Saturday, January 26, 2019

ಸುಖಕ್ಕೊಂದು ಸೂಚ್ಯಂಕ (Sukhakkondu susanyanka)

                                                                                ಲೇಖಕರು: ನಾಗರಾಜ ಗುಂಡಪ್ಪ
ಶಿಕ್ಷಣ: ಎಮ್. ಟೆಕ್., ಕಂಪ್ಯೂಟರ್ ಇಂಜಿನಿಯರಿಂಗ್, ಮೈಸೂರು ವಿಶ್ವವಿದಾಯಲಯ.
ಹುದ್ದೆ: ಮಾಜಿ ಜನರಲ್ ಮ್ಯಾನೇಜರ, ವಿಪ್ರೋ ಟೆಕ್ನಾಲಜೀಸ್, ಹಾಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್


ಕಳೆದ 2-3 ದಶಕಗಳ ವಿದ್ಯಮಾನಗಳನ್ನು ಗಮನಿಸಿದರೆ, ಇದೊಂದು ಸೂಚ್ಯಂಕಗಳ (Index) ಯುಗವೆಂದು ಕರೆದರೆ ತಪ್ಪಾಗಲಾರದು. ರಾಷ್ಟ್ರೀಯ ಉತ್ಪನ್ನಾಂಕ(GDP) ಶೇರು ಮಾರುಕಟ್ಟೆಯ ಸೂಚ್ಯಂಕ (SENSEX, NIFTY) ಮುಂತಾಗಿ ಅನೇಕ ಸೂಚ್ಯಂಕಗಳು ಅರ್ಥವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅತ್ಯಂತ ಕಡಿಮೆ ಹೂಡಿಕೆಯಿಂದ ಅತ್ಯಂತ ಹೆಚ್ಚು ಲಾಭವನ್ನು ಪಡೆಯುವಂತಹಾ (High ROI, Return-on-investment) ನಿಶ್ಚಯಗಳನ್ನು ಈ ಸೂಚ್ಯಂಕಗಳ ಬೆಂಬಲದಿಂದ ಕೈಗೊಂಡು ಅನೇಕರು ಭಾರೀ ಶ್ರೀಮಂತರಾಗಿದ್ದಾರೆ. ಈ High ROI ಚಿಂತನೆಯನ್ನು ನಾವು ಜೀವನಕ್ಕೆ ಅನ್ವಯಿಸಿಕೊಳ್ಳಬಹುದೇ? ಹೌದು ಎನ್ನುತ್ತದೆ ಮಹರ್ಷಿಗಳು ಕೊಟ್ಟಿರುವ ನೋಟ.

ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ, ಯಶಸ್ವಿಯಾಗಬೇಕಾದರೆ ನಿರಂತರ ಪ್ರಯತ್ನಶೀಲರಾಗಿರಬೇಕಾಗುತ್ತದೆ. ಈ ಪ್ರಯತ್ನವೇ ಜೀವನದಲ್ಲಿ ಹೂಡುವ ಬಂಡವಾಳವಾಗಿರುತ್ತದೆ. ಇಂತಹಾ ಪ್ರಯತ್ನಗಳಿಗೆ ಸಿಗುವ ಫಲಗಳು ಹಣ, ಅಧಿಕಾರ, ಕೀರ್ತಿ, ಸಂಪತ್ತು ಮುಂತಾಗಿ ಅನೇಕ ರೀತಿಯದಾದರೂ ಇವೆಲ್ಲವೂ ನ್ಯಾಯಯುತವಾಗಿದ್ದಾಗ ಒಂದು ಮಟ್ಟದ ತೃಪ್ತಿಯನ್ನು ಕೊಡುತ್ತದೆ ಮತ್ತು ಈ ತೃಪ್ತಿ ಅಥವಾ ಆನಂದಕ್ಕಾಗಿಯೇ ನಾವು ಪ್ರಯತ್ನವನ್ನು ಪಡುವುದು. ಹೀಗಾಗಿ ಜೀವನಕ್ಕೆ ಅನ್ವಯಿಸಿದಾಗ, ಪ್ರಯತ್ನವೇ ಬಂಡವಾಳವಾಗಿದ್ದು ಆನಂದವೇ ಫಲವಾಗಿರುತ್ತದೆ. ಯಾವ ಮಟ್ಟದ ಪ್ರಯತ್ನಕ್ಕೆ ಯಾವ ಮಟ್ಟದ ಆನಂದ ದೊರೆಯುತ್ತದೆ ಎಂದು ವಿಶ್ಲೇಷಣೆ ಮಾಡಿ, ಅತ್ಯಂತ ಹೆಚ್ಚು ಆನಂದ ದೊರೆಯುವ ಮಾರ್ಗದಲ್ಲಿ ಪರಿಶ್ರಮವನ್ನು ಹೂಡುವುದೇ ಜೀವನದಲ್ಲಿ ನಾವು ಕೈಗೊಳ್ಳಬಹುದಾದ ಅತ್ಯಂತ ಬುದ್ಧಿವಂತಿಕೆಯ High ROI ನಿರ್ಧಾರವಾಗಿರುತ್ತದೆ. ಈ ನಿರ್ಧಾರಕ್ಕೆ ಸಹಾಯಕವಾಗಿ ಏನಾದರೂ ಸೂಚ್ಯಂಕಗಳಿವೆಯೇ ಎಂದು ಕೇಳಿದರೆ, ನಮ್ಮ ಅದೃಷ್ಟವಶಾತ್ ಅಂತಹಾ ಸೂಚ್ಯಂಕಗಳನ್ನು ಮಹರ್ಷಿಗಳು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆ - ಈ ಕೊಡುಗೆಯೇ ಆನಂದ ಮೀಮಾಂಸೆ.


ತೈತ್ತಿರೀಯೋಪನಿಷತ್ತಿನ ಆನಂದಮೀಮಾಂಸೆ ಅಧ್ಯಾಯವು ಆನಂದದ ಮಟ್ಟಗಳ ವಿಶ್ಲೇಷಣೆಯನ್ನು ನಿಖರವಾಗಿ ಮಾಡುತ್ತದೆ. ಅದು ಮಾನುಷಾನಂದ ಎಂದರೇನು ಎಂದು Define ಮಾಡಿ ಅದನ್ನು ಒಂದು Measuring Unit ಅಥವಾ index (ಸೂಚ್ಯಂಕ) ಆಗಿ ಇಟ್ಟುಕೊಂಡು ಉಳಿದ ಆನಂದದ ಮಟ್ಟಗಳನ್ನು ವಿವರಿಸುತ್ತದೆ. ಒಬ್ಬ ದೃಢಕಾಯನೂ, ಆರೋಗ್ಯವಂತನೂ, ಸುಖದ ಅಭಿಲಾಷೆಯೂ ಇರುವ ಯುವಕನ ಅಧೀನದಲ್ಲಿ ಸಕಲ ಭೋಗವಸ್ತುಗಳಿಂದ ಕೂಡಿದ ಭೂಮಂಡಲವೇ ಇದೆಯೆಂದುಕೊಳ್ಳೋಣ. ಅಂತಹ ಯುವಕನು ಏನೇನೆಲ್ಲಾ ಸುಖವನ್ನನುಭವಿಸಬಹುದೋ ಅದಷ್ಟನ್ನೂ ಸೇರಿಸಿದರೆ ಒಂದು ಮಾನುಷಾನಂದವಾಗುತ್ತದೆ. ಈ ಆನಂದದ ಮಟ್ಟಕ್ಕೆ ಹೋಲಿಸಿದರೆ, ಮನುಷ್ಯಗಂಧರ್ವರ ಆನಂದ ನೂರು ಪಟ್ಟು ಹೆಚ್ಚು ಎಂದು ಉಪನಿಷತ್ತು ಹೇಳುತ್ತದೆ. ಮನುಷ್ಯ ಗಂಧರ್ವರ ನಂತರ ದೇವಗಂಧರ್ವರು, ಪಿತೃಗಳು, ಆಜಾನಜಾನ ದೇವತೆಗಳು, ಕರ್ಮದೇವತೆಗಳು, ದೇವತೆಗಳು, ಇಂದ್ರ, ಬೃಹಸ್ಪತಿ, ಪ್ರಜಾಪತಿಯ ಆನಂದಗಳನ್ನು ವಿವರಿಸುತ್ತಾ ಪ್ರತಿ ಹಂತದವರ ಆನಂದವು ಹಿಂದಿನ ಆನಂದದ ಮಟ್ಟಕ್ಕಿಂತ ನೂರು ಪಟ್ಟು ಹೆಚ್ಚು ಎಂದು ಹೇಳಿ ಕೊನೆಯಲ್ಲಿ ಪ್ರಜಾಪತಿಯ ಆನಂದದ ನೂರು ಪಟ್ಟು ಹೆಚ್ಚು ಬ್ರಹ್ಮಾನಂದ ಎನ್ನುವಲ್ಲಿ ಆನಂದ ಮೀಮಾಂಸೆಯು ಸಮಾಪ್ತವಾಗುತ್ತದೆ. ಅಂದರೆ, ಮಾನುಷಾನಂದಕ್ಕಿಂತ ಸಹಸ್ರ ಕೋಟಿ ಪಾಲು ಹೆಚ್ಚು ಮಟ್ಟದ್ದು ಬ್ರಹ್ಮಾನಂದವೆಂಬುದು ಆನಂದ ಮೀಮಾಂಸೆಯ ಸಾರಾಂಶ. ಈ ಸಾರಾಂಶದ ಜೊತೆಗೇ ಋಷಿಗಳು ತಿಳಿಸಿರುವ ಅತ್ಯಂತ ಮುಖ್ಯವಾದ ಹಾಗೂ ಸಂತೋಷದ ಸಂಗತಿಯೆಂದರೆ, ಪ್ರತಿಯೊಬ್ಬ ಮನುಷ್ಯನೂ ಸಹಾ ತಪಸ್ಯೆಯ ಮೂಲಕ ಈ ಬ್ರಹ್ಮಾನಂದವನ್ನು ಹೊಂದಬಹುದು ಎನ್ನುವ ಸತ್ಯ.

ಹೀಗೆ ಯಾವುದೇ ಕ್ಷೇತ್ರದಲ್ಲೂ ಸಫಲತೆಗಾಗಿ ಅವಶ್ಯವಾದ ಪ್ರಯತ್ನವನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ಹೂಡಿದರೆ, ಅದಕ್ಕೆ ಸಿಗುವ ಪ್ರತಿಫಲ ಸಹಸ್ರ ಕೋಟಿ ಪಾಲು ಹೆಚ್ಚಿನ ಬ್ರಹ್ಮಾನಂದವೇ ಆಗಿದೆ. ಈ ಬ್ರಹ್ಮಾನಂದವನ್ನು ಅನುಭವಿಸುವುದಕ್ಕೆ ಅಧಿಕಾರವನ್ನು ಹೊಂದಿರುವುದೇ ಮಾನವನ ವಿಶೇಷತೆಯಾಗಿರುವುದರಿಂದ, ಬ್ರಹ್ಮಾನಂದದಿಂದಲೇ ಮಾನವ ಜನ್ಮಕ್ಕೆ ಸಾರ್ಥಕತೆಯೂ ಸಹಾ ಆಗಿದೆ.

ಸೂಚನೆ: 
ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, January 25, 2019

Speaking the truth can be a penance


Truth in our culture

Our culture takes pride in speaking the truth. Sri Rama, Yudhishthira, and Harischandra are considered heroes for their staunch adherence to truth even enduring penury, banishment and untold suffering. Yet, they swerved not from Satya, which was to them a vrata – a solemn inviolable vow. Why were Bharateeyas so wedded to truth? Was it a fad, folly, fashion or fanaticism?




Power of a mirror

Speech is like holding a mirror to our mind and inner selves. Pain in the mind is heard in our voice. The joys within bubble up in our words. While this is well known since time immemorial, the Rishis of Bharata also found something more interesting.  They found this mirror works both ways. It lets the words reflect and reverberate in our minds. They discovered mantras that could make their inner selves feel joy and unbounded ecstasy. They used the power of vaak to reach the highest experience of Brahman within.

What does lying do?

Lying is similar tospoiling the clean reflecting surface of the mirror. So now, what is heard in our words is distorted truth. Quite often it reflects images of concocted phantoms from the dark crevices of our minds. But so what, one may ask. However, we need to remember that these mirrors reflect both ways. The disfigured mirrors instead of setting up waves of joy in our minds, now cause tsunamis of chaos and turbulence. Peace of mind is lost and the whole system is agitated. These turbulences are for real and lie-detectors work by detecting just these tell-tale turbulences. Thus speaking the truth, helps to keep the mirror clean and the connection between our speech and inner selves intact. Sriranga Mahaguru describes Satyamas a bridge between the outer physical world and inner worlds. In fact, in Samskrit, the word Satyam denotes truth and also sacred absolute truth – Brahman.

Limits to speaking the truth

Truth is only the means, not goal itself.Our traditions say ‘speak not truth that causes hurt’. Krishna even exhorts Yudhisthira to lie, causing downfall of Drona. This one falsehood uttered, ensured that thousands of truthful men may prosper.The pursuit of truth in our personal endeavors is as relevant today as ever, to enjoy the small joys of a clear conscience and the unbounded Ananda within.

Saturday, January 19, 2019

ಅರ್ಥವು ಅನರ್ಥವೇ? (Arthavu anarthave?)



"ಅರ್ಥ" ಎಂಬ ಪದಕ್ಕೆ ನಾನಾರ್ಥಗಳುಂಟು. ಅದರಲ್ಲಿ ಲೌಕಿಕವಾದ ಸುಖಕ್ಕೆ ಸಾಧನವಾದಧನಎಂಬರ್ಥವೂ ಉಂಟು. ಇಂತಹ ಅರ್ಥ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣ.


ಲೌಕಿಕ ಸುಖವನ್ನು ಬಯಸುವವನಿಗೆ ಅರ್ಥವು ಅನಿವಾರ್ಯವೇ ಸರಿ!  “ಧನಮೂಲಮಿದಮ್ ಜಗತ್”,  "ದುಡ್ಡೇ ದೊಡ್ಡಪ್ಪ" ಎಂಬ ಮಾತುಗಳು ಎಲ್ಲರಿಗೂ ತಿಳಿದದ್ದೇ. ಹಣವಂತರ ಪ್ರಭಾವವನ್ನು ಗಮನಿಸಿ ಹಣದ ಮಹಿಮೆಯನ್ನು ಹಾಡಿ ಹೊಗಳುವ ಹತ್ತಾರು ಸುಭಾಷಿತಗಳಿವೆ.

ಆಗಾಗ್ಗೆ ಕೆಲವು ಸಂತರು ಹಾಗೂ ದಾರ್ಶನಿಕರು, ಮನುಷ್ಯನು ಹಣದ ಹಿಂದೆ ಹೋಗಿ ಎಷ್ಟೆಲ್ಲ ಪಾಡು ಪಡುವನೆಂದು
ಮನಗಂಡು, "ಹಣವನ್ನು ದೂರವಿಡಿ" ಎನ್ನುತ್ತಾ ಹಣವನ್ನು ಜರೆದಿರುವುದೂ ಉಂಟು. ಹಣವನ್ನು ತೆಗಳುವ ಸುಭಾಷಿತಗಳೂ ಲಭ್ಯಹಣದ ಬಗ್ಗೆ ಪ್ರಶಂಸೆ, ನಿಂದನೆ -- ಎರಡನ್ನೂ ಓದುವ ನಮಗೆ ಅರ್ಥದ ಬಗ್ಗೆ ಜಿಜ್ಞಾಸೆ ಹುಟ್ಟುವುದು ಸಹಜವೇಶಂಕರಭಗವತ್ಪಾದರು ತಮ್ಮ ಭಜಗೋವಿಂದ ಸ್ತೋತ್ರದಲ್ಲಿಏಕೆ ದುಡ್ಡಿನ ಚಿಂತೆ?" ಎಂದು ಕಳಕಳಿಯಿಂದ ಕೇಳುತ್ತಾರೆ. (ಕಾತೇ ಕಾಂತಾ? ಧನಗತ ಚಿಂತಾ?) ಮತ್ತೊಂದೆಡೆಯಲ್ಲಿ ಹೀಗೆ ಎಚ್ಚರಿಸುತ್ತಾರೆ -- "ಹಣವು ಎಂದೆಂದಿಗೂ ಅನರ್ಥಕರವೇ ಎಂದು ಭಾವಿಸು. ಅದರಿಂದ ಎಳ್ಳೆನಿತು ಸುಖವಿಲ್ಲ. ಇದು ದಿಟ. ಮಗನ ದೆಸೆಯಿಂದಲೂ ಹಣವಂತರಿಗೆ ಭೀತಿ -- ಇದೇ ಎಲ್ಲೆಡೆಯಲ್ಲಿಯೂ ಇರುವ ಪ್ರಕೃತಿನಿಯಮ" (ಅರ್ಥಮನರ್ಥಂ ಭಾವಯ ನಿತ್ಯಂ, ನಾಸ್ತಿ ತತಃ ಸುಖಲೇಶಃ ಸತ್ಯಂI ಪುತ್ರಾದಪಿ ಧನಭಾಜಾಂ ಭೀತಿಃಸರ್ವತ್ರೈಷಾ ವಿಹಿತಾ ರೀತಿಃII) ಧನಾರ್ಜನೆಯಲ್ಲೇ ಮುಳುಗಿಹೋದವರನ್ನು ಹೀಗೆ ಎಚ್ಚರಿಸಿದ ಶಂಕರರು ಅರ್ಥದ ಬಗೆಗೆ ನಮ್ಮ ನಿಲುವು ಹೇಗಿರಬೇಕೆಂದು ಸ್ಪಷ್ಟಪಡಿಸಿದ್ದಾರೆ. ಅಂಶವನ್ನು ವಿವರಿಸುತ್ತಾ ಶ್ರೀರಂಗಮಹಾಗುರುಗಳು ಹೀಗೆ ನುಡಿದಿದ್ದಾರೆ -"ಶಂಕರರು ಲೋಕಜೀವನದ ಬಗ್ಗೆ ನಿರಾಸೆಯನ್ನು ತೋರಿಸಲಿಲ್ಲ; ಭೌತಿಕ ಜೀವನವನ್ನೂ ಬೇಡವೆನ್ನಲಿಲ್ಲ. ಭೌತಿಕಜೀವನವನ್ನು ಮಾಡು. ಜೀವನಕ್ಕೆ ಬೇಕಾದ ಉದ್ಯೋಗವನ್ನೂ ಮಾಡು. "ಮೂಢ ಜಹೀಹಿ ಧನಾಗಮತೃಷ್ಣಾಂ, ಕುರು ಸದ್ಬುದ್ಧಿಂ ಮನಸಿವಿತೃಷ್ಣಾಂ, ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್". ಜೀವನದಲ್ಲಿ ಧನವು ಬೇಕು. ಆದರೆ ಧನದ ಅರ್ಥವು ದಾಹ ಹುಟ್ಟಬಾರದು. "ದೊಡ್ಡದಾಹ"(ಮರಣಕಾಲದಲ್ಲಿ ಬರುವ ಬಾಯಾರಿಕೆವಾಗಿಬಿಟ್ಟರೆ ಎಷ್ಟು ನೀರು ಸುರಿದರೂ ಅದು ಅಡಗುವುದಿಲ್ಲ. ರೀತಿಯಾದ ಧನದಾಹ ಬೇಡ. "ಬಾಯಾರಿತು, ಒಂದು ಲೋಟ ನೀರು ಕುಡಿದೆ" ಎಂದು ಅಷ್ಟರಲ್ಲಿ ನಿಲ್ಲಲಿ. ಹಾಗೆ ದಾಹರಹಿತವಾದ ಸದ್ಬುದ್ಧಿಯನ್ನು ಬೆಳೆಸಿಕೊಳ್ಳೀಪ್ಪಾ. ನಿನ್ನ ವೃತ್ತಿಗೆ ಅನುಗುಣವಾದ ಕರ್ಮದಿಂದ ನೀನೇನನ್ನು ಪಡೆಯುವಿಯೋ ಅದರಲ್ಲಿ ನಿನಗೆ ಬೇಕಾದ ರೀತಿ ಸಂತೋಷಪಡು.[ಎನ್ನುತ್ತಾರೆಹೀಗೆ, ಶಂಕರರು ಭೌತಿಕಜೀವನವನ್ನು ಬೇಡವೆನ್ನದೆ, ಅದನ್ನು ಒಂದು ಹತೋಟಿಯಲ್ಲಿಟ್ಟುಕೊಳ್ಳುವಂತೆ ಆದೇಶವಿತ್ತಿದ್ದಾರೆ". (ಅಮರವಾಣೀ-7-235).

ಮನುಷ್ಯನು ತಾನು ಗಳಿಸಿದ ಹಣವೆಲ್ಲವನ್ನೂ ದಾನಮಾಡಿಬಿಡಬೇಕೆಂದು ಯಾವ ಋಷಿಯೂ ಹೇಳಿಲ್ಲ. ನ್ಯಾಯವಾದ
ಮಾರ್ಗದಿಂದ ಸಂಪಾದಿಸಿದ ಹಣವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೇ, ತನ್ನ ಕುಟುಂಬಕ್ಕಾಗಿ ಇಷ್ಟು, ತನ್ನ ಸಮಾಜಕ್ಕಿಷ್ಟುತನ್ನನ್ನು ಆಶ್ರಯಿಸಿದವರಿಗಿಷ್ಟು, ಭಗವತ್ಕಾರ್ಯಕ್ಕಿಷ್ಟು, ಎಂದು ಅರ್ಥವಿಭಾಗವನ್ನು ಮಾಡಿಕೊಂಡೇ ಹಣವನ್ನು ವ್ಯಯಮಾಡಬೇಕೆನ್ನುತ್ತದೆ, ಆರ್ಷನೋಟ.

ಶ್ರೀರಂಗಮಹಾಗುರುಗಳು ಒಮ್ಮೆ ತಮ್ಮ ಆಪ್ತರೊಡನೆ ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ, ಭಗವತ್ಪ್ರಸಾದವನ್ನು
ಕಾವೇರಿಯಲ್ಲಿದ್ದ ಮೀನುಗಳಿಗೂ ಕೊಟ್ಟು, ನಂತರ ತಾವು ಸ್ವೀಕರಿಸಿದ್ದನ್ನು ಭಕ್ತರು ನೆನಪಿಸಿಕೊಳ್ಳುತ್ತಾರೆ (ಯೋಗೇಶ್ವರ ಶ್ರೀರಂಗ 319). ಹೀಗೆ, ಮನುಷ್ಯನು ಅರ್ಥವಿಭಾಗವನ್ನು ಮಾಡುವಾಗ, ಸುತ್ತಲಿನ ಪಶುಪಕ್ಷಿಪ್ರಾಣಿಗಳನ್ನೂ ಮರೆಯುವಂತಿಲ್ಲಶ್ರೀರಂಗಮಹಾಗುರುಗಳು ಒಮ್ಮೆ ಸುಂದರ ನೋಟವನ್ನು ದಯಪಾಲಿಸಿದ್ದರು. "ಅರ್ಥವು ಅನರ್ಥವಾಗದೇಪರಮಾರ್ಥದಲ್ಲಿ ನಿಂತು ಸಾರ್ಥಕವಾಗುವ ಪಕ್ಷೇ ಅದನ್ನು ಕ್ಷಣಕ್ಷಣದಲ್ಲಿಯೂ ನಾವು ಸಂಪಾದಿಸಲು ಉದ್ಯಮಿಸುತ್ತೇವೆ" (ಶ್ರೀರಂಗ ವಚನಾಮೃತ 1-59). ಧನದಾಹವಿಲ್ಲದೆ, ನ್ಯಾಯವಾದ ವೃತ್ತಿಯಿಂದ ಗಳಿಸಿದ ಅರ್ಥವು ಸದ್ವಿನಿಯೋಗವಾದಾಗ, ಅದು ಅನರ್ಥವಾಗದೇ, ಜೀವನ ಸಾರ್ಥಕವಾಗುವುದರಲ್ಲಿ ಸಹಕಾರಿಯಾಗುತ್ತದೆ.

ಸೂಚನೆ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Thursday, January 17, 2019

The Divine Veena

Original Kannada Article – Sri Tarodi Suresha
English Translation by Smt Padmini Shrinivasan


The divine Veena and the manmade Veenas


Veena is a musical instrument mentioned even in the Vedas. Gods such as Dakshinamurthy (Shiva), Shaarada and sages like Naarada, Tumburu hold a Veena in their hands. Their veenas are called Rudra, Kacchapi, Mahati and Kalaavathi respectively.




It is believed by some that Bharateeyas have attributed their own instruments to their deities as well. This view is incorrect. During intense meditation, the Rshis of Bhaarata, had an inner vision of the Gods holding these instruments. They accepted their vision of these instruments as a gracious gift of God to mankind. The physical instrument was designed according to their inner vision and in a manner befitting the tattvas (or principles) which are represented by these instruments. Hence it is said in our ancient literature –“Yaa daiveeveena tadanukruti rasau maanushee veena” (The veena made by man is verily the imitation of the divine veena).

Gyanis have professed that the veena is not just a musical instrument but a representative form of Parabrahman. The reason being, the instruments capability, to elevate a devout and deserving listener to the level of Parabrahman. It is not apt to fix a time frame for the instruments decorating the hands of Gods. To do that would be quite comical, similar to fixing a time limit for sun’s brightness. They are ancient, yet eternal and evergreen.

Inner secrets of the Veena


Why do we have so many names for a veena? Depending on their shapes and their reach, different veenas  influence the daivee kendras (subtle energy points) of the human body differently. For example: Godess Saraswati is mother prakruti (the entire creation). In fact, she is paraa prakruti ( the seed of prakruti or un-manifest creation). In another form she assumes, she has a veena in her lotus like hands. As per Saankhya Shaastra mother nature has 24 attributes. The 24 frets in the veena represent these. A listener, who is able to enjoy her music within himself, can pull all his sense organs, mind and intellect inwards like a tortoise (kacchapa). He is able to sense, experience and enjoy the divine qualities of the inner primordial sound (naada) even  when the veena instrument is played externally. This can elevate him to a state beyond the ken of sensory organs. Thus the fruits of listening to the music being played on this veena, belongs to the realm of both sensory (bhogaayata) as well as extra sensory (yogaayata) perceptions. In contrast, the tone of a Rudra veena, can only influence the inward pulling of sensory organs, and maintain the yogasamaadhi or a blissfull state. The fruit here is primarily to attain salvation.


The Sushumna,naadi, which exists within the core of our backbone, is the primary source of all the secrets relating to the union with God (yoga). This Sushumna  is also known by other names like Brahma naadi, Jnaana naadi, Prushta vamsha etc. It is also called Veenaadanda. The structure and function of the internal Veenaadanda can be seen reflected in the construction of the veena instrument too. The construction of the Veena instrument resembles the human body and the brahma danda that runs from head down to waist. The internal 7 chakras of the human body resemble the 7 strings. Sound emanates from these strings. The Naagapasha in the veena represents the mind in our body that restrains the Kundalini shakti. The instrument too has a Naagapaasha which anchors all the strings. Godess Saraswati resides in the internal Veenadanda and plays the divine veena executing the wish of Parabrahman, in the process of creation-sustenence and dissolution. This principle exists in the veena instrument as well. Gotu vaadyam is another instrument which requires superior skill and expertise to play. This is essentially a veena without the frets. Hence it is also called as Dhanurveena.


The main purpose of Bharateeya Sangeetha Vidya is to reach  Parabrahman. All  the three sub-divisions of sangeetha-  nritta (dance), geeta (song) and vaadya (instrumental music)  point in the same direction. “Namah Parama Rshibhyaha”



Note: The Kannada version of this article can be viewed at AYVM blogs

Monday, January 14, 2019

Makara-Sankranthi: A yearly epoch

Varied customs of Makara-Sankranthi

Makara Sankranthi denotes entry of Sun into Makara-Capricorn and is celebrated across the country. It is closely associated with onset of Uttarayana when the sun starts its northward march. At some point in antiquity both coincided, but have since slipped due to precession of equinoxes. Bath in sacred rivers, use of til-sesame, sugarcane, boiling over of milk, flying kites, worship of cows, their decoration with gaietyare the prominent features in celebration of Makara Sankranthi. What do these have in common?


There is unity in diversity

Though apparently unrelated, they are local manifestations of a unified ethos; like branches of the same tree. That unifying thread is recognition of an epoch in time afforded by nature. Our physiology is woven inextricably with the cycles of nature. Daily circadian rhythms andmating patterns of animals are prominent examples. Rishis of Bharata, by virtue of critical observation and pristine lifestyle in harmony with nature, could feel and identify the periodic epochal moments affording unfettered access to inward spiritual journey and enlightenment. Uttarayana and Makara Sankranthi are such epochs, apt both for spiritual and material advancement.

Principles of yoga underlie our traditions

Sugarcane oozing with juice, regularly spaced rings and nodes that sprout leaves symbolizes the cyclical nature of time and nectarine epochs therein. It is no coincidence that sugarcane rings and epochal times are both called parva. Boiling over of milk while celebrating plenty, are to a Yogi’s eye the arousal of kundalini and the process of enlightenment within. The mighty bull and gentle cow, mainstay of rural livelihood are embodiments of sattva guna and induce the same in us as we bathe, decorate and bond with them. A bath in the sacred rivers at this time stills the mind and breath; unfettering ourmindsas it flies inwards and upwards. Sesame is ideal for worship of the Pitrs and also the devas when used with jaggery and groundnut. Ancient texts document that the six-month period of Uttarayana gives an impetus for inner journey through the yogic path called Archiraadi-marga, that leads to liberation. Hence predominantly spiritual rituals like Upanayanam are conducted exclusively during the sacred period of Uttarayana.


This Makara Sankranthi, as the Ardh-Kumbh gets underway at Prayagraj, may our kumbha (pot) overflow with milk in our hearth and joy in our hearts.

Saturday, January 12, 2019

ಬಾಲಕೃಷ್ಣನ ನವನೀತ ಚೌರ್ಯ (Balakrishnana navanita chourya)

ಲೇಖಕರು: ಶ್ರೀಮತಿ ಮೈಥಿಲೀ ರಾಘವನ್

"ನವನೀತ ಚೌರ್ಯದ ರಹಸ್ಯ ಜ್ಞಾನಿಗಳಿಗೆ ಮಾತ್ರವೇ ವೇದ್ಯ, ಸಾಮಾನ್ಯರಿಗಲ್ಲ"


ಶ್ರೀಕೃಷ್ಣನ ಕಥಾಮೃತವು ಸರ್ವರಿಗೂ ಅತ್ಯಂತ ರಸ್ಯವೂ, ಹೃದ್ಯವೂ ಆಗಿರುವುದು.ಅದರಲ್ಲೂ ಆತನ ಬಾಲಲೀಲೆಗಳು ತುಂಟಮಕ್ಕಳನ್ನೂ ಆಕರ್ಷಿಸುವ ಅದ್ಭುತಕಥಾಭಾಗಗಳು. ಅಂತಹ ಪ್ರಸಂಗಗಳಲ್ಲಿ ಪ್ರಸಿದ್ಧವಾದದ್ದು ಕೃಷ್ಣನ ನವನೀತಚೌರ್ಯ. ಶ್ರೀಕೃಷ್ಣನು ಗೋಕುಲದ ಒಡೆಯನಾದ ನಂದಗೋಪನ ಮಗನಾಗಿ ಆತನ ಮನೆಯಲ್ಲಿ ಬೆಳೆದುದರಿಂದ ಮನೆಯಲ್ಲಿ ಹಾಲು, ಮೊಸರು, ಬೆಣ್ಣೆಗಳಿಗೆ ಯಾವ ಕೊರತೆಯೂ ಇರಲಿಲ್ಲ. ಗೋಕುಲದ ಎಲ್ಲ ಗೋಪಗೋಪಿಯರ ಪ್ರೀತಿಯ ಮುದ್ದು ಮಗುವಾಗಿದ್ದುದರಿಂದ ತನ್ನ ಮನೆಯಲ್ಲಾಗಲೀ ಇತರರ ಮನೆಗಳಲ್ಲಾಗಲೀ ಕೇಳಿದೊಡನೆಯೇ ಹಾಲು-ಬೆಣ್ಣೆ 
ಸಿಗುವುದರಲ್ಲಿ ಯಾವ ಅಡಚಣೆಯೂ ಇರಲಿಲ್ಲ. ಇಷ್ಟಿದ್ದರೂ ಅವನು ಕೆಲವೊಮ್ಮೆ ಕದ್ದು ತಿನ್ನುತ್ತಿದ್ದನಂತೆ! ಇನ್ನೂ ವಿಚಿತ್ರವೆಂದರೆ ಈ ಕಳ್ಳತನದ ಕಥೆಯ ಅನುಸಂಧಾನದಿಂದ ’ಸಕಲ ಪಾಪಗಳ ಪರಿಹಾರ, ಭಗವದ್ಭಕ್ತಿಯ ವೃದ್ಧಿ”ಯೆಂಬ ಫಲಶ್ರುತಿ ಬೇರೆ! ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಕಳ್ಳತನದಿಂದಾಗುವ ಕೆಡುಕನ್ನು ತಿಳಿಸಿಕೊಡುವ ಪ್ರಯತ್ನವನ್ನು ಹಿರಿಯರೆಲ್ಲರೂ ಮಾಡುವುದು ಮನೆಮನೆಗಳಲ್ಲಿಯೂ ನಡೆಯುತ್ತಿರುವ ಸಂಗತಿ. ಹೀಗಿರುವಾಗ ಕೃಷ್ಣನ ಚೌರ್ಯವನ್ನು ಮಾತ್ರ ಕೊಂಡಾದುವುದೇಕೆ? ಅಂದು ಆತ ಬೆಣ್ಣೆ ಕದ್ದರೆ ಇಂದು ನಮ್ಮ ಮಗು ಬೇರೊಂದು ಪದಾರ್ಥವನ್ನು ಕದಿಯಬಹುದು. ಅದು ತಪ್ಪೇ? ಎನ್ನುವ ಪ್ರಶ್ನೆ ಯಾರಿಗಾದರೂ ಏಳಬಹುದು.

ಸರಿ-ತಪ್ಪುಗಳ ನಿರ್ಣಯ:

ಯಾವುದೇ ಕ್ರಿಯೆಯ ಸರಿ-ತಪ್ಪುಗಳ ನಿರ್ಣಯ ಅದರಿಂದಾಗುವ ಪರಿಣಾಮದಿಂದಲ್ಲವೇ? ಸಾಮಾನ್ಯ ಮಕ್ಕಳ ಚೌರ್ಯವು ಸರಿಪಡಿಸದಿದ್ದರೆ ಕಾಲಕ್ರಮದಲ್ಲಿ ದುಷ್ಪರಿಣಾಮವನ್ನುಂಟುಮಾಡುವ ಸಾಧ್ಯತೆ ಉಂಟು. ಆದರೆ ಕೃಷ್ಣನ ಚೌರ್ಯದಿಂದಾದ ಪರಿಣಾಮವು ಪಾಮರರಿಗೆ ಎಟುಕುವಂತದ್ದಲ್ಲ. ಆತನ ಸ್ವರೂಪವನ್ನು ಅರಿತ ಜ್ಞಾನಿಗಳು ’ಅದು ಯಾವುದೇ ದುಷ್ಪರಿಣಾಮವನ್ನೂ ಮಾಡಲಿಲ್ಲ. ಹೊರತಾಗಿ ಪ್ರಸನ್ನತೆಯನ್ನೇ ಉಂಟುಮಾಡಿತು’ ಎಂದು ಸಾರುತ್ತಾರೆ.

ಪ್ರಸನ್ನತೆ:

ಕೊಳಕುನೀರಿನಿಂದ ಬಗ್ಗಡವನ್ನು ನೀಗಿಸಿದಾಗ ನೀರು ತಿಳಿಯಾಗಿ ಒಳಗಿರುವ ಪದಾರ್ಥವನ್ನು ಸ್ಪಷ್ಟವಾಗಿ ತೋರಿಸುವುದು. ನಮ್ಮ ಮನಸ್ಸು ಸಹ ಕೊಳೆಯಿಂದ ತುಂಬಿದಾಗ ಒಳಗೆ ಬೆಳಗುವ ಪರಮಾತ್ಮನನ್ನು ತೋರಿಸಲಾರದು. ಮನಸ್ಸುಶುದ್ಧಿಯಾದಾಗ ಇಂದ್ರಿಯಗಳ ವಿಕಾರವು ತೊಲಗಿ ಪ್ರಸನ್ನವಾಗಿ ತಿಳಿನೀರಿನಂತೆ ಒಳಬೆಳಕನ್ನು ತೋರಿಸುವುದು ಖಂಡಿತ. ಜ್ಞಾನಿಗಳ ಮನಸ್ಸು ಆ ರೀತಿಯ ಪ್ರಸನ್ನತೆಯಿಂದ ಕೂಡಿರುವುದು. ಆ ಪ್ರಸನ್ನಮನಸ್ಕರು ಯಾವುದೇ ವ್ಯಕ್ತಿಯನ್ನಾಗಲೀ, ಪದಾರ್ಥವನ್ನಾಗಲಿ ಅನುಗ್ರಹಬುದ್ಧಿಯಿಂದ ನೆನೆದರೆ ಅವರ ಪ್ರಸನ್ನತೆಯು ಆ ವ್ಯಕ್ತಿಯ ಅಥವ ಪದಾರ್ಥದ ಮೇಲೂ ಹರಿದು ಅದು ಅವರ ಮನಃಪ್ರಸಾದವಾಗುತ್ತದೆ. ಜ್ಞಾನಿಗಳು ತಮ್ಮ ಕಣ್ಣಿನಿಂದ ಪದಾರ್ಥವನ್ನು ನೋಡಿದರೆ ಬರೀ ಪದಾರ್ಥವಾಗಿದ್ದದ್ದು ಪ್ರಸಾದವಾಗಿ ಪರಿಣಮಿಸುತ್ತದೆ. ಅವರ ಸ್ಪರ್ಶವು ಒದಗಿಬಂದಾಗ ಅದು ಇನ್ನೂ ಹೆಚ್ಚಿನ ಮಟ್ಟದ ಪ್ರಸಾದವಾಗುವುದು. ಅವರೇನಾದರೂ ತಾವು ಸ್ವೀಕರಿಸಿ ಶೇಷವನ್ನು ಇತರಿರಿಗೆ ದಯಪಾಲಿಸಿದರೆ ಅದು ಸರ್ವೋತ್ಕೃಷ್ಟವಾದ ಪ್ರಸಾದವಾಗುತ್ತದೆ. ಇದು ಜ್ಞಾನಿಗಳಿಗೆ ಮಾತ್ರವೇ ವೇದ್ಯ, ಇತರರಿಂದ ಅರಿಯಲಾರದ್ದು. ಭಗವಂತನನ್ನು ಅನುಭವಿಸುವ ಜ್ಞಾನಿಗಳೇ ಇಷ್ಟು ಪರಿಣಾಮವನ್ನುಂಟುಮಾಡಬಹುದಾದರೆ ಇನ್ನು ಸಾಕ್ಷಾತ್ ಭಗವಂತನೇ ಇಳಿದು ಬಂದಾಗ ಆತನ ಚಟುವಟಿಕೆಗಳ ಪ್ರಭಾವವನ್ನು ಹೇಳುವುದೆಂತು?!

ಶ್ರೀಕೃಷ್ಣಾವತಾರದಲ್ಲಿ ನಡೆದದ್ದು ಇಂತಹ ಅನುಗ್ರಹವೇ ಎಂಬುದು ಆತನ ಅವತಾರರಹಸ್ಯವನ್ನರಿತ ಶ್ರೀರಂಗಮಹಾಗುರುಗಳು ನೀಡಿದ ವಿವರಣೆ. ತಾವಾಗಿ ಆತನಿಗೆ ಪ್ರೀತಿಯಿಂದ ಹಾಲು-ಬೆಣ್ಣೆಗಳನ್ನು ಕೊಟ್ಟವರಿಗೆ ಅನುಗ್ರಹವಾಯಿತೆಂಬುದರಲ್ಲಿ ಸಂಶಯವಿಲ್ಲ. ಆದರೆ ಮೌಢ್ಯದಿಂದ ಕೆಲವೊಮ್ಮೆಕೊಡದಿದ್ದವರ ಮನೆಯಿಂದ ಅವರನ್ನು ಅನುಗ್ರಹಿಸುವ ಸಲುವಾಗಿ ಪರಮಕರುಣೆಯಿಂದ ಕದ್ದು-ತಿಂದು ಶೇಷಪ್ರಸಾದವನ್ನು ಅವರಿಗೆ ಉಣಿಸಿದ ಪರಮಕಾರುಣ್ಯಮೂರ್ತಿ ಅವನು.ಈ ಗುಟ್ಟನ್ನರಿಯದವರಿಗೆ ಅದು ಬರೀ ಚೌರ್ಯ, ಅರಿತವರಿಗೆ ಪರಮಾನುಗ್ರಹದ ಕೃತ್ಯ. ಈ ಅನುಗ್ರಹಕೃತ್ಯದ ಅನುಸಂಧಾನದಿಂದ ಅವನ ಪಾವನಸ್ಮರಣೆಯಲ್ಲಿ 
ಮುಳುಗುತ್ತಿದ್ದ ಶ್ರೀರಂಗಪ್ರಿಯಶ್ರೀಗಳವರ ಅನುಭವವಾಣಿಯೂ ಇದಾಗಿತ್ತು. ಆತನ ಪ್ರಸನ್ನತೆಯನ್ನು ನಮ್ಮಲ್ಲಿಯೂ ಹರಿಸುವುದರಿಂದಲೇ ಪಾಪಪರಿಹಾರ ಹಾಗೂ ಭಗವದ್ಭಕ್ತಿಯವೃದ್ಧಿಗೆ ಕಾರಣವಾಗುವುದೆಂಬ ಫಲಶ್ರುತಿಯ ಗಾನ.
ಮೈಥಿಲೀ ರಾಘವನ್, ಬೆಂಗಳೂರು

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Saturday, January 5, 2019

ನಾನು ಚೆನ್ನಾಗಿರಬೇಕು ! (Nanu chennagirabeku)


ಎಲ್ಲರೂ ಚೆನ್ನಾಗಿರಬೇಕೆಂದೇ ಬಯಸುತ್ತಾರೆ.  ಆದರೆ ಈ ಚೆನ್ನು ಎನ್ನುವುದು ಏನು?  ಎಂಬುದನ್ನು ಅರ್ಥಮಾಡಿಕೊಂಡರೆ ಅದಕ್ಕನುಗುಣವಾಗಿ ಬಾಳಬಹುದು.  ಒಂದು ವೃಕ್ಷವನ್ನು ಗಮನಿಸಿದರೆ, ವೃಕ್ಷವಾಗಿ ವಿಕಾಸಕ್ಕೆ ಬೇಕಾದ ಸಮಸ್ತವನ್ನೂ ಬೀಜವು ತನ್ನಲ್ಲಿ ಗುಟ್ಟಾಗಿ ಇಟ್ಟುಕೊಂಡಿರುತ್ತದೆ.  ಆ ಬೀಜವನ್ನು ಭೂಮಿಯಲ್ಲಿ ಬಿತ್ತಿದರೆ ವಿಕಾಸದ ಪ್ರತಿ ಹಂತದಲ್ಲಿಯೂ ತನ್ನ ಆಶಯವನ್ನೇ ವಿಸ್ತರಿಸಿಕೊಳ್ಳುತ್ತದೆ.  ಮಾವಿನ ಬೀಜವು ಮಾವಿನ ವೃಕ್ಷವಾಗಿಯೇ ಬೆಳೆಯುತ್ತದೆ.  ಹಾಗೆ ಆದಾಗ ಅದರ ಬಾಳ್ವೆ ಚೆನ್ನಾಗಿ ಆಗಿದೆ ಎಂದು ಹೇಳಬಹುದು.  ಅಂದರೆ ಈ ಉದಾಹರಣೆಯಲ್ಲಿ ಬೀಜ, ಅದರ ವಿಕಾಸದ ಆಶಯ ಮತ್ತು ಅದರಂತೆಯೇ ಬೆಳೆಯುವುದು ‘ಚೆನ್ನು’ ಎನ್ನುವುದರ ಅರ್ಥ.

ಅಂತೆಯೇ ನಮ್ಮ ಜೀವನದ ಗುಟ್ಟೆಲ್ಲವೂ ಆತ್ಮದಲ್ಲಡಗಿದೆ.  ಆದ್ದರಿಂದ ಜೀವನದ ಪ್ರತಿ ಹೆಜ್ಜೆಯೂ ಆತ್ಮದ ಆಶಯವನ್ನು ವ್ಯಕ್ತಪಡಿಸುವಂತಿರಬೇಕು.  ಜೀವದ ಆಶಯಕ್ಕನುಗುಣವಾಗಿ ಬಾಳುವುದೇ ಸರಿಯಾದ ನಡೆ.  ಹಾಗಿಲ್ಲದಿದ್ದರೆ “ಬಿತ್ತಿದ್ದು ಮಾವು ಬಂದದ್ದು ಬೇವು” ಎಂದಾಗಿಬಿಡುತ್ತದೆ.

ವೃಕ್ಷದ ಕಾಂಡ, ಕೊಂಬೆ, ಎಲೆ ಎಲ್ಲವಕ್ಕೂ ನೀರು ತಲುಪಿಸಬೇಕಾದರೆ ಬೇರಿಗೆ ನೀರೆರೆಯಬೇಕು.  ಹಾಗೆಯೇ  ಜೀವನವೃಕ್ಷಕ್ಕೂ ಒಂದು ಬೇರಿದೆ.  ಆ ಕೇಂದ್ರವನ್ನು ಸ್ಪರ್ಷಿಸಿಕೊಂಡೇ ಎಲ್ಲ ಭಾಗಗಳಿಗೂ ನಾವು ಕೊಡುವಂತಹ ವಿಷಯಗಳು ಹರಿಯಬೇಕು. ಜೀವ ಅಥವಾ ಆತ್ಮವೇ ಆ ಕೇಂದ್ರವಾಗಿದೆ.  ಆತ್ಮಕ್ಕೆ ಮುಟ್ಟುವಂತೆ ಕೊಡದಿದ್ದರೆ ಅದರ ಬೆಳವಣಿಗೆಯಲ್ಲಿ ಅದರತನ, ಧರ್ಮ ಇರುವುದಿಲ್ಲ.  ಮೂಲವೇ ಬೆಳೆದುಕೊಂಡು ಎಲ್ಲೆಡೆಯಲ್ಲೂ ತನ್ನತನವನ್ನು ಮೆರೆಯುತ್ತಾ ಬರಬೇಕಾದರೆ ನಾವು ನಡೆಸುವ ಎಲ್ಲ ಕ್ರಿಯೆಗಳೂ ಆತ್ಮಮೂಲದಿಂದಲೇ ಹೊರಟು ಪುನಃ ಆತ್ಮಮೂಲವನ್ನೇ ತಲುಪುವಂತಿರಬೇಕು.


fig (source) - https://en.wikipedia.org/wiki/Ashvattha

ಮಾನವದೇಹವೂ ಒಂದು ವೃಕ್ಷವಾಗಿದೆ.  ಆದರೆ ಇದು ಮೇಲ್ಬೇರಾದ ಮತ್ತು ಕೆಳಗೊಂಬೆಯಾಗಿರುವ ವೃಕ್ಷ- “ಊರ್ಧ್ವಮೂಲಮಧಶ್ಯಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್".  ಇದನ್ನು ಅವ್ಯಯವಾದ ಅಶ್ವತ್ಥವೆಂದು ಕರೆದಿದ್ದಾರೆ.  ಇದರ ಬೇರು ಮೆದುಳಿನಲ್ಲಿದೆ.  ಜೀವದ ಬೇರು ಇರುವುದು ಇಲ್ಲಿಯೇ.  ಎಲ್ಲ ಅವಯವಗಳಿಗೂ ಪ್ರಧಾನವಾದದ್ದು ಶಿರಸ್ಸು.  ಅಲ್ಲಿಂದಲೇ ನರನಾಡಿಗಳೂ, ಅಂಗಾಂಗಗಳೂ ಕೆಳಮುಖವಾಗಿ ಶಾಖೆಗಳ ರೂಪದಲ್ಲಿ ವಿಸ್ತಾರಗೊಂಡಿವೆ.  ಅಧೋಮುಖವಾದ ಜೀವನದಲ್ಲಿ  ಈ ಜೀವವು ಸದಾ ಚಂಚಲತೆಯಿಂದ ಕೂಡಿರುತ್ತದೆ.  ಇದನ್ನು ಮೊದಲಿಗೆ ಅರ್ಥಮಾಡಿಕೊಂಡವರು ಮಹರ್ಷಿಗಳು.

ನಾವು ಕಣ್ದೆರೆಯುವುದು ನಿದ್ರೆಯಿಂದ ಎಚ್ಚರಗೊಂಡಾಗ.  ಅಂದರೆ ಸಾಮಾನ್ಯರು ಬಾಹ್ಯಜೀವನಕ್ಕೆ ಹೆಜ್ಜೆಯಿಡುವುದು ನಿದ್ರೆಯ ಸ್ಥಿತಿಯಿಂದ.  ಆದರೆ ಆತ್ಮಸಾಕ್ಷಾತ್ಕಾರವಾಗಿರುವ ಜ್ಞಾನಿಗಳು ಹೊರಬರುವುದು ಅಜಾಢ್ಯನಿದ್ರೆಯೆಂದು ಕರೆಯಲ್ಪಡುವ ಯೋಗಸಮಾಧಿಯಿಂದ.    ಅದೇ ನಮ್ಮ ಬೀಜರೂಪ. 

ಜೀವ ಎನ್ನುವ ಪದವಿರುವುದರಿಂದ ಜೀವನ.  ಅಂತಹ ಜೀವದ ಆಶಯವನ್ನು ಬದಿಗಿಟ್ಟು ಕೇವಲ ಐಂದ್ರಿಯಿಕ ಜೀವನವನ್ನು ಮಾಡುವಂತಿಲ್ಲ.  ಅಲ್ಲಿ ಬಾಹ್ಯ ಬಾಳಾಟ ಮಾತ್ರ ಇರುವುದರಿಂದ ಅದನ್ನು ಜೀವನ ಎಂದೇ ಕರೆಯಲಾಗುವುದಿಲ್ಲ.  ಇನ್ನು ಅದನ್ನು ‘ಚೆನ್ನಾದ ಜೀವನ’ ಎನ್ನುವುದಾದರೂ ಹೇಗೆ?  ನಮ್ಮ ಜೀವನದ ವೃತ್ತದಲ್ಲಿ ವಿಕಾರ ಬರಕೂಡದು. ವಿಕಾರಗೊಳ್ಳದೆ ವಿಕಾಸವಾಗಬೇಕಾದರೆ ಮೂಲವನ್ನು ಬಿಟ್ಟು ಹಾಗೂ ಅದರ ಆಶಯವನ್ನು ಬಿಟ್ಟು ಅತ್ತಿತ್ತ ಜಾರುವಂತಿಲ್ಲ.  ಅಂತಹ ಜೀವನ ಮಾತ್ರ ಚೆನ್ನಾದ ಜೀವನವೆನ್ನಿಸಿಕೊಳ್ಳಬಲ್ಲುದು.

ಸತ್ಯವೂ ಶಿವವೂ ಸುಂದರವೂ ಆಗಿರುವ ಆತ್ಮವು ನಮ್ಮ ಜೀವನ ವೃಕ್ಷದ ಮೂಲವಾಗಿದ್ದು  ಸಮಸ್ತ ಸಾರವನ್ನೂ ಒಳಗೊಂಡಿರುವುದರಿಂದ ಅತ್ಯಂತ ಚೆನ್ನಾದ, ಪ್ರಕಾಶಮಯವಾದ ಮತ್ತು ಆನಂದಮಯವಾದ ನೆಲೆಯಾಗಿದೆ.  ಆದರ ಆಶಯವಾದರೋ ‘ಜೀವವು ಯೋಗವನ್ನು ಮರೆಯದೇ, ಅಂದರೆ ತನ್ನನ್ನು ಮರೆಯದೇ ಭೋಗವನ್ನು ಅನುಭವಿಸಲಿ ಎಂಬುದಾಗಿದೆ’ ಎಂದು ಜ್ಞಾನಿಗಳ ತೀರ್ಮಾನ.  ಅಂತಹ ಜೀವನವನ್ನು ನಡೆಸಲು ಬೇಕಾದ ಪುರುಷಾರ್ಥಮಯವಾದ ಬಾಳಾಟದ ವ್ಯವಸ್ಥೆಯನ್ನು ಋಷಿಗಳು ಯೋಜಿಸಿದ್ದಾರೆ.  ಅದರ ವಿಧಿವಿಧಾನದಂತೆ ಜೀವನ ನಡೆಸಿದರೆ, ಚೆನ್ನಾಗಿ ಬಾಳಿದಂತಾಗುವುದು.  ಏಕೆಂದರೆ ಅದು ಚೆನ್ನು ಎನ್ನುವುದರ ಮಾನದಂಡವಾಗಿರುವ ಭಗವಂತನಲ್ಲಿ ನಮ್ಮನ್ನು ನೆಲೆಗೊಳಿಸುತ್ತದೆ.   ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಲ್ಲವೂ ದೊರೆತು ಬದುಕು ಸಾರ್ಥಕವಾಗುತ್ತದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, January 4, 2019

Punishment (Shiksha)

Original Article in Kannada by: Sri.Rajagopalan K S 
English by Dr.Shrinivasan. S

Parents often resort to punishing their children to correct their mistakes.  In schools, punishment is given by teachers and principals to students when they commit mistakes. Not everyone is punished the same way for similar mistakes. Everyone is aware of the proverb –“A nod for the wise and a rod for the fool”. Only when a hard whip is given does the thick skinned buffalo realize that it has been beaten while a thin skinned cow is alarmed by  patting.  Thus depending on the circumstance, the amount and type of punishments vary.





The net effect of punishment should be to  bring about change in the attitude of the offender. For identical offences, different punishments are prescribed in our Dharmashastras. On the face of it, this appears unjustified. However, for an unbiased  mind the principle behind prescribing different types of punishments is understandable.
The word ‘Shiksha’ used in Sanskrit (supposed to be equivalent to punishment) is derived from the root Shiksha which means ‘to educate’ (shiksha vidyopaadaane).Such Shiksha is welcome indeed. The person punished should not feel avenged.The goal is not revenge against the person punished. Instead,  The offender should feel convinced, not to commit such offences in future.

An interesting episode in the Ramayana.  When Vibhishana, after parting ways with his brother Ravana, accompanied with his close aides is on his way to surrender to Rama, Vanaras(monkeys)  were intrigued whether to take Vibhishana  in Rama’s camp. Rama solicits the opinion of chieftains. ‘Vibhishana who deserted his brother Ravana for the lure of Kingdom should not be trusted,  announces Sugriva, who once fought against his own brother Vali. Rama responds with a smile and says- Sugriva, go and  bring him; Vibhishana or even if Ravana himself  seeks my refuge, it shall be granted.  Rama does not have a personal grudge against Ravana. Rama feels that if Ravana has purified himself by repentance, then there is no need to punish him. Vibhishana is in a dilemma whether to perform last rites of Ravana, considering him to be a sinner. Rama advises - ‘Vibhishana go ahead with last rites, your brother Ravana is like a brother to me also’. Rama’s  only purpose of killing Ravana was to destroy adharma. Hence Ravana got death penalty.

Everyone may not have an occasion  to punish. While reacting to others’ mistakes, a balanced approach needs to be developed in order to educate them.
Even in Mahabharatha, Sri Krishna proposes for truce with Duryodhana. Duryodhana refuses to part even with tip of a needle of land to Pandavas(=Dharma). Sometimes, when medicines are ineffective in treating a disease, a surgeon opts for surgery.  Likewise, Sri Krishna  feels that war is the only solution.


Humans err due to misunderstanding (wrong perception).  Punishment is successful only if transformation is brought about in the mind of the offender. In such a case, punishment can truly serve as protection.

Note: The Kannada version of this article can be viewed at AYVM blogs