ಗುಪ್ತನಿಧಿ ಎಂದೊಡನೆ ನಮಗೆ ಬಚ್ಚಿಟ್ಟ ಹಣ, ಬ್ಯಾಂಕಿನ ಲಾಕರ್ ನಲ್ಲಿ ಇಟ್ಟ ಸಂಪತ್ತು, ಇತ್ಯಾದಿಗಳೆಲ್ಲ ನೆನಪಾಗುತ್ತವೆ.
ನಮ್ಮ ನಿತ್ಯಜೀವನಕ್ಕೆ ಬೇಕಾದ ಆಹಾರ, ವಸ್ತ್ರ ಇತ್ಯಾದಿ ಖರೀದಿಸಲು ಹಣದಿಂದಲೇ ಸಾಧ್ಯ. ಹಾಗಾಗಿ ನಾವೆಲ್ಲಾ ಸದಾ ದುಡಿಯುತ್ತಿರುವುದು ಹಣ ಸಂಪಾದನೆಗಾಗಿಯೇ. ನಮ್ಮ ಸಂಸಾರ ಚಕ್ರವು ಸುಗಮವಾಗಿ ನಡೆಸಲು ಹಣದ ಪಾತ್ರ ದೊಡ್ಡದು. ಇನ್ನು, ನಾವು ಕೂಡಿಟ್ಟಿದ್ದ ಹಣದಲ್ಲಿ ಒಡವೆ, ವಸ್ತು-ವಾಹನ, ಮನೆ ಇತ್ಯಾದಿ ಖರೀದಿಸುವುದು ಉಂಟು. ಇನ್ನು ಕೆಲವರಿಗೆ ಪರ್ವಜರು ಸಂಪಾದಿಸಿದ ಸ್ಥಿರ ಚರ ಆಸ್ಥಿಗಳು ದೊರಕಿರಬಹುದು. ಇವೆಲ್ಲವೂ ಒಂರ್ಥದಲ್ಲಿ ನಿಧಿ ! ಇದನ್ನು ಸುಭದ್ರವಾಗಿ ಕಾಪಾಡಿಟ್ಟುಕೊಳ್ಳುವುದು ಮತ್ತು ವೃದ್ಧಿಮಾಡುವುದು ನಮ್ಮ ರ್ತವ್ಯವಾಗಿದೆ. ನಮ್ಮ ಸ್ಥಿರ-ಚರ ಆಸ್ಥಿಗಳು ಅಥವಾ ಹಣವು ಬಂದರೆ ಸಂತೋಷವಾಗುತ್ತದೆ. ಅದನ್ನು ಕಳೆದುಕೊಂಡರೆ ಅತೀವವಾದ ದುಃಖವಾಗುತ್ತದೆ. ಮತ್ತು ಈ ನಿಧಿಯಿಂದ ಲಾಭ ನಷ್ಟಗಳರೆಡೂ ಉಂಟು.
ಹಣ, ಆಸ್ತಿ, ಮನೆ, ಚಿನ್ನ ಇವುಗಳನ್ನೆಲ್ಲ ಬಿಟ್ಟು ಇನ್ನೇನಾದರೂ ನಿಧಿ ಇದೆಯೇ? ಈ ದೇಶದ ಮರ್ಷಿಗಳು ಯಾವುದನ್ನು ದೊಡ್ಡ ನಿಧಿ ಎಂದಿದ್ದಾರೆ ಎಂಬುದನ್ನು ಗಮನಿಸೋಣ.
ಸುಖಕ್ಕಾಗಿ ನಿಧಿ :
ನಿಜಕ್ಕೂ ಮೇಲಿನ ನಿಧಿಗಳನ್ನೆಲ್ಲಾ ನಾವು ಕೂಡಿ ಇಡುವುದು ನಮ್ಮ ಇಂದಿನ, ಮುಂದಿನ ಸುಖದ ಬದುಕಿಗಾಗಿ. ಅದರಿಂದ ಸುಖ ಸಿಗುತ್ತದೆ ಎಂಬುದೇ ನಿಧಿ ಸಂಗ್ರಹಣೆಯ ಹಿಂದಿನ ಸ್ಫರ್ತಿ. ನಮ್ಮ ಮರ್ಷಿಗಳು ಸಹ ಸುಖದ ಅನ್ವೇಷನೆಯಲ್ಲೇ ಸಾಗಿದವರು. ಅವರು ಈ ಬಗೆಯ ನಿಧಿಗಳಿಂದ ಸಿಗುವ ಸುಖ ಸಂತೋಷಗಳಿಗೆ ಅಪರಿಚಿತರೇನೂ ಅಲ್ಲ.
ಶಾಶ್ವತ ಸುಖದ ನಿಧಿ :
ಆದರೆ ಆತ್ಯಂತಿಕವಾಗಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಸುಖವೇನಾದರೂ ಇದೆಯೇ ಎಂಬುದು ಅವರ ಅನ್ವೇಷಣೆಯಾಗಿತ್ತು. ಹಾಗೆಂದೇ ಕಣ್ಣಿಗೆ ಕಾಣುವ ನಿಧಿಗೆ ಮಾತ್ರ ಸೀಮಿತವಾಗದೆ, ತಮ್ಮ ತಪಸ್ಸಿನ ಶಕ್ತಿಯಿಂದ ಅತ್ಯಂತ ದೊಡ್ಡದಾದ ಪರಮಾನಂದ ನಿಧಿ ಇದೆ ಎಂಬುದನ್ನು ಕಂಡುಕೊಂಡುದೇ ಅವರ ಸಾಧನೆ. ಆ ನಿಧಿ ಇನ್ನೆಲ್ಲೂ ಇಲ್ಲದೇ ನಮ್ಮೊಳಗೇ ಇದೆ, ಅದನ್ನು ಮಾನವರೆಲ್ಲರೂ ಪಡೆಯಬಹುದಾದ ಮಾತ್ರವಲ್ಲ, ಪಡೆಯಲೇ ಬೇಕಾದ ನಿಧಿ ಎಂದು ಘೋಷಿಸಿದರು. ಪ್ರತಿಯೊಬ್ಬ ಜೀವಿಯ ಅಂತರಂಗದಲ್ಲಿ ಬೆಳಗುವ ಪರಮಾತ್ಮ ಜ್ಯೋತಿಯೇ ಆ ನಿಧಿ. ಅದರ ಅರಿವು ಉಂಟಾದಾಗ ಇನ್ನಿಲ್ಲದ ನೆಮ್ಮದಿ, ಶಾಂತಿ ,ಆನಂದ. ಒಮ್ಮೆ ಅದರ ಅನುಭವವಾಗಿಬಿಟ್ಟರೆ ಆ ಆನಂದ ಶಾಶ್ವತ. ಮೇಲಿನ ನಿಧಿಗಳೆಲ್ಲ ಅದರ ಎದುರು ಕ್ಷುದ್ರ ಎಂಬುದು ಅವರ ಅನುಭವಿಕ ಸತ್ಯ. ಮಾನವ ದೇಹದಲ್ಲಿ ಆ ನಿಧಿಯನ್ನು ಪಡೆಯುವ ಎಲ್ಲಾ ಅನುಕೂಲತೆಗಳು ಇವೆ ಎಂಬುದನ್ನು ಅವರು ಕಂಡುಕೊಂಡರು.
ಪರಮಾತ್ಮ ಜ್ಯೋತಿಯೇ ನಮ್ಮ ಗುಪ್ತನಿಧಿ :
ಆ ಪರಮಾತ್ಮ ಜ್ಯೋತಿಯನ್ನೇ ಬಹಳ ದೊಡ್ಡನಿಧಿ ಎಂದು ಅವರು ಕೊಂಡಾಡಿದ್ದು. ಅದು ನಮ್ಮೊಳಗೇ ಇರುವುದರಿಂದ, ಹೃದಯ ಗುಹೆಯಲ್ಲಿ ಅನುಭವಕ್ಕೆ ಬರುವುದರಿಂದ ಅದು ಗುಪ್ತ ನಿಧಿಯೂ ಹೌದು. ಅದನ್ನು ಪಡೆಯದ ಮಾನವ ಜನ್ಮ ವ್ರ್ಥ. ಆ ನಿಧಿಯನ್ನು ಪಡೆಯಲು ನಮ್ಮೆಲ್ಲ ಸಾಧನೆಗಳು, ಪೂಜೆ ಧ್ಯಾನ ಎಲ್ಲವೂ. ಅದನ್ನು ಪಡೆಯಲು ಮರ್ಷಿಗಳು ಹಲವಾರು ಮರ್ಗಗಳನ್ನು, ವಿಧಿ-ನಿಷೇಧಗಳನ್ನು ತಂದಿದ್ದಾರೆ. ಮಾನವ ಶರೀರದಲ್ಲಿ ಮಾತ್ರವೇ ಈ ಪರಮೋನ್ನತ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದಿದ್ದಾರೆ. ಅಂದರೆ, ಪ್ರತಿ ಮಾನವದೇಹವೂ ಒಂದು ಗುಪ್ತ ನಿಧಿಯ ಭಂಡಾರವಾಗಿದೆ. ಆ ನಿಧಿಯನ್ನು ಕುಂಡಲಿರೂಪವಾದ ರ್ಪವು ಕಾಯುತ್ತಿದೆಯಂತೆ . ತೀವ್ರವಾದ ತಪಸ್ಸಿನಿಂದ ಅದರ ಅನ್ವೇಷಣೆಗೆ ತೊಡಗಿ ಅದಕ್ಕೆ ಬೇಕಾದ ವಿಧಿ, ವಿಧಾನಗಳನ್ನು ಅನುಸರಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದಲ್ಲಿ ಆ ಕುಂಡಲಿನಿ ದೇವಿಯು ನಮ್ಮನ್ನು ಒಳಗೆ ಸಾಗಲು ಅವಕಾಶ ಕೊಡುತ್ತಾಳಂತೆ. ಅದಿಲ್ಲದೇ ಕೇವಲ ಭೌತಿಕ ಜೀವನದಲ್ಲಿ ಮಾತ್ರ ಆಸಕ್ತರಾಗಿ ಆ ನಿಧಿಯ ಗೋಜಿಗೇ ಹೋಗದ ಬಡಜೀವಿಗಳಿಗೆ ಅದು ಎಂದೆಂದಿಗೂ ಅನುಭವಕ್ಕೆ ಬಾರದ ಗುಪ್ತ ನಿಧಿಯೇ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿ ಕೊಂಡವರೇ ನಮ್ಮ ಭಾರತೀಯ ಮರ್ಷಿಗಳು.
ಶ್ರೀರಂಗ ವಾಣಿ :
ಮರ್ಷಿಗಳ ಈ ಸಾಧನೆಯನ್ನುಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು; “ಪರಮಾತ್ಮಜ್ಯೋತಿಯನ್ನು ಪಡೆಯುವುದು ಭಾರತ ಋಷಿಗಳ ದೃಷ್ಟಿಯಿಂದ ಜೀವನದ ಪರಮಧ್ಯೇಯ. ಅದೇ ಪರಮಾನಂದಸಾಧನೆ. ಅದೇ ಮುಕ್ತಿ. ನದಿಯು ಸಮುದ್ರದೊಡನೆ ಒಂದಾಗಿಬಿಡುವಂತೆ ಆ ಆತ್ಮ-ದೀಪದೊಡನೆ ಐಕ್ಯ ಭಾವವನ್ನು ಹೊಂದುವುದಕ್ಕೆ “ಜ್ಞಾನ” ಎಂದು ಹೆಸರು.” ಎಂದು ನುಡಿದಿದ್ದರು.
ಆ ಗುಪ್ತನಿಧಿಗಾಗಿ ನಮ್ಮ ಪ್ರಯತ್ನವಿರಲಿ :
ಹಾಗಾಗಿ ನಾವು ಋಷಿಪ್ರಣೀತವಾದ ಸಾಧನಾಮರ್ಗವನ್ನು ಅನುಸರಿಸೋಣ. ಲೌಕಿಕವಾದ ನಿಧಿಯ ಜೊತೆಯಲ್ಲೇ ಮರ್ಷಿಗಳು ತಮ್ಮ ತಪಸ್ಯೆಯಿಂದ ಅರುಹಿದ ಪಾರಮರ್ಥಿಕ ಸುಖವನ್ನು, ಶಾಶ್ವತವಾದ ಆನಂದವನ್ನು ಕರುಣಿಸುವ ಆ ಪರಮಾತ್ಮ ನಿಧಿಯನ್ನು ಕಂಡುಕೊಳ್ಳುವ ಮರ್ಗದಲ್ಲಿ ಹೆಜ್ಜೆ ಹಾಕೋಣ.
ಅತ್ಯಂತ ದೊಡ್ಡದಾದ, ನಮ್ಮಲ್ಲೇ ಇರುವ ಆ ಗುಪ್ತನಿಧಿಯ ಪರಮಾನಂದವನ್ನು ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರರ್ಥಿಸೋಣ.

ಸೂಚನೆ: 6/06/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.