ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
ನಮ್ಮ ಜೀವನ ಶ್ರೀರಾಮನ ಜೀವನದಂತಿರಲಿ, ರಾವಣನ ಜೀವನದಂತಲ್ಲ
ಮಾನವನ ಜೀವನ ಪಶುವಿಗೆ ಸಮಾನವಾದದ್ದಲ್ಲ. ಇದಕ್ಕೊಂದು ವಿಶೇಷತೆ ಇದೆ. ಅದಕ್ಕೆ ಅವನಿಗೆ ಮಾನವ ಎಂದು ಕರೆಯಲಾಗುತ್ತದೆ.. "ಮಾ-ನವ"- ಹೊಸ ತನವನ್ನು ಪಡೆಯದ ವ್ಯಕ್ತಿತ್ವವೇ ಮಾನವ. ಮರುಹುಟ್ಟುಎಂಬುದು ಜೀವಿಯ ಹೊಸತನ. ಯಾವಾಗ ಮತ್ತೆ ಹುಟ್ಟದಂತೆ ಅವನು ತನ್ನ ಬದುಕನ್ನು ನಡೆಸುತ್ತಾನೋಅಂತಹವನನ್ನು 'ಮಾನವ' ಎಂದು ಕರೆಯಬೇಕು" ಎಂಬ ಆಶಯದಿಂದ ಮನುಷ್ಯನ ವಿಶೇಷತೆಯನ್ನುಮಾರ್ಮಿಕವಾಗಿ ಮತ್ತು ಅರ್ಥಪೂರ್ಣವಾಗಿ ಶ್ರೀರಂಗಗುರುಗಳು ಹೇಳುತ್ತಿದ್ದರು. ಜನನ-ಮರಣವೆಂಬಸಂಸಾರಚಕ್ರದಲ್ಲಿ ಸಿಲುಕದೇ ಮೋಕ್ಷವನ್ನು ಪಡೆಯಬೇಕಾದುದು ಮಾನವನ ಆದ್ಯ ಕರ್ತವ್ಯವಾಗಿದೆ.ಇದಕ್ಕೆ ಅನುಗುಣವಾಗಿ ಮಾನವ ತನ್ನ ಜೀವನವನ್ನು ನಡೆಸಬೇಕಾಗಿದೆ. ಹೇಗೆ ಸಾಗಿದರೆ ಜೀವನಮಾನ್ಯ, ಹೇಗೆ ನಡೆದರೆ ಜೀವನ ಶೂನ್ಯ ಎಂಬುದಕ್ಕೆ ಒಂದು ಮಾನದಂಡ ಬೇಕು. ಅದಕ್ಕಾಗಿ ಹಿರಿಯರುಹೇಳುವ ಮಾತೊಂದಿದೆ. "ರಾಮಾದಿವತ್ ವರ್ತಿತವ್ಯಂ ನ ರಾವಣಾದಿವತ್" – ರಾಮನಂತೆ ನಮ್ಮಜೀವನ ಇರಬೇಕೇ ಹೊರತು ರಾವಣಾದಿಗಳಂತಲ್ಲ. ಇಂತಹ ಧರ್ಮಮಯ-ಜೀವನಕ್ಕೆ ನಮಗೆಶ್ರೀರಾಮನಂತಹ ಧರ್ಮಪುರುಷರ ಅನುಸರಣೆ ಅತ್ಯವಶ್ಯ.