Wednesday, December 30, 2020
ಕರ್ಮದ ಮರ್ಮವರಿತು ಕರ್ಮ ಮಾಡಬೇಕು (Karmada Marmavaritu Karma Madabeku)
Monday, December 28, 2020
Dharma Protects the Protector (Dharmo Rakshati Rakshitah)
Kannada Article by Dr Mohan Raghavan
English Rendering By M R Bhashyam
Respond to (lekhana@ayvm.in)
Dharmapaala and Dhanapaala were two famous merchants in the kingdom of Kaashi. They used to travel in northern and southern directions for business. Once, Dharmapaala took huge merchandise, a posse of sellers and armed guards in a cavalcade of bullock carts for business towards north. Dhanapaala had already left earlier. After many days, the army of Dharmapaala entered a vast desert. As a precaution, they had taken sufficient water to last them for a week. On the way, they met an aged gentleman. He said "Kindly take me along with you. I will help in whatever way I can". The followers of Dharmapaala laugh saying "Oh! Old man! You are unable to lift a stick to support yourself. In what way can you help us?" However, Dharmapaala was overcome by pity. With reverence, he asks the old man to travel with him in his own cart. As they were travelling through scorching heat and parching sun, they see a crowd of travelers coming from the opposite direction. Their clothes were wet. "Oh! What a beautiful cool oasis. It is a boon to travelers" they were heard to be saying. Hearing this Dharmapaala's associates muse "if there is an oasis nearby, why should we carry the water; its load slows us down". Though Dharmapaala thought that their argument was logical, the old man seated next to him said "Shreshti! Do not believe them. They are crooks wanting to rob the travelers weakened by thirst". Dharmapaala was in a dilemma. Unable to ignore the words of the old man, he instructs his troupe to carry on without discarding the stored water. Some members were unhappy and were complaining "Oh! We should have travelled with Dhanapaala". But, even after travelling for a couple of days, they could not find the oasis. Instead, they found the party of Dhanapaala robbed and without means whatsoever. "Oh, grandpa, how did you know? Your words were true" was their question. The old man said "though their clothes were wet, no birds were seen in the horizon to signal the presence of an oasis nearby. A close observation of their eyes indicated their evil intent".
The city of Kaashi is our body. We transact with the world through our organs. The arena of business in the outside world is like that desert. In the expanses of internal field, there are oases of serene and sappy ambrosia. Our inclinations towards sensual pleasures create mirages that delude us. In our business of life, we are naturally attracted towards money and power of the wealthy –Dhanapaalas. We throw away the ambrosia and are deluded by the magic woven by our senses and loose that wealth. We discard the aged and knowledgeable dharma, thinking that it is weak. But, Dharma protects us and unveils Truth. Just as eyes give us sight and ears the ability to hear, the dharma of the soul, Aatmadharma, uncovers the inner truth. If this dharma is protected, it reveals the inner light and redeems us in turn. It enables us to keep our senses under control. The principle that "If we protect dharma, it will protect us" was oft highlighted by the great yogi, the revered Shri Ranga Mahaaguru.
Note: The Kannada version of this article can be viewed at AYVM blogs.
Sunday, December 27, 2020
ಆರ್ಯಸಂಸ್ಕೃತಿ ದರ್ಶನ - 23 (Arya Samskruti Darshana - 23)
ಬ್ರಹ್ಮ ವಿಷ್ಣು ಮಹೇಶಾನಾಂ ತ್ರಯ್ಯಗ್ನೀನಾಂ ಚ ಧಾರಣಂ|
ಗುಣ ಲೋಕತ್ರಯಾಣಾಂ ಚ ಧಾರಣಂ ತೇನ ವೈಶ್ರುತಂ||
Saturday, December 26, 2020
ನಿಯಮ - ಶೌಚ (Niyama - Sauca)
ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಆಷ್ಟಾಂಗ ಯೋಗದ ಎರಡನೇ ಮೆಟ್ಟಿಲೇ ನಿಯಮ. ನಿಯಮವು ವಿಧಿ ಅಂದರೆ, ಆಚರಿಸಬೇಕಾದ ಕರ್ಮಗಳ ರೂಪದಲ್ಲಿದೆ. ಪತಂಜಲಿ ಯೋಗಸೂತ್ರದಲ್ಲಿ ನಿಯಮವನ್ನು ಐದು ವಿಧವಾಗಿ ವಿಂಗಡಿಸಿದ್ದಾರೆ. ಯಾವುವೆಂದರೆ - ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ. ಇವುಗಳಲ್ಲಿ ಶೌಚವು ಬಾಹ್ಯ ಶೌಚ ಮತ್ತು ಆಂತರಿಕ ಶೌಚ ಎಂದು ಎರಡು ಬಗೆಯಾಗಿದೆ. ಜಲ ಹಾಗೂ ಮೃತ್ತಿಕೆ(ಮಣ್ಣು) ಯಿಂದ ಶರೀರವನ್ನು ಶು ಮಾಡಿಕೊಳ್ಳುವುದು ಬಾಹ್ಯ ಶುದ್ಧಿ ಎನ್ನಿಸಿಕೊಳ್ಳುತ್ತದೆ. ಕೆಮ್ಮಣ್ಣು ದುರ್ಗಂಧ ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ಇಂದು ಬಳಸುವ ಸೋಪಿನ ಬದಲು ಕೆಮ್ಮಣ್ಣನ್ನು ಬಳಸುವ ರೂಢಿ ಆರ್ಷ ಸಂಸ್ಕೃತಿಯಲ್ಲಿತ್ತು. ಮನಸ್ಸನ್ನು ಸಂಕುಚಿತವಾಗಿ ಮತ್ತು ಬಗ್ಗಡವಾಗಿ ಮಾಡುವ ಲೋಭ, ಮೋಹ, ಮದಗಳನ್ನು ಹೋಗಲಾಡಿಸಿಕೊಳ್ಳುವಿಕೆಯು ಆಂತರಿಕ ಶೌಚ.
ಯೋಗದ ತತ್ತ್ವಗಳು ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಹರಡಿವೆ. ಪ್ರಸ್ತುತ, ಶೌಚವನ್ನು ಧರ್ಮಶಾಸ್ತ್ರಗಳು ಇನ್ನೂ ವಿಸ್ತರಿಸಿ, ದೇಹ, ಮನಸ್ಸುಗಳಲ್ಲದೇ, ಪದಾರ್ಥಗಳ ಶುದ್ಧಿ ಹಾಗೂ ಸ್ಥಳ ಶುದ್ಧಿಯನ್ನೂ ಸೇರಿಸಿಕೊಳ್ಳುತ್ತವೆ. ಭಾರತದ ಎಲ್ಲ ಜಾತಿವರ್ಗಗಳೂ ತಮಗೆ ಆಚರಿಸಲು ಸಾಧ್ಯವಾದಷ್ಟು ಇಂದಿಗೂ ವಿಸ್ತಾರವಾಗಿ ಶೌಚವನ್ನು ರೂಢಿಯಲ್ಲಿಟ್ಟುಕೊಂಡಿವೆ.
ನಿತ್ಯವೂ ಸ್ನಾನ ಮಾಡುವುದು, ಪಾತ್ರೆ ಪಡಗಗಳನ್ನು ತೊಳೆಯುವುದು, ಅಡುಗೆಗೆ ಬಳಸುವ ತರಕಾರಿ, ಧಾನ್ಯಗಳನ್ನು ತೊಳೆದು ಉಪಯೋಗಿಸುವುದು, ನೆಲವನ್ನು ಗುಡಿಸಿ ಸಾರಿಸುವುದು ಮುಂತಾದವು ದೇಹ, ಪದಾರ್ಥ, ಸ್ಥಳ (ದೇಶ) ಶುದ್ಧಿಯ ಉದಾಹರಣೆಗಳಾದರೆ, ದೇವರ ಪೂಜೆ, ಸ್ತೋತ್ರಗಳಿಂದ ಮನಸ್ಸಿನಲ್ಲಿ ಸತ್ತ್ವಗುಣವನ್ನು ಪ್ರಬೋಧಗೊಳಿಸುವುದು ಆಂತರಿಕ ಶುಧ್ಧಿಯ ಉದಾಹರಣೆಯಾಗುತ್ತದೆ.
ಆಧುನಿಕ ವಿಜ್ಞಾನವೂ ಸಹ "ಹೈಜೀನ್"(ನೈರ್ಮಲ್ಯ)ಹೆಸರಿನಲ್ಲಿ ಶೌಚವನ್ನು ಪ್ರಶಂಸಿಸುತ್ತದೆ ಮತ್ತು ಶೌಚಪಾಲನೆಗೆ ಮಾರ್ಗದರ್ಶನ ಮಾಡುತ್ತದೆ. ವಿಪರ್ಯಾಸವೆಂದರೆ, ಇಂದು ಆಧುನಿಕತೆಯ ಹೆಸರಿನಲ್ಲೇ ಹಲವರು ಶೌಚದಿಂದ ದೂರ ಸರಿಯುತ್ತಿದ್ದಾರೆ. ಪಾದರಕ್ಷೆ ಹಾಕಿಕೊಂಡೇ ಮನೆಯೊಳಗೆ ಓಡಾಡುವುದು, ಎಂಜಲು ಕೈಯಲ್ಲೇ ಬೇರೆ ಪದಾರ್ಥಗಳನ್ನು ಮುಟ್ಟುವುದು, ಒಬ್ಬರ ಎಂಜಲನ್ನು ಮತ್ತೊಬ್ಬರು ತಿನ್ನುವುದು ಹೀಗೆ ಧಾರ್ಮಿಕ ನಂಬಿಕೆಗಳನ್ನು ತೊಡೆಯುತ್ತಿದ್ದೇವೆ ಎನ್ನುವ ಮೌಢ್ಯದಲ್ಲಿ ಅಧುನಿಕ ವಿಜ್ಞಾನ, ಯೋಗ, ಧರ್ಮಶಾಸ್ತ್ರಗಳೆಲ್ಲದರ ವಿರುಧ್ಧವಾಗಿ ಹೋಗುತ್ತಿದ್ದಾರೆ. ಆದರೆ ಇದರಿಂದ ಯೋಗಕ್ಕಲ್ಲದೇ ಭೌತಿಕವಾಗಿ ಆರೋಗ್ಯಕ್ಕೂ ಸಹ ತೊಂದರೆಯಾಗುತ್ತದೆ.
ಶೌಚದ ಅನುಷ್ಠಾನವು ದೇಹಾರೋಗ್ಯ, ಲಾಘವ ಮತ್ತು ತಿಳಿಯಾದ ಮನಸ್ಸುಗಳನ್ನುಂಟು ಮಾಡಿ ಯೋಗ ಸಾಧನೆಗೆ ಅತ್ಯಂತ ಪೋಷಕವಾಗಿರುತ್ತದೆ.
ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .
Friday, December 25, 2020
व्यवहारः (Vyavahaarah)
आवरणस्य अपनयनेन विवरणं भवति खलु । अस्मिन् पदे किमावरणमासीत् । विवरणं कथं भवतीति अस्माकं महागुरुः श्रीरङ्गपदाभिधः प्रदर्शयति स्म । तत्कथमिति पश्यामः । 'अप' 'अव' इत्युपसर्गपूर्वकौ अपहारः अवहारः इति शब्दौ सामान्यतया समानार्थकौ भवतः । यः अस्मान् मार्गात् भ्रंशयति स अवहारः । तस्य विरुद्धार्थकपदं व्यवहारः इति । अयं व्यवहारः
अस्मान् रक्षति इत्यर्थः। येन सत्परिणामं भवति स व्यवहारः । येन दुष्परिणामः भवति स अवहारः । एतस्मिन्नेव अर्थे व्यवहारपदं उत्कृष्टार्थं बोधयति । अन्यथा तस्य पदस्य व्यर्थतासम्भवः । अतः व्यवहारपदस्य अपैशुन्यं वञ्चनराहित्यम् इत्यर्थाः भासन्ते। "वि- नानार्थे अव-सन्देहे हरणं हार उच्यते । नानासन्देहहरणात् व्यवहार इति स्थितिः ॥" इत्यत्र यः अर्थः उक्तः सोऽपि अन्वर्थः भवति । याज्ञवल्क्यमहर्षिणा उक्तः व्यवहाराध्यायोऽपि अमुमेवार्थं निरूपयति । धर्माविरोधिव्यवहारः कः ? धर्मप्रबोधकः व्यवहारः कः इति तत्र निरूपितोऽस्ति ।
Thursday, December 24, 2020
ಶ್ರೀಶಂಕರರಮಂಗಳ - ಶಂ ಕಾರ್ಯ (Srishankararamangala-Sha Skarya)
ಲೋಕದಲ್ಲಿ ಯಾವಾಗ ಅಧರ್ಮವು ವಿಪರೀತವಾಗಿ, ಧರ್ಮಗ್ಲಾನಿ ಉಂಟಾಗುವುದೋ ಆಗ ಭಗವಂತನು ಅವತರಿಸುತ್ತಾನೆ. ಅಂದು ಶ್ರೀಶಂಕರಾಚಾರ್ಯರ ಅವತಾರವೂ ಹೀಗೇ ಆದುದು. ಸನಾತನಧರ್ಮವನ್ನು ಧಿಕ್ಕರಿಸುವುದರಲ್ಲಿ ಬುದ್ದಿವಂತರೆಂದೆನಿಸಿಕೊಂಡವರು ಮುಖ್ಯ ಪಾತ್ರವನ್ನು ವಹಿಸಿ ಅಧರ್ಮಕ್ಕೆ ನಾಂದಿ ಹಾಡಿದ್ದರು. ಇವರನ್ನು ಮೊದಲು ಧರ್ಮಮಾರ್ಗಕ್ಕೆ ತರಬೇಕಾಗಿತ್ತು. ಇಡೀ ಭಾರತವನ್ನು ಅನೇಕ ಬಾರಿ ಸಂಚರಿಸಿ, ಶ್ರೀಶಂಕರರು ವೈದಿಕಮತವನ್ನು ಪುನಃ ಪ್ರತಿಷ್ಠಾಪಿಸಿದರು. ಯಾವ ಮೇಧಾವಿಗಳು ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದರೋ ಅಂತಹ ಪಂಡಿತರನ್ನೇ ಯುಕ್ತಿಯಿಂದ, ಪ್ರತಿಭೆಯಿಂದ ವಾದ ಮಾಡಿ, ಶಿಷ್ಯರನ್ನಾಗಿ ಸ್ವೀಕರಿಸಿ, ಸನಾತನಧರ್ಮದ ಪ್ರಚಾರಕರನ್ನಾಗಿ ಮಾಡಿಕೊಂಡರು. ಇದು ವೈದಿಕ ಧರ್ಮಕ್ಕೆ ಹೆಚ್ಚು ಬಲವನ್ನು ಕೊಡುವಂತಿತ್ತು. ಪಂಡಿತರು ಸನ್ಮಾರ್ಗಕ್ಕೆ ಬರುವಂತಾಗಿತ್ತು. ಕೇವಲ ಪಂಡಿತರನ್ನು ಮಾತ್ರವಲ್ಲದೇ ಪಾಮರರನ್ನೂ ಸನ್ಮಾರ್ಗಕ್ಕೆ ತರುವ ಮಹತ್ಕಾರ್ಯ ಅವತಾರದ ಇನ್ನೊಂದು ಮುಖ್ಯಧ್ಯೇಯ. ಇದಕ್ಕೆ ಶಂಕರರು ದಿವ್ಯಶಕ್ತಿಯನ್ನು ಬಳಸಿಕೊಂಡರು. ಹೀಗೆ ಪ್ರತಿಭೆ ಮತ್ತು ದಿವ್ಯತೆಯೆಂಬ ಎರಡು ಅಸ್ತ್ರಗಳಿಂದ ಅಧರ್ಮವನ್ನು ಅಡಗಿಸಿ ಧರ್ಮವು ಪ್ರಕಾಶವಾಗುವಂತೆ ಮಾಡಿದರು.
ಶಂಕರರಶ್ರೀಕಾರ್ಯ
ಪ್ರಾಜ್ಞ ಮತ್ತು ಅಜ್ಞರಿಂದ ಕೂಡಿದ ಲೋಕವನ್ನು ಸನ್ಮಾರ್ಗಕ್ಕೆ ತರಲು ಶ್ರೀಶಂಕರರು ಬಳಸಿದ ಉಪಾಯ ಎರಡು. ಅವು ಭಾಷ್ಯ ಮತ್ತು ಸ್ತೋತ್ರಸಾಹಿತ್ಯಗಳು. ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆ ಇವುಗಳಿಗೆ ಪಾಂಡಿತ್ಯಪೂರ್ಣವೂ ಮತ್ತು ವೇದಪ್ರಾಮಾಣ್ಯದಿಂದಲೂ ಕೂಡಿದ ಭಾಷ್ಯವನ್ನು ಬರೆದರು. ಇದರಿಂದ ಪಂಡಿತರು ಸನ್ಮಾರ್ಗಕ್ಕೆ ಬರಲು ಸಹಾಯವಾಯಿತು. ಯುಕ್ತಿ ಮತ್ತು ಗ್ರಂಥವನ್ನು ಮಾತ್ರ ಪ್ರಮಾಣವಾಗಿ ಸ್ವೀಕರಿಸಬಲ್ಲ ವಿದ್ವಾಂಸರಿಗೆ ಇದು ಅತ್ಯಾಕರ್ಷಕವೆನಿಸಿತ್ತು. ಇಲ್ಲಿ 'ಬ್ರಹ್ಮಸತ್ಯಂಜಗನ್ಮಿಥ್ಯಾಜೀವೋಬ್ರಹ್ಮೈವನಾಪರಃ"- ಪರಬ್ರಹ್ಮವೆಂಬ ವಿಷಯಮಾತ್ರಸತ್ಯ. ನಮಗೆ ಕಾಣುವ ಈ ಪ್ರಪಂಚವು ಬ್ರಹ್ಮದ ದೃಷ್ಟಿಯಿಂದ ಸತ್ಯವಲ್ಲ. ಮತ್ತು ಜೀವನಿಗೂ ದೇವನಿಗೂ ಭೇದವಿಲ್ಲ. ಎರಡೂ ಒಂದೇ, ಮೋಕ್ಷವು ಜ್ಞಾನದಿಂದ ಮಾತ್ರ ಸಾಧ್ಯ. ಕರ್ಮವೆಲ್ಲವೂ ಚಿತ್ತಶುದ್ದಿಗಾಗಿ ಎಂಬ 'ಅದ್ವೈತ' ಸಿದ್ಧಾಂತವನ್ನು ಪ್ರತಿಪಾದಿಸಿದರು.
ಪಾಮರರಮಾರ್ಗ
ಪಾಮರರಿಗೆ ನಿರಾಕಾರದ ಉಪಾಸನೆ ಎಟುಕದು. ಅವರಿಗೆ ಸಾಕಾರದ ಉಪಾಸನೆಯಿಂದ ಮಾತ್ರ ಮೋಕ್ಷ ಸಿದ್ಧಿಸುವುದು ಎಂದರಿತ ಶ್ರೀಶಂಕರರು, ಮತಿಗೆ ನಿಲುಕುವ ದೇವತಾಮೂರ್ತಿಗಳನ್ನು ಕೊಟ್ಟು "ಷಣ್ಮತಸ್ಥಾಪನಾಚಾರ್ಯರು" ಎಂದೇ ಪ್ರಸಿದ್ಧರಾದರು. ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣು-ಸ್ಕಂದ ಆರು ದೇವತೆಗಳನ್ನು ವಿಶೇಷವಾಗಿ ಪರಿಭಾವಿಸಿ ಅವುಗಳಿಗೆ ಸಂಬಂಧಿಸಿದಂತೆ ಪೂಜಾಪದ್ಧತಿಯನ್ನೂ ಮತ್ತು ಸ್ತೋತ್ರಗಳನ್ನು ಅನುಗ್ರಹಿಸಿದರು. ಈ ದೇವತೆಗಳಿಗೆ ಸಂಬಂಧಿಸಿದ ಸುಮಾರು ೨೪೦ಕ್ಕಿಂತಲೂ ಹೆಚ್ಚುಸ್ತೋತ್ರಗಳನ್ನು ರಚಿಸಿದರು. ಇವುಗಳಲ್ಲಿ ಸುಮಾರು ೩೮ಕ್ಕಿಂತಲೂ ಹೆಚ್ಚು ಅಷ್ಟಕಗಳು ಇವೆ. ಇವು ಭಗವಂತನನ್ನು, ವಿವಿಧ ರೂಪಗಳಿಂದಲೂ ಮತ್ತು ಭಗವಂತನ ಕಾರ್ಯವಿಶೇಷತೆಗಳಿಂದಲೂ ಆರಾಧಿಸಲು ಸಹಕಾರಿಗಳಾದವು. ಇದು ಅಲ್ಪಜ್ಞರಾದ ಪಾಮರರನ್ನು ಆಕರ್ಷಿಸಿತು. ಈ ದೃಷ್ಟಿಯಿಂದಲೇ ಶ್ರೀಶಂಕರರು ಲೋಕದಲ್ಲಿ ಎಲ್ಲಾ ಬಗೆಯ ಜನರಿಗೂ ಪ್ರೀತಿಪಾತ್ರರಾದರು. ಹೀಗೆ, ಲೋಕವು ಆಸ್ತಿಕವಾಗಿ, "ಹದಿನೆಂಟು ವರ್ಷವಾದರೆ ಹೇಗೆ ಮತ ಚಲಾಯಿಸುವ ಹಕ್ಕುಬರುತ್ತದೆಯೋ ಅಂತೆಯೇ ಮನುಷ್ಯನಾದ್ದರಿಂದಲೇ ಭಗವಂತನನ್ನು ಕಾಣುವ ಹಕ್ಕು ಬರುತ್ತದೇಪ್ಪ" ಎಂದು ಶ್ರೀರಂಗಮಹಾಗುರುಗಳು ಹೇಳುವಂತೆ ಭಗವಂತನ ದರ್ಶನವನ್ನು ಪಡೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬುದು ಶಂಕರಾವತಾರದಲ್ಲಿ ಎಲ್ಲರಿಗೂ ಮನವರಿಕೆಯಾಯಿತೆಂಬುದು ಇಲ್ಲಿ ಸ್ಮರಣೀಯ.
பண்பட்ட மனம் எனும் சிறந்த கருவி(the great tool called cultured mind)
Tuesday, December 22, 2020
ಮಹಾಭಾರತವು ‘ಪಂಚಮವೇದ’ ಹೇಗೆ ಆದೀತು? (Mahabharatavu Panncamaveda Hege Aditu?)
Sunday, December 20, 2020
ಆರ್ಯಸಂಸ್ಕೃತಿ ದರ್ಶನ - 22 (Arya Samskruti Darshana - 22)
"ಸ್ವಾರ್ಥವನ್ನೂ ತೊರೆದು ಪರಾರ್ಥಕ್ಕಾಗಿ ದುಡಿಯುವವರು ಸತ್ಪುರುಷರು. ಮಾತು, ಮನಸ್ಸು, ಕ್ರಿಯೆಗಳಲ್ಲಿ ಏಕರೂಪತೆ ಸಜ್ಜನರಲ್ಲಿ ಕಂಡುಬರುತ್ತದೆ. ದುರಾಸೆಯನ್ನು ಕತ್ತರಿಸು, ಕ್ಷಮಯನ್ನಾಶ್ರಯಿಸು, ಗರ್ವವನ್ನು ಬಿಡು, ಪಾಪದಲ್ಲಿ ಪ್ರೀತಿಯನ್ನು ಮಾಡದಿರು, ಸತ್ಯವನ್ನು ಹೇಳು, ಸಾಧುಮಾರ್ಗವನ್ನು ಅನುಸರಿಸು, ವಿದ್ವಾಂಸರನ್ನು ಸೇವಿಸು, ಗೌರವಾರ್ಹರನ್ನು ಗೌರವಿಸು, ಶತ್ರುಗಳನ್ನೂ ಅನುನಯಿಸು, ತನ್ನ ಗುಣಗಳನ್ನು ಹೊಗಳಿಕೊಳ್ಳದಿರು, ಕೀರ್ತಿಯನ್ನು ಕಾಪಾಡು, ದೀನರಲ್ಲಿ ದಯೆತೋರು. ಇವು ಸಜ್ಜನರ ಲಕ್ಷಣಗಳು. ಧರ್ಮತತ್ಪರತೆ, ಮಧುರವಾಣಿ, ದಾನೋತ್ಸಾಹ, ವಂಚನೆಯಿಲ್ಲದಿರುವಿಕೆ, ವಿನಯ, ಗಂಭೀರವಾದ ಮನಸ್ಸು, ಶುಚಿಯಾದ ನಡವಳಿಕೆ, ಗುಣಾಸಕ್ತಿ, ಶಾಸ್ತ್ರ ಪರಿಣತಿ, ಸುರೂಪಸಂಪತ್ತು, ಹರಿಭಕ್ತಿ-ಇವು ಸಜ್ಜನರಲ್ಲಿ ಕಾಣುವ ಗುಣಗಳು." ಪರನಾರೀಸೋದರತ್ವ, ಪರಗುಣ ಪ್ರಶಂಸೆ, ಲೋಕಾಪವಾದ ಭೀತಿ, ಅಪಕಾರಿಗಳಲ್ಲಿಯೂ ಪ್ರೀತಿ, ಸರ್ವಭೂತಹಿತ, ಮೃದುತ್ವ, ಸತ್ಕಾರಪರತೆ, ಸಂಕಟದಲ್ಲಿ ದೃಢಚಿತ್ತತೆ, ಇವುಗಳು ಸಜ್ಜನರ ಗುಣಗಳು. ಹೀಗೆ ಸುಭಾಷಿತಗ್ರಂಥಗಳಲ್ಲಿ ಸತ್ಪುರುಷರ ಗುಣವರ್ಣನೆ ಬರುತ್ತದೆ.
.
" ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ"- ಎಂಬ ಸಜ್ಜನರನ್ನು ಕುರಿತ ಮಾತು ಯಾವತಂಟೆಗೂ ಬರದ ಮುಗ್ಧಸ್ವಭಾವದವನು ಎಂಬ ಸಾಮಾನ್ಯಾರ್ಥಕ್ಕಿಂತಲೂ ವಿಶೇಷವಾದ ಒಂದು ಅರ್ಥವನ್ನು ಒಳಗೊಂಡಿದೆ. ಇಲ್ಲಿ ಮೂರು ಎಂದರೆ ಸತ್ವ- ರಜಸ್-ತಮಸ್ ಎಂಬ ಮೂರು ಗುಣಗಳು ಎಂದರ್ಥ. ಆರು ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು. ತ್ರಿಗುಣಗಳನ್ನು ಮೀರಿ ಬೆಳಗುವ ಸದ್ವಸ್ತುವಿನಲ್ಲಿಯೇ ರಮಿಸುವ ಸತ್ಪುರುಷನು " ಮೂರಕ್ಕೆ ಬರುವುದಿಲ್ಲ" ಎಂದರೆ ತ್ರಿಗುಣಗಳಿಂದಾಗುವ ವಿಕಾರಕ್ಕೆ ಒಳಗಾಗುವುದಿಲ್ಲ. ಮತ್ತೆ ತ್ರಿಗುಣಗಳಿಂದ ಬೆಳೆಯುವ ಸೃಷ್ಟಿಗೂ ಒಳಗಾಗುವುದಿಲ್ಲ-ಎಂದರ್ಥ. "ಆರಕ್ಕೆ ಹೋಗುವುದಿಲ್ಲ" ಎಂದರೆ ಒಳಶತ್ರುಗಳಾದ ಕಾಮಕ್ರೋಧಾದಿಗಳಿಗೆ ಗುರಿಯಾಗುವುದಿಲ್ಲ. ಅವುಗಳ ತಂಟೆಗೆ ಹೋಗುವುದಿಲ್ಲವೆಂದರ್ಥ. ಅರಿಪಡ್ವರ್ಗಗಳನ್ನು ಗೆದ್ದು ತ್ರಿಗುಣಗಳನ್ನೂ ಮೀರಿರುವ, ಸದ್ವಸ್ತುವಿನಲ್ಲಿ ಒಂದಾಗಿರುವ ಸ್ವಭಾವ ಸತ್ಪುರುಷರದು ಎಂಬ ಅರ್ಥವನ್ನು ಈ ಮಾತು ಒಳಗೊಂಡಿದೆ.
"ಶ್ರೀಜಗತಿ ಸಜ್ಜನ ಸಂಗತಿರೇಕಾ ಭವತಿ ಭವಾರ್ಣವ ತರಣೇ ನೌಕಾ °
"ಮೂರು ಲೋಕದಲ್ಲಿಯೂ ಸಜ್ಜನರ ಸಹವಾಸವೊಂದು ತಾನೇ, ಹುಟ್ಟು-ಸಾವುಗಳ ನಿರಂತರ ಪ್ರವಾಹಭರಿತವಾದ ಭವಸಮುದ್ರವನ್ನು ದಾಟಿಸುವ ಹಡಗಾದೀತು " ಈ ಮಾತು ಕೇವಲ ಲೌಕಿಕ ಗುಣಭೂಷಿತರಿಗೆ ಸಲ್ಲದು." ತಮಸಃ ಪರಮರ್ಕವರ್ಣಂ" ಎಂಬಂತೆ ತಮಸ್ಸಿನ ಆಚೆಗೆ ಬೆಳಗುವ ಆದಿತ್ಯದೀಪ್ತಿಯುಳ್ಳ ಜ್ಯೋತಿಯನ್ನುಕಂಡುಂಡ, ಆದ್ದರಿಂದಲೇ ಜೀವನದ ದಡಗಂಡ ಅನುಭವಿಗಳಾದ ಸತ್ಪುರುಷರಿಗೆ ಸಲ್ಲುವ ಮಾತಿದು. ಅವರೇ ಭವಾರ್ಣವವನ್ನು ದಾಟಿದವರು. ಹಾಗೆ ದಾಟಿದವರು ತಾನೇ ಮತ್ತೊಬ್ಬರನ್ನು ದಾಟಿಸಬಲ್ಲವರು. ತಾನೇ ದಾಟಲಾರದವನು ಮತ್ತೊಬ್ಬರನ್ನು ಹೇಗೆ ದಾಟಿಸಿಯಾನು? ಆದ್ದರಿಂದ ಜೀವನ ಪ್ರವಾಹದ ದಡಮುಟ್ಟಿ, ನೆಮ್ಮದಿ ತುಂಬಿ ಬಾಳಲು ಸಜ್ಜನರ ಸಹವಾಸವೊಂದೇ ಸೂಕ್ತವಾದ ನೌಕೆ.
ಸಜ್ಜನ ಸಂಗತಿಯು ಹೇಗೆ ಭವಾರ್ಣವವನ್ನು ದಾಟಿಸುತ್ತದೆ- ಎಂಬ ಅಂಶವನ್ನೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಸಂತರ ಸಂಗವು, ನಿಸ್ಸಂಗತ್ವವನ್ನುಂಟುಮಾಡುತ್ತದೆ. ನಿಸ್ಸಂಗಭಾವವು ಮೋಹವನ್ನು ಕಳೆಯುತ್ತದೆ. ಮೋಹಕಳೆದರೆ ನಿಶ್ಚಲವಾದ ತತ್ತ್ವಲಾಭವಾಗುತ್ತದೆ. ನಿಶ್ಚಲತತ್ತ್ವದ ಲಾಭವಾದರೆ ಜೀವನದ ಕಟ್ಟು ಕಳೆದು ಮುಕ್ತಿ ದೊರಕುತ್ತದೆ. ಮುಖ್ಯಾರ್ಥದಲ್ಲಿ ಸದ್ವಸ್ತುವಿನ ಸಂಗವೇ ಸತ್ಸಂಗ. ಅಂತೆಯೇ ನೇರವಾಗಿಯೇ ಆ ಸದ್ವಸ್ತುವಿನ ಸಂಗವನ್ನು ಪಡೆದ ಮಹಾತ್ಮರೂ ಸದ್ರೂಪರೇ ಆಗಿರುವುದರಿಂದ ಅವರ ಸಹವಾಸವೂ ಸತ್ಸಂಗವೇ. ಅಂತಹ ಸ್ವಭಾವವುಳ್ಳ ಸತ್ಪುರುಷರು ತಮ್ಮೊಳಗೆ ಬೆಳಗುವ ಸದ್ವಸ್ತುವಿನಲ್ಲಿ ಜೊತೆಗೂಡಿ, ಲೌಕಿಕ ವಸ್ತುಗಳಿಗೆ ಅಂಟರು. ನೀರಿನೊಳೆಗಿದ್ದರೂ ಕಮಲದೆಲೆಯು ನೀರನ್ನು ಅಂಟಿಸಿಕೊಳ್ಳದಂತೆ, ಲೋಕದೊಳಗಿದ್ದರೂ ಲೋಕವು ಅವರನ್ನು ಅಂಟದು., ಈ ಸತ್ಪುರುಪರ ಸಹವಾಸವು ಇತರರಿಗೂ ಲೌಕಿಕವಸ್ತುಗಳೇ ಜೀವನದ ಸಾರಸರ್ವಸ್ವವೆಲ್ಲವೆಂದೂ ಅದಕ್ಕಿಂತಲೂ ಮಿಗಿಲಾದುದುಂಟೆಂಬ ಅರಿವನ್ನು ಮೂಡಿಸಿ, ಲೋಕಾಸಕ್ತಿಯನ್ನು ಕ್ರಮವಾಗಿ ತಗ್ಗಿಸುವುದು. ಹೀಗೆ ಕ್ರಮವಾಗಿ ಸತ್ಸಹವಾಸದಿಂದ ನಿಸ್ಸಂಗಭಾವವು ಮೊಳೆಯುವುದು. ಇದು ಮೊದಲನೆಯ ಹೆಜ್ಜೆ. ನಿಸ್ಸಂಗಭಾವವು ಮೂಡಿದಾಗ ಲೋಕವಸ್ತುಗಳ ಗುಣದೋಷಗಳೆರಡರ ಅರಿವೂ ಮೂಡಿ, ಅದರ ಸೆಳೆತ ತಗ್ಗುವುದು. ಆಗ ಚಪಲತೆ, ಚಾಂಚಲ್ಯಗಳು ಇಲ್ಲವಾಗುವುವು. ಅದೇ ನಿರ್ಮೋಹತ್ವ. ಮನಸ್ಸನ್ನು ಒಳಗೆ ಹರಿಸಿದೆಂತೆಲ್ಲಾ ಹೊರ ಸೆಳೆತ ತಪ್ಪುವುದು. ಇದು ಎರಡನೆಯ ಹಂತ.ಈ ಸೆಳೆತವಿಲ್ಲದಿದ್ದಾಗ, ಚಿತ್ತವೃತ್ತಿ ನಿರೋಧಿಸಲ್ಪಟ್ಟಾಗ, ಒಳಯೋಗವೇರ್ಪಡುವುದು. ಮನಸ್ಸಿನ ಹರಿವೆಗೆ ತಡೆಬಿದ್ದಾಗ ಚಂಚಲತೆ ಕಳೆದು ಸ್ಥಿರಚಿತ್ತತೆಯುಂಟಾಗುವುದು. ಹೀಗೆ ಸಮಚಿತ್ತತೆ, ಒಳಯೋಗಗಳೇರ್ಪಟ್ಟಾಗ, ಅಚಲವಾದ ತತ್ತ್ವವು ಗೋಚರಿಸುವುದು. ಈ ತತ್ತ್ವವು ಹಿಂದೆ ಹೇಳಿದ "ಸತ್" ವಸ್ತುವೇ. ಅದರೊಡನೆ ಬೆರೆತಾಗ " ನಿವಾತದೀಪಾ ಇವ ನಿಶ್ಚಲಾಂಗಾಃ"-ಎಂಬಂತೆ ನಿಶ್ಚಲಭಾವವೇರ್ಪಡುವುದು. ಹಾಗೆ ಏರ್ಪಟ್ಟಾಗ ತತ್ತ್ವದರ್ಶಿಗಳಾಗುವರು. ಆ ನಿಶ್ಚಲತತ್ತ್ವದರ್ಶನವು ಜೀವಕ್ಕೆ ಶಾಂತಿ ಸಮೃದ್ಧವಾದ ಅಮೃತವನ್ನು ನೀಡಿ, ಮುಕ್ತಿದಾಯಕವಾಗುವುದು. ಅದರಿಂದಲೇ ಜೀವದ ಕಟ್ಟು ಕಳಚುವುದು. ಅದೇ ಜೀವನ್ಮುಕ್ತಿ. ಜೀವನದ ಮಿಗಿಲಾದ ಶ್ರೇಯಸ್ಸು, ಇದೇ ಸತ್ಸಹವಾಸದ ಫಲ. ಒಳಗಿನ ಸತ್ಸಂಬಂಧಪಡೆದ ಸಜ್ಜನರ ಸಹವಾಸವು. ಆ ಸತ್ಸಂಗದಲ್ಲಿಯೇ ಇತರರನ್ನೂ ನಿಲ್ಲಿಸುವ ಹಿರಿಮೆಯುಳ್ಳದ್ದು.
Saturday, December 19, 2020
ಯಮ - ಅಪರಿಗ್ರಹ (Yama - Aparigraha)
ಪಾತಂಜಲ ಯೋಗಸೂತ್ರದಲ್ಲಿ ಹೇಳಿರುವ ಕೊನೆಯ ಅಂಗವೇ ಅಪರಿಗ್ರಹ. ಪರಿಗ್ರಹ ಎಂದರೆ ದಾನವನ್ನು ಸ್ವೀಕರಿಸುವುದು ಮತ್ತು ಇದರ ನಿಷೇಧವೇ ಅಪರಿಗ್ರಹ. ದಾನವನ್ನು ಸ್ವೀಕರಿಸದೇ ಇರುವುದಷ್ಟೇ ಅಲ್ಲದೇ, ಸ್ವೀಕರಿಸಿದುದರಿಂದ ಉಂಟಾಗುವ ಪದಾರ್ಥ ಸಂಗ್ರಹ ಮತ್ತು ಅದರಿಂದ ಹೆಚ್ಚುವ ಚಿತ್ತವೃತ್ತಿಗಳನ್ನು ತಡೆಯುವುದೇ ಅಪರಿಗ್ರಹದ ಮರ್ಮವಾಗಿದೆ. ಪ್ರತಿ ಪದಾರ್ಥಕ್ಕೂ ಉಪಯೋಗವುಂಟು ಮತ್ತು ಪದಾರ್ಥಗಳು ನಮ್ಮಲ್ಲಿ ಬಂದು ಸೇರಿದರೆ ಅದರ ಸಂರಕ್ಷಣೆ ಮತ್ತು ಉಪಯೋಗದ ಬಗ್ಗೆ ಮನಸ್ಸನ್ನು ಹರಿಸಬೇಕಾಗುತ್ತದೆ ಮತ್ತು ಇದರಿಂದಾಗಿ ಚಿತ್ತವೃತ್ತಿಗಳು ಜಾಸ್ತಿಯಾಗುತ್ತವೆ. ಪದಾರ್ಥ ಸಂಗ್ರಹ ಅವಶ್ಯಕತೆಯನ್ನು ಮೀರಿದಾಗ, ಅದರಿಂದ ಸುಖ ದೊರೆಯುವ ಬದಲು ಮನಸ್ಸಿಗೆ ಹೊರೆಯೇ ಆಗುತ್ತದೆ.
ಧನದಾಹವೇ ತುಳುಕಾಡುತ್ತಿರುವ ಇಂದಿನ ವಿದ್ಯಮಾನದಲ್ಲಿ ಅಪರಿಗ್ರಹವು ಪ್ರಸ್ತುತವೇ ಎನ್ನುವ ಪ್ರಶ್ನೆ ಬರಬಹುದು. ಆದರೆ ಜಪಾನ್ ದೇಶದಲ್ಲಿ ಅಪರಿಗ್ರಹದ ಅನುಷ್ಠಾನದಿಂದ ಉಂಟಾಗಿರುವ ಅಪರಿಮಿತ ಲಾಭವನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ. ಜಪಾನ್ ದೇಶದ ಶಿಂಟೋಯಿಸಮ್ ನಲ್ಲಿ ಕನಿಷ್ಠ ಪದಾರ್ಥ ಸಂಗ್ರಹವು ಒಂದು ಮುಖ್ಯವಾದ ಅಂಗ. ಈ ಅಭ್ಯಾಸವು ಅಲ್ಲಿನ ಸಂಸ್ಕೃತಿಯಲ್ಲಿ ಯಾವ ಮಟ್ಟಿಗೆ ರೂಢಿಯಲ್ಲಿದೆ ಎಂದರೆ, ಜನರು ಮನೆಗೆ ಒಂದು ಹೊಸ ಪದಾರ್ಥ ತರಬೇಕಾದರೆ, ಯಾವ ಹಳೆಯ ಪದಾರ್ಥ ಹೊರಗೆ ಹೋಗಬೇಕೆಂದು ನಿಶ್ಚಯಿಸಿ ನಂತರ ಹೊಸ ಪದಾರ್ಥವನ್ನು ಕೊಳ್ಳುತ್ತಾರೆ. ಅಲ್ಲಿನ ವಾಹನತಯಾರಿಕಾ ಸಂಸ್ಥೆಯಾದ ಟೊಯೋಟ, ಶಿಂಟೋಯಿಸಮ್ ನಿಂದ ಕೈಗಾರಿಕೆಗೆ ಅಳವಡಿಸಿಕೊಂಡಿರುವ ಹಲವು ಅಂಶಗಳಲ್ಲಿ ಕನಿಷ್ಠ ಪದಾರ್ಥ ಸಂಗ್ರಹವೂ ಒಂದು. ಇದು ಲೀನ್ ಮ್ಯಾನುಫ್ಯಾಕ್ಚರಿಂಗ್(Lean manufacturing) ಮತ್ತು ಅದರಲ್ಲಿ ಶೂನ್ಯ ದಾಸ್ತಾನು (Zero inventory) ಎನ್ನುವ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಈ ವಿಧಾನದಿಂದ ಟೊಯೋಟ, ಉತ್ಪಾದನಾ ವೆಚ್ಚವನ್ನು ಇಳಿಸಿ, ಕಡಿಮೆ ದರದಲ್ಲಿ ಉಚ್ಚ ಗುಣಮಟ್ಟದ ವಾಹನಗಳು ಗ್ರಾಹಕರಿಗೆ ದೊರೆಯುವಂತೆ ಮಾಡಿ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಸಾಧಿಸಿತು. ಇಂದು ಜಾಗತಿಕ ಮಟ್ಟದಲ್ಲಿ ಅನೇಕ ಉತ್ಪಾದನಾ ಕ್ಷೇತ್ರಗಳು ಲೀನ್ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಹೀಗೆ ಅಪರಿಗ್ರಹದ ಒಂದು ತತ್ತ್ವವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ ಎಂತಹ ಫಲಿತಾಂಶವನ್ನು ಸಾಧಿಸಬಹುದೆಂದು ಟೊಯೋಟ ತೋರಿಸಿಕೊಟ್ಟಿದೆ.
ಅಪರಿಗ್ರಹ ಯಾರಲ್ಲಿ ಪ್ರತಿಷ್ಠಿತವಾಗಿದೆಯೋ ಅವರಿಗೆ ಪೂರ್ವಜನ್ಮ ಸ್ಮರಣೆಯುಂಟಾಗುತ್ತದೆ ಮತ್ತು ಜನ್ಮಾಂತರದ ಕಾರಣಗಳೂ ತಿಳಿಯುತ್ತವೆ ಎಂದು ಯೋಗಸೂತ್ರವು ಹೇಳುತ್ತದೆ. ಯೋಗಸೂತ್ರವು ಯಮದ ಐದೂ ಅಂಗಗಳನ್ನು ಜಾತಿ, ಕಾಲ, ದೇಶ, ಸಮಯಗಳಿಂದ ಪರಿಮಿತವಾಗದ ಸಾರ್ವಭೌಮ ವ್ರತಗಳೆಂದು ಪರಿಗಣಿಸಿದೆ.
ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .
ಶ್ರೀರಾಮನಲ್ಲಿನ “ವೀರ” ರಸ (Sriramanallina “Veera” Rasa)
Friday, December 18, 2020
சாஸ்திரங்கள் நமக்கு ஏன் தேவை? (Shastirangal namakku en tevai?)
Tuesday, December 15, 2020
Is there a Place for Compassion in a War?
Kannada Article by: Sumukha Hebbar
English Rendering by M R Bhashyam
Respond to (lekhana@ayvm.in)
The time to kill the enemy has arrived. The gallant soldier says "The arrow that I am going to launch presently is going to separate life from you. Offer prayers to your personal God". The arrow fulfills its destiny and pushes the enemy into the abyss of death. It is not clear whether the uttered words were because of supreme self-confidence or due to great vanity. These types of incidence appear in Mahaa Bhaarata and other classics.
A thorn is buried into the sole of our foot. We remove the thorn. If gangrene attacks we cut the toe. If it spreads to the feet, the entire feet is cut off to prevent the spread of the malady to the rest of the body. In a similar way, if non-righteous actions, adharma, are not nipped in the bud, it will engulf the entire body, mind, speech and spirit and makes the person evil. If that wicked person becomes a king, one can imagine the fate of the kingdom and its subjects. Where is the place for dharma (righteousness) in that kingdom?
In the olden days, wars were waged principally to establish dharma, in addition to expanding the kingdom or to display valor or to increase the state's wealth. A righteous emperor would declare war against a demonic king. It is very difficult to correct a person who has vile filled in his entire body. If someone is intent on performing heinous acts through all his senses-physical, speech and mind - let that person be purified by death and at-least be noble in his next birth was the intent of the Knowledgeable, Jnaanis.
"If the thorns declare 'We have surrendered to you. Let us serve you through your feet' then, it is only perilous to the leg. Hence to protect dharma, it is necessary to eradicate evil" - Shri Shriranga Mahaguru used to say. Thus killing is necessary.
What is desired just before death leads to the path of the next birth. Hence before the enemy is eliminated, it is one of the characteristics of heroes to warn "you will be killed by this arrow" and give time to pray to his own deity. It is one of the rules of war. Similarly "those who are fearful, those without arms or those who surrender should not be killed" are other aspects of dhaarmic war.
The experts in archery knew the technique of making life depart in such a way that death was not painful and at the same time lead to a future more noble life. Hence we see warriors in Mahaa Bhaarata wanted to be killed by Bhishma or Arjuna. This was one of the features of the art of archery in Bhaarath. Though it may outwardly appear that war was primarily for making one suffer, if we understand protecting dharma and compassion on the soul are also parts of a war, we will begin to appreciate the sublime rules of war laid down by our sages with the intent of protecting dharma.
Note: The Kannada version of this article can be viewed at AYVM blogs.
Sunday, December 13, 2020
ಆರ್ಯಸಂಸ್ಕೃತಿ ದರ್ಶನ - 21 (Arya Samskruti Darshana - 21)
ಊರ್ಧ್ವಪುಂಡ್ರ
ಮಧ್ಯದಿಂದ (ಅಥವಾ ನಾಸಾಗ್ರದಿಂದ) ದ್ವಾದಶಾಂತ (ಹಣೆ ಮತ್ತು ಕೂದಲು ಸೇರುವ ಜಾಗದವರೆಗೆ ಹೋಗುವ ಮೂರು ರೇಖೆಗಳ ರೂಪವಾಗಿರುತ್ತದೆ. ಆ ಚಿಹ್ನವನ್ನು ಗುರುತಿಸುವ ಬೇರೆ ವಿಧಾನಗಳು ಇರುತ್ತವೆಂದು ಶಾಸ್ತ್ರ ಗ್ರಂಥಗಳಿಂದ ತಿಳಿದುಬರುತ್ತದೆ. ಅದನ್ನು ದೀಪಶಿಖೆ, ಬಿದಿರಿನ ಎಲೆ, ಕಮಲದ ಮೊಗ್ಗು, ಮೀನು, ಆಮೆ, ಅಥವಾ ಕವಿಗಳ ಆಕಾರದಲ್ಲಿ ಇಡುವ ರೂಢಿಯು ಇದ್ದಿತು. ಪರ್ವತಾಗ್ರ, ನದೀತೀರ, ಮರದ ಬುಡಗಳಿಂದ ಸಂಗ್ರಹಿಸಿದ ಮಣ್ಣಿನಿಂದ ಅದನ್ನು ಹಾಕಿಕೊಳ್ಳಬೇಕೆಂದು ಶಾಸ್ತ್ರವು ಹೇಳುತ್ತದೆ. ಕೆಂಪು, ಕಪ್ಪು ಅಥವಾ ಹಳದಿ ಬಣ್ಣದ ಮಣ್ಣು (ಗೋಪಿಚಂದನ)ಗಳನ್ನು ಸಹ ಪುಂಡ್ರ ಧಾರಣೆಗೆ ಬಳಸಬಹುದು. ಧರ್ಮಶಾಸ್ತ್ರಗಳು ಬೇರೆ ಬೇರೆ ಬಣ್ಣದ ಮಣ್ಣುಗಳಿಗೆ ಶಾಂತಿ, ವಶ್ಯ, ಸಂಪತ್ತು ಮುಂತಾದ ಫಲಗಳನ್ನು ಹೇಳುತ್ತವೆ. ಬಿಳೀ ಮಣ್ಣಿಗೆ ವೈಷ್ಣವವೆಂದು ವಿಶೇಷವಾದ ಪ್ರಶಸ್ತಿಯು ಹೇಳಲ್ಪಟ್ಟಿರುತ್ತದೆ. ಸತ್ವಗುಣವು ಶ್ವೇತವರ್ಣವೆಂದು ಶಾಸ್ತ್ರಗಳು ಹೇಳುತ್ತವೆ. ವಿಷ್ಣುವು ಸತ್ವಗುಣಕ್ಕೆ ಅಧಿಪತಿಯಾದುದರಿಂದ ಬಿಳಿ ಮಣ್ಣಿಗೆ ಹೆಚ್ಚು ಮಹತ್ವ ಹೇಳಲು ಕಾರಣವಿರಬಹುದು. ವೈಷ್ಣವ ಧರ್ಮದ ಒಂದು ಬಗೆಯನ್ನು ಆರಂಭಿಸಿದ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ಅಂತಹ ಮಣ್ಣಿನ ಖನಿಯನ್ನು ಕಂಡು ಅದರ ಬಳಕೆಯನ್ನು ಪ್ರಸಾರಮಾಡಿದರೆಂಬ ಐತಿಹ್ಯವು ಸಹ ಕೇಳಿಬರುತ್ತದೆ.
"ಯಾರ ಮುಖದಲ್ಲಿ ಶುದ್ಧವಾದ ಊರ್ಧ್ವಪುಂಡ್ರವು ಕಾಣಿಸುತ್ತದೆಯೋ ಅವನು ಚಂಡಾಲನಾದರೂ ಶುದ್ಧ ಸ್ವರೂಪ, ಪೂಜಾರ್ಹ. ಅದರಲ್ಲಿ ಸಂದೇಹವಿಲ್ಲ" ಎಂದು ಸತ್ಯವ್ರತನೆಂಬ ಧರ್ಮೋಪದೇಶಕನು ಘೋಷಣೆ ಮಾಡುತ್ತಾನೆ. ಇವು ಊರ್ಧ್ವಪುಂಡ್ರದ ವಿಷಯದಲ್ಲಿ ಹಿಂದಿನಿಂದ ಬಂದ ಸಂಪ್ರದಾಯಗಳು. ಈಗ ಅವುಗಳ ಹಿಂದಿರುವ ಜ್ಞಾನ ವಿಜ್ಞಾನದ ಕಡೆಗೆ ನಮ್ಮ ದೃಷ್ಟಿಯನ್ನು ಹೊರಳಿಸಬೇಕಾಗಿದೆ. ಈ ಚಿಹ್ನವನ್ನು ಹಣೆ ಮತ್ತು ಶರೀರದ ಬೇರೆ ಬೇರೆ ಸ್ಥಾನಗಳಲ್ಲಿ ಅಂಕಿತ ಮಾಡುವುದರ ಕಾರಣವೇನು ಎಂಬುದನ್ನು ವಿಚಾರಿಸಬೇಕಾಗಿದೆ.
.
ಯಮ - ಅಸ್ತೇಯ ಮತ್ತು ಬ್ರಹ್ಮಚರ್ಯ (Yama - asteya mattu brahmacarya)
ಅಸ್ತೇಯ ಮತ್ತು ಬ್ರಹ್ಮಚರ್ಯಗಳು ಯಮದ ಮೂರನೆಯ ಮತ್ತು ನಾಲ್ಕನೆಯ ಅಂಗಗಳಾಗಿರುತ್ತವೆ.
ಸ್ತೇಯವೆಂದರೆ ಕಳ್ಳತನ. ಕ್ರಿಯೆ ಯಿಂದಾಗಲೀ, ಮಾತಿನಿಂದಾಗಲೀ, ಮನಸ್ಸಿನಿಂದಾಗಲೀ ಕಳ್ಳತನದಲ್ಲಿ ತೊಡಗದೇ ಇರುವುದು ಅಸ್ತೇಯವಾಗುತ್ತದೆ. ಇದು ಹೇಗೆ ಯೋಗಾಂಗವಾಗುತ್ತದೆಯೆಂದು ನೋಡೋಣ. ಚಿತ್ತವೃತ್ತಿಗಳನ್ನು ನಿರೋಧಿಸುವುದೇ ಯೋಗವಾದುದರಿಂದ ಯಾವುದು ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತದೋ ಅದು ಯೋಗವಿಘ್ನವಾಗಿರುತ್ತದೆ. ಪದಾರ್ಥಗಳಿಗೆ ಅವುಗಳ ಒಡೆಯನ ಚಿತ್ತವೃತ್ತಿಯು ಅಂಟಿರುತ್ತದೆ. ಪದಾರ್ಥವನ್ನು ಸಕ್ರಮವಾಗಿ ಖರೀದಿಸಿದಾಗ ಅಥವಾ ದಾನ ಪಡೆದಾಗ, ಪದಾರ್ಥಕ್ಕೆ ಅಂಟಿದ್ದ ಚಿತ್ತವೃತ್ತಿಯು ಕಳಚಿ, ಪದಾರ್ಥವು ನಿರುಪಾಧಿಕವಾಗಿ ಖರೀದಿಸಿದವನನ್ನು/ದಾನ ಪಡೆದವನನ್ನು ಬಂದು ಸೇರುತ್ತದೆ. ಆದರೆ ಕಳ್ಳತನ ಮಾಡಿದಾಗ, ಒಡೆಯನ ಅನುಮತಿಯಿಲ್ಲದೇ ಬಂದುದರಿಂದ, ಪದಾರ್ಥವು ಚಿತ್ತವೃತ್ತಿಯ ಅಂಟಿನೊಂದಿಗೇ ಕೂಡಿದ್ದು, ಕಳ್ಳತನ ಮಾಡಿದವನ ಚಿತ್ತವೃತ್ತಿಯು ಜಾಸ್ತಿಯಾಗುವಂತೆ ಮಾಡುತ್ತದೆ. ಹೀಗೆ ಕಳ್ಳತನದಿಂದ ದೂರವಿರುವುದು ಚಿತ್ತವೃತ್ತಿಗಳು ಹೆಚ್ಚುವುದನ್ನು ತಪ್ಪಿಸುತ್ತದೆ; ಆದ್ದರಿಂದ ಯೋಗಕ್ಕೆ ಪೋಷಕವಾಗಿ ಯೋಗಾಂಗವಾಗುತ್ತದೆ.
ಬ್ರಹ್ಮಚರ್ಯವೆಂಬ ಪದಕ್ಕೆ, ಬ್ರಹ್ಮನಲ್ಲಿ ಸಂಚಾರ ಮಾಡುವುದು ಎನ್ನುವುದೇ ಶಬ್ದಾರ್ಥವಾದರೂ ರೂಢಿಯಲ್ಲಿ, ಕಾಮದ ವಿಷಯದಲ್ಲಿ ಸ್ವೇಚ್ಛಾಚಾರವಿಲ್ಲದಿರುವುದು ಎನ್ನುವುದೇ ಅರ್ಥವಾಗಿದೆ. ಸ್ತ್ರೀ ಸಂಬಂಧವಾದ ಕಾಮಾಸಕ್ತಿಯು ಇಂದ್ರಿಯಗಳನ್ನು ಮಥಿಸಿ ವೀರ್ಯವು ಹೊರಮುಖವಾಗಿಸುವ ಕ್ರಿಯೆ. ಈ ಕ್ರಿಯೆಯಲ್ಲಿ ತೊಡಗಿದರೆ ನರಸಮೂಹವೆಲ್ಲವೂ ಹೊರಮುಖವಾಗುತ್ತದೆ ಮತ್ತು ಅವು ಸ್ವಸ್ಥಿತಿಗೆ ಬರುವ ತನಕ ಬೇರೊಂದು ಕೆಲಸಕ್ಕೆ ಬರುವುದಿಲ್ಲವೆಂಬುದು ಪ್ರಕೃತಿ ನಿಯಮ. ಯೋಗವು ದೇಹೇಂದ್ರಿಯಗಳೆಲ್ಲವನ್ನೂ ಒಳಮುಖವಾಗಿಸುವ ಪ್ರಕ್ರಿಯೆಯಾದುದರಿಂದ ಕಾಮದಲ್ಲಿ ತೊಡಗಿದ ದೇಹೇಂದ್ರಿಯಗಳನ್ನು ಯೋಗದಲ್ಲಿ ತೊಡಗಿಸಲು ಬರುವುದಿಲ್ಲ. ಹೀಗಾಗಿ ಕಾಮಾಸಕ್ತಿಯ ನಿರೋಧರೂಪವಾದ ಬ್ರಹ್ಮಚರ್ಯವು ಯೋಗಕ್ಕೆ ಪೋಷಕವೆಂಬುದು ಸಾಮಾನ್ಯ ನಿಯಮ. ಆದರೆ ಈ ಸಾಮಾನ್ಯ ನಿಯಮಕ್ಕೆ ಅಪವಾದವೂ ಉಂಟು. ಸ್ವಸ್ತ್ರೀಯಲ್ಲಿ ಯಥೋಚಿತವಾದ ಸಂಗದಿಂದ ಉಂಟಾಗುವ ದೇಹೇಂದ್ರಿಯಗಳ ಪ್ರಸನ್ನತೆಯು ಆರೋಗ್ಯಕ್ಕೂ, ಯೋಗಕ್ಕೂ ಪೋಷಕವಾಗಬಲ್ಲದು ಮತ್ತು ತಂತ್ರಮಾರ್ಗದಲ್ಲಿ ಮೈಥುನಕ್ರಿಯೆಯಿಂದಲೇ ಯೋಗಸಾಧನೆ ಮಾಡುವ ಮಾರ್ಗವೂ ಉಂಟು. ಆದರೆ ಸಾಮಾನ್ಯವಾಗಿ, ಬ್ರಹ್ಮಚರ್ಯವು ಯೋಗಸಾಧನೆಗಾಗಿ ಅನುಸರಿಸಬೇಕಾದ ಯಮವಾಗಿದೆ.
ಎಲ್ಲ ಯಮಗಳ ಸಾಧನೆಯಲ್ಲಿಯೂ ಅವುಗಳ ಪರಾಕಾಷ್ಠೆಯನ್ನು ತಲುಪಿದಾಗ ಒಂದೊಂದು ಫಲವುಂಟು. ಅಹಿಂಸಾ ಸಿದ್ಧಿಯಿರುವವರ ಪ್ರಭಾವವಲಯದಲ್ಲಿ ಯಾರಿಗೂ ವೈರವನ್ನಿಟ್ಟುಕೊಳ್ಳಲಾಗುವುದಿಲ್ಲ. ಸತ್ಯದ ಸಿದ್ಧಿಯಿರುವವರು ನುಡಿದದ್ದೆಲ್ಲಾ ಸತ್ಯವಾಗಿ ಪರಿಣಮಿಸುತ್ತದೆ. ಬ್ರಹ್ಮಚರ್ಯ ಸಿದ್ಧಿಯಲ್ಲಿ ಎಲ್ಲ ಗುಣಗಳೂ ವೃದ್ಧಿ ಹೊಂದುವ ವೀರ್ಯಲಾಭವಾಗುತ್ತದೆ ಮತ್ತು ಅಸ್ತೇಯ ಸಿದ್ಧಿ ಹೊಂದಿದವನನ್ನು ಸರ್ವ ರತ್ನಗಳು ಬಂದು ಸೇರುತ್ತವೆ ಎಂದು ಪತಂಜಲಿಗಳ ಯೋಗ ಸೂತ್ರವು ಹೇಳುತ್ತದೆ.
ಸೂಚನೆ : 12/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ .