Sunday, September 27, 2020
ಆರ್ಯಸಂಸ್ಕೃತಿ ದರ್ಶನ - 12 (Arya Samskruti Darshana - 12)
Thursday, September 24, 2020
ಯಾವುದು ಈ ಗಂಡಭೇರುಂಡ ? (Yavudu E Gandabherunda ?)
ಒಮ್ಮೆ ಕಾಡಿನಲ್ಲಿ ಒಂದು ಗಂಡಭೇರುಂಡ ಪಕ್ಷಿಯು ಆಹಾರಕ್ಕಾಗಿ ಅರಣ್ಯದಲ್ಲೆಲ್ಲಾ ಹುಡುಕಾಡುತ್ತಿತ್ತು. ಮಾವಿನ ಹಣ್ಣಿನ ಮರವೊಂದು ಅದರ ಕಣ್ಣಿಗೆ ಕಾಣಿಸಿತು. ಮರದಕೆಳಗೆ ಬಿದ್ದ ಮಾವಿನಹಣ್ಣುಗಳನ್ನು ಎಡತಲೆಯ ಕೊಕ್ಕಿನಿಂದ ತಿನ್ನುತ್ತಿರಲು, ಬಲ ತಲೆಯು ಮರದ ಮೇಲಿನ ರಸಭರಿತ ಹಣ್ಣುಗಳನ್ನು ಕಂಡಿತು. ಅದರ ಮೇಲೇರಿ ಬಲತಲೆಯಿಂದ ರಸಭರಿತ ಹಣ್ಣುಗಳನ್ನು ತಿನ್ನತೊಡಗಿತು. ಹೀಗೆಯೇ ಕೆಲದಿನಗಳು ಎಡತಲೆಯು ಕೆಳಗೆಬಿದ್ದ ಹಣ್ಣುಗಳನ್ನು ತಿನ್ನುವುದನ್ನು ಮುಂದುವರೆಸಿತ್ತು, ಕಾರಣ ಕೆಳಗೆ ಬಿದ್ದು ಕೊಳೆತ ಹಣ್ಣಿನ ಹುಳಿರುಚಿಗೆ ಅದು ಒಗ್ಗಿಕೊಂಡಿತ್ತು. ಕಾಲಕ್ರಮೇಣ ಕೆಳಗೆಬಿದ್ದ ಹಣ್ಣುಗಳು ಖಾಲಿಯಾದವು. ಬಲತಲೆಯು ಯಾವಾಗಲೂ ರಸಭರಿತವಾದ ಮರದ ಮೇಲಿನ ಹಣ್ಣುಗಳನ್ನು ಮಾತ್ರ ತಿನ್ನುತಿತ್ತು. ಅವು ಖಾಲಿಯಾಗದೇ, ಅದಕ್ಕೆ ನಿರಂತರವಾಗಿ ರಸಭರಿತವಾದ ಹಣ್ಣುಗಳು ಸಿಕ್ಕುತ್ತಿದ್ದವು. ಹೋಗುತ್ತಿದ್ದುದು ಒಂದೇಹೊಟ್ಟೆಗಾದರೂ ಈ ವೈಶಿಷ್ಟ್ಯದಿಂದ ಕೂಡಿದ ಗಂಡಭೇರುಂಡ ಇದಾಗಿತ್ತು.
ಇದು ನಮ್ಮ ಕಥೆಯೇ. ಅರಣ್ಯವೆಂದರೆ ಈ ಸೃಷ್ಟಿ. ಗಂಡಭೇರುಂಡ ನಾವೇ. ಇನ್ನು ಎರಡುತಲೆಗಳೆಂದರೆ, ಇಂದ್ರಿಯ ಸುಖ ಮತ್ತು ಅತೀಂದ್ರಿಯ ಸುಖಪಡೆಯಲು ಇರುವ ನಮ್ಮ ಶರೀರದಲ್ಲಿನ ವ್ಯವಸ್ಥೆ. ಕೆಳಗೆಬಿದ್ದ ಮಾವಿನ ಹಣ್ಣು ತಕ್ಷಣವೇ ಕಾಣುವ ಇಂದ್ರಿಯ ಸುಖ, ಕಾಲಕ್ರಮೇಣ ಕೆಳಗೆಬಿದಿದ್ದ ಹಣ್ಣುಗಳು ಖಾಲಿಯಾಗುವುದೆಂದರೆ, ಇಂದ್ರಿಯ ಸುಖವು ಶಾಶ್ವತವಲ್ಲ ಮತ್ತು ದುಃಖಮಿಶ್ರಿತ. ಬಲತಲೆ, ಮರದಮೇಲೆ ರಸಭರಿತ ಹಣ್ಣು ಕಂಡಿತು ಎಂದರೆ, ತಪಸ್ಯೆಯಿಂದ ಯೋಗದೃಷ್ಟಿಯಲ್ಲಿ ಊರ್ಧ್ವದಲ್ಲಿ ಕಾಣಬೇಕಾದ ಪರಂಜ್ಯೋತಿ ದರ್ಶನ. ಮೇಲೇರಿ ರಸಭರಿತವಾದ ಹಣ್ಣನ್ನೇ ತಿನ್ನುತ್ತಿತ್ತು ಎಂದರೆ ಬೇಕಾದಾಗ ಸ್ವ-ಇಚ್ಛೆಯಿಂದ ಯೋಗಮಾರ್ಗದಲ್ಲಿ ಹೋಗಿ ಪರಂಜ್ಯೋತಿಯಲ್ಲಿ ಲೀನವಾಗುತ್ತಿತ್ತು. ಆದರೂ ಖಾಲಿಯಾಗುತ್ತಿರಲಿಲ್ಲವೆಂದರೆ –ಪರಂಜ್ಯೋತಿಯ ಅನುಭವದ ಶಾಶ್ವತವಾದ ಪರಮಸುಖ. ಹೋಗುತ್ತಿದ್ದದ್ದು ಒಂದೇ ಹೊಟ್ಟೆ ಎಂದರೆ ಒಳಗಿರುವಜೀವಕ್ಕೆ. ಈ ವೈಶಿಷ್ಟ್ಯದಿಂದ ಕೂಡಿದ ಗಂಡಬೇರುಂಢವೆಂದರೆ, ಯೋಗ-ಭೋಗಾಯತನವಾದ ಈ ಶರೀರ. ಇಂತಹ ಜೀವನ ದೃಷ್ಟಿ ವಿರಳ. ಹಾಗೆಯೇ ಗಂಡಭೇರುಂಡವೂ ವಿರಳವೇ.
"ಜೀವನ ಒಂದು ಗಂಡ - ಭೇರುಂಡ ಪಕ್ಷಿಯಂತೆ ದ್ವಿಮುಖವಾದದ್ದು. ಒಂದು ಗಂಡ, ಇನ್ನೊಂದು ಭೇರುಂಡ. ಹೀಗೆ ದ್ವಿಮುಖ ಜೀವನದ ಈ ಪಕ್ಷಿ ಅಪ್ರತಿಹತವಾದ ನಡೆಯಿಂದ ದಿವಿಯನ್ನೂ ಭುವಿಯನ್ನೂ ಮುಟ್ಟಬಲ್ಲ ಭೂಸುರ ಪಕ್ಷಿಯಾಗಿದೆ. ಹೀಗೆಯೇ ಇಲ್ಲಿಯೂ ಏಕಶರೀರ, ಪ್ರವೃತ್ತಿ - ನಿವೃತ್ತಿ ಮಾರ್ಗಗಳೆಂಬ ದ್ವಿಮುಖ. ಎರಡಕ್ಕೂ ಹೊಂದಿಕೊಳ್ಳುವಂತೆ ಚತುರ್ಭದ್ರವನ್ನು ಸಾಧಿಸುವುದೇ ಧ್ಯೇಯ. ಅದಕ್ಕೊಸ್ಕರವಾಗಿ ಹೋರಾಟ, ಹಾರಾಟ ಎಲ್ಲವೂ ಇದೆ." ಎಂಬ ಯೋಗಿವರೇಣ್ಯ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.
ನಾವೆಲ್ಲರೂ, ನಮ್ಮ ದೇಶದ ಮಹರ್ಷಿಗಳಂತೆ ಯೋಗ-ಭೋಗಗಳಿಗೆ ಆಶ್ರಯವಾದ ನಮ್ಮಗಂಡಭೇರುಂಡ ರೂಪೀ ಶರೀರವನ್ನು ಇಹ-ಪರಜೀವನಗಳನ್ನು ಅನುಭವಿಸಲು ಯೋಗ್ಯವಾಗುವಂತೆ ಇಟ್ಟುಕೊಳ್ಳುವಂತಾಗಲಿ ಮತ್ತು ಮಹತ್ತರವಾದುದನ್ನು ಸಾಧಿಸುವಂತಾಗಲಿ.
ವೆಂಕಟೇಶ ಬ್ರಹ್ಮರಥೋತ್ಸವದ ಅಂತರಾರ್ಥ (Venkatesha Brahmarathotsavada Antarartha)
ಬ್ರಹ್ಮರಥೋತ್ಸವ-ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ:
ರಥೋತ್ಸವಗಳು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ದೇವಸ್ಥಾನದ ಪೂಜೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಬ್ರಹ್ಮರಥೋತ್ಸವ ಇದಾಗಿದೆ. "ತೇರನೇರಿ ಬೀದಿಯಲಿ ಮೆರೆವ ರಂಗನ ನೋಡದ ಕಂಗಳಿದೇತಕೋ" ಎಂಬಂತೆ ವಿಶೇಷವಾಗಿ ರಥೋತ್ಸವದ ಬಗ್ಗೆ ದಾಸರು ಕೊಂಡಾಡಿದ್ದಾರೆ. ಆಗಮ ಶಾಸ್ತ್ರಗಳಲ್ಲಿ ರಥೋತ್ಸವದ ಬಗ್ಗೆ ಅದ್ಭುತವಾದ ಕೊಂಡಾಟವಿದೆ. ಎಷ್ಟರಮಟ್ಟಿನ ಕೊಂಡಾಟ ಎಂದರೆ "ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ" - ಆ ರಥದಲ್ಲಿ ಇರುವ ದೇವನನ್ನು ನೋಡಿದರೆ ಅವನಿಗೆ ಪುನರ್ಜನ್ಮವಿಲ್ಲ ಎಂದು ಘೋಷಣೆ ಮಾಡುತ್ತಾರೆ. ನಮಗೆಲ್ಲ ಆಶ್ಚರ್ಯವಾಗಬಹುದು. ಮೋಕ್ಷವನ್ನು ಹೊಂದಲು ಗುರುಗಳ ಅನುಗ್ರಹ, ಸಾಧನೆ, ಅನುಷ್ಠಾನ ವ್ರತ ನಿಯಮಗಳು, ಏಕಾಗ್ರತೆ, ಧ್ಯಾನ, ಯೋಗಾಭ್ಯಾಸ, ವೇದಾಧ್ಯಯನ ಇತ್ಯಾದಿ ಇಷ್ಟಾರು ವಿಸ್ತಾರವಾದ ಸಾಧನಾ ಮಾರ್ಗಗಳನ್ನು ಹೇಳಿದ್ದಾರೆ. ಅಷ್ಟೆಲ್ಲ ಕಷ್ಟವೇ ಇಲ್ಲದೇ ಮನೆ ಮುಂದೆ ಬಂದ ರಥದಲ್ಲಿರುವ ದೇವರನ್ನು ನೋಡಿದರೆ ಸಾಕು ಎಂದರೆ ಈ ಸಾಧನಾ ಮಾರ್ಗಗಳೆಲ್ಲ ಏಕೆ ಎನ್ನಿಸಬಹುದು.
ಯಾವುದು ಆ ರಥ?:
ಆ ರಥ ಯಾವುದು? ಉಪನಿಷತ್ತು ಅಪ್ಪಣೆ ಕೊಡಿಸಿದಂತೆ- ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವತು..ಜೀವನ ಯಾತ್ರೆಗೆ ಸಾಧನವಾದ ನಮ್ಮ ದೇಹವೇ ರಥವಾಗಿದೆ. ರಥಿಯೇ ಭಗವಂತನ ಅಂಶವಾದ ಜೀವನಾಗಿದ್ದಾನೆ. ನಿಶ್ಚಯಾತ್ಮಕವಾದ ಬುದ್ಧಿಯೇ ಸಾರಥಿ. ಮನಸ್ಸೇ ಕಡಿವಾಣ. ನಮ್ಮನ್ನು ಎಲ್ಲೆಡೆಗೆ ಒಯ್ಯುವ ಇಂದ್ರಿಯಗಳೇ ಕುದುರೆಗಳು. ಅರ್ಜುನನಂತೆ ನಮ್ಮ ಗಮ್ಯಸ್ಥಾನವಾದ ಪರಮಾತ್ಮನನ್ನೇ ಸಾರಥಿಯನ್ನಾಗಿ ಇಟ್ಟುಕೊಂಡರೆ ಅಂತಹ ರಥವು ದಾರಿ ತಪ್ಪದು. "ಜೀವನದ ಅಪಾರ್ಥಗಳನ್ನೆಲ್ಲ ಕಳೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಉದ್ದೇಶದಿಂದ ಅವನು ಪಾರ್ಥಸಾರಥಿಯನ್ನು ಇಟ್ಟುಕೊಂಡನಪ್ಪಾ" ಎಂಬುದು ಶ್ರೀರಂಗ ಮಹಾಗುರುಗಳ ಅಮೃತವಾಣಿ. ಅವನು ನರರಥದಲ್ಲಿರುವ ನಾರಾಯಣ. ನಮ್ಮ ಶರೀರರಥದ ಪ್ರತಿನಿಧಿಯೇ ಹೊರಗಿನ ರಥವಾಗಿದೆ. ರಥದ ಶಿಲ್ಪದಲ್ಲಿ ಕೆಳಸ್ತರದಲ್ಲಿ ಭೌತಿಕ ಜೀವನದ ಶಿಲ್ಪಗಳನ್ನೆಲ್ಲಾ ನೋಡಬಹುದು. ಅಲ್ಲಿ ಜುಗುಪ್ಸಿತವಾದ ಶಿಲ್ಪಗಳೂ ಇವೆ. ದೇವರ ರಥದಲ್ಲಿ ಇದೆಲ್ಲವೂ ಏಕೆ ಎಂದರೆ, ನಮ್ಮ ಶರೀರದಲ್ಲಿರುವ ವಿಷಯಗಳನ್ನು ಅಲ್ಲೂ ಚಿತ್ರಿಸಿದ್ದಾರೆ. ನಮ್ಮನ್ನೇ ಅಲ್ಲಿ ಪ್ರತಿನಿಧಿಸಿರುವುದು. ಆ ರಥ ಇಡೀ ಬ್ರಹ್ಮಾಂಡದ ಪ್ರತಿನಿಧಿಯಾಗಿರುವಂತೆಯೇ ಈ ಪಿಂಡಾಂಡದ ಪ್ರತಿನಿಧಿಯೂ ಆಗಿದೆ. ನಾವು ಸಂಸ್ಕಾರಗಳಿಗೆ ಒಳಪಡದೇ ಪಶುಭಾವದಲ್ಲೇ, ಇಂದ್ರಿಯಲಾಲಸೆಗಳಲ್ಲೇ ಜೀವನ ನಡೆಸುತ್ತಿದ್ದರೆ ಕೆಳಸ್ತರದ ಜೀವನ. ಮೇಲಿನ ಸ್ತರಗಳಲ್ಲಿ ಗುರು-ಶಿಷ್ಯರ, ದೇವತೆಗಳ, ತ್ರಿಮೂರ್ತಿಗಳ ಚಿತ್ರಗಳೆಲ್ಲವನ್ನೂ ನೋಡಬಹುದು. ಜೀವನದಲ್ಲಿ ಊರ್ಧ್ವ ದೃಷ್ಟಿ ಬೆಳೆಸಿಕೊಂಡು ಜೀವನ ಮೂಲದ ಕಡೆಗೆ ಹೆಜ್ಜೆಹಾಕುವ ಸಂಸ್ಕಾರಗಳನ್ನು ಬೆಳೆಸಿಕೊಂಡಾಗ ಅಂತರ್ದರ್ಶನಕ್ಕೆ ವಿಷಯ. ಅಲ್ಲಿ ನಮ್ಮನ್ನು ಆಳುವ ದೇವತೆಗಳ ದರ್ಶನವನ್ನೂ ಪಡೆಯಬಹುದು. ಅದಕ್ಕೂ ಮೇಲೆ ವಿಶ್ವಮೂಲನಾದ ನಾರಾಯಣನನ್ನೂ ನೋಡಬಹುದಾಗಿದೆ. ಹಾಗೆ ನೋಡುವಂತಾದರೆ ಪುನರ್ಜನ್ಮದ ಮಾತೇ ಇಲ್ಲ.
ಭಗವಂತನ ಮನೋರಥೋತ್ಸವ:
ನಾವು ನಮ್ಮೊಳಗೇ, ಈ ನರರಥದಲ್ಲೇ ಅವನನ್ನು ನೋಡಬೇಕಾಗಿರುವುದು. ನಮ್ಮ ಜೀವನ ಯಾತ್ರೆಯೆಲ್ಲ ಅವನ ಉತ್ಸವವಾಗಬೇಕು. ನಮ್ಮ ನಡೆನುಡಿ, ಆಚಾರ-ವಿಚಾರ ಎಲ್ಲದರಲ್ಲೂ ಅಂತರಂಗದ ಸ್ವಾಮಿಯಾದ ಅವನ ಆಶಯವೇ ತುಂಬಿದ್ದರೆ ನಮ್ಮ ಜೀವನವೂ ನಿತ್ಯ ರಥೋತ್ಸವ. ನಮ್ಮ ನಮ್ಮ ಮನೋರಥಗಳ ಉತ್ಸವ ನಾವೀಗ ಮಾಡುತ್ತಿದ್ದೇವೆ. ಅದು ಭಗವಂತನ ಮನೋರಥದ ಉತ್ಸವವಾದಾಗ ಜೀವನ ಆನಂದಮಯ. ಹೀಗೆ ರಥೋತ್ಸವವನ್ನು ಋಷಿಗಳು ನಮ್ಮನ್ನು ನಮಗೆ ನೆನಪಿಸಲು, ನಮ್ಮ ಜೀವನದ ಗುರಿಯನ್ನು ನೆನಪಿಸಲು ತಂದಿದ್ದಾರೆ. ರಥೋತ್ಸವದಲ್ಲಿ ಭಾಗವಹಿಸಿದವರೆಲ್ಲರೂ "ಮಡಿ"ಯೇ. ರಥೋತ್ಸವದಿಂದ ಹಿಂತಿರುಗಿ ಬಂದು, ಮಡಿಗಾಗಿ ಸ್ನಾನ ಮಾಡಿದರೆ ಪಾಪಭಾಗಿಯಾಗುತ್ತೇವೆ ಎಂದು ಆಗಮಗಳು ಎಚ್ಚರಿಸುತ್ತವೆ. ರಥೋತ್ಸವದಲ್ಲಿ ರಥವನ್ನು ಎಳೆಯುವಾಗ ಎಲ್ಲರೂ ಬ್ರಹ್ಮಭಾವದಲ್ಲಿಯೇ ಇರುವುದರಿಂದ ಆ ಜಾಗದಲ್ಲಿ ಯಾವ ಮೈಲಿಗೆಯೂ ಇಲ್ಲ. ಅಲ್ಲಿ ಎಲ್ಲವೂ ಮಡಿಯಾಗಿರುತ್ತದೆ. ಭಗವಂತನ ಮನೋರಥವನ್ನು ಎಳೆಯುವ ಹಕ್ಕು ಎಲ್ಲರದೂ. ಎಲ್ಲರೂ ಅದರಲ್ಲಿ ಭಾಗವಹಿಸಿ ಕೃತಾರ್ಥರಾಗಬೇಕು. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲರ ಕೆಲಸಗಳೂ ಪವಿತ್ರವೇ. ವೇದಮಂತ್ರಗಳನ್ನು ಹೇಳುವ ಬ್ರಾಹ್ಮಣರಿಂದ ನಾದಸ್ವರ ನುಡಿಸುವವರವರೆಗೆ ಎಲ್ಲ ಸೇವೆಗಳೂ ಶ್ರೇಷ್ಠವೇ. ಎಲ್ಲರ ಲಕ್ಷ್ಯವೂ ರಥಸ್ಥನಾದ ಗೋವಿಂದನೇ.
ಗರುಡ-ನಂದಿಯರ ಆವಾಹನೆ:
ರಥಗಳಲ್ಲಿ ಗರುಡನನ್ನು ಆವಾಹನೆ ಮಾಡುತ್ತಾರೆ. ಅವನೇ ವಿಷ್ಣುರಥ. ಆನೆ, ಕುದುರೆ ಇತ್ಯಾದಿ ಎಲ್ಲ ವಾಹನಗಳಲ್ಲೂ ವೈಷ್ಣವಾಗಮಗಳ ಪ್ರಕಾರ ಗರುತ್ಮಂತನನ್ನೇ ಆವಾಹನೆ ಮಾಡುತ್ತಾರೆ. ವೇದಮಯವಾದ ಪಕ್ಷಿಯೇ ಗರುಡ-ಗರುತ್ಮಂತ. ನಮ್ಮೊಳಗೆಯೂ ಪ್ರಾಣ ಅಪಾನಗಳೆಂಬ ಎರಡು ರೆಕ್ಕೆಗಳ ಪ್ರಾಣಶಕ್ತಿಯೇ ಗರುತ್ಮಂತ. ಅವನು ನಮ್ಮನ್ನು ಭೌತಿಕ-ಪಾರಮಾರ್ಥಿಕ ಕ್ಷೇತ್ರಗಳಿಗೆ ಒಯ್ಯಬಲ್ಲನು. ಆ ಶಕ್ತಿಯನ್ನು ಹೊರಗಿನ ರಥದಲ್ಲೂ ಆವಾಹನೆ ಮಾಡಬೇಕು. ಶೈವಾಗಮಗಳಲ್ಲಿ ನಂದಿಯನ್ನು ರಥದಲ್ಲಿ ಆವಾಹನೆ ಮಾಡುತ್ತಾರೆ. "ಮಹಾ ಜ್ಞಾನಾಕಾಶದಲ್ಲಿ ನಂದಿಯು ತನ್ನ ಸಕಲ ವಿಲಾಸಗಳಿಂದ ಮಹಾದೇವನನ್ನು ಒಯ್ಯುತ್ತಿದ್ದಾನೆ" ಎಂದು ಆ ದೇವ ದೇವನನ್ನು ಒಳಗೆ ಕಂಡು ಅನುಭವಿಸಿದ ಮಹಾತ್ಮರ ಮಾತು.
ನಮ್ಮ ಶರೀರ-ಮಹಾತ್ಮರ ದೃಷ್ಟಿ:
ಜ್ಞಾನಿಗಳು ನಮ್ಮ ದೇಹವನ್ನು ರಥವಾಗಿ, ಏಣಿಯಾಗಿ, ದೋಣಿಯಾಗಿ, ವಿಮಾನವಾಗಿ ಕಂಡಿದ್ದಾರೆ. ಪೂಜ್ಯರಾದ ತುಳಸೀದಾಸರು ಮಾನವ ದೇಹವನ್ನು ನರಕ-ಸ್ವರ್ಗ-ಮೋಕ್ಷ ಎಲ್ಲಕ್ಕೂ ನಮ್ಮನ್ನು ಮುಟ್ಟಿಸುವ ಏಣಿ ಎಂದು ಕೊಂಡಾಡಿದ್ದಾರೆ. ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ಶರೀರವೆಂಬ ದೋಣಿಯನ್ನು ಪಡೆದಿದ್ದೇವೆ, ಈ ದೋಣಿ ಮುರಿದು ಹೋಗುವ ಮೊದಲೇ ಈ ಭವಸಾಗರವನ್ನು ದಾಟಬೇಕು ಎಂದು ಋಷಿಗಳು ಎಚ್ಚರಿಸುತ್ತಾರೆ. ಹಾಗೆಯೇ ಈ ನರರಥದಲ್ಲಿ ನಾರಾಯಣನ ಸಾರಥ್ಯವನ್ನು ಪ್ರಾರ್ಥಿಸಬೇಕಾಗಿದೆ. ಮಾರ್ಗದರ್ಶಕನೂ ಅವನೇ, ಗಮ್ಯಸ್ಥಾನವೂ ಅವನೇ.
ವೆಂಕಟೇಶ ರಥೋತ್ಸವ:
ಪ್ರಸ್ತುತ ತಿರುಪತಿಯಲ್ಲಿ ವೆಂಕಟೇಶ್ವರನ ರಥೋತ್ಸವವು ಸಂಪನ್ನವಾಗಲಿದೆ. ಏಳು ಬೆಟ್ಟದ ಒಡೆಯ. ನಮ್ಮೊಳಗಿನ ಸಪ್ತಚಕ್ರಗಳಿಗೂ ಆ ಲಕ್ಷ್ಮೀನಾರಾಯಣರೇ ಒಡೆಯರು. ಅವರ ಪರಮೋನ್ನತ ಸ್ಥಾನ ಸಹಸ್ರಾರಚಕ್ರ. ಅದು ವಿಷ್ಣುಲಕ್ಷ್ಮಿಯರ ನಿಕೇತನ. ಹೊರಗೂ ಏಳು ಬೆಟ್ಟದ ಮೇಲೆ ನೆಲೆಸಿದ್ದಾನೆ. ವಿಶ್ವವ್ಯಾಪಿ ಅವನು. ಅದಕ್ಕಾಗಿಯೇ ವಿಷ್ಣು ಎಂಬ ಹೆಸರು. ನಮ್ಮ ಮನೋರಥಗಳಲ್ಲಿ ಆ ವೆಂಕಟೇಶನನ್ನು ಕುಳ್ಳಿರಿಸಿ ಉತ್ಸವ ಆಚರಿಸೋಣ. ರಥೋತ್ಸವದ ಹಿಂದಿನ ಮಹರ್ಷಿಮನೋರಮವಾದ ದೃಷ್ಟಿಯನ್ನು ನೆನೆಯುತ್ತಾ ಸಕಲ ವೈಭವಗಳಿಂದ ಸಂಪನ್ನವಾಗುವ ವೆಂಕಟೇಶನ ರಥೋತ್ಸವದಲ್ಲಿ ಆನಂದದಿಂದ ಭಾಗವಹಿಸೋಣ. ಪ್ರತ್ಯಕ್ಷವಾಗಿ ಹೋಗಲಾಗದಿದ್ದರೂ ನಮ್ಮ ಮನೋಬುದ್ಧಿಗಳಿಂದ ಅವನ ತೇರನ್ನು ಎಳೆಯೋಣ.
ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ஆதி கவியின் சுவையான விருந்து(delicious feast of the ancient poet)
Wednesday, September 23, 2020
ಖಟ್ವಾ೦ಗನ ಆದರ್ಶ (Khatvaogana Adharsa)
ದೇವತೆಗಳು ಎಲ್ಲಿರುವರು ? (Devategalu Elliruvaru ?)
ದಧೀಚಿ ಮಹರ್ಷಿಯು ದೇವಕಾರ್ಯಕ್ಕಾಗಿ ತಮ್ಮ ಮೂಳೆಗಳನ್ನು ದಾನಮಾಡಿದರು. ಅದರಿಂದ ಕುಪಿತನಾದ ಅವರ ಮಗ ಪಿಪ್ಪಲಾದನು ಮಹಾದೇವನನ್ನು ಕುರಿತು ತಪಸ್ಯೆಯನ್ನಾಚರಿಸಿದ. ಪ್ರಸನ್ನನಾದ ಶಿವನು ವರವನ್ನು ದಯಪಾಲಿಸುತ್ತೇನೆಂದಾಗ ಪಿಪ್ಪಲಾದನು ದೇವತೆಗಳೆಲ್ಲರನ್ನೂ ನಾಶಮಾಡಬೇಕೆಂಬ ವರವನ್ನು ಕೇಳಿದ. ಮಹಾದೇವನು ಸೃಷ್ಟಿನಿಯಮವನ್ನು ಕೆಡಿಸುವುದು ಉಚಿತವಲ್ಲವೆಂದು ಆತನನ್ನು ಸಮಾಧಾನಗೊಳಿಸಲು ಎಷ್ಟು ಪ್ರಯತ್ನಿಸಿದರೂ ಆತ ಒಪ್ಪಲಿಲ್ಲ. ಮಹಾದೇವನು ತನ್ನ ಮೂರನೆಯ ಕಣ್ಣನ್ನು ದರ್ಶನಮಾಡಿದರೆ ಪಿಪ್ಪಲಾದನು ಕೇಳಿದ ವರವನ್ನು ನೀಡುವುದಾಗಿ ಒಪ್ಪಿದ. ಆ ದರ್ಶನಕ್ಕಾಗಿ ಪಿಪ್ಪಲಾದನು ಕಠಿಣ ತಪಸ್ಯೆಯನ್ನಾಚರಿಸಿ ಸಫಲಗೊಂಡ. ಆಗ ಶಿವನ ಮೂರನೆಯ ಕಣ್ಣಿನಿಂದ ರಾಕ್ಷಸನೊಬ್ಬ ಉದ್ಭವವಾದ. ಪಿಪ್ಪಲಾದನು ದೇವತೆಗಳನ್ನು ನಾಶಮಾಡುವಂತೆ ಆತನಿಗೆ ಆಜ್ಞಾಪಿಸಿದ. ಕೂಡಲೇ ರಾಕ್ಷಸನು ಪಿಪ್ಪಲಾದನನ್ನೇ ಕೊಲ್ಲಲು ಬಂದ. ಗಾಬರಿಗೊಂಡ ಪಿಪ್ಪಲಾದ "ಹೀಗೇಕೆ ಮಾಡುತ್ತಿರುವೆ?" ಎಂದ. ರಾಕ್ಷಸನು "ನಿನ್ನ ಆಜ್ಞೆಯಂತೆ ಮೊದಲು ನಿನ್ನೊಳಗಿರುವ ದೇವತೆಗಳನ್ನೇ ಕೊಲ್ಲುತ್ತೇನೆ" ಎಂದ. ಕೊನೆಗೆ ಮಹಾದೇವನನ್ನೇ ಮೊರೆಹೋಗಬೇಕಾಯಿತು. ಕೊನೆಗೆ ಈಶ್ವರನು, ಪಿಪ್ಪಲಾದನು ಕೋಪವನ್ನು ತ್ಯಜಿಸಿ ಸಮಾಧಾನಗೊಳ್ಳುವಂತೆ ಮಾಡಿದ.
ಸಾಮಾನ್ಯವಾಗಿ ದೇವತೆಗಳೆಂದರೆ ಎಲ್ಲೋ ದೂರದಲ್ಲಿ ದೇವಲೋಕದಲ್ಲಿರುವವರು, ಹೋಮ ಹವನಾದಿಗಳಿಂದ ಪೂಜಿಸಿದಾಗ ಅಲ್ಲಿಂದಲೇ ನಮ್ಮನ್ನು ಅನುಗ್ರಹಿಸುವವರೆಂಬ ಕಲ್ಪನೆಯಿದೆ. ಆದರೆ ದೇವಲೋಕದ ದೇವತೆಗಳು ಶಕ್ತಿರೂಪದಲ್ಲಿ ನಮ್ಮೊಳಗೇ ಬೆಳಗುತ್ತಿರುವರು. ಸೃಷ್ಟಿಯಲ್ಲಿ ನಾನಾ ತರಹದ ಜವಾಬ್ದಾರಿಗಳನ್ನು ಹೊತ್ತು ನಡೆಸುವ ಕಾರ್ಯದಲ್ಲಿ ಸೃಷ್ಟೀಶನಿಂದ ನೇಮಕವಾಗಿರುವ ತತ್ತ್ವಗಳಿವು. ನಮ್ಮ ಇಂದ್ರಿಯ-ಬುದ್ಧಿ-ಮನಸ್ಸುಗಳೆಲ್ಲಕ್ಕೂ ಶಕ್ತಿಯನ್ನು ನೀಡಿ ನಮ್ಮನ್ನು ಕಾರ್ಯಗತಗೊಳಿಸುವವರು. ಇವರನ್ನು ಪೂಜಿಸಿ ನಮ್ಮ ಕೃತಜ್ಞತೆಯನ್ನರ್ಪಿಸಿ ತೃಪ್ತಿಗೊಳಿಸಿದರೆ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು. ಇವರೆಲ್ಲರೂ ಪರಮಾತ್ಮನ ವಿಭೂತಿಗಳೇ ಆಗಿರುವುದರಿಂದ ದೇವತೆಗಳಿಗೆ ಮಾಡುವ ಪೂಜೆ-ನಮಸ್ಕಾರಗಳೆಲ್ಲವೂ ಅವರೊಳಗೆ ಅಂತರ್ಯಾಮಿಯಾಗಿರುವ ದೇವದೇವನನ್ನೇ ತಲುಪುತ್ತದೆ. ಅವರ ಮೂಲಕ ಅನುಗ್ರಹ ಮಾಡುವವನೂ ಪರಮಾತ್ಮನೇ.
ಇವೆಲ್ಲವೂ ಪುರಾಣಗಳಲ್ಲಿನ ಕಾಲ್ಪನಿಕ ಕಥಾಪಾತ್ರಗಳೆನ್ನುವ ಅಭಿಪ್ರಾಯದವರೂ ಉಂಟು. ಆದರೆ ನಮ್ಮ ಭೌತಿಕಶರೀರದೊಳಗೆ ದೈವಿಕ(ದೇವತಾಕೇಂದ್ರ)-ಆಧ್ಯಾತ್ಮಿಕ(ಪರಂಜ್ಯೋತಿಸ್ಥಾನ) ಕ್ಷೇತ್ರಗಳುಂಟೆಂಬುದು ಮಹರ್ಷಿಗಳು ಕಂಡರಿತ ಸತ್ಯ. ನಮ್ಮ ಶರೀರದಲ್ಲಿ ಮನಸ್ಸು-ಪ್ರಾಣಗಳು ಸಂಚರಿಸಬಹುದಾದ ಸಾವಿರಾರು ನಾಡೀಪಥಗಳುಂಟು. ಇಂದೂ ಸಹ ಧ್ಯಾನಾವಸ್ಥೆಯಲ್ಲಿ ಮನಸ್ಸು ನಿರ್ದಿಷ್ಟನಾಡೀಪಥಗಳಲ್ಲಿ ಸಾಗುವಾಗ ಆಕಾರ-ಆಭೂಷಣ-ಆಯುಧಗಳೆಲ್ಲದರ ಸಹಿತವಾದ ದೇವತೆಗಳ ದರ್ಶನ ಮಾಡಬಹುದು ಎಂಬುದು ಶ್ರೀರಂಗಮಹಾಗುರುಗಳ ಅನುಭವವಾಣಿ.ಇಂತಹ ದೇವತೆಗಳ ಪ್ರಸನ್ನತೆಯನ್ನು ಗಳಿಸಿ ಬಾಳನ್ನು ಬೆಳಗಿಸಿಕೊಳ್ಳೋಣ.
ಸೂಚನೆ: 23/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.
Tuesday, September 22, 2020
ವಿಶ್ವ ಶಾಂತಿಗೆ ಭಾರತೀಯರ ಕೊಡುಗೆ (Vishwa shantige Bharatiyara Koduge)
ವಿಶ್ವಶಾಂತಿ ದಿವಸವು ಸೆಪ್ಟಂಬರ್ ತಿಂಗಳಿನಲ್ಲಿ ಬರುವ ಒಂದು ಪ್ರಮುಖ ದಿನ. ಸಂಯುಕ್ತರಾಷ್ಟ್ರವು ಘೋಷಿಸಿರುವ ಈ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನ ಮಂಥನಗಳು ನಡೆಯುತ್ತವೆ. ವಿಶ್ವ ಶಾಂತಿಯ ಬಗ್ಗೆ ಇಂದು ಪ್ರಚಲಿತವಿರುವ ಚಿಂತನೆಯ ಸಾರವೆಂದರೆ - ಘರ್ಷಣೆ ಇಲ್ಲದಿರುವಿಕೆಯೇ ಶಾಂತಿ, ಸಾಮಾಜಿಕ ವರ್ಗಗಳಲ್ಲಿ ಘರ್ಷಣೆ ಇಲ್ಲದಿದ್ದರೆ ಮತ್ತು ರಾಷ್ಟ್ರಗಳ ನಡುವೆ ಯುಧ್ಧವಿಲ್ಲದಿದ್ದರೆ, ಅದೇ ವಿಶ್ವಶಾಂತಿ ಎನ್ನುವುದಾಗಿದೆ. ಈ ಚಿಂತನೆ ಮುಂದುವರೆದು ಯಾವ ರೀತಿಯ ಸಾಮಾಜಿಕ, ರಾಷ್ಟ್ರ ವ್ಯವಸ್ಥೆಯು ಈ ವಿಶ್ವ ಶಾಂತಿಗೆ ಪೂರಕ, ಯಾವುದು ಬಾಧಕ ಎನ್ನುವ ಬಗ್ಗೆ ಚರ್ಚೋಪಚರ್ಚೆಗಳು ನಡೆಯುತ್ತಿರುತ್ತವೆ. "ಪ್ರಜಾಪ್ರಭುತ್ವದ ದೇಶಗಳ ನಡುವೆ ಯುದ್ಧ ನಡೆದಿರುವ ಪ್ರಸಂಗಗಳು ಅಪರೂಪ, ಆದುದರಿಂದ ಪ್ರಜಾಪ್ರಭುತ್ವವೇ ವಿಶ್ವಶಾಂತಿಗೆ ಬುನಾದಿ" ಎಂದು ಕೆಲವರು ವಾದಿಸಿದರೆ, "ಕಮ್ಯೂನಿಸಮ್ ನ ರಾಷ್ಟ್ರಸ್ವಾಮ್ಯವೇ ವಿಶ್ವಶಾಂತಿಗೆ ಕೀಲಿಕೈ- ಏಕೆಂದರೆ, ಎಲ್ಲ ಸ್ವತ್ತೂ ರಾಷ್ಟ್ರಕ್ಕೇ ಸೇರಿಬಿಟ್ಟರೆ, ಸಮಾಜದಲ್ಲಿ ವರ್ಗಗಳೇ ಇರುವುದಿಲ್ಲ, ಮತ್ತು ಸ್ವತ್ತಿಗಾಗಿ ಕಿತ್ತಾಡುವ ವರ್ಗಗಳ ನಡುವಿನ ಘರ್ಷಣೆಯೂ ಇರುವುದಿಲ್ಲ" ಎಂದು ಇನ್ನು ಕೆಲವರು ವಾದಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ಸಾಮಾಜಿಕ ವರ್ಗಗಳ ನಡುವೆ ಘರ್ಷಣೆ ಇಲ್ಲದಿರುವಿಕೆ, ರಾಷ್ಟ್ರಗಳ ನಡುವೆ ಯುದ್ಧವಿಲ್ಲದಿರುವಿಕೆಯೇ ಶಾಂತಿ ಎನ್ನುವುದು ಇಲ್ಲಿ ಎದ್ದು ತೋರುವ ಅಭಿಪ್ರಾಯವಾಗಿರುತ್ತದೆ. ಆದರೆ ಮಹರ್ಷಿಗಳ ಚಿಂತನೆಯು ಇಂದಿನ ಪ್ರಸ್ತುತ ಚಿಂತನೆಗಿಂತ ಬಹಳ ಆಳವಾಗಿದ್ದು, ವೈಜ್ಞಾನಿಕವೂ ಆಗಿದೆ. ಮಹರ್ಷಿಗಳು ವೈಯಕ್ತಿಕ ಮಟ್ಟದಲ್ಲಿ ಶಾಂತಿಯೆಂದರೇನು? ಅದನ್ನು ಸಾಧಿಸುವ ಬಗೆ ಹೇಗೆ? ಎಂಬುದನ್ನು ತಪಸ್ಯೆ ಹಾಗೂ ತಮ್ಮ ಮೇಧಾಬಲದಿಂದ ನಿಶ್ಚಯಿಸಿ ಈ ಶಾಂತಿಯನ್ನು ಸಂಸ್ಕೃತಿ ನಾಗರಿಕತೆಗಳ ಮೂಲಕ ಸಮಾಜ ಮತ್ತು ರಾಷ್ಟ್ರಮಟ್ಟದಲ್ಲಿ ಹರಡಿದ್ದಾರೆ.
ಶಾಂತಿ ಎನ್ನುವ ಪದವೇ ಏನು ಹೇಳುತ್ತದೆಯೆಂದು ಗಮನಿಸುವುದಾದರೆ, ಅದು ಶಮ್ ಧಾತುವಿನಿಂದ ನಿಷ್ಪನ್ನವಾಗಿದ್ದು, ಕಡಿಮೆ ಮಾಡುವುದು ಅಥವಾ ಇಲ್ಲದಾಗಿ ಮಾಡುವುದು ಎನ್ನುವ ಅರ್ಥವನ್ನು ಹೊಂದಿದೆ. ಏನನ್ನು ಇಲ್ಲದಾಗಿ ಮಾಡುವುದು ಎಂದರೆ, ಮನೋವೃತ್ತಿಗಳನ್ನು ಇಲ್ಲದಾಗಿ ಮಾಡುವುದು. ಮನೋವೃತ್ತಿಗಳು ಇಲ್ಲವಾದಾಗ, ಸಮಾಧಿಸ್ಥಿತಿಯುಂಟಾಗಿ ಪರಮ ಶಾಂತಿ, ನೆಮ್ಮದಿ, ಅನಂದಗಳು ನೆಲೆಸುತ್ತದೆ. ಪಾತಂಜಲ ಯೋಗಸೂತ್ರವು "ಯೋಗಃ ಚಿತ್ತವೃತ್ತಿ ನಿರೋಧಃ" - ಚಿತ್ತವೃತ್ತಿಗಳು ಇಲ್ಲದಿರುವಿಕೆಯೇ- ಯೋಗ ಎಂದು ಘೋಷಿಸುತ್ತದೆ. ಈ ಶಾಂತಿಯು ವೈಯಕ್ತಿಕ ಮಟ್ಟದ ಅನುಭವ, ಅದನ್ನು ಸಮಾಜದಲ್ಲಿ, ರಾಷ್ಟ್ರಮಟ್ಟದಲ್ಲಿ ಹರಡಬೇಕಾದರೆ, ಈ ಶಾಂತಿಗೂ ಮತ್ತು ನಮ್ಮ ಜೀವನಕ್ರಮದ ಅಂಗಗಳಾದ ವ್ಯವಹಾರ, ಆಹಾರ, ವಿಹಾರ, ವಿಚಾರಗಳನ್ನೊಳಗೊಂಡ ಸಂಸ್ಕೃತಿ-ನಾಗರಿಕತೆಗಳಿಗೂ ಸಂಬಂಧವೇನು ಎನ್ನುವುದನ್ನು ಅರ್ಥ ಮಾಡಿಕೊಂಡು ಯೋಗಕ್ಕೆ ಅವಿರೋಧವಾಗಿ ಜೀವನಕ್ರಮವನ್ನು ರೂಪಿಸಬೇಕಾಗುತ್ತದೆ.
ನಮ್ಮ ದೇಹದಲ್ಲಿ ವಾತ, ಪಿತ್ತ, ಶ್ಲೇಷ್ಮಗಳೆಂಬ ತ್ರಿದೋಷಗಳು ಸದಾ ಕೆಲಸ ಮಾಡುತ್ತಿದ್ದು, ಇವು ಸಮ ಪ್ರಮಾಣದಲ್ಲಿದ್ದಾಗ ದೇಹವು ಪ್ರಸನ್ನವಾಗಿದ್ದು ಚಿತ್ತ ವೃತ್ತಿ ಕಡಿಮೆಯಾಗಿ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ ಮತ್ತು ವಿಷಮ ಪ್ರಮಾಣದಲ್ಲಿದ್ದಾಗ ದೇಹವನ್ನು ಕೆರಳಿಸಿ, ಚಿತ್ತದವೃತ್ತಿಗಳನ್ನು ಹೆಚ್ಚು ಮಾಡುತ್ತವೆ. ಹಾಗೆಯೇ, ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರೂ ಗುಣಗಳು ನಮ್ಮ ಮನಸ್ಸಿನ ಅವಸ್ಥೆಗೆ ಕಾರಣವಾಗಿರುತ್ತವೆ. ಸತ್ತ್ವವು ಪ್ರಧಾನವಾಗಿದ್ದಾಗ ಮನಸ್ಸು ಏಕಾಗ್ರವಾಗಿದ್ದರೆ, ರಜಸ್ಸು ಪ್ರಧಾನವಾಗಿದ್ದಾಗ ಮನಸ್ಸು ಚಂಚಲವಾಗಿರುತ್ತದೆ ಮತ್ತು ತಮಸ್ಸು ಪ್ರಧಾನವಾಗಿದ್ದಾಗ ಮನಸ್ಸು ಜಡವಾಗಿರುತ್ತದೆ. ಮನಸ್ಸು ಸತ್ತ್ವಪ್ರಧಾನವಾಗಿದ್ದಾಗ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ ಹಾಗೂ ರಜಸ್ತಮೋಗುಣಗಳು ಪ್ರಧಾನವಾಗಿದ್ದಾಗ ಸಮಾಧಿಸ್ಥಿತಿಗೆ ಬಾಧಕವಾಗಿರುತ್ತದೆ.
ನಮ್ಮ ಜೀವನಕ್ರಮವು ಈ ತ್ರಿದೋಷ, ತ್ರಿಗುಣಗಳ ಮೇಲೆ ಪರಿಣಾಮವನ್ನುಂಟು ಮಾಡುವುದಾಗಿದ್ದು ಈ ಪರಿಣಾಮಗಳನ್ನು ಆರ್ಷ ವಿಜ್ಞಾನವು ವಿವರಿಸುತ್ತದೆ. ಉದಾಹರಣೆಗೆ, ಸಾತ್ತ್ವಿಕ ಆಹಾರವಾದ ಹಸುವಿನ ಹಾಲು, ಜೇನುತುಪ್ಪಗಳು ಶರೀರದಲ್ಲಿ ಲಘುತ್ವವನ್ನುಂಟು ಮಾಡುವುದಲ್ಲದೇ, ಮನಸ್ಸು ತಿಳಿಯಾಗುವಂತೆ ಮಾಡಿದರೆ, ತಾಮಸ ಆಹಾರವಾದ ಎಮ್ಮೆಮೊಸರು, ತಂಗಳನ್ನ ಮೊದಲಾದವು ಶರೀರ, ಮನಸ್ಸುಗಳಲ್ಲಿ ಜಡತ್ವವನ್ನುಂಟು ಮಾಡುತ್ತದೆ. ಸಂಗೀತವನ್ನು ಶಾಸ್ತ್ರೀಯ ಕ್ರಮದಲ್ಲಿ ಅನುಸಂಧಾನ ಮಾಡಿದರೆ ಕಿವಿಗೂ ಇಂಪಾಗಿದ್ದು ಮನಸ್ಸನ್ನೂ ಅಂತರ್ಮುಖವಾಗಿಸುತ್ತದೆ. ಅಶಾಸ್ತ್ರೀಯ ಅನುಸಂಧಾನ ಇಂದ್ರಿಯಗಳನ್ನು ಕೆರಳಿಸಿ ಚಿತ್ತವೃತ್ತಿಗಳನ್ನು ಜಾಸ್ತಿ ಮಾಡುತ್ತದೆ. ಸಾಹಿತ್ಯವು ಮನಸ್ಸಿಗೆ ಆಹಾರವಾದ ನವರಸಗಳನ್ನು ಒದಗಿಸುತ್ತದೆ. ಈ ನವರಸಗಳನ್ನು ಸಂಯೋಜಿಸಬೇಕಾದರೆ, ಅದ್ಭುತ, ರೌದ್ರ, ವೀರ ಮೊದಲಾದ ರಸಗಳಿಂದ ಯಥೋಚಿತವಾಗಿ ರಂಜಿಸಿ ಕೊನೆಗೆ ಶಾಂತರಸದಲ್ಲಿ ನಿಲ್ಲಿಸಿದರೆ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗುತ್ತವೆ ಮತ್ತು ಸಂಯೋಜನೆ ಸರಿಯಿಲ್ಲದಿದ್ದರೆ ಮನಸ್ಸು ವಿಷಾದದಲ್ಲಿ ನಿಂತು ಚಿತ್ತವೃತ್ತಿಗಳು ಹೆಚ್ಚಲೂಬಹುದು. ರಾಮಾಯಣ, ಮಹಾಭಾರತ, ಶಾಕುಂತಲ, ರಘುವಂಶ ಮೊದಲಾದ ಆದರ್ಶ ಇತಿಹಾಸ, ಕಾವ್ಯ, ನಾಟಕಗಳೆಲ್ಲವೂ ಸಾಹಸ, ವಿರಹ, ಪ್ರಣಯ ಮುಂತಾದ ಪ್ರಸಂಗಗಳಿಂದ ಕೂಡಿದ್ದರೂ ಅಂತ್ಯದಲ್ಲಿ ಶಾಂತರಸವನ್ನೇ ಉಂಟು ಮಾಡುತ್ತವೆ. ಆದುದರಿಂದ ಮಹರ್ಷಿಗಳು ವೈಜ್ಞಾನಿಕ ಚಿಂತನೆಯನ್ನನುಸರಿಸಿ ನಮ್ಮ ದೇಹೇಂದ್ರಿಯ ಮನಸ್ಸುಗಳಿಗೆ ಪುಷ್ಟಿ, ರುಚಿ, ರಂಜನೆಗಳು ದೊರಕಿ ತನ್ಮೂಲಕ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗಿಸುವಂತೆ ಜೀವನಕ್ರಮವನ್ನು ರೂಪಿಸಿದ್ದಾರೆ. ಶ್ರೀರಂಗಮಹಾಗುರುಗಳ ಸರಳ ಮಾತುಗಳಲ್ಲಿ ಹೇಳುವುದಾದರೆ, ಮಹರ್ಷಿಗಳು ಜೀವನಕ್ರಮವನ್ನು ಯೋಗ-ಭೋಗಮಯವನ್ನಾಗಿಸಿ, ಭೋಗವನ್ನು ಯೋಗಕ್ಕೆ ಅವಿರೋಧವಾಗಿ ಅನುಭವಿಸುವಂತೆ ರೂಪಿಸಿದ್ದಾರೆ. ಶ್ರೀರಂಗ ಮಹಾಗುರುಗಳು ಯೋಗವು ಹೇಗೆ ಭಾರತೀಯರ ಚಿಂತನೆ, ಧಾರ್ಮಿಕ ಆಚರಣೆಗಳು, ಆಹಾರ ವ್ಯವಸ್ಥೆ, ವೇಷಭೂಷಣಗಳು, ಮನೋರಂಜನೆ, ಸಾಮಾಜಿಕ ವ್ಯವಸ್ಥೆ, ರಾಷ್ಟ್ರವ್ಯವಸ್ಥೆಯಲ್ಲೆಲ್ಲಾ ಹಾಸು ಹೊಕ್ಕಾಗಿದೆಯೆಂಬುದನ್ನು ವಿಸ್ತಾರವಾಗಿ, ವೈಜ್ಞಾನಿಕವಾಗಿ, ಪ್ರಯೋಗ ಸಹಿತವಾಗಿ ನಿರೂಪಿಸಿದ್ದಾರೆ.
ಧಾರ್ಮಿಕ ಕರ್ಮಗಳ ಕೊನೆಯಲ್ಲಿ ಒಂದು ಆಶೀರ್ವಚನವನ್ನು ಹೇಳುವುದುಂಟು - ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ಆಯುಷ್ಯಮಸ್ತು, ಅರೋಗ್ಯಮಸ್ತು, ಧನಧಾನ್ಯಾಭಿವೃದ್ಧಿರಸ್ತು, ಪುತ್ರಪೌತ್ರಾಭಿವೃದ್ಧಿರಸ್ತು, ಶಿವಂ ಕರ್ಮಾಸ್ತು, ಭಗವತ್ಪ್ರಸಾದ ಸಿದ್ಧಿರಸ್ತು ಎಂಬುದಾಗಿ. ಅಂದರೆ ಮೊದಲು ಶಾಂತಿಯನ್ನು ಅನುಭವಿಸಿದರೆ ಅದು ಮನಸ್ಸಿನಲ್ಲಿ ಹುರುಪು ಆನಂದಗಳನ್ನು ತುಂಬುತ್ತದೆ. ಈ ತುಷ್ಟಿಯಿಂದ ಶರೀರಕ್ಕೆ ಪುಷ್ಟಿ, ತನ್ಮೂಲಕ ಆಯುರಾರೋಗ್ಯ, ತನ್ಮೂಲಕ ಸತ್ಕರ್ಮಾಚರಣೆಯಿಂದ ಅನೇಕ ಲೌಕಿಕ ಲಾಭಗಳು ಮತ್ತು ಕೊನೆಯಲ್ಲಿ ಚಿತ್ತನಿವೃತ್ತಿ ರೂಪವಾದ ಭಗವತ್ಪ್ರಸಾದವೂ ದೊರಕುವಂತಾಗಲಿ ಎನ್ನುವುದು ಇಲ್ಲಿನ ಆಶಯ. ಅಂದರೆ, ಶಾಂತಿಯೇ ಸರ್ವ ಪುರುಷಾರ್ಥಫಲಗಳಿಗೂ ಮೂಲವಾಗಿದೆ.
ಹೀಗೆ, ಶಾಂತಿಯನ್ನೇ ಕೇಂದ್ರವನ್ನಾಗಿಯೂ, ಪರಮ ಲಕ್ಷ್ಯವನ್ನಾಗಿಯೂ ಇಟ್ಟುಕೊಂಡಿರುವ ಭಾರತೀಯ ಸಂಸ್ಕೃತಿಯೇ ನಮ್ಮ ದೇಶವು ವಿಶ್ವ ಶಾಂತಿಗೆ ಕೊಡುವ ಕೊಡುಗೆಯಾಗಿದೆ.
ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.
ಆಯಾಸಪಡದಿರುವಿಕೆ (Aaayasapadiruvike)
ಈಗ ನಾವು ವಿಚಾರಿಸಬೇಕಾದ ಆತ್ಮಗುಣ ಅನಾಯಾಸ. ಆಯಾಸಪಡದಿರುವುದು ಎಂದರ್ಥ. ಪ್ರತಿದಿನ ಪೂಜೆಯನ್ನು ಮಾಡಿ ಕೊನೆಯಲ್ಲಿ ನಾವು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ – "ಅನಾಯಾಸೇನ ಮರಣಂ" ಎಂದು. ಅಂದರೆ ಮರಣವನ್ನು ಹೊಂದಬೇಕಾದರೆ ಯಾವುದೇ ಬಗೆಯ ಕ್ಲೇಶವನ್ನು ಅನುಭವಿಸುವಂತಾಗಬಾರದು ಎಂದು. ಯಾವುದಾರೂ ಒಂದು ಕಾರ್ಯವನ್ನು ಮಾಡಲು ಎಷ್ಟು ಪ್ರಯತ್ನ ಬೇಕೋ ಅದಕ್ಕಿಂತಲೂ ಹೆಚ್ಚು ಪಯತ್ನಪಟ್ಟರೆ ಅದನ್ನು 'ಆಯಾಸ' ಎಂದು ಕರೆಯುತ್ತೇವೆ. ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಯಾವುದೇ ಕ್ಲೇಶವನ್ನು ಪಡದೆ ಕಾರ್ಯವನ್ನು ಮಾಡಲು ಸಾಧ್ಯವೇ? ಎಂದು. ಅನಾಯಾಸವಾಗಿ ಕೆಲಸವನ್ನು ಮಾಡುವುದು ಹೇಗೆ? "ಯದಾರಂಭೇ ಭವೇತ್ ಪೀಡಾ ನಿತ್ಯಮತ್ಯಂತಮಾತ್ಮನಃ | ತದ್ವರ್ಜಯೇತ್ ಧರ್ಮ್ಯಮಪಿ ಸೋಽನಾಯಾಸಃ ಪ್ರಕೀರ್ತಿತಃ ||" ಅಂದರೆ ಯಾವ ಕಾರ್ಯವನ್ನು ಆರಂಭ ಮಾಡುವಾಗ ನಮಗೆ ಒಂದು ಬಗೆಯ ವೇದನೆ ಬಹಳವಾಗಿ ಉಂಟಾಗುತ್ತದೆಯೋ, ಅದು ಧರ್ಮಕ್ಕೆ ಅನುಕೂಲವಾಗುವಂತಹ ಕಾರ್ಯವೇ ಆದರೂ ಅದನ್ನು ಮಾಡಬಾರದು, ಇದನ್ನೇ 'ಅನಾಯಾಸ' ಎಂದು ಕರೆಯುತ್ತಾರೆ. ಇದೂ ಒಂದು ಆತ್ಮಗುಣವಾಗಿದೆ.
Monday, September 21, 2020
Brahmopadesha Samskaara (Initiation Into Supreme Truth)
Original Kannada article: Tarodi Suresha
English Rendering: Padmini Shrinivasan
Brahmopadesha is an important ritual for a male child. It is an essential Samskaara to cleanse and sanctify the mind, with the purpose of attaining oneness with Parabrahman (Supreme Lord) and culture one into a Satpurusha (virtuous person). As per Sriranga Mahaaguru's words-"To be blessed with a Satsantaana (spiritually worthy progeny) through marriage, one has to be a Satpurusha first". Nowadays pomp and show are rampant and Brahmopadesha, performed in a slipshod manner, is considered merely as a license to get married. The word 'Upanayana' means taking the Jeeva (soul) close to Paratatwa (Supreme Truth), for which a Guru (preceptor) is sought. It is known as Brahmopadesha as the preaching includes Gaayatri Mantra, the gateway to spiritual knowledge (Brahma-vidya), along with its expansion as the Vedas.
In this ritual, a new lease of life is imparted after nullifying the past, by the Guru who instructs Gaayatri Mantra. A yogic consciousness is instilled too. He imparts the eligibility to meditate on the Effulgent Light (Paranjyoti) illuminating Mother Gaayatri. With a backdrop of certain restrictions, all those treading on a salvation-seeking path, are eligible to perform this ritual. If the father happens to be a Jnaani (one who has experienced the Divine Light), then it is the most superior choice, as his blood relationship as well as his divine association, are all beneficial. Even if other rituals related to Brahmopadesham are performed by others, tradition dictates that the preaching part (Brahmopadesha) should be performed by a Jnaani only. Only a Brahmavittama (one possessing transcendental knowledge) and one experienced in Praana-vidyaa (knowledge of the vital life force) and meditating constantly on Parabrahman qualifies to perform the Upadesha. The Effulgent Divine power flows as sound through his speech. It is recited into the right ear of the disciple after embracing him. The right age at which it is to be performed is decided based on time epochs at which a spiritual awakening occurs in his body quite naturally. Sriranga Mahaaguru used to say that the latent serpent power (Kundalini Shakti) within him is awakened easily at that age and the journey towards self-realisation thus bears fruit quickly. Scriptures warn that, one is bound to go down in the spiritual path, if the opportunity is missed.
The various phases of the ritual consist in: wearing the sacred thread (Yajnopaveetham), feasting on bland food with a companion celibate (Kumara bhojana), adorning new clothes, tying a Mounji grass-girdle (Mounji-dhaarana), wearing (a piece of) deer-skin (Ajina dhaarana), the central theme of the Samskaara viz. Brahmopadesha, Achaarya-Vatu (teacher-student) agreement and fire oblations. Each procedure, inherently embedded with a perspective of Jnaana-Vijnaana (Supreme Source and its manifestations) conforms to its true objective. For example, the principles and different steps of the entire creation are reflected in the preparation of the sacred thread. Wearing it signifies the course of the vital breath (Praana-gati). The mysteries shrouding the mobility of the soul (Jeeva sanchaara) are also inherent in it. Remembering its meaningful purpose while touching it, imparts longevity, strength and virtuosity. Surmounting the various rungs of the spiritual stairway is implicit in their own language.
Contact with the girdle made out of Mounji grass (grass-rope tied around the waist) brings restraint. In yogic parlance, 'Uddeeyana' is a detention around waist (during meditation). This grass-girdle is helpful as a reminder of that yogic state. So is the holding of the Palaasha-Danda (Branch of Bastard Teak) and wearing the deer-skin. These materials appease the deities and enliven mundane as well as spiritual lives with their blessings. Subsequent to the Upanayana Samskaara, the student is expected to delve into concepts related to transcendental and immanent Truth. He should not skip Sandhyaavandana (Prayers offered at the transition times in a day). He should chant the "Brahma Gaayatri" and must observe restraint over his senses.
Salutations once again, to the Rshis, who designed this Samskaara capable of catapulting one from the physical to the transcendental domain.
Note: The Kannada version of this article can be viewed at AYVM blogs.
Sunday, September 20, 2020
ಆರ್ಯಸಂಸ್ಕೃತಿ ದರ್ಶನ - 11 (Arya Samskruti Darshana - 11)
ಪತ್ನಿಯೆಂದರೆ (ಪುರುಷನಿಗೆ) ತನ್ನ ಅರ್ಧ ಭಾಗವೇ. ಆದ್ದರಿಂದ ಪತ್ನಿಯನ್ನು ಪಡೆಯದಿದ್ದರೆ ಸಂತಾನವಿಲ್ಲ. ಅಲ್ಲಿಯವರೆಗೂ (ಪುರುಷನು) ಅಪೂರ್ಣನಾಗಿಯೇ ಇರುತ್ತಾನೆ. ಯಾವಾಗ ಅವನು ಪತ್ನಿಯನ್ನು ಪಡೆಯುತ್ತಾನೆಯೋ ಆಗ ಸಂತಾನವನ್ನು ಹೊಂದುತ್ತಾನೆ. ಹಾಗಾದರೆ ಮಾತ್ರ ಪುರುಷನು ಪೂರ್ಣನಾಗುತ್ತಾನೆ. ಮಹಾಭಾರತವು ಸ್ತ್ರೀಯನ್ನು ಕುರಿತು ಈ ರೀತಿ ಪ್ರಶಂಸೆ ಮಾಡುತ್ತದೆ.
(ನಾನು ಸಾಮವಾಗಿದ್ದೇನೆ, ನೀನು ಋಕ್ ಆಗಿದ್ದೀಯೆ, ನಾನು ದ್ಯುಲೋಕ, ನೀನು ಪೃಥ್ವೀ, ಆದ ಕಾರಣ ನೀನು ಬಾ, ನಾವಿಬ್ಬರೂ ವಿವಾಹವಾಗೋಣ. ನಾವಿಬ್ಬರೂ ಒಟ್ಟಿಗೆ ತೇಜಸ್ಸನ್ನು ಧರಿಸೋಣ. ನಾವಿಬ್ಬರೂ ಪ್ರಜೆಯನ್ನು ಪಡೆಯೋಣ. ಬಹುಮಂದಿ ಪುತ್ರರನ್ನು ಪಡೆಯೋಣ. ನೀನು ಚಿರಕಾಲಬಾಳು. ನಾವಿಬ್ಬರು ಪರಸ್ಪರ ಪ್ರೀತಿವಂತರೂ, ಕಾಂತಿಯುತರೂ, ಶುಭ ಮತ್ತು ಪ್ರಸನ್ನ ಮನಸ್ಸುಳ್ಳವರೂ ಆಗಿ ನೂರುವರ್ಷಗಳು ನೋಡೋಣ. ನೂರು ವರ್ಷಗಳು ಬಾಳೋಣ. ನೂರು ವರ್ಷಗಳು ಕೇಳೋಣ.)
( ಸತ್ಯನಿಷ್ಠರೂ, ರೂಪವೇಷಗಳಿಂದ ನೋಡಲು ಪ್ರಿಯರೂ, ಸೌಭಾಗ್ಯವುಳ್ಳವರೂ, ಗುಣಸಂಪನ್ನರೂ, ಪತಿವ್ರತೆಯರೂ, ಕಲ್ಯಾಣಮಯವಾದ ಶೀಲವುಳ್ಳವರೂ, ಆದ ನಾರಿಯರಲ್ಲಿ ನಾನು ಸದಾ ವಾಸಮಾಡುತ್ತೇನೆ)
ಮೃದುವಾದ ಸ್ವಭಾವ, ಮಧುರವಾದ ಮಾತು, ಧರ್ಮಪರತೆ, ಪ್ರೀತಿ, ಕಾರುಣ್ಯ, ಸೇವಾನಿಷ್ಠೆ ಮಂತಾದ ಸದ್ಗಣಗಳಿಂದ ನಾರಿಯು ನಮ್ಮ ಧರ್ಮ ಸಮಾಜದಲ್ಲಿ ಪರಮ ಪವಿತ್ರವೂ, ಪೂಜ್ಯವೂ ಆದ ಸ್ಥಾನವನ್ನು ಪಡೆದಿದ್ದಾಳೆ. ಮಹಾಭಾರತದಲ್ಲಿ ಜಗಜ್ಜನನಿಯಾದ ಪಾರ್ವತಿಯು ಉತ್ತಮ ಸ್ತ್ರೀಯನ್ನು ಹೀಗೆ ವರ್ಣಿಸುತ್ತಾಳೆ:- "ಉತ್ತಮವಾದ ಸ್ವಭಾವ, ಮಾತು, ಆಚರಣೆಗಳಿಂದ ಕೂಡಿ, ರೂಪವೇಷಗಳಿಂದ ಸುಖವೀಯುವವಳಾಗಿ ಅನನ್ಯಭಾವದಿಂದ ಪತಿಯ ವಿಷಯದಲ್ಲಿ ಸುಮುಖಳಾಗಿರುವ ನಾರಿಯೇ ಧರ್ಮಚಾರಿಣಿಯು. ತನ್ನ ಪತಿಯನ್ನು ಸದಾ ದೇವಸದೃಶವಾಗಿ ಕಾಣುವವಳೇ ಧರ್ಮಪರಾಯಣಿ. ಅವಳೇ ಧರ್ಮ ಫಲಕ್ಕೆ ಭಾಗಿಯಾದವಳು. ಪತಿಯನ್ನು ದೇವನಂತೆ ಭಾವಿಸಿ ಸೇವೆ, ಪರಿಚರ್ಯೆಗಳನ್ನು ಮಾಡುವವಳೂ, ನೋಡಿದಮಾತ್ರಕ್ಕೆ ಸುಖಪ್ರದಳೂ, ಉತ್ತಮ ನಿಯಮವುಳ್ಳವಳೂ ಆಗಿ ಎಂದಿಗೂ ಅಪ್ರಸನ್ನಳಾಗದೆ ಅನನ್ಯಭಾವದಿಂದ ಪುತ್ರನ ಮುಖವನ್ನು ಹೇಗೋ ಹಾಗೆ ಪತಿಯ ಮುಖವನ್ನು ಸದಾ ನಿರೀಕ್ಷಿಸುವವಳೂ, ಸಾಧ್ವಿಯೂ ಆದವಳು ಧರ್ಮಚಾರಿಣಿಯು. ಒಟ್ಟಿಗೆ ಆಚರಿಸಬೇಕಾದ ಮಂಗಳಮಯ ದಂಪತಿ ಧರ್ಮವನ್ನು ಶ್ರವಣಮಾಡಿ ಪತಿಯೊಡನೆ ಸಮಾನವಾದ ವ್ರತವುಳ್ಳವಳಾದ ನಾರಿಯೇ ಧರ್ಮಪರಾಯಣಳು. ಸಾಧ್ವಿಯಾದವಳು ಯಾವಾಗಲೂ ತನ್ನ ಪತಿಯನ್ನ ದೇವತೆಯಂತೆ ಕಾಣುತ್ತಾಳೆ. ಇದೇ ದಂಪತಿಗಳಿಗೆ ಸಹ ಧರ್ಮವಿಹಿತವಾದ ಮಂಗಳಮಯ ಧರ್ಮ. ಪತಿಯ ವಿಷಯದಲ್ಲಿ ಆಸೆಪಡುವಂತೆ ಯಾವಳ ಮನಸ್ಸು ಕಾಮ, ಭೋಗ, ಐಶ್ವರ್ಯ ಸುಖಗಳಲ್ಲಿ ಆಸೆಪಡುವುದಿಲ್ಲವೋ ಅಂತಹ ನಾರಿಯೇ ಧರ್ಮಭಾಗಿನಿಯು. ಅತ್ತೆ, ಮಾವಂದಿರ ಪಾದ ಸೇವೆಮಾಡುತ್ತಾ, ಗುಣಸಂಪನ್ನಳಾಗಿ, ಸದಾ ತಾಯಿ ತಂದೆಯರಲ್ಲಿ ನಿಷ್ಠೆಯುಳ್ಳ ನಾರಿಯೇ ತಪೋಧನಳು. ಬ್ರಹ್ಮಜ್ಞಾನಿಗಳು, ದುರ್ಬಲರು, ಅನಾಥರು, ದೀನರು, ಕುರುಡರು, ದರಿದ್ರರು- ಇವರುಗಳನ್ನು ಅನ್ನದಿಂದ ಸಂರಕ್ಷಿಸುವವಳಾದ ನಾರಿಯೇ ಪತಿಯ ಧರ್ಮಪಾಲನೆಯಲ್ಲಿ ಪಾಲ್ಗೊಳ್ಳುವ ಧರ್ಮಚಾರಿಣಿಯ."
Thursday, September 17, 2020
நட்பின் பயன்(Natpin payan)
மூலம்: கே.எஸ். ராஜகோபாலன்
தமிழாக்கம்: வனஜா
மின்னஞ்சல் : (lekhana@ayvm.in)
`ஒரு மனிதன் யாருடன் பழகுகிறான் என்பதன் மூலம் அறியப்படுகிறான்' என்னும் சொல் வழக்கு கீழ்காணும் கதையில் விவரிக்கபடுகிறது. ஒரு கிளிக்கு இரண்டு குஞ்ஜுகள் இருந்தன. ஒருமுறை ஒரு வேடன் அவற்றை பிடித்து விற்பதற்காக கொண்டு சென்றான். நற்பயனின் பலனால் ஒரு குஞ்ஜு அவனிடமிருந்து தப்பி ஒரு பர்ணசாலையை அடைந்தது. வேடன் மற்றொரு குஞ்ஜை ஒரு கசாப்புகடைகாரனிடம் விற்றான். இரண்டும் தங்கள் இருப்பிடங்களில் வளர்ந்தன. ஒருமுறை ஒரு வழிபோக்கன் கசாப்பு கடைகாரனின் இல்லத்தை கடந்து செல்லும்போது அங்கிருந்த கிளி 'ஏய், நீ யார்?' என்று கேட்டு தகாத வசைசொற்களை கூறியது. அவன் அவ்வீட்டை கடந்து பர்ணசாலையை அடைந்தான். அங்கிருந்த கிளி வணக்கம் கூறி வரவேற்றது. அவன் நலன் குறித்து மென்மையான இனிய குரலில் வினவியது. இரு பறவைகளின் தாய் ஒன்றே ஆயினும் அவற்றின் சொற்களும் அணுகுமுறையும் நேர்மாறாக இருந்தன.
குழந்தைகளின் மொழி, பழக்கவழக்கங்கள், நடத்தை முதலியவை அவை வளரும் சூழலை பொறுத்தே அமையும் என்பதை இக்கதை அழகாக விளக்குகிறது. ஸ்ரீரங்கமஹாகுரு இவ்வாறு எச்சரிக்கிறார்: 'வளரும் குழந்தையின் மனம் கொடி போன்றது. அது படரும் திசையில் வளரும். சில தாய்மார்கள் வளரும் குழந்தைகளின் மனதை சரியாக வழிநடத்த இயலாதவர்களாக இருப்பது வருந்தத்தக்கது. ஒரு காலத்தில் நம் நாட்டின் சிறந்த முனிவர்கள் இறைவனையே வாழ்க்கையின் மையமாகக்கொண்டு பண்பாட்டையும், நாகரீகத்தையும் வளர்த்தனர். இது நம் நாட்டிற்கு மட்டுமே உரியது. சமூகத்திலிருந்த மூத்தவர்கள் முனிவர்கள் வகுத்த பாதையை பின்பற்றினர். அவ்வாறே வளரும் பருவத்தினர் சமூகத்தில் மூத்தோரை கவனித்து பின்பற்றி தாமாகவே அப்பண்பையும், நாகரீகத்தையும் வளர்த்துக்கொண்டனர். சமீபகாலம் வரை தங்களிடம் உள்ளதைக்கொண்டு நிறைவான மனத்துடன் வாழ்ந்தவர்கள் இருந்தனர். இதை விளக்க என் அனுபவத்தை பகிர விரும்புகிறேன்.
வைதிக கார்யங்களுக்காக ஒரு புரோகிதர் என் இல்லத்திற்கு வழக்கமாக வருவார். அவர் குறைந்த வருமானமுள்ள பள்ளி ஆசிரியர். சடங்குகள் முடிந்தவுடன் எவ்வளவு சன்மானம் தர வேண்டுமென்றால் 'உங்கள் விருப்பம். இறைவன் எனக்கு த்ருப்தி அளித்துள்ளான்' என்பார். அவரை போன்றோர் நம்மை சுற்றி சமூகத்தில் இருப்பின் நம் குழந்தைகள் அவர்களைப் பின்பற்றி உயர வாய்ப்புகள் அதிகம். வளரும் குழந்தைகளிடம் உள்ள சிறந்தவற்றை வெளி கொணர நம் கல்வித்திட்டத்தை உடனடியாக மாற்றியமைக்க வேண்டியது அவசியம். சிறந்த மனிதர்கள், தன்னலமற்ற மனிதர்கள், தேசபற்று மிக்கோர் ஆகியோரின் வாழ்க்கை வரலாறு பாடத்திட்டத்தில் சேர்க்கபட வேண்டும். தங்கள் குழந்தைகள் மற்றவர்களைவிட முன்னணியில் இருக்க வேண்டுமென பெற்றோர் விரும்புவது இயல்பே. எனவே பிள்ளைகள் பள்ளி, வீட்டுப்பாடம், தனியார் பயிற்சி எனும் சுழலில் சிக்குகின்றன. இந்திய கலாசாரத்தையும், பண்டை காலத்தின் உயரியபெருமைகளையும் மீண்டும் அறிமுகப்படுத்த மக்கள் உலகாயத செயல்களுடன் இறைபக்தியையும் வளர்த்து கொண்டு நடு நிலையுடன் வாழ அறிவுறுத்த வேண்டும்.
குறிப்பு: இக்கட்டுரை யின் கன்னட மூலம் AYVM blogs ல் காணலாம்.
Wednesday, September 16, 2020
ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)
ಒಮ್ಮೆ ದೇವರ್ಷಿ ನಾರದರು ಮಹಾವಿಷ್ಣುವಿನಲ್ಲಿ ನಾರಾಯಣಮಂತ್ರ-ಜಪದ ಹಿರಿಮೆಯ ಬಗೆಗೆ ಪ್ರಶ್ನಿಸಿದರು. ಅದಕ್ಕೆ ಭಗವಂತನು ಒಂದು ಚಿಕ್ಕ ಹುಳುವನ್ನು ತೋರಿಸಿ ಅದರ ಕಿವಿಯಲ್ಲಿ ಮಂತ್ರ-ಪಠಣ ಮಾಡುವಂತೆ ಹೇಳಿದನು. ಹಾಗೆ ಮಾಡಿದಾಗ ಆ ಹುಳು ತಕ್ಷಣವೇ ಮೃತಪಟ್ಟಿತು. ದುಃಖಿತರಾದ ನಾರದರು ಭಗವಂತನಿಗೆ ವಿಷಯವನ್ನು ತಿಳಿಸಿದರು. ಹೀಗೆ ಕ್ರಮಕ್ರಮವಾಗಿ ಒಂದು ಚಿಟ್ಟೆ, ಜಿಂಕೆ-ಮರಿ ಹಾಗೂ ಒಂದು ನವಜಾತ-ಕರು ಇವುಗಳ ಕಿವಿಯಲ್ಲಿ ಮಂತ್ರಪಠಣ ಮಾಡುವಂತೆ ಹೇಳಿದರು. ಹಿಂದಿನಂತೆ ಅವೂ ಮೃತವಾದವು. ಇದರಿಂದ ಬಹಳ ಖಿನ್ನರಾದ ನಾರದರು ವಿಷ್ಣುವಿನಲ್ಲಿ ತಿಳಿಸಿದರು. ಮಂದಸ್ಮಿತನಾದ ಭಗವಂತನು, ತನ್ನಲ್ಲಿ ಇಷ್ಟು ಬೇಗನೆ ನಂಬಿಕೆಯನ್ನು ಕಳೆದುಕೊಳ್ಳದೆ, ವಾರಣಾಸಿಯ ರಾಜನ ನವಜಾತ ಶಿಶುವಿನ ಕಿವಿಯಲ್ಲಿ ಕೊನೆಯ ಬಾರಿ ಮಂತ್ರೋಚ್ಚಾರವನ್ನು ಮಾಡುವಂತೆ ಹೇಳಿದನು. ಹಿಂಜರಿಕೆಯಿಂದಲೇ ಅವರು ಆ ಮಗುವಿನ ಕಿವಿಯಲ್ಲಿ ಮಂತ್ರವನ್ನು ಪಠಿಸಿದರು. ಆಶ್ಚರ್ಯವೆಂಬಂತೆ, ಆ ಮಗುವು ಕಣ್ತೆರೆದು ನೋಡಿ ನಾರದರಿಗೆ ನಮಿಸಿ "ನನ್ನ ಹಿಂದಿನ ಜನ್ಮಗಳಲ್ಲಿ ತಾವು ಕಿವಿಯಲ್ಲಿ ಮಂತ್ರಪಠಣವನ್ನು ಮಾಡಿದ್ದರ ಫಲವಾಗಿ ಹಂತ-ಹಂತವಾಗಿ ಉನ್ನತ ಜನ್ಮವನ್ನು ತಳೆದೆ. ಕೊನೆಯಲ್ಲಿ ಶ್ರೇಷ್ಠವಾದ ಮಾನವಜನ್ಮವನ್ನು ಹೊಂದಿರುವೆ. ಇದರಿಂದ ಸಾಧನೆಯನ್ನು ಮಾಡಿ ಮೋಕ್ಷವನ್ನು ಪಡೆಯುವೆ"ನೆಂದಿತು.
ಮಾನವ ಜನ್ಮವೇಕೆ ಶ್ರೇಷ್ಠ? ಆಧುನಿಕರ ಪ್ರಕಾರ, ಮನುಷ್ಯ, ತನ್ನ ಮೇಧೆ, ಚಿಂತನೆಗಳಿಂದಾಗಿ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಆದರೆ ನಮ್ಮ ಸನಾತನಮಹರ್ಷಿಗಳ ಪ್ರಕಾರ-ಅತ್ಯದ್ಭುತವಾದ ಈ ಶರೀರ-ರಚನೆಯಿಂದ ಮಾತ್ರವೇ ಯೋಗ-ಭೋಗಗಳೆರಡನ್ನು ಪಡೆಯಬಹುದಾದ್ದರಿಂದಲೇ ಶ್ರೇಷ್ಠತೆ. ಮಹಾಕವಿ ಕಾಳಿದಾಸನು ಹೇಳಿರುವಂತೆ("ಶರೀರಮಾದ್ಯಂಖಲು ಧರ್ಮ ಸಾಧನಮ್") ಧರ್ಮಮಯ ಜೀವನಕ್ಕೆ ಶರೀರ ಅತ್ಯಾವಶ್ಯಕ. ಅದರ ಮೂಲಕವೇ ಪರಮಾತ್ಮದರ್ಶನ ಸಾಧ್ಯ. ಪುಣ್ಯಫಲವಾಗಿ ಸ್ವರ್ಗ ಪ್ರಾಪ್ತಿಯಾದರೂ, ಪುಣ್ಯಕ್ಷಯದ ನಂತರ ಮಾನವಜನ್ಮ ತಾಳಿ ತಪಸ್ಸು-ಸಾಧನೆಗಳ ಮೂಲಕವೇ ಮೋಕ್ಷವನ್ನು ಪಡೆಯಬೇಕು. "ಮಾನವ ಜನ್ಮ ಬಲು ದೊಡ್ಡದು" ಎನ್ನುವ ದಾಸವಾಣಿ ಸ್ಮರಣೀಯ. ಶರೀರ ನೌಕೆಯ ಸಹಾಯದಿಂದ ಜೀವನವೆಂಬ ಭವಸಾಗರವನ್ನು ದಾಟಬಹುದು. ಈ ದೇಹವನ್ನು ಬರೀ ದೇಹವಾಗಿ ಮಾತ್ರ ನೋಡದೇ ಒಳಗಿರುವ ದೇಹಿಯ(ದೇವನ) ಗೇಹವಾಗಿ(ಮನೆಯಾಗಿ), ದೇವಾಲಯವಾಗಿ ನೋಡಬೇಕೆಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಸೂಚನೆ: 16/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.
Monday, September 14, 2020
Why isn't God visible to us?
Kannada Article by: KS Srinivasa Iyengar
English Rendering by: MR Yashaswini
Respond to (lekhana@ayvm.in)
While counselling Arjuna in Bhagawadgeeta Sri Krishna says - "Oh Arjuna! Ishwara who controls all the beings through his Maayaa (illusory power) resides in the heart of all living beings. From this it can be inferred that this supreme entity resides in all our hearts too. Heart inside our body is well-known; but how do we see the lord residing within it? While the heart is internal, our eyes are external! Ironically he isn't seen by even the cardiologists who perform open heart surgeries!
As the experienced describe, our body is synonymous to a Ratha (chariot) - "Nara Ratha" or a human chariot is what it is called. "Nara" is nothing but the "Jeeva" (being). This chariot also carries "Narayana" who is the guide, aim and also the destination of this Jeeva. Heart is the region where the Jeeva and Deva unite. But how do we believe that both the Jeeva and Deva reside in the Human Body? Then why is it that we are unable to see the Paramaatma residing within? It is because we have not paid attention in this direction. Sriranga Mahaguru has beautifully illustrated this behaviour through an analogy. A man who is engrossed in his routine work might not notice even biological stimuli as natural as his hunger or sleep. Body indicates hunger amidst his day-to-day activities. But yielding to his busy schedules, he either fails to notice them or sometimes even ignores them. Similarly one might feel very sleepy in a movie's second show screening. This, when ignored and made a habit, would result in sleep and hunger gradually dwindling away.
By surrendering ourselves to these sense organs and material pleasures we are neglecting our soul's hunger. Hence the Lord who is indeed residing in our body is not visible to us. In order to turn our focus towards him, the Maharshis of our country have constructed several temples in this holy land of Bharata. They prescribed 16 samskaaras (purificatory rites) to be performed for every jeeva in every household. They formulated several rules and regulations that ward off the impediments and complement the path of Saadhana.
A newborn child is shown a lamp placed in a niche resembling the urdhva trikona (upward triangle). The child is also made to hear Ghantaa-naada (reverberation of the divine bell which resembles the pranava naada). This way Maharshis ensured that our focus is always on Jyothi (divine Light), Naada and that it stays focussed on Paramaatma throughout our life. Today these principles have been forgotten and hence God also has gone out of sight. Sriranga Mahaguru's words are noteworthy here - "We are entitled to dwell in the fourth state and enjoy the gracious company of god just as we have the right to experience the other three states namely waking, dreaming and deep-sleep states."
May that Sarveshwara (Supreme Being) bestow upon us the ability to realize and experience the Lord.
Note: The Kannada version of this article can be viewed at AYVM blogs.