Friday, July 31, 2020

Veda - What does it signify ?

Original Article by: Vid. Chayapathy

English Rendering by: Mythily Raghavan

Respond to (lekhana@ayvm.in)





                   What is ‘Veda’?  That the Vedas are the most ancient literature in the world and that it is a sacred text revered as the source of all Dharmas is well-known. Rig, Yajus, Sama and Atharva are the four classifications of this text. It is termed as ‘Shruti’ and also as ‘Brahma’.  It is deemed to beApourusheya’ (not coined by any human). It is eternal and most authentic.  It is also known as ‘Prabhu Sammita’ (that which is to be followed unquestioningly just as the diktat of an emperor). Termed as ‘Vedavakya’, doesn’t it stand as a synonym for authenticity even today?  It is believed to be the breath of Paramatman-the Supreme Lord.  


                With all such prevalent ideas does the title bear any sense?It is true. The above mentioned ideas imply that ‘veda’ denotes a compendium of literary work. But there are certain other references regarding Vedas which hint that the term signifies something broader in sense than just a ‘literature’.


Urdhvamoolam adhahshaakham ashvattham praahuravyayam |

Chamdaamsi yasya parnaani yastam veda sa vedavit ||

 

                It is said that there exists a peepal tree that is eternal, that which has its roots at the top and the branches extending downward, with ‘chandas’ as its leaves.  One who has realized such a tree is said to have realized the Vedas.

Jnaaninaam urdhvago bhuyat bhooyaat ajnaaninaamdhomukha:

Evam vai pranavastishtedyastam veda sa vedavit ||

 

                Pranava is directed upwards in Jnaanis (the realized ones) while in the case of Ajnaanis it tends downwards. One who is cognizant of this fact can be said to have understood the Vedas.

If the word ‘Veda’ refers only to a text then only he who is well versed with that text   should have been acknowledged as the knower of Vedas and not the one who has realized the peepal tree or Pranava as mentioned above.

There is a narration in Vedas - Rishi Bharadwaja earns a lifespan of four thousand divine years as the fruit of his penance. Even with such a long life he could hardly complete the study of the Vedas. Then Lord Indra, showing him four mountains, says that what he had learnt so far amounted to just a fistful of each of those mountains. Finally he declares “Anantaa vai vedaah”- Vedas are infinite and boundless. This statement should not be understood to mean that it is impossible to study the text part contained in a literary work. Again, the Ramayana and the Mahabharata which do not include any portion of the vedic text at all have earned the name ‘Veda’. ‘When Veda-purusha incarnated as Rama, Ramayana evolved in the form of Veda through Valmiki’ – so goes a saying. We do find a saying that Mahabharata is the fifth ‘Veda’. Sangita (music) is revered as Gaandharva’ veda’.  While the shaastra pertaining to dance is referred to as Natya’veda’, Koutilya’s  Arthashaastra is termed Artha’veda’. The ancient Bharatiya medical science is Ayur‘veda’. The science of archery is Dhanur‘veda’.

What then is meant by Veda?  The word veda has been derived from the root vida-jnaane. Hence veda means Jnaana. The term Jnaana is not to be perceived in the limited sense of ‘knowledge’.  The term Jnaana as used by the Maharshis refers to the ‘Jyoti’ visualized through tapas (penance) at the origin of life. It is that Effulgence, the source of the entire Universe, glowing with in the innermost core of all beings.

Na vedam vedamityaahu: vede vedo na vidyate

Paraatmaa vimdate yena sa vedo veda uchyate ||

 

Veda is not just a collection of words/hymns. Veda is not in Veda (the text). The knowledge through which one attains the ‘Atma-jyoti’ shining in the sphere beyond the subtle and the macrocosm is actually known as Veda. That knowledge which leads to such a state is also veda.

A beautiful example given by Sriranga mahaguru, who had realized the secret of veda, is worth remembering in this context. The term ‘coconut’ actually refers to the white kernel inside.  But the outer fibrous part and the inner shell are also referred to as coconut as long as they are associated with the kernel. Once they get separated from it, then comes the name fibre, shell etc. Similarly the core/essence of life - the Jnana is the actual Veda while even a vangmaya (text) carrying its directions and thus ultimately leading to it is also known by the name veda. But if it refrains from leading to that Jnaana and remains just a text/literature then it is dry and devoid of essence like the bare fibre or shell of a coconut devoid of the kernel.

When that Jnaana extends itself as the Universe then that branch of learning dealing with this extended creation is also Veda. It extols the creation immanent in the trigunas. And hence the advice of Lord Krishna in the Bhagavath Gita –trigunya  vishyaa vedaa: nistraigunyo bhavaarjuna. The Vedas depict the creation with the trigunas pervading it. Going beyond that creation, one attains the realization of Jyothi, the root of veda-says Krishna. Since creation is infinite the science of creation is also infinite and boundless.

This life-tree with the root at the top and branches downward has evolved from that Jnaana Jyoti. That is the reason to say that one who has realized this tree in its entirety has realized the veda. Likewise, it is the dictum of the realized souls that Pranava, the sprout of the Jnana Jyothi forms the seed for the veda and the universe. That is why in the case of ajnaanis, who focus their minds only on the extension and not the source, Pranava flows downward. On the contrary, in the case of those who fix their mind in the source, the Pranava-shakti flows upward leading them to the source.

The Raamaayana and Mahaabhaaratha are also vedas as they propagate the knowledge of the Effulgent Universal Source and its evolution and point towards that source. In the same manner gaana, naatya etc are also vedas as they have emerged from the naada and the stride evolving out of that Light. Artha shaastra and Ayurveda deal with the secret of life bound by the dictum of vedas and the promotion of health that suits such a life.  Thus they too can be considered as vedas.

The vedas consist of sounds that emanate on their own – without the bang of any objects- that are heard (shruti-gochara) during the journey through the yogic field. Such sounds are named ‘Shruti’. Thus vedas acquire the acclamation as ‘the breath of the Lord’ – Yasya nishvasitam vedaah.

That Supreme Light is the Sculptor who has carved the life and its development and hence to understand the secrets behind this sculpture one has to take refuge in vedas blooming directly from that source. It is therefore quite justified that the vedas are revered as the authority in this field.

Thus basically ‘Veda’ signifies that Light which is the source of both life and the universe.  In the next stage, the literature that points and leads to that Effulgence is also termed as ‘Veda’. Let these words be offered to that Light Supreme - the Source and the terminal point of the Vedas.

Note: Original kannada article selected from the book 'Samskruti Sourabha' published in the year 2014

Thursday, July 30, 2020

ಸಕಲೈಶ್ವರ್ಯಗಳನ್ನೂ ಗಳಿಸಿ ನಲಿಯೋಣ (Sakalaishvaryagalannu Galisi Naliyona)

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಇಂದಿನ ಪರಿಕಲ್ಪನೆ

ಮಾನವ ಮಾತ್ರರೆಲ್ಲರನ್ನೂ ಆಕರ್ಷಿಸಿ ಆನಂದವೀಯಬಲ್ಲದು ಐಶ್ವರ್ಯ. ಧನ-ಕನಕ, ಸುಖ-ಸೌಲಭ್ಯದ ಸಾಮಗ್ರಿಗಳು ಎಲ್ಲವೂ ಐಶ್ವರ್ಯವೆಂಬುದಾಗಿ ಪರಿಗಣಿಸಲ್ಪಡುತ್ತವೆ. ಇವುಗಳನ್ನು ಗಳಿಸಲು ಸಾಧ್ಯವಾದಷ್ಟು ಪ್ರಯತ್ನವೆಸಗುವುದೇ ನಮ್ಮೆಲ್ಲರ ಗುರಿಯೂ ಆಗಿದೆ. ದುಡಿಮೆಯ ಜೊತೆಗೆ ಐಶ್ವರ್ಯಕ್ಕೆ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಆಕೆಯ ಪ್ರಸನ್ನತೆಯನ್ನು ಪಡೆದು ಸಂಪತ್ಸಮೃದ್ಧಿಯನ್ನು ಗಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಅಷ್ಟೇ ಅಲ್ಲದೆ ಇಂತಹ ಐಶ್ವರ್ಯದಿಂದ ವಂಚಿತನಾದವನಲ್ಲಿ "ಅಯ್ಯೋ ಪಾಪ, ಲಕ್ಷ್ಮೀಕಟಾಕ್ಷವಿಲ್ಲದವನು" ಎಂದು ಮರುಕವನ್ನೂ ತೋರುತ್ತೇವೆ. ಐಶ್ವರ್ಯಗಳಿಗೆಲ್ಲ ಒಡತಿಯಾದ ಲಕ್ಷ್ಮಿದೇವಿಯನ್ನು ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ವೀರಲಕ್ಷ್ಮಿ, ಸಂತಾನಲಕ್ಷ್ಮಿ, ಗಜಲಕ್ಷ್ಮಿ, ಮಹಾಲಕ್ಷ್ಮಿ ಎಂಬುದಾಗಿ ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸುವುದುಂಟು. ಇಲ್ಲಿ ವಿದ್ಯೆ, ಸಂತಾನ ಇತ್ಯಾದಿ ಎಲ್ಲವೂ ಐಶ್ವರ್ಯವೆಂಬುದಾಗಿಯೇ ಭಾವಿಸಲ್ಪಡುತ್ತವೆ. ಆದರೆ ಇವಿಷ್ಟು ಮಾತ್ರವೇ ಐಶ್ವರ್ಯವಲ್ಲ ಎಂಬುದು ಆ ಪದವನ್ನು ತಂದವರ ಆಶಯವನ್ನು ತಿಳಿದಾಗ ಅರಿವಾಗುವುದು.

'ಐಶ್ವರ್ಯ' ಪದದ ಅರ್ಥ:

ಐಶ್ವರ್ಯ ಎಂಬ ಪದವನ್ನು ತಂದ ಭಾರತೀಯಮಹರ್ಷಿಗಳ ದೃಷ್ಟಿಯಲ್ಲಿ ಈ ಪದವು 'ಈಶ್ವರಭಾವ-ಈಶ್ವರ ಸಂಬಂಧವುಳ್ಳದ್ದು' ಎಂಬರ್ಥವನ್ನು ಹೊಂದಿದೆ. ಈಶ್ವರನಿಂದ ಬಂದದ್ದು ಐಶ್ವರ್ಯ. ವಿಶ್ವವೆಲ್ಲವೂ ಈಶ್ವರನಿಂದಲೇ ವಿಕಸಿತವಾಗಿದೆಯಾದ್ದರಿಂದ ಸೃಷ್ಟಿಯ ಎಲ್ಲ ತರಹದ ಸಿರಿ-ಸಂಪತ್ತುಗಳೂ ಐಶ್ವರ್ಯವೇ ಆಗಿವೆ. ಅವುಗಳಲ್ಲಿ ಭೋಗಕ್ಕೆ ಸಂಬಂಧಿಸಿದವುಗಳನ್ನು ಮಾತ್ರವೇ ನಾವು ಐಶ್ವರ್ಯವೆಂಬ ಸಂಕುಚಿತ ಭಾವನೆಯಿಂದ ನೋಡುತ್ತೇವೆ. ಸೃಷ್ಟಿಯಲ್ಲಿ ಭೋಗದ ಜೊತೆಯಲ್ಲಿ ಯೋಗಭೂಮಿಕೆಯೆಂಬುದೂ ಉಂಟೆಂಬ ಸತ್ಯವನ್ನು ಋಷಿದೃಷ್ಟಿಯು ನೆನಪಿಸುತ್ತಿದೆ.

ಯೋಗೈಶ್ವರ್ಯ - ಆತ್ಮೈಶ್ವರ್ಯ:

ಯೋಗಮಾರ್ಗದಲ್ಲಿ ಸಾಗಿ ಅದರ ತುಟ್ಟತುದಿಯ ಸ್ಥಾನವಾದ ಸಮಾಧಿಯಲ್ಲಿ ಸಿಗುವ ಆನಂದವು ಭೌತಿಕವಾದ ಆನಂದದ ಪರಮಾವಧಿಯೇನುಂಟೋ ಅದಕ್ಕಿಂತಲೂ ಕೋಟಿಕೋಟಿ ಪಾಲು ಹೆಚ್ಚಿನದು ಎಂಬುದು ಮಹರ್ಷಿಗಳ ಅನುಭವವಾಣಿ. ಇದನ್ನೇ 'ಯೋಗೈಶ್ವರ್ಯ' ಎಂಬುದಾಗಿ ಕರೆದಿದ್ದಾರೆ. ಈ ಐಶ್ವರ್ಯವನ್ನು ಪಡೆದು ಅದರ ಅನುಭವದ ಆನಂದವನ್ನು ಸವಿದವರು ಲೋಕಜೀವನದಲ್ಲಿ ತೊಡಗಿದಾಗ ಅಲ್ಲಿಯ ಆನಂದ-ತಂಪುಗಳು ಹೊರಜೀವನದಲ್ಲೂ ಹರಿಯುವುವು. ಆ ಹರಿವೆಯೇ ಬಾಳನ್ನು ಶಾಂತಿಸಮೃದ್ಧಿ-ಸಂತೃಪ್ತಿಗಳಿಂದ ತುಂಬುವುದೆಂಬುದು ಜ್ಞಾನಿಗಳು ಕಂಡರುಹಿದ ಸರ್ವಕಾಲೀನ ಸತ್ಯ.

ಯೋಗೈಶ್ವರ್ಯ-ಭೋಗೈಶ್ವರ್ಯಗಳ ಮೇಳನ:

ಮನಸ್ಸು ಭೌತಿಕಸುಖ ಸಂಪತ್ತುಗಳನ್ನು ಮಾತ್ರವೇ ಹಿಂಬಾಲಿಸಿ ಹೊರಟರೆ ಅವು ಎಷ್ಟು ದೊರೆತರೂ ಮತ್ತಷ್ಟು ಬೇಕೆಂಬ ಬಯಕೆ(ರಾಗ), ವೇಗಗಳಿಗೆ ನಮ್ಮನ್ನು ತಳ್ಳುತ್ತವೆ.  ಕಾಮ-ಕ್ರೋಧಾದಿಗಳಿಗೆ ತುತ್ತಾಗಿಸಿ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತವೆ. ಕ್ರಮೇಣ ನಮ್ಮ ಜೀವನವನ್ನು ಸನ್ಮಾರ್ಗದಿಂದ ಜಾರಿಸಲೂ ಬಹುದು. ಈ ಜಾರುವಿಕೆಯಿಂದ ತಪ್ಪಿಸುವ ಉಪಾಯವನ್ನು ಅರಿಯುವುದು ಅತ್ಯಾವಶ್ಯಕವೇ ಆಗಿದೆ.

"ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬ ಆರ್ಷವಾಣಿಯಂತೆ ಭೌತಿಕಜೀವನಕ್ಕೇ ಅಂಟಿಕೊಳ್ಳುವ ಪ್ರವೃತ್ತಿ(ಬಂಧ), ಭಗವಂತನನ್ನು  ಪಡೆಯುವುದು(ಮೋಕ್ಷ) ಇವೆರಡಕ್ಕೂ ಮನಸ್ಸೇ ಕಾರಣವಾದ್ದರಿಂದ ಸನ್ಮಾರ್ಗದಲ್ಲಿ ನಡೆಯಲಿಚ್ಚಿಸುವವರಿಗೆ ಮನೋನಿಯಂತ್ರಣವು ಸಾಧಿಸಲೇಬೇಕಾದ ಒಂದು ಗುರಿ. ಇದರಿಂದಾಗಿ ಪುರಾಷಾರ್ಥಮಯವಾದ ಜೀವನವನ್ನು ನಡೆಸಿ ಇಹ-ಪರಗಳಲ್ಲಿ ಆನಂದವನ್ನು ಪಡೆಯಬಹುದು.

ಅಂದಮಾತ್ರಕ್ಕೆ ಲೌಕಿಕವಾದ ಭೋಗೈಶ್ವರ್ಯವು ಬೇಡವೆಂಬ ಅಭಿಪ್ರಾಯವನ್ನು ಇಲ್ಲಿ ಸೂಚಿಸುತ್ತಿಲ್ಲ. ಋಷಿದೃಷ್ಟಿಯು ಅರ್ಥ-ಕಾಮಗಳಿಂದ ವಂಚಿತರಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅವುಗಳನ್ನು ಧರ್ಮ-ಮೋಕ್ಷಗಳ ಹದ್ದುಬಸ್ತಿನಲ್ಲಿ ಗಳಿಸಿ ಸೇವಿಸಬೇಕೆನ್ನುವುದೇ ಅವರ ಆಶಯವಾಗಿತ್ತು. ಸಂತೆಯ ವ್ಯಾಪಾರಕ್ಕೆ ಬಂದ ಮೇಲೆ ವ್ಯಾಪಾರದಲ್ಲಿ ನಿರುತ್ಸಾಹವನ್ನು ತೋರಬೇಕಿಲ್ಲ. ನಮಗೆ ಉಪಯುಕ್ತವಾದ, ಪ್ರಿಯವಾದ, ಒಳ್ಳೆಯ ಪದಾರ್ಥಗಳನ್ನು ಆಯ್ಕೆ ಮಾಡಿ ಖರೀದಿಸೋಣ. ಆದರೆ ವ್ಯಾಪಾರದಲ್ಲಿಯೇ ನಿರತರಾಗಿ, ಮನೆಗೆ ಹಿಂದಿರುಗಬೇಕೆನ್ನುವುದನ್ನೇ ಮರೆತು ಬಿಡಬಾರದು ಎಂಬ ಜ್ಞಾನಿಗಳ ಎಚ್ಚರಿಕೆಯ ಮಾತನ್ನು ಅವಶ್ಯವಾಗಿ ನೆನಪಿಡಲೇ ಬೇಕು. ಅರ್ಥ ಸಂಪಾದನೆಯು ಜೀವನದಲ್ಲಿ ಅತಿಮುಖ್ಯ ಪಾತ್ರವನ್ನು ವಹಿಸುವುದೆಂಬುದು ನಿಸ್ಸಂಶಯ.  ಆದರೆ ಅದನ್ನು ಹೇಗೆ, ಎಷ್ಟು ಸಂಪಾದಿಸಬೇಕು? ಸಂಪಾದಿಸಿದ ಅರ್ಥದ ವಿನಿಯೋಗ ಹೇಗಾಗಬೇಕು ಎಂಬಂಶಗಳ ಕಡೆಗೆ ಗಮನ ಹರಿಸಬೇಕಾಗಿದೆ. ಶ್ರೀರಂಗಮಹಾಗುರುಗಳ ವಾಣಿಯೊಂದು ಇಲ್ಲಿ ಉಲ್ಲೇಖಾರ್ಹವಾಗಿದೆ – "ಅರ್ಥವು ಅನರ್ಥವಾಗದೆ ಪರಮಾರ್ಥದಲ್ಲಿ ನಿಂತು ಸಾರ್ಥಕವಾಗುವ ಪಕ್ಷೇ ಅದನ್ನು ಕ್ಷಣಕ್ಷಣದಲ್ಲಿಯೂ ಸಂಪಾದಿಸಲು ನಾವು ಉದ್ಯುಕ್ತರಾಗುತ್ತೇವೆ "

ಧರ್ಮಮಾರ್ಗದಲ್ಲಿ ಚಲಿಸಿ, ನ್ಯಾಯಮಾರ್ಗದಲ್ಲಿ ಗಳಿಸಿದ್ದನ್ನು ಭೋಗಿಸಿ ತೃಪ್ತಿಯಾಗಿರುವುದೊಂದೇ ಜೀವನದಲ್ಲಿ ನೆಮ್ಮದಿಗೆ ದಾರಿ. 'ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ' ಎಂಬ ಶಂಕರಭಗವತ್ಪಾದರ ವಾಣಿಯು ಸ್ಮರಣೀಯವಾಗಿದೆ. ಇಂತಹ ಸಂತೃಪ್ತಿಯ ಮನೋಭಾವವೇ ಯೋಗೈಶ್ವರ್ಯಕ್ಕೆ ಅದ್ಭುತಸಾಧನವು. ಯೋಗ-ಭೋಗಗಳೆರಡಕ್ಕೂ ಆಯತನವಾದದ್ದು ಮಾನವಶರೀರ ಎಂಬ ಸತ್ಯವನ್ನು ಮನಗಂಡವರು ಭಾರತೀಯಮಹರ್ಷಿಗಳು. ಭೋಗೈಶ್ವರ್ಯದ ಸಂಪಾದನೆಯು ಯೋಗೈಶ್ವರ್ಯದ ಜೊತೆಗೂಡಿ ಬಂದಾಗ ಲೋಕಕಲ್ಯಾಣ-ಆತ್ಮಕಲ್ಯಾಣಗಳು ಎರಡರ ಪ್ರಾಪ್ತಿಯೂ ಸುನಿಶ್ಚಿತ ಎಂಬುದನ್ನು ಸುಸ್ಪಷ್ಟವಾಗಿ ಸಾರಿದ್ದಾರೆ.

ಐಶ್ವರ್ಯಕ್ಕೆ ಅಧಿದೇವತೆ:

ಧನ-ಧಾನ್ಯ ಸಮೃದ್ಧಿಗೆ ಮಹಾಲಕ್ಷ್ಮಿಯೇ ಅಧಿದೇವತೆ. ಆಕೆಯ ಪ್ರಸನ್ನತೆಯನ್ನು ಗಳಿಸುವುದು ಸಂಪತ್ಸಮೃದ್ಧಿಗೆ ಸುಮಾರ್ಗ. ಅಂತೆಯೇ ಯೋಗೈಶ್ವರ್ಯಕ್ಕೂ ಆಕೆಯ ಪ್ರಸನ್ನತೆಯೇ ಸಾಧನವಾಗುತ್ತದೆ. ದೇವಾಲಯಗಳಲ್ಲಿಯೂ ದೇವರ ದರ್ಶನಕ್ಕೆ ಮೊದಲು ಅಮ್ಮನವರ ದರ್ಶನವನ್ನು ಮಾಡುವ ರೂಢಿ ಇದೆ. ಕಾರಣ, ಆಕೆಯ ಪ್ರಸನ್ನತೆಯನ್ನು ಪಡೆದಾಗ ನಮ್ಮ ಪ್ರಕೃತಿಯು ದೇವನ ದರ್ಶನಕ್ಕೆ, ಅದರಿಂದಾಗಬೇಕಾಗಿರುವ ಆನಂದಾನುಭವಕ್ಕೆ ಅಣಿಯಾಗುತ್ತದೆ.

ಜೀವನದಲ್ಲಿ ಶಾಂತಿ-ನೆಮ್ಮದಿಗಳನ್ನು ಪಡೆಯಲು ಧನಲಕ್ಷ್ಮಿಯಲ್ಲಿ ಆತ್ಮಧನವನ್ನು ಬೇಡೋಣ, ವಿದ್ಯಾಲಕ್ಷ್ಮಿಯಲ್ಲಿ ಆತ್ಮವಿದ್ಯೆಯನ್ನು ಬಯಸಿ ಪ್ರಾರ್ಥಿಸೋಣ, ಧೈರ್ಯಲಕ್ಷ್ಮಿಯಲ್ಲಿ ಧರ್ಮಮಾರ್ಗದಲ್ಲಿಯೇ ಸಾಗಲು ಬೇಕಾದ ಧೃತಿಯನ್ನು ಕೋರೋಣ, ವಿಜಯಲಕ್ಷ್ಮಿಯಲ್ಲಿ ಆತ್ಮಯಾತ್ರೆಯ ವಿಜಯವನ್ನೂ, ಸಂತಾನಲಕ್ಷ್ಮಿಯಲ್ಲಿ ಜ್ಞಾನಸಂತಾನವನ್ನೂ ಕೋರಿ ಪ್ರಾರ್ಥಿಸೋಣ. ಇವಿಷ್ಟರ ಜೊತೆಜೊತೆಗೆ  ಧರ್ಮಮಯ ಜೀವನಕ್ಕೆ ಪೋಷಕವಾಗುವಂತೆ ಧನ-ಧಾನ್ಯ ಮುಂತಾದ ಲೌಕಿಕಸಂಪತ್ತುಗಳನ್ನೂ ಆಕೆಯಲ್ಲಿ ಬೇಡುವುದು ಉಚಿತವೇ ಆಗಿದೆ. ಆದ್ದರಿಂದ ಯೋಗ-ಭೋಗ ಐಶ್ವರ್ಯಗಳನ್ನು ಜಗನ್ಮಾತೆಯ ಅನುಗ್ರಹದಿಂದ ಪಡೆದು ನಲಿದು ಸುಖಿಸೋಣ.

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ. 


தண்டனை (Shikshe)

மூலம்: கே எஸ்  ராஜகோபாலன் 
தமிழாக்கம்: வனஜா 
மின்னஞ்சல் : (lekhana@ayvm.in)



பெற்றோர் தங்கள்  குழந்தைகளை  திருத்துவதற்காக சில சமயம் தண்டனை அளிக்கிறார்கள். பள்ளிகளிலும் மாணவர்கள் தவறு செய்யும்போது ஆசிரியர்களும், தலைமை ஆசிரியரும் தண்டிக்கிறார்கள்.  ஆயின் ஒரே மாதிரியான தவறுக்கு அனைவருக்கும் ஒரே மாதிரியான தண்டனை சரியல்ல. ஒரு பழமொழி அனைவரும் அறிந்ததே (A nod  for the wise and a rod for the fool). தடித்த  தோலுடைய எருமைக்கு வலுவான அடி விழுந்தால் மட்டுமே உறைக்கும். ஆனால் மென்மையான தோலுடைய பசுவிற்கு மெலிதாக தட்டுவதே  போதுமானதுஂ. அவ்வாறே சூழ்நிலையை பொறுத்து தண்டிக்கும் அளவும், விதமும் வேறுபடுகிறது

தண்டனையின் நோக்கம் தவறு செய்தவர் மனம் திருந்தவேண்டுமென்பதே.  ஒரே மாதிரியான தவறுக்கு பலவகையான தண்டனைகள் அறநூல்களில் கூறப்பட்டுள்ளன. மேலோட்டமாக பார்க்கையில் இது அநியாயமாக தோன்றக்கூடும். எனினும் நடுநிலையான மனமுள்ளவர்கள் விதவிதவிதமான தண்டனைக்கான கொள்கையை புரிந்து கொள்வர்.  வடமொழியில் உள்ள ஸிக்க்ஷா(ஏறக்குறைய தண்டனையை குறிக்கும் சொல்) கற்பித்தல் என்னும் அடிப்படையில் வந்ததுஂ(ஸிக்ஷ வித்யோபாதானே). இத்தகைய தண்டனை வரவேற்க கூடியதே. தண்டனை என்பது தவறு செய்தவனை பழிவாங்குதல் அல்ல. பதிலாக அவன் புரிந்து கொண்டு அதே தவறை எதிர்காலத்தில் செய்யாதிருக்கும்படி செய்வது.

ராமாயணத்தில் ஒரு சுவையான நிகழ்வு. விபீஷணன் தன் உற்ற நண்பர்களுடன் ராவணனை துறந்து ஸ்ரீராமனிடம் சரணடைய வருகிறான். ராமன் முக்கியமானவர்களின் கருத்தை  கேட்கிறான். "அரசாட்சியை அடையும் பொருட்டு தன் தமையனையே துறந்து வந்தவனை நம்பக்கூடாது" என்று தன் சகோதரனுடனேயே போர்புரிந்த சுக்ரீவன் கூறினான்! ராமனின் முகத்தில் ஒரு புன்னகை மலர்ந்தது. "சுக்ரீவா, நீ சென்று அவனை அழைத்து வா. விபீஷணன் மட்டுமல்ல, ராவணனே வந்து  சரணடைந்தாலும் அடைக்கலம் அளிப்பேன்"  என்றான் ராமன். ராமனுக்கு ராவணன் மேல் எந்த முன்விரோதமும் இல்லைஂ. தன் தவறை உணர்ந்து மனம் திருந்தினால் அவனை தண்டிக்க வேண்டிய அவசியமில்லை என்பது ராமனின் கருத்துஂ. பாவியான ராவணனுக்கு இறுதி சடங்கு செய்ய வேண்டுமா என்ற குழப்பம் விபீஷணனுக்கு ஏற்பட்டதுஂ. ராமன் அவனுக்கு அறிவுரை கூறினார் "விபீஷணா, இறுதி சடங்குகளை நிறைவேற்று. உன் சகோதரன் எனக்கும் சகோதரன் போன்றவனேஂ" ராமன் ராவணனை கொன்றதன் நோக்கம் அதர்மத்தை அழிக்க வேண்டுமென்பதே. எனவே ராவணன் மரண தண்டனை பெற்றான்.

அனைவருக்கும் தண்டனை அளிக்கும் சந்தர்ப்பம் கிட்டாதுஂ. ஆயினும் மற்றவர்களின் தவறுகளை நோக்கும் போது அவர்களுக்கு  அறிவுறுத்தும் வழிமுறைகளை நடுநிலையாக அணுகுவதை பழகவேண்டும்.

மஹாபாரதத்திலும்  ஸ்ரீகிருஷ்ணன்  துரியோதனனுடன் சமாதான உடன்படிக்கைக்கு முயல்கிறார். அவன் ஊசிமுனையளவு நிலத்தைக் கூட பாண்டவர்களுக்கு(தர்மத்திற்கு) அளிக்க மறுக்கிறான். சில நேரங்களில் மருந்துகள் பயனற்று போகும்போது மருத்துவர் அறுவை சிகிச்சை செய்ய முடிவெடுக்கிறார். அவ்வாறே ஸ்ரீகிருஷ்ணன்  போர்தான் ஒரே தீர்வென எண்ணுகிறார்.

மனிதர்கள் சரியான அறிவில்லாததால் தவறு செய்கின்றனர். தவறிழைப்பவரின் மனதில் மாற்றம்  ஏற்பட்டால் மட்டுமே தண்டனைக்கு வெற்றிஂ. அத்தருணத்தில் தண்டனை என்பது அவர்களுக்கு பாதுகாப்பு.

குறிப்பு: இக்கட்டுரை யின் கன்னட மூலம் AYVM blogs ல் காணலாம்.  

Wednesday, July 29, 2020

ಮೋಹವು ಧರ್ಮಕ್ಕೆ ತೆರೆಯಾಗಬಾರದು (Mohavu Dharmakke Tereyagabaradu)

ಲೇಖಕರು: ಯೋಗಶ್ರೀ. ಹೆಚ್. ಕೆ
(ಪ್ರತಿಕ್ರಿಯಿಸಿರಿ lekhana@ayvm.in)


ಇಕ್ಷ್ವಾಕುವಂಶದರಸನಾದ  ದಿಲೀಪನು ಮಹಾಪರಾಕ್ರಮ, ದಕ್ಷತೆಗಳಿಂದ ಆಳುತ್ತಾ, ಪ್ರಜೆಗಳನ್ನು ಸ್ವಂತಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಇಷ್ಟಾದರೂ, ದಿಲೀಪ-ಸುದಕ್ಷಿಣೆಯರಿಗೆ ಸಂತಾನ ಭಾಗ್ಯವಿಲ್ಲವಾದ್ದರಿಂದ   ಚಿಂತೆ ಕಾಡುತ್ತಿತ್ತು. . ಕುಲಗುರುಗಳಾದ ಬ್ರಹ್ಮರ್ಷಿ-ವಸಿಷ್ಠರಲ್ಲಿ  ಸಮಸ್ಯೆಯನ್ನು ಬಿನ್ನೈಸಿಕೊಳ್ಳಲಾಗಿ, ಅವರು ದಿವ್ಯದೃಷ್ಟಿಯಿಂದ ರಾಜನ ಪೂರ್ವವೃತ್ತಾಂತವನ್ನು ತಿಳಿದು ಹೀಗೆಂದರು: "ಹಿಂದೊಮ್ಮೆ ದೇವಾಸುರಸಂಗ್ರಾಮದಲ್ಲಿ, ದೇವತೆಗಳಿಗೆ ಸಹಾಯಮಾಡಿ, ನಿನ್ನ ರಾಣಿಯನ್ನು ಸ್ಮರಿಸುತ್ತಾ ಹಿಂದಿರುಗುವಾಗ, ಕಲ್ಪವೃಕ್ಷದ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಮಧೇನುವನ್ನು ನಮಸ್ಕರಿಸದೆ ಬಂದುಬಿಟ್ಟೆ; ಕೋಪಗೊಂಡ ಕಾಮಧೇನುವು,  ಸಂತಾನ ಪ್ರಾಪ್ತಿಯಾಗದಿರುವಂತೆ ಶಪಿಸಿತು". ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರವೇನೆಂದು ಕೇಳಲು,  ಕಾಮಧೇನುವಿನ ಮಗಳಾದ ನಂದಿನಿಯನ್ನು ಸ್ವಂತಮಗುವಿನ ಹಾಗೆ ಸೇವಿಸಬೇಕೆಂದರು. ದಂಪತಿಗಳು ಆನಂದದಿಂದ ಸಮ್ಮತಿಸಿ ಋಷ್ಯಾಶ್ರಮದಲ್ಲಿಯೇ ನಂದಿನಿಯ ಸೇವೆ ಮಾಡತೊಡಗಿದರು. ರಾಜನು ಗೋವನ್ನು ನಿತ್ಯವೂ ಮೇಯಲು ಕರೆದುಕೊಂಡು ಹೋಗುತ್ತಿದ್ದನು. ಹೀಗೆ ೨೧ ದಿನಗಳು ಕಳೆದವು. ಮರುದಿನ,ಗೋವು, ಕಾಡಿನಲ್ಲಿ ಮೇಯುತ್ತಿರಲು, ಸಿಂಹವೊಂದು ಹೊಂಚುಹಾಕುತ್ತಿತ್ತು. ಶಸ್ತ್ರವನ್ನೆತ್ತಿದ ದಿಲೀಪನು ಶಿವಕಿಂಕರನಾಗಿದ್ದ ಸಿಂಹದ ಮಾಯಾಪ್ರಭಾವದಿಂದ  ನಿಶ್ಚಲನಾದನು. ಕರ್ತವ್ಯಪರಾಯಣನಾದ ದಿಲೀಪನು ಹಸುವನ್ನು ಬಿಟ್ಟುಬಿಡುವಂತೆ ಸಿಂಹವನ್ನು ಪರಿಪರಿಯಾಗಿ ಬೇಡಿಕೊಂಡನು. ಆದರೆ ಸಿಂಹವು ಒಪ್ಪಲಿಲ್ಲ. ಆಗ ರಾಜನು, ಗೋವಿನ ಬದಲು ತನ್ನನ್ನೇ ಭಕ್ಷಿಸುವಂತೆ ಪ್ರಾರ್ಥಿಸಿದನು.  ಆಶ್ಚರ್ಯವೆಂದರೆ, ಅವನ ಮೇಲೆ ಪುಷ್ಪವೃಷ್ಟಿಯಾಯಿತು. ನಂದಿನಿಯು ರಾಜನ ಕರ್ತವ್ಯ ನಿಷ್ಠೆಯನ್ನು ಪರೀಕ್ಷಿಸಲು, ತಾನೇ ಹೀಗೆ ಮಾಡಿದುದಾಗಿ ತಿಳಿಸಿತು. ರಾಜನನ್ನು ಶಾಪವಿಮುಕ್ತನನ್ನಾಗಿಸಿ  ತನ್ನ ದಿವ್ಯಕ್ಷೀರವನ್ನು ಸ್ವೀಕರಿಸಿ ಸತ್-ಸಂತಾನವನ್ನು ಪಡೆಯುವಂತೆ ಆಶೀರ್ವದಿಸಿತು. 

ಈ ವೃತ್ತಾಂತವನ್ನು ಗಮನಿಸಿದಾಗ ಇಷ್ಟು ಸಣ್ಣ ತಪ್ಪಿಗೆ ಇಂತಹ ಶಿಕ್ಷೆಯೇ? ಎನ್ನಿಸಬಹುದು. ಧರ್ಮದ ನಡೆ ಸೂಕ್ಷ್ಮವಾದದ್ದು. ರಾಣಿಯಲ್ಲಿ  ಮೋಹಪರವಶನಾಗಿದ್ದ  ದಿಲೀಪನು ಅವಳನ್ನು ಶೀಘ್ರವಾಗಿ ಕಾಣಬೇಕೆಂಬ ತವಕದಲ್ಲಿ ಧರ್ಮಮೂರ್ತಿಯಾದ ಕಾಮಧೇನುವನ್ನು ನಿರ್ಲಕ್ಷಿಸಿದ್ದನು. ಸದ್ಧರ್ಮದ ನಡೆಯಿಂದ ಜಾರಿದ್ದರಿಂದಾಗಿ ಶಾಪಗ್ರಸ್ತನಾಗಿ  ಪ್ರಜೋತ್ಪತ್ತಿಯ ಧರ್ಮವನ್ನು ಕಳೆದುಕೊಂಡನು. ವಸಿಷ್ಠರ ಅನುಗ್ರಹ-ದೇವತಾಸಾನ್ನಿಧ್ಯದಿಂದ  ಕೂಡಿದ ಗೋಸೇವೆಯಿಂದ  ಪ್ರಾಯಶ್ಚಿತ್ತವಾಯಿತು. "ಯಥಾ ರಾಜಾ ತಥಾ ಪ್ರಜಾ"-ಪ್ರಜೆಗಳೂ ರಾಜನಂತೆಯೇ ಆಗಿಬಿಡುವರು. ರಾಜನು ಯಾವುದೇ ಕಾರ್ಯವನ್ನು ಮಾಡಿದರೂ, ಅದು ತನ್ನ ಪ್ರಜೆಗಳಿಗೆ ಆದರ್ಶವಾಗಿರಬೇಕು. "ಅರ್ಥ-ಕಾಮಗಳು ಧರ್ಮದ ಚೌಕಟ್ಟನ್ನು  ಮೀರಬಾರದು" ಎನ್ನುವ ಶ್ರೀರಂಗಮಹಾಗುರುಗಳ ಆಶಯ ಇಲ್ಲಿ ಸ್ಮರಣೀಯ.

ಸೂಚನೆ: 28/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Tuesday, July 28, 2020

ಭಾರತದ ವಿಶೇಷ ಈ ಕೋಗಿಲೆ (Bharatada Vishesha e Kogile)

ಲೇಖಕರು: ಪ್ರಮೋದ್  ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)

  
ಒಂದು ದಟ್ಟವಾದ ಕಾಡಿನಲ್ಲಿ ಒಂದು ವಿಶಾಲವಾದ ಮರವಿದೆ.  ಆ ಮರವು ಅನೇಕ ಶಾಖೋಪಶಾಖೆಗಳಿಂದ ಕೂಡಿದೆ. ಹಾಗೂ ಆ ಶಾಖೆಗಳು ಫಲ ಪುಷ್ಪ ಭರಿತವಾಗಿವೆ. ಫಲಗಳು ಕೂಡ ಅತ್ಯಂತ ಸಿಹಿಯಾಗಿವೆ. ಅಂತಹ ಒಂದು ಕಾಡಿನಲ್ಲಿ, ಕೋಗಿಲೆಯೊಂದು ಬುಡದಿಂದ ಶಾಖೆಗೆ ಹಾರಿ, ಒಂದು ಶಾಖೆಯ ಮೇಲೆ ಕುಳಿತು, ಅದರಲ್ಲಿರುವ ರಸವತ್ತಾದ  ಫಲವನ್ನು ಆಸ್ವಾದನೆ ಮಾಡ ತೊಡಗಿತು. ಫಲದ ರಸ ಚಪ್ಪರಿಸುತ್ತಿದ್ದಂತೆ ತೃಪ್ತಿಯಾಗಿ ಸುಮಧುರವಾಗಿ ಕುಹೂ ಕುಹೂ ಎಂದು ಹಾಡುತ್ತಿದೆ. ಆ ಮರವು ಅತ್ಯಂತ ಪ್ರಾಚೀನವಾಗಿದ್ದರೂ  ನಿತ್ಯನೂತನವಾಗಿದೆ. ಆ ಕೋಗಿಲೆಯ ಗಾನವು ಭಾರತ ದೇಶದಲ್ಲಿ ಅಲ್ಲದೆ ಇಡೀ ವಿಶ್ವದಲ್ಲಿ ಪ್ರಖ್ಯಾತವಾಗಿದೆ. ಯಾರು ಈ ಕೋಗಿಲೆ ಎಂದು ತಿಳಿಯಲು ಈ ಶ್ಲೋಕವನ್ನು ಗಮನಿಸೋಣ.

ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ।
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ।।

ಈ ಕೋಗಿಲೆಯು ಆದಿಕವಿಯಾದ ವಾಲ್ಮೀಕಿ ಮಹರ್ಷಿಗಳು. ಕೋಗಿಲೆಯ ಹಾಡೇ ರಾಮಾಯಣ. ನಮ್ಮ ಶರೀರವೇ ಈ ಮರ. ಇದು ಸಾಧಾರಣ ಮರವಲ್ಲ, ಅಮರವಾದ ಮರ. ನಮೆಲ್ಲರ ಶಿರದಲ್ಲಿ ಬೆಳಗುವ ಪರಂಜ್ಯೋತಿಯೇ ಈ ಮರದ ಬೇರು. ಆ ಪರಂಜ್ಯೋತಿಯಿಂದಲೇ  ಎಲ್ಲ ವಿದ್ಯೆಗಳೂ ಕಲೆಗಳೂ ವಿಕಾಸವಾಗಿವೆ. ಆ ವಿದ್ಯೆ ಹಾಗೂ ಕಲೆಗಳೇ ಈ ಮರದ ನಾನಾ ಶಾಖೆಗಳು. ಅಂತಹ  ಒಂದು ಶಾಖೆ ಕಾವ್ಯ. ಶ್ರೀಮದ್ ರಾಮಾಯಣವು ಅಂತಹ ಕಾವ್ಯವೆಂಬ ಶಾಖೆಯಲ್ಲಿ ಬಿಟ್ಟಿರುವಂತಹ ಮೊಟ್ಟಮೊದಲನೆಯ ಫಲ. ಅತ್ಯಂತ ಸಿಹಿಯಾದ ಫಲ. ಆ ಕೋಗಿಲೆ ಯಾವುದು ಎಂದರೆ, ಶ್ರೀಮದ್ ವಾಲ್ಮೀಕಿ ರಾಮಾಯಣವನ್ನು ರಚಿಸಿದಂತಹ ವಾಲ್ಮೀಕಿ ಮಹರ್ಷಿಗಳು. ಆ ಕೋಗಿಲೆಯು ಬುಡದಿಂದ ಶಾಖೆಯನ್ನು ಹತ್ತಿತು ಎಂದರೇನು? ವಾಲ್ಮೀಕಿ ಮಹರ್ಷಿಗಳು ತಮ್ಮ ದಿವ್ಯವಾದ ತಪಸ್ಸಿನಿಂದ ಅಂತರಂಗ ಪ್ರಪಂಚದಲ್ಲಿ ಹಾರಿ, ಆತ್ಮಾರಾಮರಾಗಿ ಶಿಖರದಲ್ಲಿ ಬೆಳಕನ್ನು ಕಂಡರು. ಆ ಬೆಳಕೇ ಮೈವೆತ್ತು  ಶ್ರೀರಾಮನಾಗಿ ತಮ್ಮ ಹೃದಯದಲ್ಲಿ  ಕಂಡುಕೊಂಡರು. ಈ ರಾಮರಸವೆಂಬ ಫಲವನ್ನು ಆಸ್ವಾದಿಸುತ್ತಿದ್ದಂತೆ ರಾಮಾಯಣವೆಂಬ ಮಹಾಕಾವ್ಯವು ಸಹಜವಾಗಿ ಹೊರಬಂದಿತು. ಆದ್ದರಿಂದ ರಾಮಾಯಣವು ಕೇವಲ ಶ್ರೀರಾಮ, ಸೀತೆ ರಾವಣ ಇವರ ಕಾಲ್ಪನಿಕವಾದ ಒಂದು ಕಥೆ ಅಲ್ಲ; ವೇದ  ಉಪನಿಷತ್ತುಗಳು ಸೃಷ್ಟಿಯ ಮೂಲದಲ್ಲಿ ಬೆಳಗುವ ಯಾವ ಪರಂಜ್ಯೋತಿ ತತ್ತ್ವವನ್ನು ತಿಳಿಸುತ್ತದೆಯೋ, ಅದೇ  ತತ್ತ್ವ  ಹಾಗೂ ಅನುಭವವನ್ನು ರಾಮಾಯಣವೂ ತಿಳಿಸುತ್ತದೆ.

ಮಾವಿನಹಣ್ಣನ್ನು ತಿಂದವನಿಗೇ ಮಾವಿನ ಅನುಭವ. ಅಂತೆಯೇ ರಾಮಾಯಣ ಮಹಾಕಾವ್ಯ, ಶ್ರೀರಾಮನ ವ್ಯಕ್ತಿತ್ವ ಧರ್ಮಗಳನ್ನು ಆಸ್ವಾದಿಸುವನು ಉಪನಿಷತ್ತುಗಳು ಹೇಳುವ  ಬ್ರಹ್ಮಾನುಭವವನ್ನೇ ಪಡೆಯುತ್ತಾನೆ. ರಾಮಾಯಣದ ಕಥೆಯ ಗುರುಮುಖೇನ ಅನುಸಂಧಾನವು ಯೋಗಾನುಭವಕ್ಕೆ ಸುಲಭವಾದ ಮಾರ್ಗವಾಗಿದೆ. ಮಹಾನಾಯಕನಾದ  ಶ್ರೀ ರಾಮಚಂದ್ರ ಪ್ರಭುವು 'ಸ್ಥೂಲ ದೃಷ್ಟಿಗೆ ನರ, ಸೂಕ್ಷ್ಮ ದೃಷ್ಟಿಗೆ ದೇವತೆ ಪರಾ ದೃಷ್ಟಿಗೆ ಪರಂಜ್ಯೋತಿ' ಎಂದು  ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ವಾಲ್ಮೀಕಿಎಂಬ  ಕೋಗಿಲೆಯನ್ನು ಸ್ಮರಿಸಿಕೊಂಡು ನಾವೂ ರಾಮಾಯಣವೆಂಬ ಮಹಾಫಲವನ್ನು ಆಸ್ವಾದಿಸುವಂತೆ ಭಗವಂತನನ್ನು ಪ್ರಾರ್ಥಿಸೋಣ.

ಸೂಚನೆ: 27/07/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.
     

Sunday, July 26, 2020

ಮಾತೃದೇವೋ ಭವ! ಪಿತೃದೇವೋ ಭವ! (Matrdevo Bhava! PitrRdevo Bhava!)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)


ಲೋಕದಲ್ಲಿ ಓಡಾಡುವ ಪ್ರತಿಯೊಂದು ಜೀವಿಯ ಹಿಂದೆಯೂ ತಂದೆತಾಯಿಯರ ಉಪಕಾರ ಅಡಗಿದೆ. ಈ ಲೋಕಕ್ಕೆ ನಮ್ಮನ್ನು ತಂದು  ತಂದೆತಾಯಿಯರು, ಲಾಲನೆ-ಪೋಷಣೆಗಳಿಂದ ನಮ್ಮನ್ನು ಸ್ವತಂತ್ರವಾಗಿ ವ್ಯವಹರಿಸಲು ಸಮರ್ಥರನ್ನಾಗಿ ಮಾಡುತ್ತಾರೆ. ಇತರ ಪ್ರಾಣಿಗಳ ಶರೀರದ ಗಾತ್ರ ಮತ್ತು ತೂಕಗಳಿಗೆ ಸಾಪೇಕ್ಷವಾಗಿ ಹೋಲಿಸಿದರೆ, ಮನುಷ್ಯನಲ್ಲಿ ಮೆದುಳಿನ ಆಕಾರವು ಹಿರಿದಾದದ್ದು. ಮನುಷ್ಯನ ಮೆದುಳು ಹೆಚ್ಚು ಬೆಳವಣಿಗೆಯನ್ನು ಹೊಂದಿ ಮನುಕುಲವನ್ನು ಜಗತ್ತಿನಲ್ಲಿ ಅವನನ್ನು ಅಗ್ರಸ್ಥಾನದಲ್ಲಿ ಇರಿಸಿದೆ. ಮನುಷ್ಯರಲ್ಲಿ  ಸುದೀರ್ಘಕಾಲದ ಗರ್ಭಧಾರಣೆ ಮತ್ತು ಪೋಷಣೆ, ಈ ತೀಕ್ಷ್ಣಬುದ್ಧಿಶಕ್ತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿದೆ ಎಂಬುದು ವಿಜ್ಞಾನದ ನಿಲುವೂ ಆಗಿದೆ. ಇನ್ನು, ಮಕ್ಕಳು  ಬೆಳೆಯುವ ಹಂತದಲ್ಲಿ ಕಲಿಯುವ ಮೊಟ್ಟಮೊದಲನೆಯ ನಡೆ, ನುಡಿ, ಆಚಾರ, ವ್ಯವಹಾರವೆಲ್ಲಕ್ಕೂ ಪೋಷಕರ ಅನುಕರಣೆಯೇ ಆಧಾರ.  


ಪಡೆದ ಉಪಕಾರವನ್ನು ಸ್ಮರಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ನಾಯಿ ಮುಂತಾದ ಅನೇಕ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದರೆ ಇದನ್ನೂ ಮೀರಿ ಹಿಮ್ಮುಖನಾದ ನೋಟವನ್ನು ಹರಿಸಿ, ನಾನು ಎಲ್ಲಿಂದ ಬಂದೆ ? ಯಾರು ನನ್ನನ್ನು ಇಲ್ಲಿಗೆ ತಂದವರು?  ಮುಂತಾದ ಆತ್ಮವಿಮರ್ಶೆಯನ್ನು ನಡೆಸುವ ಶಕ್ತಿ ಮನುಷ್ಯನ ವೈಶಿಷ್ಟ್ಯ. ಇಂತಹ ಪಶ್ಚಿಮಾಭಿಮುಖವಾದ ಒಳದೃಷ್ಟಿಯನ್ನು ಇನ್ನೂ ಆಳಕ್ಕೆ ಹರಿಸಿ ತಪಸ್ಯೆಯಾಗಿ ಬೆಳೆಸಿದವರು, ಭಾರತೀಯ ಮಹರ್ಷಿಗಳು. ತಂದೆತಾಯಿಯರ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ ಅವರು "ಮಾತೃದೇವೋ ಭವ! ಪಿತೃದೇವೋ ಭವ!"  ಎಂದು ಉದ್ಘೋಷಿಸಿದ್ದು ಸ್ವಾಭಾವಿಕವೇ ಸರಿ. 


ಮಹರ್ಷಿಗಳು ಜನ್ಮಕೊಟ್ಟ ತಂದೆ-ತಾಯಿಗಳನ್ನೂ ಮೀರಿ ಅವರಲ್ಲಿ ಆಡುವ ತಂದೆತನ-ತಾಯಿತನಗಳನ್ನು ಹಿಂಬಾಲಿಸಿಹೋದರು. ಪ್ರಕೃತಿಮಾತೆಯು ವೃಕ್ಷ-ವನಸ್ಪತಿಗಳಿಂದ ಜೀವಕೋಟಿಗಳನ್ನು ಸಲಹುತ್ತಿದ್ದಾಳೆ. ಸಸಿಗಳಿಗೆ ಆಹಾರ ಸಿದ್ಧಪಡಿಸಲು ಮಣ್ಣು, ಜಲ, ಗಾಳಿಗಳನ್ನು ನೀಡಿ, ಪಾಕಮಾಡುವ ಬೆಳಕು-ಉಷ್ಣತೆಗಳನ್ನು ಧರಿಸಿ, ಬೆಳೆಯುವುದಕ್ಕೆ ಸ್ಥಳಾವಕಾಶವನ್ನು ನೀಡಿದ್ದಾಳೆ. ಆಕೆಯ ಈ ಔದಾರ್ಯವು ತಾಯಿತನದ ಉತ್ಕೃಷ್ಟ ನಿದರ್ಶನವೆಂದು ಭಾವಿಸಿದ ಋಷಿಗಳು ಆಕೆಯನ್ನು ಪೃಥ್ವೀಮಾತೆಯೆಂದು ಕೊಂಡಾಡಿದರು. ದೂರದಲ್ಲಿರುವಂತೆ ಕಂಡರೂ, ಪ್ರಖರವಾದ ಕಿರಣಗಳನ್ನು ಸೂಸುವ ಸೂರ್ಯನು ನಮಗೆ ಅತ್ಯಂತ ಉಪಕಾರಿ. ಸೂರ್ಯದೇವನು ತಂದುಕೊಡುವ ಪ್ರಕಾಶದಿಂದಲೇ ಪೃಥ್ವೀಮಾತೆಯ ಪಾಕಶಾಲೆ ಜರುಗುವುದರಿಂದ ಆತನನ್ನೂ ಆತನು ಬೆಳಗುವ ದ್ಯುಲೋಕವನ್ನೂ ತಂದೆಯೆಂದು ಭಾವಿಸಿ,' ದ್ಯೌ: ಪಿತಾ; ಪೃಥಿವೀ ಮಾತಾ,' ಎಂದರು. 


ಈ ತಂದೆತಾಯಿತನವನ್ನು ಎಲ್ಲೆಡೆ ಕಂಡವರು ಋಷಿಗಳು. ಮಗುವು ಸ್ಥೂಲರೂಪದಲ್ಲಿ ತಾಯಿಯ ಗರ್ಭದಿಂದ ಹೊರಬರುವುದು ಪ್ರತ್ಯಕ್ಷ ಸತ್ಯ ಆದರೆ, ಬೀಜಪ್ರದನಾದ ತಂದೆಯ ಪಾತ್ರ ಪರೋಕ್ಷವಾಗಿರುತ್ತದೆ.  ಸೃಷ್ಟಿಯಲ್ಲಿ ಬೆಳೆಯುವ ಸಸಿಯ ಹಿಂದಿರುವ ಬೀಜದಲ್ಲಿ ತಂದೆತನವನ್ನೂ, ಪೋಷಕಾಂಶಗಳನ್ನು ನೀಡಿ, ಬೆಳೆಸುವ ಭೂಮಿಯಲ್ಲಿ ತಾಯಿತನವನ್ನೂ ಕಂಡರು. ಸಂಗೀತಕಚೇರಿಯಲ್ಲಿ ವಿಸ್ತಾರವಾಗಿ ಗಾಯಕನು ಹಾಡುವ ಸಂಗೀತವೇ ತಾಯಿಯಾದರೆ, ಸ್ವರಗಳಿಗೆಲ್ಲಾ ಆಧಾರವಾಗಿರುವ ಹಿಂಬದಿಯ ತಂಬೂರಿಶ್ರುತಿಯನ್ನು ತಂದೆ ಎನ್ನಬಹುದು. ಅತ್ತ ತಂಬೂರಿಶ್ರುತಿಯನ್ನೇ ಗಮನಿಸಿದರೆ, ಅದನ್ನೇ ತಾಯಿಯೆಂದು ಭಾವಿಸಿದರೆ, ಶ್ರುತಿಯ ಹಿಂದಿರುವ ಲಯವೇ ತಂದೆ. ಸ್ಥೂಲವಾದ ಜಗತ್ತನ್ನು  ಪ್ರಕೃತಿ-ಮಾತಾ ಎಂದು ಕರೆಯುವುದುಂಟು. ಗೂಢವಾಗಿ ಚೈತನ್ಯರೂಪದಲ್ಲಿ ಅಡಗಿರುವ ಚೈತನ್ಯಶಕ್ತಿಯನ್ನು ಪುರುಷ ಎಂದು ಕರೆಯುತ್ತಾರೆ. ಇಲ್ಲಿ ಪುರುಷ-ಸ್ತ್ರೀ, ಎಂಬ ಅರ್ಥವಲ್ಲ. ಹೊರಮೈ ಗಂಡಾದರೂ ಹೆಣ್ಣಾದರೂ, ಅದನ್ನುಪ್ರಕೃತಿಯೆಂದೇ ವ್ಯವಹರಿಸುತ್ತಾರೆ. ಹೀಗೆ ತಾಯಿತನವು ಪ್ರತ್ಯಕ್ಷಗೋಚರ; ತಂದೆತನ ಗೂಢ.- ಇಂದು ಈ ಆಲೋಚನೆಯನ್ನು ಮುಂದುವರಿಸಿದರೆ, ಬಲ್ಬ್ನ ಹೊರಮೈ ತಾಯಿತನವನ್ನು ಪ್ರತಿನಿಧಿಸಿದರೆ, ಅಲ್ಲಿ ಗೂಢವಾಗಿ ಹರಿವ ವಿದ್ಯುತ್ ಶಕ್ತಿಯು ಚೈತನ್ಯರೂಪಿಯಾದ ತಂದೆಯೆನಿಸುತ್ತದೆ. 


ವಾಸ್ತವಿಕವಾಗಿ ನೋಡಿದರೆ, ಮಾತಾ-ಪಿತಾ ಅಥವಾ ಪ್ರಕೃತಿ-ಪುರುಷ ಎಂಬ ಯುಗಳತತ್ತ್ವಗಳು ಸೃಷ್ಟಿಯೆಲ್ಲವನ್ನೂ ವ್ಯಾಪಿಸಿವೆ; ಸೃಷ್ಟಿಯನ್ನು ಧರಿಸಿವೆ. ಅವರಿಬ್ಬರೂ ಅವರವರ ಪಾತ್ರಗಳನ್ನು ವಹಿಸಿದರೇನೇ ವ್ಯವಹಾರ. ಇಲ್ಲವಾದರೆ ಅಪಹಾರ. ಸೂರ್ಯ-ಭೂಮಿಗಳು ಒಟ್ಟು ಸೇರಿ ಕೆಲಸಮಾಡಿದ್ದರಿಂದ ಜೀವಗಳ ಉಗಮಕ್ಕೆ ಭುವಿಯಲ್ಲಿ ಸೂಕ್ತ ಸನ್ನಿವೇಶಗಳು ಒದಗಿದವು. ಜೀವಸೃಷ್ಟಿಯ ಆದಿಯಾಯಿತು. ಬೀಜ-ಕ್ಷೇತ್ರ ಸೇರಿದರೆ ಫಲ-ಪುಷ್ಪ ಭರಿತ ವೃಕ್ಷವುಂಟು. ಸಂಗೀತ ಕಚೇರಿಯಲ್ಲಿ ಆಲಾಪನೆಯು ಶ್ರುತಿಯೊಡನೆ ಸೇರದಿದ್ದರೆ, ಕೇಳುಗರ ವಿಲಾಪವೇ ಫಲ. ಚೈತನ್ಯ ಶಕ್ತಿಯು, ಸ್ಥೂಲಶರೀರವನ್ನು ಬಿಟ್ಟರೆ ವಿಲಾಪ. ತಂದೆ-ತಾಯಿಯರ ಒಗ್ಗೂಡುವಿಕೆಯಿಂದ, (ಚೈತನ್ಯ-ಸ್ಥೂಲ ಶರೀರಗಳ ಸೇರುವಿಕೆಯಿಂದ) ನಾವೆಲ್ಲರೂ ಆದೆವು. ಬಲ್ಬ್, ವಿದ್ಯುತ್ ಒಂದಾದರೆ ಸುತ್ತಲೂ ಪ್ರಕಾಶ.   


ಅಂತೆಯೇ ಮತ್ತೊಂದು ವಿಶೇಷಾರ್ಥದಲ್ಲಿ ಪುರುಷ-ಪ್ರಕೃತಿಗಳ ಸೇರುವಿಕೆಯನ್ನು ಹೇಳುತ್ತಾರೆ, ಮಹರ್ಷಿಗಳು. ನಮ್ಮ ಮೈ-ಮನಗಳು ಸದಾಕಾಲವೂ ಸುತ್ತಲೂ ಇರುವ ಆಕರ್ಷಕ ವಿಷಯಗಳಲ್ಲಿ ಮುಳುಗುತ್ತಿರುತ್ತದೆ. ಅಲ್ಲಿ ಆಕರ್ಷಣೆ ಮುಗಿದ ಕೂಡಲೇ, ಪುನಃ ಅಲೆದಾಟ ಪ್ರಾರಂಭ. ಅದೇ ಅಲೆದಾಡುವ ನಮ್ಮ ಮೈಮನಗಳು ಒಳಮುಖವಾಗಿ ಮುಳುಗಿದರೆ ಅದು ತಪವೇ ಸರಿ. ಮನವು ಒಳ ಚೈತನ್ಯದೊಡನೆ ಸೇರಿದರೆ, ಇದು ವಿಶೇಷವಾದ ಯೋಗ(ಸೇರುವಿಕೆ). ಎಣೆಯಿಲ್ಲದ ಆನಂದದ ಈ ಗಣಿಯನ್ನು ಜ್ಞಾನ, ಪರಮಾವಸ್ಥಾ ಎಂದು ಹೇಳುತ್ತಾರೆ. 


ಶ್ರೀರಂಗಮಹಾಗುರುಗಳು ತಂದೆಯ ಬಗ್ಗೆ ಹೀಗೊಂದು ಆದರ್ಶವಾದ ವ್ಯಾಖ್ಯೆಯನ್ನು ಕೊಟ್ಟಿದ್ದಾರೆಳ ಮಾತಿನಲ್ಲಿ "ತಂದೆ, ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ" ಎಂಬುದಾಗಿ. ಆದರೆ ಅದನ್ನು ಉಣಬಡಿಸಲು, ಪ್ರಕೃತಿ-ಮಾತೆಯೆಂದೂ, ಕುಂಡಲಿನೀದೇವಿ ಎಂದೂ ಕರೆಯಲ್ಪಡುವ ತಾಯಿಯು ಮುಂದಾಗಬೇಕು, ಅನುಗ್ರಹಿಸಬೇಕು. ಆ  ಅಪ್ರಾಕೃತ ತಂದೆ-ತಾಯಿಯರ ಪಾತ್ರವನ್ನೇ, ಭುವಿಯಲ್ಲಿ, ಮನೆಮನೆಯಲ್ಲೂ ತಂದೆ-ತಾಯಿಯರು ವಹಿಸಬೇಕು;  ಜ್ಞಾನದತ್ತ ಪ್ರಚೋದಿಸಬೇಕು.  ಒಳ ಯೋಗಭೂಮಿಯಲ್ಲಾಗಲೀ, ಹೊರ ಲೋಕವ್ಯವಹಾರದಲ್ಲಾಗಲೀ, ನಮಗೆ ದೊರಕುವ ಪ್ರತಿಯೊಂದು ಸಣ್ಣ-ಪುಟ್ಟ ಸಂತೋಷವೂ ತಂದೆ-ತಾಯಿಯರ ಅನುಗ್ರಹವೇ ಸರಿ. ತಂದೆ ತಾಯಿಯರು- ಜನ್ಮ ಕೊಟ್ಟವರಿರಬಹುದು, ದಿವಿ-ಭುವಿಗಳಾಗಬಹುದು, ಅಥವಾ ಜಗನ್ಮಾತಾಪಿತೃಗಳಾಗಬಹುದು. ಈ ಪೋಷಕರ ದಿನಾಚರಣೆಯಂದು ಇವರೆಲ್ಲರನ್ನೂ ಸ್ಮರಿಸಿ, ಕೃತಾರ್ಥರಾಗೋಣ.


ಸೂಚನೆ: 25/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ರೌದ್ರಂ ರಾವಣಭಂಜನೇ... ರಾಮಾಯಣದಲ್ಲಿ ರೌದ್ರ ರಸ (Raudram Ravanabhannjane... Ramayanadalli Raudra Rasa)

ಲೇಖಕರು: ಡಾII ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)


ರೌದ್ರರಸಕ್ಕೆ ಕ್ರೋಧವೇ ಸ್ಥಾಯಿಭಾವ.  ನಾರದರು ಶ್ರೀರಾಮನನ್ನು ಕ್ರೋಧದಲ್ಲಿ 'ಕಾಲಾಗ್ನಿಸದೃಶ'ನೆಂತಲೂ ಮತ್ತು ಕ್ಷಮೆಯಲ್ಲಿ 'ಪೃಥ್ವೀಸಮ'ನೆಂದೂ  ವರ್ಣಿಸುತ್ತಾರೆ.  ಎರಡು ವಿರುದ್ಧಭಾವಗಳು ಭಿನ್ನಭಿನ್ನ ಸನ್ನಿವೇಶಗಳಲ್ಲಿ ಶ್ರೀರಾಮನಲ್ಲಿ ವ್ಯಕ್ತವಾಗಿರುವುದನ್ನು ಕಾಣುತ್ತೇವೆ.  ಕ್ಷಮಾಗುಣವೇ ಪ್ರಧಾನವಾಗಿರುವ ಶ್ರೀರಾಮನ ಜೀವನದಲ್ಲಿ ರೌದ್ರರಸವೂ ಅಲ್ಲಲ್ಲಿ ಹಾದುಹೋಗುವುದು ಅವನ ವ್ಯಕ್ತಿತ್ವಕ್ಕೆ ಕ್ಷೋಭೆಯನ್ನುಂಟುಮಾಡದೇ ಶೋಭೆಯನ್ನೇ ತಂದಿದೆ. ಶ್ರೀರಾಮನ ಕೋಪವು ಅಸ್ಥಾನ-ಅಕಾಲ-ಅಕಾರಣದ್ದಲ್ಲ. ಹಾಗಾಗಿ ಅದು ಸ್ವಾಗತಾರ್ಹ.

ಯುದ್ಧಭೂಮಿಯಲ್ಲಿ ವಿಭೀಷಣನ ಮೇಲೆ ರಾವಣನು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಲಕ್ಷ್ಮಣನು ತಡೆದಾಗ, ರಾವಣನು ಎಂಟು ಘಂಟೆಗಳುಳ್ಳ ಘೋರವಾದ ಆಯುಧವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ಅವನನ್ನು ಬೀಳಿಸುತ್ತಾನೆ. ಇದನ್ನು ನೋಡಿ ದುಃಖಗೊಂಡ ಶ್ರೀರಾಮನು ಕೋಪಗೊಂಡು ವಾನರರನ್ನು ಕುರಿತು 'ಇಂದು ರಾಮನ ರಾಮತ್ವವನ್ನು ಹರಿಶ್ರೇಷ್ಠರು ನೋಡಲಿ, ಅರಾವಣಮರಾಮಂ ವಾ ಜಗದ್ರಕ್ಷ್ಯಥ ವಾನರಾಃ', ಈಗ ಜಗತ್ತು ಅರಾವಣ ಅಥವಾ ಅರಾಮವಾಗುತ್ತದೆ' ಎಂದು ನುಡಿದು ರಾವಣನೊಡನೆ ಸೆಣೆಸಿ, ಅವನು ಹಿಮ್ಮೆಟ್ಟುವಂತೆ ಮಾಡುತ್ತಾನೆ.

ರಾವಣನ ಮೂಲಬಲವನ್ನು ಕಂಡು ಕಪಿಸೈನ್ಯವು ತತ್ತರಿಸಲು, ಕೋಪಗೊಂಡ ಶ್ರೀರಾಮನು ಪರಮಾಸ್ತ್ರವಾದ ಗಂಧರ್ವಾಸ್ತ್ರವನ್ನು ಪ್ರಯೋಗಿಸಿ ರಾಕ್ಷಸರನ್ನು ಮೋಹಿತರನ್ನಾಗಿ ಮಾಡಿ ಪರಸ್ಪರ ತಮ್ಮನ್ನೇ ಹೊಡೆದುಕೊಂಡು ಸಾಯುವಹಾಗೆ ಮಾಡುತ್ತಾನೆ. 'ದಿವಸಸ್ಯಾಷ್ಟಮೇ ಭಾಗೇ', ದಿವಸದ ಎಂಟನೆಯ ಒಂದು ಭಾಗದ ಅವಧಿಯಲ್ಲಿ ರಾಕ್ಷಸರ ಸೇನೆಯನ್ನು ಧೂಳೀಪಟಮಾಡುತ್ತಾನೆ. ಈ ಹಿಂದೆ, ಜನಸ್ಥಾನದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಶ್ರೀರಾಮ ಕೇವಲ ಒಂದೂವರೆ ಗಂಟೆಯೊಳಗೆ ಸಂಹರಿಸಿರುತ್ತಾನೆ ಎಂಬುದನ್ನು ಸ್ಮರಿಸಬಹುದು. ಈ ಅದ್ಭುತಕಾರ್ಯವನ್ನು ನೋಡಿ ಆಶ್ಚರ್ಯಚಕಿತರಾದ ಸುಗ್ರೀವಾದಿಗಳನ್ನು ಕುರಿತು ಶ್ರೀರಾಮನು ಈ ದಿವ್ಯವಾದ ಅಸ್ತ್ರದ ಪ್ರಯೋಗವು 'ಮಮ ವಾ ತ್ರ್ಯಂಬಕಸ್ಯ ವಾ' 'ನನ್ನಲ್ಲಿ ಅಥವಾ ಶಿವನಲ್ಲಿ ಮಾತ್ರ'ಎಂದು ಹೇಳುತ್ತಾನೆ.

ಸ್ವಾಭಾವಿಕವಾಗಿಯೇ ಶಾಂತಸ್ವರೂಪಿಯಾದ ಶ್ರೀರಾಮನಿಗೆ ಯುದ್ಧಭೂಮಿಯಲ್ಲಿ ರಾವಣನನ್ನು ನೋಡಿದಾಕ್ಷಣ ಅವನು ಋಷಿದೇವತೆಗಳ ವಿಷಯದಲ್ಲಿ ಮತ್ತು ಸೀತಾದೇವಿಯ ವಿಷಯದಲ್ಲಿ ಅವನೆಸಗಿದ ಪಾಪಗಳೆಲ್ಲವೂ ಸ್ಮರಣೆಗೆ ಬರುತ್ತದೆ.  ಶಾಂತಮೂರ್ತಿಯಾದ ಶ್ರೀರಾಮನು 'ರಾಘವಃ ಕ್ರೋಧಮಾಹರತ್' ಕೋಪವನ್ನು ತನ್ನಲ್ಲಿ ಆವಾಹಿಸಿಕೊಂಡನೆಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ. ಸಾರಥಿಯಾದ ಮಾತಲಿಯ ಸಲಹೆಯಂತೆ ಬ್ರಹ್ಮದತ್ತವಾದ ಅಮೋಘವಾದ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ, ಅವನ ಮೇಲೆ ಪ್ರಯೋಗಿಸಿ, ಸಂಹರಿಸುತ್ತಾನೆ.

'ಕೋಪವೆಂಬುದನರ್ಥಸಾಧನ' ಎಂಬಿವೇ ಮಾತುಗಳಿಂದ ಬಗೆಬಗೆಯಾಗಿ ಕೋಪದ ದುಷ್ಪರಿಣಾಮಗಳು ವರ್ಣಿತವಾಗಿದ್ದರೂ, ಯಾರು, ಯಾರಮೇಲೆ ಮತ್ತು ಯಾವಕಾರಣಕ್ಕಾಗಿ ಕೋಪಿಸಿಕೊಂಡರೆಂಬುದು ಗಮನಿಸಬೇಕಾದ ಅಂಶ.  ಮಾವುತ ದುರ್ಮಾರ್ಗಕ್ಕೆ ಹೋಗುತ್ತಿರುವ ಆನೆಯ ಮೇಲಷ್ಟೇ ಕೋಪಗೊಂಡು ಅಂಕುಶದಿಂದ ತಿವಿದು ಸನ್ಮಾರ್ಗಕ್ಕೆ ತರುತ್ತಾನಷ್ಟೆ.  ವೈದ್ಯನು ರೋಗಾಣುಗಳನ್ನಷ್ಟೇ ಶಸ್ತ್ರಚಿಕಿತ್ಸೆಯಿಂದ ನಾಶಮಾಡಿ ದೇಹವನ್ನು ರಕ್ಷಿಸುತ್ತಾನೆ. ಭಗವಂತನ ಅವತಾರೋದ್ದೇಶವಾದ 'ವಿನಾಶಾಯ ಚ ದುಷ್ಕೃತಾಮ್' ಎಂಬುದು ಕೈಗೊಡಬೇಕಾದರೆ 'ಕೋಪ'ವೆಂಬ 'ಸಾಧನ' ಮುಖ್ಯವಾಗಿರುತ್ತದೆ.  'ಅಯ್ಯೋ ಪಾಪ, ಈ ರೋಗಾಣುಗಳನ್ನು ಹೇಗೆ ಸಾಯಿಸುವುದು?' ಎಂದು ವೈದ್ಯನಲ್ಲಿ ಕರುಣರಸವು ಅಸ್ಥಾನದಲ್ಲಿ ಅಕಾಲದಲ್ಲಿ ಹರಿದುಬಿಟ್ಟರೆ ರೋಗಿಯ ಗತಿ ಏನು? ಎಂಬ ಉಕ್ತಿಯ ಮೂಲಕ ತತ್ತ್ವವನ್ನು ಮನಸ್ಸಿಗೆ ಇಳಿಸಿದ ಶ್ರೀರಂಗಮಹಾಗುರುವಿಗೆ ನಮೋ ನಮಃ.

ಸೂಚನೆ: 25/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಆರ್ಯಸಂಸ್ಕೃತಿ ದರ್ಶನ - 3 (Arya Samskruti Darshana - 3)

ಕುಂಕುಮ
ಲೇಖಕರು ಡಾ|| ಎಸ್.ವಿ.ಚಾಮು




ಪ್ರದೇಶಾನುಗುಣವಾಗಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ, ನಮ್ಮದೇಶದಲ್ಲಿ ಕನ್ಯಾಕುಮಾರಿಯಿಂದ ಹಿಡಿದು  ಹಿಮಾಲಯದವರೆಗೆ ಸ್ತ್ರೀಯರ ವೇಷಭೂಷಣಗಳಲ್ಲಿ ಸಾವಿರಾರು ವರ್ಷಗಳಿಂದ ಏಕ ಪ್ರಕಾರತೆಯು ಇರುತ್ತದೆ. ಸೀರೆಯು ನಮ್ಮ ದೇಶದ ಸ್ತ್ರೀಯರ ರಾಷ್ಟ್ರೀಯ ಉಡುಗೆಯಾಗಿರುತ್ತದೆ. ಜಡೆಯನ್ನು ಹಾಕಿಕೊಳ್ಳುವುದು, ಬೈತಲೆ ಮಾಡಿಕೊಳ್ಳುವುದು, ಬಳೆ ಹಾಕಿಕೊಳ್ಳುವುದು, ಕುಂಕುಮವನ್ನಿಟ್ಟುಕೊಳ್ಳುವುದು, ಓಲೆ, ಉರುಟು, ಮೂಗುತಿ ಮುಂತಾದ ಆಭರಣಗಳನ್ನು ಧರಿಸುವುದು ನಮ್ಮ  ಸ್ತ್ರೀಯರ ಸಾರ್ವತ್ರಿಕವಾದ ಅಲಂಕಾರ ಹಾಗೂ ತೊಡಿಗೆಗಳಾಗಿರುತ್ತವೆ. ಈ ಏಕ ಪ್ರಕಾರತೆಯು ಈಚಿನ ವಿಷಯವಲ್ಲ. ಬಹಳ ಹಿಂದಿನ ಕಾಲದಿಂದಲೂ ಅದು ಇದೆ ಎಂಬುದಕ್ಕೆ ಪುರಾತನವಾದ ಕಾವ್ಯ ಮತ್ತು ಶಿಲ್ಪಗಳು ಸಾಕ್ಷಿಯಾಗಿವೆ.

ಒಂದು ಕಡೆ ಇವೆಲ್ಲವೂ ಅಲಂಕಾರಸಾಧನಗಳಾಗಿ, ಹಿಂದೂ ಜನಗಳು ತಂದ ಸೌಂದರ್ಯದದೃಷ್ಟಿಯನ್ನು ಪ್ರತೀಕಿಸುತ್ತವೆ. ಮತ್ತೊಂದು ಕಡೆ ಅವುಗಳು ಹಲವು ಆಳವಾದ ಸಂಕೇತಾರ್ಥದಿಂದಕೂಡಿ ಭಾರತೀಯರ ಉನ್ನತವಾದ ಮತ್ತು ವ್ಯಾಪಕವಾದ ನೋಟ ಹಾಗೂ ವಿಜ್ಞಾನಬುದ್ಧಿಗಳನ್ನು ಪ್ರಕಟಪಡಿಸುತ್ತವೆ. ಲೋಕದಲ್ಲಿ ಸಂಕೇತ( Symbol) ಒಂದು ಸಾಧಾರಣವಾದ ಪದಾರ್ಥವನ್ನು ಅವಲಂಬಿಸಿರುತ್ತದೆ. ಆದರೆ ಅದರ ಅರ್ಥ ಈ ಪದಾರ್ಥವನ್ನು ಮೀರಿ ಹೋಗುತ್ತದೆ. ಆ ಪದಾರ್ಥದ ಮೇಲೆ ಯಾವ ಭಾವನೆಯನ್ನು ಜನರು ಇಡುತ್ತಾರೋ ಅದರ ಮೇಲೆ ಅದು ತನ್ನ ಅರ್ಥ ಅಥವಾ ಮೌಲ್ಯವನ್ನು ತೆಗೆದುಕೊಳ್ಳುತ್ತದೆ.

ಇಂದು ಈ ವೇಷಭೂಷಣಗಳು ತ್ಯಾಗಕ್ಕೆ ವಿಷಯವಾಗುವುದನ್ನು ನೋಡುತ್ತೇವೆ. ಶಾಲಾಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ತಾಯಂದಿರ ಬಾಲಿಶತನದಿಂದ ಸಣ್ಣಮಕ್ಕಳು ಹೊಸ ವಿಧವಾದ ಉಡುಗೆತೊಡಿಗೆಗಳನ್ನು ತಮ್ಮದಾಗಿ ಮಾಡಿಕೊಳ್ಳಲು ಆರಂಭಿಸಿರುತ್ತಾರೆ. ತಲೆ ಕೂದಲುಗಳನ್ನು ಕತ್ತರಿಸಿಕೊಳ್ಳುವುದು, ಬಳೆ, ಓಲೆ, ಮೂಗುತಿ ಇತ್ಯಾದಿಗಳನ್ನು ತೊಡದಿರುವುದು, ಗಂಡಸರ ಉಡುಪುಗಳನ್ನು ಧರಿಸುವುದು, ಬೆಲ್-ಬಾಟ್ಸ್, ಜೀನ್ಸ್ ಮುಂತಾದವುಗಳನ್ನು ಹಾಕಿಕೊಳ್ಳುವುದು, ಬರೀ ಹಣೆಯಲ್ಲಿರುವುದು ಇತ್ಯಾದಿಗಳು ಅವರಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಚಿಕ್ಕಂದಿನಲ್ಲಿ ಮಾಡಿದ ಅಭ್ಯಾಸಗಳು ವಯಸ್ಸಾದನಂತರವೂ ಮುಂದುವರಿಯಬಹುದಾದುದರಿಂದ ಕಾಲ ಕಳೆದಂತೆ ಇವು ಸಾರ್ವತ್ರಿಕವಾದ ಉಡುಗೆಯ ಶೈಲಿಗಳಾತ್ತವೆಯಂದು ನಿರೀಕ್ಷಿಸಬಹುದು.

ಇವೆಲ್ಲವೂ ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಹೇಳುವುದಾದರೆ ಬಹಳ ದೊಡ್ದ ಪರಿವರ್ತನೆಗಳು. ನಮ್ಮ ಪರಂಪರಾನುಗತವಾದ ಉಡುಗೆ ತೊಡಿಗೆಗಳಲ್ಲಿ ಅಸೌಂದರ್ಯದ ಅಂಶಗಳು ಇಲ್ಲದಿದ್ದರೂ ಸ್ತ್ರೀಯರು ಏಕೆ ಅವುಗಳನ್ನು ತ್ಯಜಿಸಿ, ಸೌಂದರ್ಯಕ್ಕೆ ಅಷ್ಟೇನೂ ಪೋಷಕವಾಗಿಲ್ಲದಿರುವ ಹೊಸ ಉಡುಗೆಯ ಶೈಲಿಗಳನ್ನು ತಮ್ಮದಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಉಂಟಾಗುತ್ತದೆ. ಅದಕ್ಕೆ ಉತ್ತರ ಹೇಳುವುದು ಸ್ವಲ್ಪ ಜಟಿಲವಾದ ಕೆಲಸವೇ ಸರಿ. ಸಿನೇಮಾ ನಟಿಯರ ಅನುಕರಣೆ, ಪರಂಪರೆಯ ಬಗ್ಗೆ ಅಶ್ರದ್ಧೆ, ಅನಾದರಣೆ ಮತ್ತು ವಿರೋಧ, ಉಡುಗೆತೊಡಿಗೆಗಳಲ್ಲಿ ನಿಮಿಷ ನಿಮಿಷಕ್ಕೂ ಹೊಸ ಹೊಸ ಫ್ಯಾಷನ್ಗಳನ್ನು ಸೃಷ್ಟಿಸುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ, ಜನರಲ್ಲಿ ದುಡ್ಡು ಕಾಸಿನ ಹೆಚ್ಚಳ, ಎಲ್ಲ ವಿಧವಾದ ವೃತ್ತಿಗಳಿಗೂ ಸ್ತ್ರೀಯರ ಪ್ರವೇಶ, ಪತ್ರಿಕೆಗಳು, ವಿಲಾಸಿಪುರುಷರ ಪ್ರೋತ್ಸಾಹ "ಸ್ತ್ರೀ ವಿಮುಕ್ತಿ ಆಂದೋಳನ (Women Lib Movements) ದ" ಪ್ರಭಾವ.  ಪಾಶ್ಚಾತ್ಯ ನಾಗರಿಕತೆಯಲ್ಲಿ ಅನುರಾಗ ಇತ್ಯಾದಿ ಅನೇಕ ಕಾರಣಗಳು ಮನಸ್ಸಿಗೆ ಬರುತ್ತವೆ. ಸ್ಥಳಾಭಾವದಿಂದ ಅವುಗಳ ಬಗ್ಗೆ ಇಲ್ಲಿ ವಿವರಗಳಿಗೆ ಹೋಗದಿರಬೇಕಾಗಿದೆ.

ಈ ಹೊಸ ದಾರಿಯಲ್ಲಿ ನಡೆಯುವುದರಿಂದ ನಾವೂ ನವನಾಗರಿಕತೆಯಲ್ಲಿ ಭಾಗವಹಿಸಿದಂತೆ ಆಗುತ್ತದೆಂಬುದು ನಿಜ. ಆದರೆ ಆ ರೀತಿ ಮಾಡುವುದರಿಂದ ನಮ್ಮ ಜನತೆಯು ಸಭ್ಯತೆಯಿಂದ ಅಸಭ್ಯತೆಗೂ, ವಿಚಾರದಿಂದ ಅವಿಚಾರಕ್ಕೂ, ಸಂಯಮಶೀಲತೆಯಿಂದ ಅಸಂಯಮಶೀಲತೆಗೂ ನಡೆದಂತೆ ಆಗುತ್ತದೆಂಬುದೂ ಅಷ್ಟೇ ನಿಜ. ಮೇಲೆ ಹೇಳಿದ ಅಲಂಕಾರವಸ್ತುಗಳಲ್ಲಿ ಒಂದಾದ ಕುಂಕುಮವನ್ನು ತೆಗೆದುಕೊಂಡು ಈ ಮಾತಿಗೆ ಒಂದು ಸಂಗ್ರಹವಾದ ವಿವರಣೆಯನ್ನು  ನೀಡುತ್ತೇವೆ.

ಕುಂಕುಮವು ಸ್ತ್ರೀಯರ ಮುಖಕ್ಕೆ ಅಪೂರ್ವವಾದ ಶೋಭೆಯನ್ನು ಕೊಡುವ ಅಲಂಕಾರ ಸಾಮಗ್ರಿ. "ವಿಹೀನತಿಲಕೇವ  ಸ್ತ್ರೀ ನೋತ್ತರಾದಿಕ್ಪ್ರಕಾಶತೇ|" (ಹೇಮಂತಋತುವಿನಲ್ಲಿ ಉತ್ತರದಿಕ್ಕು ಹಣೆಯಲ್ಲಿ ತಿಲಕವಿಲ್ಲದ ಸ್ತ್ರೀಯಂತೆ ಪ್ರಕಾಶಿಸುತ್ತಿಲ್ಲ) ಎಂಬ ಆದಿಕವಿಯ ನುಡಿಯು ಈ ಸಂದರ್ಭದಲ್ಲಿ ನೆನೆಪಿಗೆ ಬರುತ್ತದೆ. ತಾಳಿ, ಉರುಟು, ಬಳೆಗಳ ಜೊತೆಗೆ ಅದು ಸ್ತ್ರೀಯ ಸೌಮಂಗಲ್ಯದ ಚಿಹ್ನೆಯೂ ಸಹ ಆಗಿರುತ್ತದೆ. ಪತಿಯೇ ಸರ್ವಸ್ವ, ಅವನಿಲ್ಲದೇ ಜೀವನವೇ ಇಲ್ಲ ಎಂಬ ಧಾರ್ಮಿಕ ವಾತಾವರಣದಲ್ಲಿ ಜೀವಿಸುವ ಭಾರತೀಯ ಸ್ತ್ರೀಗೆ ಅವಳ ಸೌಭಾಗ್ಯವನ್ನು ಸೂಚಿಸುವ ಕುಂಕುಮವು ಆಳವಾದ ಭಾವಾರ್ಥವನ್ನು ತೆಗೆದುಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಕುಂಕುಮಕ್ಕೆ ಅಷ್ಟು ಮಹತ್ವ ಕೊಡಲು ಕಾರಣವೇನು, ಅದುಕೇವಲ ಭಾವನೆಯೋ ಅಥವಾ ಇನ್ನೂ ಆಳವಾದ ಕಾರಣವೇನಾದರೂ ಇದೆಯೋ ಎಂಬ ಪ್ರಶ್ನೆ ಏಳುತ್ತದೆ. ಅದರ ಅರ್ಥವು ಮನಸ್ಸಿಗೆ ಬಾರದಿರುವುದರಿಂದ, ಅದರ ಅರ್ಥವು ಸಮಾಜದಲ್ಲಿ ಜನಜನಿತವಾಗಿ ಅನೇಕ ವಿಧವಾದ ಕಲ್ಪನೆಗಳು ಪ್ರಚಲಿತವಾಗಿವೆ. ಕುಂಕುಮವನ್ನಿಟ್ಟುಕೊಳ್ಳದಿದ್ದರೆ ಪತಿಯ ಪ್ರಾಣಕ್ಕೇ ಅಪಾಯವುಂಟಾಗುತ್ತದೆಂಬ ನಂಬಿಕೆಯು ಅವುಗಳಲ್ಲಿ ಒಂದು. ಈ ನಂಬಿಕೆಯು ಪತಿಪ್ರಾಣಳಾದ ಭಾರತೀಯ ಮಹಿಳೆಯ ಭಾವಸಮೃದ್ಧಿಗೆ ಕನ್ನಡಿ ಹಿಡಿಯುತ್ತದೆ. ಆದುದರಿಂದ ಈ ನಂಬಿಕೆಯನ್ನು ನಾವು ಕಡೆಗಣಿಸಲಾರೆವು. ಆಳವಾದ ಪ್ರೀತಿಯು ಆಶೀರ್ವಾದರೂಪವು ಉಕ್ಕಿಹರಿದಾಗ ಅಂತಹ ಆಶೀರ್ವಾದಕ್ಕೆ ನಾವು ಹೇಗೆ ಬೆಲೆಯಿಲ್ಲ ಎನ್ನುವುದಿಲ್ಲವೋ ಹಾಗೆಯೇ, ಕುಂಕುಮದಲ್ಲಿ ಒಬ್ಬ ಸತೀಮಣಿಯು ಇಡುವ ಭಾವನೆಗೂ  ಸಹ ಅರ್ಥವಿಲ್ಲ ಎಂದು ಹೇಳಲಾಗುವುದಿಲ್ಲ.

ಆದರೆ ಭಾವನೆಗೆ ದ್ವಾರವೆಂದು ಹೇಳಿದುದರಿಂದ ಕುಂಕುಮದ ಅರ್ಥವನ್ನು ಹೊರಗೆಡಹಿದಂತಾಗುವುದಿಲ್ಲ.ಆಧುನಿಕ ಕಾಲದ ಬುದ್ಧಿವಂತರಿಗೆ ಅದರಿಂದ ವಿಶ್ವಾಸವುಂಟಾಗುವುದಿಲ್ಲ. " ಪ್ರಪಂಚದ ಎಲ್ಲ ದೇಶಗಳಲ್ಲಿಯೂ ವಿವಾಹಿತ ಸ್ತ್ರೀಯರು ಇರುತ್ತಾರೆ. ಅವರಾರೂ ಕುಂಕುಮವನ್ನು ಇಟ್ಟುಕೊಳ್ಳುವುದೇ ಇಲ್ಲ. ಅದರಿಂದ ಅವರ ಗಂಡಂದಿರು ಯಾರೂ ಸಾಯುವುದಿಲ್ಲ. ಇದು ಹಿಂದೂ ಜನರ ಮೂಢನಂಬಿಕೆಗಳಲ್ಲೊಂದು" ಎಂದು ಅವರು ಅಂದುಬಿಡುತ್ತಾರೆ. ವಸ್ತುತಃ ಕುಂಕುಮದ ಸಭ್ಯತೆಗೆ ಅಪರಿಚಿತರಾದ ವಿದೇಶೀ ಸ್ತ್ರೀಯರನ್ನು ನೋಡಿಯೇ ಹಿಂದೂ ಸ್ತ್ರೀಯರು ಕುಂಕುಮವನ್ನು ತ್ಯಾಗಮಾಡುತ್ತಿದ್ದಾರೆ. ಆದುದರಿಂದ ನಾವು ಕುಂಕುಮದ ಅರ್ಥವನ್ನು ಅರಿಯಬೇಕಾದರೆ ನಂಬಿಕೆಯಿಂದ ಅದರ ಹಿಂದಿರುವ ವಿಜ್ಞಾನದ  ಕಡೆಗೆ ತಿರುಗಬೇಕು.

ಕುಂಕುಮವು ಪುರುಷ ಮತ್ತು ಪ್ರಕೃತಿಗಳ ವಿಷಯದಲ್ಲಿ ಭಾರತೀಯ ಮಹರ್ಷಿಗಳು ತಂದ ದೃಷ್ಟಿಯನ್ನು ಸಂಕೇತಿಸುವ ಒಂದು ಚಿಹ್ನವಾಗಿರುತ್ತದೆ. ಎಲ್ಲಿಂದ ಎಲ್ಲಿಗೆ ಹೋದರೂ ನಾವು ಜೀವಸೃಷ್ಟಿಯು ಸ್ತ್ರೀ ಪುರುಷಾತ್ಮಕವಾಗಿರುವುದನ್ನು ನೋಡುತ್ತೇವೆ. ಹಾಗೆ ಇರುವುದರಿಂದಲೇ ಸೃಷ್ಟಿಯು ಮುಂದುವರಿದುಕೊಂಡು ಹೋಗಲು ಸಾಧ್ಯವಾಗಿರುತ್ತದೆ. ಅದರಲ್ಲಿ ಸ್ತ್ರೀಪುರುಷರ ಪಾತ್ರಗಳು ಬೇರೆ ಬೇರೆಯಾಗಿದ್ದರೂ ಒಂದು ಮತ್ತೊಂದಕ್ಕೆ ಪೋಷಕವಾಗಿರುತ್ತದೆ. ಒಂದು ಮತ್ತೊಂದನ್ನು ಅವಲಂಬಿಸಿರುತ್ತದೆ. ಪುರುಷನು ಬೀಜರೂಪ. ಸ್ತ್ರೀಯು ಆ ಬೀಜವನ್ನು ಧರಿಸುವ ಕ್ಷೇತ್ರರೂಪಿಣಿ. ಪುರುಷನು ಜನಕ, ಸ್ತ್ರೀಯು ಜನನಿ. ಹೊರಗಡೆ ದೃಷ್ಟಿಯಿಂದ ನೋಡಿದಾಗ, ಸೃಷ್ಟಿಕಾರ್ಯವು ಸ್ತ್ರೀಪುರುಷರೂಪರಾದ ವ್ಯಕ್ತಿಗಳು ಸ್ವೇಚ್ಛೆಯಿಂದ ಮಾಡುವ ಕೆಲಸವಾಗಿರುವಂತೆ ಕಂಡುಬರುತ್ತದೆ. ಆಳವಾಗಿ ವಿಚಾರಮಾಡಿದಾಗ, ಎಲ್ಲ ಕಾಲ ದೇಶಗಳಿಗೆ ಸೇರಿದ, ಎಲ್ಲ ವ್ಯಕ್ತಿಗಳೂ ಒಂದು ಅಚಿಂತ್ಯವಾದ, ಅನಾದಿಯಾದ ಮತ್ತು ಅನಿವಾರ್ಯವಾದ ಸೃಷ್ಟಿಶಕ್ತಿಯ ಆಟದ ಗೊಂಬೆಗಳು. ಇಚ್ಛೆಯಿರಲಿ ಅಥವಾ ಇಚ್ಛೆಯಿಲ್ಲದಿರಲಿ ಅದರ ಸಂಕಲ್ಪಕ್ಕೆ ಮತ್ತು ಶಕ್ತಿಗೆ ಬಾಗಿ ನಡೆಯುವುದಲ್ಲದೆ ಅವರ ಮುಂದೆ ಬೇರೆ ದಾರಿ ಇಲ್ಲ ಎಂಬುದು ಸ್ಪಷ್ಟಪಡುತ್ತದೆ. ಅವರೆಲ್ಲರೂ ಆ ಶಕ್ತಿಯ ರೂಪಾಂತರಗಳು.

ಒಂದೇ ಮೂಲಶಕ್ತಿಯು ಇಬ್ಬಗೆಯಾಗಿ ತನ್ನನ್ನು ವಿಭಾಗ ಮಾಡಿಕೊಂಡು ಈ ಸೃಷ್ಟಿಕಾರ್ಯವನ್ನು ನಡೆಸುತ್ತಿದೆ ಎಂಬುದು ಆ ಮಹರ್ಷಿಗಳ ನಿರ್ಣಯ. ಅವರು ಅದನ್ನು ಪ್ರಕೃತಿಪುರುಷ, ಶಿವಶಕ್ತಿ, ವಿಷ್ನುಲಕ್ಷ್ಮೀ ಮುಂತಾದ ಹೆಸರುಗಳಿಂದ ನಿರ್ದೇಶಿಸಿರುತ್ತಾರೆ. ಸೃಷ್ಟಿಯೆಲ್ಲವೂ ಪುಂಪ್ರಕೃತ್ಯಾತ್ಮಕರೂಪವಾಗಿರುತ್ತದೆ, ಶಿವಶಕ್ತ್ಯಾತ್ಮಕವಾಗಿರುತ್ತದೆ ಅಥವಾ ವಿಷ್ಣುಲಕ್ಷ್ಯಾತ್ಮಕವಾಗಿದೆ ಎಂಬುದು ಅವರ ಮತ. ಅದಕ್ಕೆ ಅವರು ಕೊಟ್ಟಿರುವ ಹಲವು ವಿವರಣೆಗಳು ಗಮನಾರ್ಹವಾಗಿರುತ್ತವೆ. ಅವರ ಅಭಿಪ್ರಾಯದಲ್ಲಿ ಸ್ತ್ರೀಯಾಗಿರಲಿ, ಪುರುಷನಾಗಿರಲಿ, ಶರೀರದ ಬಲಭಾಗ ಪುರುಷಭಾಗ, ಎಡಭಾಗ ಸ್ತ್ರೀಭಾಗ. ಅಷ್ಟೇ ಅಲ್ಲದೆ ಸೃಷ್ಟಿಗೆ ಮಾಧ್ಯಮವಾದ ಶರೀರವನ್ನು ಇನ್ನೂ ಆಳವಾದ ದೃಷ್ಟಿಯಿಂದ ನೋಡಿ, ಅದರಲ್ಲಿ ಶರೀರದ ಸಮಸ್ತ ಇಂದ್ರಿಯ ವ್ಯಾಪಾರಗಳಿಗೂ ಕಾರಣವಾದ ಮೂಲಾಧಾರದಿಂದ ಆಜ್ಞೆಯವರೆಗೆ ಇರುವ ಷಟ್ಚಕ್ರಗಳನ್ನು ಶಕ್ತಿಸ್ಥಾನವೆಂದೂ, ಅದರಿಂದ ಮೇಲಿರುವುದನ್ನು ಶಿವಸ್ಥಾನವೆಂದೂ ಅವರು ತಿಳಿಯುತ್ತಾರೆ. ಅದೇ ರೀತಿ ಶರೀರದಲ್ಲಿ ನಡೆಯುವ ಭೌತಿಕ ಮತ್ತು  ಮಾನಸಿಕ ಕಾರ್ಯಗಳೆಲ್ಲಕ್ಕೂ ಚಾಲಕ ಶಕ್ತಿಯಾದ, "ಹ" ಎಂದು ಶಬ್ದ ಮಾಡುತ್ತಾ ಹೊರಗೆ ಬರುವ ಮತ್ತು "ಸ" ಎಂದು ಶಬ್ದ ಮಾಡುತ್ತಾ ಒಳಗೆ ಹೋಗುವ, ಪ್ರಾಣವೂ ಸಹ ಪ್ರಕೃತಿ ಪುರುಷಾತ್ಮಕವಾದುದು, " ಹಂ ಪುಮಾನ್ ಪ್ರಕೃತಿಸ್ತು ಸಃ " ಎಂಬುದು ಅವರ ಮತ್ತೊಂದು ಮಹತ್ವಪೂರ್ಣವಾದ ಅನ್ವೇಷಣೆ. ಕಡೆಯದಾಗಿ ವಾಕ್ಕು ಪ್ರಕೃತಿ, ಅರ್ಥ ಪುರುಷ ಎಂಬ ನಿರ್ಣಯಕ್ಕೆ ಅವರು ಬಂದಿರುತ್ತಾರೆ.

ಶರೀರದ ರಚನೆ ಮತ್ತು ವ್ಯಾಪಾರ ಎರಡೂ ಎಲ್ಲಾ ಸ್ತರದಲ್ಲಿಯೂ ಶಿವಶಕ್ತ್ಯಾತ್ಮಕವಾದವು. ಶರೀರದಲ್ಲಿ ಗೂಢವಾಗಿರುವ ಶಿವಶಕ್ತಿಯರೇ ಅವಕ್ಕೆ ಮೂಲಕಾರಣರು ಎಂಬುದು ಮೇಲಿನ ವಿವರಗಳ ತಾತ್ಪರ್ಯ. ಆದರೆ ಋಷಿಗಳ ಸೃಷ್ಟಿ ವಿವೇಚನೆಯು ಅಲ್ಲಿಗೇ ನಿಲ್ಲಲಿಲ್ಲ. ಅವರು ಧ್ಯಾನಯೋಗದಿಂದ ತಮ್ಮ ಉಸಿರಿಗೆ ಉಸಿರೂ, ಜೀವಕ್ಕೆ ಜೀವವೂ ಆದ  ಶಿವಶಕ್ತಿಯರನ್ನು ತಮ್ಮ ಶರೀರವೆಂಬ ದೇಗುಲವನ್ನು ಪ್ರವೇಶಿಸಿ ಸಾಕ್ಷಾತ್ಕರಿಸಿಕೊಂಡವರಾಗಿದ್ದರು. ಉಪನಿಷತ್ತುಗಳಲ್ಲಿ "ಬ್ರಹ್ಮರಂಧ್ರವೆಂಬ ಮಹಾಸ್ಥಾನದಲ್ಲಿ ಶಿವೆಯು ಸರ್ವದಾ ಇರುತ್ತಾಳೆ. ಭ್ರೂಮಧ್ಯದಲ್ಲಿ ಚಿಚ್ಛಕ್ತಿಯು ಇರುತ್ತಾಳೆ. ಲಲಾಟಾಗ್ರಭಾಗದಲ್ಲಿರುವ ವ್ಯೋಮಾಂಬುಜದಲ್ಲಿ ಮಾಯಾಶಕ್ತಿಯು ಇರುತ್ತಾಳೆ. ನಾಮರೂಪಳಾದ ಪರಾಶಕ್ತಿಯು ಹಣೆಯ ಮಧ್ಯದಲ್ಲಿರುತ್ತಾಳೆ. ಮನೋರೂಪಳಾದ ಬಿಂದುಮಯೀ ಶಕ್ತಿಯು ಹಣೆಯ ಕೆಳಭಾಗದಲ್ಲಿರುತ್ತಾಳೆ. ಮನೋರೂಪವಾದ ಬಿಂದುವಿನ ಮಧ್ಯದಲ್ಲಿ ಜೀವಾತ್ಮನು ಸೂಕ್ಷ್ಮರೂಪದಲ್ಲಿರುತ್ತಾನೆ. ಭ್ರೂಮಧ್ಯಾಕಾಶದಲ್ಲಿ ಸಚ್ಚಿದಾನಂದ ತೇಜಸ್ಸಿನ ಪುಂಜವಾದ ಪರಬ್ರಹ್ಮನನ್ನು ಯೋಗಿಯು ನೋಡುತ್ತಾನೆ. ಭ್ರೂಮಧ್ಯದಲ್ಲಿರುವ ಬಿಲದಲ್ಲಿ ದೃಷ್ಟಿಯನ್ನಿರಿಸಿದಾಗ ಎಲ್ಲಕ್ಕಿಂತಲೂ ಮೇಲಿರುವ ಒಳ ಬೆಳಕು ಕಂಡುಬರುತ್ತದೆ" ಮುಂತಾದ ಮಾತುಗಳನ್ನು  ಓದುತ್ತೇವೆ. ಈ ಮಾತುಗಳಲ್ಲಿ ಪುರಾತನ ಭಾರತೀಯ ಮಹರ್ಷಿಗಳು ಮಾಡಿದ ಜ್ಞಾನೋಪಾಸನೆಯ ಸಾರವು ಅಡಗಿದೆ. ಅವು ಜ್ಞಾನದ ಪರಮೋನ್ನತಸ್ಥಿತಿಯನ್ನು ಮುಟ್ಟಿದಾಗ ಕಾಣುವ ದರ್ಶನ ಮತ್ತು ಉಂಟಾಗುವ ಅನುಭವಗಳನ್ನು ಹೇಳುತ್ತವೆ. ಮನುಷ್ಯರ ಅಸ್ತಿತ್ವಕ್ಕೆ ಮೂಲವಾದ ಪರಮಶಕ್ತಿಯ ಕಡೆಗೆ ನಿರ್ದೇಶನ ಮಾಡುತ್ತವೆ.

ಅವನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿ ಮಾಡಿಕೊಂಡು ಒಂದು ಸುಸಂಸ್ಕೃತವಾದ ನಾಗರೀಕತೆಯನ್ನು ರಚಿಸಿಕೊಂಡಿದ್ದು ಭಾರತೀಯರ ವೈಶಿಷ್ಟ್ಯ. ಅವನ್ನು ಸಾಧಿಸಿ ಅವರು ತಮ್ಮ ಜೀವನವನ್ನು ಸತ್ಯಮಯವಾಗಿಯೂ, ಮಂಗಳಮಯವಾಗಿಯೂ ಮತ್ತು ಸುಂದರವಾಗಿಯೂ ಮಾಡಿಕೊಂಡರು. ಅವುಗಳ ನೆನೆಪು ಮರೆಯದಂತೆ ಇರುವುದಕ್ಕೋಸ್ಕರವಾಗಿ ಪದೇ ಪದೇ ಅವುಗಳ ಜ್ಞಾಪಕವನ್ನುಂಟುಮಾಡುವ ಚಿಹ್ನೆಗಳಿಂದ ತಮ್ಮ ಶರೀರವನ್ನು ಅಲಂಕರಿಸಿಕೊಂಡರು. ಅವಕ್ಕೆ ಅನುಗುಣವಾಗಿ ತಮ್ಮ ಉಡುಗೆ ತೊಡಿಗೆಗಳನ್ನು ಬಹಳ ಕುಶಲತೆಯಿಂದ ಅಳವಡಿಸಿಕೊಂಡರು. ತಾವು ಸಾಧಿಸಿದ್ದ ಅಚ್ಚನ್ನು ಅವುಗಳ ಮೇಲೆ ಒತ್ತಿದರು.

ಆ ರೀತಿ ಅವರು ಬಳಕೆಗೆ ತಂದ ಚಿಹ್ನೆಗಳ ಪೈಕಿ ಕುಂಕುಮುವೂ ಒಂದು. ಅದು ಸೃಷ್ಟಿಯಲ್ಲಿ ಪ್ರಕೃತಿ ರೂಪಿಣಿಯಾದ ಸ್ತ್ರೀಯಪಾತ್ರವನ್ನು ಸಮಗ್ರವಾಗಿ ಮತ್ತು ಸಾರಭೂತವಾಗಿ ಪ್ರತಿಬಿಂಬಿಸುವ ಚಿಹ್ನೆಯಾಗಿದೆ. ಅದನ್ನು ಇಡುವುದು ಚಿಚ್ಛಕ್ತಿಯ ಸ್ಥಾನವಾದ ಭ್ರೂಮಧ್ಯ ಚಕ್ರದ ನೇರದಲ್ಲಿ. ಮನೋರೂಪಳಾದ ಬಿಂದುಮಯೀ ಶಕ್ತಿಯು ಇರುವ ಸ್ಥಾನದಲ್ಲಿ. ಆ ರೀತಿ ಮಾಡುವುದರ ಮೂಲಕ ಭಾರತೀಯ ನಾರಿಯು ಯಾವ ರಹಸ್ಯಮಯವಾದ ಕೇಂದ್ರದಿಂದ ತಾಯ್ತನ ರೂಪವಾದ ತನ್ನ ಸಾಮರ್ಥ್ಯವು ಉತ್ಪನ್ನವಾಗುತ್ತದೆಯೋ ಆ ದೈವೀಕೇಂದ್ರವನ್ನು ನಿರ್ದೇಶಿಸುತ್ತಾಳೆ. ಈ ವಿಜ್ಞಾನದ ಅರಿವಿನಿಂದ ಕೂಡಿಯೇ ಎಲ್ಲರೂ ಕುಂಕುಮವನ್ನಿಟ್ಟುಕೊಳ್ಳುತ್ತಾರೆಯೇ ಎಂದು ಒಬ್ಬರು ಪ್ರಶ್ನಿಸಬಹುದು. ಅದರ ಪರಿಚಯವಿಲ್ಲದಿದ್ದರೂ, ಆ ಸ್ಥಾನವೇ ಅಂತಹದುದಾದುರಿಂದ, ಮನಸ್ಸಿನ ಮೇಲೆ ಅದು ತನ್ನ ಪರಿಣಾಮವನ್ನುಂಟು ಮಾಡುತ್ತದೆಂದು ಹೇಳಬಹುದು. ಪ್ರಕೃತಿರೂಪವಾದ ಚೈತನ್ಯಶಕ್ತಿಯು ಕುಂಕುಮವನ್ನಿಡುವವರಲ್ಲಿ ಮತ್ತು ಇಡದವರಲ್ಲಿ ಇಬ್ಬರಲ್ಲಿಯೂ ಕೆಲಸ ಮಾಡುತ್ತದೆ. ಇಡುವವರಲ್ಲಿ ಸಂಸ್ಕೃತಿ ಇದೆ, ಇಡದವರಲ್ಲಿ ಸಂಸ್ಕೃತಿ ಇಲ್ಲ ಎಂದು ಹೇಳಬೇಕಾಗುತ್ತದೆ. ಕ್ರೈಸ್ತ ಪಾದ್ರಿಗಳು "ಕುಂಕುಮವು ಶೋಣಿತವನ್ನು ಸೂಚಿಸುತ್ತದೆ. ಹಿಂದೂ ಸ್ತ್ರೀಯರು ನಾಚಿಕೆಯಿಲ್ಲದೆ ಅದನ್ನು ತಮ್ಮ ಹಣೆಯ ಮೇಲೆ ಧರಿಸಿ ತಮ್ಮ ಕಾಮವಾಸನೆಯನ್ನು ಪ್ರಕಟಿಸುತ್ತಾರೆ" ಎಂದು ಅಪಪ್ರಚಾರ ಮಾಡಿರುತ್ತಾರೆ. ಸ್ತ್ರೀಯ ಸೌಭಾಗ್ಯವಿರುವುದು ಅವಳ ತಾಯ್ತನದಲ್ಲಿ, ಅದರ ಭೌತಿಕರೂಪವಾದ ಶೋಣಿತವು ಸೃಷ್ಟಿಯಲ್ಲಿ ಅಮೂಲ್ಯವಾದ ಸ್ಥಾನವನ್ನಿರಿಸಿಕೊಂಡಿರುತ್ತದೆಂಬುದರಲ್ಲಿ ಸಂದೇಹವಿಲ್ಲ. ಆದರೆ ಹಿಂದೂಸ್ತ್ರೀಯು ಕುಂಕುಮವನ್ನಿಟ್ಟುಕೊಂಡಾಗ ಚಿಂತಿಸುವುದು ಶೋಣಿತವನ್ನು ಕುರಿತಲ್ಲ. ಅವಳು ಅದನ್ನಿಡುವುದು ವಿಶ್ವದ ಮಾತಾಪಿತೃಗಳಾದ ಪಾರ್ವತೀಪರಮೇಶ್ವರರಿರುವ, ಅನ್ವರ್ಥವಾದ ಹೆಸರುಳ್ಳ ಆಜ್ಞಾಚಕ್ರದಲ್ಲಿ. ಆ ಜಾಗದಲ್ಲಿ ಕುಂಕುಮವನ್ನಿಡುವುದರಿಂದಲೇ ಅವಳು ತನ್ನ ಮತ್ತು ಎಲ್ಲರ ಬಾಳಿಗೆ ಕಾರಣರಾದ ಆದಿದಂಪತಿಗಳನ್ನು ಸ್ಮರಿಸುತ್ತಾಳೆಂದು ಹೇಳಬಹುದು. ಅದು ಅವಳು ಅವರಿಗೆ ಸಲ್ಲಿಸುವ ಪೂಜೆ,ಉಪಚಾರ.  

ಕುಂಕುಮವು ಬರೀ ಸೃಷ್ಟಿವಿಜ್ಞಾನವನ್ನು ಮಾತ್ರ ಪ್ರತೀಕಿಸುವ ಚಿಹ್ನವಲ್ಲ, ಅದರ ಕಲ್ಪವನ್ನೂ ಮತ್ತು ಅದರ ವಿಷಯದಲ್ಲಿ ಸಮಾಜದಲ್ಲಿ ಬಂದಿರುವ ಪರಂಪರೆಗಳನ್ನೂ ನೋಡಿದಾಗ ಅದು ಜ್ಞಾನ ಮತ್ತು ಯೋಗಗಳನ್ನೂ ತನ್ನಲ್ಲಿ ಒಳಗೊಂಡಿರುವುದು ಸ್ಪಷ್ಟವಾಗುತ್ತದೆ. ಬರೀ ಹಣೆಯಲ್ಲಿ ಪೂಜೆ ಇತ್ಯಾದಿ ಶುಭಕರ್ಮಗಳನ್ನು ಮಾಡಬಾರದೆಂಬ ಪರಂಪರೆ ಬಂದಿರುತ್ತದೆ. ಕಾರಣ ಭಾರತೀಯರ ದೃಷ್ಟಿಯಲ್ಲಿ ಆಜ್ಞಾಚಕ್ರ ಮತ್ತು ಅದರ ಮೇಲಿನ ಜಾಗಗಳು ಪ್ರಬೋಧಗೊಳ್ಳದಿದ್ದರೆ ಪೂಜಾಕಾರ್ಯವು ಸಂಪನ್ನವಾಗುವುದೇ ಇಲ್ಲ. ಕುಂಕುಮವು ಬಿಂದುರೂಪವಾಗಿರುತ್ತದೆ ಅಥವಾ ತಿಲಕ ರೂಪವಾಗಿರುತ್ತದೆ. "ಬಿಂದುರೀಶ್ವರಸಂಜ್ಞಃ" ತಿಲಕವಂತೂ ದೀಪಶಿಖೆಯ ಆಕಾರದಲ್ಲಿದ್ದು, ಅಧ್ಯಾತ್ಮದೀಪವನ್ನೇ ಸಂಕೇತಿಸುತ್ತದೆ. ಸರಿಯಾದ ಮನೋಧರ್ಮದಿಂದ ಕೂಡಿ ಕುಂಕುಮವನ್ನು ಧರಿಸಿದ ಮಾತ್ರದಿಂದಲೇ ಒಬ್ಬ ಸ್ತ್ರೀಯು ಪವಿತ್ರಳಾಗುತ್ತಾಳೆಂಬುದರಲ್ಲಿ ಸಂದೇಹವಿಲ್ಲ. ಒಬ್ಬ ಸ್ತ್ರೀಯ ವಯಸ್ಸು  ಮತ್ತು ಅವಸ್ಥೆಗೆ ಅನುಗುಣವಾಗಿ ಕುಂಕುಮದ ಸ್ಥಾನ, ವರ್ಣ ಮತ್ತು ಆಕಾರಗಳಲ್ಲಿ ಸಹ ವ್ಯತ್ಯಾಸವಾಗುತ್ತದೆ. ತನ್ನ ತಾಯ್ತನದ ಕರ್ತವ್ಯವನ್ನು ನಿರ್ವಹಣೆ ಮಾಡಿ ಮುಗಿಸಿದನಂತರ, ಸ್ತ್ರೀಗೆ ಸಹ ತನ್ನ ಆತ್ಮೋದ್ಧಾರ ಮಾಡಿಕೊಳ್ಳುವ ಸಮಯ ಬರುತ್ತದೆ. ಅದಕ್ಕೆ ಅನುಗುಣವಾಗಿ ಅವಳು ಕುಂಕುಮದಲ್ಲಿ ವ್ಯತ್ಯಾಸ ಮಾಡಿಕೊಳ್ಳುತ್ತಾಳೆ. ಜ್ಞಾನನೇತ್ರಕ್ಕೆ ಕಾಣುವ ದಿವ್ಯವಾದ ಆಕಾರಗಳಿಂದ ತನ್ನ ಹಣೆಯನ್ನು ಅಲಂಕರಿಸಿಕೊಳ್ಳುತ್ತಾಳೆ. ಪರಂಪರಾಗತವಾಗಿ ಬಂದ ಆಕಾರಗಳನ್ನು ಹಣೆಯಲ್ಲಿ ಏಕಾಗ್ರವಾದ ಮನಸ್ಸಿನಿಂದ ಧರಿಸುವುದರ ಮೂಲಕ, ಅವುಗಳ ಮೂಲವಿರುವೆಡೆಗೆ ಹೋಗುವ ಆಶಯದಿಂದ ಕೂಡಿರುತ್ತಾಳೆ.      

ಪತಿಯು ಮೃತನಾದಾಗ ಕುಂಕುಮವನ್ನಿಟ್ಟುಕೊಳ್ಳುವುದನ್ನು ನಿಲ್ಲಿಸಿ ಬಿಡುವ ಪದ್ಧತಿ ಸಹ ಇರುತ್ತದೆ. ಕಾರಣ "ಪುರುಷ" ರೂಪನಾದ ಪತಿಯು ಮರೆಯಾದನಂತರ " ಪ್ರಕೃತಿ"  ರೂಪಳಾದ ಸತಿಗೆ ಸೃಷ್ಟಿಯಲ್ಲಿ ಮಾಡುವ ಕರ್ತವ್ಯವಿಲ್ಲ. ಆದಕಾರಣ ಆನಂತರ ಸಂಪ್ರದಾಯಾನುಸಾರ ಬೇರೆ ಬೇರೆ ಚಿಹ್ನಗಳು ಅವಳ ಹಣೆಯಲ್ಲಿ ಕುಂಕುಮದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.

ಹೀಗೆ ಕುಂಕುಮವು ಆಳವಾದ ಆಧ್ಯಾತ್ಮಿಕ  ಮತ್ತು ಧಾರ್ಮಿಕ ಅರ್ಥವನ್ನು ಹೊತ್ತ ಚಿಹ್ನವಾಗಿದೆ. ಅದನ್ನು ತ್ಯಾಗ ಮಾಡುತ್ತಿರುವವರು ತಮ್ಮ ಆಧ್ಯಾತ್ಮಿಕ ಸಂಸ್ಕೃತಿಯಿಂದ ತಮ್ಮನ್ನು ಬೇರೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹಣೆ ಎಷ್ಟು ಶೂನ್ಯವಾಗಿರುತ್ತದೆಯೋ ಮನಸ್ಸೂ ಆಷ್ಟೇ ಶೂನ್ಯವೆಂಬುದನ್ನು ಅವರು ಜ್ಞಾಪಿಸಿಕೊಳ್ಳುವ ಮಾರ್ಗವನ್ನು ಹಿಡಿಯುತ್ತಿದ್ದಾರೆ. ಅದು ವಿಷಾದಕ್ಕೆ ವಿಷಯವೆಂಬುದರಲ್ಲಿ ಸಂದೇಹವಿಲ್ಲ. 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ನವಂಬರ 1981 ರಲ್ಲಿ  ಪ್ರಕಟವಾಗಿದೆ.  
 

Saturday, July 25, 2020

ಪರಿಪೂರ್ಣ ಜ್ಞಾನ ಸಂಪಾದನೆ (Paripoorna jnana Sampadane)

ಲೇಖಕರು : ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

 

ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ |
ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ತು || -ನೀತಿಸಾರ ೯

ಅರ್ಥ-ಶಿಷ್ಯನಾದವನು ಜ್ಞಾನವನ್ನು ಆಚಾರ್ಯರಿಂದ ಕಾಲುಭಾಗ ಇನ್ನು ಕಾಲುಭಾಗವನ್ನು ತನ್ನ ಮೇಧಾಬಲದಿಂದ ಇನ್ನು ಕಾಲು ಭಾಗವನ್ನು ತನ್ನ ಸಹಪಾಠಿಗಳಿಂದ ಇನ್ನುಳಿದ ಕಾಲುಭಾಗವನ್ನು ಮುಂದಿನ ಕಾಲದಲ್ಲಿ ಬರುವ ಅನುಭವದಿಂದ ಪಡೆಯುತ್ತಾನೆ.  

ವಿವರಣೆ - ಪರಿಪೂರ್ಣಜ್ಞಾನದಿಂದ ಮಾತ್ರ ಪೂರ್ಣಜೀವನ ಸಾಧ್ಯ. ನೂರಕ್ಕೆ ನೂರು ಪ್ರತಿಶತ ಜ್ಞಾನಸಂಪಾದನೆ ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಯಾವುದೇ ವಿಷಯದ ಪರಿಪೂರ್ಣ ಜ್ಞಾನ ನಮಗೆ ಬರಬೇಕಾದರೆ 'ಶ್ರವಣ ಮನನ ನಿಧಿಧ್ಯಾಸನ' ಎಂಬ ಮೂರು ಸ್ತರದ ಪ್ರಯತ್ನ ಬೇಕು. ಆತ್ಮಸ್ವರೂಪದ ಸಾರವನ್ನು ಅರಿಯಬೇಕಾದರೆ ಆ ವಿಷಯದ ಬಗ್ಗೆ ಚೆನ್ನಾಗಿ ಕೇಳಬೇಕು. ಅಂದರೆ ನೂರಕ್ಕೆ ನೂರು ಗಮನವಿಟ್ಟು ಕೇಳಿದಾಗ ನಮಗೆ ತಿಳಿಯುವುದು ಕೇವಲ ಇಪ್ಪತ್ತೈದು ಭಾಗ ಮಾತ್ರ. ನೂರಕ್ಕೆ ನೂರು ಕೇಳಿಸಿಕೊಂಡಾಗ ಮಾತ್ರ ಅದರ ಬಗ್ಗೆ ನಮ್ಮ ಮೇಧಾಬಲದಿಂದ ಮನನ ಮಾಡಲು ಸಾಧ್ಯ. ಆಗ ನಮಗೆ ಇನ್ನು ಇಪ್ಪತ್ತೈದು ಅಂದರೆ ಐವತ್ತು ಭಾಗ ಅರಿವಾಗುತ್ತದೆ. ಶ್ರವಣ ಮತ್ತು ಮನನದ ಬಲದಿಂದ ಅದರ ಬಗ್ಗೆ ಆಳವಾದ ಚಿಂತನೆಗೆ ಸಾಧ್ಯ. ಇದನ್ನು ಸಹಪಾಠಿಗಳ ಜೊತೆ ಸೇರಿ ಮಾಡಬೇಕು. ತಮಗೆ ಗೊತ್ತಾದ ವಿಷಯಗಳನ್ನು ಹಂಚಿಕೊಂಡು ಗೊತ್ತಾಗದ ವಿಷಯವನ್ನು ಇತರರಿಂದ ಚರ್ಚೆ ಮಾಡಿ ತಿಳಿದಾಗ ಇನ್ನುಳಿದ ಕಾಲು ಭಾಗ ಸೇರಿದರೆ ನೂರಕ್ಕೆ ಎಪ್ಪತ್ತೈದರಷ್ಟು ಜ್ಞಾನವನ್ನು ಸಂಪಾದಿಸಬಹುದು. ಇನ್ನುಳಿದ ಜ್ಜಾನವನ್ನು ನಮ್ಮ ಅನುಭವದಿಂದ ಪಡೆಯಬೇಕು. ಹೀಗೆ ಪರಿಪೂರ್ಣವಾದ ಅರಿವನ್ನು ಸಂಪಾದಿಸಲು ಪಾಠವನ್ನು ಕೇಳುವುದು ತಾನು ಸ್ವತಃ ಅದರ ಬಗ್ಗೆ ಚಿಂತಿಸುವುದು ಮತ್ತು ತನ್ನ ಸಹಪಾಠಿಗಳಿಂದ ಚರ್ಚೆ ಮಾಡುವುದು ಇವೆಲ್ಲದರಲ್ಲೂ ನೂರಕ್ಕೆ ನೂರು ಭಾಗ ಕೂಡಿಬಂದಾಗ ಮಾತ್ರ ಸಾಧ್ಯ. ನಾವು ಆಚಾರ್ಯರಿಂದ ಕೇಳುವುದರಲ್ಲೆ ನೂರಕ್ಕೆ ಹತ್ತೋ ಇಪ್ಪತ್ತೋ ಐವತ್ತೋ ಹೀಗೆ ನ್ಯೂನತೆ ಉಂಟಾದರೆ ಫಲಿತಾಂಶವೂ ನೂರಕ್ಕೆ ನೂರು ಸಿಗಲು ಸಾಧ್ಯವೇ ಇಲ್ಲ ಎಂಬ ಎಚ್ಚರಿಕೆಯನ್ನೂ ಈ ಸೂಕ್ತಿ ತಿಳಿಸುವುದು.

ಸೂಚನೆ:  25/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.   

ನಾಗಪೂಜೆ ಎಷ್ಟು ಅರ್ಥಪೂರ್ಣ ! (Naagapooje Estu Arthapoorna !)

ಲೇಖಕರು : ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)




ಶ್ರಾವಣ ಶುಕ್ಲ ಪಂಚಮಿಯು  ನಾಗಪಂಚಮೀ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗಪೂಜೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಕೇಳುತ್ತೇವೆ.

ತನ್ನ ಬುದ್ಧಿಸಾಮರ್ಥ್ಯಗಳಿಂದ ನಿಸರ್ಗದ ಆಳ-ಅಗಲಗಳ ಅಳತೆಯನ್ನು ಮಾಡುತ್ತಾ ಅನೇಕ ರಂಗಗಳಲ್ಲಿ ಯಶಸ್ಸನ್ನು ಸಾಧಿಸಿದ ಮಾನವನೆಲ್ಲಿ? ತಾನು ಹುಟ್ಟಿದಂದಿನಿಂದ ನಿಸರ್ಗವಿಟ್ಟಂತೆಯೇ ಇರುವ ಯಾವ ಹೆಗ್ಗಳಿಕೆಯೂ ಇಲ್ಲದ ನಾಗವೆಲ್ಲಿ? ಅಂತಹ ಕ್ಷುದ್ರ ವಿಷಜಂತುವನ್ನು ನಿಸರ್ಗದ ಮಹಾನ್ವೇಷಕನಾದ ಮಾನವನು  ಪೂಜಿಸುವುದು ಮನುಕುಲಕ್ಕೇ ಅಪಮಾನವಲ್ಲವೇ?

ನಾಗಪೂಜೆ ಹೇಗೆ ಸಮರ್ಥನೀಯ? ಜೀವನಕ್ಕೆ ಅದು ಯಾವ ಮೇಲ್ಮೆಯನ್ನು ತರುತ್ತದೆ? ನಾಗಪೂಜೆಯು,  ಕ್ಷುದ್ರ ವಿಷಜಂತುವಿನ ಮೂಢ ಆರಾಧನೆಯೇ ಆದರೆ ಅದನ್ನು ಕೈಬಿಡುವುದೇ ಲೇಸು. ಇದಲ್ಲದೇ ವಸ್ತುನಿಷ್ಠವಾದ ವಿಷಯಗಳೂ ಆ ಪೂಜೆಯಲ್ಲಿವೆ ಎಂಬುದಾದರೆ ಅಂತಹ ಮೌಲಿಕವಾದ ವಿಷಯಗಳು ಬೆಳಕಿಗೆ ಬರಬೇಕಾಗುತ್ತದೆ. ಮಹರ್ಷಿ ಹೃದಯ ವೇದಿಗಳಾದ ಶ್ರೀರಂಗ ಮಹಾಗುರುಗಳ ನೋಟದಿಂದ ಇಷ್ಟು ಸಣ್ಣ ಲೇಖನದಲ್ಲಿ ಎಷ್ಟನ್ನು ಹೇಳಲು ಸಾಧ್ಯವೋ ಅಷ್ಟನ್ನು ಮಾತ್ರ ಗಮನಿಸೋಣ.

ಮಹರ್ಷಿ ಪ್ರಣೀತ ಆಚರಣೆ:

ಜೀವನವನ್ನು, ಒಳತುಂಬುನೋಟದಿಂದ ಅನ್ವೇಷಿಸಿದಾಗ ಬಂದ ನಿಷ್ಕರ್ಷೆಯಿಂದ ಜೀವನದ ನಡವಳಿಕೆಗಳನ್ನು ರೂಪಿಸಿದ ನಮ್ಮ ಸನಾತನ ಭಾರತೀಯ ಮಹರ್ಷಿಗಳಿಂದಲೇ ಈ ನಾಗಪೂಜೆಯೂ ರೂಪವನ್ನು ತಳೆದಿದೆ ಎಂಬುದನ್ನು ನಾವು ಗಮನಿಸಬೇಕು. ಅವರು ಪೂಜಿಸಿದ ಆ ನಾಗ ಕೇವಲ ಕ್ಷುದ್ರಜಂತು ಮಾತ್ರವಲ್ಲ ಎನ್ನುವುದೂ ಅಷ್ಟೇ ಸತ್ಯವಾದ ವಿಷಯ. ಹಾಗಾದರೆ ಯಾವುದು ಆ ನಾಗ? ಎಲ್ಲಿದೆ?

ನಾಗ-ಕುಂಡಲಿನೀ

ಪ್ರತಿ ಜೀವಿಗಳ ಮೂಲಾಧಾರ ಎಂಬ ಶರೀರದ ಕೇಂದ್ರದಲ್ಲಿ ಸುಪ್ತವಾಗಿ ಸುತ್ತು ಹಾಕಿಕೊಂಡಿರುವ ಕುಂಡಲಿನೀ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯೇ ಅವರು ಗುರುತಿಸಿದ ನಾಗ ಶಕ್ತಿ. ಅದು ಮೆದುಳುಬಳ್ಳಿಯಾಗಿ ವಿಕಾಸಗೊಂಡು ನಂತರ ಬೆನ್ನುಮೂಳೆಯಾಗುವ ಸುಷುಮ್ನೆಯೇ ಜೀವಿಯ ಇಹ ಮತ್ತು ಪರಗಳಿಗೆ ಆಧಾರವಾದ ಶಕ್ತಿಯನ್ನೊದಗಿಸುವ ಕೇಂದ್ರ. ನಮ್ಮ ಭೌತಿಕ ಜೀವನಕ್ಕೆ ಅಗತ್ಯವಾದ ಕೇಂದ್ರಗಳೂ ಆ ಮೂಳೆಯ ಪರ್ವಸ್ಥಾನದಿಂದಲೇ ಅರಳುತ್ತವೆಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಬೆನ್ನೆಲುಬೇ ಜೀವನದ ಆಧಾರ ಎನ್ನುವ ಮಾತೂ ಜನಜನಿತವಾಗಿದೆ.

ಶಂಕರ ಭಗವತ್ಪಾದರು ತಮ್ಮ ಯೋಗತಾರಾವಳಿಯಲ್ಲಿ ಆ ನಾಗನನ್ನು ಹೀಗೆ ವರ್ಣಿಸುತ್ತಾರೆ:

"ಉಡ್ಯಾಣ, ಜಾಲಂಧರ, ಮೂಲ ಎಂಬ ಬಂಧಗಳಿಂದ ನಾಗ ಶಕ್ತಿಯು ಎಚ್ಚರಗೊಳಿಸಲ್ಪಡುತ್ತದೆ. ಆಗ ಹಿಮ್ಮುಖವಾಗಿ ಸುಷುಮ್ನೆಯನ್ನು ಪ್ರವೇಶಿಸಿದ ಪ್ರಾಣಶಕ್ತಿಯು ತನ್ನ ಗತಾಗತಿಯನ್ನು ಬಿಡುತ್ತದೆ" ಎಂದು.

ಜೀವನದ ಕಟ್ಟುಗಳಿಂದ ಪಾರಾಗಲು ಕೆಲವು ಚೌಕಟ್ಟಿಗೆ ಒಳಪಡಬೇಕಾಗುತ್ತದೆ. ಮೂಲಬಂಧವೆಂಬುದು ಪೃಷ್ಠಾಸ್ಥಿಮೂಲದಲ್ಲಿ ಏರ್ಪಡುವ ಒಂದು ಕಟ್ಟು. ಉಡ್ಯಾಣಬಂಧವು ಉದರ ಅಥವಾ ನಾಭಿದೇಶದಲ್ಲಿ ಏರ್ಪಡುವ ಕಟ್ಟು. ಜಾಲಂಧರವೆಂಬುದು ಕಂಠಪ್ರದೇಶದಲ್ಲಿ ಏರ್ಪಡುವ ಒಂದು ಕಟ್ಟು. ಈ ಮೂರೂ ಕಟ್ಟುಗಳೂ ಏರ್ಪಟ್ಟಾಗ ಆ ಸಂದರ್ಭದಲ್ಲಿ ಏಳುವ ನಾಗಶಕ್ತಿ, ಕುಂಡಲಿನೀ ಶಕ್ತಿ. ಅದುವೇ ಅವರು ಪೂಜಿಸಿದ ನಾಗಶಕ್ತಿ. ತಮ್ಮ ಒಳಮುಖಜೀವನದ ನಡೆಯಿಂದ ಸುಷುಮ್ನೆಯನ್ನು ಪ್ರವೇಶಿಸುವ ಸಾಹಸಕ್ಕಿಳಿದು, ಆ ಬಗ್ಗೆ ಸೂಕ್ತ ಮಾರ್ಗದರ್ಶನ, ಗುರುವಿನ ಅನುಗ್ರಹವನ್ನು ಪಡೆದು ಸಾಧನೆ ಮಾಡುವವರಿಗೆ ಪ್ರಾಣಶಕ್ತಿಯು ಸುಷುಮ್ನೆಯಲ್ಲಿ ಪ್ರವೇಶಿಸತೊಡಗಿದಾಗ ಆ ಸುಪ್ತನಾಗವು ಎಚ್ಚರಗೊಳ್ಳುತ್ತದೆ ಮತ್ತು ತನ್ನ ಸುತ್ತುಗಳನ್ನು ಬಿಚ್ಚುತ್ತದೆ. ಆ ಶಕ್ತಿಯು ಶರೀರದ ಆರೂ ಕೇಂದ್ರಗಳನ್ನು ಭೇದಿಸಿಕೊಂಡು ಏಳನೆಯದಾದ ಸಹಸ್ರಾರವೆಂಬ ಪರಮ ಆನಂದದ ಎಡೆಯಲ್ಲಿ ನೆಲೆ ನಿಲ್ಲುತ್ತದೆ.

ಹೀಗೆ ಅವರು ಆರಾಧಿಸಿರುವ ನಾಗ ಹೊರ ವಿಷಜಂತುವಲ್ಲ. ಜೀವನಕ್ಕೆ ಚೈತನ್ಯವನ್ನೆರೆಯುವ ಜೀವನದ ಸಾರವಾದ ಶಕ್ತಿ. ಅದರ ಹಾದಿ ಹಿಡಿದು ಹೊರಟಾಗ ಜೀವಿಗಳನ್ನು ನೆಲೆ ಮುಟ್ಟಿಸಬಲ್ಲ ಮಹಾಶಕ್ತಿ. ಆ ಸುಷುಮ್ನಾಂತರ್ಗತವಾದ ಮಹಾಶಕ್ತಿಯೇ ಜೀವನದ ಒಳಹೊರ ರಹಸ್ಯಗಳನ್ನು ಬಿಚ್ಚಿಕೊಡುವ ಭಂಡಾರವಾದುದರಿಂದಲೇ ಅದರ ಆರಾಧನೆ. ಒಳಗೆ ಪ್ರಣವರೂಪವಾಗಿ ಮೊಳಗುವ ಮಹಾಶಕ್ತಿಯೂ ಅದೇ.

ನಾಗಪಂಚಮಿಯ ದಿನ ಅಂತಹ ನಾಗಪೂಜೆಗೆ ಬೇಕಾದ ಧರ್ಮವು ಕಾಲದಲ್ಲಿಯೇ ಕೂಡಿಬರುವುದರಿಂದ ಅಂದು ಮಾಡುವ ಪೂಜೆಗೆ ವಿಶೇಷತೆಯಿರುವುದು. ಆ ಪೂಜೆಯ ವ್ಯವಸ್ಥೆಯಲ್ಲಿಯೂ ರಹಸ್ಯವಿದೆ. ಆ ಶಕ್ತಿಯು ಯಾವ ಅಮೃತ ರಸವನ್ನು ಚಂದ್ರಮಂಡಲದಿಂದ ಒಸರುತ್ತದೆಯೋ ಅದಕ್ಕೆ ಪ್ರತೀಕವಾದ, ಅಮೃತವೆಂದೇ ಹೆಸರು ಪಡೆದಿರುವ ಹಾಲು ತುಪ್ಪಗಳಿಂದಲೇ ಅದಕ್ಕೆ ಪೂಜೆ. ಬರೆಯುವ ಚಿತ್ರವೂ ಒಳಮುಖವಾದ ಪ್ರಾಣವೃತ್ತಿಯುಳ್ಳ, ಜ್ಞಾನಿಗಳಲ್ಲಿ ಪ್ರಬುದ್ಧವಾದ ಮಹಾಕುಂಡಲಿನಿಯ ಚಿತ್ರವನ್ನು ಸೂಚಿಸುವ ಐದು ಅಥವಾ ಏಳು ಹೆಡೆಯ ಸರ್ಪ.

ಹೊರಸರ್ಪವೇಕೆ ಪೂಜಾರ್ಹ?:

ಒಳನಡೆಯುಳ್ಳ ನಾಗಶಕ್ತಿಯನ್ನು ಗಮನಿಸಿದ ಜ್ಞಾನಿಗಳಿಗೆ ಹೊರಗಿನ ಈ ಸರ್ಪದಲ್ಲಿ ಒಂದೆರಡು ಅಂಶಗಳಲ್ಲಿ  ಆ ಒಳ ಸರ್ಪವನ್ನು ಬಹುಪಾಲು ಹೋಲುವ ಹೊರಲಕ್ಷಣಗಳು ಕೂಡಿಬಂದಿರುವುದು ಗುರುತಿಗೆ ಸಿಕ್ಕಿತು. ಹೀಗೆ ಹೊರಗೆ ಅದನ್ನು ಕಂಡೊಡನೆ ಒಳನಡೆಯತ್ತ ಸೂಚನೆ ನೀಡುವ ಒಳ ನಾಗಶಕ್ತಿಯ ನೆನಪನ್ನು ತರುವ ಲಕ್ಷಣವುಳ್ಳ ಸರ್ಪಗಳನ್ನೂ ಒಳನಾಗಶಕ್ತಿಯ ಗೌರವದ ಪ್ರತೀಕವಾಗಿ ಪುಜಾರ್ಹವೆಂದು ಗುರುತಿಸಿದರು. ಆದ್ದರಿಂದ ಶುದ್ಧ ಧವಳವರ್ಣ, ಗೋಧಿನಾಗರ ಈ ಬಗೆಯ ಸರ್ಪಗಳ ಹೆಡೆ ಎತ್ತುವಿಕೆ ಆ ಒಳನಡೆಯನ್ನೇ ಹೋಲುವುದರಿಂದ ಹೆಡೆಯೆತ್ತಿದ


ಈ ನಾಗಪಂಚಮಿಯಂದು ಈ ನಾಗಾರಾಧನೆಯ ಒಳ ನೋಟವನ್ನು ಭಾವಿಸಿ ನಮ್ಮ ಮನೆಗಳಲ್ಲಿ  ಹಬ್ಬವನ್ನು ಆಚರಿಸುವಂತಾಗಲಿ.ನಾಗದರ್ಶನ ಶುಭವೆಂದುದು ಆ ಒಳನಡೆಯತ್ತ ಅದು ಸೂಚಕವೆಂಬ ಕಾರಣದಿಂದಲೇ.

ಹೀಗೆ ಪೂಜಾವಿಧಾನದಲ್ಲಿಯೂ ತಾವು ಒಳನೋಟದಿಂದ ಕಂಡ ನಾಗದ ಕಡೆಗೆ ಅದನ್ನರಿಯದ ಜೀವಿಗಳನ್ನು ಸೆಳೆಯುವುದೇ ಜ್ಞಾನಿಗಳ ನಾಗಪೂಜೆಯ ತಿರುಳು. ಜೀವಿಗಳಿಗೆ ಚೈತನ್ಯದ ನೆಲೆಯಿಂದ ಯಾವರೂಪದಲ್ಲಿ ಶಕ್ತಿಯು ಹರಿದುಬರುತ್ತದೆಯೋ ಆ ರೂಪದಿಂದ ಅವರನ್ನು ಹಿಂತಿರುಗಿಸಿ ನೆಲೆಮುಟ್ಟಿಸುವಂತೆ ಮಾಡಿದ ಭಾರತಮಹರ್ಷಿಗಳ ಮಹಾ ಯೋಜನೆಯಿದಾಗಿದೆ. ಅದು ನಾವಿಂದು ಚರಿತ್ರೆಯಲ್ಲಿ ಓದುವ ಆರ್ಯರದೋ-ದ್ರಾವಿಡರದೋ ಕೊಡುಗೆಯಲ್ಲ. ಅದು ಒಳಗೆ ತುಂಬಿ ಬೆಳಗುವ ಕುಂಡಲಿನಿಯ ರಹಸ್ಯವರಿತ ಜ್ಞಾನಿಗಳ ಕರುಣೆಯ ಕೊಡುಗೆ.


ಈ ನಾಗಪಂಚಮಿಯಂದು ನಾಗಾರಾಧನೆಯ ಒಳನೋಟವನ್ನು ಭಾವಿಸಿ ನಮ್ಮ ಮನೆಗಳಲ್ಲಿ  ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 25/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.     

Friday, July 24, 2020

Be Cautious - External Form may be Deceptive

Kannada Article by: Subrahmanya Somayaji

English Rendering by: Yashaswini MR

Respond to (lekhana@ayvm.in)




On his way to the banks of river Ganga for bathing, Shankara Bhagavatpaada along with his disciples once encountered a Chandaala (keeper of a crematorium) and his four dogs. Repulsed by his filthy attire, Shankara ordered - "Oh chandaala !! Move away." However the Chandaala laughed it away. A surprised Shankara bade him for the second time. These were the words that came out of Chandaala - "Oh Yati ! Are you still not out of your delusion? What are you driving away? If it is the body you addressed, then it can't move as it is inert. If it is the aatma (soul) you addressed, then it is sarvaantaryaami (omnipresent). From where should it move and to where?"  What a fascinating question! The ultimate truth of one's life came from the mouth of a chandaala! At once Shankara exclaimed - "Indeed you have spoken the truth! Only a Brahmajna (the enlightened) can speak such stirring words. I venerate a Brahmajnaani as my guru (spiritual teacher), be it a Brahmin or a Chandaala." So saying, Shankara prostrated before him. Then lord Vishweshwara with the four vedas, disguised as the Chandaala and his four dogs, revealed his identity and gave his darshan to Shankara. This story is a mystic anecdote in the biography of the Acharya.


Maha Chaitanya (Supreme energy) beaming in the origin of Cosmos, the cause behind the existence of everything is Brahman. The radios and the fans stop working when there is a power cut. Likewise life goes on as long as there is a supply of energy from the Lord. When that stops, everything comes to a standstill - The words echoed by Sriranga Mahaguru are noteworthy here. In the state of Advaitha everything is filled with Brahman. How is it possible for Brahman to move from one point to another when it is spanning the entire creation? This ultimate knowledge was tested by Lord himself in the guise of a Chandaala. Shankara surrendered himself to this truth and as a consequence composed the Maneeshaa Panchaka --guidelines in a set of five stotras and offered it to the Lord. This incident holds a mirror to Bhagavatpaada's intellectual honesty. He did not hesitate to consider even a Chandaala as his guru for he had reminded him of the eternal truth. Only the Brahman radiating internally in the form of Satya (eternal truth) is valuable and not the external form and the attire of the one who experiences this Truth - this is the lesson from this excerpt.


Shankara Bhagavatpaada's primary goal was also the establishment of this very philosophy. Thus his life was filled with many such anecdotes, all of which are elucidations of this eternal truth. Let us not forget that they are relevant for all time to come.

Note: The Kannada version of this article can be viewed at AYVM blogs.