇ ಇಲ್ಲದ ರಾಜ್ಯ ಒಂದಿದೆ.  ಬಹಳ ದೂರ ಅದು. ದಾರಿಯೂ ಸುಗಮವಲ್ಲ.  ಅದಕ್ಕೆ ನಾನು ನಿನ್ನನ್ನು ಕರೆದುಕೊಂಡು  ಹೋಗಬಲ್ಲೆ. ನಿನ್ನ ಕೆಲಸವೇನೆಂದರೆ, ಹೆಗಲಮೇಲೆ   ಬಿಗಿಯಾಗಿ, ಬಿಡದಂತೆ, ನನ್ನನ್ನೇ ಆಶ್ರಯಿಸಿ ಕುಳಿತಿರುವುದು. ಬರುತ್ತೀಯಾ?' ಎಂದೂ ಕೇಳುತ್ತಾನೆ. ಅಲೆದಲೆದು  ಬಳಲಿ ಬೆಂಡಾದ  ಪುರಂಜನ, ಅವನನ್ನು ನಂಬಿ, ದಾರಿಯನ್ನು ಅವಿಜ್ಞಾತನೊಂದಿಗೆ ಕ್ರಮಿಸಿ  ಕೊನೆಗೂ ಶಾಂತಿಯ ನೆಲೆಬೀಡನ್ನು  ತಲುಪುತ್ತಾನೆ.  

 

'ಶ್ರೀಮದ್ ಭಾಗವತಕಥಾಮೃತಸಾರದಲ್ಲಿ' ಪೂಜ್ಯ ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ವರ್ಣಿಸಿರುವ ಈ ಭಾಗವತದ ಕಥೆಯ ಮರ್ಮವನ್ನು ಪೂಜ್ಯ ಸ್ವಾಮಿಗಳು ಅವರ ಗುರುಗಳಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಿಂದ ಅರ್ಥೈಸಿದ್ದಾರೆ. 


ಈ 'ಪುರಂಜನ' ಎನ್ನುವವನು  ನಾವೆಲ್ಲರೂ. ಸುಖ-ಸೌಖ್ಯಗಳನ್ನರಸುತ್ತಾ  ವಿಧವಿಧವಾದ  ದೇಹಗಳನ್ನು ಸೃಷ್ಟಿಸಿಕೊಂಡು ದೇಹದಿಂದ ದೇಹಕ್ಕೆ ಓಡಾಡುವವರು - 'ಪುರಂ ಜನಯತೀತಿ  ಪುರಂಜನಃ' . ಬೇರೆ ಬೇರೆ ದೇಹಗಳನ್ನು ಪಡೆದರೂ ಕೇವಲ ಮಾನವದೇಹದಲ್ಲಿ ಸ್ವಲ್ಪ ಮಟ್ಟಿಗೆ ಸುಖವನ್ನು ಬುದ್ಧಿಯೊಡಗೂಡಿ ಅನುಭವಿಸಬಹುದು.  ಎಂಟು ಚಕ್ರಗಳು - ಮತ್ತು  ಒಂಭತ್ತು ದ್ವಾರಗಳುಳ್ಳ  ಈ ಅಯೋಧ್ಯೆ ಎಂಬ ನಗರವನ್ನು  - "ಅಷ್ಟಾಚಕ್ರಾ ನವದ್ವಾರಾ ದೇವಾನಾಮ್ ಪೂರಯೋಧ್ಯಾ"-  ಎಂಬ  ಈ ದೇಹವನ್ನು ಯಾವಾಗಲೂ  ಕಾಪಾಡುತ್ತಿರುವುವು ನಮ್ಮ ಇಂದ್ರಿಯಗಳೆಂಬ ಭಟರು  ಮತ್ತು ಪಂಚಪ್ರಾಣಗಳು. ಸರ್ಪ  - ಪ್ರಜಾಗರ.  ಮುನ್ನೂರ ಅರವತ್ತು   ಹಗಲು -ರಾತ್ರಿಗಳು ಈ  ದೇಹವನ್ನು ಎಡೆಬಿಡದೆ ಲಗ್ಗೆ ಹತ್ತುತ್ತವೆ. ಜರೆ ಎಂಬ ಮುಪ್ಪು  ಬೇಡಬೇಡವೆಂದರೂ ಆಕ್ರಮಿಸಿಕೊಳ್ಳುತ್ತಾಳೆ. ಇಷ್ಟೆಲ್ಲಾ ಆದರೂ ಪುರಂಜನನನ್ನು, ಈ ಜೀವವನ್ನು,  ಕಾಣಿಸದೆ ಕಾಪಾಡುತ್ತಿರುವವ, ಅವಿಜ್ಞಾತನೇ, ದೇವನೇ;   ಯಾವಾಗಲೂ ಅವನೊಡನಿರುವ ಪರಮ ಕರುಣಾಳುವಾದ ಭಗವಂತ - ಉಪನಿಷತ್ತುಗಳು ಹೇಳುವಂತೆ "ದ್ವಾ ಸುಪರ್ಣಾ  ಸಯುಜಾ  ಸಖಾಯಾ  ಸಮಾನಂ ವೃಕ್ಷಮ್ ಪರಿಷಸ್ವಜಾತೇ" . ಅವನು  ಅಂತರಂಗದೊಳಗಿನಿಂದ ಅನೇಕಬಾರಿ, ಕೆಲವೊಮ್ಮೆ ಬಹಿರಂಗವಾಗಿ, ಜ್ಞಾತನಾಗಿ, ಗುರುವಾಗಿ,  ಕೆಲವೊಮ್ಮೆ ಜ್ಞಾನಿಗಳ ಮೂಲಕ, ಋಷಿ ಸಾಹಿತ್ಯದ ಮೂಲಕ ನಮ್ಮನ್ನು ಎಚ್ಚರಿಸುತ್ತಾನೆ. "ನನ್ನನ್ನು ನಂಬು, ನಾನು ನಿನ್ನನ್ನು ಪರಮಶಾಂತಿಯ ತಾಣಕ್ಕೆ  ಕರೆದುಕೊಂಡು ಹೋಗುತ್ತೇನೆ" ಎಂದು. ನಂಬಿ ನಡೆದರೆ ದಡ.  ಇಲ್ಲದಿದ್ದರೆ ಎಡೆಬಿಡದ ಅಲೆತ, ಎಂಬುದೇ ಈ ಕಥೆಯ ತತ್ತ್ವಾರ್ಥ.


ಸೂಚನೆ : 11/12/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.


Sunday, November 13, 2022

ತ್ರಿಗುಣಗಳ ಸಾಮರಸ್ಯವೇ ತ್ರಿಮೂರ್ತಿರಹಸ್ಯ (Trigunagala Samarasyave Trimurtirahasya)

ಲೇಖಕರು : ಶ್ರೀ ಭಾಷ್ಯಂ ರಾಮಚನ್ದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in) 

 


ನಮ್ಮ ಪುರಾಣಗಳಲ್ಲಿ, ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಜಗಳ ಆಗಾಗ್ಗೆ ಕಾಣಿಸಿಕೊಳ್ಳುವ ಪ್ರಸಂಗಗಳಿವೆ.  ದೇವಾಧಿದೇವರಾದ ಇವರಲ್ಲೇ ಜಗಳವಾದರೆ ನಮ್ಮ ಗತಿಯೇನು? ಈ ಜಗಳಗಳಿಗೆ ಏನಾದರೂ ವಿಶೇಷ ಅರ್ಥ ಉಂಟೇ  ಎಂಬ ಪ್ರಶ್ನೆ  ನಮ್ಮಲ್ಲಿ ಕೆಲವರನ್ನಾದರೂ ಕಾಡಬಹುದು.  


ಒಮ್ಮೆ ಕೃಷ್ಣ ಮತ್ತು ಅವನ ಸ್ನೇಹಿತರಾದ ಗೋವಳರು ಆಕಳುಗಳನ್ನು ಮೇಯಿಸಲು ಹೋದಾಗ, ಕೃಷ್ಣ  ಏನು  ಮಾಡುತ್ತಾನೆ ನೋಡೋಣ  ಎಂದು ಬ್ರಹ್ಮ,  ಗೋಪಾಲರು ಮತ್ತು ಗೋವುಗಳನ್ನೆಲ್ಲಾ  ತನ್ನ ಯೋಗಮಾಯೆಯಿಂದ  ಒಂದು ಗುಹೆಯಲ್ಲಿ ಮುಚ್ಚಿಟ್ಟ. ಕೃಷ್ಣ , ತನ್ನ ಯೋಗಮಾಯೆಯಿಂದ ಎಲ್ಲವೂ ತಾನಾಗಿ ಏನೂ ವ್ಯತ್ಯಾಸವಿಲ್ಲದ ಸ್ಥಿತಿಯನ್ನು ಕಲ್ಪಿಸಿದ. ಸಂಜೆ ಎಂದಿನಂತೆ, ಗೋಪಾಲರು- ಆಕಳುಗಳು ಮನೆಗಳಿಗೆ ಹಾಜರ್!  ಗುಹೆಯೊಳಗಿನ  ಆಕಳುಗಳು ಮತ್ತು ಗೋವಳರಿಗೆ ಕೃಷ್ಣನ ಸಾನ್ನಿಧ್ಯದಿಂದ ಎಲ್ಲಿಲ್ಲದ ಆನಂದ. ಹಾಗೆಯೇ ಹಳ್ಳಿಯ ಮನೆಗಳಲ್ಲಿ  ಕೃಷ್ಣ ಗೋವುಗಳಾಗಿ  -ಗೋಪಾಲರಾಗಿ ಇದ್ದುದರಿಂದ ಅಲ್ಲಿಯೂ ಊಹಿಸಲಸಾಧ್ಯವಾದ ಸಂತೋಷ. ಒಂದು ಸಂವತ್ಸರ  ಕಳೆದ ಮೇಲೆ ಬ್ರಹ್ಮನಿಗೆ  ಗೋವುಗಳ ಮೇಲೂ ಗೋಪಾಲಕರ ಮೇಲೂ ಕರುಣೆ ಉಕ್ಕಿ ಏನಾಗಿದೆಯೋ ಎಂದು ನೋಡಲುದ್ಯುಕ್ತನಾದ. ಆದರೆ, ಎಲ್ಲರೂ ಆನಂದವಾಗಿದ್ದಾರೆ. ಕೌತುಕವೇನೆಂದರೆ, ಆತನಿಗೆ ನಿಜವಾದ ಗೋಪಾಲರು ಯಾರು ಹಾಗೂ ನಿಜವಾದ  ಗೋವುಗಳು ಯಾವುವು  ಮತ್ತು ಮಾಯಾನಿರ್ಮಿತವಾದುವು ಯಾವುವು  ಎಂದು ಗುರುತಿಸಲಾಗಲಿಲ್ಲ. ಮಾಯೆಯನ್ನು ಕಲ್ಪಿಸಲು ಹೋಗಿ  ಮಾಯಾತೀತ ಭಗವಂತನ ಮಾಯೆಗೆ ತಾನೇ ಸಿಕ್ಕಿಬಿದ್ದ ಅರಿವು ಬಂದೊಡನೆ  ಆತನಲ್ಲಿ  ಕ್ಷಮೆ ಯಾಚಿಸಿದ. ಇದರಂತೆಯೇ ಮತ್ತೊಂದು ಪ್ರಸಂಗ- ದಕ್ಷಯಜ್ಞದಲ್ಲಿ ಈಶ್ವರನ ಸೃಷ್ಟಿಯಾದ  ವೀರಭದ್ರ, ಯಜ್ಞವನ್ನು ಧ್ವಂಸ  ಮಾಡುತ್ತಾನೆ. ಜೀವಭಯದಿಂದ ಜಿಂಕೆಯ ರೂಪವನ್ನು ತಳೆದು ಓಡಿದ ಯಜ್ಞದೇವ, ನಾರಾಯಣನನ್ನು  ಶರಣು ಹೊಂದುತ್ತಾನೆ. ಆಗ ನಾರಾಯಣನಿಗೂ ಪರಶಿವನಿಗೂ ಕಾಳಗ. ಆ ಕಾಳಗದಲ್ಲಿ ಪರಶಿವ ತನ್ನ ಪರಶುವನ್ನು ಪ್ರಯೋಗಿಸುತ್ತಾನೆ. ಅದು ನಾರಾಯಣನ ವಕ್ಷಸ್ಥಲದಲ್ಲಿ ಗುರುತು ಮಾಡುತ್ತದೆ. ಪ್ರತಿಯಾಗಿ ನಾರಾಯಣ ಪ್ರಯೋಗಿಸಿದ ಋಷೀಕ ಅಸ್ತ್ರ, ಈಶ್ವರನ ಕೊರಳಲ್ಲಿ ಗುರುತು ಮಾಡುತ್ತದೆ. ಇಬ್ಬರೂ ನಕ್ಕು ರಾಜಿ ಮಾಡಿಕೊಳ್ಳುತ್ತಾರೆ. 

 

ಬ್ರಹ್ಮ ವಿಷ್ಣು ಮಹೇಶ್ವರರಾರು? ರಜಸ್ಸು -ಸತ್ತ್ವ  - ತಮಸ್ಸುಗಳ  ಅಧಿದೇವತೆಗಳು. ಇವರುಗಳ ಕೆಲಸದಲ್ಲಿ ಯಾರದಾದರೂ ಪ್ರಭಾವ ಹೆಚ್ಚಿರಬೇಕಾದರೆ ಉಳಿದವರ ಚಟುವಟಿಕೆಯ ಪ್ರಮಾಣ ಕಿರಿಯದಾಗಿರಬೇಕು. ಕೆಲಸ ಮಾಡಬೇಕಾದರೆ ನಿದ್ರೆ  ಹಿಂದಕ್ಕಿರಬೇಕು.  ಹಾಗೆಯೇ ಒಂದೆಡೆ  ಕುಳಿತು ಸಮಾಧಾನವಾಗಿ ಯೋಚಿಸಬೇಕಾದರೆ, ಕ್ರಿಯೆ ಮತ್ತು ನಿದ್ರೆ ಹಿಂಬದಿಗೆ ಹೋಗಬೇಕು. ನಿದ್ರೆ ಚೆನ್ನಾಗಿ ಹತ್ತಬೇಕಾದರೆ ಚಟುವಟಿಕೆ ಮತ್ತು ಚಿಂತೆ ಇರಬಾರದು. ಒಂದು ಗುಣ ವಿಶೇಷವಾಗಿ ಕೆಲಸ ಮಾಡಬೇಕಾದಾಗ, ಉಳಿದ ಗುಣಗಳನ್ನು ಹಿಂದಕ್ಕೆ ಸರಿಸುವ ಪ್ರಕ್ರಿಯೆಯನ್ನೇ  ಪುರಾಣ ಕಥೆಗಳು,' ತ್ರಿಮೂರ್ತಿಗಳ ಜಗಳ' ಎಂದು ನಿರೂಪಿಸುತ್ತವೆ. 

 

ಇವುಗಳನ್ನು ಶ್ರೀರಂಗಮಹಾಗುರುಗಳು -ಹಾಲು  ಮೊಸರು-ಬೆಣ್ಣೆ-ತುಪ್ಪ -ಈ ಸುಂದರ ಉದಾಹರಣೆಗಳ ಮೂಲಕ ವಿಶದೀಕರಿಸುತ್ತಿದ್ದರು.  ಹಾಲು ಮೊಸರಾಗಬೇಕಾದರೆ, ಸ್ವಲ್ಪ ಮೊಸರು ಸೇರಿಸಬೇಕು. ಆಗ ರಾತ್ರಿಯೆಲ್ಲಾ ಹಾಲಿಗೂ ಮೊಸರಿಗೂ ಜಗಳ.  ಕೊನೆಗೆ ಹಾಲು ಸೋತು ಮೊಸರಾಗುತ್ತದೆ. ಮೊಸರು ಬೆಣ್ಣೆಯಾಗಬೇಕಾದರೆ ಕಡೆಗೋಲಿನಿಂದ ಕಡೆಯಬೇಕಾಗುತ್ತದೆ. ಮೊಸರು ಸೋತು, ಬೆಣ್ಣೆ ಬೇರೆಯಾಗುತ್ತದೆ. ಕಾಯಿಸಿದರೆ ಬೆಣ್ಣೆ, ತುಪ್ಪವಾಗುತ್ತದೆ.  ತುಪ್ಪವನ್ನು ಹಾಲಿಗೆ ಸೇರಿಸಿದರೆ ಹಾಲು ಕೆಡುತ್ತದೆ. ಮೊಸರು, ಬೆಣ್ಣೆ, ತುಪ್ಪ ಹಾಲಿನ ಬೇರೆ ರೂಪಗಳಾದರೂ, ಒಂದನ್ನೊಂದಕ್ಕೆ  ಬೆರೆಸಿದರೆ ತಮ್ಮ ರೂಪವನ್ನು ಕೆಡಿಸಿಕೊಳ್ಳುತ್ತವೆ. ಹೀಗೆಯೇ ಸತ್ತ್ವ-ರಜಸ್ಸು- ತಮಸ್ಸುಗಳೂ. ಇವುಗಳ ಜಗಳವಿಲ್ಲದ ಸ್ಥಿತಿಯೆಂದರೆ, ಅದು ಸಮಾಧಿಸ್ಥಿತಿಯಷ್ಟೇ. ಅಲ್ಲಿ ಎಲ್ಲವೂ ಸಾಮ್ಯಾವಸ್ಥೆಯಲ್ಲಿರುತ್ತದೆ. ಬ್ರಹ್ಮ -ವಿಷ್ಣು- ಮಹೇಶ್ವರರು ಒಪ್ಪಂದ ಮಾಡಿಕೊಂಡು ಅವಿನಾಭಾವವಾಗಿರುವ ಪರಂಜ್ಯೋತಿಯ ಶಾಂತಿಯ ತಾಣ.


ಸೂಚನೆ : 13/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, November 10, 2022

ಒಂದೇ ಶಕ್ತಿಯ ಮೂರು ಮುಖಗಳು-ತ್ರಿಮೂರ್ತಿಗಳು ( Onde Saktiya Muru Mukhagaiu-Trimurtigalu)

ಶ್ರೀ ಭಾಷ್ಯಂ ರಾಮಚನ್ದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in)



 

ತ್ರಿಪುರಾಸುರರ ಸಂಹಾರ, ತ್ರಿಮೂರ್ತಿಗಳು ಸಹಕರಿಸಿ ಸಾಧಿಸುವ ಕೆಲಸದ ಒಂದು ನಿದರ್ಶನ. 


ತ್ರಿಪುರಾಸುರರು, ಸುಬ್ರಹ್ಮಣ್ಯ ಸಂಹಾರ ಮಾಡಿದ ತಾರಕಾಸುರನ ಸುಪುತ್ರರು. ಅವರ ಹೆಸರು ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ. ಮುವರೂ ಈಶ್ವರನ ಪರಮ ಭಕ್ತರು,  ಸತ್ಯವಂತರು, ಧರ್ಮಿಷ್ಟರು, ಮಹಾಪರಾಕ್ರಮಿಗಳು ಮತ್ತು ಉದಾರವಂತರು. ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದರೂ  ಅವರು ದೇವತೆಗಳ ಪರಮ ದ್ವೇಷಿಗಳು. ಅವರು  ಅತ್ಯಂತ ತೀವ್ರವಾದ ತಪಸ್ಸನ್ನು ಪಂಚಾಗ್ನಿಮಧ್ಯದಲ್ಲಿ ಆಚರಿಸಿ, ಬ್ರಹ್ಮದೇವರನ್ನು ಒಲಿಸಿಕೊಂಡು 'ಸಾವಿಲ್ಲದ' ವರವನ್ನು ಬೇಡುತ್ತಾರೆ. ಅದಾಗದೆಂದ ಬ್ರಹ್ಮದೇವರಲ್ಲಿ,  ಸಾವು ಬಂದರೆ ಅದು ಪರಶಿವನಿಂದಲೇ  ಬರಬೇಕೆಂದು ಕೇಳಿ ಪಡೆಯುತ್ತಾರೆ. ಪರಮ ಭಕ್ತರನ್ನು ಎಂದೂ ಪರಶಿವ ವಧಿಸಲಾರನೆಂಬ ತೀವ್ರನಂಬಿಕೆ ಅವರದು. ಬ್ರಹ್ಮದೇವರ ಆಜ್ಞೆಯಂತೆ ಮಯಾಸುರ ಮೂರು ಪಟ್ಟಣಗಳನ್ನು ನಿರ್ಮಿಸಿಕೊಡುತ್ತಾನೆ - ಕಬ್ಬಿಣ , ಬೆಳ್ಳಿ  ಮತ್ತು ಚಿನ್ನದಿಂದ. ಈ  ಪಟ್ಟಣಗಳು ಯಾವಾಗಲೂ ವೇಗವಾಗಿ  ಸಂಚರಿಸುತ್ತಿರುತ್ತವೆ. 


ಸಾವಿರ ವರ್ಷಕ್ಕೊಮ್ಮೆ ಸ್ವಲ್ಪವೇ ಸಮಯ  ಸಂಧಿಸುತ್ತವೆ. ಅಂತಹ  ಸಮಯದಲ್ಲಿ, ಅಭಿಜಿನ್ ಮುಹೂರ್ತದಲ್ಲಿ ಒಂದೇ ಬಾಣದಲ್ಲಿ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಅವರಿಗೆ ಸಾವು ಎಂಬ ವರವಿದೆ. ವರಪಡೆದು ಕೊಬ್ಬಿದ ಇವರನ್ನು ಜಯಿಸಲು   ಸಾಧ್ಯವಾಗದೆ, ದೇವತೆಗಳು ಶಿವನಲ್ಲಿ ಮೊರೆಹೋಗುತ್ತಾರೆ. ಆಗ ಪರಶಿವನು ಧರ್ಮಿಷ್ಠರಾದ  ಇವರನ್ನು ವಧಿಸಲು ಸಾಧ್ಯವಿಲ್ಲ; ಏನಾದರೂ ಮಾಡಿ ಅವರನ್ನು ಧರ್ಮದಿಂದ ಜಾರುವಂತೆ  ಮಾಡಿದರೆ, ನಾನು ವಿಚಾರಿಸಿಕೊಳ್ಳುವೆ ಎಂದು ಆಶ್ವಾಸನೆ ಕೊಡುತ್ತಾನೆ.  ಆಗ ದೇವತೆಗಳು ವಿಷ್ಣುವನ್ನು ಮೊರೆಹೊಗುತ್ತಾರೆ. ವಿಷ್ಣುವು ಒಂದು ಯತಿವೇಷಧಾರಿಯಾದ 'ಮುಂಡಿ' ರೂಪವನ್ನು ಸೃಷ್ಟಿಸಿ, ಆತನನ್ನು ನಾರದರೊಡಗೂಡಿಸಿ ಇವರ ರಾಜ್ಯಕ್ಕೆ ಕಳುಹಿಸುತ್ತಾನೆ. ಇವನು ಧರ್ಮದ ಆಚಾರಣೆಗಳಾದ ಯಜ್ಞ, ಪಿತೃಪೂಜೆ, ದೇವತೆಗಳ ಧ್ಯಾನ  ಫಲ ಕೊಡವು. ದೇವತೆಗಳೇ ಬಹಳ ತಪ್ಪುಗಳನ್ನು ಮಾಡುತ್ತಾರೆ.


ಜಗನ್ನಿಯಾಮಕನಾದ ಈಶ್ವರನ ಅವಶ್ಯಕತೆ ಏನೂ ಇಲ್ಲ. ಕರ್ಮಗಳೇ ಫಲವನ್ನು ಕೊಡುವಾಗ ಈಶ್ವರನ  ಅವಶ್ಯಕತೆಯಾದರೂ ಏನು? ಈ ರೀತಿಯಾಗಿ  ಅಧರ್ಮವನ್ನೇ ಧರ್ಮವೆಂದು ಅತ್ಯಾಕರ್ಷಕವಾಗಿ ಬೋಧಿಸುತ್ತಾ ಇವರ ರಾಜ್ಯದಲ್ಲಿ ತಿರುಗುತ್ತಿದ್ದ. ನಾರದರು ತ್ರಿಪುರಾಸುರರ ಬಳಿ ಹೋಗಿ ಮುಂಡಿಯ ಬೋಧನೆಯನ್ನು ಅದ್ಭುತವಾಗಿ ಹಾಡಿ -ಹೊಗಳಿ, ಮನವೊಲಿಸಿ ಇವರಿಗೆ ಶಿಷ್ಯರನ್ನಾಗಿಸಿ,  ಅವರನ್ನು ಧರ್ಮಮಾರ್ಗದಿಂದ ಜಾರುವಂತೆ ಮಾಡಿ ತನ್ನ  ಕೆಲಸವಾಯಿತೆಂದು ಹಿಂತಿರುಗುತ್ತಾರೆ. ಬ್ರಹ್ಮದೇವರಿಂದ ವರಪಡೆದು ಮಯನಿರ್ಮಿತವಾದ, ಸತ್ತವರನ್ನು ಬದುಕಿಸುವ ಮಾಯಾಕೊಳದ  ನೀರನ್ನು ವಿಷ್ಣು ಮತ್ತು ಬ್ರಹ್ಮ, ಆಕಳು -ಕರುಗಳಾಗಿ, ಮಯ ನೋಡುತ್ತಿದ್ದಂತೆಯೇ ಹೀರಿಬಿಡುತ್ತಾರೆ. ಹೀಗೆ ಧರ್ಮದಿಂದ ಜಾರಿ ಸಿದ್ದಪಡಿಸಿದ ತ್ರಿಪುರಾಸುರರನ್ನು ಬ್ರಹ್ಮನ ಸಾರಥ್ಯದಲ್ಲಿ  ಕಾಲಸ್ವರೂಪವಾದ ರಥದಲ್ಲಿ ಕುಳಿತು, ವಿಷ್ಣುರೂಪಿಯಾದ ಅಗ್ನಿಯ ಅಲಗಿನಿಂದ  ಕೂಡಿದ ಬಾಣವನ್ನು ಪ್ರಯೋಗಿಸಿ ಮೂರುಪಟ್ಟಣಗಳು ಅಭಿಜಿನ್ ಮುಹೂರ್ತದಲ್ಲಿ ಒಂದಾಗಿ ಸೇರಿದಾಗ ಈಶ್ವರ ಭಸ್ಮ ಮಾಡುತ್ತಾನೆ. ಇದು ಸಂಕ್ಷಿಪ್ತವಾದ ತ್ರಿಪುರಾಸುರರ ಕಥೆ. ಭಕ್ತರಾದ ತ್ರಿಪುರೇಶ್ವರರು ಈಶ್ವರನ ಸಾನ್ನಿಧ್ಯ  ಹೊಂದುತ್ತಾರೆ. 

 

ಈ ಕಥೆಯಲ್ಲಿ ತ್ರಿಮೂರ್ತಿಗಳೂ ಒಂದಾಗಿ ಸೇರುವುದನ್ನು ಕಾಣುತ್ತೇವೆ. ಈ ಕಥೆಯ ತತ್ತ್ವಾರ್ಥವನ್ನು ಶ್ರೀರಂಗ ಮಹಾಗುರುಗಳು ಈ ರೀತಿ ವಿಶದಪಡಿಸಿದ್ದರು. ತ್ರಿಪುರಗಳು ಸತ್ತ್ವ, ರಜಸ್, ತಮೋಗುಣಗಳ ಸಂಕೇತ. ಅವುಗಳು ನಿಂತಲ್ಲಿಯೇ ನಿಲ್ಲದೆ ಯಾವಾಗಲೂ ಸಂಚರಿಸುತ್ತಿರುತ್ತವೆ. ಅವುಗಳು ಒಂದೆಡೆ ಸೇರಿದಾಗ ತ್ರಿಮೂರ್ತಿಗಳ ಸಹಕಾರದಿಂದ ನಾಶಪಡಿಸಬೇಕಾಗುತ್ತದೆ, ಆಗ ಸಾಮ್ಯ ಉಂಟಾಗುತ್ತದೆ. ಆಗಷ್ಟೇ ಸಮಾಧಿಸ್ಥಿತಿ ಏರ್ಪಡುವುದು. ಈ ಕಥೆ, ಅಧ್ಭುತವಾದ  ಯೋಗ ಸಮಾಧಿಯ ಸ್ಥಿತಿಗೇರುವ ಗುಟ್ಟನ್ನು ಬಿಚ್ಚಿಕೊಡುತ್ತದೆ.


ಸೂಚನೆ:  10/10/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ. 

Wednesday, April 27, 2022

Let there be Purity of Thought in Offerings

 Kannada Article by: Soumya Pradeep

English Rendering by: M R Bhashyam

Respond to (lekhana@ayvm.in)


It was during the period whence Pānḍavas were living in the jungle. One night, sage Durvāsa along with ten thousand of his disciples arrive to their dwelling.  Pānḍavas and Draupadī had already completed their dinner. Dharmarāja welcomes them with utmost devotion and enquires about their welfare. Sage Durvāsa instructs that they all would be arriving to partake food after finishing their daily oblations in the river. In the inexhaustible vessel of food (Akṣaya Pātre) bestowed by Sun god to Pānḍavas, the rule was that, once Draupadi had finished her dinner, they had to wait till the next day's Sun rise for the food to reappear. How could they serve the guests? What was the means for not being the subjects of anger of sage Durvāsa? A worried Dharmarāja shares his dilemma with Draupadī. Draupadī after contemplating for a while, takes refuge in their ultimate protector from perils, Śrīkṛṣṇa. Responding to her prayers, Śrīkṛṣṇa appears there at that very instant, and lo, demands food. Draupadī consecrating all her thoughts unto Him, offers a single grain of cooked rice that had stuck to the vessel, and, the Lord is satiated partaking that fleck. The moment He consumes that, Sage Durvāsa and his disciples are satiated, they experience filled stomachs. Is it not true the god of fire in the belly of all, Vaiśvānara, is none other than the Soul of souls, Lord Kṛṣna himself? When He himself is satisfied with the food offered by Draupadī, His worshippers, Sage Durvāsa and his disciples, are also satiated and they bless Pānḍavas and take leave. As the Lord Himself says in Bhagavadgītā, He is satisfied with an offering of a leaf, a flower, a fruit or even a drop of water if presented with devotion.  The One who is ever satisfied, loves the sentiment of surrender behind the offering rather than the quantum of offering. He expects and accepts offerings with purity of sentiment, as those of Vidura and Śabarī. While making offerings to the Lord or preceptors or elders, or, for the use of Lord's tasks, the importance is for purity of thought and the sentiment of detachment. Only then it becomes an 'offering' in the true sense. Here, we can recall the words of Śrī Śrīraṅga Mahāguru: In outer space, an ingot of gold and a bale of cotton lose the importance of weight and travel the same way. They become weightless. In the same way, when offerings are made to the Lord with purity of thought, either they are mounds of gold or a single piece of coin, they all take the same form. They take the form of the Lord himself and lose their relative valuations. 

Note: The Kannada version of this article can be viewed at AYVM blogs.

Monday, March 7, 2022

The Oil called the Ambrosia of Devotion

Kannada Article by: Raghavendra Ural

English Rendering by: M R Bhashyam

Respond to (lekhana@ayvm.in)




 

Some amongst us say "Where is God? These are creative imaginations of our own so that we may console ourselves. Do not unnecessarily waste your lives by running behind God etc.  If you have to, then do these after retirement".  Some others say "I have wasted my entire life going behind these ideas of god etc. I have not been able to see Him. People simply say these things. Do not waste your life's while like me".  Let us try to understand the value of these points of view from a story narrated by the revered Śrī Śrīraṅga Mahāguru.

 

"There is a door which is closed for hundreds of years. The door has rusted and because of the rust it is not possible to open the door. Someone has said that there is huge wealth stored behind that door and we are curious to see. 'If the door is oiled, it is possible to remove the rust' someone has advised. Though we doubted, we applied a spoon of oil to the rust and tried opening the door, but the door did not open. So we come to the conclusion 'look we tried. It is impossible to remove the rust by oiling'"

This type of ignorance arises, if we do not understand how much of oil has to be used for a given quantity of rust. Similarly, since we have not opened the internal doors for a long time, the rusts of our character called rajo-guṇa and tamo-guṇa have settled. To remove these, it is necessary to pour the oil called devotion – bhakti-rasa. The quantum of the Bhakti-rasa that needs to be poured depends on the age of the rust; that is all!

"It is impossible to remove the rust of many a birth with just a spoon of devotion. Hence, if the oil of devotion is poured everyday at His divine feet, then the internal doors will open and we will not escape a vision of the benevolent Lord" is the proclamation of our great sages.

"When you are born a human and when the tongue is functioning, can you not say the name Kṛṣṇa" so has said the great devotee Puraṅdaradāsa. He has not said that you do this after retiring from your profession.

Hence, let us pour our oil of devotion, when there is still strength in the body.  Let us make our internal doors open. Let us try to enjoy the joy of His presence in this birth itself. 

Note: The Kannada version of this article can be viewed at AYVM blogs.

Monday, February 21, 2022

Fruit from a Guru


 

Kannada Article by: Vadirāja Prasanna

 English Rendering by: M R Bhashyam

Respond to (lekhana@ayvm.in)



We have some problem or the other in our daily lives. We use some means to come out of these. If we cannot find solutions by ourselves, we consult others.

 

"The mother is the first teacher, Guru, and the home is the first school" is a saying which reflects our first learnings at home. As time progresses, we go to schools and colleges and educate ourselves under the tutelage of several teachers and Gurus and attain graduation. Hence, there is a practice of youngsters learning from elders. Nowadays, we can see that elders learn from youngsters about Computers, TV, Mobile etc. So, the common understanding of the present day is we have to learn from those who are knowledgeable and they are our Gurus.

 

But in Bhāratīya culture, the word Guru has a special meaning. "The letter Gu means darkness and the letter Ru means the One who obliterates it" meaning Guru is the one who removes darkness. So, a question arises as to what this darkness is and what does it mean to say it is eliminated?

 

It is important for one who does not know swimming to have proper guidance from an expert. If by over enthusiasm or carelessness one gets into water, it is possible that life will be in danger. Our life is also like a fast current.  We are being swept away in the deluge of our wants and aspirations. The flow of life does not stop and we cannot be at peace or be contended.  If we want to be peaceful, we should be able to swim in the flood of life and reach the banks. In this rush of worldly life, we need to take asylum in a Guru who has realized the immutable principles and is able to show them to us too.  A Guru can not only negotiate by himself but is also able to make the disciples who have taken refuge in him and follow his guidance, to navigate. Though a Guru may look like an ordinary person he is not afraid of worldly perils;, for, he is anchored to God and is traversing the inner-path, .  That is why the saying "Guru is Brahma, Guru is Viṣṇu and Guru is Mahesvara,  Guru is Parambrahman Himself, so prostrate to that Guru" has come into being. Here it is appropriate to recall the words of Śrī Śrīraṅga Mahāguru "The importance to a match stick is because it contains powder, not because it is a wooden stick. The word Guru is not used for the person but for the energy resident in him.   The power of that greatness comes to light when there is a union, the yoga, of Guru-Siśya (disciple) and the Lord.

 

Having realized Paramatman himself, a Mahāguru is someone who is able to make others also realize God when they come to him for asylum.  If we take refuge in such a guru and live a life as per his intent and traverse the path of yoga as per his direction, we can get rid of the internal darkness and realize the eternal effulgent light, the pinnacle of joy resident in our own selves. We can thus attain the ultimate fruit of liberation in this birth itself.  


Note: The Kannada version of this article can be viewed at AYVM blogs.

Friday, January 14, 2022

Sankranti is Here

By M R Bhashyam

Respond to (lekhana@ayvm.in)



 

It is freezing. But the Sun is about to transit into Capricorn. This is the beginning of the end of winter. Rivers and lakes are not full but water is not so scarce either.  The nature is ready to wade into the next phase. Farmers have just now harvested a bounty. Their creased faces have given way to smiles.  Sun is changing his course and moving from south to north, from dakṣināyaṇa to uttarāyaṇa.  Though the common understanding of uttarāyaṇa is movement of Sun towards north, it also means movement towards the exalted. The life breath of men and animals, Prāṇa, has a natural upward mobility. Nature is providing a transition period, a Sandhi, a granthi, for all to move upwards towards The Lord and his abode of serenity. The period is so auspicious that the great Bhīṣma was supposed to have waited for the Uttarāyaṇa, to give up his body on his onward journey to the heavenly abode.  The beginning of winter solstice, Sankrānti, draws one and all from the humdrum of the outer life towards the serenity of the inner self.  This is the period which weaves festivals as a garland for inner joy and external happiness. This also heralds the arrival of temple car-festivals, not one but many.

 

Just a few days before Sankrānti, there is the celebration of Vaikunṭha Eakadaśī, the day on which the Lord has opened the doors of His abode to all. People in India visit temples in huge numbers to have the darśan of the Lord.  Preceding this, the entire month of dhanurmāsa or mārgazhi māsam is devoted to the worship of the Lord, especially in the south where the great devotee saint Āndāl spent an entire month along with her friends in the worship of the Lord singing His glory as Tiruppavai.

 

The day of the transition of the Sun is celebrated in almost all parts of India with different names.   It is known as Makara Sankrānti in Karnataka, Telangaṇa and Maharashtra, Pongal in Tamil Nadu, Magh Bihu in Assam, Magha Mela in parts of central and north India, as Makar Sankrānti in the west, Maghara Valakku in Kerala etc.

 

Śrī Śrīraṅga Mahāguru, used to say festivals are like the rings of a sugarcane full of spiritual juice. Sankrānti is a festival which is one of the more potent ones where the condition of the body, mind and breath can shift easily from the outer to the inner world.  Śrī Mahāguru, who was an adept, used to say that if one were to know the ancient science of Nāḍī Vijñāna, it is easy to know the truth behind this statement.  In addition to the worship of the Lord, oblations are also paid to pitṛs, the god- heads representing our forefathers.  While the worship of the Lord is through pooja, naivedya etc, the worship of the pitṛs is by performing tarpaṇa. Great benefits can be derived for the progeny if sesame is given as dāna to the eligible, especially to the realized souls.  It is customary to take a holy dip in sacred rivers to cleanse our mind and body and to elevate us internally.

In parts of India, especially the south, the day previous to Sankrānti is celebrated as Bhogi and as the name implies it is for enjoying the bounty that has just been harvested. The next day is Sankrānti and the third day is reserved for the worship of the cows. Cows, useful in many ways are a source of Sātvik vibrations and are abodes for many gods. They are washed, decorated, worshipped, fed sumptuously and are presented and paraded.  On this day, offerings are also made to other birds and beings- bhutās by ladies to satiate them.  Milk is also traditionally heated in crown-shaped vessels, and allowed to boil over, indicating the overflow and cascading of spiritual ambrosia when the Lord is attained.

 A common offering during the Sankrānti is a very tasty mixture of sesame, jaggery, copra prepared in different ways in different parts of India. While sesasme is supposed to be pithakāri as per Ayurveda, the others are added to restore the balance between Vāta, Pitha and Sleṣma.  This mixture along with pieces of sugarcane is distributed to the near and dear ones, friends and neighbours.  Sugarcane represents our spinal cord, the merudanḍa which is the highway for the transit of spiritual energy.  It is also a practice to seat all children in the evening, and pour on their head sesame and perform ārati.

To summarize, in the words of Śrī Śrīraṅga Mahāguru, festivals are boons granted by the Lord in Time and discovered by our sages to propel us through the pleasures of our senses towards the joy of our inner souls, and Sankrānti is one of the more potent of them.