Saturday, June 26, 2021

ಷೋಡಶೋಪಚಾರ - 6 ಅರ್ಘ್ಯ (Shodashopachaara - 6 Arghya)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ನಾಲ್ಕನೆಯ ಉಪಚಾರ ಅರ್ಘ್ಯ. ಅರ್ಘ್ಯ ಎಂದರೆ ಪೂಜಾಯೋಗ್ಯವಾದುದು.ದೂರ್ವಾ-ಗಂಧ-ಪುಷ್ಪ-ಅಕ್ಷತೆಗಳಿಂದ ಕೂಡಿದ ನೀರು ಎಂಬ ಅರ್ಥವೂ ಉಂಟು. ಭಗವಂತನಿಗೆ ಅಥವಾಬಂದ ಅತಿಥಿಗಳಿಗೆ ಗಂಧಾಕ್ಷತೆಗಳಿಂದ ಮಿಶ್ರವಾದ ಜಲವನ್ನು ಕೈಗೆ ಕೊಡುತ್ತೇವೆ. ಇದನ್ನು 'ಅರ್ಘ್ಯ'ಎಂದು ಕರೆಯುತ್ತಾರೆ. ಪೂಜ್ಯರಿಗೆ ಕೊಡುವ ಗೌರವದ ದ್ಯೋತಕವಾಗಿ ಮಾಡುವ ವಿಧಾನ ಇದಾಗಿದೆ.ನಮಗಿಂತ ಹಿರಿದಾದ ವಿಷಯವನ್ನು ಗೌರವಿಸುವುದನ್ನು ಕಲಿಯಬೇಕು. ನಮಗೆ ಹಿರಿದಾದ ವಿಷಯಯಾವುದೆಂಬ ಅರಿವು ನಮಗೆ ಯಾವಾಗ ಬರುತ್ತದೆಯೋ ಆಗ ಅವರಲ್ಲಿದ್ದ ಗುಣಧರ್ಮಗಳನ್ನುಆದರಿಸುವ ಸ್ವಭಾವ ನಮ್ಮಲ್ಲಿ ಬೆಳೆಯುತ್ತದೆ. ಆ ವಿಷಯಕ್ಕೆ ನಾವು ಬಾಗಿದಾಗ ಆ ಗುಣಗಳುನಮ್ಮಲ್ಲಿಗೆ ಹರಿಯುತ್ತವೆ. ಹರಿಯುವಿಕೆಯು, ತಾನು ಇರುವುದಕ್ಕಿಂತ ಕೆಳಜಾಗಕ್ಕೆ ತಾನೆ!. ಆಗ ತಾನೆ ನಾವು ಮೇಲೇರಲು ಸಾಧ್ಯ!.ಧರ್ಮರಾಜನು ಒಮ್ಮೆ ರಾಜಸೂಯ ಯಾಗವನ್ನು ಮಾಡುತ್ತಾನೆ. ಯಾಗಾಂತ್ಯದಲ್ಲಿಅಗ್ರ(ಅರ್ಘ)ಪೂಜೆಯನ್ನು ಯಾರಿಗೆ ಸಲ್ಲಿಸಬೇಕೆಂಬ ಜಿಜ್ಞಾಸೆ ಉಂಟಾಗುತ್ತದೆ. ಆಗ ಅಲ್ಲಿದ್ದಭೀಷ್ಮಾಚಾರ್ಯರು ಶ್ರೀಕೃಷ್ಣನಿಗೇ ಅಗ್ರಪೂಜೆ ಸಲ್ಲಬೇಕೆಂದು ಅಭಿಪ್ರಾಯವನ್ನು ತಿಳಿಸುತ್ತಾರೆ. ಆಗಶಿಶುಪಾಲನು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾನೆ. ಕೊನೆಗೆ ಶ್ರೀಕೃಷ್ಣನಿಗೇ ಅಗ್ರರ್ಘಪೂಜೆಸಲ್ಲುತ್ತದೆ. 

ಪೂಜ್ಯರು ಯಾರೆಂಬುದನ್ನು ಭೀಷ್ಮಾಚಾರ್ಯರು ಗುರುತಿಸುತ್ತಾರೆ. ಆದರೆ ಶಿಶುಪಾಲನಿಗೆಕೃಷ್ಣನಲ್ಲಿದ್ದ ಪೂಜ್ಯಭಾವವನ್ನು ಗುರುತಿಸಲಾಗಲಿಲ್ಲ ಎಂಬ ಕಥೆಯನ್ನು ನಾವು ನೋಡಬಹುದು.ಪೂಜನೀಯವಾದುದನ್ನು ಗುರುತಿಸಿ ಸಲ್ಲಿಸಿದ ಪೂಜೆಯು ಪೂಜಿಸಿದವನನ್ನು ಪೂಜ್ಯವಾದುದರಎತ್ತರಕ್ಕೆ-ಅವನ ಭಾವಕ್ಕೆ ಕರೆದುಕೊಂಡು ಹೋಗುತ್ತದೆ.ಲೋಕದಲ್ಲಿ ಎತ್ತರದಲ್ಲಿರುವ ವಿಷಯವೆಂದರೆ ಭಗವಂತನು. ಅವನಿಗೆ ಅಥವಾ ಅವನನ್ನು ಹೊತ್ತುತಂದವರಿಗೆ ಕೊಡುವ ಯಾವ ಉಪಚಾರವಿದೆಯೋ ಅದನ್ನು ಅರ್ಘ್ಯವೆನ್ನುತ್ತಾರೆ. ಹಾಗಾಗಿಭಗವಂತನನ್ನು ಉಪಚರಿಸುವಾಗ ಈ ಭಾವದಿಂದ ಇರಬೇಕು. ಅದಲ್ಲವಾದರೆ ಅದು ಕೇವಲ ಚೇಷ್ಟೆಮಾತ್ರ ಆಗಿರುತ್ತದೆ. ಇಲ್ಲೂ ಕೂಡ ಹಿಂದಿನ ಉಪಚಾರಗಳಂತೆ ದೇವತಾಸಾನ್ನಿಧ್ಯಕ್ಕೆ ತಕ್ಕಂತೆಅವುಗಳಿಗೆ ಹೇಳಿದ ಮಂತ್ರಗಳಿಂದ ದೂರ್ವಾಕ್ಷತಗಂಧಪುಷ್ಪಗಳಿಂದ ಕೂಡಿದ ಜಲದೊಂದಿಗೆಅರ್ಘ್ಯವನ್ನು ಕೊಡಬೇಕು. ಕೆಲವೊಮ್ಮೆ ನೀರು, ಹಾಲು, ದರ್ಭಾಗ್ರ, ಮೊಸರು, ಅಕ್ಷತೆ, ತಿಲ, ಯವ,ಬಿಳಿಸಾಸಿವೆ ಹೀಗೆ ಎಂಟು ದ್ರವ್ಯಗಳಿಂದ ಕೂಡಿದ ಅರ್ಘ್ಯವನ್ನು ಶಂಖದಿಂದ ಕೊಡುವ ವಿಧಾನವೂಉಂಟು. ಇದಾವುದೂ ಸಿಗದಿರುವಾಗ ದೂರ್ವಾ, ಅಕ್ಷತೆ ಮತ್ತು ಜಲದಿಂದಲೂ ಅರ್ಘ್ಯವನ್ನುಕೊಡಬಹುದು ಎಂಬುದಾಗಿ ಹೇಳಲಾಗಿದೆ. ಪದಾರ್ಥ ಸಿಗಲಿಲ್ಲ ಎಂಬ ಕಾರಣಕ್ಕೆ ಕರ್ಮವನ್ನುಲೋಪಮಾಡಬಾರದು. ಪೂಜನೀಯವಾದುದನ್ನು ಗುರುತಿಸುವ ಸಂಕೇತವಾಗಿ ಈ ಅರ್ಘ್ಯವೆಂಬಉಪಚಾರ ಬಂದಿದೆ.

ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.